Tag: ಯೋಧ

  • 38 ವರ್ಷಗಳ ನಂತರ ಪತ್ತೆಯಾಯ್ತು ಆಪರೇಷನ್ ಮೇಘದೂತ್‍ನಲ್ಲಿ ಭಾಗಿಯಾಗಿದ್ದ ಯೋಧನ ಅವಶೇಷ

    38 ವರ್ಷಗಳ ನಂತರ ಪತ್ತೆಯಾಯ್ತು ಆಪರೇಷನ್ ಮೇಘದೂತ್‍ನಲ್ಲಿ ಭಾಗಿಯಾಗಿದ್ದ ಯೋಧನ ಅವಶೇಷ

    ಡೆಹ್ರಾಡೂನ್: ದೇಶಕ್ಕೆ ಸ್ವಾತಂತ್ರ್ಯ ದೊರಕಿ ಅಮೃತ ಮಹೋತ್ಸವದ ಸಂದರ್ಭದಲ್ಲಿದ್ದಾಗಲೇ, 38 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯೋಧರೊಬ್ಬರ ಅವಶೇಷ ಸಿಯಾಚಿನ್‍ನ 16,000 ಅಡಿ ಆಳದಲ್ಲಿ ಪತ್ತೆ ಆಗಿದೆ.

    ಆ ಮೃತದೇಹವನ್ನು ಲ್ಯಾನ್ಸ್ ನಾಯ್ಕ್ ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಅವರು ಉತ್ತರಾಖಂಡದ ಹಲ್ದ್ವಾನಿಯಲ್ಲಿನ ನಿವಾಸಿಯಾಗಿದ್ದರು. ಚಂದ್ರಶೇಖರ್‌ಗಾಗಿ ಅವರ ಪತ್ನಿ(65) ಹಾಗೂ ಇಬ್ಬರು ಹೆಣ್ಣುಮಕ್ಕಳು ಸುದೀರ್ಘ 38 ವರ್ಷಗಳಿಂದ ಕಾಯುತ್ತಿದ್ದರು. ಈ ಕಾಯುವಿಕೆ ಇದೀಗ ಅಂತ್ಯಗೊಂಡಿದ್ದು, ಕುಟುಂಬವು ಇಂದು ಚಂದ್ರಶೇಖರ್‌ಗೆ ವಿದಾಯವನ್ನು ಹೇಳುವ ಸಂದರ್ಭ ಎದುರಾಗಿದೆ.

    ಸಿಯಾಚಿನ್‍ನಲ್ಲಿ 1984ರ ಆಪರೇಷನ್ ಮೇಘದೂತ್‍ದಲ್ಲಿ ಲ್ಯಾನ್ಸ್ ನಾಯ್ಕ್ ಚಂದ್ರಶೇಖರ್ ಭಾಗಿಯಾಗಿದ್ದರು. ಪಾಕಿಸ್ತಾನ ಕಣ್ಣಿಟ್ಟಿದ್ದ ಪಾಯಿಂಟ್ 5,965 ವಶದಲ್ಲಿರಿಕೊಳ್ಳುವ ಕಾರ್ಯಾಚರಣೆಯಲ್ಲಿದ್ದ ತಂಡದಲ್ಲಿ ಚಂದ್ರಶೇಖರ್ ಇದ್ದರು. ಅವರಿದ್ದ 19 ಕುಮಾವೊನ್ ರೆಜಿಮೆಂಟ್ 1984 ಮೇ 29ರಂದು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ನಡೆದ ಆಪರೇಷನ್ ಮೇಘದೂತ್‍ನಲ್ಲಿ ಪಾಲ್ಗೊಂಡಿತ್ತು. ಆದರೆ ಅಂದು ನಡೆದ ಭೀಕರ ಹಿಮಪಾತದಲ್ಲಿ ಒಬ್ಬ ಅಧಿಕಾರಿ ಸೇರಿದಂತೆ 19 ಮಂದಿ ಯೋಧರು ಸಿಲುಕಿದ್ದರು. 14 ಯೋಧರು ಪತ್ತೆ ಆಗಿದ್ದರು. ಇನ್ನುಳಿದ 5 ಮಂದಿ ನಾಪತ್ತೆ ಆಗಿದ್ದರು. ನಾಪತ್ತೆ ಆದವರಲ್ಲಿ ಚಂದ್ರಶೇಖರ್ ಕೂಡ ಇದ್ದರು.

    ನಾಪತ್ತೆ ಆದವರನ್ನು ಎಷ್ಟೇ ಹುಡುಕಿದರೂ ಅವರು ಸಿಕ್ಕಿರಲಿಲ್ಲ. ಇದೀಗ ಆ. 13ರಂದು ಸೈನಿಕರಿಗೆ ಲ್ಯಾನ್ಸ್ ನಾಯ್ಕ್ ಚಂದ್ರಶೇಖರ್ ಅವರ ಅಸ್ಥಿಪಂಜರದ ಅವಶೇಷಗಳು ಹಳೆಯ ಬಂಕರ್‌ನಲ್ಲಿ ಪತ್ತೆ ಆಗಿದೆ. ಆ ಅಸ್ಥಿಪಂಜರದಲ್ಲಿ ಸೈನ್ಯದ ಸಂಖ್ಯೆಯೊಂದಿಗೆ ಡಿಸ್ಕ್ ಇರುವುದು ಕಂಡುಬಂದಿರುವುದರಿಂದ ಚಂದ್ರಶೇಖರ್ ಅವರೇ ಎನ್ನುವುದು ದೃಢವಾಗಿದೆ. ಇದನ್ನೂ ಓದಿ: ಕೊನೆ ಉಸಿರಿರೋವರೆಗೂ ಮಂಡ್ಯದ ಸೊಸೆಯಾಗಿರುವೆ: ಸುಮಲತಾ ಅಂಬರೀಶ್

    ಆಪರೇಷನ್ ಮೇಘದೂತ್‍ದಲ್ಲಿ ಘಟನೆ ನಡೆದಾಗ ಚಂದ್ರಶೇಖರ್‍ನ ಇಬ್ಬರು ಮಕ್ಕಳು ಚಿಕ್ಕವರಾಗಿದ್ದರು. ದುರಂತ ನಡೆದಾಗ ಕಿರಿಯ ಮಗಳಿಗೆ 4 ವರ್ಷ ಹಾಗೂ ಹಿರಿಯವಳಿಗೆ 8 ವರ್ಷ ವಯಸ್ಸಾಗಿತ್ತು. ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಶಿಂದೆ ಸಂಪುಟದಲ್ಲಿ ದೇವೇಂದ್ರ ಫಡ್ನವಿಸ್‌ಗೆ ಗೃಹ, ಹಣಕಾಸು ಖಾತೆ

    Live Tv
    [brid partner=56869869 player=32851 video=960834 autoplay=true]

  • ಊಟ ನೀಡೋ ವಿಚಾರಕ್ಕೆ ಜಗಳ – ಬಾಮೈದನಿಂದಲೇ ಯೋಧನ ಕೊಲೆ

    ಊಟ ನೀಡೋ ವಿಚಾರಕ್ಕೆ ಜಗಳ – ಬಾಮೈದನಿಂದಲೇ ಯೋಧನ ಕೊಲೆ

    ಬಾಗಲಕೋಟೆ: ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದ ಬಾವನನ್ನು ಬಾಮೈದನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.

    POLICE JEEP

    ಕರಿಸಿದ್ದಪ್ಪ ಕಳಸದ(25) ಮೃತ ಭಾರತೀಯ ಸೇನೆ ಯೋಧರಾಗಿದ್ದು, ಆರೋಪಿಯನ್ನು ಸಿದ್ದನಗೌಡ ದೂಳಪ್ಪ ಎಂದು ಗುರುತಿಸಲಾಗಿದೆ. ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕರಿಸಿದ್ದಪ್ಪ ಕಳಸದ ಅವರು ರಜೆ ಹಿನ್ನೆಲೆ ನಾಲ್ಕು ದಿನಗಳ ಹಿಂದೆಯಷ್ಟೇ ಮನೆಗೆ ಬಂದಿದ್ದರು. ಇದನ್ನೂ ಓದಿ: ಸಿಲಿಕಾನ್ ಸಿಟಿಗೆ ಮತ್ತಷ್ಟು ಎಲೆಕ್ಟ್ರಿಕ್ ಬಸ್‍ಗಳು – ಆಗಸ್ಟ್ 15ಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ

    ಎರಡು ವರ್ಷಗಳ ಹಿಂದೆ ಕರಿಸಿದ್ದಪ್ಪ ಕಳಸದ, ವಿದ್ಯಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ ಗುರುವಾರ ರಾತ್ರಿ ಊಟ ನೀಡುವ ವೇಳೆ ದಂಪತಿ ನಡುವೆ ಜಗಳವಾಗಿದೆ. ಇದರಿಂದಾಗಿ ವಿದ್ಯಾ ತಮ್ಮ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಸಿದ್ದನಗೌಡ ದೂಳಪ್ಪ ತನ್ನ ಸಹೋದರಿಗೆ ಕಿರುಕುಳ ಕೊಡುತ್ತಿಯಾ ಎಂದು ಚಾಕು ಇರಿದು ಕರಿಸಿದ್ದಪ್ಪ ಕಳಸದರನ್ನು ಕೊಲೆ ಮಾಡಿದ್ದಾನೆ. ಇದೀಗ ಸ್ಥಳಕ್ಕೆ ಕೆರೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗುಂಪು ಘರ್ಷಣೆಗೆ ಇಬ್ಬರು ಬಲಿ – ಕೊಪ್ಪಳದ ಹುಲಿಹೈದರ್ ಗ್ರಾಮದಲ್ಲಿ ನಿಷೇಧಾಜ್ಞೆ

    Live Tv
    [brid partner=56869869 player=32851 video=960834 autoplay=true]

  • ಸೇನಾ ಶಿಬಿರದೊಳಗೆ ನುಗ್ಗಲು ಯತ್ನಿಸಿದ್ದ ಇಬ್ಬರು ಉಗ್ರರ ಹತ್ಯೆ- ಮೂವರು ಯೋಧರು ಹುತಾತ್ಮ

    ಸೇನಾ ಶಿಬಿರದೊಳಗೆ ನುಗ್ಗಲು ಯತ್ನಿಸಿದ್ದ ಇಬ್ಬರು ಉಗ್ರರ ಹತ್ಯೆ- ಮೂವರು ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ದರ್ಹಾಲ್ ಪ್ರದೇಶದ ಪರ್ಗಲ್‍ನಲ್ಲಿ ಸೇನಾ ಶಿಬಿರಕ್ಕೆ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಈ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆ.

    ಇಂದು ಮುಂಜಾನೆ ರಾಜೌರಿಯ ದರ್ಹಾಲ್ ಪ್ರದೇಶದ ಪರ್ಗಲ್‍ನಲ್ಲಿರುವ ಸೇನಾ ಶಿಬಿರಕ್ಕೆ ನುಸುಳಲು ಯತ್ನಿಸಿದ್ದ ಇಬ್ಬರು ಉಗ್ರರು ದಾಳಿ ನಡೆಸಿದ್ದಾರೆ. ಘಟನೆ ಸಂಬಂಧಿಸಿ ಭದ್ರತಾ ಅಧಿಕಾರಿಗಳು ಪ್ರದೇಶಕ್ಕೆ ಹೆಚ್ಚಿನ ರಕ್ಷಣೆಯನ್ನು ನೀಡಿದ್ದಾರೆ.

    ಘಟನೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಹಾಗೂ ಐವರು ಯೋಧರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ರಾಜೌರಿಯ ದರ್ಹಾಲ್ ಪ್ರದೇಶದ ಪರ್ಗಲ್‍ನಲ್ಲಿರುವ ಸೇನಾ ಶಿಬಿರದ ಬೇಲಿಯನ್ನು ಅಕ್ರಮವವಾಗಿ ದಾಟಲು ಪ್ರಯತ್ನಿಸುತ್ತಿರುವಾಗ ಸೈನಿಕರು ತಡೆದಿದ್ದಾರೆ. ಈ ವೇಳೆ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಉಗ್ರರ ಹತ್ಯೆಯಾಗಿದ್ದು, ಮೂವರು ಸೇನಾ ಸಿಬ್ಬಂದಿಗಳು ಮಡಿದಿದ್ದಾರೆ ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯರಿಗೆ ಅಗ್ನಿವೀರ್‌ ನೇಮಕಾತಿ ಪ್ರಕ್ರಿಯೆ – ಅರ್ಹತೆ ಏನು? ಪರೀಕ್ಷೆ ಹೇಗಿರುತ್ತೆ?

    75ನೇ ಸ್ವಾತಂತ್ರ್ಯೋತ್ಸವಕ್ಕೆ ಇನ್ನೇನೂ ಕೆಲವು ದಿನಗಳು ಬಾಕಿಯಿದ್ದು ಈ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ ಬುದ್ಗಾಮ್‍ನಲ್ಲಿ ಮೂವರು ಲಷ್ಕರ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆಗೈದಿತ್ತು. ಇದಾದ ನಂತರ ಈ ದಾಳಿ ನಡೆದಿದೆ. ಹತ್ಯೆಯಾದ ಉಗ್ರರಲ್ಲಿ ಒಬ್ಬರು ರಾಹುಲ್ ಭಟ್ ಮತ್ತು ಅಮರೀನ್ ಭಟ್ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಕಾಶ್ಮೀರಿ ಪಂಡಿತ ರಾಹುಲ್ ಭಟ್‌ನನ್ನು ಕೊಂದಿದ್ದ ಭಯೋತ್ಪಾದಕನ ಎನ್‌ಕೌಂಟರ್

    Live Tv
    [brid partner=56869869 player=32851 video=960834 autoplay=true]

  • 21 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಬಂದ ಯೋಧನಿಗೆ ಅದ್ಧೂರಿ ಸ್ವಾಗತ

    21 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಬಂದ ಯೋಧನಿಗೆ ಅದ್ಧೂರಿ ಸ್ವಾಗತ

    ಹುಬ್ಬಳ್ಳಿ: ಸತತ 21 ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ಸೇನಾ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಯೋಧನನ್ನು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ದೇವನೂರು ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.

    ಗ್ರಾಮದ ಸುರೇಶ್ ಬಸಪ್ಪ ನೇಗಿನಾಳ ಅವರು ಸೇನಾ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದರು. ಇವರು ಬಿಎಸ್‍ಎಫ್ ಯೋಧರಾಗಿ ಪಶ್ಚಿಮ ಬಂಗಾಳ, ಪಂಜಾಬ್, ಜಮ್ಮು-ಕಾಶ್ಮೀರ ಸೇರಿದಂತೆ ವಿವಿಧೆಡೆ ಸೇವೆ ಸಲ್ಲಿಸಿ ವಯೋನಿವೃತ್ತಿ ಪಡೆದಿದ್ದಾರೆ. ಪ್ರಸ್ತುತ ಅವರು ಸ್ವಗ್ರಾಮಕ್ಕೆ ಮರಳಿದ್ದು, ಅವರ ಬರುವಿಕೆಯನ್ನು ಇಡೀ ಗ್ರಾಮದ ಜನರು ಹಬ್ಬದ ರೀತಿ ಮಾಡಿದ್ದಾರೆ. ಇದನ್ನೂ ಓದಿ: RX100 ಬೈಕಿನ ಹುಟ್ಟುಹಬ್ಬ – ಗೆಳೆಯರಿಗೆ ಬಿಂದಾಸ್ ಪಾರ್ಟಿ ಕೊಟ್ಟ 

    ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಮೆರವಣಿಗೆ ನಡೆಸಿ ಜಯಘೋಷ ಹಾಕಿ, ಆರತಿ ಬೆಳಗಿ, ಕೇಕ್ ಕಟ್ ಮಾಡಿ, ಪುಷ್ಪಾರ್ಚನೆ ಮಾಡಿ ಅದ್ಧೂರಿಯಾಗಿ ಸ್ವಾಗತಿಸಿದರು.

    ಯೋಧನನ್ನು ತೆರೆದ ವಾಹನದಲ್ಲಿ ದೇವನೂರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸುರೇಶ್ ಬಸಪ್ಪ ನೇಗಿನಾಳ ತಮ್ಮ ಸೇನಾ ದಿನಗಳ ನೆನಪು ಮಾಡಿಕೊಂಡರು. ಇದನ್ನೂ ಓದಿ:  ಮೂಢನಂಬಿಕೆಗೆ ಮಗಳು ಬಲಿ – ಹೊಡೆದು ಕೊಂದ ಪೋಷಕರು ಈಗ ಅಂದರ್‌ 

    Live Tv
    [brid partner=56869869 player=32851 video=960834 autoplay=true]

  • ಕನ್ವರ್‌ ಯಾತ್ರೆ ವೇಳೆ ಹಿಂದಿಕ್ಕಿದ್ದಕ್ಕೆ ಯೋಧನನ್ನು ಹೊಡೆದು ಕೊಂದ ಶಿವ ಭಕ್ತರ ಗುಂಪು!

    ಕನ್ವರ್‌ ಯಾತ್ರೆ ವೇಳೆ ಹಿಂದಿಕ್ಕಿದ್ದಕ್ಕೆ ಯೋಧನನ್ನು ಹೊಡೆದು ಕೊಂದ ಶಿವ ಭಕ್ತರ ಗುಂಪು!

    ಲಕ್ನೋ: ಕನ್ವರ್‌ ಯಾತ್ರೆ ಕೈಗೊಂಡಿದ್ದ ವೇಳೆ ಕನ್ವಾರಿಯಾಗಳ (ಶಿವ ಭಕ್ತರ) ಗುಂಪೊಂದನ್ನು ಹಿಂದಿಕ್ಕಿದ ಕಾರಣಕ್ಕೆ 25 ವರ್ಷ ವಯಸ್ಸಿನ ಯೋಧರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಹರಿದ್ವಾರದಲ್ಲಿ ನಡೆದಿದೆ.

    ಉತ್ತರ ಪ್ರದೇಶದಿಂದ ಕನ್ವಾರಿಯಾಗಳ ಗುಂಪಿನೊಂದಿಗೆ ಯೋಧ ಕಾರ್ತಿಕ್‌ ಅವರು ಕನ್ವರ್‌ ಯಾತ್ರೆ ಕೈಗೊಂಡಿದ್ದರು. ಹರಿಯಾಣದಿಂದ ಯಾತ್ರೆ ಕೈಗೊಂಡಿದ್ದ ಕನ್ವಾರಿಯಾಗಳ ಮತ್ತೊಂದು ಗುಂಪು ಯೋಧ ಕಾರ್ತಿಕ್‌ರನ್ನು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಪ್ರಕರಣ- NIA ತನಿಖೆಗೆ ವಹಿಸುವಂತೆ ಅಮಿತ್ ಶಾಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

    ಭಾರತೀಯ ಸೇನೆಯ ಜಾಟ್ ರೆಜಿಮೆಂಟ್‌ನ ಯೋಧ ಕಾರ್ತಿಕ್ ಹಲ್ಲೆಗೊಳಗಾದವರು. ಎರಡು ಗುಂಪುಗಳು ಮೋಟಾರ್‌ ಬೈಕ್‌ನಲ್ಲಿ ಚಲಾಯಿಸುತ್ತಿದ್ದ ವೇಳೆ ಪರಸ್ಪರ ರೇಸಿಂಗ್ ಮಾಡಿದ್ದಾರೆ. ಹರಿಯಾಣದಿಂದ ಬಂದ ಕನ್ವಾರಿಯಾಗಳು ಕಾರ್ತಿಕ್ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ.

    ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಯೋಧರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಹರಿದ್ವಾರ ಪೊಲೀಸ್ ಅಧೀಕ್ಷಕ (ಗ್ರಾಮೀಣ) ಪ್ರಮೇಂದ್ರ ದೋಭಾಲ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:  ಶೇ. 50ರಷ್ಟು ವಿಮಾನವಷ್ಟೇ ಕಾರ್ಯ ನಿರ್ವಹಿಸಲು ಸ್ಪೈಸ್‍ಜೆಟ್‍ಗೆ ಆದೇಶ

    ಕಾರ್ತಿಕ್ ಅವರು ಮುಜಾಫರ್‌ನಗರ ಜಿಲ್ಲೆಯ ಸಿಸೌಲಿ ಗ್ರಾಮದವರಾಗಿದ್ದು, ಮಂಗಳವಾರ ಈ ಘಟನೆ ಸಂಭವಿಸಿದೆ. ತನ್ನ ಗುಂಪಿನ ಇತರ ಸದಸ್ಯರೊಂದಿಗೆ ಗಂಗಾಜಲವನ್ನು ಸಂಗ್ರಹಿಸಿ ಹರಿದ್ವಾರದಿಂದ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ಎಸ್‌ಪಿ ದೋಭಾಲ್ ತಿಳಿಸಿದ್ದಾರೆ.

    ಬಂಧಿತರನ್ನು ಸುಂದರ್ (38), ರಾಹುಲ್ (20), ಸಚಿನ್ (25), ಆಕಾಶ್ (21), ಪಂಕಜ್ (22) ಮತ್ತು ರಿಂಕು (24) ಎಂದು ಪೊಲೀಸರು ಗುರುತಿಸಿದ್ದಾರೆ. ಇವರೆಲ್ಲರೂ ಹರಿಯಾಣದ ಪಾಣಿಪತ್ ಜಿಲ್ಲೆಯ ಚುಲ್ಕಾನಾ ಗ್ರಾಮದವರು ಎಂದು ಎಸ್ಪಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಕಲ ಸರ್ಕಾರಿ ಗೌರವದೊಂದಿಗೆ ರಸ್ತೆ ಅಪಘಾತಲ್ಲಿ ಮೃತಪಟ್ಟ ಯೋಧನ ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವದೊಂದಿಗೆ ರಸ್ತೆ ಅಪಘಾತಲ್ಲಿ ಮೃತಪಟ್ಟ ಯೋಧನ ಅಂತ್ಯಕ್ರಿಯೆ

    ಚಿಕ್ಕೋಡಿ: ರಸ್ತೆ ಅಪಘಾತಲ್ಲಿ ಮೃತಪಟ್ಟ ಬಿಎಸ್‍ಎಫ್ ಯೋಧ ಸೂರಜ್ ಸುತಾರ್ ಅಂತ್ಯಕ್ರಿಯೆ ಇಂದು ಅವರ ಸ್ವಗ್ರಾಮದಲ್ಲಿ ನಡೆಯಿತು.

    ಪಶ್ಚಿಮಬಂಗಾಳದ ಪಂಜಿಪರಾದ ದಿನಾಜ್‌ಪುರ್‌ನ 152ನೇ ಬಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದ ಸೂರಜ್ ಸುತಾರ್ ನಿನ್ನೆ ಪಶ್ಚಿಮಬಂಗಾಳದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತರಾಗಿದ್ದರು. ಇಂದು ಅವರ ಸ್ವಗ್ರಾಮ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರುವಾಡಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿತು. ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಹೋಟೆಲ್‍ನಲ್ಲಿ ಮತ್ತೆ ಪೂಜೆ

    ಕಳೆದ 10 ವರ್ಷಗಳಿಂದ ಸೂರಜ್ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ತಮ್ಮ ಕುಟುಂಬವನ್ನು ಕರೆತರಲು ರೈಲ್ವೇ ನಿಲ್ದಾಣಕ್ಕೆ ತೆರಲಿ ರಸ್ತೆ ಕ್ರಾಸ್ ಮಾಡುವ ಸಂದರ್ಭ ಲಾರಿ ಡಿಕ್ಕಿಯಾಗಿ ಸೂರಜ್ ಪಶ್ಚಿಮಬಂಗಾಳದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಈ ಸುದ್ದಿ ತಿಳಿಯುತ್ತಿದ್ದಂತೆ ಯೋಧನ ಸ್ವಗ್ರಾಮ ಯಡೂರುವಾಡಿಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ಇಂದು ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದನ್ನೂ ಓದಿ: ನಮ್ಮ ಪ್ರಧಾನಿ ತಾಯಿ ಹೃದಯದವರು: ಶೋಭಾ ಕರಂದ್ಲಾಜೆ

    ಯೋಧನ ಪಾರ್ಥಿವ ಶರೀರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಸಚಿವೆ ಶಶಿಕಲಾ ಜೊಲ್ಲೆ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ, ಚಿಕ್ಕೋಡಿ ಶಾಸಕ ಗಣೇಶ್‌ ಹುಕ್ಕೇರಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ್ ಮೃತ ಯೋಧನ ಪಾರ್ಥಿವ ಶರೀರದ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗ್ರಾಮದ ಸ್ಮಶಾನ ಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧ ಸೂರಜ್ ಸುತಾರ್‌  ಅಂತ್ಯಸಂಸ್ಕಾರ ನೆರವೇರಿತು.

    Live Tv
    [brid partner=56869869 player=32851 video=960834 autoplay=true]

  • ರಸ್ತೆ ಅಪಘಾತದಲ್ಲಿ ಬೆಳಗಾವಿಯ ಬಿಎಸ್‍ಎಫ್ ಯೋಧ ದುರ್ಮರಣ

    ರಸ್ತೆ ಅಪಘಾತದಲ್ಲಿ ಬೆಳಗಾವಿಯ ಬಿಎಸ್‍ಎಫ್ ಯೋಧ ದುರ್ಮರಣ

    ಚಿಕ್ಕೋಡಿ(ಬೆಳಗಾವಿ): ರಸ್ತೆ ಅಪಘಾತದಲ್ಲಿ ಬೆಳಗಾವಿ ಮೂಲದ ಬಿಎಸ್‍ಎಫ್ ಯೋಧರೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.

    ಸೂರಜ್ ಸುತಾರ್(32) ಅಪಘಾತದಲ್ಲಿ ಮೃತಪಟ್ಟ ಯೋಧರಗಿದ್ದಾರೆ. ಇವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರುವಾಡಿ ಗ್ರಾಮದ ನಿವಾಸಿ. ಸೂರಜ್ ಅವರು ಕಳೆದ 10 ವರ್ಷದಿಂದ ಬಿಎಸ್‍ಎಫ್ ನಲ್ಲಿ ಸೇವೆ ಮಾಡುತ್ತಿದ್ದಾರೆ. ಸದ್ಯ ಪಶ್ಚಿಮ ಬಂಗಾಳದಲ್ಲಿ ಬಿಎಸ್‍ಎಫ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

    car

    ಕಳೆದ ಎರಡು ವರ್ಷಗಳ ಹಿಂದೆಯಷ್ಟೆ ಸೂರಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸೋಮವಾರ ಆಟೋದಿಂದ ಇಳಿದು ರಸ್ತೆ ದಾಟುವಾಗ ಲಾರಿ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮಲೆ ಮಾದಪ್ಪನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸ್ತಿದ್ದ ಅರ್ಚಕ ಸಾವು

    ಯೋಧ ಸೂರಜ್ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ನಾಳೆ ಪಶ್ಚಿಮ ಬಂಗಾಳದಿಂದ ಸ್ವಗ್ರಾಮ ಯಡೂರುವಾಡಿಗೆ ಪಾರ್ಥಿವ ಶರೀರ ಬರಲಿದ್ದು, ಅಂತ್ಯಸಂಸ್ಕಾರ ನೆರವೇರಲಿದೆ.

    Live Tv
    [brid partner=56869869 player=32851 video=960834 autoplay=true]

  • 7,500 ಭಾರತೀಯ ಸೈನಿಕರಿಗೆ ಆಭರಣ ಸಂಸ್ಥೆಯಿಂದ ಉಂಗುರ ಗಿಫ್ಟ್

    7,500 ಭಾರತೀಯ ಸೈನಿಕರಿಗೆ ಆಭರಣ ಸಂಸ್ಥೆಯಿಂದ ಉಂಗುರ ಗಿಫ್ಟ್

    ಮುಂಬೈ: ಪುಣಾ ಮೂಲದ ಆಭರಣ ಸಂಸ್ಥೆಯೊಂದು 75 ವರ್ಷದ ಸ್ವಾತಂತ್ರ್ಯದ ನೆನಪಿಗಾಗಿ ವಿವಿಧ ರಾಜ್ಯಗಳ 7,500 ಸೈನಿಕರಿಗೆ ಉಂಗುರವನ್ನು ಉಡುಗೊರೆಯಾಗಿ ನೀಡಲು ಎಕಿ ಇಂಡಿಯಾ ಮಿಷನ್‍ನ್ನು ಪ್ರಾರಂಭಿಸಿದೆ.

    ಸೈನಿಕರಿಗೆ ಕೊಡುವ ಈ ಉಂಗುರವನ್ನು ಬೆಳ್ಳಿ, ಬಂಗಾರ, ವಜ್ರ ಹಾಗೂ ಮಣ್ಣುಗಳನ್ನು ಮಿಶ್ರಣ ಮಾಡಿ ಮಾಡಲಾಗಿದೆ. ಭಾರತದ 75ನೇ ಸ್ವಾತಂತ್ರ್ಯದ ಭಾರತ್ ಕಾ ಅಮೃತ್ ಮಹೋತ್ಸವವನ್ನು ಗುರುತಿಸಲು ಈ ವರ್ಷ 7,500 ಸೈನಿಕರಿಗೆ ಕಮಿಟ್‍ಮೆಂಟ್ ರಿಂಗ್ಸ್ ಎಂಬ ಹೆಸರಿನಲ್ಲಿ ಉಂಗುರವನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

    ಇದರ ಭಾಗವಾಗಿ, ಖಾಡ್ಕಿಯ ಪಾಶ್ರ್ವವಾಯು ಪುನರ್ವಸತಿ ಕೇಂದ್ರ (ಪಿಆರ್‌ಸಿ)ದಲ್ಲಿರುವ 88 ನಿವೃತ್ತ ಸೈನಿಕರಿಗೆ ಕಮಿಟ್‍ಮೆಂಟ್ ಉಂಗುರವನ್ನು ನೀಡಲಾಗಿದೆ. ಈ ಕುರಿತು ಬೋನಿಸಾ ಪಾಲುದಾರ ಸಂಕೇತ್ ಬಿಯಾನಿ ಮಾತನಾಡಿ, ಈ ವರ್ಷ 7,500ಕ್ಕೂ ಹೆಚ್ಚು ಸೈನಿಕರಿಗೆ ಉಂಗುರವನ್ನು ನೀಡುವ ಗುರಿಯನ್ನು ತಮ್ಮ ಕಂಪನಿ ಹೊಂದಿದೆ ಎಂದರು. ಇದನ್ನೂ ಓದಿ: ಉಕ್ಕಿ ಹರಿಯುವ ತುಂಗಭದ್ರಾ ನದಿಯಲ್ಲಿ ಪ್ರವಾಸಿಗರ ಮೋಜುಮಸ್ತಿ – ಮಿತಿಮೀರಿದ ಹುಚ್ಚಾಟ

    ಉಂಗುರದ ವಿಶೇಷತೆ: ಈ ಉಂಗುರದಲ್ಲಿ ಮಿಶ್ರಣ ಮಾಡಿರುವ ಚಿನ್ನ, ಬೆಳ್ಳಿ, ವಜ್ರ ಹಾಗೂ ಮಣ್ಣು ದೇಶದ ಏಕತೆಯನ್ನು ಸೂಚಿಸುತ್ತದೆ. ಏಕ್ ಇಂಡಿಯಾ ರಿಂಗ್‍ನ ಬೆಳ್ಳಿ ನಮ್ಮನ್ನು ಶಾಂತವಾಗಿಡುತ್ತದೆ. ಬಂಗಾರವು ಇದು ಭಾರತವನ್ನು ಸಂಕೇತಿಸುತ್ತದೆ. ನಾವೆಲ್ಲರೂ ದೇಶದಲ್ಲಿ ವಜ್ರದಂತೆ ಇರಲು ವಜ್ರವನ್ನು ಸಹ ಉಂಗುರಕ್ಕೆ ಹಾಕಲಾಗಿದೆ. ಉಂಗುರವನ್ನು ಬೆಳ್ಳಿಯಿಂದ ಮಾಡಲಾಗಿದ್ದು, ಅದರ ಮೇಲೆ ಭಾರತ್ ಎಂದು ಬರೆಯಲಾಗಿದೆ. ಇದಕ್ಕೆ ಚಿನ್ನವನ್ನು ಲೇಪಿತಸಲಾಗಿದೆ. ಈ ಉಂಗುರವು ದೇಶದ ಏಕತೆಯ ಸಂಕೇತವಾಗಿದೆ. ಇದನ್ನೂ ಓದಿ: ಎಸಿಬಿ ವಿರುದ್ಧ ನ್ಯಾ. ಸಂದೇಶ್ ಮಾಡಿದ್ದ ಆರೋಪಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್

    Live Tv
    [brid partner=56869869 player=32851 video=960834 autoplay=true]

  • ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್‌ ಸ್ಫೋಟ- ಇಬ್ಬರು ಯೋಧರು ಹುತಾತ್ಮ

    ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್‌ ಸ್ಫೋಟ- ಇಬ್ಬರು ಯೋಧರು ಹುತಾತ್ಮ

    ಶ್ರೀನಗರ: ಆಕಸ್ಮಿಕವಾಗಿ ನಡೆದ ಗ್ರೆನೇಡ್‌  ಸ್ಫೋಟದಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಯೋಧರು ಹುತಾತ್ಮರಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್‍ನ ಎಲ್‍ಒಸಿ ಬಳಿ ನಡೆದಿದೆ.

    ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಸೈನಿಕರು ಎಲ್‍ಒಸಿ ಗಡಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಕಸ್ಮಿಕವಾಗಿ ಗ್ರೆನೇಡ್‌ ಸ್ಫೋಟ ಸಂಭವಿಸಿದೆ.

    ಗಾಯಗೊಂಡ ಸೈನಿಕರನ್ನು ತಕ್ಷಣವೇ ಹೆಲಿಕಾಪ್ಟರ್ ಮೂಲಕ ಉಧಂಪುರ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಸಂದರ್ಭದಲ್ಲಿ ಸೇನಾ ಕ್ಯಾಪ್ಟನ್ ಮತ್ತು ನೈಬ್ ಸುಬೇದಾರ್(ಜೆಸಿಒ) ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕರ ಗುಂಡಿಗೆ CRPF ಯೋಧ ಹುತಾತ್ಮ

    ಭಾನುವಾರ ನಡೆದ ಭಯೋತ್ಪಾದಕರ ಗುಂಡಿನ ದಾಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗೊಂಗೂ ಕ್ರಾಸಿಂಗ್ ಬಳಿ ನಡೆದಿತ್ತು. ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಸಿಆರ್‌ಪಿಎಫ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಡಿಕೆಶಿ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ

    Live Tv
    [brid partner=56869869 player=32851 video=960834 autoplay=true]

  • ಭಯೋತ್ಪಾದಕರ ಗುಂಡಿಗೆ CRPF ಯೋಧ ಹುತಾತ್ಮ

    ಭಯೋತ್ಪಾದಕರ ಗುಂಡಿಗೆ CRPF ಯೋಧ ಹುತಾತ್ಮ

    ಶ್ರೀನಗರ: ಭಾನುವಾರ ಭಯೋತ್ಪಾದಕರ ಗುಂಡಿನ ದಾಳಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಗೊಂಗೂ ಕ್ರಾಸಿಂಗ್ ಬಳಿ ನಡೆದಿದೆ.

    ಪುಲ್ವಾಮಾ ಜಿಲ್ಲೆಯ ಪೊಲೀಸ್ ಹಾಗೂ ಸಿಆರ್‌ಪಿಎಫ್ ಜಂಟಿ ನಾಕಾ ಪಾರ್ಟಿ(ಚೆಕ್ ಫೋಸ್ಟ್) ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಸಿಆರ್‌ಪಿಎಫ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಲಂಕಾ ಆರ್ಥಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ಜು.19 ರಂದು ಸರ್ವಪಕ್ಷಗಳ ಸಭೆ – ಪ್ರಹ್ಲಾದ್ ಜೋಶಿ

    ಚೆಕ್‌ಪೋಸ್ಟ್ ಮೇಲೆ ಸಮೀಪದ ಸೇಬಿನ ತೋಟದಿಂದ ಗುಂಡಿನ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ಏಕ್ಸ್‌ಪ್ರೆಸ್‍ನಲ್ಲಿ ಸುಟ್ಟ ವಾಸನೆ- ಮಸ್ಕತ್‍ಗೆ ಹೋದ ವಿಮಾನ

    ಘಟನಾ ಪ್ರದೇಶದಲ್ಲಿ ಭದ್ರತಾ ಪಡೆ ಸುತ್ತುವರಿದಿದ್ದು, ಉಗ್ರರನ್ನು ಪತ್ತೆ ಹಚ್ಚಲು ಹಾಗೂ ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]