Tag: ಯೋಧ

  • ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್

    ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್

    ಚಿಕ್ಕೋಡಿ: ನಾಲ್ಕು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದ ಬಿಎಸ್‍ಎಫ್ ಯೋಧ ಮಾನಸಿಕ ಅಸ್ವಸ್ಥನಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಸತ್ಯಪ್ಪ ಸಿದ್ದಪ್ಪ ಯೋಧರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾನೆ. ಬಳಿಕ ತನ್ನ ಮೇಲೆಯೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: 371 ಜೆ ಅನುಷ್ಠಾನಕ್ಕೆ ಆಗ್ರಹ: ರಾಯಚೂರು ನಗರ ಬಂದ್‍ಗೆ ಉತ್ತಮ ಪ್ರತಿಕ್ರಿಯೆ 

    ಸತ್ಯಪ್ಪ ವೈಯಕ್ತಿಕವಾಗಿ ತುಂಬಾ ಸಾಲ ಮಾಡಿಕೊಂಡಿದ್ದನು. ಅಲ್ಲದೆ ಕೌಟುಂಬಿಕ ವಿಚಾರದಲ್ಲಿಯೂ ನೆಮ್ಮದಿ ಇಲ್ಲದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಈ ಹಿನ್ನೆಲೆ ಅವನಿಗೆ ಚಿಕಿತ್ಸೆಯನ್ನು ಸಹ ಕೊಡಿಸಲಾಗಿತ್ತು ಎಂಬ ಮಾಹಿತಿ ಸಹ ತಿಳಿದುಬಂದಿದೆ.

    ಕಾರಣವೇನು?
    ಕಳೆದ ವರ್ಷ ಅಂದಾಜು 10 ಲಕ್ಷ ರೂ. ಸಾಲ ಮಾಡಿದ್ದ ಸತ್ಯಪ್ಪ ಸಾಲ ಮರಳಿ ಪಾವತಿಸುವ ಚಿಂತೆಯಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ. ಅವನ ವರ್ತನೆ ಕಂಡು ಕುಟುಂಬಸ್ಥರು ಧಾರವಾಡ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಮಾನಸಿಕ ವೈದ್ಯರಿಂದ ಕೌನ್ಸಲಿಂಗ್ ಕೂಡ ಮಾಡಿಸಿದ್ದರು. ನಂತರ ಯೋಧ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್‍ಎಫ್ ಕಚೇರಿಗೂ ಈ ಕುರಿತು ವರದಿಗಳನ್ನು ನೀಡಲಾಗಿತ್ತು.

    ಇಷ್ಟೆಲ್ಲ ವರದಿ ನೀಡಿದರೂ ಬಿಎಸ್‍ಎಫ್ ಅಧಿಕಾರಿಗಳು ಮರಳಿ ಸತ್ಯಪ್ಪನನ್ನ ಕಾರ್ಯ ನಿಯೋಜನೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮತ್ತೆ ರಜೆ ನೀಡುವಂತೆ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ರಜೆ ನೀಡದ್ದಕ್ಕೆ ಸತ್ಯಪ್ಪ ಮಾನಸಿಕವಾಗಿ ನೊಂದಿದ್ದ ಎನ್ನುವ ಮಾಹಿತಿಯನ್ನು ಮೃತ ಯೋಧನ ಸಂಬಂಧಿಗಳು ನೀಡಿದ್ದಾರೆ. ಇದನ್ನೂ ಓದಿ: ಹೊಟ್ಟೆ ಡುಮ್ಮ ಅಂದಿದ್ದಕ್ಕೆ ಸೂಪರ್ ಸ್ಟಾರ್ ಅಜಿತ್ ಮಾಡಿದ್ದೇನು?

    ಮಾನಸಿಕ ಅಸ್ವಸ್ಥವಾಗಿ ಚಿಕಿತ್ಸೆ ಪಡೆಯುತ್ತಿದ್ದ ಯೋಧ ಸತ್ಯಪ್ಪ ಭಾನುವಾರ ಪಂಜಾಬ್‍ನ ಅಮೃತಸರ ಅಟ್ಟಾರಿ ಗಡಿಯ ಖೇಸರ್ ಕ್ಯಾಂಪ್ ನಲ್ಲಿ ನಾಲ್ಕು ಯೋಧರ ಮೇಲೆ ಗುಂಡಿನ ದಾಳಿ ಮಾಡಿ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಮೃತ ಯೋಧನ ಪಾರ್ಥಿವ ಶರೀರದ ಬರುವಿಕೆಗಾಗಿ ಕುಟುಂಬಸ್ಥರು ಕಾಯುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • BSF ಕಾನ್ಸ್‌ಟೇಬಲ್‌ನಿಂದಲೇ ಕ್ಯಾಂಟೀನ್‍ನಲ್ಲಿ ಗುಂಡಿನ ದಾಳಿ- ಐವರು ಸೈನಿಕರು ಸಾವು

    BSF ಕಾನ್ಸ್‌ಟೇಬಲ್‌ನಿಂದಲೇ ಕ್ಯಾಂಟೀನ್‍ನಲ್ಲಿ ಗುಂಡಿನ ದಾಳಿ- ಐವರು ಸೈನಿಕರು ಸಾವು

    ಚಂಡೀಗಢ: ಗಡಿ ಭದ್ರತಾ ಪಡೆ (Border Security Force) ಯೋಧರ ಕ್ಯಾಂಟೀನ್‍ನಲ್ಲಿ ಗುಂಡಿನ ದಾಳಿಯಾಗಿದ್ದು, 5 ಮಂದಿ ಯೋಧರು ಸಾವನ್ನಪಿರುವ ಘಟನೆ ನಡೆದಿದೆ.

    ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಅಟ್ಟಾರಿ-ವಾಘಾ ಗಡಿ ದಾಟುವಿಕೆಯಿಂದ ಸುಮಾರು 20 ಕಿಮೀ ದೂರದಲ್ಲಿರುವ ಖಾಸಾ ಪ್ರದೇಶದ ಫೋರ್ಸ್ ಮೆಸ್‍ನಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮೊದಲು ಉಕ್ರೇನ್ ಸ್ವರ್ಗದಂತಿತ್ತು, ಈಗ ನರಕವಾಗಿದೆ – ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಯುವಕ

    ಬಿಎಸ್‍ಎಫ್ ಕಾನ್ಸ್‌ಟೇಬಲ್‌ ಮನಬಂದಂತೆ ಗುಂಡಿನ ದಾಳಿ ನಡೆಸಿದಾಗ ಐವರು ಯೋಧರ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಓರ್ವ ಯೋಧ ಗಾಯಗೊಂಡಿದ್ದಾರೆ, ಕಾನ್ಸ್‌ಟೇಬಲ್‌ ಕೂಡಾ ಸಾವನ್ನಪ್ಪಿದ್ದಾನೆ. ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

    ಪಂಜಾಬ್‍ನ ಅಮೃತಸರದ ಫೋರ್ಸ್ ಕ್ಯಾಂಪ್‍ನಲ್ಲಿ ಇಂದು ಬಿಎಸ್‍ಎಫ್ ಕಾನ್ಸ್‌ಟೇಬಲ್‌ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಕನಿಷ್ಠ ಐವರು ಗಡಿ ಭದ್ರತಾ ಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಶೌರ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಸೇನಾಧಿಕಾರಿಗೆ ಭರ್ಜರಿ ಸ್ವಾಗತ

    ಶೌರ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಸೇನಾಧಿಕಾರಿಗೆ ಭರ್ಜರಿ ಸ್ವಾಗತ

    ಬೆಳಗಾವಿ: ಸೇವಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ವೀರಯೋಧ ಗೌರವ ಲೆಫ್ಟಿನೆಂಟ್ ಬಸಪ್ಪ ರಾಚಪ್ಪ ಮುಗಳಿಹಾಳ ಅವರನ್ನು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಅದ್ಧೂರಿಯಾಗಿ ಬರಮಾಡಿಕೊಂಡರು.

    ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಸಪ್ಪ ರಾಚಪ್ಪ ಮುಗಳಿಹಾಳ 28 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಬೆಳಗಾವಿಗೆ ಮರಳಿದರು. ಉತ್ತರಾಖಂಡದ ಡೆಹ್ರಾಡೂನ್‍ನಿಂದ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಬಸಪ್ಪ ಮುಗಳಿಹಾಳ ರೈಲ್ವೆ ನಿಲ್ದಾಣದಲ್ಲಿ ನೆರೆದ ಜನರನ್ನು ನೋಡಿ ಅರೆಕ್ಷಣ ಭಾವುಕರಾದರು. ಡೆಹ್ರಾಡೂನ್‍ನಿಂದ ತಾಯ್ನಾಡಿಗೆ ವಾಪಸಾದ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆಯ ಮೂಲಕ ಕರೆತರಲಾಯಿತು.

    ಇದೇ ವೇಳೆ ಬೆಳಗಾವಿ ಬಿಜೆಪಿ ಸಂಸದೆ ಮಂಗಲಾ ಅಂಗಡಿ ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ಚನ್ನಮ್ಮ ವೃತ್ತದಿಂದ ಅಶೋಕ ವೃತ್ತದ ಮಾರ್ಗವಾಗಿ ಬೆಳಗಾವಿ ಹೊರವಲಯ ಕಣಬರಗಿ ಬಳಿ ಸಂಕಲ್ಪ ಗಾರ್ಡನ್‍ನಲ್ಲಿ ಅದ್ಧೂರಿ ಸನ್ಮಾನ ಸಮಾರಂಭದ ವೇದಿಕೆಗೆ ಆಗಮಿಸಿದರು. ಇದನ್ನೂ ಓದಿ:  ಚೊಚ್ಚಲ ಬಜೆಟ್‌ ಮಂಡನೆಗೂ ಮುನ್ನ ದೇಗುಲಗಳಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ

    ಈ ಸಂದರ್ಭದಲ್ಲಿ ಮಾತನಾಡಿದ ಯೋಧ ಬಸಪ್ಪ ಮುಗಳಿಹಾಳ, 28 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಈ ದೇಹ ಮಾತ್ರ ನಿವೃತ್ತಿ ಆಗಿದೆ. ಆದರೆ ನನ್ನ ರಕ್ತದ ಕಣಕಣದಲ್ಲೂ ದೇಶಭಕ್ತಿ ಇದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಉಗ್ರನ ಗನ್ ವಶಕ್ಕೆ ಪಡೆದು ಆತನನ್ನು ಸದೆಬಡಿದಿದ್ದೆ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ನನಗೆ ಅಂದಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್, ರಕ್ಷಣಾ ಸಚಿವ ಜಾರ್ಜ್ ಫನಾರ್ಂಡಿಸ್ ಶೌರ್ಯ ಚಕ್ರ ನೀಡಿ ಗೌರವಿಸಿದ್ದರು. ಇಷ್ಟೊಂದು ಜನ ನನ್ನ ಸ್ವಾಗತಿಸಿರುವುದನ್ನು ನೋಡಿ ತುಂಬಾ ಸಂತಸವಾಗುತ್ತಿದೆ. ಯುವಕರು ಸೇನೆ ಸೇರಲು ಮುಂದೆ ಬರಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ:  ಹಿಂದಿನ ಸರ್ಕಾರಗಳ ವೈದ್ಯಕೀಯ ಶಿಕ್ಷಣ ನೀತಿ ಸರಿಯಿದ್ದಿದ್ದರೆ ನೀವು ವಿದೇಶಗಳಿಗೆ ಹೋಗುತ್ತಿರಲಿಲ್ಲ: ಮೋದಿ

  • ಕೊಡಗಿನ ಯೋಧ ಅಲ್ತಾಫ್ ಅಹ್ಮದ್‍ಗೆ ಭಾವಪೂರ್ಣ ವಿದಾಯ- ಧ್ವಜ ಸ್ವೀಕರಿಸೋವಾಗ ಅಳುತ್ತಾ ಕುಸಿದು ಬಿದ್ದ ಪತ್ನಿ

    ಕೊಡಗಿನ ಯೋಧ ಅಲ್ತಾಫ್ ಅಹ್ಮದ್‍ಗೆ ಭಾವಪೂರ್ಣ ವಿದಾಯ- ಧ್ವಜ ಸ್ವೀಕರಿಸೋವಾಗ ಅಳುತ್ತಾ ಕುಸಿದು ಬಿದ್ದ ಪತ್ನಿ

    ಮಡಿಕೇರಿ: ಶ್ರೀನಗರದಲ್ಲಿ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾದ ಕೊಡಗಿನ ವೀರಯೋಧ ಅಲ್ತಾಫ್ ಅಹ್ಮದ್ (37) ಅವರಿಗೆ ಸಕಲ ಸರ್ಕಾರಿ ಮತ್ತು ಸೇನಾ ಗೌರವದೊಂದಿಗೆ ಗೌರವಪೂರ್ಣ ವಿದಾಯ ಸಲ್ಲಿಸಲಾಯಿತು.

    ಯೋಧನ ಕುಟುಂಬಸ್ಥರು ಮತ್ತು ಅಧಿಕಾರಿಗಳು, ನಿವೃತ್ತ ಯೋಧರು, ಜನಪ್ರತಿನಿಧಿಗಳು, ಸಾರ್ವಜನಿಕರು, ವಿರಾಜಪೇಟೆ ತಾಲೂಕು ಮೈದಾನದಲ್ಲಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಭಾರತೀಯ ಸೇನೆ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ 21 ಸುತ್ತು ಕುಶಾಲತೋಪು ಸಿಡಿಸಿ ಯೋಧ ಅಲ್ತಾಫ್ ಅಹ್ಮದ್‍ಗೆ ಗೌರವ ಸಲ್ಲಿಸಲಾಯಿತು. ಇದನ್ನೂ ಓದಿ: ಉಕ್ರೇನ್‌ಗೆ 4,503 ಕೋಟಿ ರೂ. ಭದ್ರತಾ ನೆರವು ಘೋಷಿಸಿದ ಅಮೆರಿಕ

    ಸೇನೆಯ ಡಿಎಸ್‍ಸಿ ವಿಭಾಗದಿಂದ ಗಾರ್ಡ್ ಆಫ್ ಹಾನರ್ ಸಲ್ಲಿಸಲಾಯಿತು. ಅಲ್ತಾಫ್ ಕುಟುಂಬಕ್ಕೆ ಸೇನೆಯಿಂದ ತ್ರಿವರ್ಣ ಧ್ವಜ ಹಸ್ತಾಂತರ ಮಾಡುವ ವೇಳೆ ಯೋಧನ ಪತ್ನಿ ಜುಬೇರಿಯಾ ಕುಸಿದು ಬಿದ್ದ ದೃಶ್ಯ ಮನಕಲುಕುವಂತಿತ್ತು. ಅಲ್ಲದೇ ಯೋಧನ ಮಗಳು ಹಾಗೂ ಮಗ ಸೈನಿಕರ ಸಮವಸ್ತ್ರ ಧರಿಸಿ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ದೇಶ ಪ್ರೇಮದ ಸಂದೇಶ ಸಾರಿದ್ರು. ಇದನ್ನೂ ಓದಿ: ಫೋನ್‌ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್‌ಗೆ ಓಡಿ ಹೋದ: ಪೋಷಕರ ಆಳಲು

    ವಿರಾಜಪೇಟೆ ತಾಲೂಕು ಮೈದಾನದಿಂದ ಇದ್ಗಾ ಮೈದಾನಕ್ಕೆ ಯೋಧನ ಮೆರವಣಿಗೆ ನಡೆಯಿತು. ನಂತರ ಇದ್ಗಾ ಮೈದಾನದಲ್ಲಿ ಅಂತ್ಯಕ್ರಿಯೆ ನಡೆಯಿತ್ತು. ಫೆಬ್ರವರಿ 23ರಂದು ಶ್ರಿನಗರದಲ್ಲಿ ಹಿಮಪಾತಕ್ಕೆ ಸಿಲುಕಿ ಕೊಡಗು ಮೂಲದ ಯೋಧ ಹವಾಲ್ದಾರ್ ಅಲ್ತಾಫ್ ಅಹ್ಮದ್ ಹುತಾತ್ಮರಾಗಿದ್ದರು. ಇವರು ಎಒಸಿ ರೆಜಿಮೆಂಟ್‍ನಲ್ಲಿ ಕರ್ತವ್ಯದಲ್ಲಿದ್ದರು. ಅಲ್ತಾಫ್ ಕುಟುಂಬ ಕಳೆದ 10 ವರ್ಷಗಳಿಂದ ಕೇರಳದ ಮಟ್ಟನೂರು ಜಿಲ್ಲೆಯಲ್ಲಿ ನೆಲೆಸಿದೆ.

  • ಉಕ್ರೇನ್‍ನಲ್ಲಿ ಬೆಳಗಾವಿ ಯೋಧನ ಪುತ್ರಿ – ಮಗಳನ್ನು ರಕ್ಷಿಸುವಂತೆ ಪ್ರಧಾನಿ ಕೋರಿದ ಸೈನಿಕ

    ಉಕ್ರೇನ್‍ನಲ್ಲಿ ಬೆಳಗಾವಿ ಯೋಧನ ಪುತ್ರಿ – ಮಗಳನ್ನು ರಕ್ಷಿಸುವಂತೆ ಪ್ರಧಾನಿ ಕೋರಿದ ಸೈನಿಕ

    ಬೆಳಗಾವಿ: ಉಕ್ರೇನ್‌ನಲ್ಲಿ ಬೆಳಗಾವಿ ಯೋಧರೊಬ್ಬರ ಪುತ್ರಿ ಸಿಲುಕಿಕೊಂಡು ಪರದಾಡುತ್ತಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಹೀಗಾಗಿ ಮಗಳನ್ನ ರಕ್ಷಿಸುವಂತೆ ಪ್ರಧಾನಿ ಮೋದಿಗೆ ಯೋಧ ಮನವಿ ಮಾಡಿಕೊಂಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಗೋಕಾಕ ಫಾಲ್ಸ್‌ನ ನಿವಾಸಿ ರಜೀಯಾ ಬಾಗಿ ಉಕ್ರೇನ್‍ನಲ್ಲಿ ಎಂಬಿಬಿಎಸ್ ದ್ವೀತಿಯ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಉಕ್ರೇನಿನಲ್ಲಿ ಸಿಲುಕಿರುವ ಮಗಳನ್ನು ರಕ್ಷಿಸುವಂತೆ ಪ್ರಧಾನಿಗೆ ಸೈನಿಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾದ ಇಬ್ಬರು ಸೈನಿಕರನ್ನು ಸೆರೆ ಹಿಡಿದ ಉಕ್ರೇನ್‌ ಸೇನೆ

    ವಿದ್ಯಾರ್ಥಿನಿ ರಜೀಯಾ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಮ್ಮನ್ನು ಆದಷ್ಟು ಬೇಗ ಸ್ಥಳಾಂತರ ಮಾಡಬೇಕು. ಉಕ್ರೇನ್ ಬಾರ್ಡರ್ ಕ್ರಾಸ್ ಆಗೋವರೆಗೂ ಏನಾದರೂ ಪರ್ಯಾಯ ವ್ಯವಸ್ಥೆ ಕಲ್ಪಸಬೇಕು. ಸದ್ಯ ನಮಗೆ ನೀರು, ಆಹಾರ ಸರಬರಾಜು ಆಗುತ್ತಿಲ್ಲ. ದಯವಿಟ್ಟು ನಮ್ಮನ್ನು ಕಾಪಾಡವಂತೆ ವಿದ್ಯಾರ್ಥಿನಿ ತನ್ನ ತಂದೆಗೆ ಕಳಿಸಿರೋ ವೀಡಿಯೋ ಸಂದೇಶದಲ್ಲಿ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ನಿನ್ನೆ ಮದುವೆಯಾಗಿ ಇಂದು ದೇಶ ಸೇವೆಗೆ ಗನ್‌ ಹಿಡಿದ ದಂಪತಿ

    ರಜೀಯಾ ತಂದೆ ಯಾಸಿನ ಬಾಗಿ ಅವರು ಭಾರತೀಯ ಸೇನೆಯಲ್ಲಿ ಸಿಆರ್ ಪಿಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೇ ನೀಡಿದ ಯಾಸಿನ್, ಎರಡು ದಿನಗಳಿಂದ ಮಗಳು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಮಗಳು ಎರಡು ದಿನಗಳ ಕಾಲ ಸಂಪರ್ಕಕ್ಕೆ ಸಿಕ್ಕಿದ್ದಳು. ಬಳಿಕ ಸಂಪರ್ಕಕ್ಕೆ ಸಾಧ್ಯವಾಗಿಲ್ಲ. ರಜಿಯಾ ಇರೋ ಜಾಗದ ಬಳಿ ಬಾಂಬ್ ದಾಳಿಗಳು ನಡೆಯುತ್ತಿವೆ.

    ಫೈರಿಂಗ್ ಆಗುತ್ತಿದ್ದೆ ಸೈನಿಕರು ಓಡಾಡುತ್ತಿದ್ದರು ಎಂದು ಮಗಳು ತಿಳಿಸಿದ್ದಾಳೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ನೆರವಿಗೆ ಧಾವಿಸಬೇಕು. ವಿದ್ಯಾಭ್ಯಾಸಕ್ಕಾಗಿ ಹೋಗಿರೋ ಮಕ್ಕಳ ರಕ್ಷಣೆ ಮಾಡಬೇಕು ಎಂದು ಯಾಸಿನ ಬಾಗಿ ಮನವಿ ಮಾಡಿಕೊಂಡಿದ್ದಾರೆ.

  • ಅಪ್ಪ, ಅಮ್ಮಾ ಐ ಲವ್ ಯೂ – ಯೋಧನ ಕರುಳು ಹಿಂಡುವ ಸಂದೇಶ

    ಅಪ್ಪ, ಅಮ್ಮಾ ಐ ಲವ್ ಯೂ – ಯೋಧನ ಕರುಳು ಹಿಂಡುವ ಸಂದೇಶ

    ಕೀವ್: ರಷ್ಯಾ ಉಕ್ರೇನ್ ಮೇಲೆ ಎರಗಿ ಬಾಂಬುಗಳ ಸುರುಮಳೆಗೈದಿದೆ. ಮಿಲಿಟರಿ ನೆಲೆ ನಾಶವಾಗಿ ನೂರಾರು ಸೈನಿಕರು ಈಗಾಗಲೇ ಹತರಾಗಿದ್ದಾರೆ. ಅದೆಷ್ಟೋ ಸೈನಿಕರು ಇನ್ನೂ ತಮ್ಮ ಉಸಿರನ್ನು ಬಿಗಿ ಹಿಡಿದು ದೇಶದ ರಕ್ಷಣೆಗಾಗಿ ಕೆಲಸ ಮಾಡುತ್ತಿದ್ದಾರೆ.

    ಮುಂದೊಂದು ದಿನದ ಬದುಕಿರುತ್ತೇವೋ ಇಲ್ಲವೋ ಎಂದು ಭಾವುಕನಾಗಿ ಯೋಧನೊಬ್ಬ ತನ್ನ ತಂದೆ ತಾಯಿಗೆ ಸಂದೇಶವನ್ನು ಕಳುಹಿಸಿರುವ ವೀಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ಎಂಥವರ ಕರುಳು ಕೂಡ ಚುರುಕ್ ಅನ್ನದೇ ಇರಲಾರದು. ಇದನ್ನೂ ಓದಿ: ಗಡಿ ಪ್ರವೇಶಿಸಿದ ಶಸ್ತ್ರಸಜ್ಜಿತ ರಷ್ಯಾ ಸೈನಿಕನಿಗೆ ಉಕ್ರೇನ್‌ ಮಹಿಳೆ ಛೀಮಾರಿ – ವೀಡಿಯೋ ವೈರಲ್‌

    13 ಸೆಕೆಂಡುಗಳ ವೀಡಿಯೋದಲ್ಲಿ ಉಕ್ರೇನ್ ಸೈನಿಕ ತನ್ನ ತಂದೆ-ತಾಯಿಗೆ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಭಾವುಕನಾಗಿ ಹೇಳುವುದನ್ನು ನೋಡಬಹುದಾಗಿದೆ. ಯೋಧನ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕೂಡ ಯೋಧನ ಸ್ಥಿತಿಗೆ ಮರುಗಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಯೋಧನಿಗೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ವಯಸ್ಸು ಯಾವುದೇ ಇರಲಿ. ಯಾರೊಬ್ಬರಿಗೂ ಇಂತಹ ಸ್ಥಿತಿ ಬರಬಾರದು ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:  ರಷ್ಯಾ ವಿರುದ್ಧ ವಿಶ್ವದ ಟೆಕ್ಕಿಗಳಿಂದ `ಸೈಬರ್ ವಾರ್’ ಘೋಷಣೆ!

    ವೀಡಿಯೋ ಮಾಡಿರುವ ಯೋಧ ಯಾರು ಏನು ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದರೆ ವಿಶ್ವದಾದ್ಯಂತ ನೆಟ್ಟಿಗರು ಅವರ ಸ್ಥಿತಿಗೆ ದುಃಖ ವ್ಯಕ್ತಪಡಿಸಿದ್ದಾರೆ.

  • ಪುಲ್ವಾಮಾ ವೀರ ಯೋಧರ ಸ್ಮರಣಾರ್ಥ ರಕ್ತದಾನ ಶಿಬಿರ

    ಪುಲ್ವಾಮಾ ವೀರ ಯೋಧರ ಸ್ಮರಣಾರ್ಥ ರಕ್ತದಾನ ಶಿಬಿರ

    ಮಂಡ್ಯ: ಪುಲ್ವಾಮಾ ದಾಳಿ ಘಟನೆ ನಡೆದು ಇಂದಿಗೆ 3 ವರ್ಷಗಳು ಕಳೆದಿವೆ. ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ಯೋಧರ ಸ್ಮರಣಾರ್ಥದ ಹಿನ್ನೆಲೆ ಮಂಡ್ಯದಲ್ಲಿ ರಕ್ತದಾನ ಶಿಬಿರ ನಡೆಸಲಾಗಿದೆ.

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿ ಖಾಸಗಿ ಸಮುದಾಯ ಭವನದಲ್ಲಿ ಸೋಮವಾರ ಬೃಹತ್ ರಕ್ತದಾನ ಶಿಬಿರ ನೆರವೇರಿದೆ. ಪ್ರಗತಿಪರ ಸಂಘಟನೆ ಈ ಶಿಬಿರವನ್ನು ಆಯೋಜಿಸಿತ್ತು. ಇದನ್ನೂ ಓದಿ: ಹಿಜಬ್ ಗಲಾಟೆ ಬೆನ್ನಲ್ಲೇ ರಾಜೀನಾಮೆ ನೀಡಿದ ಬೆಂಗಳೂರು ಶಿಕ್ಷಕಿ

    ಪುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ್ದ ಯೋಧ ಗುರು ಸಮಾಧಿಗೆ ಪೂಜೆ ಸಲ್ಲಿಸಿ, ಅವರ ಪತ್ನಿ ಕಲಾವತಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಬೃಹತ್ ರಕ್ತದಾನ ಶಿಬಿರದಲ್ಲಿ ನೂರಾರು ಜನ ಪಾಲ್ಗೊಂಡು ರಕ್ತದಾನ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕನಿಂದ 25 ವರ್ಷದ ಯುವತಿ ಕಿಡ್ನಾಪ್ – ಕೇಸ್ ದಾಖಲು

  • ರಜೆಯಲ್ಲಿ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

    ರಜೆಯಲ್ಲಿ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

    ವಿಜಯಪುರ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

    ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಬಸವರಾಜ್ ಡೂಂಗರಗಾವಿ ಸಾವನ್ನಪ್ಪಿದ್ದಾರೆ. ಕೆಲ ದಿನಗಳ ಹಿಂದೆ ಬಸವರಾಜ್ ರಜೆಯ ಮೇಲೆ ಊರಿಗೆ ಬಂದಿದ್ದರು. ಎರಡು ದಿನಗಳ ಹಿಂದೆ ಆಲಮಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು ಅಪಘಾತಕ್ಕೊಳಗಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಬಸವರಾಜ್ ಚಿಕಿತ್ಸೆ ಫಲಿಸದೇ ಬುಧವಾರ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಪೆಡ್ಲರ್‌ಗಳ ಬಂಧನ – 53 ಕೆ.ಜಿ ಗಾಂಜಾ ವಶ

    ಬಸವರಾಜ್ 8 ವರ್ಷಗಳ ಹಿಂದೆ ಸೇನೆಗೆ ನೇಮಕಗೊಂಡಿದ್ದರು. ಬಿಹಾರ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ್ ಊರಿಗೆ ಬಂದಾಗ ದುರ್ಘಟನೆ ನಡೆದಿದೆ. ಇದನ್ನೂ ಓದಿ: 21 ಲಕ್ಷ ರೂ. ಮೌಲ್ಯದ ಆಕ್ಸಿಟೋಸಿನ್ ಚುಚ್ಚುಮದ್ದು ವಶ

  • ಪಂಜಾಬ್‍ನಲ್ಲಿ  ಬೆಳಗಾವಿಯ ಯೋಧನಿಗೆ ಹೃದಯಾಘಾತ

    ಪಂಜಾಬ್‍ನಲ್ಲಿ ಬೆಳಗಾವಿಯ ಯೋಧನಿಗೆ ಹೃದಯಾಘಾತ

    ಚಿಕ್ಕೋಡಿ: ಪಂಜಾಬ್‍ನ ಪಠಾಣ್‍ಕೋಟ್ ರೈಲು ನಿಲ್ದಾಣದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ‌ ಯೋಧರೊಬ್ಬರು ಸಾವನ್ನಪ್ಪಿದ್ದಾರೆ.

    ಭೋಜ ಗ್ರಾಮದ ವಿನಯ್ ಬಾಬಾಸಾಹೇಬ ಭೋಜೆ (37) ಮೃತಪಟ್ಟ ಯೋಧ.  ವಿನಯ್ ಭೋಜೆ‌ ಸಾವಿನ ಸುದ್ದಿ ಕೇಳಿ ಭೋಜ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ವಿನಯ್ ಭೋಜೆ ಹದಿನೇಳು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದರು. ಕಳೆದ ಹತ್ತು ವರ್ಷಗಳಿಂದ ಅವರು ಮಹಾರಾಷ್ಟ್ರದ ಹಾತಕಣಗಲೆ ತಾಲೂಕಿನ ತಿಲವಾಣಿ ಗ್ರಾಮದಲ್ಲಿ ನೆಲೆಸಿದ್ದರು. ಇದನ್ನೂ ಓದಿ: ಕಸದ ತೊಟ್ಟಿಯಲ್ಲಿ ಹೆಣ್ಣು ಮಗು ಪತ್ತೆ – ಸ್ಥಳೀಯರಿಂದ ರಕ್ಷಣೆ

    ಕಳೆದ ವಾರ ರಜೆಗೆಂದು ತಿಲವಾಣಿಗೆ ಬಂದಿದ್ದರು. ರಜೆ ಮುಗಿಸಿ ಪಠಾಣ್‍ಕೋಟ್ ಗೆ ವಾಪಸಾಗಿದ್ದರು. ರೈಲು ನಿಲ್ದಾಣದಲ್ಲಿ ಇಳಿಯುವಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿನಯ್ ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

  • ಜಯ ಹೇ ಮೂಲಕ ವೀರಯೋಧನಿಗೆ ಗಾಯಕ ಆದರ್ಶ್ ಅಯ್ಯಂಗಾರ್ ಸಲಾಮ್

    ಜಯ ಹೇ ಮೂಲಕ ವೀರಯೋಧನಿಗೆ ಗಾಯಕ ಆದರ್ಶ್ ಅಯ್ಯಂಗಾರ್ ಸಲಾಮ್

    ಡಿಯಲ್ಲಿ ನಿಂತು ದೇಶ ಕಾಯೋ ಯೋಧನಿಗೆ ಅದೆಷ್ಟು ಧನ್ಯವಾದ ಹೇಳಿದ್ರು ಕಡಿಮೆಯೇ. ಅದೆಷ್ಟು ಮನದುಂಬಿ ಶ್ಲಾಘಿಸಿದರೂ ಅಲ್ಪವೇ. ಅವರ ತ್ಯಾಗದಿಂದ ಇಂದು ನಾವೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟು ಜೀವನ ಸಾಗಿಸುತ್ತಿದ್ದೇವೆ. ಅಂತಹ ವೀರಯೋಧನನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಇಂತಹದ್ದೊಂದು ಪರಿಕಲ್ಪನೆಯನ್ನಿಟ್ಟುಕೊಂಡು ಚಂದನವನದ ಪ್ರತಿಭಾನ್ವಿತ ಗಾಯಕ ಆದರ್ಶ್ ಅಯ್ಯಂಗಾರ್ ಸೈನಿಕರಿಗೆ ಹಾಡಿನ ಮೂಲಕ ಸಲಾಮ್ ಹೇಳಿದ್ದಾರೆ.

    ಆದರ್ಶ್ ಅಯ್ಯಂಗಾರ್ ಕಂಠಸಿರಿಯಲ್ಲಿ ಮೂಡಿ ಬಂದ ‘ಜಯ ಹೇ’ ಹಾಡು ಬಿಡುಗಡೆಯಾಗಿ ಎಲ್ಲರ ಮನಸೂರೆ ಮಾಡಿದೆ. ದೇಶ ಕಾಯೋ ಸೈನಿಕನ ತ್ಯಾಗ ಬಲಿದಾನಕ್ಕೆ ಕೃತಜ್ಞತೆ ಹೇಳುವ ಪರಿಕಲ್ಪನೆ ಅಡಿಯಲ್ಲಿ ಈ ಹಾಡು ಮೂಡಿ ಬಂದಿದೆ. ಪ್ರಮೋದ್ ಮರವಂತೆ ಸಾಹಿತ್ಯ, ಹೇಮಂತ್ ಜೋಯಿಸ್ ಸಂಗೀತ ಸ್ಪರ್ಶವಿರುವ ಈ ಹಾಡಿಗೆ ರಕ್ಷಿತ್ ತೀರ್ಥಹಳ್ಳಿ ಒಂದೊಳ್ಳೆ ದೃಶ್ಯ ಕಾವ್ಯದ ನಿರ್ದೇಶನ ಮಾಡಿ ಇಡೀ ಹಾಡನ್ನು ಚೆಂದಗಾಣಿಸಿದ್ದಾರೆ. ರಾಕ್ ಪಾಪ್ ಮಾದರಿಯಲ್ಲಿ ಶ್ರೀಮಂತವಾಗಿ ಮೂಡಿ ಬಂದಿರುವ ಈ ಹಾಡಿಗೆ ಗಾಯಕ ಆದರ್ಶ್ ಅಯ್ಯಂಗಾರ್ ದನಿಯಾಗುವುದರ ಜೊತೆ ನಿರ್ಮಾಣ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಮಗಳ ಫೋಟೋ ಹಂಚಿಕೊಂಡು ಅಭಿಮಾನಿಗಳಿ ಶಾಕ್ ಕೊಟ್ಟ ಸತೀಶ್ ನಿನಾಸಂ

    ಮಲೆನಾಡು ಭಾಗದಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆಯೂ ಹೆಚ್ಚು ಇರುವುದರಿಂದ ಈ ಹಾಡನ್ನು ಮಲೆನಾಡ ಪರಿಸರದಲ್ಲೇ ಚಿತ್ರೀಕರಿಸಲಾಗಿದೆ. ಸೈನ್ಯದಲ್ಲಿರುವ ತಂದೆಯನ್ನು ನೆನೆಯುವ ತಾಯಿ ಮಗಳು ಆತನ ಬರುವಿಕೆಗಾಗಿ ಎದುರು ನೋಡುತ್ತಿರುವ ಹಿನ್ನೆಲೆಯಲ್ಲಿ ಈ ಹಾಡನ್ನು ಸೆರೆ ಹಿಡಿಯಲಾಗಿದ್ದು, ಪೂಜಾ ಹರೀಶ್, ಸಾನ್ವಿ ಎಂ ಚಂದ್ರಶೇಖರ್ ತಾಯಿ ಮಗಳ ಪಾತ್ರವನ್ನು ನಿಭಾಯಿಸಿದ್ದಾರೆ.

    ಗಾಯಕ ಆದರ್ಶ್ ಅಯ್ಯಂಗಾರ್ ಮೂಲತಃ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದವರು. ಸುವರ್ಣ ವಾಹಿನಿಯ ಸ್ಟಾರ್ ಸಿಂಗರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನಪ್ರಿಯತೆ ಗಳಸಿಕೊಂಡಿರುವ ಇವರು ಪ್ರಸ್ತುತ ಅಮೆರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉದ್ಯೋಗದಲ್ಲಿದ್ದರೂ ಫ್ಯಾಶನ್ ಬಿಡದ ಆದರ್ಶ್ ಅಯ್ಯಂಗಾರ್ ಅಲ್ಲಿಯೇ ಸ್ಟುಡಿಯೋ ನಿರ್ಮಾಣ ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ಹಾಡನ್ನು ಕಂಪೋಸ್ ಮಾಡುತ್ತಾರೆ. ತಮ್ಮ ಶ್ರೀಕೃಷ್ಣ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮೈ ಫ್ರೆಂಡ್ ಎಂಬ ಮೊದಲ ವೀಡಿಯೋ ಸಾಂಗ್ ಬಿಡುಗಡೆ ಮಾಡಿದ್ದ ಆದರ್ಶ್ ಇದೀಗ ‘ಜಯ ಹೇ’ ಹಾಡನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಹಾಡು ಗಾಯನದತ್ತ ಅವರಿಗಿರುವ ಪ್ಯಾಶನ್ ಎಷ್ಟರ ಮಟ್ಟಿನದು ಎಂಬುದನ್ನು ತೋರಿಸುತ್ತಿದೆ.