Tag: ಯೋಗ

  • ಕರ್ತವ್ಯದ ಸಮಯದಲ್ಲಿ ಇನ್ಮುಂದೆ ‘ವೈ’ ಬ್ರೇಕ್

    ಕರ್ತವ್ಯದ ಸಮಯದಲ್ಲಿ ಇನ್ಮುಂದೆ ‘ವೈ’ ಬ್ರೇಕ್

    ನವದೆಹಲಿ : ಕೆಲಸ ವೇಳೆ ನೌಕರರ ಒತ್ತಡ ಕಡಿಮೆಗೊಳಿಸಿ ಉತ್ಸಾಹ ತುಂಬುವ ನಿಟ್ಟಿನಲ್ಲಿ ಕರ್ತವ್ಯ ಸಮಯದ ವೇಳೆ ವೈ ಬ್ರೇಕ್ ಅಥಾವ ‘ಯೋಗ’ ಬ್ರೇಕ್ ನೀಡಲು ಚಿಂತಿಸಲಾಗುತ್ತಿದೆ. ಖ್ಯಾತ ಯೋಗಪಟುಗಳಿಂದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಈ ವ್ಯವಸ್ಥೆ ಜಾರಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ, ಕೇಂದ್ರ ಆಯುಷ್ ಸಚಿವಾಲಯದ ಸಹಭಾಗಿತ್ವದಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಯೋಜನೆಗಳು ಸಿದ್ದವಾಗಿದ್ದು ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಐದು ನಿಮಿಷದ ಯೋಗ ವಿರಾಮ ನೀಡಲಾಗುವುದು. ಈ ಸಂಬಂಧ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಪತ್ರ ಬರೆದಿರುವ ಆಯುಷ್ ಇಲಾಖೆ ವೈ ಬ್ರೇಕ್ ವ್ಯವಸ್ಥೆ ಜಾರಿ ಮಾಡುವಂತೆ ಮನವಿ ಮಾಡಿದೆ.

    ಈಗಾಗಲೇ ಟಾಟಾ ಕೆಮಿಕಲ್ಸ್, ಎಕ್ಸಿಸ್ ಬ್ಯಾಂಕ್ ಸೇರಿ ಹದಿನೈದು ಕಾರ್ಪೋರೇಟ್ ಕಂಪನಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದ್ದು ಸ್ವಯಂ ಪ್ರೇರಣೆಯಿಂದ ನೌಕರಿಗೆ ಯೋಗ ಬ್ರೇಕ್ ಕೊಡಲು ಒಪ್ಪಿಗೆ ಸೂಚಿಸಿದೆ. ಪ್ರಾಯೋಗಿಕವಾಗಿ ಈ ವ್ಯವಸ್ಥೆ ಶುರುವಾಗಿದ್ದು ಮುಂದಿನ ದಿನಗಳಲ್ಲಿ ವೈ ಬ್ರೇಕ್ ನ್ನು ಕಡ್ಡಾಯ ಮಾಡುವ ಸಾಧ್ಯತೆ ಇದೆ.

  • ಯೋಗ ಭಾರತೀಯ ಪರಂಪರೆಯ ತಾಯಿ ಬೇರು: ಹುಕ್ಕೇರಿ ಸ್ವಾಮೀಜಿ

    ಯೋಗ ಭಾರತೀಯ ಪರಂಪರೆಯ ತಾಯಿ ಬೇರು: ಹುಕ್ಕೇರಿ ಸ್ವಾಮೀಜಿ

    ಹಾವೇರಿ: ಯೋಗವು ಭಾರತೀಯ ಪರಂಪರೆಯ ತಾಯಿ ಬೇರಾಗಿದ್ದು, ಭಾರತವು ವಿಶ್ವಕ್ಕೆ ನೀಡಿದ ಅತೀ ಪ್ರಮುಖ ಕೊಡುಗೆ. ಯೋಗವು ನಮ್ಮಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

    ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹುಕ್ಕೇರಿ ಮಠ ಜಾತ್ರಾ ಮಹೋತ್ಸವದ ಅಂಗವಾಗಿ ಯುವ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಯೋಗ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಯೋಗಾಸನ ಚಾಂಪಿಯನ್‍ಶಿಫ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಸದಾಶಿವ ಸ್ವಾಮೀಜಿ ಯೋಗದ ಮಹತ್ವದ ಬಗ್ಗೆ ತಿಳಿಸಿದರು.

    ಪ್ರಾಚೀನ ಕಾಲದಲ್ಲಿ ಸಂತ ಮಹಾತ್ಮರು ಆರಂಭಿಸಿದ ಯೋಗವು ಇಂದು ಜನ ಸಾಮಾನ್ಯರಿಗೂ ವಿಸ್ತರಿಸಿದೆ. ಯಾವುದೇ ವಯೋಮಾನದವರು ಕೂಡಾ ಯೋಗವನ್ನು ಮಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ಹೊಂದಬಹುದು ಎಂದು ಸ್ವಾಮೀಜಿ ಹೇಳಿದರು.

    ಎಲ್ಲ ಭಾಗ್ಯಗಳಿಗಿಂತ ಆರೋಗ್ಯದ ಭಾಗ್ಯವೇ ದೊಡ್ಡದು ಎನ್ನುವಂತೆ ಹಿತ ಮಿತವಾದ ಊಟ, ಚಟುವಟಿಕೆಯುಕ್ತ ಜೀವನ ಹಾಗೂ ಯೋಗವನ್ನು ಪ್ರತಿನಿತ್ಯ ನಮ್ಮ ಜೀವನದ ಅವಿಭಾಜ್ಯ ಅಂಗ ಎನ್ನುವಂತೆ ಅಳವಡಿಸಿಕೊಳ್ಳಬೇಕು. ಆಗ ರೋಗ ಮುಕ್ತ ಬದುಕನ್ನು ಹಾಗೂ ರೋಗ ಮುಕ್ತ ಸಮಾಜವನ್ನು ನಿರ್ಮಿಸಬಹುದು ಎಂದು ಕಿವಿಮಾತು ಹೇಳಿದರು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಭಾರತ ಯೋಗ ಫೆಡರೇಶನ್‍ನ ಉಪಾಧ್ಯಕ್ಷ ಗಂಗಾಧರಪ್ಪ ಅವರು ಮಾತನಾಡಿ, ಇಂದು ಯೋಗವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಬಯಸುತ್ತಿದ್ದು, ಯೋಗ ಅಂತರಾಷ್ಟ್ರೀಯ ಸ್ಪರ್ಧೆಯಾಗಿ ಮಾರ್ಪಾಡಾಗಿದೆ. ಮುಂಬರುವ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ಏರ್ಪಡಿಸುವುದರ ಜೊತೆಗೆ ಒಲಿಂಪಿಕ್ಸ್ ನಲ್ಲಿ ಯೋಗವನ್ನು ಸೇರ್ಪಡಿಸಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

    ಯೋಗ ಚಾಂಪಿಯನ್‍ಶಿಪ್‍ನಲ್ಲಿ 30 ಜಿಲ್ಲೆಗಳಿಂದ ಒಟ್ಟು 700 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಧರ್ಮಸ್ಥಳ ಶಾಂತಿವನ ಟ್ರಸ್ಟನ ಶಶಿಕಾಂತ ಜೈನ್ ಜಾತ್ರಾ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಹಾವೇರಿ, ಉಪಾಧ್ಯಕ್ಷ ಪ್ರಕಾಶ ಶೆಟ್ಟಿ, ಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್ನ ಶಿವಬಸಪ್ಪ ಮುಷ್ಟಿ, ವೀರಣ್ಣ ಅಂಗಡಿ, ಎಂ.ಸಿ ಮಳಿಮಠ, ಬಿ. ಬಸವರಾಜ, ಮತ್ತಿತರರು ಉಪಸ್ಥಿತರಿದ್ದರು. ಯೋಗ ಸಂಯೋಜಕರಾದ ಪ್ರೇಮಕುಮಾರ ಮುದ್ದಿ ಕಾರ್ಯಕ್ರಮ ನಿರ್ವಹಿಸಿದರು.

  • ಟ್ರಾಫಿಕ್ ತಲೆನೋವಿನಿಂದ ರಿಲ್ಯಾಕ್ಸ್ ಆಗಲು ಸಂಚಾರಿ ಪೊಲೀಸರ ಯೋಗ, ಬಾಡಿ ಮಸಾಜ್

    ಟ್ರಾಫಿಕ್ ತಲೆನೋವಿನಿಂದ ರಿಲ್ಯಾಕ್ಸ್ ಆಗಲು ಸಂಚಾರಿ ಪೊಲೀಸರ ಯೋಗ, ಬಾಡಿ ಮಸಾಜ್

    – ಠಾಣೆಯಲ್ಲೇ ಸಿಬ್ಬಂದಿಯ ಯೋಗಾಭ್ಯಾಸ

    ಬೆಂಗಳೂರು: ಟ್ರಾಫಿಕ್ ಕ್ಲಿಯರ್ ಮಾಡಿ ರೋಸಿಹೋಗಿರುವ ಸಿಲಿಕಾನ್ ಸಿಟಿ ಸಂಚಾರಿ ಪೊಲೀಸರು ರಿಲ್ಯಾಕ್ಸ್ ಆಗಲು ಪ್ರತಿದಿನ ಬೆಳಗ್ಗೆ ಠಾಣೆಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ.

    ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರತಿದಿನ ಯೋಗ ಮಾಡುತ್ತಿದ್ದಾರೆ. ಖ್ಯಾತ ಯೋಗತಜ್ಞ ರಾಮಕೃಷ್ಣ ಅವರಿಂದ ಸಿಬ್ಬಂದಿಗೆ ಯೋಗ ತರಬೇತಿ ನೀಡಲಾಗುತ್ತಿದೆ. ಕೆಲಸದಿಂದ ದೇಹದ ಮೇಲಾಗುವ ಒತ್ತಡ ಕಡಿಮೆ ಮಾಡಲು ಬನಶಂಕರಿ ಸಂಚಾರಿ ಠಾಣೆ ಇನ್ಸ್‍ಪೆಕ್ಟರ್ ಕೃಷ್ಣ ನೇತೃತ್ವದಲ್ಲಿ ಯೋಗಾಭ್ಯಾಸ ಮಾಡಲಾಗುತ್ತಿದೆ.

    45 ದಿನಗಳ ಕಾಲ ಬನಶಂಕರಿ ಸಂಚಾರಿ ಠಾಣೆಯಲ್ಲೇ ಯೋಗಾಭ್ಯಾಸ ಮಾಡಲಾಗುತ್ತದೆ. ಇದರ ಜೊತೆಗೆ ಪಿಸಿಯೋಥೆರಪಿ ಮೂಲಕ ಸಿಬ್ಬಂದಿಗೆ ಬಾಡಿ ಮಸಾಜ್ ಕೂಡ ಮಾಡಲಾಗುತ್ತಿದೆ. ಟ್ರಾಫಿಕ್ ಕ್ಲೀಯರ್ ಮಾಡಲು ನಿಂತು ಸಿಬ್ಬಂದಿಗೆ ತೀವ್ರ ಕಾಲು ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಪ್ರತಿನಿತ್ಯ ನುರಿತ ವೈದ್ಯರಿಂದ ಸಿಬ್ಬಂದಿಗೆ ಪಿಸಿಯೋಥೆರಪಿ ಮಾಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ಅಕ್ರಮ ದಂಧೆ ನಡೆಸ್ತಿದ್ದ ವೈದ್ಯನಿಗೆ ಗೂಸ

    ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ಅಕ್ರಮ ದಂಧೆ ನಡೆಸ್ತಿದ್ದ ವೈದ್ಯನಿಗೆ ಗೂಸ

    -ಆರೋಗ್ಯ ಸಚಿವರ ಜಿಲ್ಲೆಯಲ್ಲಿ ಅಕ್ರಮ ದಂಧೆ

    ಚಿತ್ರದುರ್ಗ: ವೈದ್ಯೋ ನಾರಾಯಣೋ ಹರಿ ಅಂತಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯಲ್ಲೇ ಕ್ಯಾನ್ಸರ್ ಚಿಕಿತ್ಸೆ ನೆಪದಲ್ಲಿ ದೊಡ್ಡ ಅಕ್ರಮ ದಂಧೆ ನಡೆಯುತ್ತಿದೆ.

    ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಯ ಆಯುಷ್ ಡಾಕ್ಟರ್ ಎ.ಎನ್ ಸುರೇಶ್ ಎಂಬ ಆಸಾಮಿ, ಹಣಕ್ಕಾಗಿ ತಾನೊಬ್ಬ ವೈದ್ಯ ಅನ್ನೋದನ್ನೇ ಮರೆತು ಕ್ಯಾನ್ಸರ್ ರೋಗಿಗಳಿಗೆ ಪಾರಂಪರಿಕಚಿಕಿತ್ಸೆ ಕೊಡುತ್ತೇವೆ ಎಂದು ಅವರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾನೆ. ಕುಣಿಗಲ್‍ನ ಶ್ರೀ ಸಿದ್ಧಲಿಂಗೇಶ್ವರ ಸ್ವಾಮೀಜಿ ಹೆಸರಲ್ಲಿ ಖಾಸಗಿ ವಾಹಿನಿಗಳಲ್ಲಿ ಹಾಗೂ ಯೂಟ್ಯೂಬ್ ನಲ್ಲಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ತಾ, ಕ್ಯಾನ್ಸರ್ ರೋಗಿಗಳನ್ನು ಚಿತ್ರದುರ್ಗದ ಯೋಗಾವನ ಬೆಟ್ಟಕ್ಕೆ ಸೆಳೆಯುತ್ತಾನೆ. ಅಲ್ಲದೇ ಇವರ ಅಕ್ರಮ ಬಯಲಾಗದಿರಲಿ ಎಂದು ನಕಲಿ ಖಾವಿಧಾರಿಗಳ ಬೆಂಗಾವಲಿನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಇಲ್ಲಸಲ್ಲದ ಚಿಕಿತ್ಸೆ ನೀಡುತ್ತಿದ್ದಾನೆ ಆರೋಪಗಳು ಕೇಳಿ ಬಂದಿವೆ.

    ಯೋಗದಿಂದ ಕ್ಯಾನ್ಸರ್ ಗುಣಮಾಡುತ್ತೇನೆ ಎಂದು ಬಡಾಯಿ ಕೊಚ್ಚಿಕೊಳ್ಳೋ ಈ ದಂಧೆಕೋರರ ಮಾತಿಗೆ ಮರುಳಾದ ಹುಬ್ಬಳ್ಳಿ ಮೂಲದ ಬಾಲರಾಜ್ ಕುಮಾರ್ ಎಂಬ ರೋಗಿಯಿಂದ 30 ಸಾವಿರ ರೂಪಾಯಿ ಹಣ ಪಡೆದು, ಆರು ತಿಂಗಳಿಂದ ಅಲ್ಲೇ ಉಳಿದರೂ ರೋಗ ಗುಣವಾಗದೇ ಆತ ಸಾವಿನಂಚಿಗೆ ತಲುಪಿದ್ದಾನೆ. ಈ ಬಗ್ಗೆ ಕೇಳಲು ಬಂದಿದ್ದ ಬಾಲರಾಜ್ ಕುಟುಂಬದ ಮೇಲೆ ಡಾಕ್ಟರ್ ಸುರೇಶನ ಚೇಲಗಳು ದೌರ್ಜನ್ಯವೆಸಗಲು ಮುಂದಾಗಿದ್ದರು. ಆಗ ಆಕ್ರೋಶಗೊಂಡ ಕ್ಯಾನ್ಸರ್ ರೋಗಿ ಅಲ್ಲಿನ ನಕಲಿ ಖಾವಿಧಾರಿಗಳಿಗೆ ಭರ್ಜರಿ ಗೂಸಕೊಟ್ಟು ತನ್ನ ಕೋಪವನ್ನು ಈಡೇರಿಸಿಕೊಂಡಿದ್ದಾನೆ.

    ಈ ಅಕ್ರಮ ಸುಮಾರು ನಾಲ್ಕು ವರ್ಷಗಳಿಂದ ನಡೆಯುತಿದ್ದರೂ ಸಹ ಆರೋಗ್ಯ ಇಲಾಖೆ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಇನ್ನಾದರೂ ಆರೋಗ್ಯ ಸಚಿವರು ಈ ಅಕ್ರಮಕ್ಕೆ ಹಾಕುತ್ತಾರ ಬ್ರೇಕ್ ಕಾದು ನೋಡಬೇಕಿದೆ.

  • ತಲೆ ಕೆಳಗಾಗಿ ಯೋಗ ಮಾಡಲು ಹೋಗಿ 80 ಅಡಿ ಎತ್ತರದಿಂದ ಬಿದ್ದ ಯುವತಿ

    ತಲೆ ಕೆಳಗಾಗಿ ಯೋಗ ಮಾಡಲು ಹೋಗಿ 80 ಅಡಿ ಎತ್ತರದಿಂದ ಬಿದ್ದ ಯುವತಿ

    – 110 ಮೂಳೆ ಮುರಿತ, ಯುವತಿ ಸ್ಥಿತಿ ಗಂಭೀರ

    ಮೆಕ್ಸಿಕೋ: ಯುವತಿಯೊಬ್ಬಳು ಬಾಲ್ಕನಿಯಲ್ಲಿ ತಲೆ ಕೆಳಗಾಗಿ ಯೋಗ ಮಾಡಲು ಹೋಗಿ, ಆಯತಪ್ಪಿ 80 ಅಡಿ ಮೇಲಿಂದ ಕೆಳಗೆ ಬಿದ್ದು, 110 ಮೂಳೆಗಳನ್ನು ಮುರಿದುಕೊಂಡಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

    ಅಲೆಕ್ಸಾ ಟೆರಾಜಾ(23) ತಲೆ ಕೆಳಗಾಗಿ ಯೋಗ ಮಾಡಲು ಹೋಗಿ ಆಸ್ಪತ್ರೆ ಸೇರಿದ್ದಾಳೆ. ಅಲೆಕ್ಸಾ ಅಪಾರ್ಟ್‌ಮೆಂಟ್‌ನ ಆರನೇ ಮಹಡಿಯಲ್ಲಿರುವ ತನ್ನ ಮನೆಯ ಬಾಲ್ಕನಿಯ ಕಂಬಿಯ ಮೇಲೆ ತಲೆ ಕೆಳಗೆ ಮಾಡಿ, ಕಾಲಿನಿಂದ ಕಂಬಿ ಹಿಡಿದು ಸಾಹಸ ಮಾಡುತ್ತಾ ಯೋಗ ಮಾಡಲು ಹೋಗಿದ್ದಾಳೆ. ಆದರೆ ಈ ವೇಳೆ ಆಯತಪ್ಪಿ ಅಲೆಕ್ಸಾ ಬಾಲ್ಕನಿಯಿಂದ 80 ಅಡಿ ಕೆಳಗೆ ಬಿದ್ದಿದ್ದಾಳೆ. ಪರಿಣಾಮ ಆಕೆಯ ದೇಹದ 110 ಮೂಳೆಗಳು ಮುರಿದಿದೆ, ಜೊತೆಗೆ ತಲೆಗೆ ಕೂಡ ಗಂಭಿರವಾಗಿ ಪೆಟ್ಟಾಗಿದೆ.

    ಈ ಅಪಾಯಕಾರಿ ಸಾಹಸವನ್ನು ಅಲೆಕ್ಸಾ ಮಾಡುತ್ತಿರುವ ಫೋಟೋವನ್ನು ಆಕೆಯ ಸ್ನೇಹಿತ ಕ್ಲಿಕ್ಕಿಸಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗಿದೆ.

    ಯುವತಿ ಕೆಳಗೆ ಬಿದ್ದ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ತೀವ್ರ ಗಾಯಗೊಂಡ ಕಾರಣಕ್ಕೆ ವೈದ್ಯರು ಆಕೆಯ ಶಸ್ತ್ರಚಿಕಿತ್ಸೆ ಕೂಡ ಮಾಡಿದ್ದಾರೆ. ಬಹಳ ಎತ್ತರದಿಂದ ಬಿದ್ದ ಪರಿಣಾಮ ಆಕೆಯ ಮಂಡಿ ಮತ್ತು ಪಾದದ ಕೀಲುಗಳಿಗೆ ಹಾನಿಯಾಗಿತ್ತು. ಆದ್ದರಿಂದ ಅವುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಮರುಜೋಡಣೆ ಮಾಡಲಾಗಿದೆ. ಹೀಗಾಗಿ ಆಕೆ ಮೂರು ವರ್ಷ ನಡೆದಾಡಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಯುವತಿಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಬರೋಬ್ಬರಿ 11 ಗಂಟೆ ಸಮಯ ತೆಗೆದುಕೊಂಡಿದ್ದಾರೆ.

    ಯುವತಿ ಕೆಳಗೆ ಬಿದ್ದಾಗ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ. ಹೀಗಾಗಿ ಆಕೆಗೆ ರಕ್ತದ ಅವಶ್ಯಕತೆ ಇದೆ. ಆದ್ದರಿಂದ ಅಲೆಕ್ಸಾ ಕುಟುಂಬಸ್ಥರು ರಕ್ತದಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ನೂರು ಮಂದಿ ರಕ್ತದಾನ ಮಾಡಲು ಮುಂದೆ ಬಂದಿದ್ದಾರೆ. ಸದ್ಯ ಯುವತಿ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

  • ದಿನಾ ಬೆಳಗ್ಗೆದ್ದು ಮನೆ ಮಂದಿಯೆಲ್ಲ ಯೋಗ- ಆಸಕ್ತಿ ಇರುವವರಿಗೆ ಮನೆಯಲ್ಲೇ ಉಚಿತ ಪಾಠ

    ದಿನಾ ಬೆಳಗ್ಗೆದ್ದು ಮನೆ ಮಂದಿಯೆಲ್ಲ ಯೋಗ- ಆಸಕ್ತಿ ಇರುವವರಿಗೆ ಮನೆಯಲ್ಲೇ ಉಚಿತ ಪಾಠ

    ವಿಜಯಪುರ: ಸಾಮಾನ್ಯವಾಗಿ ಯೋಗವನ್ನು ಇಚ್ಛೆ ಉಳ್ಳವರು ಮಾಡುತ್ತಾರೆ. ಮನೆಗೆ ಒಬ್ಬರು, ಇಬ್ಬರು ಯೋಗ ಮಾಡೋದು ಸರ್ವೇ ಸಾಮಾನ್ಯ. ಆದರೆ ವಿಜಯಪುರದಲ್ಲಿರುವ ಕುಟುಂಬವೊಂದರ ಎಲ್ಲ ಸದಸ್ಯರು ಪ್ರತಿನಿತ್ಯ ಯೋಗ ಮಾಡುತ್ತಾರೆ. ಜೊತೆಗೆ ಯಾರಾದರೂ ಯೋಗ ಮಾಡುತ್ತೇವೆ ಅಂದರೆ ಅವರಿಗೂ ಉಚಿತವಾಗಿ ಹೇಳಿಕೊಡುತ್ತಾರೆ.

    ವಿಜಯಪುರದ ನಗರ ನಿವಾಸಿ ದತ್ತಾತ್ರೇಯ ಹಿಪ್ಪರಗಿ ಮತ್ತು ಅವರ ಮಂಜುಳಾ ಮತ್ತು ಮಕ್ಕಳಾದ ಶ್ರೀಗಿರಿ ಹಾಗೂ ರಾಘವೇಂದ್ರ ಎಂಬ ನಾಲ್ಕು ಜನರ ಈ ಕುಟುಂಬ ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಂಡಿದೆ. ಇದರ ಜೊತೆ ದತ್ತಾತ್ರೇಯ ಅವರು ಓರ್ವ ಫೋಟೋಗ್ರಾಫರ್ ಕೂಡ ಆಗಿದ್ದು ವಿಜಯಪುರ ನಗರದಲ್ಲೇ ಒಂದು ಸ್ಟುಡಿಯೋ ತೆರೆದು ಜೀವನ ನಡೆಸುತ್ತಿದ್ದಾರೆ. ಇದರ ಜೊತೆಗೆ ಆಸಕ್ತಿ ಇರುವವರಿಗೆ ಯೋಗವನ್ನೂ ಹೇಳಿಕೊಡುತ್ತಿದ್ದಾರೆ.

    ದತ್ತಾತ್ರೆಯ ಅವರ ಬಲ ಭುಜಕ್ಕೆ ಪೆಟ್ಟಾಗಿ ಚಿಕಿತ್ಸೆ ಪಡೆದಿದ್ದರೂ ಗುಣಮುಖರಾಗಲಿಲ್ಲ. ಇದರ ಜೊತೆಗೆ ದತ್ತಾತ್ರೇಯ ಅವರಿಗೆ ವೈದ್ಯರು ಸಕ್ಕರೆ ಕಾಯಿಲೆ ಬರುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ ಎಂದು ಹೇಳಿದ್ದರಂತೆ. ಆ ಸಮಯದಲ್ಲಿ ಯೋಗಿ ರಾಮದೇವ್ ಬಾಬಾರ ಯೋಗ ನೋಡಿ ಆಕರ್ಷಿತರಾಗಿ ಯೋಗ ಮಾಡಲು 10 ವರ್ಷದ ಹಿಂದೆ ಪ್ರಾರಂಭ ಮಾಡಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ಸಕ್ಕರೆ ಕಾಯಿಲೆ ಆಗಲಿ, ಅಂಗಾಂಗಳ ನೋವಾಗಲಿ ಸುಳಿದಿಲ್ಲ ಎಂದು ಅವರು ಹೇಳುತ್ತಾರೆ.

    ಈ ಕಾರಣದಿಂದಲೇ ಅವರು ತಮ್ಮ ಮಕ್ಕಳಿಗೆ 6 ವರ್ಷದ ಮಕ್ಕಳಿಂದಲೇ ಯೋಗ ಅಭ್ಯಾಸ ಹೇಳಿಕೊಟ್ಟು ಪ್ರತಿನಿತ್ಯ ಇಡೀ ಕುಟುಂಬವೇ ಬೆಳಗ್ಗೆ ಎದ್ದು ಯೋಗ ಮಾಡುತ್ತದೆ. ಇದರಿಂದ ನಮ್ಮ ಕುಟುಂಬ ಆರೋಗ್ಯಕರ ಕುಟುಂಬ ಆಗಿದೆ ಎಂದು ದತ್ತಾತ್ರೇಯ ಅವರ ಪತ್ನಿ ಮಂಜುಳಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರ ಮಕ್ಕಳು ಶ್ರೀಗಿರಿ ಮತ್ತು ರಾಘವೇಂದ್ರ ಕೂಡ ತಂದೆ-ತಾಯಿಯನ್ನು ಮೀರಿಸುವ ಮಟ್ಟಿಗೆ ಚಕ್ರಾಸನ, ಪ್ರಾಣಾಯಾಮ, ವೃಚ್ಚಿಕಾಸನ, ಕೌಂಡಿನ್ಯಾಸನ ಸೇರಿದಂತೆ ಕಷ್ಟಕರ ಯೋಗದ ಆಸನಗಳನ್ನು ಮಾಡುತ್ತಾರೆ.

    ಯೋಗದಿಂದ ದತ್ತಾತ್ರೇಯ ಅವರ ಇಬ್ಬರು ಮಕ್ಕಳು ಜಿಲ್ಲೆ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಮ್ಮ ಕುಟುಂಬದಂತೆ ಎಲ್ಲರು ಆರೋಗ್ಯಕರವಾಗಿರಬೇಕು ಅನ್ನೋದೇ ಇವರ ಮೂಲ ಉದ್ದೇಶ ಎಂದು ಅವರು ಹೇಳುತ್ತಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಆರೋಗ್ಯ ರಕ್ಷಣೆಗಾಗಿ ಯೋಗ- ಜಿಲ್ಲಾದ್ಯಂತ 37 ಉಚಿತ ಕೇಂದ್ರ ತೆರೆದಿದ್ದಾರೆ ಪೋಸ್ಟ್ ಮಾಸ್ಟರ್

    ಆರೋಗ್ಯ ರಕ್ಷಣೆಗಾಗಿ ಯೋಗ- ಜಿಲ್ಲಾದ್ಯಂತ 37 ಉಚಿತ ಕೇಂದ್ರ ತೆರೆದಿದ್ದಾರೆ ಪೋಸ್ಟ್ ಮಾಸ್ಟರ್

    – ಇತ್ತ ಗದಗ್ ನಲ್ಲಿ ನಿವೃತ್ತ ಶಿಕ್ಷಕಿ ಈಗ ಯೋಗ ಗುರು

    ಚಿತ್ರದುರ್ಗ/ಗದಗ: ಇಂದು ವಿಶ್ವದ್ಯಾಂತ 5ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಹಾಗೆಯೇ ಕರ್ನಾಟಕದಲ್ಲೂ ಯೋಗ ದಿನದ ಅಂಗವಾಗಿ ಯೋಗಾಸನ ಮಾಡುವ ಮೂಲಕ ಆಚರಿಸಲಾಗುತ್ತಿದೆ. ಜಿಲ್ಲೆಯ ನಿವೃತ್ತ ಪೋಸ್ಟ್ ಮಾಸ್ಟರ್ ಮಲ್ಲಿಕಾರ್ಜುನ್ ಅವರ ವಯಸ್ಸು 70. ಆದರೂ ಚಿರಯುವಕನಂತೆ ಸದಾ ಉತ್ಸಾಹದಿಂದಿರೋ ಇವರ ತೇಜಸ್ಸಿನ ಗುಟ್ಟೆ ಯೋಗ.

    ಒಂದು ಹೊತ್ತಿನ ಊಟ ಬಿಟ್ಟರೂ ಇವರು ಯೋಗ ಮಾತ್ರ ಬಿಡಲ್ಲ. ಕಳೆದ 12 ವರ್ಷಗಳ ಹಿಂದೆ ಸಿದ್ದ ಸಮಾದಿ ಯೋಗಾದಿಂದ ಆರೋಗ್ಯ ರಕ್ಷಣೆಗಾಗಿ ಯೋಗಾಭ್ಯಾಸದಲ್ಲಿ ತೊಡಗಿದ ಇವರು ಚಿತ್ರದುರ್ಗ ಜಿಲ್ಲಾ ಪತಾಂಜಲಿ ಯೋಗಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.

    ಜಿಲ್ಲೆಯಾದ್ಯಂತ ಪತಂಜಲಿ ಸಹಯೋಗದೊಂದಿಗೆ 37 ಉಚಿತ ಯೋಗ ಕೇಂದ್ರಗಳನ್ನು ತೆರೆದಿರೋ ಇವರು 40 ಜನ ನುರಿತ ಯೋಗ ಶಿಕ್ಷಕರನ್ನು ನೇಮಿಸಿದ್ದಾರೆ. ಪ್ರತಿ ತಿಂಗಳು ತಮ್ಮ ಜೇಬಿನಿಂದ 5000 ಹಣವನ್ನು ಖರ್ಚು ಮಾಡಿಕೊಂಡು ಯೋಗ ಕುರಿತು ಮಾರ್ಕೆಟಿಂಗ್ ಮಾಡುವ ಮೂಲಕ ಯೋಗಾವನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಯೋಗ ಶಿಕ್ಷಕ ಶಿವಲಿಂಗಪ್ಪ ಹೇಳಿದರು.

    ಇತ್ತ ಗದಗದಲ್ಲಿ ನಿವೃತ್ತಿಯಾದ್ರೂ ಶಿಕ್ಷಕಿ ಪದ್ಮಾವತಿ ಬಿ.ಹುಂಬಿ ಕಳೆದ 35 ವರ್ಷಗಳಿಂದ ಯೋಗಾಭ್ಯಾಸದ ವಿದ್ಯೆಯನ್ನು ಜನರಿಗೆ, ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ. ಅಷ್ಟೇ ಅಲ್ಲ ಯೋಗದಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರ ಅಷ್ಟೇ ಅಲ್ಲ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದ್ದಾರೆ. ಕಳೆದ 35 ವರ್ಷಗಳಿಂದ ಪ್ರೌಢಶಾಲೆಯ ಸಹ ಶಿಕ್ಷಕಿಯಾಗಿ ಕೆಲಸ ಮಾಡಿ ಈಗ ನಿವೃತ್ತಿಯಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲೂ ಇವರು ಹಿಂದೆ ಬೀಳದೆ 2001ರಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ, ಮ್ಯಾತ್ಸ್ ಎಕ್ಷಲೆಂಟ್ ಟೀಚರ್ ಅವಾರ್ಡ್ ಸೇರಿದಂತೆ ಹಲವು ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಬಳಿಕ ಯೋಗ ಗುರುವಾಗಿ ಗುರುತಿಸಿಕೊಂಡಿದ್ದಾರೆ.

    ಒಟ್ಟಿನಲ್ಲಿ ಅಂತರಾಷ್ಟ್ರೀಯ ಯೋಗಾ ದಿನಾಚರಣೆ ಈ ಸಂದರ್ಭದಲ್ಲಿ ಇಂತಹ ಯೋಗಪಟುಗಳನ್ನು ಸಮಾಜ ಗುರ್ತಿಸಿ ಗೌರವಿಸಬೇಕಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನೀರಿನಲ್ಲಿ ತೇಲುತ್ತಾ 20ಕ್ಕೂ ಹೆಚ್ಚು ಆಸನಗಳನ್ನು ಮಾಡ್ತಾರೆ ಆನೇಕಲ್ ಸಹೋದರಿಯರು

    ನೀರಿನಲ್ಲಿ ತೇಲುತ್ತಾ 20ಕ್ಕೂ ಹೆಚ್ಚು ಆಸನಗಳನ್ನು ಮಾಡ್ತಾರೆ ಆನೇಕಲ್ ಸಹೋದರಿಯರು

    ಬೆಂಗಳೂರು: ಇಂದು ಐದನೇ ವಿಶ್ವ ಯೋಗ ದಿನ. ಆರೋಗ್ಯಕರ ಜೀವನಕ್ಕಾಗಿ ಯೋಗ ಮಾಡೋದು ಒಳ್ಳೆಯದು ಇಂತಹ ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಸಾಧು- ಸಂತರು ಕೊಡುಗೆ ಕೊಟ್ಟಿದ್ದು ಋಷಿಮುನಿಗಳು ನೀರಿನಲ್ಲಿ ತೇಲುತ್ತಾ ಯೋಗ ಪ್ರದರ್ಶಿಸುತ್ತಿದ್ದರು. ಇದೀಗ ಅದೇ ರೀತಿ ನೀರಿನಲ್ಲಿ ಓರ್ವ ಸಾಮಾನ್ಯ ರೈತನ ಹೆಣ್ಣು ಮಕ್ಕಳು ವಿಶ್ವ ಆರೋಗ್ಯ ದಿನದ ಹಿನ್ನೆಲೆಯಲ್ಲಿ ಯೋಗ ಪ್ರದರ್ಶನ ನೀಡಿದ್ದಾರೆ.

    ಹೌದು. ನಿತ್ಯಾಶ್ರೀ ಹಾಗೂ ತನುಶ್ರೀ ಎಂಬ ಸಹೋದರಿಯರು ನೀರಿನ ಮೇಲೆ ತೇಲುತ್ತಾ ಕೈಯಲ್ಲಿ ನಾನಾ ರೀತಿಯ ಯೋಗಾಸನಗಳನ್ನು ಪ್ರದರ್ಶನ ಮಾಡಿದ್ದಾರೆ. ಬೆಂಗಳೂರಿನ ಕೂಗಳತೆ ದೂರಲ್ಲಿರೋ ಆನೇಕಲ್ ಪಟ್ಟಣದ ಈ ಸಹೋದರಿಯರಿಬ್ಬರು 2 ವರ್ಷ ವಯಸ್ಸಿನಿಂದಲೇ ತಂದೆ ಸುಬ್ಬಣ್ಣರಿಂದ ಯೋಗ ಕಲಿಯುತ್ತಿದ್ದಾರೆ. ಎಲ್ಲರೂ ನೆಲದ ಮೇಲೆ ವಿವಿಧ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿದರೆ ಈ ಸಹೋದರಿಯರು, ನೀರಿನಲ್ಲಿ ತೇಲುತ್ತಾ ಸುಮಾರು ಇಪ್ಪತ್ತಕ್ಕೂ ಹೆಚ್ಚು ಆಸನಗಳನ್ನು ಮಾಡೋದು ಇವರ ವೈಶಿಷ್ಟ್ಯ.

    ನೀರಿನಲ್ಲಿ ಮಾಡೋ ಈ ಯೋಗಕ್ಕೆ ಕೃಷಿಕ ತಂದೆ ಸುಬ್ರಹ್ಮಣ್ಯರೇ ಗುರು. ಅದೂ ಅಲ್ಲದೇ ತಾನು ಕೂಡ ಯಾವುದೇ ಗುರುಗಳ ಬಳಿ ಯೋಗ ಕಲಿತಿಲ್ಲ. ಋಷಿಮುನಿಗಳು ನೀರಿನ ಮೇಲೆ ತೇಲುತ್ತಲೇ ಯೋಗದ ಭಂಗಿಗಳನ್ನು ಪ್ರದರ್ಶಿಸುತ್ತಿದ್ದರು ಎನ್ನುವುದನ್ನು ತಿಳಿದು ಪುಸ್ತಕಗಳನ್ನು ಓದಿ, ಅಭ್ಯಾಸ ಮಾಡಿ ತಮ್ಮ ಮಕ್ಕಳಿಗೂ ಹೇಳಿಕೊಟ್ಟಿರುವುದಾಗಿ ಯೋಗಪಟು ಸುಬ್ರಹ್ಮಣ್ಯ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಯೋಗ ವಿಶ್ವದಲ್ಲೇ ಪ್ರಸಿದ್ಧಿಯಾಗಿದ್ದು ಇದೀಗ 5ನೇ ವರ್ಷವನ್ನು ಆಚರಿಸುತ್ತಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಯೋಗಾಸನದಿಂದ ಚಿನ್ನದ ಪ್ರಶಸ್ತಿ ಗಳಿಸಿದ ಮುಸ್ಲಿಂ ಬಾಲಕಿ

    ಯೋಗಾಸನದಿಂದ ಚಿನ್ನದ ಪ್ರಶಸ್ತಿ ಗಳಿಸಿದ ಮುಸ್ಲಿಂ ಬಾಲಕಿ

    – ದೈಹಿಕ ಸಮಸ್ಯೆ ನೀಗಿಸಲು ಆರಂಭ

    ಬಾಗಲಕೋಟೆ: ಗ್ರಾಮೀಣ ಭಾಗದ ಆ ಬಾಲಕಿ ಹುಟ್ಟಿದ್ದು ಮುಸ್ಲಿಂ ಕುಟುಂಬದಲ್ಲಾದ್ರೂ, ಆಕೆಯ ಯೋಗ ಸಾಧನೆಗೆ ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪ್ರಶಸ್ತಿ ಲಭಿಸಿದೆ. ಹದಿನಾರರ ಬಾಲಕಿಯ ಸಾಧನೆಗೆ ತಂದೆ-ತಾಯಿ ಅಲ್ಲದೆ ಇಡೀ ಶಾಲಾ ಸಿಬ್ಬಂದಿಯೇ ಅಭಿನಂದನೆ ಸಲ್ಲಿಸಿ, ಖುಷಿ ಪಟ್ಟಿದೆ. ದೈಹಿಕ ಸಮಸ್ಯೆ ನೀಗಿಸಿಕೊಳ್ಳಲು ಆರಂಭಿಸಿದ ಯೋಗವೇ ಬಾಲಕಿಯನ್ನು ಕೊಂಡಾಡುವಂತೆ ಮಾಡಿದೆ.

    ಯೋಗಾಸನ ಮನಸ್ಸು ಮತ್ತು ದೇಹವನ್ನ ಪ್ರಫುಲ್ಲಗೊಳಿಸುತ್ತದೆ. ಯೋಗಾಸನ ಅಂದರೆ ಮುಸ್ಲಿಂ ಸಮುದಾಯ ಸ್ವಲ್ಪ ದೂರ. ಹಿಂದೊಮ್ಮೆ ಯೋಗಾಸನ ವಿಚಾರದಲ್ಲಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಮ್ಮ ಸಮುದಾಯದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಯೋಗ ಸಾಧಕಿಯ ಹೆಸರು ಖುಷ್ಬು ಮುರ್ತಿಸಾಬ್ ಹವಾಲ್ದಾರ್. ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ರೂ ಯೋಗ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ.

    ಹದಿನಾರರ ಈ ಬಾಲಕಿ ಯೋಗಾಭ್ಯಾಸ ಮಾಡಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. ರುಶ್ಚಿಕಾಸನ, ಲಿಖಿರಾಸನ, ತ್ರಿಪುರಾಸನ, ಹೀಗೆ ಸಾಕಷ್ಟು ಯೋಗ ಪ್ರಕಾರದ ಆಸನಗಳಲ್ಲಿ ದೇಹ ದಂಡಿಸೋ ಈಕೆ ಬಾಗಲಕೋಟೆ ಜಿಲ್ಲೆಯ ಹುನಗುಂದದವಳು. ಖುಷ್ಬು ಹಲವು ವರ್ಷಗಳಿಂದ ಬೆಳಗಾವಿ ವಿಭಾಗದಿಂದ ಒಬ್ಬಳೇ ಕರ್ನಾಕಟದ ಪರ ದೇಶವನ್ನ ಪ್ರತಿನಿಧಿಸಿ, ರಾಷ್ಟ್ರಮಟ್ಟದ ಯೋಗಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಇದರಿಂದ ಪೋಷಕರು ಹಾಗೂ ರಾಜ್ಯದ ಕೀರ್ತಿ ಕೂಡ ಹೆಚ್ಚಿಸಿದ್ದಾಳೆ.

    ಖುಷ್ಬು ಹವಾಲ್ದಾರ್, ಯೋಗ ಸಾಧನೆ ಮಾಡೋದರ ಹಿಂದೆ ಇಂಟ್ರೆಸ್ಟಿಂಗ್ ಸಂಗತಿ ಇದೆ. ಖುಷ್ಬುಗೆ ಯೋಗ ಅಂದರೆ ತುಂಬಾ ಇಷ್ಟ ಇತ್ತಂತೆ. ಅಲ್ಲದೆ ಆರೋಗ್ಯ ಸಮಸ್ಯೆ ಇದ್ದಿದ್ದರಿಂದ ಯೋಗ ಮಾಡೋಕೆ ಆರಂಭಿಸಿ, ಸದ್ಯ ರಾಷ್ಟ್ರ ಮಟ್ಟದ ಸಾಧನೆ ಮಾಡೋ ಮಟ್ಟಕ್ಕೆ ಬೆಳೆದಿದ್ದಾಳೆ. ಈಕೆಯ ಈ ಸಾಧನೆಗೆ ವಿಜಯ ಮಹಾಂತೇಶ್ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಎಂ ಎಸ್ ಮಾವಿಕಾಯಿ ಪ್ರೇರಣೆಯಾಗಿದ್ದಾರೆ.

    ಒಟ್ಟಾರೆ ಖುಷ್ಟು ಹವಾಲ್ದಾರ್ ಎಂಬ ಪ್ರತಿಭಾವಂತ ವಿಧ್ಯಾರ್ಥಿನಿ ಯೋಗಭ್ಯಾಸದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ, ಜಿಲ್ಲೆ ಹಾಗೂ ರಾಜ್ಯದ ಹೆಸರನ್ನ ಇನ್ನಷ್ಟು ಬೆಳಗುವಂತೆ ಮಾಡಲಿ ಅನೋದು ಎಲ್ಲರ ಆಶಯವಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮೈಕೊರೆಯುವ ಚಳಿಯಲ್ಲಿ ಐಟಿಬಿಪಿ ಸಿಬ್ಬಂದಿಯ ಯೋಗ- ವಿಡಿಯೋ ವೈರಲ್

    ಮೈಕೊರೆಯುವ ಚಳಿಯಲ್ಲಿ ಐಟಿಬಿಪಿ ಸಿಬ್ಬಂದಿಯ ಯೋಗ- ವಿಡಿಯೋ ವೈರಲ್

    ಲದಾಖ್: ವಿಶ್ವ ಯೋಗ ದಿನಕ್ಕೆ ಇನ್ನೇನೂ ಕೆಲವು ದಿನಗಳು ಮಾತ್ರ ಬಾಕಿ ಇದ್ದು, ದೇಶದೆಲ್ಲೆಡೆ ಈ ಸುದಿನಕ್ಕಾಗಿ ತಯಾರಿ ನಡೆಯುತ್ತಿದೆ. ಈ ಮಧ್ಯೆ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಪಿ) ಸಿಬ್ಬಂದಿ ಲದಾಖ್‍ನಲ್ಲಿ ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಸುದ್ದಿಯಾಗಿದ್ದಾರೆ.

    ಸುಮಾರು 18,000 ಅಡಿ ಎತ್ತರದ ಲದಾಖ್‍ನಲ್ಲಿ ಹಿಮವೀರರು ಎಂದು ಕರೆಸಿಕೊಳ್ಳುವ ಐಟಿಬಿಪಿ ಯೋಧರು ಯೋಗ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಜೂನ್ 21ರಂದು ನಡೆಯುವ 5ನೇ ವಿಶ್ವ ಯೋಗ ದಿನದ ಪ್ರಯುಕ್ತ ಹಿಮದ ರಾಶಿ ನಡುವೆ ಮೈಕೊರೆಯುವ ಚಳಿಯಲ್ಲಿ ಯೋಗ ಮಾಡಿ ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಇದನ್ನೂ ಓದಿ:ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಯ ಯೋಗಾಭ್ಯಾಸ

    ಐಟಿಬಿಪಿ ಸಿಬ್ಬಂದಿ ಯೋಗ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. ಹಿಂದೆ ಇದೇ ಯೋಧರು ಹಿಮದಲ್ಲಿ ಉಣ್ಣೆಯ ವಸ್ತ್ರಗಳನ್ನು ತೆಗೆದು ಯೋಗ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

    ಈ ಬಗ್ಗೆ ಕೇಂದ್ರ ಮಂತ್ರಿ ಶ್ರೀಪಾದ್ ಎಸ್ಸೋ ನಾಯಕ್ ಅವರು ಮಾತನಾಡಿ, ಈ ಬಾರಿಯ ಯೋಗ ದಿನ ‘ಹೃದಯಕ್ಕಾಗಿ ಯೋಗ’ ಎಂಬ ಧ್ಯೇಯವನ್ನು ಇಟ್ಟುಕೊಂಡು ಆಚರಿಸಲಾಗುತ್ತಿದೆ. ಯೋಗ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಜನರ ಜೀವನದಲ್ಲಿ ಯೋಗ ಪ್ರಮುಖ ಅಂಶವಾಗಿದೆ. ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದು ನಮ್ಮ ರಾಷ್ಟ್ರದ ಹೆಮ್ಮೆ ಎಂದು ಹೇಳಿದರು.

    ಯೋಗ ಹಾಗೂ ಯೋಗದ ಪ್ರಾಮುಖ್ಯತೆ ಬಗ್ಗೆ ಐಟಿಬಿಪಿ ಅಧಿಕಾರಿಗಳು ಸಿಬ್ಬಂದಿಗಳಿಗೆ ತಿಳಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಸಿಬ್ಬಂದಿ ಯೋಗಾಭ್ಯಾಸ ಮಾಡುವ ಕೆಲವು ಫೋಟೋಗಳು, ವಿಡಿಯೋಗಳನ್ನು ಕೂಡ ಐಟಿಬಿಪಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.