Tag: ಯೋಧ

  • 23 ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

    23 ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

    ಗದಗ: 23 ವರ್ಷ ಸೇನೆಯಲ್ಲಿ (Indian Army) ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿದ ಗದಗದ (Gadag) ಕದಡಿಯ ಯೋಧನಿಗೆ (Soldier) ಮಾಜಿ ಸೈನಿಕರು ಹಾಗೂ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತ ನೀಡಿದ್ದಾರೆ.

    ಗ್ರಾಮದ ಈಶ್ವರ ಕರಿಸಕ್ರನವರ್ ಎಂಬುವವರು ಕಳೆದ 23 ವರ್ಷಗಳ ದೀರ್ಘ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗುರುವಾರ ತಮ್ಮ ತವರಿಗೆ ಮರಳಿದ್ದಾರೆ. ಇವರು ಗದಗದ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಆರತಿ ಬೆಳಗಿ ಸ್ವಾಗತ ನೀಡಿದ್ದಾರೆ. ನಂತರ ಸನ್ಮಾನಿಸಿ ರೈಲ್ವೇ ನಿಲ್ದಾಣದಿಂದ ಮಹಾತ್ಮ ಗಾಂಧಿ ಸರ್ಕಲ್, ಮಹೇಂದ್ರಕರ್ ಸರ್ಕಲ್, ಹುಯಿಲಗೋಳ ನಾರಾಯಣರಾವ್ ಸರ್ಕಲ್, ಬಸವೇಶ್ವರ ಸರ್ಕಲ್, ಪುಟ್ಟರಾಜ ಕವಿ ಗವಾಯಿಗಳ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದ್ದಾರೆ. ಸಂಘದಿಂದ ದಾರಿಯುದ್ದಕ್ಕೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ಅತ್ಯುತ್ತಮವಾದ ಕಾನೂನು ಸುವ್ಯವಸ್ಥೆ ಕೇರಳದಲ್ಲಿದೆ – ಪಿಣರಾಯಿ ವಿಜಯನ್‌

    ಯೋಧ ಈಶ್ವರ ಅವರು 1999ರಲ್ಲಿ ಬೆಂಗಳೂರಿನ ಎಎಸ್‍ಸಿ, ಎಮ್‍ಟಿ ಬೆಟಾಲಿಯನ್‍ನಲ್ಲಿ ನೇಮಕಗೊಂಡಿದ್ದರು. ಸೇನೆಯಲ್ಲಿ ಚಾಲಕರಾಗಿ, ಸೈನಿಕರಾಗಿ, ಆರ್ಮಿ ಸಪ್ಲಾಯ್ ಕೋರ್, ಹವಾಲ್ದಾರ್ ಆಗಿ ಕೆಲಸ ಮಾಡಿದ್ದರು. ಜಮ್ಮುವಿನ ರಜೋರಿ, ಪಂಜಾಬ್‍ನ ಜಲಂದರ್, ಉತ್ತರ ಪ್ರದೇಶದ ಡೆಹ್ರಾಡೂನ್, ಅಸ್ಸಾಂ, ಮಧ್ಯಪ್ರದೇಶ, ರಾಜಸ್ಥಾನ್, ಭೂಪಾಲ್, ಛತ್ತೀಸ್‍ಗಡದಲ್ಲಿ ಸೇವೆ ಸಲ್ಲಿಸಿದ್ದಾರೆ.

    ಇಂದಿನ ಮೆರವಣಿಗೆಯಲ್ಲಿ ಯೋಧ ಈಶ್ವರ ಅವರ ಜೊತೆ ತಾಯಿ ಶಾಂತವ್ವ, ಪತ್ನಿ ವಿಜಯಲಕ್ಷ್ಮಿ, ಅಖಿಲ ಕರ್ನಾಟಕ ಮಾಜಿ ಸೈನಿಕರು ಸಂಘದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ಉಪಾಧ್ಯಕ್ಷ ಎನ್‍ಆರ್ ದೇವಾಂಗಮಠ, ಪ್ರಕಾಶಪ್ಪ ಬಂಡಿಹಾಳ, ನಿಂಗಪ್ಪ ಚೋರಗಸ್ತಿ, ಮಲ್ಲಿಕಾರ್ಜುನ್, ರವಿ, ಮಾರುತಿ, ಶಿಲ್ಪಾ ಬಂಡಿಹಾಳ, ಸುನಂದಾ ವಾಡ್ಕರ್, ಇಂದಿರಾ ಹೆಬಸೂರ ಸೇರಿದಂತೆ ಅನೇಕ ಮಾಜಿ ಸೈನಿಕರ ಸಂಘದ ಕುಟುಂಬದ ಮಹಿಳೆಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಸಂಸದ ಸ್ಥಾನದಿಂದ ಅನರ್ಹತೆ ಜನ ಸೇವೆಗೆ ಸಿಕ್ಕ ಅವಕಾಶ: ರಾಹುಲ್ ಗಾಂಧಿ

  • ಸಾ.ರಾ. ಬಾಸ್‌ಗೆ ದೇಶ ಕಾಯುವ ಸೈನಿಕನಿಂದ ಮೊದಲ ಮತ – ವೋಟ್‌ ಹಾಕಿ ಬ್ಯಾಲೆಟ್‌ ಪೇಪರ್‌ ಪ್ರದರ್ಶಿಸಿದ ಯೋಧನ ಫೋಟೋ ವೈರಲ್‌

    ಸಾ.ರಾ. ಬಾಸ್‌ಗೆ ದೇಶ ಕಾಯುವ ಸೈನಿಕನಿಂದ ಮೊದಲ ಮತ – ವೋಟ್‌ ಹಾಕಿ ಬ್ಯಾಲೆಟ್‌ ಪೇಪರ್‌ ಪ್ರದರ್ಶಿಸಿದ ಯೋಧನ ಫೋಟೋ ವೈರಲ್‌

    ಮೈಸೂರು: ಮತ ಹಾಕಿ ಬ್ಯಾಲೆಟ್‌ ಪೇಪರ್‌ ಜೊತೆಗೆ ಯೋಧರೊಬ್ಬರು ಫೋಟೋ ತೆಗೆಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

    ಮತ ಹಾಕಿರುವ ಬ್ಯಾಲೆಟ್‌ ಪೇಪರನ್ನು ಯೋಧ ಪ್ರದರ್ಶಿಸುತ್ತಿದ್ದಾರೆ. ಆ ಫೋಟೋದೊಂದಿಗೆ, ನಮ್ಮ “ಸಾ.ರಾ. ಬಾಸ್‌”ಗೆ ಮೊದಲ ಮತ. ನಮ್ಮ ದೇಶ ಕಾಯುವ ಸೈನಿಕನಿಂದ ಜೈ ಹಿಂದ್‌ ಎಂಬ ಅಡಿಬರಹವಿದೆ. ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್

    ಈ ಯೋಧ ಕೆ.ಆರ್.ನಗರದ ಕ್ಷೇತ್ರದ ಮತದಾರ ಎಂಬುದು ಪೋಸ್ಟ್‌ನಿಂದ ತಿಳಿದುಬಂದಿದೆ. ಕರ್ತವ್ಯದ ಹಿನ್ನಲೆಯಲ್ಲಿ ಹೊರ ರಾಜ್ಯದಿಂದ ಅಂಚೆ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಯೋಧ ಯಾರು ಮತ್ತು ಎಲ್ಲಿಂದ ಮತ ಹಾಕಿದ್ದಾರೆ ಎಂಬುದನ್ನ ಚುನಾವಣಾಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ.

    ಇದೇ ಮೇ 10 ರಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಿರಿಯರು, ಬೇರೆ ಬೇರೆ ಕಡೆಯಿರುವ ಸರ್ಕಾರಿ ನೌಕರರು ತಾವು ಇರುವಲ್ಲಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ?

    ಕೆ.ಆರ್.ನಗರ ಕ್ಷೇತ್ರದಲ್ಲಿ ಶಾಸಕ ಸಾ.ರಾ.ಮಹೇಶ್ (Sa.Ra.Mahesh) (ಜೆಡಿಎಸ್), ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್ (ಕಾಂಗ್ರೆಸ್), ಹೊಸಹಳ್ಳಿ ವೆಂಕಟೇಶ್ (ಬಿಜೆಪಿ) ಕಣದಲ್ಲಿದ್ದಾರೆ.

  • ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ

    ಬಾಡಿಗೆ ವಾಹನದಲ್ಲಿ ಬರುತ್ತಿದ್ದ ಯೋಧರು – ದಾಳಿಗೆ ನಕ್ಸಲರಿಂದ 50 ಕೆಜಿ ಸುಧಾರಿತ IED ಬಳಕೆ

    ರಾಯ್ಪುರ: ಛತ್ತೀಸ್‍ಗಢದ (Chhattisgarh) ದಾಂತೇವಾಡದಲ್ಲಿ (Dantewada) ಬುಧವಾರ ನಡೆದ ನಕ್ಸಲರ ದಾಳಿಯಲ್ಲಿ 11 ಯೋಧರು ಹುತಾತ್ಮರಾಗಿದ್ದಾರೆ. ಆದರೆ ಈ ದಾಳಿಯು ಪೂರ್ವನಿಯೋಜಿತವಾಗಿದ್ದು, ಯೋಧರ ವಾಹನವನ್ನು ಸ್ಫೋಟಿಸಲು ನಕ್ಸಲರು ಮೊದಲೇ 50 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು (IED) ರಸ್ತೆಯಲ್ಲಿ ಇಟ್ಟಿದ್ದರು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.

    ಛತ್ತೀಸ್‍ಗಢದ ಅರನ್‍ಪುರ ಏರಿಯಾದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಛತ್ತೀಸ್‍ಗಢದ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಡಿಆರ್‌ಜಿ)ನ ಸೈನಿಕರು ಅಲ್ಲಿಗೆ ತೆರಳಿದ್ದರು. ಈ ವೇಳೆ ಆ ಯೋಧರೆಲ್ಲರೂ ಬಾಡಿಗೆಗೆ ಪಡೆದ ಮಿನಿ ವ್ಯಾನ್‍ನಲ್ಲಿ ಪ್ರಯಾಣಿಸುತ್ತಿದ್ದರು.

    ಇದನ್ನೇ ಲಾಭವಾಗಿಸಿಕೊಂಡ ಮಾವೋವಾದಿಗಳು ನಕ್ಸಲರು ಸೇನಾ ವಾಹನ ವಾಪಸ್ ಬರುವ ಮಾರ್ಗದಲ್ಲಿ ಐಇಡಿ ಅಳವಡಿಸಿ ಇಟ್ಟಿದ್ದರು. ಅಷ್ಟೇ ಅಲ್ಲದೇ ಮರಗಳನ್ನು ಕಿತ್ತುಹಾಕಿ ರಸ್ತೆಯಲ್ಲಿ 10 ಅಡಿ ಆಳ ಹಾಗೂ 20 ಅಡಿ ಅಗಲದ ದೊಡ್ಡ ಕುಳಿ ತೋಡಿ, ಐಇಡಿಯನ್ನು ಬಚ್ಚಿಟ್ಟಿದರು.

    ನಕ್ಸಲರ ಯೋಜನೆಯಂತೆ ಕಾರ್ಯಚರಣೆ ಮುಗಿಸಿ ವಾಪಸ್ ಬರುತ್ತಿದ್ದ ಡಿಆರ್‌ಜಿ ವಾಹನ ಆ ಐಇಡಿ ಇದ್ದ ಸ್ಥಳ ದಾಂತೇವಾಡಕ್ಕೆ ಬಂದಿದೆ. ಈ ವೇಳೆ ಐಇಡಿ ಸ್ಫೋಟಗೊಂಡಿದ್ದು, ಅದರ ರಭಸಕ್ಕೆ ವಾಹನ ಚೂರು ಚೂರಾಗಿದೆ. ಜೊತೆಗೆ ಸೈನಿಕರ ದೇಹವೂ ಛೀದ್ರಗೊಂಡಿದೆ. ವಾಹನದಲ್ಲಿ 10 ಪೊಲೀಸರು ಹಾಗೂ ಓರ್ವ ಚಾಲಕ ಬಲಿಯಾಗಿದ್ದಾರೆ.

    ಯೋಧರ ವಾಹನವು ಸ್ಫೋಟದ ಸ್ಥಳದಿಂದ ಕನಿಷ್ಠ 20 ಅಡಿಗಳಷ್ಟು ದೂರಕ್ಕೆ ಹಾರಿದೆ. ಜೊತೆಗೆ ಸ್ಫೋಟದ ಸ್ಥಳದಿಂದ 150 ಮೀ. ದೂರದಲ್ಲಿ ಚೂರಾದ ವಾಹನದ ಅವಶೇಷಗಳು ಬಿದ್ದಿವೆ. ಘಟನೆಗೆ ಸಂಬಂಧಿಸಿ ವಿಶೇಷ ಭದ್ರತಾ ಪಡೆಗಳು ಕಾಡಿನಲ್ಲಿ ಅಡಗಿರುವ ಮಾವೋವಾದಿಗಳನ್ನು ಹುಡುಕುತ್ತಿವೆ ಎಂದು ಮೂಲಗಳು ತಿಳಿಸಿವೆ. ಈ ಪ್ರದೇಶವು 3 ರಾಜ್ಯಗಳ ಮಧ್ಯ ಇದ್ದು, ತ್ರಿ-ಜಂಕ್ಷನ್ ಆಗಿದೆ.

    ಗುಪ್ತಚರ ಮಾಹಿತಿ ಸಂಗ್ರಹವಾಗಿರಲಿಲ್ಲ: ಇಂದು ಮೃತಪಟ್ಟಿದ್ದ ಯೋಧರು ಡಿಆರ್‍ಜಿಯ ವಿಶೇಷ ತಂಡದ ಸದಸ್ಯರಗಿದ್ದಾರೆ. ನಕ್ಸಲರ ವಿರುದ್ಧ ಹೋರಾಡಲು ವಿಶೇಷವಾಗಿ ತರಬೇತಿ ಪಡೆದ ಸ್ಥಳೀಯ ಬುಡಕಟ್ಟು ಸಮುದಾಯದ ಸೈನಿಕರೇ ಹೆಚ್ಚಿನ ಜನರು ಇದರಲ್ಲಿ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಶಿಷ್ಟಾಚಾರದ ಪ್ರಕಾರ ಭದ್ರತಾಪಡೆಗಳು ಗುಪ್ತಚರ ಮಾಹಿತಿ ತಲುಪಿದ ಬಳಿಕ ಹಾಗೂ ಸ್ಥಳ ಪರಿಶೀಲನೆಯ ಬಳಿಕವಷ್ಟೇ ಮುಂದೆ ಸಾಗಬೇಕು. ಆದರೆ ಮೂಲಗಳ ಪ್ರಕಾರ ಛತ್ತೀಸ್‍ಗಢ ಜಿಲ್ಲಾ ಮೀಸಲು ಪಡೆ ಹೋಗುವ ಮಾರ್ಗದಲ್ಲಿ ಮುಂಚಿತವಾಗಿ ಗುಪ್ತಚರ ಮಾಹಿತಿ ಸಂಗ್ರಹವಾಗಿರಲಿಲ್ಲ. ಸ್ಥಳ ಪರಿಶಿಲನೆಯೂ ನಡೆದಿರಲಿಲ್ಲ. ನಕ್ಸಲರು ಡಿಆರ್‍ಜಿ ವಾಹನದ ಮೇಲೆ ಮೊದಲನಿಂದಲೂ ಕಣ್ಣಿಟ್ಟಿದ್ದರು. ಅದರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಡಿಆರ್‌ಜಿ ಪಡೆ ಹೋಗುವಾಗ ದಾರಿಯನ್ನು ಬದಲಿಸದೇ ಇರುವುದು ಘಟನೆಗೆ ಕಾರಣವಾಗಿದೆ.

    2 ರಾಜ್ಯಗಳಲ್ಲಿ ಹೈಅಲರ್ಟ್: ನಕ್ಸಲ್ ದಾಳಿ ಬೆನ್ನಲ್ಲೇ ಒಡಿಶಾದ 3 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಘಟನೆಯ ನಂತರ ಛತ್ತೀಸ್‍ಗಢದ ಗಡಿಭಾಗದ ಜಿಲ್ಲೆಗಳಾದ ಮಲ್ಕಾನ್‍ಗಿರಿ, ಕೊರಾಪುಟ್, ಬರ್ಗಾರ್ಡ್, ನುವಾಪಾದ ಮತ್ತು ನಬರಂಗ್‍ಪುರವನ್ನು ಹೈ ಅಲರ್ಟ್ ಮಾಡಲಾಗಿದೆ ಎಂದು ಒಡಿಶಾ ಪೊಲೀಸ್‍ನ ಗುಪ್ತಚರ ನಿರ್ದೇಶಕ ಸಂಜೀಬ್ ಪಾಂಡಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಮಗೆ ರಾಹುಲ್ ಗಾಂಧಿ ರಕ್ತದ ಬಗ್ಗೆ ಸಂಶಯವಿದೆ : ಕಟೀಲ್

    ಛತ್ತೀಸ್‍ಗಢ ಸಿಎಂ, ಕರ್ನಾಟಕದ ಪ್ರವಾಸ ರದ್ದು: ಛತ್ತೀಸ್‍ಗಢ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಭುಪೇಶ್ ಬಘೇಲ್ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕಕ್ಕೆ ಬರಬೇಕಿತ್ತು. ಆದರೆ ಯೋಧರ ಮೇಲೆ ದಾಳಿ ನಡೆದ ಬೆನ್ನಲ್ಲೇ ಕರ್ನಾಟಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಜೊತೆಗೆ ಘಟನಾ ಸ್ಥಳ ದಾಂತೇವಾಡಕ್ಕೆ ಭೇಟಿ ನೀಡಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ ಜೊತೆಗೆ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಇದನ್ನೂ ಓದಿ: ಶೆಟ್ಟರ್ ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಫೇಲ್ ಆದೆ: ಜೋಶಿ

  • ನಕ್ಸಲರ ಅಟ್ಟಹಾಸ- IED ಬ್ಲಾಸ್ಟ್‌ಗೆ 11 ಯೋಧರು ಹುತಾತ್ಮ

    ನಕ್ಸಲರ ಅಟ್ಟಹಾಸ- IED ಬ್ಲಾಸ್ಟ್‌ಗೆ 11 ಯೋಧರು ಹುತಾತ್ಮ

    ರಾಯ್ಪುರ: ಛತ್ತೀಸ್‌ಗಢದಲ್ಲಿ (Chhatisgarh) ಮತ್ತೆ ನಕ್ಸಲರು (Naxals) ಅಟ್ಟಹಾಸ ಮೆರೆದಿದ್ದು, ಚಾಲಕ ಹಾಗೂ 10 ಪೊಲೀಸ್‌ ಸಿಬ್ಬಂದಿ ಸೇರಿ 11 ಯೋಧರು ಹುತಾತ್ಮರಾದ ಘಟನೆ ಗುರುವಾರದಲ್ಲಿ ದಾಂತೇವಾಡದಲ್ಲಿ (Dantewada) ನಡೆದಿದೆ.

    ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಗುಪ್ತಚರ ಮಾಹಿತಿಯ ಮೇರೆಗೆ ಪ್ರಾರಂಭವಾದ ನಕ್ಸಲ್‌ ವಿರೋಧಿ ಕಾರ್ಯಾಚರಣೆಯಿಂದ ಪೊಲೀಸರು ಹಿಂತಿರುಗುತ್ತಿದ್ದರು. ಈ ವೇಳೆ ಈ ಘಟನೆ ನಡೆದಿದೆ. ಯೋಧರು ಸಂಚರಿಸುತ್ತಿದ್ದ ವಾಹನವನ್ನು ನಕ್ಸಲರು ಸುಧಾರಿತ ಸ್ಫೋಟಕ ಸಾಧನ (ಐಇಡಿ)ಯಿಂದ ದಾಳಿ ನಡೆಸಿ ಸ್ಫೋಟಿಸಿದ್ದಾರೆ. ಇದರ ಪರಿಣಾಮವಾಗಿ 10 ಭದ್ರತಾ ಸಿಬ್ಬಂದಿ ಮತ್ತು ಚಾಲಕ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ನಕ್ಸಲ್‌ ನಿಗ್ರಹ ದಳ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

    ಘಟನೆ ಕುರಿತು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರತಿಕ್ರಿಯಿಸಿ, ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದ ಅವರು, ದಾಳಿಯಲ್ಲಿ ಭಾಗಿಯಾಗಿರುವ ನಕ್ಸಲರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಹೋರಾಟವು ಕೊನೆಯ ಹಂತದಲ್ಲಿದೆ. ನಕ್ಸಲರನ್ನು ಬಿಡಲಾಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕಿದ ಶೆಟ್ಟರ್, ಸವದಿ ಸೋಲಿಸುವ ಹೊಣೆ ನನ್ನದು- ಯಡಿಯೂರಪ್ಪ

    ನಕ್ಸಲರೆಂದು ಕರೆಯಲ್ಪಡುವ ಮಾವೋವಾದಿಗಳು ಕಳೆದ 6 ದಶಕಗಳಿಂದ ನೂರಾರು ಜನರನ್ನು ಹತ್ಯೆಗೈದು ಸರ್ಕಾರದ ವಿರುದ್ಧ ಸಶಸ್ತ್ರ ಬಂಡಾಯವನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲೂ `ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮಾಡ್ಬೇಕು – ನಿರ್ಮಲಾ ಸೀತಾರಾಮನ್ ಕರೆ

  • ಯೋಧರ ವಾಹನದ ಮೇಲೆ ಉಗ್ರರಿಂದ ಗುಂಡಿನ ದಾಳಿ – ಗ್ರೆನೇಡ್ ಬಳಕೆ ಸಾಧ್ಯತೆ

    ಯೋಧರ ವಾಹನದ ಮೇಲೆ ಉಗ್ರರಿಂದ ಗುಂಡಿನ ದಾಳಿ – ಗ್ರೆನೇಡ್ ಬಳಕೆ ಸಾಧ್ಯತೆ

    – ಹುತಾತ್ಮ  ಐವರು ಯೋಧರ ಹೆಸರು ಬಿಡುಗಡೆ
    – ಇಂದು ಎನ್‍ಐಎ ತಂಡ ಸ್ಥಳಕ್ಕೆ ಭೇಟಿ

    ಶ್ರೀನಗರ: ಭಿಂಬರ್ ಗಲಿ ಪ್ರದೇಶದ ಬಳಿ ನಡೆದ ಉಗ್ರರ (Terrorists) ದಾಳಿ ವೇಳೆ ಯೋಧರ (Soldiers) ವಾಹನದ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಗ್ರೆನೇಡ್ ದಾಳಿಯ ಸಾಧ್ಯತೆಯಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಸೇನೆ ಶಂಕಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ತಂಡ ಜಮ್ಮು ಕಾಶ್ಮೀರದ (Jammu And Kashmir) ಪೂಂಚ್ ಜಿಲ್ಲೆಗೆ ಆಗಮಿಸಲಿದೆ.

    ಗುರುವಾರ ಜಮ್ಮು ಕಾಶ್ಮೀರದ ಪೂಂಚ್ (Poonch) ಜಿಲ್ಲೆಯ ಭಿಂಬರ್ ಗಲಿ ಪ್ರದೇಶದ ಬಳಿ ಸೇನಾ ವಾಹನವನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಐವರು ಯೋಧರು ಹುತಾತ್ಮರಾಗಿದ್ದು, ಓರ್ವ ಯೋಧ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಎನ್‍ಐಎ ತಂಡ ಶುಕ್ರವಾರ ಮಧ್ಯಾಹ್ನ 12:30ರ ಸುಮಾರಿಗೆ ದೆಹಲಿಯಿಂದ ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿದೆ.

    ದಾಳಿಯಲ್ಲಿ ಮೃತಪಟ್ಟ ಯೋಧರನ್ನು ಹವಿಲ್ದಾರ್ ಮನ್ದೀಪ್ ಸಿಂಗ್, ದೇಬಾಶಿಶ್ ಬಸ್ವಾಲ್, ಕುಲ್ವಂತ್ ಸಿಂಗ್, ಹಕ್ರ್ರಿಶನ್ ಸಿಂಗ್ ಮತ್ತು ಸೇವಕ್ ಸಿಂಗ್ ಎಂದು ಗುರುತಿಸಲಾಗಿದೆ. ಮೃತ ಯೋಧರೆಲ್ಲರೂ ಈ ಪ್ರದೇಶದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ ರಾಷ್ಟ್ರೀಯ ರೈಫಲ್ಸ್ ಘಟಕದ ಸಿಬ್ಬಂದಿಯಾಗಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಯೋಧನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸೇನಾ ಪ್ರಧಾನ ಕಚೇರಿಯ ಉತ್ತರ ಕಮಾಂಡ್ ಅಧಿಕೃತವಾಗಿ ಮಾತನಾಡಿ, ಅನಾಮಿಕ ಉಗ್ರರು ಸೇನಾ ವಾಹನದ ಮೇಲೆ ಗುಂಡು ಹಾರಿಸಿದ್ದಾರೆ. ಭಾರೀ ಮಳೆ ಹಾಗೂ ಕಡಿಮೆ ಗೋಚರತೆಯ ಲಾಭವನ್ನು ಉಗ್ರರು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಘಟನೆಗೆ ಉಗ್ರರು ಗ್ರೆನೇಡ್‍ಗಳನ್ನು ಬಳಸಿದ್ದರಿಂದ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿಸಿದರು.

    ಜೈಶ್ ಬೆಂಬಲಿತ ಉಗ್ರರ ಗುಂಪು, ಪೀಪಲ್ಸ್ ಆ್ಯಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‍ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ನಾಲ್ವರು ಉಗ್ರರು ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಇದನ್ನೂ ಓದಿ: ಅರಕಲಗೂಡಿನಲ್ಲಿ ದಿಢೀರ್‌ ಬೆಳವಣಿಗೆ – ಕೈ ಟಿಕೆಟ್‌ ಆಕಾಂಕ್ಷಿ ಬಿಜೆಪಿ ಅಭ್ಯರ್ಥಿ?

    ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಾಕಿಸ್ತಾನ ಘೋಷಿಸಿದ ದಿನವೇ ಉಗ್ರರ ದಾಳಿ ನಡೆದಿದೆ. ಪ್ರಮುಖವಾಗಿ, ಮೇ ತಿಂಗಳಲ್ಲಿ ಶ್ರೀನಗರದಲ್ಲಿ ಜಿ20 ಪ್ರವಾಸೋದ್ಯಮ ವಕಿರ್ಂಗ್ ಗ್ರೂಪ್ ಸಭೆಯನ್ನು ಸಹ ನಿಗದಿಯಾಗಿದೆ. ಕಳೆದ ವಾರ ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪರಿಶೀಲಿಸಿದ್ದರು. ಇದನ್ನೂ ಓದಿ: ಅತೀಕ್ ಅಹ್ಮದ್ 1,169 ಕೋಟಿ ರೂ. ಒಡೆಯ- ಹುಡುಕಿದಷ್ಟು ಸಿಗುತ್ತಿದೆ ಗ್ಯಾಂಗಸ್ಟರ್‌ನ ಆಸ್ತಿ

  • ಗಲ್ವಾನ್ ಹುತಾತ್ಮನಾದ ಮಗನ ನೆನಪಿನಲ್ಲಿ ಅಕ್ರಮ ಸ್ಮಾರಕ ನಿರ್ಮಾಣ – ತಂದೆ ಅರೆಸ್ಟ್

    ಗಲ್ವಾನ್ ಹುತಾತ್ಮನಾದ ಮಗನ ನೆನಪಿನಲ್ಲಿ ಅಕ್ರಮ ಸ್ಮಾರಕ ನಿರ್ಮಾಣ – ತಂದೆ ಅರೆಸ್ಟ್

    ಪಾಟ್ನಾ: 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ (Galwan Valley) ಚೀನಾದ ಸೈನಿಕರ ವಿರುದ್ಧ ಹೋರಾಡಿ ಹುತಾತ್ಮನಾಗಿದ್ದ ಸೇನಾಧಿಕಾರಿ (Soldier) ಜೈ ಕಿಶೋರ್ ಸಿಂಗ್ (Jai Kishore Singh) ಅವರ ತಂದೆ ತನ್ನ ಮಗನ ನೆನಪಿಗಾಗಿ ಕಾನೂನು ಬಾಹಿರವಾಗಿ ಸ್ಮಾರಕವನ್ನು (Memorial) ನಿರ್ಮಿಸಿದಕ್ಕೆ ಪೊಲೀಸರು ಅವರನ್ನು ಬಂಧಿಸಿದ್ದಾರೆ.

    ಬಿಹಾರದ (Bihar) ವೈಶಾಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಘಟನೆ ನಡೆದಿದ್ದು, ಪೊಲೀಸರು ಅಕ್ರಮವಾಗಿ ಸ್ಮಾರಕವನ್ನು ನಿರ್ಮಿಸಿದ್ದಕ್ಕೆ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಶನಿವಾರ ಮಧ್ಯರಾತ್ರಿ ಹುತಾತ್ಮ ಯೋಧನ ತಂದೆಯನ್ನು ಪೊಲೀಸರು ಠಾಣೆಗೆ ಎಳೆದುಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿದೆ.

    ವರದಿಗಳ ಪ್ರಕಾರ ಜೈ ಕಿಶೋರ್ ಸಿಂಗ್ ಅವರ ತಂದೆ ರಾಜ್ ಕಪೂರ್ ಸಿಂಗ್ ಕಳೆದ ವರ್ಷ ಫೆಬ್ರವರಿ 24 ರಂದು ತಮ್ಮ ಮಗನ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಿದ್ದರು. ಸ್ಮಾರಕದ ಉದ್ಘಾಟನೆ ಸಂದರ್ಭ ಹಲವಾರು ಸ್ಥಳೀಯರು ಹಾಗೂ ಸರ್ಕಾರಿ ಅಧಿಕಾರಿಗಳು ಕೂಡಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆದರೆ ಕಳೆದ 2 ತಿಂಗಳಿನಿಂದ ಹುತಾತ್ಮ ಯೋಧನ ಕುಟುಂಬಕ್ಕೆ ತೊಂದರೆ ಪ್ರಾರಂಭವಾಗಿದೆ.

    ರಾಜ್ ಕಪೂರ್ ಸಿಂಗ್ ಅವರ ನೆರೆಹೊರೆಯವರಾದ ಹರಿನಾಥ್ ರಾಮ್ ಅಕ್ರಮವಾಗಿ ಸ್ಮಾರಕವನ್ನು ನಿರ್ಮಿಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ರಾಜ್ ಕಪೂರ್ ಸ್ಮಾರಕದ ಸುತ್ತಲೂ ಗೋಡೆಯನ್ನು ನಿರ್ಮಿಸಿದ್ದು, ಇದು ತಮ್ಮ ಮನೆಯ ದಾರಿಗೆ ಅಡ್ಡಲಾಗಿ ಕಟ್ಟಲಾಗಿದೆ, ಮನೆಗೆ ತೆರಳಲು ಇದು ನಿರ್ಬಧಿಸುತ್ತದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರೂಪಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಕೇಸ್ – ಕೋರ್ಟ್‌ನಲ್ಲಿ ಇಂದು ಏನಾಯ್ತು?

    ರಾಜ್ ಕಪೂರ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 188, 323, 504, 506 ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಅವರನ್ನು ಬಂಧಿಸಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಜೈ ಕಿಶೋರ್ ಸಿಂಗ್ ಸಹೋದರ ನಂದ್ ಕಿಶೋರ್, 15 ದಿನಗಳಲ್ಲಿ ಸ್ಮಾರಕವನ್ನು ತೆಗೆದು ಹಾಕಲು ಪೊಲೀಸರು ನಮಗೆ ಗಡುವು ನೀಡಿದ್ದರು. ಆದರೆ ಅದಕ್ಕೂ ಮುನ್ನವೇ ನಮ್ಮ ತಂದೆಯವರನ್ನು ರಾತ್ರೋರಾತ್ರಿ ಬಂಧಿಸಿ, ಹೊಡೆದು, ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ತಾಲಿಬಾನ್‌ನಿಂದ ISIS ಉಗ್ರನ ಹತ್ಯೆ

    ದೂರುದಾರರು ಸ್ಮಾರಕ ನಿರ್ಮಾಣದ ಕಾರಣದಿಂದ ತಮ್ಮ ಮನೆಗೆ ತೆರಳಲು ಅಡ್ಡಿಯಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ರಾಜ್ ಕಪೂರ್ ಸಿಂಗ್‌ನನ್ನು ಬಂಧಿಸಲಾಗಿದೆ ಎಂದು ಡಿಎಸ್‌ಪಿ ಮಹುವಾ ಪೂನಂ ಕೇಸರಿ ಹೇಳಿದ್ದಾರೆ.

  • ರಜೆ ಮುಗಿಸಿ ಸೇವೆಗೆ ಮರಳಿದ್ದ ರಾಯಚೂರಿನ ಯೋಧ ಸಾವು

    ರಜೆ ಮುಗಿಸಿ ಸೇವೆಗೆ ಮರಳಿದ್ದ ರಾಯಚೂರಿನ ಯೋಧ ಸಾವು

    ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮದ ಯೋಧ (Soldier) ರಜೆ ಮುಗಿಸಿ ಕೆಲಸಕ್ಕೆ ಮರಳಿದ ಎರಡೇ ದಿನಕ್ಕೆ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

    ಸಿಆರ್‌ಪಿಎಫ್ ಯೋಧ ರಾಮಲಿಂಗ ನಾಯಕ (34) ಪಾರ್ಶ್ವವಾಯುನಿಂದ ಬಳಲುತ್ತಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಾಮಲಿಂಗ ನಾಯಕ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಗ್ರಾಮ ದೇವತೆ ಜಾತ್ರೆ ಹಿನ್ನೆಲೆಯಲ್ಲಿ ರಜೆ ಹಾಕಿ ಬಂದಿದ್ದ ರಾಮಲಿಂಗ ನಾಯಕ್ ಕೆಲಸಕ್ಕೆ ತೆಲಂಗಾಣಕ್ಕೆ (Telangana) ಮರಳಿ ಎರಡೇ ದಿನಕ್ಕೆ ಸಾವನ್ನಪ್ಪಿದ್ದಾನೆ. ಯೋಧನ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಮುಸ್ಲಿಂ ಮತಗಳ ಓಲೈಕೆಗೆ ಮುಂದಾದ ಹೈಕಮಾಂಡ್ – ರಾಜ್ಯ ಬಿಜೆಪಿ ನಾಯಕರಿಗೆ ಹೊಸ ಸವಾಲು

    ಮಾನ್ವಿಯಿಂದ ಸುಂಕೇಶ್ವರವರೆಗೆ ಬೈಕ್ ರ‍್ಯಾಲಿ ಮುಖಾಂತರ ಮೃತ ಯೋಧನ ಮೆರವಣಿಗೆ ಮಾಡಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಯೋಧ ರಾಮಲಿಂಗ ನಾಯಕ್ ಕಳೆದ 19 ವರ್ಷಗಳಿಂದ ಭಾರತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜಮ್ಮು ಕಾಶ್ಮೀರ, ಶ್ರೀನಗರ, ಕೋಲ್ಕತ್ತಾ, ಛತ್ತಿಸ್‌ಗಢ ಸೇರಿ ಹಲವೆಡೆ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ಮಾಡಿದ್ದು ಯಾರು? – ವೇದಿಕೆಯಲ್ಲೇ ಅಶ್ವಥ್ ನಾರಾಯಣ್ Vs ಅನಿತಾ ಕುಮಾರಸ್ವಾಮಿ ವಾಗ್ವಾದ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಿಎಂಕೆ ಕೌನ್ಸಿಲರ್‌ನಿಂದ ಹಲ್ಲೆ- ಗಂಭೀರ ಗಾಯಗೊಂಡಿದ್ದ ಯೋಧ ಸಾವು

    ಡಿಎಂಕೆ ಕೌನ್ಸಿಲರ್‌ನಿಂದ ಹಲ್ಲೆ- ಗಂಭೀರ ಗಾಯಗೊಂಡಿದ್ದ ಯೋಧ ಸಾವು

    ಚೆನ್ನೈ: ಡಿಎಂಕೆ ಕೌನ್ಸಿಲರ್‌ನಿಂದ (DMK Councillor) ಹಲ್ಲೆಗೊಳಗಾಗಿದ್ದ 29 ವರ್ಷದ ಯೋಧ (Soldier) ಮೃತಪಟ್ಟ ಘಟನೆ ತಮಿಳುನಾಡಿನ (Tamil Nadu) ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ.

    ಪ್ರಭು (29) ಮೃತ ಯೋಧ. ಇವರು ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಸೇವೆ ಸಲ್ಲಿಸುತ್ತಿದ್ದರು. ಫೆ. 8ರಂದು ಸಾರ್ವಜನಿಕ ಟ್ಯಾಂಕ್‍ನಲ್ಲಿ ಬಟ್ಟೆ ಒಗೆಯುವ ವಿಚಾರದಲ್ಲಿ ಯೋಧ ಪ್ರಭು ಹಾಗೂ ಡಿಎಂಕೆ ಕೌನ್ಸಿಲರ್ ಚಿನ್ನಸ್ವಾಮಿ ನಡುವೆ ವಾಗ್ವಾದ ನಡೆದಿತ್ತು. ಈ ವಾಗ್ವಾದವೇ ಮಿತಿ ಮೀರಿದ್ದು, ಹೊಡೆದಾಟ ನಡೆದಿದೆ. ಈ ವೇಳೆ ಕೌನ್ಸಿಲರ್ ಹಾಗೂ ಆತನ ಕಡೆಯವರು ಯೋಧನ ಮೇಲೆ ಹಲ್ಲೆ ನಡೆಸಿದ್ದರು. ಅಷ್ಟೇ ಅಲ್ಲದೇ ಯೋಧನ ಮೇಲೆ ಮರದ ದಿಮ್ಮಿಗಳನ್ನು ಬಳಸಿ ಹಲ್ಲೆ ನಡೆಸಿದ್ದಾರೆ.

    ಇದರಿಂದಾಗಿ ಗಂಭೀರ ಗಾಯಗೊಂಡಿದ್ದ ಪ್ರಭು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗ ದಾಖಲಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ (ಮಂಗಳವಾರ) ಪ್ರಭು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಹಲ್ಲೆಯ ವೇಳೆ ಸಹೋದರ ಪ್ರಭಾಕರನ್ ಎನ್ನುವವರು ಇದ್ದು, ಅವರು ಗಾಯಗೊಂಡಿದ್ದರು.

    ಘಟನೆಗೆ ಸಂಬಂಧಿಸಿದಂತೆ ಫೆ. 9ರಂದು 6 ಜನರನ್ನು ಪೊಲೀಸರು ಬಂಧಿಸಿದ್ದರು. ಇಂದು (ಬುಧವಾರ) ಡಿಎಂಕೆ ಕೌನ್ಸಿಲರ್ ಸೇರಿದಂತೆ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕಸದ‌ ಬುಟ್ಟಿಯಲ್ಲಿ ನವಜಾತ ಶಿಶು ಪತ್ತೆ

    ಘಟನೆಗೆ ಸಂಬಂಧಿಸಿ ಆಡಳಿತಾರೂಢ ಡಿಎಂಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿ ರಾಜ್ಯ ಮುಖ್ಯಸ್ಥ ಅಣ್ಣಾಮಲೈ ಮಾತನಾಡಿ, ಸೇನಾ ಸಿಬ್ಬಂದಿಗೆ ಅವರ ಸ್ವಂತ ಊರಿನಲ್ಲಿ ಸುರಕ್ಷತೆ ಇಲ್ಲ. ಗೃಹ ಖಾತೆ ಹೊಂದಿರುವ ಮುಖ್ಯಮಂತ್ರಿಯನ್ನು ಜನರು ಗಮನಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಒಂದು ಗುಂಪು, ಒಬ್ಬ ವ್ಯಕ್ತಿಯಿಂದ ದೇಶ ಕಟ್ಟಲು ಸಾಧ್ಯವಿಲ್ಲ : ಮೋಹನ್ ಭಾಗವತ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರ್ತವ್ಯಕ್ಕೆ ರಜೆ ಹಾಕಿ ಊರಿಗೆ ಬಂದಿದ್ದ ಯೋಧ ಆತ್ಮಹತ್ಯೆ!

    ಕರ್ತವ್ಯಕ್ಕೆ ರಜೆ ಹಾಕಿ ಊರಿಗೆ ಬಂದಿದ್ದ ಯೋಧ ಆತ್ಮಹತ್ಯೆ!

    ಹಾಸನ: ಭಾರತೀಯ ಸೇನೆ (Indian Army) ಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಂಪನಗುಪ್ಪೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರೈತ ಹರೀಶ್ ಅವರ ದ್ವಿತಿಯ ಪುತ್ರ ಹೆಚ್.ಯೋಗೇಶ್ (28) ಆತ್ಮಹತ್ಯೆಗೆ ಶರಣಾದ ಯೋಧ (Soldier). ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಜ.4 ರಂದು ಕರ್ತವ್ಯಕ್ಕೆ ರಜೆ ಹಾಕಿ ಗ್ರಾಮಕ್ಕೆ ಬಂದಿದ್ದ ಯೋಗೇಶ್ ಅವರು ತಮ್ಮ ಪತ್ನಿ ದೀಕ್ಷಾ ಹಾಗೂ ಕುಟುಂಬಸ್ಥರೊಂದಿಗೆ ಒಂದು ತಿಂಗಳಿಂದ ಚೆನ್ನಾಗಿದ್ದರು.

    ಮಂಗಳವಾರ ಬೆಳಗ್ಗೆ 10 ಗಂಟೆ ಸಮಯವಾದರೂ ಯೋಗೇಶ್ ಮಲಗಿದ್ದ ರೂಂ ಬಾಗಿಲು ತೆರೆದಿರಲಿಲ್ಲ. ಮನೆಯವರು ಎಷ್ಟು ಕೂಗಿದರೂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡು ಬಾಗಿಲನ್ನು ಒಡೆದು ನೋಡಿದಾಗ ಯೋಗೇಶ್ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಕೂಡಲೇ ಕುಟುಂಬದವರು ಜಿಲ್ಲಾ ಆಸ್ಪತ್ರೆಗೆ ಕರೆ ತಂದಿದ್ದಾರೆ. ವೈದ್ಯರು ಪರೀಕ್ಷಿಸಿ ಯೋಧ ಯೋಗೀಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

    ಮೃತ ಯೋಧನ ಪಾರ್ಥೀವ ಶರೀರವನ್ನು ಮಂಗಳವಾರ ರಾತ್ರಿ ಹಂಪನಗುಪ್ಪೆ ಗ್ರಾಮಕ್ಕೆ ತಂದಿದ್ದು, ಗ್ರಾಮಸ್ಥರು ಮತ್ತು ಸಂಬಂಧಿಗಳ ಸಮ್ಮುಖದಲ್ಲಿ ಅಂತಿಮ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಹಿಳಾ ಸಂಘಟನೆ ಮೊರೆ ಹೋದ ಮಹಿಳೆಗೆ ಶಾಕ್- ನೆರವಿಗೆ ಬಂದವಳೇ ಸಂತ್ರಸ್ತೆ ಪತಿ ಜೊತೆ ಮದ್ವೆ!

    ಯೋಗೇಶ್ ಅವರು 2011 ರಲ್ಲಿ ಹಾಸನದಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಿ ಸೇನೆಗೆ ಸೇರ್ಪಡೆಯಾಗಿದ್ದರು. ಕಳೆದ ಎರಡು ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮಕ್ಕಳಿರಲಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಗಳ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದನ್ನು ಖಂಡಿಸಿದ್ದಕ್ಕೆ ಯೋಧನ ಹತ್ಯೆ

    ಮಗಳ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದನ್ನು ಖಂಡಿಸಿದ್ದಕ್ಕೆ ಯೋಧನ ಹತ್ಯೆ

    ಗಾಂಧಿನಗರ: ತನ್ನ ಮಗಳ ಅಶ್ಲೀಲ ವೀಡಿಯೋವನ್ನು (Obscene Video) ಪ್ರಸಾರ ಮಾಡಿದ್ದನ್ನು ವಿರೋಧಿಸಿದ ಗಡಿ ಭದ್ರತಾ ಪಡೆ ಸಿಬ್ಬಂದಿಯನ್ನು (BSF Jawan) ಥಳಿಸಿ ಕೊಂದಿರುವ ಘಟನೆ ಗುಜರಾತ್‌ನ (Gujarat) ನಾಡಿಯಾಡ್‌ನಲ್ಲಿ ನಡೆದಿದೆ.

    ಚಕ್ಲಾಸಿ ಗ್ರಾಮದಲ್ಲಿ 15 ವರ್ಷದ ಹುಡುಗ (Boy) ಬಾಲಕಿಯ (Girl) ಅಶ್ಲೀಲ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದ. ಇದಕ್ಕೆ ಬಾಲಕಿಯ ತಂದೆ ಯೋಧ ಮೆಲ್ಜಿಭಾಯಿ ವಘೇಲಾ ಶನಿವಾರ ಬಾಲಕನ ಮನೆಗೆ ತೆರಳಿ ಹುಡುಗನ ನಡೆಯನ್ನು ಖಂಡಿಸಿದ್ದಾರೆ. ಈ ವೇಳೆ ಹುಡುಗನ ಮನೆಯವರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

    ವರದಿಗಳ ಪ್ರಕಾರ, ಹುಡುಗ ಹಾಗೂ ಬಾಲಕಿ ಒಂದೇ ಶಾಲೆಯಲ್ಲಿ ಓದುತ್ತಿದ್ದು, ಇಬ್ಬರೂ ಸಂಬಂಧವನ್ನು ಹೊಂದಿದ್ದರು. ಆದರೆ ತನ್ನ ಮಗಳ ಅಶ್ಲೀಲ ವೀಡಿಯೋವನ್ನು ಪೋಸ್ಟ್ ಮಾಡಿದ್ದಕ್ಕೆ ಬಿಎಸ್‌ಎಫ್ ಜವಾನ ತನ್ನ ಕುಟುಂಬದೊಂದಿಗೆ ಹುಡುಗನ ಮನೆಗೆ ಮಾತನಾಡಲು ತೆರಳಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾಟಿಪಳ್ಳದಲ್ಲಿ ಜಲೀಲ್ ಕೊಲೆ ಪ್ರಕರಣ- ಓರ್ವ ಪರಾರಿ, ಮೂವರು ಆರೋಪಿಗಳ ಬಂಧನ

    CRIME

    ಶನಿವಾರ ರಾತ್ರಿ ಯೋಧ ತನ್ನ ಪತ್ನಿ, ಇಬ್ಬರು ಪುತ್ರರು ಹಾಗೂ ಸೋದರಳಿಯನೊಂದಿಗೆ ಯುವಕನ ಮನೆಗೆ ತೆರಳಿದ್ದರು. ಆದರೆ ಹುಡುಗನ ಕುಟುಂಬದವರು ಅವರನ್ನು ನಿಂದಿಸಲು ಪ್ರಾರಂಭಿಸಿದ್ದಾರೆ. ಇದನ್ನು ವಿರೋಧಿಸಿದಾಗ ಹುಡುಗನ ಮನೆಯವರು ಯೋಧನ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 7 ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೊರೊನಾ ಭೀತಿಗೆ ಶಿಕ್ಷಣ ಇಲಾಖೆ ಅಲರ್ಟ್- ಶಾಲಾ-ಕಾಲೇಜುಗಳಲ್ಲಿ ಕೆಲ ನಿಯಮ ಜಾರಿಗೆ ಚಿಂತನೆ

    Live Tv
    [brid partner=56869869 player=32851 video=960834 autoplay=true]