Tag: ಯೋಧ ಗುರು

  • ಹುತಾತ್ಮ ಯೋಧ ಗುರು ಕುಟುಂಬದಲ್ಲಿ ಬಗೆಹರಿಯದ ಕಲಹ

    ಹುತಾತ್ಮ ಯೋಧ ಗುರು ಕುಟುಂಬದಲ್ಲಿ ಬಗೆಹರಿಯದ ಕಲಹ

    – ಸಮಾಧಿಗೆ ಪತ್ನಿ, ಪೋಷಕರಿಂದ ಪ್ರತ್ಯೇಕ ಪೂಜೆ

    ಮಂಡ್ಯ: ಪುಲ್ವಾಮಾ ದಾಳಿ ನಡೆದು ನಾಳೆಗೆ ಎರಡು ವರ್ಷಗಳು ಕಳೆಯುತ್ತಿವೆ. ಈ ದಾಳಿಯಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಗುಡಿಗೆರೆಯ ಯೋಧ ಗುರು ಅವರು ಸಹ ಹುತಾತ್ಮರಾಗಿದ್ದರು. ಈ ಕಹಿ ಘಟನೆಯನ್ನು ಇಡೀ ದೇಶ ಇಂದಿಗೂ ಸಹ ಮರೆತಿಲ್ಲ.

    ಗುರು ಅವರು ಹುತಾತ್ಮರಾದ ಬಳಿಕ, ಗುರು ಅವರ ಕುಟುಂಬಕ್ಕೆ ಸರ್ಕಾರಗಳು, ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗದಿಂದ ಅಪಾರ ಪ್ರಮಾಣದ ಹಣ ಬರಿದು ಬಂದಿದೆ. ಆ ಹಣ ಬಂದಿದ್ದೇ ಏನೋ ಗೊತ್ತಿಲ್ಲ, ಗುರು ಕುಟುಂಬದಲ್ಲಿ ಅಂದು ನಿರ್ಮಾಣವಾದ ಕಲಹ ಇಂದಿಗೂ ಸಹ ನಿಂತಿಲ್ಲ. ಕಳೆದ ವರ್ಷ ಗುರು ಪತ್ನಿ ಹಾಗೂ ಅಪ್ಪ-ಅಮ್ಮ, ತಮ್ಮ ಪ್ರತ್ಯೇಕವಾಗಿ ಗುರು ಸಮಾಧಿಗೆ ಪೂಜೆ ಸಲ್ಲಿಸಿದ್ದರು.

    ಈ ವೇಳೆ ಗುರು ಪತ್ನಿ ತನ್ನ ಅತ್ತೆ-ಮಾವ ಹಾಗೂ ಮೈದುನನ ಬಗ್ಗೆ ಆರೋಪಗಳನ್ನು ಮಾಡಿದ್ದರೆ, ಗುರುವಿನ ತಾಯಿಯೂ ಸಹ ಸೊಸೆಯ ಬಗ್ಗೆ ಕೆಲ ಆರೋಪಗಳನ್ನು ಮಾಡುವ ಮೂಲಕ ಗುರು ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಪುಷ್ಟಿ ನೀಡಿದ್ದರು. ಇದೀಗ ನಾಳೆಯೂ ಸಹ ಗುರುವಿನ ಸಮಾಧಿಗೆ, ಗುರು ಹೆಂಡತಿ ಹಾಗೂ ಪೋಷಕರು ಪ್ರತ್ಯೇಕವಾಗಿ ಪೂಜೆ ಸಲ್ಲಿಸಲಿದ್ದಾರೆ. ಈ ಮೂಲಕ ಹುತಾತ್ಮ ಯೋಧ ಗುರು ಅವರ ಕುಟುಂಬದಲ್ಲಿ ಕಲಹ ನಿಂತಿಲ್ಲ ಎಂದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

  • ಕುಟುಂಬದಲ್ಲಿ ಹಣ ಹಂಚಿಕೆ ಕುರಿತು ಜಗಳ ಆಗಿರೋದು ಸತ್ಯ: ಗುರು ಪತ್ನಿ ಕಲಾವತಿ

    ಕುಟುಂಬದಲ್ಲಿ ಹಣ ಹಂಚಿಕೆ ಕುರಿತು ಜಗಳ ಆಗಿರೋದು ಸತ್ಯ: ಗುರು ಪತ್ನಿ ಕಲಾವತಿ

    ಮಂಡ್ಯ: ಪುಲ್ವಾಮ ಉಗ್ರರ ದಾಳಿಯಿಂದ ಹುತಾತ್ಮರಾಗಿರುವ ಮಂಡ್ಯದ ಯೋಧ ಗುರು ಅವರ ಕುಟಂಬದಲ್ಲಿ ಹಣದ ವಿಚಾರದಲ್ಲಿ ಕಲಹ ಉಂಟಾಗಿದ್ದು ಸತ್ಯ ಎಂದು ತಿಳಿದು ಬಂದಿದೆ. ಇಷ್ಟು ದಿನಗಳ ಕಾಲ ಗುರು ವೀರ ಮರಣಹೊಂದಿದ ಬಳಿಕ ಬಂದ ಪರಿಹಾರ ಹಣದ ಹಂಚಿಕೆ ವಿಚಾರದಲ್ಲಿ ಗುರು ತಾಯಿ ಮತ್ತು ಪತ್ನಿ ನಡುವೆ ಜಗಳ ಉಂಟಾಗಿದೆ ಎಂದು ಹೇಳಲಾಗುತ್ತಿತ್ತು. ಈ ವಿಚಾರ ಸತ್ಯ ಎಂದು ಗುರು ಪತ್ನಿ ಕಲಾವತಿ ತಿಳಿಸಿದ್ದಾರೆ.

    ಇಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿರುವ ಗುರು ಅವರ ಸಮಾಧಿಯ ಬಳಿ ಕಲಾವತಿ ಅವರು ಗಂಡನ ಒಂದು ವರ್ಷದ ಪುಣ್ಯ ಸ್ಮರಣೆ ಮಾಡಿದರು. ತಮ್ಮ ತವರು ಮನೆಯ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆ ಗುರು ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಕಲಾವತಿ, ಹಣದ ವಿಚಾರಕ್ಕಾಗಿ ಮನೆಯಲ್ಲಿ ಜಗಳ ಆಗಿದ್ದು ನಿಜ. ನನ್ನ ಗಂಡ ಸತ್ತಾಗ ಸಾರ್ವಜನಿಕರು ನನ್ನ ಅಕೌಂಟ್‍ಗೆ ಹಣ ಹಾಕಿದ್ದರು. ಆ ವೇಳೆ ನನ್ನ ಅತ್ತೆ ಹಾಗೂ ಮನೆಯವರು ಹಣದ ಲೆಕ್ಕ ಕೊಡು ಎಷ್ಟು ಬಂದಿದೆ ಎಂದು ಕೇಳ್ತಾ ಇದ್ದರು.

    ನಗದು ಹಣ ಬಂದ ವಿಚಾರದಲ್ಲಿ ಆ ಹಣ ಎಲ್ಲಿ ಈ ಹಣ ಎಲ್ಲಿ ಎಂದು ಅನುಮಾನ ಪಟ್ಟು ನನಗೆ ಬೈಯ್ಯುತ್ತಾ ಇದ್ದರು. ಎಲ್ಲವನ್ನೂ ನಾನು ಅವರಿಗೆ ಕೊಟ್ಟಿದ್ದೆ. ನಂತರ ಅವರನ್ನು ನನ್ನ ತಂದೆ ಎಷ್ಟು ಬಂದಿದೆ ಎಂದು ಕೇಳಿದ್ದರು. ಮೊದಲು 13 ಲಕ್ಷ ಬಂದಿದೆ ಅಂದ್ರು ನಂತರ 33 ಲಕ್ಷ ಎಂದಿದ್ರು. ಆಗ ನಮ್ಮ ತಂದೆ ಅಷ್ಟೇನಾ ಎಂದು ಅವರನ್ನು ಕೇಳಿದ್ರು. ಇಷ್ಟಕ್ಕೆ ನಿಮಗೆ ಎಲ್ಲಾ ನಾವು ಏಕೆ ಲೆಕ್ಕಾ ಕೊಡಬೇಕು ಎಂದು ಅತ್ತೆ ಮಾವ ಹಾಗೂ ಮೈದುನಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು. ಅಲ್ಲದೇ ಮನೆಯಲ್ಲಿ ನನ್ನ ನಿಂದನೆ ಮಾಡ್ತಾ ಇದ್ದರು. ನಂತರ ನಾನು ನನ್ನ ಗಂಡನ ಹಾಗೂ ನನ್ನ ವಸ್ತುಗಳನ್ನು ತೆಗೆದುಕೊಂಡು ಬಂದೆ.

    ಮನೆಯಿಂದ ನಾನು ಯಾವ ಹಣವನ್ನು ತೆಗೆದುಕೊಂಡು ಬಂದಿಲ್ಲ. ಸರ್ಕಾರ ಕೊಟ್ಟ ಹಣ ಹಾಗೂ ಸಾರ್ವಜನಿಕರು ನನ್ನ ಅಕೌಂಟ್‍ಗೆ ಬಂದ ಹಣ ಮಾತ್ರ ನನ್ನ ಹತ್ತಿರ ಇದೆ. ಬೇರೆ ಯಾವ ಹಣವು ನನ್ನ ಹತ್ತಿರ ಇಲ್ಲ. ದಯವಿಟ್ಟು ನನ್ನ ಮೇಲೆ ಸುಮ್ಮ ಸುಮ್ಮನೆ ಆರೋಪ ಬೇಡಿ ಎಂದು ಕಲಾವತಿ ಕೈ ಮುಗಿದರು.

    ಅಲ್ಲದೇ ನನ್ನ ಗಂಡ ಸಾವನ್ನಪ್ಪಿದ ಬಳಿಕ ಗುರು ಅವರ ತಮ್ಮನೊಂದಿಗೆ ಮದುವೆ ಮಾಡಲು ಪ್ರಸ್ತಾಪ ಮಾಡಿದ್ದರು. ಈ ರೀತಿ ಅವರಿಗೆ ಯೋಚನೆ ಮಾಡಲು ಮನಸ್ಸು ಹೇಗೆ ಬಂತು ನನಗೆ ಗೊತ್ತಿಲ್ಲ. ನನ್ನ ಗಂಡ ಸತ್ತಿಲ್ಲ, ಈಗಲೂ ನನ್ನ ಜೊತೆಗಿದ್ದಾರೆ. ನನ್ನ ಪತಿ ಈಗಲೂ ಸೈನ್ಯದಲ್ಲಿ ಇದ್ದಾರೆ ಎಂದು ನಾನು ಭಾವಿಸಿದ್ದೇನೆ ಎಂದು ಕಲಾವತಿ ಕಣ್ಣೀರಿಟ್ಟರು.

  • ಭಾರತೀಯರನ್ನು ಕಂಡ್ರೆ ನಡುಗಬೇಕು, ಕಣ್ಣೆತ್ತಿಯೂ ನೋಡ್ಬಾರ್ದು- ಯೋಧ ಗುರು ತಂದೆ

    ಭಾರತೀಯರನ್ನು ಕಂಡ್ರೆ ನಡುಗಬೇಕು, ಕಣ್ಣೆತ್ತಿಯೂ ನೋಡ್ಬಾರ್ದು- ಯೋಧ ಗುರು ತಂದೆ

    ಮಂಡ್ಯ: ನಮ್ಮ ಭಾರತೀಯ ಮಗನನ್ನು ಬಲಿ ತೆಗೆದುಕೊಂಡವರು ಭೂಮಿಯ ಮೇಲೆ ಉಳಿಯಬಾರದು. ನಮ್ಮ ಭಾರತದ ಮೇಲೆ ಮತ್ತೆ ಯಾವತ್ತೂ ಉಗ್ರರು ದಾಳಿ ಮಾಡಲು ಮುಂದಾಗಬಾರದು ಎಂದು ಹುತಾತ್ಮ ಗುರು ಅವರ ತಂದೆ ಹೊನ್ನಯ್ಯ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲು ದಾಳಿ ನಡೆಸಿದ ಭಾರತೀಯ ಸೈನ್ಯಕ್ಕೆ ಧನ್ಯವಾದ ಅರ್ಪಿಸಿದರು. ಬಳಿಕ ನಿಜವಾದ ಗಂಡಸರೇ ಆದರೆ ಭಾರತ ದೇಶಕ್ಕೆ ಬರಲಿ. ಹೇಡಿಗಳ ರೀತಿ ಬಚ್ಚಿಟ್ಟುಕೊಂಡಿದ್ದಾರೆ. ಅವರ ಮೇಲೆ ಇನ್ನೂ ದಾಳಿ ನಡೆಸಬೇಕು, ನಮ್ಮನ್ನ ಕಣ್ಣೆತ್ತಿ ಕೂಡ ನೋಡಬಾರದು. ಆ ರೀತಿ ಮಾಡಬೇಕು. ನಮ್ಮ ದೇಶದ ಜನರನ್ನ ಕಂಡರೆ ನಡುಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.

    ನಮಗೆ ಆಗಿರುವ ಅನ್ಯಾಯ ಮತ್ತೆ ಯಾರಿಗೂ ಆಗಬಾರದು. ಭೂಮಿಯ ಮೇಲೆ ಉಗ್ರರನ್ನು ಬೇರು ಸಮೇತ ಕಿತ್ತು ಹಾಕಬೇಕು. ಉಗ್ರರು ಎಷ್ಟು ಜನರಿದ್ದರೆ ಅವರನ್ನು ಹುಡುಕಿ ಹುಡುಕಿ ಕೊಲ್ಲಬೇಕು. ಇನ್ನು ಉಳಿದವರು ಮುಂದೆ ಭಾರತದ ಮೇಲೆ ಕೈ ಎತ್ತಬಾರದು. ಭಾರತದ ಜನರನ್ನು ಕಂಡರೆ ಭಯ ಪಡಬೇಕು ಎಂದು ಅವರು ತಿಳಿಸಿದ್ದಾರೆ.

    ಭಾರತದವರು ಏನು ಮಾಡುತ್ತಾರೆ ಎನ್ನುವ ಭಯದಲ್ಲಿಯೇ ಉಗ್ರರು ಇರಬೇಕು. ನಮ್ಮವರನ್ನು ಅವರು ಮೋಸದಿಂದ ಕೊಲೆ ಮಾಡಿದ್ದಾರೆ. ಈಗ ಬಿಟ್ಟರೆ ಮತ್ತೆ ಅವರು ಸಿಗುವುದಿಲ್ಲ. ನಮ್ಮವರು ಉಗ್ರರನ್ನು ಮೋಸದಿಂದ ಕೊಲೆ ಮಾಡುತ್ತಿಲ್ಲ. ರಿಯಲ್ ಆಗಿ ಕೊಲೆ ಮಾಡುತ್ತಿದ್ದೀವಿ ಎಂದರು.

    https://www.youtube.com/watch?v=G0QMmWYgOEU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತೀಯ ಸೈನ್ಯಕ್ಕೆ ಸೆಲ್ಯೂಟ್ ಹೊಡೆದು ಕಣ್ಣೀರಿಟ್ಟ ಕಲಾವತಿ

    ಭಾರತೀಯ ಸೈನ್ಯಕ್ಕೆ ಸೆಲ್ಯೂಟ್ ಹೊಡೆದು ಕಣ್ಣೀರಿಟ್ಟ ಕಲಾವತಿ

    ಮಂಡ್ಯ: ಭಾರತೀಯ ವಾಯುಸೇನೆಯು ನಮ್ಮ ಯೋಧರನ್ನು ಮೋಸದಲ್ಲಿ ಕೊಂದ ಉಗ್ರರ ಕೇಂದ್ರಗಳನ್ನು ಧ್ವಂಸ ಮಾಡಿದ ಭಾರತೀಯ ಸೈನ್ಯಕ್ಕೆ ಹುತಾತ್ಮ ಗುರು ಪತ್ನಿ ಕಲಾವತಿ ಅವರು ಸೆಲ್ಯೂಟ್ ಹೊಡೆದಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರು ಪತ್ನಿ ಕಲಾವತಿ, ಮೊದಲಿಗೆ ನಾನು ಭಾರತೀಯ ಸೈನ್ಯಕ್ಕೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಸೆಲ್ಯೂಟ್ ಮಾಡಿದ್ದಾರೆ. ಉಗ್ರರು ಎಲ್ಲೆಲ್ಲಿ ಅಡಗಿದ್ದಾರೆ ತಿಳಿದುಕೊಂಡು ಅವರನ್ನು ಬಿಡಬಾರದು. ನಮ್ಮ ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 21 ನಿಮಿಷದಲ್ಲಿ 3 ಉಗ್ರರ ತರಬೇತಿ ಶಿಬಿರಗಳು ಮಟಾಷ್

    ನಮ್ಮ ಸೈನಿಕರಿಗೆ ಇಷ್ಟನ್ನು ಧೈರ್ಯ, ಶಕ್ತಿ ಕೊಡಲಿ. ಜೊತೆಗೆ ಅವರಿಗೆ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ. ಸೈನಿಕರೆಲ್ಲರೂ ಚೆನ್ನಾಗಿರಲಿ. ನಮ್ಮ ಸೈನಿಕರ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಅವರಿಗೆ ಗೌರವ ಕೊಡುತ್ತೇನೆ. ನಾನು ಇಂದು ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಪತಿಯನ್ನು ನೆನಪಿಸಿಕೊಂಡು ಕಣ್ಣೀರು ಹಾಕುತ್ತಿದ್ದಾರೆ.

    ಇಂದು ಹುತಾತ್ಮ ಗುರು ಅವರು ಹನ್ನೊಂದು ದಿನದ ತಿಥಿ ಕಾರ್ಯ ನಡೆಯಲಿದ್ದು, ಈಗಾಗಲೇ ಊಟ, ಶಾಮಿಯಾನ, ಸಮಾಧಿಯ ಅಲಂಕಾರದ ಕಾರ್ಯವೂ ನಡೆಯುತ್ತಿದೆ. ಯೋಧ ಗುರು ಅವರ ತಿಥಿ ಕಾರ್ಯದ ಸಂಪೂರ್ಣ ಜವಬ್ದಾರಿಯನ್ನು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ವಹಿಸಿಕೊಂಡಿದ್ದಾರೆ.

    https://www.youtube.com/watch?v=6FFjguZBwiI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದು ಹುತಾತ್ಮ ಯೋಧ ಗುರು ತಿಥಿ ಕಾರ್ಯ – ಇಂದೇ ಪಾಕ್ ಉಗ್ರರು ಮಟಾಷ್

    ಇಂದು ಹುತಾತ್ಮ ಯೋಧ ಗುರು ತಿಥಿ ಕಾರ್ಯ – ಇಂದೇ ಪಾಕ್ ಉಗ್ರರು ಮಟಾಷ್

    ಮಂಡ್ಯ: ಇಂದು ಹುತಾತ್ಮ ಯೋಧ ಗುರು ಅವರ ಹನ್ನೊಂದನೆ ದಿನದ ತಿಥಿ ಕಾರ್ಯವಿದ್ದು, ಗುರು ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಕಾರ್ಯ ನಡೆಯುತ್ತಿದೆ.

    ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಯೋಧ ಗುರು ಅವರ ತಿಥಿ ಕಾರ್ಯಕ್ಕೆ ಸಾವಿರಾರು ಜನರು ಆಗಮಿಸಿ ನಮನ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುರು ಅಂತ್ಯ ಸಂಸ್ಕಾರ ಮಾಡಿದ ಜಾಗದಲ್ಲಿ ಜೆಸಿಬಿ, ಬುಲ್ಡೋಜರ್‍ನಿಂದ ಜಾಗ ಸಮತಟ್ಟು ಮಾಡಿಸಿ ವ್ಯವಸ್ಥೆ ಮಾಡಲಾಗಿದೆ. ಗುರು ಅವರ ತಿಥಿ ಕಾರ್ಯದ ಸಂಪೂರ್ಣ ಜವಬ್ದಾರಿಯನ್ನು ಸಾರಿಗೆ ಸಚಿವ ಡಿಸಿ.ತಮ್ಮಣ್ಣ ಹೊತ್ತಿದ್ದಾರೆ.

    ಹುತಾತ್ಮ ಯೋಧ ಗುರು ಅವರ ಸಮಾಧಿ ಸ್ಥಳದಲ್ಲಿ ಶಾಮಿಯಾನ ಹಾಕಲಾಗಿದೆ. ಒಂದು ಬಾರಿಗೆ ಒಂದೂವರೆ ಸಾವಿರ ಜನ ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹುತಾತ್ಮ ಗುರುವಿನ ಸಮಾಧಿ ಪಕ್ಕದಲ್ಲೆ ಪುಟ್ಟದಾದ ವೇದಿಕೆಯನ್ನು ನಿರ್ಮಿಸಲಾಗಿದೆ. ಈ ವೇದಿಕೆಯಲ್ಲಿ ಮಳವಳ್ಳಿ ಮಹಾದೇವ ಸ್ವಾಮಿ ಅವರ ತಂಡದಿಂದ ಭಜನೆಯನ್ನು ಮಾಡಲಾಗುತ್ತದೆ.

    ಹುತಾತ್ಮ ಗುರು ಅವರ ಸಮಾಧಿಯನ್ನ ಅಭಿಮಾನಿಗಳು ಹೂಗಳಿಂದ ಅಲಂಕಾರ ಮಾಡಿದ್ದು, ಸಮಾಧಿ ಸ್ಥಳದಲ್ಲಿ 4/4 ಅಡಿ ಅಳತೆಯ ಭಾವಚಿತ್ರ ಇಡಲೂ ವ್ಯವಸ್ಥೆ ಮಾಡಲಾಗಿದೆ. ಅನ್ನ ಸಾಂಬಾರ್, ಸಿಹಿ ಬೂಂದಿ, ಪಾಯಸ, ಮಸಾಲೆ ವಡೆ, ಜಾಂಗೀರು, ಅವರೇಕಾಳಿನ ಕೂಟು, ಮೊಸರು, ಹಪ್ಪಳ ಉಪ್ಪಿನ ಕಾಯಿ, ತಿಥಿ ಊಟಕ್ಕೆ ಅಡುಗೆ ತಯಾರಿ ಮಾಡಲಾಗಿದೆ.

    ತಿಥಿ ಕಾರ್ಯದ ಊಟದ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾರ್ಯ ಸಂಪೂರ್ಣವಾಗಿ ಡಿ.ಸಿ.ತಮ್ಮಣ್ಣ ಅವರ ನೇತೃತ್ವದಲ್ಲಿ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧನ ಕುಟುಂಬಕ್ಕೆ 1 ದಿನದ ದುಡಿಮೆ ನೀಡಿದ್ರು ಗೋಬಿ ಮಂಚೂರಿ ವ್ಯಾಪಾರಿ!

    ಹುತಾತ್ಮ ಯೋಧನ ಕುಟುಂಬಕ್ಕೆ 1 ದಿನದ ದುಡಿಮೆ ನೀಡಿದ್ರು ಗೋಬಿ ಮಂಚೂರಿ ವ್ಯಾಪಾರಿ!

    ಮಂಡ್ಯ: ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ವೀರ ಯೋಧ ಗುರು ಕುಟುಂಬಕ್ಕೆ ಗೋಬಿ ಮಂಚೂರಿ ವ್ಯಾಪಾರಿಯೊಬ್ಬರು ತಮ್ಮ ಒಂದು ದಿನದ ದುಡಿಮೆಯನ್ನು ನೀಡಿ ಗೌರವ ಸಲ್ಲಿಸಿದ್ದಾರೆ.

    ಮಂಡ್ಯದ ಹೊಳಲು ವೃತ್ತದಲ್ಲಿರುವ ವ್ಯಾಪಾರಿ ಉಪ್ಪಿಗೋವಿಂದ ಅವರು ಒಂದು ದಿನದ ದುಡಿಮೆಯನ್ನು ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಗುಡಿಗೆರೆ ಯೋದ ಗುರು.ಎಚ್. ಮಡಿವಾಳ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಂಗಳವಾರ ವ್ಯಾಪಾರ ಆರಂಭಿಸಿದ್ದರು. ಆಹಾರ ಸೇವಿಸಿದ ಯಾರ ಬಳಿಯೂ ಹಣ ಪಡೆಯದೇ ಯೋಧರ ನೆರವಿಗೆ ನಿಮ್ಮ ಕೈಲಾದ ಹಣವನ್ನು ಹುಂಡಿಗೆ ಹಾಕಿ ಎಂದು ಮನವಿ ಮಾಡಿದ್ದರು.

    ಆಹಾರ ಸೇವಿಸಿದವರು ನೀಡಿದ ಹಣ ಸುಮಾರು 10 ಸಾವಿರ ರೂ. ಸಂಗ್ರಹವಾಗಿತ್ತು. ಸಂಗ್ರಹವಾದ ಹಣವನ್ನು ಬುಧವಾರ ಉಪ್ಪಿಗೋವಿಂದ ಅವರು ವೀರ ಯೋಧ ಗುರು ಕುಟುಂಬಕ್ಕೆ ನೀಡಿದ್ದಾರೆ.

    ಇಂದು ಯೋಧರು ತಮ್ಮ ಮಕ್ಕಳು, ಕುಟುಂಬದವರಿಂದ ದೂರ ಇದ್ದು ದೇಶ ಕಾಯುತ್ತಿದ್ದಾರೆ. ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ನಡೆಸುತ್ತಿದ್ದಾರೆ. ಆದ್ದರಿಂದ ಒಂದು ದಿನ ಸಂಪಾದನೆ ಮಾಡಿದ ಹಣವನ್ನು ವೀರ ಯೋಧ ಗುರು ಮೃತರ ಕುಟುಂಬಕ್ಕೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

    ಸರ್ಕಾರ ಎಷ್ಟೇ ಹಣ ಕೊಟ್ಟರು, ಸಾರ್ವಜನಿಕರು ತಮ್ಮ ಕೈಲಾದ ಸಹಾಯ ಮಾಡುವುದರಿಂದ ಮುಂದೆ ಅವರ ಮಕ್ಕಳನ್ನು ಯೋಧರಾಗಿ ಮಾಡಲು ಬಯಸುತ್ತಾರೆ. ಇದನ್ನು ನನ್ನ ಆತ್ಮ ತೃಪ್ತಿಗಾಗಿ ಮಾಡುತ್ತಿದ್ದೇನೆ ಎಂದು ಉಪ್ಪಿಗೋವಿಂದ ಹೇಳಿದರು.

    https://www.youtube.com/watch?v=vw7lk_ueU98

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೇನಾ ಐಡಿ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ- ಗುರು ಪತ್ನಿ

    ಸೇನಾ ಐಡಿ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ- ಗುರು ಪತ್ನಿ

    – ಭಾರತೀಯ ಸೇನೆಗೆ ಧನ್ಯವಾದ ಸಲ್ಲಿಕೆ

    ಮಂಡ್ಯ: ನನ್ನ ಪತಿಯ ಸಾವಿಗೆ ಕಾರಣನಾದ ಮಾಸ್ಟರ್ ಮೈಂಡ್ ಉಗ್ರನ ಹತ್ಯೆ ಖುಷಿ ತಂದಿದೆ ಎಂದು ಗುಡಿಗೆರೆ ಕಾಲೋನಿಯಲ್ಲಿ ಹುತಾತ್ಮ ಯೋಧ ಗುರು ಪತ್ನಿ ಕಲಾವತಿ ಸೇನೆಗೆ ಧನ್ಯವಾದ ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕಲಾವತಿ ಅವರು, ಉಗ್ರನ ಹತ್ಯೆಗೆ ಖುಷಿ ಪಡುತ್ತೇನೆ. ಈ ದೇಶದಲ್ಲಿ ಉಗ್ರ ಎಂಬ ಪದ ಇತಿಹಾಸ ಸೇರಬೇಕು. ಉಗ್ರರು ಇದ್ದರು ಎಂಬುದಷ್ಟೇ ಮಾತನಾಡಬೇಕು. ಆದರೆ ಉಗ್ರರು ಇನ್ನೂ ಇದ್ದಾರೆ ಎಂಬ ಪದ ಇರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾವು ಕೆಆರ್‍ಎಸ್‍ಗೆ ಹೋಗಿದ್ದೇವು. ಅಲ್ಲಿ ನಾನು ಕನ್ನಂಬಾಡಿ ಕಟ್ಟೆಯ ಮೇಲೆ ನೋಡಬೇಕು ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ಕೇಳಿದ್ದೆ. ಅದಕ್ಕೆ ನನ್ನ ಪತಿ ಆ ರೀತಿಯೆಲ್ಲ ಹೋಗಬಾರದು ಎಂದು ಹೇಳಿದ್ದರು. ಈ ವೇಳೆ ನಮ್ಮ ಜೊತೆ ಬಂದಿದ್ದ ಸ್ನೇಹಿತರು ನಿಮ್ಮ ಐಡಿ ಕಾರ್ಡ್ ತೋರಿಸಿ ಕರೆದುಕೊಂಡು ಹೋಗಿ ಎಂದು ಕೇಳಿದ್ದರು. ಆಗ ನನ್ನ ಪತಿ ಸೇನೆಯ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಹೇಳಿದ್ದರು. ನಾನು ದೇವಸ್ಥಾನಕ್ಕೆ ಹೋದಾಗ ತುಂಬಾ ಜನರಿದ್ದರೂ, ಅಲ್ಲೂ ಕಾರ್ಡ್ ತೋರಿಸುತ್ತಿರಲಿಲ್ಲ. ಲೈನಿನಲ್ಲೇ ನಿಂತು ಹೋಗುತ್ತಿದ್ದರು. ಅವರು ಕುಟುಂಬದವರಿಗಾಗಿ ಸೇನೆ ಐಡಿ ಕಾರ್ಡನ್ನು ದುರುಪಯೋಗ ಮಾಡಿಕೊಳ್ಳುತ್ತಿರಲಿಲ್ಲ ಎಂದು ಪತಿಯ ಕರ್ತವ್ಯ ನಿಷ್ಠೆಯ ಬಗ್ಗೆ ಹೇಳಿದ್ದಾರೆ.

    ದೇಶದ ಜನ ಕೇಳುತ್ತಿದ್ದಾರೆ ಎಂದು ಸೈನಿಕರು ಈಗಷ್ಟೇ ಉಗ್ರರ ವಿರುದ್ಧ ದಾಳಿ ಮಾಡಿ ಸುಮ್ಮನಾಗಬಾರದು. ಉಗ್ರರ ಮೇಲಿನ ದಾಳಿ ಅವರ ನಾಶವಾಗುವವರೆಗೂ ನಿರಂತರವಾಗಿರಬೇಕು. ಉಗ್ರರ ವಿರುದ್ಧ ಹೋರಾಡುತ್ತಿರುವ ಯೋಧರು ಸುರಕ್ಷಿತವಾಗಿರಲಿ. ನನ್ನ ಪರಿಸ್ಥಿತಿ ಅವರ ಮನೆಯವರಿಗೆ ಬಾರದಿರಲಿ. ಸರ್ಕಾರ ನಮ್ಮ ಸೈನಿಕರಿಗೆ ಹೆಚ್ಚಿನ ರಕ್ಷಣೆ ನೀಡಲಿ ಎಂದು ಹುತಾತ್ಮ ಯೋಧನ ಪತ್ನಿ ಕಲಾವತಿ ಹೇಳಿದರು.

    https://www.youtube.com/watch?v=5LubBl3CkXQ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಓದೋಕೆ ಸಹಾಯ ಮಾಡಿದ್ದು ಪ್ರಧಾನಿ ಮೋದಿ – ಪಾಕ್‍ಗೆ ಜೈ ಅಂದ ವಿದ್ಯಾರ್ಥಿಗಳು ಅರೆಸ್ಟ್

    ಓದೋಕೆ ಸಹಾಯ ಮಾಡಿದ್ದು ಪ್ರಧಾನಿ ಮೋದಿ – ಪಾಕ್‍ಗೆ ಜೈ ಅಂದ ವಿದ್ಯಾರ್ಥಿಗಳು ಅರೆಸ್ಟ್

    ಬೆಂಗಳೂರು: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭೀಕರ ಮಾನವ ಬಾಂಬ್ ಸ್ಫೋಟದಲ್ಲಿ ವೀರ ಯೋಧರು ಮರಣ ಹೊಂದಿದ್ದರು. ವೀರರನ್ನು ಕಳೆದುಕೊಂಡು ದೇಶ ಕಣ್ಣೀರಿಡುತ್ತಿದ್ದರೆ ಕೆಲ ಆಂತರಿಕ ಶತ್ರುಗಳು ಪಾಕಿಸ್ತಾನಕ್ಕೆ ಜೈ ಎಂದಿದ್ದರು. ಈಗ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ಆನೇಕಲ್ ನ ಸ್ಫೂರ್ತಿ ಕಾಲೇಜ್‍ನಲ್ಲಿ ಕಾಶ್ಮೀರ ಮೂಲದ ವಾಕರ್ ಅಹಮದ್, ಗೌಹಾರ್ ಮತ್ತು ಜಾಕೀರ್ ಮಕ್ ಬುಲ್ ಬಂಧಿತ ವಿದ್ಯಾರ್ಥಿಗಳು. ಇವರು ಬಂಗಾಳ ಮೂಲದ ವಿದ್ಯಾರ್ಥಿ ಕೌಶಿಕ್ ತನ್ನ ಫೇಸ್ ಬುಕ್ ನಲ್ಲಿ ಯೋಧರ ಸಾವು ಅನ್ಯಾಯವೆಂದು ಶತ್ರು ರಾಷ್ಟ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಕಾಶ್ಮೀರ ವಿದ್ಯಾರ್ಥಿಗಳಾದ ವಾಕರ್ ಅಹಮದ್, ಗೌಹಾರ್, ಮತ್ತು ಜಾಕೀರ್ ಮಕ್ ಬುಲ್ ಪಾಪಿ ಪಾಕಿಸ್ತಾನಕ್ಕೆ ಜೈ ಎಂದು ವೀರರ ಸಾವನ್ನು ಗೇಲಿ ಮಾಡಿದ್ದರು.

    ವಿದ್ಯಾರ್ಥಿಗಳು ಕುಡಿವ ನೀರು ಮತ್ತು ಬಳಸುವ ವಿದ್ಯುತ್ ಪಾಕಿಸ್ತಾನದ್ದು ಎಂದಿದ್ದರು. ಕಾಶ್ಮೀರ ಪಾಕಿಸ್ತಾನದಿಂದ, ಭಾರತದಿಂದಲ್ಲ ಅಂತ ಬರೆದುಕೊಂಡಿದ್ದರು. ಇದನ್ನ ಪ್ರಶ್ನಿಸಿದ ಬಂಗಾಳ ವಿದ್ಯಾರ್ಥಿ ಕೌಶಿಕ್ ನ ಮೇಲೆ ಮೂವರು ಸೇರಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪ್ರಿನ್ಸಿಪಾಲ್ ನೀಡಿದ ದೂರಿನ ಆಧಾರದ ಮೇಲೆ ಮೂವರು ದೇಶದ್ರೋಹಿ ವಿದ್ಯಾರ್ಥಿಗಳನ್ನ ಅರೆಸ್ಟ್ ಮಾಡಲಾಗಿದೆ.

    ನಾವು ನೀವು ಕಟ್ಟುವ ಟ್ಯಾಕ್ಸ್ ನಿಂದ ಜೀವನ ನಡೆಸುತ್ತಿದ್ದಾರೆ. ಕಾಶ್ಮೀರದಲ್ಲಿ ತಿನ್ನೋಕೆ ಅನ್ನ ಇಲ್ಲ. ಓದುವುದಕ್ಕೆ ಸಹಾಯ ಮಾಡಿ ಅಂತ ಪ್ರಧಾನ ಮಂತ್ರಿಗೆ ಲೆಟರ್ ಕೂಡ ಬರೆದು, ಬೆಂಗಳೂರಿನ ಸ್ಫೂರ್ತಿ ಕಾಲೇಜಿನಲ್ಲಿ ನರ್ಸಿಂಗ್ ಸೀಟ್ ಗಿಟ್ಟಿಸಿಕೊಂಡಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಹೇಳಿದ್ದಾರೆ.

    ಬೆಂಗಳೂರಲ್ಲೇ ಓದಿ, ಕೆಲಸ ಕೂಡ ಮಾಡಿದ್ದ ಕಾಶ್ಮೀರ ವಿದ್ಯಾರ್ಥಿ ಹಬೀದ್ ಮಲ್ಲಿಕ್, ನಿಜವಾದ ಸರ್ಜಿಕಲ್ ಸ್ಟ್ರೈಕ್ ಅಂದರೆ ಇದು ಅಂತ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದನು. ಯಾವಾಗ ಸಾರ್ವಜನಿಕರಿಂದ ಆಕ್ರೋಶ ಹೆಚ್ಚಾಯಿತೋ ಫೇಸ್ ಬುಕ್ ನಿಂದ ಡಿಲೀಟ್ ಮಾಡಿದ್ದನು. ಹಬೀದ್ ಮೇಲೆ ಸದ್ಯ ಎಚ್‍ಎಸ್‍ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

    ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ದೇಶದ್ರೋಹ, ದೇಶಕ್ಕೆ ಮಾರಕವಾಗುವ ಹೇಳಿಕೆ ಹಾಗೂ ಶಾಂತಿ ಕದಲುವ ಹಾಗೂ ರಾಷ್ಟ್ರ ನೀತಿಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧ ಗುರು ಮನೆಗೆ ಹೋಗಿ ತಂದೆಯನ್ನು ನೆನೆದು ಹರಿಪ್ರಿಯಾ ಕಣ್ಣೀರು

    ಯೋಧ ಗುರು ಮನೆಗೆ ಹೋಗಿ ತಂದೆಯನ್ನು ನೆನೆದು ಹರಿಪ್ರಿಯಾ ಕಣ್ಣೀರು

    ಮಂಡ್ಯ: ಹುತಾತ್ಮ ಗುರು ಅವರ ಮನೆಗೆ ರಾಜಕಾರಣಿಗಳು, ಅಧಿಕಾರಿಗಳು, ಸೇನೆ ಅವರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಈಗ ‘ಬೆಲ್ ಬಾಟಮ್’ ಚಿತ್ರ ತಂಡ ಗುರು ಅವರ ಮನೆಗೆ ಹೋಗಿ ಸಹಾಯ ಧನ ನೀಡಿ ಅವರ ತಾಯಿ, ಪತ್ನಿಗೆ ಸಾಂತ್ವನ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ನಟಿ ಹರಿಪ್ರಿಯಾ, ಸಿನಿಮಾ ಮಾಡುವಾಗ ಗಡಿಯನ್ನು ನೋಡಿದ್ದೇನೆ. ನಮ್ಮನ್ನು ಕಾಯುವವರು ಅಗಲಿದಾಗ ನೋವಾಗುತ್ತದೆ. ನಾವು ಉಗ್ರರಿಗೆ ಉತ್ತರ ಕೊಡಬೇಕು. ಮತ್ತೆ ಈ ರೀತಿ ಆಗಬಾರದು. ಅವರ ಪತ್ನಿಯನ್ನು ನನ್ನಿಂದ ನೋಡಲು ಆಗುತ್ತಿಲ್ಲ. ಕಾಶ್ಮೀರ ಭಾಗದಲ್ಲಿ ಚಿತ್ರೀಕರಣಕ್ಕೆ ಹೋಗಿ ಬಂದಿದ್ದಕ್ಕೆ ನನ್ನ ತಾಯಿ ಭಯ ಪಟ್ಟಿದ್ದರು. ಇನ್ನೂ ದೇಶ ಕಾಯುವ ಯೋಧರ ತಾಯಿಯರ ಪರಿಸ್ಥಿತಿ ಏನು? ಎಂದು ಪ್ರಶ್ನೆ ಮಾಡಿ ಕಣ್ಣೀರು ಹಾಕಿದರು.

    ಹುತಾತ್ಮ ಯೋಧ ಗುರು ಮನೆಯವರ ದುಃಖ ನೋಡಿ, ತಂದೆಯ ಸಾವನ್ನು ನೆನೆಪಿಸಿಕೊಂಡು ಹರಿಪ್ರಿಯಾ ಕಣ್ಣೀರು ಹಾಕಿದ್ದಾರೆ. ಒಂದು ಕುಟುಂಬದಲ್ಲಿ ಯಾರನ್ನೇ ಕಳೆದುಕೊಂಡರು ನೋವಾಗುತ್ತದೆ. ಆ ನೋವು ನಮ್ಮ ತಂದೆಯನ್ನು ಕಳೆದುಕೊಂಡಾಗ ನನಗೆ ಆಗಿದೆ. ಆದರೆ ಯೋಧ ಗುರು ಅವರ ಪತ್ನಿ, ತಾಯಿ ನೋಡಿದರೆ ತುಂಬಾ ನೋವಾಗುತ್ತದೆ. ಇಡೀ ಭಾರತ, ಇಂತಹ ಎಲ್ಲ ತಾಯಂದಿರಿಗೆ ಸಹಾಯ ಮಾಡಲು ನಾವಿದ್ದೇವೆ. ಅವರು ತಮ್ಮ ಮಕ್ಕಳನ್ನು ದೇಶ ಕಾಯಲು ಕಳುಹಿಸಿದ್ದಕ್ಕೆ ನಾವು ಇಷ್ಟು ಆರಾಮಾಗಿದ್ದೇವೆ. ಹೀಗಾಗಿ ಅವರಿಗೆಲ್ಲ ಒಂದು ಸೆಲ್ಯೂಟ್. ನಾವೆಲ್ಲ ಅವರ ಮಕ್ಕಳು ಎಂಬಂತೆ ಹುತಾತ್ಮ ಯೋಧನ ಕುಟುಂಬದ ಜೊತೆ ಇರಬೇಕು. ಆದರೂ ನಮ್ಮಿಂದ ಅವರ ಮಗನ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಧೈರ್ಯ ಇದ್ದಿದ್ದರೆ ಉಗ್ರರು ನೇರವಾಗಿ ಬಂದು ಹೊಡೆದಾಡಬೇಕಿತ್ತು. ಈ ರೀತಿ ಹೇಡಿಗಳಾಗಿ ಬಂದು ಕೊಲ್ಲುವುದು ಸರಿಯಲ್ಲ. ಇದಕ್ಕೆ ಆದಷ್ಟು ಬೇಗ ಉತ್ತರ ಕೊಟ್ಟರೆ ದೇಶ ಜನ ಖುಷಿಯಾಗುತ್ತಾರೆ. ದೇಶ ಸೇವೆಯಲ್ಲಿ ಮಕ್ಕಳನ್ನು ಕಳೆದುಕೊಂಡ ತಾಯಿಯರಿಗೆ ಖುಷಿ ಆಗುತ್ತದೆ. ಕೊನೆಯ ಪಕ್ಷ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅವರ ಆತ್ಮಕ್ಕೆ ಒಂದು ಸಮಾಧಾನ ಸಿಗುತ್ತದೆ. ನಮ್ಮ ದೇಶದ ಅನ್ನ ತಿಂದು, ನಮ್ಮ ನೆಲದಲ್ಲಿ ಇದ್ದುಕೊಂಡು, ಬೇರೆ ಅವರಿಗೆ ಸಹಾಯ ಮಾಡುತ್ತಾರೆ. ಅಂತಹವರು ಯಾಕಿಲ್ಲಿರಬೇಕು? ಇಲ್ಲಿ ಇರುವುದಕ್ಕೆ ಅವರು ಅರ್ಹರೇ ಅಲ್ಲ. ಮೊದಲು ಅವರನ್ನು ದೇಶದಿಂದ ಹೊರ ಹಾಕಬೇಕು ಎಂದು ಉಗ್ರರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ನಿರ್ದೆಶಕ ರಿಷಬ್ ಶೆಟ್ಟಿ, ನಟಿ ಹರಿಪ್ರಿಯಾ ಹಾಗೂ ನಿರ್ಮಾಪಕ ಸಂತೋಷ್ ಕುಮಾರ್ ಸೇರಿದಂತೆ ಸಿನಿಮಾದ ಕಲಾವಿದರು ಗುರು ಅವರ ಮನೆಗೆ ಹೋಗಿದ್ದರು. ಯೋಧ ಗುರು ಕುಟುಂಬಸ್ಥರಿಗೆ ಸಾಂತ್ವನ ಹೇಳಿ. ಬಳಿಕ ನಿರ್ಮಾಪಕ ಸಂತೋಷ್ ಕುಮಾರ್ 25 ಸಾವಿರ ರೂ. ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು 50 ಸಾವಿರ ರೂ. ಚೆಕ್ ವಿತರಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವರ ಆಸೆ ಪೂರೈಸಬೇಕು, ನಾನು ಸೈನ್ಯಕ್ಕೆ ಸೇರಬೇಕು: ಗುರು ಪತ್ನಿ ಕಲಾವತಿ

    ಅವರ ಆಸೆ ಪೂರೈಸಬೇಕು, ನಾನು ಸೈನ್ಯಕ್ಕೆ ಸೇರಬೇಕು: ಗುರು ಪತ್ನಿ ಕಲಾವತಿ

    – ಎಂ.ಎ ಮಾಡು ಎಂದು ಕಾಲೇಜಿಗೆ ಸೇರಿಸಿದ್ದರು
    – ಲೆಕ್ಚರರ್ ಆಗಬೇಕೆಂಬ ಆಸೆ ಇತ್ತು

    ಮಂಡ್ಯ: ಹುತಾತ್ಮ ಗುರು ಅವರನ್ನು ಮರೆಯಲಾಗದೇ ತಾಯಿ, ಸಹೋದರರು ಹಾಗೂ ತಂದೆ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಇತ್ತ ಪತ್ನಿ ಕಲಾವತಿ ನನಗೂ ಸೇನೆಗೆ ಸೇರಬೇಕು ಅನ್ನಿಸುತ್ತಿದೆ. ಈ ಮೂಲಕ ನಾನು ಅವರ ಆಸೆ ಪೂರೈಸಬೇಕು ಎಂದು ಹೇಳಿದ್ದಾರೆ.

    ಹುತಾತ್ಮ ಗುರು ಅವರಿಗಾಗಿ ಮೂರು ದಿನಗಳಿಂದ ಅತ್ತು ಅತ್ತು ಸುತ್ತಾಗಿ ಅಸ್ವಸ್ಥರಾಗಿರೋ ಕಲಾವತಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಕ್ಕೂ ಮೊದಲು ನನ್ನ ಪತಿಗಾಗಿ ಬಂದ ಜನರನ್ನು ನೋಡಿ ಕಣ್ಣೀರು ಬಂದಿದ್ದು, ಇನ್ನಷ್ಟೂ ದಿನ ಇದ್ದಿದ್ದರೆ ಅವರು ದೇಶ ಸೇವೆ ಮಾಡುತ್ತಿದ್ದರು. ನಾನು ಕೇವಲ ನನ್ನ ಪತಿಗೆ ಮಾತ್ರ ಸೆಲ್ಯೂಟ್ ಹೊಡೆಯಲಿಲ್ಲ. ಇಡೀ ಸೈನಿಕರಿಗೆ ಒಳ್ಳೆಯದಾಗಲಿದೆ ಎಂದು ಸೆಲ್ಯೂಟ್ ಹೊಡೆದೆ ಎಂದು ಹೇಳಿದ್ದರು.

    ಎಂ.ಎ ಮಾಡಲು ಸೇರಿಸಿದ್ದರು:
    ಆಸ್ಪತ್ರೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನನ್ನು ನನ್ನ ಪತಿಯೇ ಇಷ್ಟಪಟ್ಟು ಓದಲು ಸೇರಿಸಿದ್ದರು. ನೀನು ಮನೆಯಲ್ಲಿಯೇ ಇದ್ದರೆ ಸುಮ್ಮನೆ ಏನೇನೋ ಯೋಚನೆ ಮಾಡುತ್ತೀಯಾ ಎಂದು ಕಾಲೇಜಿಗೆ ಸೇರಿಸಿದ್ದರು. ನನಗೆ ಲೆಕ್ಚರ್ ಆಗಬೇಕೆಂಬ ಆಸೆ ಇತ್ತು. ನನ್ನ ಪತಿ, ನೀನು ಏನು ಓದುತ್ತೀಯಾ ಓದು, ಎಷ್ಟೆ ಖರ್ಚಾದರೂ ನಾನು ಓದಿಸುತ್ತೀನಿ ಎಂದು ಹೇಳಿದ್ದರು. ನನ್ನ ಪತಿ ಇನ್ನೂ ಹತ್ತು ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತೀನಿ ಎಂದು ಹೇಳುತ್ತಿದ್ದರು. ಆದ್ದರಿಂದ ಈಗ ನನಗೆ ಅವರ ಆಸೆ ಪೂರೈಸಬೇಕು ಅನ್ನಿಸುತ್ತಿದೆ. ಅದಕ್ಕೆ ನಾನು ಸೈನ್ಯಕ್ಕೆ ಸೇರಬೇಕು ಎಂದುಕೊಳ್ಳುತ್ತಿದ್ದೀನಿ. ಅವರೇ ನನ್ನ ಮನಸ್ಸಿನಿಂದ ಹೇಳಿಸಿರಬಹುದು ಎನ್ನಿಸುತ್ತಿದೆ ಎಂದು ಕಲಾವತಿ ಹೇಳಿದ್ದಾರೆ.

    ಯೋಧರ ಸಾವನ್ನು ಸಂಭ್ರಮಿಸುವವರಿಗೆ ದೇಶಪ್ರೇಮವಿಲ್ಲ. ಯೋಧರ ಬಲಿದಾನವನ್ನು ಹೊಗಳುವುದನ್ನು ಬಿಟ್ಟು ಸಂತೋಷ ಪಡುತ್ತಿದ್ದಾರೆ. ಅವರು ಉದ್ಧಾರ ಆಗೋದು ಬೇಡ, ಹಾಳಾಗಿ ಹೋಗಲಿ. ಇಡೀ ದೇಶವೇ ದುಖಃದಲ್ಲಿದೆ. ಅವರಿಗೆ ಸಂತೋಷ ಪಡಲು ಹೇಗಾದರೂ ಮನಸ್ಸು ಬಂತು ಎಂದು ದೇಶದ್ರೋಹಿಗಳ ವಿರುದ್ಧ ಕಲಾವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=Txtf_Yj8kw0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv