ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಜನರು ಯೋಗಕ್ಕೆ (Yoga) ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿದ್ದಾರೆ. ಆದರೆ ಇಲ್ಲೊಂದು ಚಿರತೆ (Leopard) ಸೂರ್ಯ ನಮಸ್ಕಾರ (Surya Namaskar) ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಸಕತ್ ವೈರಲ್ ಆಗುತ್ತಿದೆ.
ಹೌದು.. ಚಿರತೆಯೊಂದು ಮುಂಜಾನೆ ಗುಡ್ಡದ ಮೇಲೆ ನಿಂತು ಸ್ಟ್ರೇಚ್ ಮಾಡುತ್ತಿದೆ. ಆದರೆ ಇದು ನೋಡುಗರಿಗೆ ಸೂರ್ಯ ನಮಸ್ಕಾರ ಮಾಡಿದಂತೆ ತೋರುತ್ತಿದೆ. ಈ ವೀಡಿಯೋವನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಸಂತ ನಂದಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ಏನಿದೆ?: ಮುಂಜಾನೆ ವೇಳೆಯಲ್ಲಿ ಚಿರತೆಯೊಂದು ತನ್ನ ನಿದ್ದೆಯಿಂದ ಎದ್ದ ನಂತರ ಗುಡ್ಡದ ತುದಿಯಲ್ಲಿ ನಿಂತು ಸ್ಟ್ರೇಚ್ ಮಾಡಿಕೊಳ್ಳುತ್ತಿದೆ. ಆದರೆ ವಿಚಿತ್ರ ಎನ್ನುವಂತೆ ಈ ಚಿರತೆ ಮಾಡುತ್ತಿರುವ ಭಂಗಿಗಳೆಲ್ಲವೂ ಸೂರ್ಯ ನಮಸ್ಕಾರವನ್ನು ಹೋಲುತ್ತಿರುವುದು ವೀಡಿಯೋದಲ್ಲಿ ಇದೆ.
ಈ ವೀಡಿಯೋಗೆ ಐಎಫ್‍ಎಸ್ ಅಧಿಕಾರಿ ಚಿರತೆಯಿಂದ ಸೂರ್ಯ ನಮಸ್ಕಾರ ಶೀರ್ಷಿಕೆಯನ್ನು ನೀಡಿದ್ದಾರೆ. ಈಗಾಗಲೇ ಈ ವೀಡಿಯೋಗೆ 1,24,000ಕ್ಕೂ ಅಧಿಕ ವಿಕ್ಷಣೆ ಹಾಗೂ 3,200ಕ್ಕೂ ಹೆಚ್ಚು ಲೈಕ್ ಬಂದಿದೆ. ಜೊತೆಗೆ ಅನೇಕರು ಈ ವೀಡಿಯೋವನ್ನು ನೋಡಿ ಆನಂದಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
ಓರ್ವ ನೆಟ್ಟಿಗ ಕಾಮೆಂಟ್ ಮಾಡಿ, ಈ ಯೋಗದ ಚಲನೆಗಳನ್ನು ಚಿರತೆಗೆ ಯಾರು ಕಲಿಸಿದ್ದಾರೆ? ಯೋಗ ಶಿಕ್ಷಕರಿಲ್ಲ, ಯುಟ್ಯೂಬ್ ಇಲ್ಲ, ಪುಸ್ತಕಗಳಿಲ್ಲ ಎಂದು ಹೇಳಿದರೇ ಮತ್ತೊಬ್ಬರು ಫಿಟ್ನೆಸ್ ಫ್ರೀಕ್ ಚಿರತೆ ಎಂದು ತಮಾಷೆ ಮಾಡಿದ್ದಾರೆ. ಇನ್ನೋರ್ವ ಕಾಮೆಂಟ್ ಮಾಡಿ, ನನ್ನ ನಾಯಿಗಳು ಸಂಜೆಯೂ ಹಾಗೆಯೇ ಮಾಡುತ್ತವೆ. ಅದು ಸೂರ್ಯ ನಮಸ್ಕಾರ ಅಲ್ಲ, ಬೇಟೆಗೆ ಹೋಗಲು ಸೋಮಾರಿತನ ಎಂದು ಹೇಳಿದ್ದಾನೆ.
ಸಿಂಗಾಪುರ: ಭಾರತ (India) ಮೂಲದ ಯೋಗ ಶಿಕ್ಷಕನೊಬ್ಬನನ್ನು ಮಹಿಳೆಯರಿಗೆ ಕಿರುಕುಳ (Molestation) ನೀಡಿದ ಆರೋಪದ ಮೇಲೆ ಸಿಂಗಾಪುರದಲ್ಲಿ (Singapore) ವಿಚಾರಣೆಗೆ ಗುರಿಪಡಿಸಲಾಗಿದೆ.
2020ರ ಜು.11ರಂದು ಯೋಗ (Yoga) ಶಿಕ್ಷಕ ರಾಜ್‍ಪಾಲ್ ಸಿಂಗ್ ಕಿರುಕುಳ ನೀಡಿದ್ದಾಗಿ 24 ವರ್ಷದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ತಾನು ಸಿಂಗ್‍ನಿಂದ ಅನುಭವಿಸಿದ ಕಿರುಕುಳದ ಬಗ್ಗೆ ಮಹಿಳೆ ತನ್ನ ಸ್ನೇಹಿತನೊಂದಿಗೆ ವಾಟ್ಸಪ್ (WhatsApp) ಮೆಸೇಜ್‍ನಲ್ಲಿ ತಿಳಿಸಿದ್ದಳು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಸೆಲೀನ್ ಯಾಪ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದನ್ನೂ ಓದಿ: ಜೋರಾಗಿ ಸಂಗೀತವನ್ನು ಹಾಕದಂತೆ ಕೇಳಿದ್ದಕ್ಕೆ ಕೆನಡಾ ನಿವಾಸಿಯ ಕೊಲೆ
2020ರ ಜು.31ರಂದು ಮಹಿಳೆಯೊಬ್ಬರು ಟ್ವಿಟ್ಟರ್‌ನಲ್ಲಿ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಅದನ್ನು ನೋಡಿದ 28 ಹಾಗೂ 37 ವರ್ಷದ ಮಹಿಳೆಯರಿಬ್ಬರು ಅವರನ್ನು ಸಂಪರ್ಕಿಸಿದ್ದಾರೆ. ನಂತರ 28 ವರ್ಷದ ಮಹಿಳೆ ತಮ್ಮ ಮೇಲಾದ ದೌರ್ಜನ್ಯವನ್ನು ಫೇಸ್‍ಬುಕ್‍ನಲ್ಲಿ (Facebook) ಬರೆದುಕೊಂಡಿದ್ದಾರೆ.
ಈ ಬಗ್ಗೆ ಸಂತ್ರಸ್ತೆಯೊಬ್ಬರು ಕ್ಯಾಮೆರಾವನ್ನು ಸಾಕ್ಷಿಯಾಗಿ ನೀಡಿದ್ದು ಮಾಧ್ಯಮಗಳಿಗ ಅದು ಲಭ್ಯವಾಗಿಲ್ಲ. ರಾಜ್‍ಪಾಲ್ ಸಿಂಗ್ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು ಪ್ರಕರಣ ವಿಚಾರಣೆ ಹಂತದಲ್ಲಿದೆ. 5ನೇ ಮಹಿಳೆ ನೀಡಿದ ದೂರನ್ನು ಮುಂದಿನ ದಿನಗಳಲ್ಲಿ ವಿಚಾರಣೆನಡೆಸುವುದಾಗಿ ಕೋರ್ಟ್ ತಿಳಿಸಿದೆ.
ಅಕ್ಷರ ಯೋಗ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವು ಫೆಬ್ರವರಿ 11 ರಂದು ನಡೆದ ಯೋಗ ಉತ್ಸವದಲ್ಲಿ 3 ಹೊಸ ಗಿನ್ನಿಸ್ ವಿಶ್ವ ದಾಖಲೆಗಳನ್ನು ಬರೆದಿದೆ. ಅತಿ ಹೆಚ್ಚು ಜನರ ಭಾಗವಹಿಸಿ ಪ್ರದರ್ಶಿಸಿದ ದಾಖಲೆ ಇದಾಗಿದ್ದು, ಹಲಸಾನ (90 ಸೆಕೆಂಡ್‌ಗಳು), ಉಸ್ಟ್ರಾಸನ (60 ಸೆಕೆಂಡುಗಳು), ಮತ್ತು ವಸಿಷ್ಟಾಸನ (45 ಸೆಕೆಂಡುಗಳು) ವಿಭಾಗಗಳಲ್ಲಿ ಹೀಗೆ ಮೂರು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ.
ದಾಖಲೆಗಳ ಪ್ರಯತ್ನದ ಅಂತಿಮ ತೀರ್ಪಿನಲ್ಲಿ ಹಲಸಾನಕ್ಕೆ 560, ವಶಿಷ್ಠಾಸನಕ್ಕೆ 510 ಮತ್ತು ಉಷ್ಟ್ರಾಸನಕ್ಕೆ 572 ಭಾಗವಹಿಸಿರುವುದರ ಬಗ್ಗೆ ಅಧಿಕೃತವಾಗಿ ಘೋಷಿಸಲಾಯಿತು. ಅಕ್ಷರ ಯೋಗದ ಸಂಸ್ಥಾಪಕ, ಹಿಮಾಲಯನ್ ಸಿದ್ಧಾ ಅಕ್ಷರ್ ಅವರು, ಈ ದಾಖಲೆಗಳನ್ನು ವಿಶ್ವಾದ್ಯಂತ ಯೋಗ ಅಭ್ಯಾಸ ಮಾಡುವವರಿಗೆ ಅರ್ಪಿಸಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಪ್ರೇಮಿಗಳ ದಿನದಂದು ಪತ್ನಿಗೆ ರೊಮ್ಯಾಂಟಿಕ್ ಆಗಿ ನಿರ್ಮಾಪಕ ರವೀಂದ್ರ ವಿಶ್
ಈ ಕಾರ್ಯಕ್ರಮದಲ್ಲಿ ಅಕ್ಷರ ಯೋಗ ಮಾಸ್ಟರ್ ಶಿಕ್ಷಕರಿಂದ ತರಬೇತಿ ಪಡೆದ ಪೊಲೀಸ್ ಅಧಿಕಾರಿಗಳು, ಹಿಂದುಳಿದ ಮತ್ತು ವಿಕಲ ಚೇತನ ಮಕ್ಕಳು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಜನರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ ಆಗಮಿಸಿದ್ದರು. ಯೋಗದ ಮಹತ್ವ ಮತ್ತು ಒಟ್ಟಾರೆ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಅದರ ಪ್ರಯೋಜನಗಳ ಕುರಿತು ಅವರು ಮಾತನಾಡಿದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ಯೋಗಥಾನ್ ವಿಶ್ವದಾಖಲೆ (World Records) ಸೃಷ್ಟಿಸಿದ್ದಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ (Dr. Narayana Gowda) ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು ರಾಜ್ಯಾದ್ಯಂತ 6 ಲಕ್ಷಕ್ಕೂ ಅಧಿಕ ಜನರು ಏಕಕಾಲಕ್ಕೆ ಯೋಗಾಭ್ಯಾಸ ಮಾಡುವ ಮೂಲಕ ವಿಶ್ವದಾಖಲೆ ಬರೆಯಲಾಗಿದೆ. ಈ ಮೂಲಕ ರಾಜಸ್ಥಾನದಲ್ಲಿ 1.60 ಲಕ್ಷ ಜನರ ಮೂಲಕ ಸೃಷ್ಟಿಯಾಗಿದ್ದ ದಾಖಲೆಯನ್ನು ಕರ್ನಾಟಕ ಅಳಿಸಿ ಹಾಕಿದೆ ಎಂದು ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಆಡಳಿತದಲ್ಲಿ ಭರವಸೆ ಉಚಿತ, ಸಾಲ ಖಚಿತ: ಸಚಿವ ಸುನಿಲ್ ಕುಮಾರ್ ವ್ಯಂಗ್ಯ
ಭಾನುವಾರ ಬೆಳಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಡಾ.ನಾರಾಯಣಗೌಡ ಯೋಗಥಾನ್ ಉದ್ಘಾಟಿಸಿದರು. ಗಿನ್ನಿಸ್ ದಾಖಲೆ ಸೃಷ್ಟಿ ಮಾಡುವ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ಐದು ಲಕ್ಷ ಜನರು ಸೇರಿ ಯೋಗ ಮಾಡುವ ಗುರಿ ಹೊಂದಲಾಗಿತ್ತು. ಸರ್ಕಾರದ ಈ ಪ್ರಯತ್ನ ವ್ಯಾಪಕ ಬೆಂಬಲ ಸಿಕ್ಕಿದ್ದು, ಆರೂವರೆ ಲಕ್ಷಕ್ಕೂ ಹೆಚ್ಚು ಜನರು ಇಂದಿನ ಯೋಗಥಾನ್‍ನಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಯಶಸ್ವಿಗೊಳಿಸಿದ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಸ್ವಯಂ ಸೇವಕರು, ಸರ್ಕಾರಿ ನೌಕರರು, ಅಧಿಕಾರಿಗಳು, ಯೋಗಪಟುಗಳು ಸೇರಿದಂತೆ ಎಲ್ಲರಿಗೂ ಅಭಿನಂದನೆಗಳನ್ನು ಸಚಿವರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ: ಬೊಮ್ಮಾಯಿ
Live Tv
[brid partner=56869869 player=32851 video=960834 autoplay=true]
ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಅಸ್ತಮಾ (Asthma) ಸಮಸ್ಯೆ ಕಾಡುತ್ತದೆ. ಕಲುಷಿತ ವಾತಾವರಣ ಹಾಗೂ ಗಾಳಿಯಿಂದ ಹಬ್ಬುವ ಕಾಯಿಲೆ ಇದಾಗಿದೆ. ಅಸ್ತಮಾ, ಉಸಿರಾಟದ ತೊಂದರೆ (breathing problems) ಇರುವವರು, ಅದರ ನಿವಾರಣೆಗೆ ನಾನಾ ಕಸರತ್ತು ಮಾಡಿರುತ್ತಾರೆ. ಆದರೆ ಯಾವುದೇ ಪ್ರಯೋಜನವಾಗಿರುವುದಿಲ್ಲ.
ಅಸ್ತಮಾ, ಉಸಿರಾಟದ ತೊಂದರೆ ಇರುವವರು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಕೆಲವು ಜೀವನಶೈಲಿಯನ್ನು ಬದಲಾಯಿಸುವ ಮೂಲಕ ನಿಮ್ಮ ಶ್ವಾಸಕೋಶವನ್ನು ಅನಾರೋಗ್ಯದಿಂದ ಕಾಪಾಡಬಹುದು. ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಹೆಚ್ಚಿಸಬಹುದು. ಪ್ರತಿದಿನ ಈ ವ್ಯಾಯಾಮಗಳನ್ನು ಮಾಡಿದರೆ ಖಂಡಿತ ಅಸ್ತಮಾ, ಉಸಿರಾಟದ ಸಮಸ್ಯೆ ದೂರವಾಗುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..
1) ಭ್ರಮರಿ ಪ್ರಾಣಾಯಾಮ
ಈ ಪ್ರಾಣಾಯಾಮ ಉಸಿರಾಟದ ವ್ಯವಸ್ಥೆಯನ್ನು ವೃದ್ಧಿಸುವ ಯೋಗಾಭ್ಯಾಸವಾಗಿದೆ. ನೈಟ್ರಿಕ್ ಆಕ್ಸೈಡ್ ಅಂಶವನ್ನು ಬಿಡುಗಡೆ ಮಾಡುವ ಮೂಲಕ ಶ್ವಾಸಕೋಶದ ಸೋಂಕನ್ನು ದೂರ ಮಾಡಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಬಹಳ ವೇಗವಾಗಿ ವೈರಸ್ ಸೋಂಕಿನ ಸಂತತಿಯನ್ನು ತಗ್ಗಿಸುತ್ತದೆ. ನಿತ್ಯ 2ರಿಂದ 3 ಬಾರಿ ಸುಮಾರು ಹತ್ತು ನಿಮಿಷಗಳ ಕಾಲ ಇದನ್ನು ಅಭ್ಯಾಸ ಮಾಡುವುದು ಒಳ್ಳೆಯದು.
2) ಸೂರ್ಯ ನಾಡಿ ಶೋಧನ
ಪ್ರಾಚೀನ ಯೋಗ ತಂತ್ರವಾಗಿರುವ ಇದು, ನಮ್ಮ ದೇಹದಲ್ಲಿರುವ ಸೂರ್ಯ ನಾಡಿಯನ್ನು ಸಕ್ರಿಯವಾಗಿರುಸುತ್ತದೆ. ನಮ್ಮ ದೇಹದೊಳಗೆ ಕಾರ್ಯನಿರ್ವಹಿಸುವ ಸೂರ್ಯ ನಾಡಿ ಈ ಚಟುವಟಿಕೆಯಿಂದ ಪುನಶ್ಚೇತನಗೊಳ್ಳುತ್ತದೆ. ಇದು ದೇಹದ ಆಂತರಿಕ ವ್ಯವಸ್ಥೆಯನ್ನು ಉತ್ತೇಜಿಸುವ ಉಸಿರಾಟದ ಅಭ್ಯಾಸಗಳನ್ನು ಒಳಗೊಳ್ಳುತ್ತದೆ. ಸೂರ್ಯ ನಾಡಿಯನ್ನು ಶುದ್ಧೀಕರಿಸಲು ಮತ್ತು ಶಕ್ತಿಯುತಗೊಳಿಸಲು ಈ ಯೋಗಾಭ್ಯಾಸ ಸಹಾಯ ಮಾಡುತ್ತದೆ.
3) ಚಂದ್ರ ನಾಡಿ ಶೋಧನ
ಚಂದ್ರ ನಾಡಿ ಶೋಧನ ಯೋಗಾಭ್ಯಾಸವು ನಮ್ಮ ದೇಹದ ಎಡಭಾಗದಲ್ಲಿ ಹಾದುಹೋಗುವ ಚಂದ್ರ ನಾಡಿಯನ್ನು ಸಕ್ರಿಯಗೊಳಿಸಲು ಸಹಕಾರಿಯಾಗಿದೆ. ನಮ್ಮ ದೇಹದೊಳಗೆ ಕಾರ್ಯನಿರ್ವಹಿಸುವ ಚಂದ್ರ ನಾಡಿಯು ಈ ಚಟುವಟಿಕೆಯಿಂದ ಪುನಶ್ಚೇತನಗೊಳ್ಳುತ್ತದೆ. ಈ ಯೋಗಾಭ್ಯಾಸ ಮಾಡುವುದರಿಂದ ಚಂದ್ರ ನಾಡಿಯನ್ನು ಶುದ್ಧೀಕರಿಸಲು ಮತ್ತು ಶಕ್ತಿಯುತಗೊಳಿಸಲು ಸಹಾಯವಾಗುತ್ತದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್ ಗುಣಗಳೇನು ಗೊತ್ತಾ?
4) ಭಸ್ತ್ರಿಕಾ ಪ್ರಾಣಾಯಾಮ
ಈ ಪ್ರಾಣಾಯಾಮ ಅಭ್ಯಾಸದಿಂದ ಮೂಗಿನ ಹೊಳ್ಳೆಗಳು ಶುದ್ಧಗೊಳ್ಳುತ್ತವೆ. ನಾಭಿಯ ಅವಯವಗಳು ಉತ್ತೇಜನಗೊಳ್ಳುತ್ತವೆ. ಮೆದುಳಿನ ಭಾಗ ಮತ್ತು ನರಮಂಡಲಗಳು ಚುರುಕುಗೊಳ್ಳುತ್ತವೆ. ಕಿವಿ, ಮೂಗು, ಕಣ್ಣಿನ ದೋಷ ಇರುವವರು ಮತ್ತು ಗರ್ಭಿಣಿಯರು ಈ ಪ್ರಾಣಾಯಾಮ ಮಾಡಬಾರದು.
5) ಕಪಾಲಬಾತಿ ಪ್ರಾಣಾಯಾಮ
ಅನ್ನನಾಳ, ಶ್ವಾಸನಾಳಗಳನ್ನು ಶುಚಿಗೊಳಿಸಿ ಶ್ವಾಸಕ್ಕೆ ಸಂಬಂಧಿಸಿದ ರೋಗಗಳನ್ನು ನಿರ್ಮೂಲಗೊಳಿಸುತ್ತದೆ. ಮೂಗಿಗೆ ಸಂಬಂಧಿಸಿದ ಸಮಸ್ಯೆಗಳು, ಉದರಕ್ಕೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತವೆ. ಗಂಟಲು ಶುದ್ಧಿಯಾಗುತ್ತದೆ. ಶರೀರದ ಶಾಖ ಹೆಚ್ಚಾಗಿ ಶೀತಕ್ಕೆ ಸಂಬಂಧಿಸಿದ ರೋಗಗಳೂ ಗುಣವಾಗುತ್ತವೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಶಾಲಾ, ಕಾಲೇಜುಗಳಲ್ಲಿ (School College) ಪ್ರತಿನಿತ್ಯ 10 ನಿಮಿಷ ಧ್ಯಾನ (Meditation) ಮಾಡಬೇಕೆನ್ನುವ ಶಿಕ್ಷಣ ಸಚಿವರ (Education Minister) ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಸಚಿವ ಬಿ.ಸಿ ನಾಗೇಶ್ (BC Nagesh) ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾನಸಿಕ, ದೈಹಿಕ ಆರೋಗ್ಯ, ಏಕಾಗ್ರತೆ, ವ್ಯಕ್ತಿತ್ವ ವಿಕಸನಕ್ಕಾಗಿ ಶಾಲಾ ಮಕ್ಕಳು 10 ನಿಮಿಷ ಧ್ಯಾನ ಮಾಡುವ ಉತ್ತಮ ಆಲೋಚನೆಯಲ್ಲೂ ನಿಮ್ಮಂತವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದು ದುರಾದೃಷ್ಟಕರ. ಮಕ್ಕಳು ಧ್ಯಾನ ಮಾಡುವುದು ಗಿಮಿಕ್ ಹೇಗೆ ಆಗುತ್ತದೆ ಎಂಬುದನ್ನು ಜನತೆಗೆ ಸ್ವಲ್ಪ ವಿವರಿಸುವಿರಾ? (1/8)
ವಿದ್ಯಾರ್ಥಿಗಳಲ್ಲಿ (Students) ಏಕಾಗ್ರತೆ, ಸಕಾರಾತ್ಮಕತೆ ಹೆಚ್ಚಿಸುವ ಸಲುವಾಗಿ ಶಾಲೆ, ಕಾಲೇಜುಗಳಲ್ಲಿ ಪ್ರತಿ ನಿತ್ಯ 10 ನಿಮಿಷ ಧ್ಯಾನ ಮಾಡಿಸಲು ಆದೇಶ ಹೊರಡಿಸುವಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಚಿವ ಬಿ.ಸಿ ನಾಗೇಶ್ (BC Nagesh) ಪತ್ರ ಬರೆದಿದ್ದಾರೆ. ಇದರಿಂದ ಸಚಿವ ನಾಗೇಶ್ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿ.ಸಿ ನಾಗೇಶ್ ಅವರು ಸರಣಿ ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಭಾರತ-ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಅವಕಾಶ? – ಸೆಮಿಸ್ ಲೆಕ್ಕಾಚಾರ ಹೀಗಿದೆ
ಧ್ಯಾನವನ್ನೂ "ರಾಜಕೀಯ ಅಜೆಂಡಾ, ಗಿಮಿಕ್" ಎನ್ನಲು ಟಿಪ್ಪು ಆರಾಧಕರಿಂದ ಮಾತ್ರ ಸಾಧ್ಯ.
ಟ್ವೀಟ್ನಲ್ಲಿ ಏನಿದೆ?
ಧ್ಯಾನವನ್ನೂ ರಾಜಕೀಯ (Politics) ಅಜೆಂಡಾ, ಗಿಮಿಕ್ ಎನ್ನಲು ಟಿಪ್ಪು (Tippu Sultan) ಆರಾಧಕರಿಂದ ಮಾತ್ರ ಸಾಧ್ಯ. ಈ ಮೊದಲು ಕಾಂಗ್ರೆಸ್ ನಾಯಕರು ಯೋಗಾಚರಣೆ ವಿರೋಧಿಸಿದ್ದರು. ಈಗ ಧ್ಯಾನಕ್ಕೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರೇ ಧ್ಯಾನದಿಂದ ಯಾವ ಕೆಡಕು ಇದೆ ಎಂಬುದನ್ನು ವಿವರಿಸುವಿರಾ? ಇದನ್ನೂ ಓದಿ: ಕಾಂಗ್ರೆಸ್‍ನವರಿಗೆ ಧ್ಯಾನ ಅಂದ್ರೆ ಸೋನಿಯಾ, ರಾಹುಲ್ ಗಾಂಧಿಯೇ ಆಗಿದೆ: ಪ್ರಹ್ಲಾದ್ ಜೋಶಿ
ಕೋವಿಡ್-19 ಕಾರಣ ಎರಡು ವರ್ಷಗಳ ಕಾಲ ಭೌತಿಕ ತರಗತಿಗಳಿಲ್ಲದೆ ಮಕ್ಕಳ ಕಲಿಕೆಯಲ್ಲಿ ಉಂಟಾದ ಹಿನ್ನಡೆ ಸರಿದೂಗಿಸಲು ದೇಶದಲ್ಲೇ ಮೊದಲು 'ಕಲಿಕಾ ಚೇತರಿಕೆ' ಕಾರ್ಯಕ್ರಮವನ್ನು ಇಡೀ ದೇಶಕ್ಕೆ ಮಾದರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ದಾಖಲೆಯ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.(3/8)
ಮಾನಸಿಕ, ದೈಹಿಕ ಆರೋಗ್ಯ, ಏಕಾಗ್ರತೆ, ವ್ಯಕ್ತಿತ್ವ ವಿಕಸನಕ್ಕಾಗಿ ಶಾಲಾ ಮಕ್ಕಳು 10 ನಿಮಿಷ ಧ್ಯಾನ ಮಾಡುವ ಉತ್ತಮ ಆಲೋಚನೆಯಲ್ಲೂ ನಿಮ್ಮಂತವರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದು ದುರಾದೃಷ್ಟಕರ. ಮಕ್ಕಳು ಧ್ಯಾನ ಮಾಡುವುದು ಗಿಮಿಕ್ ಹೇಗೆ ಆಗುತ್ತದೆ ಎಂಬುದನ್ನು ಜನತೆಗೆ ಸ್ವಲ್ಪ ವಿವರಿಸುವಿರಾ? ಇದನ್ನೂ ಓದಿ: ಯಶ್ ಅಭಿಮಾನಿಗಳಿಗೆ ಮತ್ತೆ ನಿರಾಸೆ: ‘ಬ್ರಹ್ಮಾಸ್ತ್ರ’ದಲ್ಲಿ ನಟಿಸುತ್ತಿಲ್ಲ ರಾಕಿಂಗ್ ಸ್ಟಾರ್
ನಿಮ್ಮ ಅವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಸುಧಾರಣೆ, ಅಭಿವೃದ್ಧಿ ಕಾರ್ಯಗಳನ್ನು ನೀವು ಮಾಡಿದ್ದರೇ ಶಿಕ್ಷಕರು ಮತ್ತು ಮೂಲಸೌಕರ್ಯಗಳ ಕೊರತೆ ಈ ಪ್ರಮಾಣದಲ್ಲಿ ಇರುತ್ತಿತ್ತೇ?
ನೀವು ಅಧಿಕಾರದಲ್ಲಿದ್ದಾಗ ಬಾರದ ಶೈಕ್ಷಣಿಕ ಅಭಿವೃದ್ಧಿಯ ಆಲೋಚನೆಗಳು ಈಗ ನಿಮಗೆ ಬರುತ್ತಿರುವುದು ಸಂತೋಷ ! (7/8)
ಶಿಕ್ಷಣ ಕ್ಷೇತ್ರದ ಸುಧಾರಣೆ, ಬದಲಾವಣೆ, ಏಳಿಗೆ ಮತ್ತು ಅಭಿವೃದ್ಧಿಯೇ ನಮ್ಮ ಸರ್ಕಾರದ ಆದ್ಯತೆಯಾಗಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಬಿಜೆಪಿ ಸರ್ಕಾರ ಕೋವಿಡ್-19 ಸಂದರ್ಭದಲ್ಲಿ ಇಡೀ ದೇಶದಲ್ಲೇ ಮೊದಲು ನಮ್ಮ ರಾಜ್ಯದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಭೌತಿಕ ತರಗತಿಗಳನ್ನು ಆರಂಭಿಸಿತು. ಕೋವಿಡ್-19 ಕಾರಣ ಎರಡು ವರ್ಷಗಳ ಕಾಲ ಭೌತಿಕ ತರಗತಿಗಳಿಲ್ಲದೇ ಮಕ್ಕಳ ಕಲಿಕೆಯಲ್ಲಿ ಉಂಟಾದ ಹಿನ್ನಡೆ ಸರಿದೂಗಿಸಲು ದೇಶದಲ್ಲೇ ಮೊದಲು `ಕಲಿಕಾ ಚೇತರಿಕೆ’ ಕಾರ್ಯಕ್ರಮವನ್ನು ಇಡೀ ದೇಶಕ್ಕೆ ಮಾದರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ದಾಖಲೆಯ 15,000 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.
21ನೇ ಶತಮಾನದ ಅಗತ್ಯಗಳಿಗೆ ಪೂರಕವಾಗಿರುವ `ರಾಷ್ಟ್ರೀಯ ಶಿಕ್ಷಣ ನೀತಿ-2020′ ಅನುಷ್ಠಾನಗೊಳಿಸಲಾಗುತ್ತಿದೆ. ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ನೀಗಿಸಲು 8,100 ಕೊಠಡಿ ನಿರ್ಮಿಸಲಾಗುತ್ತಿದೆ. ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವಾಗಿ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ/ಬಾಳೆಹಣ್ಣು/ಚಿಕ್ಕಿ ನೀಡಲಾಗುತ್ತಿದೆ.
ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲೇ 30 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರು/ಉಪನ್ಯಾಸಕರ ಸೇವೆ ಪಡೆಯಲಾಗಿದೆ. ದೈಹಿಕ ಶಿಕ್ಷಕರು ಸೇರಿದಂತೆ 2,500 ಪ್ರೌಢಶಾಲಾ ಶಿಕ್ಷಕರು ಮತ್ತು 778 ಪಿಯು ಕಾಲೇಜು ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನು ಮುಂಬರುವ ದಿನಗಳಲ್ಲಿ ಆರಂಭಿಸಲಾಗುತ್ತಿದೆ. ಸಂಶೋಧಕರು, ವೈದ್ಯರು, ವಿಜ್ಞಾನಿಗಳ ಪ್ರಕಾರ, ಯೋಗ ಮತ್ತು ಧ್ಯಾನ ಮಾಡುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ. ಆದರೆ, ನೀವು ಮಾತ್ರ ಧ್ಯಾನ, ಯೋಗ ಮಾಡಿದರೆ ಮಕ್ಕಳು ಕುಗ್ಗಿ ಹೋಗುತ್ತಾರೆ ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಬಿ.ಸಿ ನಾಗೇಶ್ (BC Nagesh) ಅವರ ಮನಸ್ಸು ಸ್ಥಿಮಿತದಲ್ಲಿದ್ದ ಹಾಗಿಲ್ಲ. ನಿಜವಾಗಿ ಯೋಗ ಮತ್ತು ಧ್ಯಾನದ (Dhyana) ಅಗತ್ಯ ಎಲ್ಲರಿಗಿಂತ ಹೆಚ್ಚಾಗಿ ಶಿಕ್ಷಣ ಸಚಿವರಿಗಿದೆ. ಕೊರೊನಾವನ್ನು (Corona) ಸರಿಯಾಗಿ ನಿಯಂತ್ರಿಸಲಾಗದೆ ಶಾಲೆಗಳನ್ನು ಮುಚ್ಚಿ, ಆನ್‍ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮೊಬೈಲ್ ಹುಚ್ಚು ಹತ್ತಿಸಿರುವ ಬಿಜೆಪಿ (BJP) ಸರ್ಕಾರ, ಈಗ ಆ ಹುಚ್ಚು ಬಿಡಿಸಲು ಧ್ಯಾನ ನಡೆಸಲು ಮುಂದಾಗಿರುವುದು ಹುಚ್ಚುತನವಲ್ಲದೆ ಮತ್ತೇನು ಎಂದು ಸರಣಿ ಪ್ರಶ್ನೆಗಳನ್ನು ಕೇಳಿ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?
ಯೋಗ-ಧ್ಯಾನ ಯಾವುದಕ್ಕೂ ನನ್ನ ವಿರೋಧ ಇಲ್ಲ. ಆದರೆ ಶಾಲೆಗಳಲ್ಲಿ ಯಾವುದು ಮುಖ್ಯ, ಶಿಕ್ಷಣ ಸಚಿವ ಬಿ.ಸಿ ನಾಗೇಶ್? ಯಾವುದಕ್ಕೆ ಆದ್ಯತೆ ನೀಡಬೇಕೆನ್ನುವುದಷ್ಟೇ ಪ್ರಶ್ನೆ. ಒಂದೆಡೆ ಶಾಲೆ ನಡೆಸಲು ಸಾರ್ವಜನಿಕರಿಂದ ಭಿಕ್ಷೆ ಬೇಡುತ್ತಿರುವ ಬಿಜೆಪಿ ಸರ್ಕಾರ ಇನ್ನೊಂದೆಡೆ ದಿನಕ್ಕೊಂದರಂತೆ ಗಿಮಿಕ್‍ಗಳನ್ನು ಮಾಡುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಬಿ.ಸಿ ನಾಗೇಶ್ ಅವರು ಶಿಕ್ಷಣ ಸಚಿವರಾದ ದಿನದಿಂದ ಪಠ್ಯಪುಸ್ತಕ ವಿವಾದದಿಂದ ಹಿಡಿದು ಶಾಲಾ ಶಿಕ್ಷಕರ ನೇಮಕದ ವರೆಗೆ ಬರೀ ಹಗರಣಗಳಲ್ಲೇ ಈಜಾಡುತ್ತಿದ್ದಾರೆ. ಇದನ್ನೂ ಓದಿ: ಶವ ಅಂತ ಹೇಳ್ಬೇಡಿ ಚಂದ್ರು ಅಂತ ಕರೆಯಿರಿ- ಗೋಳಾಡಿದ ರೇಣುಕಾಚಾರ್ಯ
ಕೊರೊನಾವನ್ನು ಸರಿಯಾಗಿ ನಿಯಂತ್ರಿಸಲಾಗದೆ ಶಾಲೆಗಳನ್ನು ಮುಚ್ಚಿ, ಆನ್ ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮೊಬೈಲ್ ಹುಚ್ಚು ಹತ್ತಿಸಿರುವ @BJP4Karnataka ಸರ್ಕಾರ, ಈಗ ಆ ಹುಚ್ಚು ಬಿಡಿಸಲು ಧ್ಯಾನ ನಡೆಸಲು ಮುಂದಾಗಿರುವುದು ಹುಚ್ಚುತನವಲ್ಲದೆ ಮತ್ತೇನು? 3/5
ಎಳೆಯ ಮಕ್ಕಳು ಆಡುತ್ತಾ, ಕುಣಿಯುತ್ತಾ ಪಾಠ ಓದಬೇಕು. ಇದರ ಬದಲಿಗೆ ಅವರನ್ನು ಕೋಣೆಯಲ್ಲಿ ಕೂಡಿ ಹಾಕಿ ಬಲಾತ್ಕಾರವಾಗಿ ಯೋಗ-ಧ್ಯಾನಗಳ ಕಸರತ್ತು ಮಾಡಿಸಿದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅವರು ಇನ್ನಷ್ಟು ಕುಗ್ಗಿಹೋಗುತ್ತಾರೆ. ಮೊದಲು ಶಾಲೆಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಶಿಕ್ಷಕರನ್ನು ನೇಮಿಸಿ ಅವಶ್ಯಕವಾದ ಬೋದನಾ ಸಲಕರಣೆಗಳನ್ನು ಬಿಜೆಪಿ ಸರ್ಕಾರ ಒದಗಿಸಬೇಕು. ಪ್ರತಿ ಶಾಲೆಯಲ್ಲಿ ಕಲೆ, ಸಂಗೀತ ಮತ್ತು ಕ್ರೀಡೆಗಳಲ್ಲಿ ತರಬೇತಿ ನೀಡುವ ಶಿಕ್ಷಕರನ್ನು ನೇಮಿಸಬೇಕು. ಇದನ್ನು ಬಿಟ್ಟು ತಮ್ಮ ರಾಜಕೀಯ ಅಜೆಂಡಾಕ್ಕಾಗಿ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ. ಇದನ್ನೂ ಓದಿ: 5 ದಿನಗಳ ಬಳಿಕ ರೇಣುಕಾಚಾರ್ಯ ಸಹೋದರನ ಪುತ್ರನ ಶವ ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಪತ್ತೆ
Live Tv
[brid partner=56869869 player=32851 video=960834 autoplay=true]
ನವದೆಹಲಿ: ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆ ಮಾಡುತ್ತಿರುವುದು ಅರ್ಥಹೀನ ರಾಜಕೀಯವಾಗಿದೆ. ಇದರ ಬದಲು ಪ್ರತಿಭಟನಾಕಾರರು ಯೋಗ ಮಾಡಬೇಕು ಎಂದು ಯೋಗ ಗುರು ಬಾಬಾ ರಾಮ್‍ದೇವ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಗ್ನಿಪಥ್ ಪ್ರತಿಭಟನಕಾರರು ಯೋಗ ಮಾಡಿದ್ದರೆ, ಅವರು ಬೆಂಕಿ ಹಚ್ಚುವ ಪ್ರಯತ್ನ ಮಾಡುತ್ತಿರಲಿಲ್ಲ. ಪ್ರತಿಭಟನೆಯನ್ನು ಬಿಟ್ಟು ಅವರು ಯೋಗವನ್ನು ಮಾಡಬೇಕಾಗಿತ್ತು ಎಂದ ಅವರು, ರಾಜಕೀಯದಲ್ಲಿ ಯೋಗ ಇರಬೇಕು, ಆದರೆ ಯೋಗದಲ್ಲಿ ರಾಜಕೀಯ ಇರಬಾರದು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಅಧಿಕಾರದಿಂದ ತೆಗೆದು ಹಾಕಲು ದೇಶದಲ್ಲಿ ಕೆಲವರು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ:ಸಾಲುಮರದ ತಿಮ್ಮಕ್ಕಗೆ BDAಯಿಂದ ನಿವೇಶನ ಹಂಚಿಕೆ
ಜೂನ್ 14ರಂದು ಕೇಂದ್ರವು ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿತ್ತು. ಇದಾದ ಬಳಿಕ ಈ ಯೋಜನೆಯನ್ನು ವಿರೋಧಿಸಿ ದೇಶದ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆಗಳು ತಾರಕಕ್ಕೆ ಏರಿದೆ. 17.5 ರಿಂದ 21 ವರ್ಷದೊಳಗಿನ ಸೈನಿಕರನ್ನು 4 ವರ್ಷಗಳ ಅವಧಿಗೆ ಶಸ್ತ್ರಾಸ್ತ್ರ ಪಡೆಗಳಲ್ಲಿ ನೇಮಕ ಮಾಡಿಕೊಳ್ಳುವ ಕೇಂದ್ರದ ಯೋಜನೆಗೆ ಕಳೆದ 4 ದಿನಗಳಿಂದ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.
ಮಾಲೆ: ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಮಾಲ್ಡೀವ್ಸ್‌ನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮಕ್ಕೆ ಗುಂಪೊಂದು ನುಗ್ಗಿ ಯೋಗ ಮಾಡಿದ್ದವರನ್ನು ಅಡ್ಡಿ ಪಡಿಸಿದ ಘಟನೆ ನಡೆದಿದೆ.
ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿಶ್ವದೆಲ್ಲೆಡೆ ಯೋಗ ಮಾಡಿ ಯೊಗ ದಿನವನ್ನು ಆಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ ಯುವ, ಕ್ರೀಡೆ ಮತ್ತು ಸಮುದಾಯ ಸಬಲೀಕರಣ ಸಚಿವಾಲಯವು ಭಾರತೀಯ ಸಾಂಸ್ಕೃತಿಕ ಕೇಂದ್ರದೊಂದಿಗೆ ಮಂಗಳವಾರ ಗಲೋಲ್ಹು ಕ್ರೀಡಾಂಗಣದಲ್ಲಿ ಧ್ಯಾನ ಮತ್ತು ಯೋಗವನ್ನು ಆಯೋಜಿಸಿತ್ತು. ಆದರೆ ಅಲ್ಲಿಗೆ ಬಂದ ಗುಪೊಂದು ಯೋಗಾಭ್ಯಾಸಕ್ಕೆ ಅಡ್ಡಿ ಪಡಿಸಿ ಪ್ರತಿಭಟನೆ ನಡೆಸಿದೆ.
ಆ ಗುಂಪು ಯೋಗಾಭ್ಯಾಸದಲ್ಲಿ ಪಾಲ್ಗೊಂಡವರು ಕೂಡಲೇ ಕ್ರೀಡಾಂಗಣವನ್ನು ತೆರವು ಮಾಡಬೇಕೆಂದು ಆಗ್ರಹಿಸಿದೆ. ಅಷ್ಟೇ ಅಲ್ಲದೇ ಬೆದರಿಕೆಯನ್ನು ಹಾಕಿದೆ. ಇದರಿಂದಾಗಿ ಯೋಗಾಭ್ಯಾಸಕ್ಕೆ ಹಾಜರಾದವರಿಗೆ ಧ್ಯಾನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.
Dramatic visuals from Maldives as group of extremists disrupt Yoga Day celebrations organised in capital Male pic.twitter.com/es9q3y5g2o
ಘಟನೆ ಸಂಬಂಧಿಸಿದಂತೆ ಅತಿರೇಕಕ್ಕೆ ಹೋಗುವ ಮೊದಲು ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಂತಾರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸುವ ಘೋಷಣೆಯು ಕೆಲವು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಅವರು ಅದನ್ನು ನಡೆಸದಂತೆ ಬೆದರಿಕೆ ಹಾಕಿದರು. ಇದನ್ನೂ ಓದಿ:ಯೋಗ ದಿನದಂದು ವಿಜಯಪುರ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ
An investigation has been launched by @PoliceMv into the incident that happened this morning at Galolhu stadium.
This is being treated as a matter of serious concern and those responsible will be swiftly brought before the law.
ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಹೇಳಿದ್ದಾರೆ. ಮಾಲ್ಡೀವ್ಸ್ ಸರ್ಕಾರವು ಈ ಸಮಸ್ಯೆಯನ್ನು ಅತ್ಯಂತ ಕಾಳಜಿಯಿಂದ ಪರಿಗಣಿಸುತ್ತಿದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:ಮುಂಬೈನಲ್ಲಿ ಮಠದ ಶಿಷ್ಯರೊಂದಿಗೆ ಯೋಗ ಮಾಡಿದ ಪೇಜಾವರ ಶ್ರೀ
ಉಡುಪಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶ್ವದ ಎಲ್ಲೆಡೆ ಸಾಮೂಹಿಕವಾಗಿ ಯೋಗಾಸನ ಮಾಡುವ ಮೂಲಕ ಆಚರಿಸಲಾಗುತ್ತಿದೆ. ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮುಂಬೈ ಪ್ರವಾಸದಲ್ಲಿದ್ದು, ಮಠದಲ್ಲೇ ಯೋಗಾಭ್ಯಾಸ ಮಾಡಿದರು.
ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮುಂಬೈ ಪ್ರವಾಸ ಕೈಗೊಂಡಿದ್ದು, ಹಲವಾರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮಠದ ಶಿಷ್ಯರ ಜೊತೆ ಬೆಳಗ್ಗೆ ಯೋಗಾಭ್ಯಾಸವನ್ನು ಮಾಡಿದರು. ಪ್ರತಿದಿನ ಪೇಜಾವರ ಶ್ರೀಗಳು ಯೋಗಾಭ್ಯಾಸವನ್ನು ಮಾಡಿ ದೇಹವನ್ನು ಸದೃಢವಾಗಿ ಇಟ್ಟುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು, ಯೋಗ ಪ್ರಾಚೀನ ಕಾಲದ ಋಷಿ ಮುನಿಗಳಿಂದ ಮಾನವ ಜನಾಂಗಕ್ಕೆ ಸಿಕ್ಕಿರುವ ಹಲವಾರು ಕೊಡುಗೆಗಳಲ್ಲೊಂದು. ಪ್ರಕೃತಿಯ ನಡುವೆ ಸಂಪರ್ಕದಲ್ಲಿದ್ದ ಋಷಿಮುನಿಗಳಿಗೆ ಯೋಗದ ಅಗತ್ಯ ಇರಲಿಲ್ಲ. ಇಂದು ಮಾನವಕುಲ ಪ್ರಕೃತಿಯಿಂದ ದೂರವಾಗಿರುವ ಹೊತ್ತಿನಲ್ಲಿ ಮಾನಸಿಕ ಮತ್ತು ಶಾರೀರಿಕ ಆರೋಗ್ಯಕ್ಕೆ ಯೋಗ ಅತ್ಯಗತ್ಯ. ಅಂತಹ ಯೋಗವನ್ನು ನಾವು ನಮ್ಮ ಜೀವನದಲ್ಲಿ ನಿತ್ಯ ರೂಪಿಸಿಕೊಳ್ಳೋಣ ಎಂದು ಹೇಳಿದರು. ಇದನ್ನೂ ಓದಿ:ಎಲ್ಲ ಮದರಸಾಗಳಲ್ಲಿ ಯೋಗ ದಿನ ಆಚರಿಸಬೇಕು: ಯುಪಿ ಸರ್ಕಾರ ಆದೇಶ
ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರು ನಗರಕ್ಕೆ ಬಂದು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ನಾಡಿಗೆ ಪ್ರಧಾನಿಗಳು ಬಂದದ್ದು, ಬಹಳ ಸಂತೋಷದ ಸಂಗತಿ. ಅವರ ಆಗಮನದಿಂದ ಯೋಗದ ಮಹತ್ವ ಹೆಚ್ಚಾಗಿದೆ. ಅವರನ್ನು ಮಠದ ಪರವಾಗಿ ಅಭಿನಂದಿಸುತ್ತೇನೆ. ಜನರಲ್ಲಿ ಯೋಗಾಭ್ಯಾಸದ ಬಗ್ಗೆ ಜಾಗೃತಿ ಹೆಚ್ಚಾಗಿದೆ. ಎಳೆಯ ಮಕ್ಕಳಲ್ಲೇ ಯೋಗದ ಮಹತ್ವದ ಬಗ್ಗೆ ನಾವು ಅರಿವು ಮೂಡಿಸಬೇಕು. ಆ ಮೂಲಕ ಮಾನವ ಜನಾಂಗ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದರು. ಇದನ್ನೂ ಓದಿ: ಐಟಿಬಿಪಿ ಯೋಧರಿಂದ ಹಿಮಾಲಯದ 17 ಸಾವಿರ ಅಡಿ ಎತ್ತರದಲ್ಲಿ ಯೋಗ