ಚಿಕ್ಕೋಡಿ: ರಜೆ ಸಿಕ್ಕಿತು ಎಂದು ಖುಷಿಯಿಂದ ಹೊರಟಿದ್ದ ಬೆಳಗಾವಿ (Belagavi) ಜಿಲ್ಲೆಯ ನಿಪ್ಪಾಣಿಯ ಯೋಧ (Soldier) ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ತುಂಡ್ಲಾ ರೈಲು ನಿಲ್ದಾಣದಲ್ಲಿ ನಡೆದಿದೆ.
ರಾಜೇಂದ್ರ ಪಾಂಡುರಂಗ ಕುಂಬಾರ (45) ಮೃತ ಯೋಧ. ನಿಪ್ಪಾಣಿಯ ಭಾರತೀಯ ಸೇನೆಯ ಯೋಧ ರಾಜೇಂದ್ರ ಪಾಂಡುರಂಗ ಅಪಘಾತದಲ್ಲಿ ಉತ್ತರ ಪ್ರದೇಶದಲ್ಲಿ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾನೆ. ಕಳೆದ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಯೋಧನಾಗಿ ರಾಜೇಂದ್ರ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳಷ್ಟೆ ದೆಹಲಿಯಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ವರ್ಗವಾಗಿದ್ದ ಯೋಧ ಮನೆಗೆ ಬರಲು 15 ದಿನ ರಜೆ ಪಡೆದು ಊರಿಗೆ ಹೊರಟಿದ್ದ. ಇದನ್ನೂ ಓದಿ: ಶಾಸಕಾಂಗ ಪಕ್ಷದ ನಾಯಕನಾಗಿ ಭೂಪೇಂದ್ರ ಪಟೇಲ್ ಆಯ್ಕೆ- ಸೋಮವಾರ ಪ್ರಮಾಣವಚನ
ತುಂಡ್ಲಾ ರೈಲು ನಿಲ್ದಾಣದಲ್ಲಿ ಒಂದು ರೈಲು ಇಳಿದು ಮತ್ತೊಂದು ರೈಲು ಹತ್ತುವಾಗ ಅಪಘಾತ ಸಂಭವಿಸಿ ಯೋಧ ಸಾವನ್ನಪ್ಪಿದ್ದಾನೆ. ತುಂಡ್ಲಾದಿಂದ ದೆಹಲಿಗೆ ಬಂದಿರುವ ರಾಜೇಂದ್ರ ಕುಂಬಾರ ಅವರ ಪಾರ್ಥಿವ ಶರೀರ ತರಲಾಗಿದ್ದು, ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ದೆಹಲಿಯಿಂದ ಬೆಳಗಾವಿಗೆ ತರುವ ಸಾಧ್ಯತೆಯಿದೆ. ಯೋಧನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಿಪ್ಪಾಣಿಯಲ್ಲಿ ಶೋಕ ಮಡಿಗಟ್ಟಿದೆ. ಇದನ್ನೂ ಓದಿ: ಪುಟ್ಟರಾಜು ಎಚ್ಚರಿಕೆಯ ಬೆನ್ನಲ್ಲೇ ಪ್ರತಾಪ್ ಸಿಂಹ ರಸ್ತೆ ವೀಕ್ಷಣೆ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸಶಸ್ತ್ರ ಪಡೆಗಳ ಸಿಬ್ಬಂದಿ ಅನೇಕ ಕ್ಷೇತ್ರಗಳಲ್ಲಿ ನುರಿತ ಮತ್ತು ಅನುಭವಿಯಾಗಿದ್ದಾರೆ, ನಿವೃತ್ತಿಯ ನಂತರ ಅವರ ಅನುಭವಗಳ ಬಳಕೆಯು ಸ್ವಾವಲಂಬಿ ಭಾರತವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅಭಿಪ್ರಾಯಪಟ್ಟರು.
ರಾಜಭವನದ ಗಾಜಿನಮನೆಯಲ್ಲಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯನ್ನು ಕಾಪಾಡಲು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ವೀರ ಯೋಧರಿಗೆ ಗೌರವಪೂರ್ವಕವಾಗಿ ನಮಿಸುತ್ತೇನೆ ಎಂದ ಅವರು, ದೇಶದ ಸ್ವಯಂಸೇವಾ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳು ಮಾಜಿ ಸೈನಿಕರನ್ನು (Soldier) ಅರ್ಹ ಕೆಲಸಗಳಿಗೆ ನಿಯುಕ್ತಿಗೊಳಿಸಿಕೊಳ್ಳಬೇಕು ಎಂದರು.
ಸಶಸ್ತ್ರ ಪಡೆಗಳ ಧ್ವಜ ದಿನವು ನಮ್ಮ ರಕ್ಷಣೆ ಮತ್ತು ಭದ್ರತೆಗಾಗಿ ಯಾವಾಗಲೂ ಸಿದ್ಧವಾಗಿರುವ ಅದಮ್ಯ, ಧೈರ್ಯಶಾಲಿ, ಪರಾಕ್ರಮಿ, ಕೆಚ್ಚೆದೆಯ ಸೈನಿಕರಿಗೆ ಗೌರವವನ್ನು ಸಲ್ಲಿಸುವ ದಿನವಾಗಿದೆ. ಭಾರತೀಯ ಸೇನೆಯು ಭವ್ಯ ಇತಿಹಾಸವನ್ನು ಹೊಂದಿದೆ ಮತ್ತು ನಮ್ಮ ಸೈನ್ಯವು ವಿಶ್ವದ ಅತ್ಯುತ್ತಮ ಸೈನ್ಯವೆಂದು ಎಲ್ಲರಿಗೂ ತಿಳಿದಿದೆ. ನಮ್ಮ ಸೈನಿಕರು ಪ್ರತಿಯೊಂದು ಕ್ಷೇತ್ರದಲ್ಲೂ ವಿಶೇಷವಾದ ಗುರುತನ್ನು ಮೂಡಿಸಿದ್ದಾರೆ ಎಂದು ಹೇಳಿದರು.
ನಮ್ಮ ಸಶಸ್ತ್ರ ಪಡೆಗಳು ಯುದ್ಧಗಳ ಸಮಯದಲ್ಲಿ ದೇಶದ ಗಡಿಗಳನ್ನು ರಕ್ಷಿಸಿದ್ದರೆ, ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಅವರು ದೇಶವಾಸಿಗಳಿಗೆ ಸಹಾಯ ಮತ್ತು ಪರಿಹಾರವನ್ನು ಒದಗಿಸಿದ್ದಾರೆ. ದೇಶದ ಹೆಮ್ಮೆ, ಏಕತೆ-ಸಮಗ್ರತೆ, ಸಾರ್ವಭೌಮತ್ವ ಕಾಪಾಡುವ ಭರದಲ್ಲಿ ಅದೆಷ್ಟೋ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಅನೇಕ ಸೈನಿಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ದೈಹಿಕವಾಗಿ ಅಂಗವಿಕಲರಾಗಿದ್ದಾರೆ. ಅವರ ಕುಟುಂಬಗಳ ಕಲ್ಯಾಣ ಮತ್ತು ಪುನರ್ವಸತಿ ಕಲ್ಪಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಯುದ್ಧದಲ್ಲಿ ಬಲಿಯಾದವರ ಮತ್ತು ಸರ್ವೋಚ್ಛ ತ್ಯಾಗ ಮಾಡಿದ ಸೈನಿಕರ ಮುಂದಿನ ಬಂಧುಗಳ ಕಲ್ಯಾಣ ಮತ್ತು ಪುನರ್ವಸತಿಗೆ ವಿಶೇಷ ಗಮನ ನೀಡಿವೆ. ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿಗಾಗಿ ವಿವಿಧ ಯೋಜನೆಗಳನ್ನು ಮಾಜಿ ಸೈನಿಕರ ಕಲ್ಯಾಣ ಇಲಾಖೆ, ರಕ್ಷಣಾ ಸಚಿವಾಲಯ, ಭಾರತ ಸರ್ಕಾರ ಮತ್ತು ರಾಜ್ಯ ಸೈನಿಕ ಮಂಡಳಿ ಮತ್ತು ಜಿಲ್ಲಾ ಸೈನಿಕ ಮಂಡಳಿಯಿಂದ ಜಾರಿಗೊಳಿಸಲಾಗುತ್ತಿದೆ ಎಂದರು.
ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಜೀವನ ಬೆಂಬಲ ಸಾಧನಗಳನ್ನು ಒದಗಿಸಲು ಭಾರತ ಸರ್ಕಾರದಿಂದ ರಾಷ್ಟ್ರೀಯ ವಯೋಶ್ರೀ ಯೋಜನೆ ಮತ್ತು ಎಡಿಐಪಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ದೈಹಿಕವಾಗಿ ಅಂಗವಿಕಲರಾದ ವೀರ ಸೈನಿಕರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಕೇವಲ ಸರ್ಕಾರದ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು. ಇದಕ್ಕೆ ಎಲ್ಲರ ಸಹಭಾಗಿತ್ವದ ಅಗತ್ಯವಿದೆ. ಪ್ರತಿಯೊಬ್ಬರೂ ಅವರ ಕಲ್ಯಾಣ ಯೋಜನೆಯನ್ನು ಅರ್ಥಮಾಡಿಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಹಾಗೂ ಸೇನೆಯ ಸಬಲೀಕರಣ ಮತ್ತು ಆಧುನೀಕರಣಕ್ಕೆ ಬದ್ಧವಾಗಿದೆ. ಇಂದು ಸೇನೆಯು ಆಧುನಿಕ ತಂತ್ರಜ್ಞಾನ, ಆಧುನಿಕ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಅಷ್ಟೇ ಅಲ್ಲದೇ ಪ್ರಧಾನ ಮಂತ್ರಿಗಳು ಸೇನೆಯ ವೀರ ಸೈನಿಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಹಬ್ಬದ ಸಮಯದಲ್ಲಿ ಎಲ್ಲರೂ ಕುಟುಂಬ ಸಮೇತ ತಮ್ಮ ಮನೆಗಳಲ್ಲಿ ಆಚರಿಸುತ್ತಾರೆ. ಆದರೆ ಸೇನೆಯ ಧೀರರು ಈ ಸಮಯದಲ್ಲೂ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರ ಮನೋಸ್ಥೈರ್ಯ ಮತ್ತು ಉತ್ಸಾಹವನ್ನು ಹೆಚ್ಚಿಸಲು ನಮ್ಮ ಪ್ರಧಾನಿಗಳು ಪ್ರತಿವರ್ಷ ಸೈನಿಕರ ನಡುವೆ ಹೋಗಿ ಅವರೊಂದಿಗೆ ದೀಪಾವಳಿ ಆಚರಿಸುತ್ತಾರೆ ಎಂದು ಹೇಳಿದರು. ಇದನ್ನೂ ಓದಿ:‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಖುಷಿ ಪಡುವೆ: ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಈ ವರ್ಷದ ಧ್ವಜ ದಿನಾಚರಣೆಯ ಧ್ವಜಗಳನ್ನು ಬಿಡುಗಡೆಗೊಳಿಸಿದರು. ನಂತರ ಧ್ವಜ ನಿಧಿ ಸಂಗ್ರಹಿಸಿದ ವಿವಿಧ ಜಿಲ್ಲೆ ಮತ್ತು ಸಂಸ್ಥೆಗಳಿಗೆ ಪೋತ್ಸಾಹ ಪಾರಿತೋಷಕವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಮೇಜರ್ ಜನರಲ್ ಪಾಲ್ ದೀಪಕ್ ನಾಯ್ಡು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿವೃತ್ತ ನಿರ್ದೇಶಕರಾದ ಬ್ರಿಗೇಡಿಯರ್ ಎಂ.ಬಿ. ಶಶಿಧರ್ ಇತರರಿದ್ದರು. ಇದನ್ನೂ ಓದಿ:ಕಾಫಿನಾಡಲ್ಲಿ ಮನೆ-ಮನೆಗೆ ತೆರಳಿ ಸಿ.ಟಿ.ರವಿ ಭಿಕ್ಷಾಟನೆ
Live Tv
[brid partner=56869869 player=32851 video=960834 autoplay=true]
ಹಾಸನ: ನಾಯಿಮರಿಗೆ ನೀರು ಕುಡಿಸಲು ಹೋದ ಸಂದರ್ಭದಲ್ಲಿ ರಸ್ತೆ ಅಪಘಾತವಾಗಿ ಅಸುನಿಗಿದ್ದ ಯೋಧನ (Soldier) ಅಂತ್ಯಕ್ರಿಯೆ ಹಾಸನದ (Hassan) ಆಲೂರು ತಾಲೂಕಿನ ಪಾಳ್ಯ ಹೋಬಳಿಯ ಚಿಕ್ಕಕಣಗಾಲು-ಹೊಸಳ್ಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು.
ರಸ್ತೆ ಅಪಘಾತದಲ್ಲಿ ಚನ್ನಬಸಪ್ಪ ಮೃತಪಟ್ಟಿದ್ದ ಯೋಧ. ಚನ್ನಬಸಪ್ಪ 1986ರಲ್ಲಿ ಭಾರತೀಯ ಸೇನೆಗೆ ಸೇರಿ ಭೂಸೇನೆ, ವಾಯುಸೇನೆ, ಜಲಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನ.19ರಂದು ಬೆಂಗಳೂರಿನ (Bengaluru) ವಿಮಾನ ನಿಲ್ದಾಣಕ್ಕೆ ಹೋಗುವ ಹೈವೇ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ನಾಯಿ ಮರಿಗೆ ಬಾಟಲಿಯಲ್ಲಿ ನೀರು ಕುಡಿಸುವ ವೇಳೆ ಇದನ್ನು ಕಂಡು ವ್ಯಕ್ತಿಯೊಬ್ಬರು ಕಾರನ್ನು ನಿಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಮತ್ತೊಂದು ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಮುಂದೆ ಇದ್ದ ಕಾರು ಚನ್ನಬಸಪ್ಪ ಅವರ ಮೇಲೆ ಹರಿದಿದೆ. ಇದರಿಂದಾಗಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಇಂದು ಬೆಳಗ್ಗೆ ಸಂರಕ್ಷಣಾ ಸೇನೆ, ಹಾಗೂ ಪೊಲೀಸ್ ಸೇನೆ, ನೇತೃತ್ವದಲ್ಲಿ ಮೃತದೇಹವನ್ನು ಮೆರವಣಿಗೆಯಲ್ಲಿ ತಂದು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ಗೌರವ ನಮನ ಸಲ್ಲಿಸಿ, ತ್ರಿವರ್ಣ ಧ್ವಜದೊಂದಿಗೆ ಘೋಷಣೆಗಳನ್ನು ಕೂಗುತ್ತಾ ಸರ್ಕಾರಿ ಅಂತ್ಯಸಂಸ್ಕಾರ ನಡೆಸಲಾಯಿತು. ವೀರ ಯೋಧನ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತ್ತು. ಇದನ್ನೂ ಓದಿ: 15 ರೂ. ಹಣ ಪಾವತಿಸಲು ಹೋಗಿ 7 ಲಕ್ಷ ಹಣ ಕಳೆದುಕೊಂಡ
ಅಂತ್ಯಸಂಸ್ಕಾರದ ವೇಳೆ ಹಾಸನದ ಎನ್.ಸಿ.ಸಿ. ಸೇವಾದಳದ ಸುಭೆದಾರ್ ಮಹಮ್ಮದ್ ಅಜೀಮ್ ಮತ್ತು ತಂಡ ಹಾಗೂ ಬೆಂಗಳೂರಿನ ಇಂಡಿಯನ್ ಆರ್ಮಿ ತಂಡದಲ್ಲಿ ಜೊತೆಯಾಗಿ ಸೇವೆ ಸಲ್ಲಿಸಿದ ಸಿಪಾಯಿಗಳಾದ ಶ್ರೀ ಶೈಲಾಭಟ್ ಕುರ್ಕಿ, ಸಂದೀಪ್ ಪಾಟೀಲ್, ಪೊಲೀಸರು ಸೇರಿದಂತೆ ತಹಶೀಲ್ದಾರ್ ಹಾಗೂ ರಾಜಕೀಯ ಮುಖಂಡರು ಮತ್ತು ಅಪಾರ ಜನಸ್ತೋಮ ನೆರೆದಿತ್ತು. ಇದನ್ನೂ ಓದಿ: ನವೆಂಬರ್‌ನಲ್ಲಿ 1.45 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?
Live Tv
[brid partner=56869869 player=32851 video=960834 autoplay=true]
ಹಾಸನ: ರಸ್ತೆ ಅಪಘಾತದಲ್ಲಿ (Road Accident) ಗಂಭೀರವಾಗಿ ಗಾಯಗೊಂಡಿದ್ದ ಹಾಸನ (Hassan) ಜಿಲ್ಲೆಯ ಯೋಧ (Soldier) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೆಚ್.ಬಿ ಚನ್ನಬಸಪ್ಪ (54) ಮೃತ ಯೋಧ.
ಚನ್ನಬಸಪ್ಪ ಹಾಸನ ಜಿಲ್ಲೆ, ಆಲೂರು ತಾಲೂಕಿನ ಚಿಕ್ಕಕಣಗಾಲು-ಹೊಸಳ್ಳಿ ಗ್ರಾಮದವರು. ನವೆಂಬರ್ 19 ರಂದು ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಬೆಂಗಳೂರಿನ ಹುಣಸಮಾರನಹಳ್ಳಿಯಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚನ್ನಬಸಪ್ಪ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:ಗುಜರಾತ್‍ನಲ್ಲಿ ಇಂದು ಮೊದಲ ಹಂತದ ಮತದಾನ – ತವರು ರಾಜ್ಯದಲ್ಲಿ ಮೋದಿ, ಶಾ ಜೋಡಿಗೆ ಅಗ್ನಿ ಪರೀಕ್ಷೆ
1968 ರಲ್ಲಿ ಭಾರತೀಯ ಸೇನೆಗೆ ಸೇರಿದ್ದ ಚನ್ನಬಸಪ್ಪ ಭಾರತೀಯ ಸೇನೆ, ಭೂಸೇನೆ, ವಾಯುಸೇನೆ, ಜಲಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇತ್ತೀಚೆಗೆ ಚನ್ನಬಸಪ್ಪ ಬೆಂಗಳೂರಿನ ಯಲಹಂಕದಲ್ಲಿರುವ ಏರ್‌ಫೋರ್ಸ್ನಲ್ಲಿ ಡಿಎಸ್‌ಸಿ ಯೂನಿಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ತಮ್ಮ ಹುಟ್ಟೂರಿನಲ್ಲಿ ಮೃತ ಯೋಧನ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್ ಸೇವನೆ ಆರೋಪ – NCB ಅಧಿಕಾರಿಗಳಿಂದ 3 ಯುವತಿಯರು ವಶಕ್ಕೆ
Live Tv
[brid partner=56869869 player=32851 video=960834 autoplay=true]
ಕೋಲಾರ: ಬಿಎಂಟಿಸಿ (BMTC) ಬಸ್ (Bus) ಗುದ್ದಿ ಗಾಯಗೊಂಡಿದ್ದ ಯೋಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬೆಂಗಳೂರಿನ (Bengaluru) ಯಲಹಂಕ ಕಮಾಂಡೋ ಆಸ್ಪತ್ರೆಯಲ್ಲಿ ನಡೆದಿದೆ.
ಚೇತನ್ (22) ಮೃತ ಯೋಧರಾಗಿದ್ದು, ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಬಳಿ ನವೆಂಬರ್ 7 ರಂದು ನಡೆದಿದ್ದ ಅಪಘಾತದಲ್ಲಿ, ಬಿಎಂಟಿಸಿ ಬಸ್ ಡಿಕ್ಕಿಯಾಗಿ ಗಾಯಗೊಂಡಿದ್ದರು. ಚೇತನ್ ಮೂಲತಃ ಕೋಲಾರ (Kolara) ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಚಿನ್ನಕೋಟೆ ಗ್ರಾಮದವರಾಗಿದ್ದು, ಇಂದು ಯಲಹಂಕ ಬಳಿಯ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸೌದಿ ವೀಸಾಗಾಗಿ ಭಾರತೀಯರಿಗೆ ಇನ್ಮುಂದೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರದ ಬೇಕಾಗಿಲ್ಲ
ಚೇತನ್ ಅವರ ತಂದೆ ಸುರೇಶ್ ಕೂಡ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 34 ವರ್ಷ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿ ಪಡೆದಿದ್ರು, ಚೇತನ್ ಕೂಡ ತಂದೆಯ ಹಾದಿಯಲ್ಲೇ ದೇಶ ಸೇವೆ ಮಾಡಲು ಭಾರತೀಯ ಸೇನೆಗೆ ಸೇರಿದ್ದರು. ಸೇನೆಗೆ ಸೇರಿ ಮೂರು ವರ್ಷ ಪೂರೈಸಿದ್ದ ಚೇತನ್, ಇತ್ತೀಚೆಗೆ ರಜೆ ಮೇಲೆ ಕುಟುಂಬಸ್ಥರ ಜೊತೆಗೆ ಸಮಯ ಕಳೆಯಲು ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಅಪಘಾತ ಸಂಭವಿಸಿತ್ತು. ಚೇತನ್ ಅವರು ಚೆನ್ನೈ ರೆಜಿಮೆಂಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಸ್ವಗ್ರಾಮ ಚಿನ್ನಕೋಟೆಯಲ್ಲಿ ಅಂತಿಮ ಸಂಸ್ಕಾರ ನಡೆಯಿತು. ಇದನ್ನೂ ಓದಿ: ವರನ ಕಡೆಯವರು ನೀಡಿದ ಲೆಹೆಂಗಾ ಚೀಪ್ ಕ್ವಾಲಿಟಿ – ಮದುವೆ ಬೇಡವೆಂದ ವಧು
Live Tv
[brid partner=56869869 player=32851 video=960834 autoplay=true]
ಮಂಡ್ಯ: ರಸ್ತೆ ಗುಂಡಿ (Potholes) ಗೆ ನಿವೃತ್ತ ಯೋಧ (Soldier) ಬಲಿಯಾಗಿರುವ ಘಟನೆ ಮಂಡ್ಯದ ಕಾರೆಮನೆ ಗೇಟ್ ಬಳಿ ಜರುಗಿದೆ.
ಎಸ್.ಎನ್ ಕುಮಾರ್ (39) ಮೃತ ನಿವೃತ್ತ ಯೋಧ. ತಂದೆ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಕುಮಾರ್ ಈ ಘಟನೆ ಜರುಗಿದೆ. ಸಾತನೂರಿನಿಂದ ಮಂಡ್ಯಗೆ ಬರುತ್ತಿದ್ದ ವೇಳೆ ಕಾರೆಮನೆ ಗೇಟ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ.
ಗುಂಡಿಯನ್ನು ತಪ್ಪಿಸಲು ಹೋಗಿ ಎದುರಿನಿಂದ ಬಂದ ಬೈಕ್ (Bike) ಗೆ ಡಿಕ್ಕಿ ಹೊಡೆದ ಕೆಳಗೆ ಬಿದ್ದ ಕುಮಾರ್‍ಗೆ ಹಿಂದಿನಿಂದ ಬಂದ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವವನ್ನಪ್ಪಿದ್ದಾರೆ. ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕಲಬುರಗಿಯ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅರೆಸ್ಟ್
ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದ ಕುಮಾರ್, ನಿವೃತ್ತಿ ಬಳಿಕ ಪೊಲೀಸ್ ಪೇದೆಯಾಗಿ ತರಬೇತಿಗೆ ಹೋಗುತ್ತಿದ್ದರು. ನಿನ್ನೆ ಸ್ವಗ್ರಾಮ ಸಾತನೂರು ಗ್ರಾಮಕ್ಕೆ ಕುಮಾರ್ ಬಂದಿದ್ದ ವೇಳೆ ಈ ಘಟನೆ ಜರುಗಿದ್ದು, ಮಂಡ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Live Tv
[brid partner=56869869 player=32851 video=960834 autoplay=true]
ಪಾಗ್ಲಾ ನದಿಯಲ್ಲಿ ಬಾಳೆ ಕಾಂಡಗಳಿಗೆ ಕಟ್ಟಿದ ಕೆಲವು ಪ್ಲಾಸ್ಟಿಕ್ ಪಾತ್ರೆಗಳು ಬಾಂಗ್ಲಾದೇಶದ ಕಡೆಗೆ ತೇಲುತ್ತಿರುವುದನ್ನು ಬಿಎಸ್‌ಎಫ್ ತಂಡಗಳು ಗಮನಿಸಿದ್ದವು. ಈ ಹಿನ್ನೆಲೆಯಲ್ಲಿ ತಕ್ಷಣ ಜಾಗ್ರತರಾದ ಯೋಧರು ಕಂಟೇನರ್‌ಗಳನ್ನು ಹೊರತೆಗೆದರು. ಹಾಗೂ ಅದರಲ್ಲಿದ್ದ ವಿವಿಧ ಕಂಪನಿಯ 317 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ:‘ಗೋವನ್ನು’ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಮನವಿ – ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್
Live Tv
[brid partner=56869869 player=32851 video=960834 autoplay=true]
ಬೀದರ್: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಆಮ್ಲಜನಕದ (Oxygen) ಕೊರತೆಯಿಂದ ಬೀದರ್ (Bidar) ಮೂಲದ ಯೋಧರೊಬ್ಬರು (Soldier) ಹುತಾತ್ಮರಾಗಿರುವ ಘಟನೆ ನಡೆದಿದೆ. ರಾಮದಾಸ್ ಚಂದಾಪೂರೆ(35) ಹುತಾತ್ಮರಾದ ಯೋಧ.
ಬೀದರ್ ಜಿಲ್ಲೆಯ ಕಮಲಾನಗರ ತಾಲೂಕಿನ ಬೇಡಕುಂದಾ ಗ್ರಾಮದ ಯೋಧ ಕಳೆದ ಹಲವು ತಿಂಗಳುಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. 15 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಆಮ್ಲಜನಕದ ಕೊರತೆಯಿಂದ ಹುತಾತ್ಮರಾಗಿದ್ದಾರೆ. ಇದನ್ನೂ ಓದಿ: ಮಹಾಲಯ ಆಚರಣೆ – ಬಾಂಗ್ಲಾದೇಶದಲ್ಲಿ ದೋಣಿ ಮುಳುಗಿ 24 ಮಂದಿ ಸಾವು
ಚಂಡೀಗಢ: ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದ (Chandigarh University) ಹಾಸ್ಟೆಲ್ ವಾಶ್‌ರೂಮ್‌ನಲ್ಲಿ ವಿದ್ಯಾರ್ಥಿನಿಯೊಬ್ಬಳು ವಿಡಿಯೋ ರೆಕಾರ್ಡ್ (Bathroom Video) ಮಾಡಿದ್ದ ಪ್ರಕರಣದಲ್ಲಿ, ಆಕೆಗೆ ಬ್ಲ್ಯಾಕ್‌ಮೇಲ್ (Blackmail) ಮಾಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು (Punjab Police) ಶನಿವಾರ ಅರುಣಾಚಲ ಪ್ರದೇಶದಲ್ಲಿ ಸೇನಾ ಸಿಬ್ಬಂದಿಯನ್ನು (Soldier) ಬಂಧಿಸಿದ್ದಾರೆ.
ಕಳೆದ ಶನಿವಾರ ವಿದ್ಯಾರ್ಥಿನಿಯೊಬ್ಬಳು ಬಾತ್‌ರೂಂ ವೀಡಿಯೋಗಳನ್ನು ಸೆರೆಹಿಡಿದು ತನ್ನ ಗೆಳೆಯನಿಗೆ ಕಳುಹಿಸುತ್ತಿದ್ದ ವಿಷಯ ಬೆಳಕಿಗೆ ಬಂದ ಬಳಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಭಾರೀ ಪ್ರತಿಭಟನೆ ನಡೆದಿದೆ. ಬಳಿಕ ವೀಡಿಯೋ ಸೆರೆಹಿಡಿದಿದ್ದ ವಿದ್ಯಾರ್ಥಿನಿ, ಪ್ರಕರಣಕ್ಕೆ ಸಂಬಂಧಿಸಿದ ಹಿಮಾಚಲ ಪ್ರದೇಶದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದರು.
Accused army personnel Sanjeev Singh arrested from Sela Pass, Arunachal Pradesh. Transit remand obtained from Ld CJM Bomdilla for production before Mohali court. pic.twitter.com/eNhNq9W11R
ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಇತರ ವಿದ್ಯಾರ್ಥಿನಿಯರ ವೀಡಿಯೋಗಳು ಲೀಕ್ ಆಗಿರುವುದಾಗಿ ವದಂತಿ ಹಬ್ಬಿದ ಬಳಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು. ಆದರೆ ಬಂಧಿತ ವಿದ್ಯಾರ್ಥಿನಿ ತನ್ನ ಸ್ವಂತ ಖಾಸಗಿ ವೀಡಿಯೋಗಳನ್ನು ತನ್ನ ಗೆಳೆಯನಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾಳೆ. ಬಳಿಕ ವಿದ್ಯಾರ್ಥಿನಿಗೆ ವೀಡಿಯೋಗಳನ್ನು ಕಳುಹಿಸಲು ಬ್ಲ್ಯಾಕ್‌ಮೇಲೆ ಮಾಡಲಾಗಿತ್ತೇ ಎಂಬ ವಿಚಾರವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪಿಎಫ್‌ಐ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ – ಪ್ರಕರಣ ದಾಖಲು
Live Tv
[brid partner=56869869 player=32851 video=960834 autoplay=true]
ಶ್ರೀನಗರ: ನಿನ್ನೆ ನಡೆದ ದುರ್ಘಟನೆಯಲ್ಲಿ ಹುತಾತ್ಮರಾದ ಐಟಿಬಿಪಿ ಯೋಧರ ಪುಷ್ಪಾರ್ಚನೆ ಸಮಾರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭಾಗವಹಿಸಿ ಯೋಧರ ಪಾರ್ಥಿವ ಶರೀರದ ಶವ ಪಟ್ಟಿಗೆಗೆ ಹೆಗಲು ನೀಡುವ ಮೂಲಕ ತಮ್ಮ ಅಂತಿಮ ನಮನವನ್ನು ಸಲ್ಲಿಸಿದರು.
ನಿನ್ನೆ ಕಾಶ್ಮೀರದ ಪಹಲ್ಗಾಮ್‍ನ ಫ್ರಿಸ್ಲಾನ್‍ನಲ್ಲಿ ಐಟಿಬಿಪಿ ಮತ್ತು ಜಮ್ಮು ಕಾಶ್ಮೀರ ಪೊಲೀಸರನ್ನು ಹೊತ್ತೊಯ್ಯುತ್ತಿದ್ದ ಬಸ್ ಬ್ರೇಕ್ ಫೇಲ್ ಆಗಿ ನದಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ 7 ಮಂದಿ ಐಟಿಬಿಪಿ ಸಿಬ್ಬಂದಿ ಹುತಾತ್ಮರಾಗಿದ್ದರು.
ಅಮರನಾಥ ಯಾತ್ರೆ ಪ್ರದೇಶದಲ್ಲಿ ಭದ್ರತೆಗಾಗಿ ನಿಯೋಜಿಸಿದ್ದ 37 ಐಟಿಬಿಪಿ, ಇಬ್ಬರು ಜಮ್ಮು-ಕಾಶ್ಮೀರ ಪೊಲೀಸರನ್ನು ಚಂದನ್ವಾರಿಯಿಂದ ಪಹಲ್ಗಾಮ್ ಕಡೆಗೆ ಕರೆದೊಯ್ಯುಲಾಗುತ್ತಿತ್ತು. ಈ ಸಂದರ್ಭದಲ್ಲಿ ಘಟನೆ ನಡೆದಿದ್ದು, ಇನ್ನು ಹಲವು ಸಿಬ್ಬಂದಿಗಳು ಗಾಯಗಳಾಗಿತ್ತು. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮೃತ ದಲಿತ ಬಾಲಕನ ಕುಟುಂಬದವರನ್ನು ಭೇಟಿಯಾಗಲು ಹೊರಟಿದ್ದ ಚಂದ್ರಶೇಖರ್ ಆಜಾದ್ ಬಂಧನ