Tag: ಯೋಧ

  • ಅಗ್ನಿಪಥ್ ಸೇರುವ ಯುವಕರಿಗೆ ದೈಹಿಕ ತರಬೇತಿ ಕೊಡಲು ನೆರವಾದ ಕೋಲಾರ ಕ್ರೀಡಾ ಸಂಸ್ಥೆ

    ಅಗ್ನಿಪಥ್ ಸೇರುವ ಯುವಕರಿಗೆ ದೈಹಿಕ ತರಬೇತಿ ಕೊಡಲು ನೆರವಾದ ಕೋಲಾರ ಕ್ರೀಡಾ ಸಂಸ್ಥೆ

    ಕೋಲಾರ: ಅಗ್ನಿಪಥ್ ಯೋಜನೆಯೂ ಯೋಧರನ್ನು ಸಿದ್ಧ ಮಾಡಲು ಶ್ರಮಿಸುತ್ತಿದ್ದು, ದೇಶಾದ್ಯಂತ ಹಲವು ರೀತಿಯ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಕೋಲಾರದ ಕ್ರೀಡಾ ಸಂಸ್ಥೆಯೊಂದು ನೂರಾರು ಯುವಕ-ಯುವತಿಯರು ದೈಹಿಕವಾಗಿ ತರಬೇತಿ ಪಡೆಯುವ ಮೂಲಕ ಸದ್ದಿಲ್ಲದೆ ಅಗ್ನಿವೀರರು ರೆಡಿ ಮಾಡುತ್ತಿದೆ.

    ರನ್ನಿಂಗ್, ವಾಕಿಂಗ್, ಪುಶ್ ಅಪ್, ಹೀಗೆ ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿರುವ ಯುವಕರು ಮಾಜಿ ಯೋಧರ ಕಮ್ಯಾಂಡೋವನ್ನು ಪಾಲಿಸುತ್ತಿದ್ದಾರೆ. ತರಬೇತಿ ವೇಳೆ ನಿರತವಾಗಿ ಯುವಕ-ಯುವತಿಯರ ಬಾಯಲ್ಲಿ ‘ಜೈಹಿಂದ್ ಜೈಹಿಂದ್’ ಅನ್ನೋ ಘೋಷಣೆ ಕೂಗುತ್ತಿದ್ದಾರೆ. ಸೈನ್ಯಕ್ಕೆ ಸೇರಬೇಕು, ದೇಶಸೇವೆ ಮಾಡಬೇಕು ಅನ್ನೋದು ಸಾವಿರಾರು ಯುವಕ ಯುವತಿಯರ ಕನಸು. ಅದರಲ್ಲಿ ಹಲವರಿಗೆ ಸರಿಯಾದ ತರಬೇತಿ ಮಾರ್ಗದರ್ಶನ ಸಿಗದೆ ಅವಕಾಶ ಕಳೆದುಕೊಳ್ಳುವವರೆ ಹೆಚ್ಚು. ಇದನ್ನೂ ಓದಿ: ನಿಯಮ ಮೀರಿ ಚಾಮರಾಜಪೇಟೆ ಬಂದ್ ಮಾಡಿದ್ರೆ ಕಠಿಣ ಕ್ರಮ: ಪೊಲೀಸರ ಎಚ್ಚರಿಕೆ 

    ಹೀಗಿರುವಾಗ ಇತ್ತೀಚೆಗೆ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ ಜಾರಿಗೆ ತರುವ ಮೂಲಕ ದೇಶದದ್ಯಾಂತ ಹಲವು ವಿವಾದಕ್ಕೂ ಕಾರಣವಾಗಿತ್ತು. ಹೀಗೆ ಹಲವು ವಿವಾದಗಳ ನಡುವೆಯೇ ಕೋಲಾರದಲ್ಲೊಂದು ಸಂಸ್ಥೆ ಸದ್ದಿಲ್ಲದೆ ಅಗ್ನಿವೀರರನ್ನು ತಯಾರು ಮಾಡುತ್ತಿದೆ. ಹೌದು ಕೋಲಾರ ಸ್ಟೋರ್ಟ್ಸ್ ಕ್ಲಬ್ ಅಗ್ನಿವೀರರಾಗ ಬಯಸುವ ಯುವಕ, ಯುವತಿಯರಿಗೆ ಉಚಿತವಾಗಿ ದೈಹಿಕ ತರಬೇತಿಯನ್ನು ನೀಡುತ್ತಿದೆ.

    ಮಾಜಿ ಸೈನಿಕರಾದ ಕೃಷ್ಣಮೂರ್ತಿ ಮತ್ತು ಬ್ಲಾಕ್ ಕಮ್ಯಾಂಡೋ ತರಬೇತಿ ಪಡೆದಿರುವ ಸುರೇಶ್ ಅವರಿಂದ ಜಿಲ್ಲೆಯ ಸುಮಾರು 180ಕ್ಕೂ ಹೆಚ್ಚು ಯುವಕ, ಯುವತಿಯರಿಗೆ ಪ್ರತಿನಿತ್ಯ ದೈಹಿಕ ತರಬೇತಿಯನ್ನು ನೀಡಲಾಗುತ್ತಿದೆ. ಕೋಲಾರ ಹೊರವಲಯ ರಾಷ್ಟ್ರೀಯ ಹೆದ್ದಾರಿ ಬಳಿ ರನ್ನಿಂಗ್, ವಾಮ್‍ಅಪ್ ಮಾಡಿ ನಂತರ ಕೋಲಾರ ನಗರ ರೈಲು ನಿಲ್ದಾಣದ ಬಳಿ ಸೈನ್ಯ ಸೇರಲು ಬೇಕಾದ ಕೆಲವೊಂದು ಕಸರತ್ತು ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. ಸದ್ಯ ತರಬೇತಿಯಲ್ಲಿ ಅತ್ಯಂತ ಜೋಶ್‍ನಿಂದ ಭಾಗವಹಿಸಿರುವ ಅಗ್ನಿವೀರರು ಮುಂದಿನ ತಿಂಗಳು ಹಾಸನದಲ್ಲಿ ನಡೆಯುವ ಆರ್ಮಿ ಸೆಲೆಕ್ಷನ್‍ನಲ್ಲಿ ಭಾಗವಹಿಸಲಿದ್ದಾರೆ.

    ಕೋಲಾರ ಸ್ಟೋರ್ಟ್ಸ್ ಕ್ಲಬ್ 1998 ರಿಂದಲೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹಲವು ಕ್ರೀಡಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಜೊತೆಗೆ ಸೈನ್ಯಕ್ಕೆ ಸೇರ ಬಯಸುವ ಯುವಕ-ಯುವತಿಯರಿಗೆ ಮಾಜಿ ಯೋಧರು, ದೈಹಿಕ ಶಿಕ್ಷಕರಿಂದ ಸೈನ್ಯಕ್ಕೆ ಸೇರಲು ಬೇಕಾದ ತರಬೇತಿಯನ್ನು ನೀಡುತ್ತ ಬಂದಿದೆ. ಕೋವಿಡ್ ಸೇರಿದಂತೆ ಹಲವು ಕಾರಣಳಿಂದಾಗಿ ತರಬೇತಿ ನಿಲ್ಲಿಸಿದ್ದು, ಮತ್ತೆ ಕೋಲಾರ ಸ್ಟೋರ್ಟ್ಸ್ ಕ್ಲಬ್ ತರಬೇತಿ ಆರಂಭಿಸಿದೆ.

    ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಅಗ್ನಿಪಥ್ ಯೋಜನೆ ವಿವಾದ ಶುರುವಾದ ಮೇಲಂತೂ ಸೈನ್ಯಕ್ಕೆ ಸೇರ ಬಯಸುವ ಯುವಕ-ಯುವತಿಯರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಹಲವು ಸೌಲಭ್ಯಗಳ ಕೊರತೆಯಿಂದ ಕೋಲಾರ ಸ್ಟೋರ್ಟ್ಸ್ ಕ್ಲಬ್‍ನ ಸದಸ್ಯರು ಕೋಲಾರ ಜಿಲ್ಲೆಯ ಯುವಕ- ಯುವತಿಯರಿಗೆ ಮಾತ್ರ ತರಬೇತಿ ನೀಡುತ್ತಿದ್ದಾರೆ.

    ಇಲ್ಲಿ ನೀಡುತ್ತಿರುವ ಕಠಿಣ ತರಬೇತಿಯ ವಿಚಾರ ತಿಳಿದು ಉತ್ತರ ಕರ್ನಾಟಕ ಸೇರಿದಂತೆ ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಗಳ ಯುವಕ-ಯುವತಿಯರು ತರಬೇತಿ ಪಡೆಯಲು ಬರುವ ಆಸಕ್ತಿ ವಹಿಸುತ್ತಿದ್ದಾರೆ. ಆದರೂ ವಸತಿ ಸೇರಿದಂತೆ ಹಲವು ಸೌಲಭ್ಯಗಳ ಕೊರತೆಯಿಂದ ಕೇವಲ ಕೋಲಾರ ಜಿಲ್ಲೆಯ ಯುವಕ-ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ. ಇದನ್ನೂ ಓದಿ:  ಫೈರಿಂಗ್ ರೇಂಜ್‍ನಲ್ಲಿ ಆಕಸ್ಮಿಕ ಸ್ಫೋಟ – ಇಬ್ಬರು ಸೈನಿಕರಿಗೆ ಗಂಭೀರ ಗಾಯ

    ತರಬೇತಿಗೆ ಬರುವ ಯುವಕರಿಗೆ ಸೈನ್ಯಕ್ಕೆ ಬೇಕಾಗುವ ದೈಹಿಕ ತರಬೇತಿ ಹಾಗೂ ಪಠ್ಯ ತರಬೇತಿಯನ್ನು ಸಹ ನೀಡಲಾಗುತ್ತಿದೆ. ನಿತ್ಯ ತರಬೇತಿಗೆ ಬರುವ ಯುವಕ-ಯುವತಿಯರಿಗೆ ದಾನಿಗಳ ನೆರವಿನಿಂದ ಕೆಲವೊಂದು ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಯೋಧನ ಗುಂಡಿನ ದಾಳಿಗೆ ಇಬ್ಬರು ಅಧಿಕಾರಿಗಳು ಸಾವು

    ಯೋಧನ ಗುಂಡಿನ ದಾಳಿಗೆ ಇಬ್ಬರು ಅಧಿಕಾರಿಗಳು ಸಾವು

    ಚಂಡೀಗಢ: ಗುಂಡಿನ ದಾಳಿಗೆ ಇಬ್ಬರು ಸೇನಾ ಅಧಿಕಾರಿಗಳು ಬಲಿಯಾಗಿರುವ ಘಟನೆ ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಭಾರತೀಯ ಸೇನೆಗೆ ಸೇರಿದ ಯೋಧನೇ ಇಬ್ಬರು ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಅಗ್ನಿಪಥ್‌ಗೆ ಭರ್ಜರಿ ಪ್ರತಿಕ್ರಿಯೆ – 4 ದಿನಕ್ಕೆ 94 ಸಾವಿರ ಅರ್ಜಿ

    ಅಧಿಕಾರಿಗಳು ಮಲಗಿದ್ದ ವೇಳೆ ಗುಂಡಿನ ದಾಳಿ ನಡೆದಿದೆ. ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 60 ಕಿ.ಮೀ ಒಳಗಿನ ಎಲ್ಲ ಟೋಲ್ ತೆರವಿಗೆ ಸೂಚಿಸಿದ್ರೂ ದ.ಕನ್ನಡ ಜಿಲ್ಲೆಯಲ್ಲಿದೆ 48 ಕಿ.ಮೀನಲ್ಲಿ 4 ಟೋಲ್

    ಯೋಧನೇ ಅಧಿಕಾರಿಗಳಿಗೆ ಗುಂಡು ಹಾರಿಸಿರುವ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

    Live Tv

  • ಬಿಹಾರದ ಕಿಶನ್ ಗಂಜ್‍ನಲ್ಲಿ ಕಾಫಿನಾಡ ಯೋಧನ ಮೃತದೇಹ ಪತ್ತೆ

    ಬಿಹಾರದ ಕಿಶನ್ ಗಂಜ್‍ನಲ್ಲಿ ಕಾಫಿನಾಡ ಯೋಧನ ಮೃತದೇಹ ಪತ್ತೆ

    ಚಿಕ್ಕಮಗಳೂರು: ರಜೆಗೆ ಮನೆಗೆ ಬಂದಿದ್ದ ತಾಲೂಕಿನ ಖಾಂಡ್ಯ ಸಮೀಪದ ಮಸಿಗದ್ದೆ ಗ್ರಾಮದ ಯೋಧ ಗಣೇಶ್ ಮೃತದೇಹ ಬಿಹಾರದ ಕಿಶನ್ ಗಂಜ್‍ನಲ್ಲಿ ಪತ್ತೆಯಾಗಿದೆ.

    ಮೃತ ಯೋಧ ಗಣೇಶ್ 15 ದಿನದ ಹಿಂದೆ ರಜೆ ಹಾಕಿ ಊರಿಗೆ ಬಂದಿದ್ದರು. 12ನೇ ತಾರೀಖು ಸೇನಾ ತಂಡ ಕೂಡಿಕೊಳ್ಳಬೇಕಾದ ಕಾರಣ ಜೂನ್ 9ರಂದು ಮನೆಯಿಂದ ವಾಪಸ್ ಹೋಗಿದ್ದರು. ಇಂದು ಸೇನಾ ತಂಡ ಕೂಡಿಕೊಳ್ಳಬೇಕಿತ್ತು. ಆದರೆ ಸೇನೆಗೆ ಹೋಗುವ ಮುನ್ನವೇ ಬಿಹಾರದ ಕಿಶನ್‍ಗಂಜ್‍ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: 2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ

    ನಿನ್ನೆ ಬೆಳಗ್ಗೆ ಅವರ ಪತ್ನಿ ಗಣೇಶ್ ಜೊತೆ ಮಾತನಾಡಿದ್ದರು. ಆಗ ಅವರು ಮುಖ ತೊಳೆಯುತ್ತಿದ್ದೇನೆ ಎಂದು ಹೇಳಿದ್ದರು. ಆದರೆ ಮಧ್ಯಾಹ್ನದ ನಂತರ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಮತ್ತೆ ಕರೆ ಮಾಡಿಲ್ಲ. ಆದರೆ ನಿನ್ನೆ ರಾತ್ರಿ ಸೇನೆ ಅಧಿಕಾರಿಗಳು ಕರೆ ಮಾಡಿ ಗಣೇಶ್ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿಹಾರದ ಕಿಶನ್ ಗಂಜ್‍ನಲ್ಲಿ ಅವರ ಮೃತದೇಹ ಕಂಡ ಅಂಬುಲೆನ್ಸ್ ಚಾಲಕ ಜೇಬಿನಲ್ಲಿದ್ದ ಐಡಿ ಕಾರ್ಡ್ ಹಾಗೂ ಆರ್ಮಿಯ ಪಾಸ್‍ ನೋಡಿ ಈತ ಯೋಧ ಎಂದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಸೇನೆಗೆ ವಾಪಸ್ ಹೋಗೇ ಇಲ್ಲ. ಅವರು ಹೇಗೆ ಸಾವನ್ನಪ್ಪಿದರು ಎಂಬುದು ಕುಟುಂಬಸ್ಥರು ಹಾಗೂ ಸ್ಥಳಿಯರಲ್ಲಿ ಯಕ್ಷಪ್ರಶ್ನೆಯಾಗಿದೆ. ತಾಲೂಕಿನ ಮಸಿಗದ್ದೆ ಗ್ರಾಮದ ನಾಗಯ್ಯ-ಗಂಗಮ್ಮ ದಂಪತಿಯ ಪುತ್ರನಾದ ಗಣೇಶ್ ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಯೋಧ ಗಣೇಶ್ ಪ್ರಸ್ತುತ ಜಮ್ಮುವಿನಲ್ಲಿ ಸಿಗ್ನಲ್ ರೆಜಿಮೆಂಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗಣೇಶ್‌ಗೆ ಐದು ವರ್ಷದ ಹೆಣ್ಣು ಮಗಳಿದ್ದಾಳೆ. ಇದನ್ನೂ ಓದಿ: ಪೊಲೀಸರನ್ನ ಹತ್ಯೆ ಮಾಡಿದ್ದ ಭಯೋತ್ಪಾದಕ ಎನ್‍ಕೌಂಟರ್

    ಕಳೆದ ಮೂರು ವರ್ಷಗಳ ಹಿಂದೆ ನಾಗಯ್ಯ-ಗಂಗಮ್ಮ ದಂಪತಿಯ ಇನ್ನೊಬ್ಬ ಮಗ ಹಾಗೂ ಯೋಧ ಗಣೇಶ್ ಸಹೋದರ ಕೂಡ ತೀರಿಕೊಂಡಿದ್ದರು. ಇದೀಗ ಯೋಧ ಗಣೇಶ್ ಕೂಡ ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂಬಕ್ಕೆ ಆಧಾರವೇ ಇಲ್ಲದಂತಾಗಿದೆ. ಯೋಧನ ಸಾವಿನಿಂದ ಕುಟುಂಬ ಹಾಗೂ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತ ಯೋಧ ಗಣೇಶ್ ಮನೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

  • ಸಿಡಿಲು ಬಡಿದು ಅಸ್ಸಾಂನಲ್ಲಿ ಬಾಗಲಕೋಟೆ ಯೋಧ ಸಾವು

    ಸಿಡಿಲು ಬಡಿದು ಅಸ್ಸಾಂನಲ್ಲಿ ಬಾಗಲಕೋಟೆ ಯೋಧ ಸಾವು

    ದಿಸ್ಪುರ್: ಬಾಗಲಕೋಟೆ ಮೂಲದ ಬಿಎಸ್‍ಎಫ್ ಯೋಧ ಅಸ್ಸಾಂನಲ್ಲಿ ರಾತ್ರಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

    ಅಶೋಕ್ ಮುಂಡಾಸ್(41) ಮೃತ ಬಿಎಸ್‍ಎಫ್ ಯೋಧ. ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ಅಶೋಕ್ ಅವರು ಬಿಎಸ್‍ಎಫ್ 31 ಬಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಸ್ಸಾಂನ ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಶನಿವಾರ ರಾತ್ರಿ ಸಿಡಿಲು ಬಡಿದ ರಭಸಕ್ಕೆ ಅಶೋಕ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:  ಜಾಗತಿಕ ಪರಿಸರ ಉಪಕ್ರಮ ‘ಲೈಫ್ ಮೂವ್ಮೆಂಟ್’ಗೆ ಚಾಲನೆ ನೀಡಲಿರುವ ಮೋದಿ 

    ಅಶೋಕ್ ಅವರು ಬಿಎಸ್‍ಎಫ್‍ನಲ್ಲಿ 16 ವರ್ಷದಿಂದ ಸೇವೆಯಲ್ಲಿದ್ದು, ಈಗ ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಪಾರ್ಥೀವ ಶರೀರ ನಾಳೆ ಬೆಳಗ್ಗೆ ಗ್ರಾಮಕ್ಕೆ ಬರುವ ಸಾಧ್ಯತೆ ಇದೆ.

  • ಹೆಂಡತಿ ಸೀಮಂತ ಕಾರ್ಯಕ್ರಮಕ್ಕೆ ಊರಿಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಮರಣ

    ಹೆಂಡತಿ ಸೀಮಂತ ಕಾರ್ಯಕ್ರಮಕ್ಕೆ ಊರಿಗೆ ಬಂದಿದ್ದ ಯೋಧ ರಸ್ತೆ ಅಪಘಾತದಲ್ಲಿ ಮರಣ

    ಬೆಳಗಾವಿ: ಪತ್ನಿಯ ಸೀಮಂತ ಕಾರ್ಯಕ್ಕೆ ರಜೆಯ ಮೇಲೆ ಬಂದಿದ್ದ ಯೋಧರೊಬ್ಬರು ನಿನ್ನೆ ತಡರಾತ್ರಿ ಬೈಕ್ ಮೇಲೆ ಮರಳುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹಲಗಾ ಬಳಿಯ ರೈಸ್ ಮಿಲ್ ಹತ್ತಿರ ನಡೆದಿದೆ.

    ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದ ಭಾರತೀಯ ಸೇನೆಯ ಯೋಧ ಪ್ರಕಾಶ್ ಮಡಿವಾಳಪ್ಪ ಸಂಗೊಳ್ಳಿ (28) ಮೃತ ಯೋಧ. ಮಡಿವಾಳಪ್ಪ ಅವರು ಕಳೆದ 9 ವರ್ಷಗಳಿಂದ ಬೆಳಗಾವಿಯ ಮರಾಠಾ ಲೈಟ್ ಇನ್‍ಫೇಂಟರಿ 9ನೇ ರೆಜಿಮೆಂಟ್‍ನಲ್ಲಿ ಸೈನಿಕನಾಗಿ ಬೆಳಗಾವಿಯಲ್ಲಿ ಸೇವೆಯಲ್ಲಿದ್ದರು. ಇದನ್ನೂ ಓದಿ: ಆಂಧ್ರಪ್ರದೇಶದ ಕಾರ್ಖಾನೆಯಲ್ಲಿ ಅನಿಲ ಸೋರಿಕೆ – 200 ಮಹಿಳಾ ಕಾರ್ಮಿಕರು ಅಸ್ವಸ್ಥ

    ಕಳೆದ ಎರಡು ವರ್ಷಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರು ಮಗುವಿನ ನಿರೀಕ್ಷೆಯಲ್ಲಿದ್ದರು. ಪತ್ನಿಯ ಸೀಮಂತ ಕಾರ್ಯವನ್ನು ಜೂ. 12ರಂದು ಅದ್ಧೂರಿಯಾಗಿ ಜರುಗಿಸಲು ರಜೆ ಪಡೆದು ಸ್ವಗ್ರಾಮಕ್ಕೆ ಬಂದಿದ್ದರು. ಆದರೆ ನಿನ್ನೆ ತಡರಾತ್ರಿ ಬೆಳಗಾವಿಯಿಂದ ಬೈಕ್‍ನಲ್ಲಿ ಬರುತ್ತಿದ್ದ ವೇಳೆ ಹಲಗಾ ಬಳಿಯ ರೈಸ್ ಮಿಲ್ ಹತ್ತಿರ ಅಪರಿಚಿತ ವಾಹನೊಂದು ಡಿಕ್ಕಿ ಹೊಡೆದು ಯೋಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮದ್ವೆಯಾಗಿ 6 ವರ್ಷ ಕಳೆದ್ರೂ ಫಸ್ಟ್ ನೈಟ್ ಆಗಿಲ್ಲ – ಪತಿಯ ಮನೆ ತೊರೆಯುವಂತೆ ಪತ್ನಿಗೆ ಕೋರ್ಟ್ ಆರ್ಡರ್

    ಸೀಮಂತ ಕಾರ್ಯಕ್ರಮದ ಸಂತೋಷದಲ್ಲಿ ಇರಬೇಕಿದ್ದ ಯೋಧನ ಕುಟುಂಬವಿಗಾ ಕಣ್ಣೀರಿಡುವಂತಾಗಿದೆ. ಇತ್ತ ಯೋಧನ ಪಾರ್ಥಿವ ಶರೀರ ಬೈಲಹೊಂಗಲ ಪಟ್ಟಣದಿಂದ ಗ್ರಾಮಕ್ಕೆ ತೆರಳುವಾಗ ಯೋಧನ ಗೆಳೆಯರು, ಗ್ರಾಮದ ಯುವಕರು ನೂರಾರು ಸಂಖ್ಯೆಯಲ್ಲಿ ಸೇರಿ ಬೈಕ್ ರ್ಯಾಲಿ ಮಾಡುವ ಮೂಲಕ ಗ್ರಾಮಕ್ಕೆ ಕೊಂಡೊಯ್ದರು. ಪ್ರಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತು.

    ಯೋಧನ ಪತ್ನಿಯ ಆಕ್ರಂದನ ಕಂಡು ಅಂತ್ಯಕ್ರಿಯೆಯಲ್ಲಿ ಸೇರಿದ್ದ ಜನರು ಕೂಡ ಕಣ್ಣೀರು ಹಾಕಿದರು. ಬಳಿಕ ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಯೋಧನ ಮನೆ ಮುಂಭಾಗದಲ್ಲಿ ಇರಿಸಿ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

  • ಕರ್ತವ್ಯನಿರತ ಯೋಧ ಹುತಾತ್ಮ- ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

    ಕರ್ತವ್ಯನಿರತ ಯೋಧ ಹುತಾತ್ಮ- ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

    ಬೆಳಗಾವಿ: ಸಿಯಾಚಿನ್ ಗ್ಲೇಷಿಯರ್‌ನಲ್ಲಿ ನಡೆಯುತ್ತಿದ್ದ ಆಪರೇಷನ್ ಮೇಘದೂತ ಕಾರ್ಯಾಚರಣೆ ಸಂದರ್ಭದಲ್ಲಿ ಹುತಾತ್ಮರಾದ ಮರಾಠ ಲಘು ಪದಾತಿದಳದ ಯೋಧ ಕೊಲ್ಲಾಪುರ ಜಿಲ್ಲೆಯ ಜಾಧವ ಪ್ರಶಾಂತ ಶಿವಾಜಿ ಅವರ ಪಾರ್ಥಿವ ಶರೀರಕ್ಕೆ ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು.

    ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ ಆಗಮಿಸಿದ ಪಾರ್ಥಿವ ಶರೀರವನ್ನು ಬರಮಾಡಿಕೊಂಡು ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಅಂತಿಮ ನಮನ ಸಲ್ಲಿಸಿದ ಬಳಿಕ ಯೋಧನ ಪಾರ್ಥಿವ ಶರೀರವನ್ನು ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆ ಗಡಹಿಂಗ್ಲಜ್ ತಾಲೂಕಿನ ಬಸರಗಿ ಬಿ.ಕೆ. ಗ್ರಾಮಕ್ಕೆ ರಸ್ತೆ ಮೂಲಕ ಕಳಿಸಿಕೊಡಲಾಯಿತು. ಇದನ್ನೂ ಓದಿ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕೂಡ ಪುಷ್ಪಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಡಿಸಿಪಿ ರವೀಂದ್ರ ಗಡಾದಿ, ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಮರಾಠಾ ಲಘುಪದಾತಿ ದಳದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: 4 ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ನಾಪತ್ತೆ

  • ಪತಿ ಆಸೆ ಈಡೇರಿಸಿದ ಮಡದಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್

    ಪತಿ ಆಸೆ ಈಡೇರಿಸಿದ ಮಡದಿ: ಹುತಾತ್ಮ ಯೋಧನ ಪತ್ನಿ ಈಗ ಲೆಫ್ಟಿನೆಂಟ್

    ನವದೆಹಲಿ: ಲ್ಯಾನ್ಸ್ ನಾಯಕ ಮತ್ತು ವೀರಚಕ್ರ ಪ್ರಶಸ್ತಿ ಪುರಸ್ಕೃತ ಶಾಹಿದ್ ದೀಪಕ್ ಸಿಂಗ್ ಅವರ ಪತ್ನಿ ರೇಖಾ ಸಿಂಗ್ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದಾರೆ.

    ರೇಖಾ ಸಿಂಗ್ ಬಿಹಾರ ರೆಜಿಮೆಂಟ್‍ನ 16ನೇ ಬೆಟಾಲಿಯನ್ ನಾಯಕ ಶಾಹಿದ್ ದೀಪಕ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಜೂನ್ 15, 2020 ರಂದು ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ವಿರುದ್ಧ ಹೋರಾಡುತ್ತಿದ್ದಾಗ ದೀಪಕ್ ಸಿಂಗ್ ಹುತಾತ್ಮರಾದರು. ದೀಪಕ್ ಸಿಂಗ್ ಅವರ ಧೈರ್ಯ ಮೆಚ್ಚಿದ ಸರ್ಕಾರ ಮರಣೋತ್ತರ ಪವಿತ್ರ ಪ್ರಶಸ್ತಿಯಾದ ‘ವೀರಚಕ್ರ’ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿತು. ಇದನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೀಡಿದರು. ಇದನ್ನೂ ಓದಿ: ನಾನು ಒಳ್ಳೆಯದನ್ನೂ ಮಾಡಿದ್ದೀನಿ, ಅದನ್ನೂ ತೋರಿಸಿ – ಕ್ಯಾಮೆರಾ ಮುಂದೆ ಕೈ ಮುಗಿದ ಕಿಂಗ್‍ಪಿನ್ ಆರ್.ಡಿ.ಪಾಟೀಲ್

    Lieutenant Rekha Singh Fulfils The Dream Of Her Husband Who Got Martyred In Galwan Valley. Salutes!

    ದೀಪಕ್ ಸಿಂಗ್ ಅವರಿಗೆ ಯೋಧ ಪರಂಪರೆಯನ್ನು ಮುಂದುವರಿಯಬೇಕು ಎಂಬ ಕನಸಿತ್ತು. ಅದಕ್ಕೆ ಸಾಥ್ ಕೊಟ್ಟ ರೇಖಾ ಸಿಂಗ್ ಯೋಧೆಯಾಗಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು. ರೇಖಾ ಮತ್ತು ದೀಪಕ್ ವಿವಾಹವಾಗಿ ಕೇವಲ 15 ತಿಂಗಳುಗಳಾಗಿದ್ದವು.

    ಈ ಕುರಿತು ಮಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸೇನೆಗೆ ಸೇರಬೇಕು ಎಂಬುದು ನನ್ನ ಪತಿಯ ಕನಸು ಮತ್ತು ನನಗೆ ಇದ್ದ ದೇಶಭಕ್ತಿಯ ಕಾರಣ ನಾನು ಶಿಕ್ಷಕ ವೃತ್ತಿಯನ್ನು ಬಿಟ್ಟು ಸೈನ್ಯದಲ್ಲಿ ಕೆಲಸ ಮಾಡಲು ಮನಸ್ಸು ಮಾಡಿದೆ. ಆದರೆ ನೋಯ್ಡಾಕ್ಕೆ ಹೋಗುವುದು ಮತ್ತು ಸೇನೆಗೆ ಸೇರಲು ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯುವುದು ಸುಲಭವಾಗಿರಲಿಲ್ಲ. ದೈಹಿಕ ತರಬೇತಿ ಪಡೆದರೂ ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗಲಿಲ್ಲ. ಆದರೆ ನಾನು ಧೈರ್ಯ ಕಳೆದುಕೊಳ್ಳದೆ ಸೇನೆಗೆ ಸೇರಲು ತಯಾರಿ ನಡೆಸುತ್ತಿದ್ದೆ ಎಂದು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.ಇದನ್ನೂ ಓದಿ:  ನಮ್ಮ ಮನೆ ಎಕ್ಸ್ ಪೋ 4ನೇ ಆವೃತ್ತಿಗೆ ಎರಡನೇ ದಿನವು ಭರ್ಜರಿ ರೆಸ್ಪಾನ್ಸ್

    Galwan valley martyrs wife passes army test, to be trained as an officer

    ಎರಡನೆ ಪ್ರಯತ್ನದಲ್ಲಿ ನನ್ನ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದ್ದು, ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿದ್ದೇನೆ. ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಹುದ್ದೆಯ ತರಬೇತಿಯು ಮೇ 28 ರಿಂದ ಚೆನ್ನೈನಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

  • ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಹುತಾತ್ಮ

    ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ಹುತಾತ್ಮ

    ಹಾಸನ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧರೊಬ್ಬರು ಚಿಕಿತ್ಸೆ ಫಲಿಸದೆ ಹುತಾತ್ಮರಾದ ಘಟನೆ ಹಾಸನ ನಗರದಲ್ಲಿ ನಡೆದಿದೆ.

    ಸಂಜಯ್ (22) ಮೃತ ಯೋಧ. ಸಂಜಯ್‌  ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ರಜೆಯ ಮೇರೆಗೆ ಊರಿಗೆ ಬಂದಿದ್ದರು. ಹೊನ್ನೇನಹಳ್ಳಿ ಗ್ರಾಮದ ಸಂಜಯ್, ಹಾಸನದ ದಾಸರಕೊಪ್ಪಲಿನಲ್ಲಿ ನೆಲೆಸಿದ್ದರು. ಇದನ್ನೂ ಓದಿ: ಗಾಂಧಿನಗರ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಲಕ್ಷ್ಮೀಕಾಂತ್ ನೇಮಕ

    crime

    ಮೂರು ದಿನಗಳ ಹಿಂದೆ ಹಾಸನದ ಎಂ.ಜಿ. ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಯೋಧ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಹುತಾತ್ಮರಾಗಿದ್ದಾರೆ. ಘಟನೆಯಿಂದ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಬಿಎಸ್‍ಪಿಯನ್ನು ಮಾಯಾವತಿ ಬಿಜೆಪಿಗೆ ಮಾರಾಟ ಮಾಡಿದ್ದಾರೆ: ಭೀಮ್ ಆರ್ಮಿ ಮುಖ್ಯಸ್ಥ

  • ರಜೆಗೆ ಬಂದಿದ್ದ ಯೋಧ ಸಾವು – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

    ರಜೆಗೆ ಬಂದಿದ್ದ ಯೋಧ ಸಾವು – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

    ಚಿಕ್ಕೋಡಿ: ಅನಾರೋಗ್ಯ ಕಾರಣದಿಂದ ರಜೆಗೆ ಬಂದಿದ್ದ ಯೋಧ ಸಾವನ್ನಪ್ಪಿದ್ದಾರೆ. ಪರಿಣಾಮ ಸರ್ಕಾರಿ ಸಕಲ ಗೌರದೊಂದಿಗೆ ಸಂಜೆ ಅಂತಿಮ ನಮನ ಸಲ್ಲಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ನಡೆದಿದೆ.

    ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕಲಗೌಡ ಹಡಗಿನಾಳ. ಕಳೆದ ಮಾರ್ಚ 20 ರಂದು ಎರಡು ತಿಂಗಳ ರಜೆಯ ಮೇಲೆ ಸ್ವಗ್ರಾಮ ಬೆಳಗಾವಿ ಗ್ರಾಮಕ್ಕೆ ಬಂದಿದ್ದರು. ಭಾನುವಾರ ರಾತ್ರಿ ಮನೆಯಲ್ಲಿದ್ದ ಕಲಗೌಡರಿಗೆ ರಕ್ತದೊತ್ತಡ ಕಡಿಮೆಯಾಗಿದ್ದರಿಂದ ಬೆಳವಿ ಸೇನೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಲಗೌಡ ಮೃತಪಟ್ಟಿದ್ದಾರೆ. ಇದನ್ನೂ ಓದಿ: ತಮ್ಮ ವೇಯ್ಟ್‌ ಲಾಸ್ ಜರ್ನಿ ಬಗ್ಗೆ ಹೇಳಿದ ಕಾಶ್ಮೀರಿ ಪಂಡಿತಾ

    ಅಣ್ಣ-ತಮ್ಮ ಇಬ್ಬರು ಯೋಧರು
    ರೈತ ಕುಟುಂಬದಿಂದ ಬೆಳೆದ ಯೋಧ ಕಲಗೌಡ ಭೀಮಪ್ಪ ಹಡಗಿನಾಳ ಕಳೆದ(2014) ಎಂಟು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹಿರಿಯ ಸಹೋದರ ಮಲ್ಲಪ್ಪ ಕೂಡ ಭಾರತೀಯ ಸೇನೆಯ ಆಸ್ಸಾಂನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕಲಗೌಡ ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.

    ಬೆಳವಿ ಗ್ರಾಮ ಪಂಚಾಯತಿ ಆವರಣದಲ್ಲಿ ವೀರಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಅನುಕೂಲ ಮಾಡಿದ್ದರಿಂದ ಸಾರ್ವಜನಿಕರು ದರ್ಶನ ಮಾಡಿ ಅಂತಿಮ ನಮನ ಸಲ್ಲಿಸಿದರು.

    ಪುಷ್ಪ ನಮನ ಸಲ್ಲಿಸಿದ ಗಣ್ಯರು
    ಅಲಂಕೃತಗೊಂಡ ವಾಹನದಲ್ಲಿ ಯೋಧ ಕಲಗೌಡ ಪಾರ್ಥಿವ ಶರೀರದ ಮೆರವಣಿಗೆ ನಡೆಸಿದರು. ಕಲಗೌಡ ‘ಅಮರ್ ರಹೇ’ ಎಂಬ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಗ್ರಾಮ ಪಂಚಾಯತಿ ಚೇರಮನ್ ಜಯಶ್ರೀ ಸತ್ಯಾಯಿಗೋಳ ಹಿರಿಯ ಸದಸ್ಯರಾದ ರಮೇಶ್ ಕುಲಕರ್ಣಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಸತ್ಯಪ್ಪ ನಾಯಿಕ, ಪಿಡಿಓ ಶೋಭಾ, ತಳವಾರ ಗ್ರಾಮ ಲೆಕ್ಕಾಧಿಕಾರಿ ಶಾನೂರ ಮುಲ್ತಾನಿ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹಾದೇವ ಬನ್ನಕಗೋಳ ಗ್ರಾಮದ ಪರವಾಗಿ ಪುಷ್ಪ ನಮನ ಸಲ್ಲಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದು 53 ಸೋಂಕು – ಶೂನ್ಯ ಮರಣ ಪ್ರಮಾ

    ಯೋಧನ ಸ್ವತೋಟದಲ್ಲಿ ಅಂತಿಮ ಗೌರವ ನಮನ ನಡೆಯಿತು. ಗ್ರಾಮದ ಜನರು, ಹಾಲಿ, ಮಾಜಿ ಸೈನಿಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸೈನಿಕರು ಪಾಲ್ಗೊಂಡಿದ್ದರು.

  • ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ

    ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ

    ಬೆಳಗಾವಿ: ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ನೋಡಲು ನಿವೃತ್ತ ಯೋಧರೊಬ್ಬರು ಸೇನಾ ಸಮವಸ್ತ್ರದಲ್ಲೇ ಆಗಮಿಸಿ ಅಭಿಮಾನ ಮೆರೆದಿದ್ದಾರೆ.

    ನಗರದ ಚಿತ್ರಾ ಚಿತ್ರಮಂದಿರಕ್ಕೆ ಕುಟುಂಬ ಸಮೇತವಾಗಿ ಆಗಮಿಸಿದ ಜಿಲ್ಲೆಯ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ನಿವಾಸಿ ನಿವೃತ್ತ ಯೋಧ ವಿನಾಯಕ ಮೇದಾರ್ ಅವರು ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿದ್ದಾರೆ. ಇದನ್ನೂ ಓದಿ: ಕಲಾವಿದ ದೇವಿಕಿರಣ್ ಕೈಚಳಕದಲ್ಲಿ ಪವರ್ ಸ್ಟಾರ್ ಪುನೀತ್

    ಪುನೀತ್ ರಾಜಕುಮಾರ್ ಅವರ ಅಪ್ಪಟ್ಟ ಅಭಿಮಾನಿ ಆಗಿರುವ ನಿವೃತ್ತ ಯೋಧ ವಿನಾಯಕ ಅವರು ಚಿತ್ರಾ ಟಾಕೀಸ್‍ನಲ್ಲಿ ಕೇಕ್ ಕಟ್ ಮಾಡುವ ಮೂಲಕ ಪುನೀತ್ ಅವರ ಹುಟ್ಟುಹಬ್ಬ ಆಚರಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪ್ಪು ಕೊನೆಯ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ನಾನು ನಿವೃತ್ತ ಯೋಧನಾಗಿ ಸೇನಾ ಸಮವಸ್ತ್ರದಲ್ಲೇ ಚಿತ್ರ ನೋಡಲು ಬಂದಿದ್ದೇನೆ. ಇದನ್ನೂ ಓದಿ:  ರವಿವರ್ಮಾ ಸ್ಟಂಟ್‌ಗೆ ಪವರ್ ಸ್ಟಾರ್ ಫಿದಾ: ಫೋನ್ ಮಾಡಿ ಪುನೀತ್ ಹೇಳಿದ್ದೇನು?

    ಅಪ್ಪು ಕೊನೆಯ ಸಿನಿಮಾ ಅಂತ ನಮಗೇನು ದುಃಖ ಇಲ್ಲ. ನಮ್ಮ ಎದೆಯಲ್ಲಿ ಎಂದೆಂದಿಗೂ ಅಪ್ಪು ಅಜರಾಮರ. ಇದು ಅಪ್ಪು ಅವರ ಕೊನೆಯ ಚಿತ್ರ ಅಂತ ಯಾರೂ ದಯವಿಟ್ಟು ಹೇಳಬೇಡಿ ಎಂದು ಮನವಿ ಮಾಡಿಕೊಂಡರು.