Tag: ಯೋಗ ದಿನಾಚರಣೆ

  • ರಾಜ್ಯದಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ವಿಧಾನಸೌಧದ ಎದುರು 5,000 ಮಂದಿ ಯೋಗ ಪ್ರದರ್ಶನ

    ರಾಜ್ಯದಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆ – ವಿಧಾನಸೌಧದ ಎದುರು 5,000 ಮಂದಿ ಯೋಗ ಪ್ರದರ್ಶನ

    – ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್ಸ್‌ ಮೇಲೆ ರಾಜ್ಯಪಾಲರು, ಗಣ್ಯರಿಂದ ಯೋಗ
    – ಯೋಗ ಮಾಡಿ ನಿರೋಗಿ ಆಗಿ – ರಾಜ್ಯಪಾಲರಿಂದ ಕಿವಿಮಾತು

    ಬೆಂಗಳೂರು: ದೇಹ ಮತ್ತು ಮನಸ್ಸಿನ ಸಂಯೋಗವೇ ಯೋಗ. ಭಾರತೀಯ ಯೋಗ (Yoga) ಪರಂಪರೆಯಿಂದು ವಿಶ್ವವ್ಯಾಪಿಯಾಗಿ ಬೆಳೆದಿದೆ. ಭಾರತ ಮತ್ತು ಇತರ ದೇಶಗಳ ಸಂಬಂಧವನ್ನು ಆರೋಗ್ಯಪೂರ್ಣವಾಗಿಸುವ ಮಹತ್ವದ ಕಾರ್ಯವಾಗಿ ರೂಪುಗೊಂಡಿದೆ. ಯೋಗವು ಯಾವುದೇ ಜಾತಿ, ಧರ್ಮ, ಮತಕ್ಕೆ ಸೀಮಿತವಾಗದೇ ಎಲ್ಲವನ್ನೂ ಎಲ್ಲರನ್ನೂ ಮೀರಿಸುವ ವಿಶ್ವಕುಟುಂಬಿಯಾಗಿ ಹಾಗೂ ವಿಶ್ವ ಆರೋಗ್ಯಕ್ಕಾಗಿ (World Health) ಎನ್ನುವ ನಿಟ್ಟಿನಲ್ಲಿ ಸಾಕಾರಾರಗೊಂಡಿದೆ. ಹೀಗಾಗಿ ಕರ್ನಾಟವೂ ಈ ಆಚರಣೆಯಿಂದ ಹೊರತಾಗಿಲ್ಲ.

    ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿಂದು ಸಾವಿರಾರು ಯೋಗಪಟುಗಳಿಂದ ಯೋಗಭಾಸ್ಯ ನಡೆಯಿತು. ಆಯುಷ್ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಟ ಅನಿರುದ್ಧ್, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ನಟಿ ಸಾನ್ಯ ಅಯ್ಯರ್, ನಟ ಶೈನ್ ಶೆಟ್ಟಿ ಭಾಗಿಯಾಗಿ ವಿವಿಧ ಆಸನಗಳನ್ನ ಪ್ರದರ್ಶಿಸಿದರು.

    ʻಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗʼ ಎನ್ನುವ ಧ್ಯೇಯವಾಕ್ಯ ಸಾಕಾರಗೊಳಿಸುವ ನಿಟ್ಟಿನಲ್ಲಿ ಬೆಳಗ್ಗೆ 6 ಗಂಟೆಯಿಂದ ಶುರುವಾಗಿ 8:30ರ ವರೆಗೆ ಯೋಗ ಪ್ರದರ್ಶನ ನಡೆಯಿತು. ಹಿರಿಯ ರಾಜಕೀಯ ನಾಯಕರೂ ಸೇರಿ ವಿವಿಧ ಸಂಸ್ಥೆಯ ಯೋಗಪಟುಗಳು ಇದರಲ್ಲಿ ಪಾಲ್ಗೊಂಡಿದ್ದರು.

    ಬಳಿಕ ಯೋಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಕನ್ನಡದಲ್ಲಿ ಎಲ್ಲರಿಗೂ ಸ್ವಾಗತ ಕೋರಿ ಭಾಷಣ ಶುರು ಮಾಡಿದರು.

    ಯೋಗ ಭಾರತದ ಸಂಸ್ಕೃತಿಯ ಪ್ರತೀಕವಾಗಿದೆ. ಯೋಗ ಎಲ್ಲರ ಕಲ್ಯಾಣ ಮಾಡೋ ಭಾವನೆ ಆಗಿದೆ. ವಿಶ್ವದ ಬಹುತೇಕ ದೇಶಗಳಲ್ಲಿ ಯೋಗ ದಿನವನ್ನ ಆಚರಣೆ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರದ ಯೋಗ ದಿನ ಉತ್ತಮವಾಗಿ ಆಚರಣೆ ‌ಮಾಡಿದೆ. ಸರ್ಕಾರಕ್ಕೆ ಧನ್ಯವಾದ ಹೇಳ್ತೀನಿ. ಯೋಗ ಜೀವನವನ್ನ ಪರಿಪೂರ್ಣ ಮಾಡುತ್ತದೆ. ʻಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗʼ ಅನ್ನೋ ಘೋಷ ವಾಕ್ಯ ಉತ್ತಮವಾಗಿದೆ ಎಂದರಲ್ಲದೇ ಯೋಗ ಮಾಡಿ ನಿರೋಗಿ ಆಗಿ ಎಂದು ಸಲಹೆ ನೀಡಿದರು.

    ಯೋಗದಿಂದ ಶಾಂತಿ ಸಿಗಲಿದೆ. ನಾನು ಚಿಕ್ಕವನಿಂದ ಯೋಗಾಭ್ಯಾಸ ಮಾಡುತ್ತಿದ್ದೇನೆ. ಈಗಲೂ ನಿತ್ಯ ಯೋಗ ಮಾಡ್ತೀನಿ. ಜನರಿಗೆ ಮನವಿ ಮಾಡ್ತೀನಿ. ಎಲ್ಲರು ನಿತ್ಯ ಯೋಗಾಭ್ಯಾಸ ‌ಮಾಡಿ. ಯೋಗ ಜೀವನದ ಭಾಗವಾಗಿ ಸ್ವೀಕಾರ ಮಾಡೋಣ. ಎಲ್ಲರೂ ಯೋಗಾಭ್ಯಾಸ ಮಾಡೋಣ ಎಂದು ಸಂಕಲ್ಪ ಮಾಡುವಂತೆ ಕರೆ ಕೊಟ್ಟರು.

  • ಗಣಿ ನಾಡಿನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಸಿಎಂ ಯೋಗ – ನಟಿ ಶ್ರೀಲೀಲಾ ಸಾಥ್‌

    ಗಣಿ ನಾಡಿನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಸಿಎಂ ಯೋಗ – ನಟಿ ಶ್ರೀಲೀಲಾ ಸಾಥ್‌

    ಬಳ್ಳಾರಿ: 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (International Yoga Day 2024) ಹಿನ್ನೆಲೆಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬಳ್ಳಾರಿಯ ಸಂಡೂರ ತಾಲೂಕಿನ ತೋರಣಗಲ್ ಬಳಿಯ ಜಿಂದಾಲ್ ವಿದ್ಯಾನಗರದಲ್ಲಿ ಯೋಗ ಪ್ರದರ್ಶನ ಮಾಡಿದರು.

    ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಸಾವಿರಾರು ಜನರೊಂದಿಗೆ ಪಾಲ್ಗೊಂಡು ಯೋಗ ಪ್ರದರ್ಶನ ನೀಡಿದರು. ಇದರೊಂದಿಗೆ ನಟಿ ಶ್ರೀಲೀಲಾ (Actress Sreeleela), ಸಚಿವ ಸಂತೋಷ ಲಾಡ್, ಸಂಸದ ಈ. ತುಕಾರಾಂ ಜಿಲ್ಲೆಯ ಶಾಸಕರು ಹಾಗೂ ಮುಖಂಡರು ಸಿಎಂಗೆ ಸಾಥ್‌ ನೀಡಿದರು. ಇದನ್ನೂ ಓದಿ: ವಿಧಾನಸೌಧದ ಎದುರು ಡಿಕೆಶಿ ಯೋಗ – ನಟಿ ಅನು ಪ್ರಭಾಕರ್‌, ಕ್ರಿಕೆಟಿಗ ಮನಿಷ್‌ ಪಾಂಡೆ ಸಾಥ್‌

    ವಚನಾನಂದ ಶ್ರೀಗಳ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ಆರಂಭವಾಯಿತು. ಅವಧೂತ ವಿನಯ್ ಗುರೂಜಿ ಅವರು ಯೋಗ ಕಾರ್ಯಕ್ರಮ ನಿರ್ವಹಣೆ ಮಾಡಿದರು. ವಿವಿಧ ಯೋಗಾಸನಗಳ ಸೂಚನೆ ನೀಡುತ್ತಾ, ತಾವೂ ಯೋಗ ಆಸನಗಳ ಪ್ರದರ್ಶನ ನಡೆಸಿಕೊಟ್ಟರು. ಇದೇ ವೇಳೆ ಸಾಂಪ್ರದಾಯಿಕವಾಗಿ ಪಂಚೆ ಶಲ್ಯ ಧರಿಸಿದ್ದ ಸಿದ್ದರಾಮಯ್ಯ ಅವರು ವಚನಾನಂದ ಶ್ರೀಗಳ ಸೂಚನೆಯಂತೆ ಏಕಾಗ್ರತೆಯಿಂದ ಯೋಗ ಪ್ರದರ್ಶನ ಮಾಡಿದರು. ವೇದಿಕೆಯಲ್ಲಿ ನಟಿ ಶ್ರೀಲೀಲಾ ಸಹ ತದೇಕಚಿತ್ತದಿಂದ ಯೋಗ ಮಾಡಿದರು. ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳೂ ಪಾಲ್ಗೊಂಡಿದ್ದರು.

    ಈ ಬಾರಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ʻಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ (Yoga for Self and Society) ವಸ್ತು ವಿಷಯದ ಅಡಿಯಲ್ಲಿ ಆಚರಿಸಲಾಗುತ್ತಿದೆ. ವೈಯಕ್ತಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಯೋಗದ ಪಾತ್ರವನ್ನು ಎತ್ತಿ ತೋರಿಸುವುದು ಇದರ ಉದ್ದೇಶವಾಗಿದೆ.

    ಯೋಗ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಸಿಎಂ ಹೊಸಪೇಟೆಯ ಡಿಸಿ ಕಚೇರಿಯಲ್ಲಿ ನಡೆಯಲಿರುವ ಕೆಡಿಪಿ ಸಭೆಗೆ ತೆರಳಲಿದ್ದಾರೆ. ಇದನ್ನೂ ಓದಿ: International Yoga Day: ‘ಯೋಗ’ವೆಂಬ ಗಿನ್ನಿಸ್‌ ರೆಕಾರ್ಡ್‌ – ಯಾವ ವರ್ಷ, ಎಲ್ಲಿ ದಾಖಲೆಯಾಗಿತ್ತು?

  • ಭಾರತದ ಕರೆಗೆ 180ಕ್ಕೂ ಹೆಚ್ಚು ದೇಶಗಳು ಒಗ್ಗೂಡಿರುವುದು ಐತಿಹಾಸಿಕ: ಮೋದಿ

    ಭಾರತದ ಕರೆಗೆ 180ಕ್ಕೂ ಹೆಚ್ಚು ದೇಶಗಳು ಒಗ್ಗೂಡಿರುವುದು ಐತಿಹಾಸಿಕ: ಮೋದಿ

    ನ್ಯೂಯಾರ್ಕ್‌: ಅಂತಾರಾಷ್ಟ್ರೀಯ ಯೋಗ ದಿನದ (International Yoga Day) ಆಚರಣೆಯಿಂದ ಇಡೀ ವಿಶ್ವವೇ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

    ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ವೀಡಿಯೋ ಸಂದೇಶದಲ್ಲಿ ಮಾತನಾಡಿದ ಅವರು, ಯೋಗ ಮಾಡುವುದರಿಂದ ಆರೋಗ್ಯ ವೃದ್ಧಿ ಆಗುತ್ತದೆ. ಯೋಗ ದಿನಾಚರಣೆಗೆ ಭಾರತ ಕರೆ ನೀಡಿತ್ತು. ಭಾರತ ಕರೆ ನೀಡಿದಂತೆ ವಿಶ್ವದ ಹಲವು ದೇಶಗಳಲ್ಲಿ ಯೋಗ ಮಾಡಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ನಾವು ತಟಸ್ಥವಾಗಿಲ್ಲ: ಮೋದಿ

    ವಿಶ್ವಸಂಸ್ಥೆಯ (United Nations) ಪ್ರಧಾನ ಕಚೇರಿಯಲ್ಲಿ ಆಯೋಜಿಸಿರುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಭಾರತದ ಕರೆಗೆ 180ಕ್ಕೂ ಹೆಚ್ಚು ದೇಶಗಳು ಒಗ್ಗೂಡಿರುವುದು ಐತಿಹಾಸಿಕ. 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗ ದಿನಾಚರಣೆಯ ಪ್ರಸ್ತಾಪ ಬಂದಾಗ ಅದಕ್ಕೆ ದಾಖಲೆ ಸಂಖ್ಯೆಯ ದೇಶಗಳು ಬೆಂಬಲ ನೀಡಿದ್ದವು ಎಂದರು.

    ಅಮೇರಿಕ ಅಧ್ಯಕ್ಷ ಜೋ ಬೈಡೆನ್‌ (Joe Biden) ಆಹ್ವಾನ ಮೇರೆಗೆ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿರುವ ಮೋದಿ ಅವರಿಗೆ ರಾಜತಾಂತ್ರಿಕ ಅಧಿಕಾರಿಗಳಿಂದ ಅದ್ಧೂರಿ ಸ್ವಾಗತ ಕೋರಲಾಯಿತು.

    ಇಂದು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ 9ನೇ ಯೋಗ ದಿನಾಚರಣೆಯ ನೇತೃತ್ವವನ್ನು ಮೋದಿ ವಹಿಸಲಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 5:25 ರಿಂದ 6:30ರ ಅವಧಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 180ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ.

    ಇದಾದ ಬಳಿಕ ಅವರು ರಾತ್ರಿ 8 ಗಂಟೆಗೆ ವಾಷಿಂಗ್ಟನ್ ಡಿಸಿಗೆ ಪ್ರಯಾಣ ಮಾಡಲಿದ್ದಾರೆ. ವಾಷಿಂಗ್ಟನ್ ಡಿಸಿ ತಲುಪಿದ ಬಳಿಕ ಅಮೇರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರು ಆಯೋಜಿಸಿರುವ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ.

  • ಯೋಗದಿಂದ ವಿಶ್ವಕ್ಕೆ ಶಾಂತಿ – ಮೈಸೂರಿನಲ್ಲಿ 15 ಸಾವಿರ ಮಂದಿಯೊಂದಿಗೆ ಮೋದಿ ಯೋಗ

    ಯೋಗದಿಂದ ವಿಶ್ವಕ್ಕೆ ಶಾಂತಿ – ಮೈಸೂರಿನಲ್ಲಿ 15 ಸಾವಿರ ಮಂದಿಯೊಂದಿಗೆ ಮೋದಿ ಯೋಗ

    ಮೈಸೂರು: ವಿಶ್ವ ಯೋಗ ದಿನಾಚರಣೆ ಹಿನ್ನೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಕಾರ್ಮಿಕರು, ಸರ್ಕಾರಿ ನೌಕರರ ಜೊತೆ ಅರಮನೆ ನಗರಿಯಲ್ಲಿ 15 ಸಾವಿರ ಯೋಗ ಪಟುಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಯೋಗಾಸನ ಮಾಡಿದ್ದಾರೆ.

    ಖಾಸಗಿ ಹೋಟೆಲಿನಿಂದ ಬೆಳಗ್ಗೆ 6:30ರ ವೇಳೆಗೆ ಅರಮನೆ ಮುಂಭಾಗಕ್ಕೆ ಮೋದಿ ಆಗಮಿಸಿದರು. ಚುಟುಕಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಆಯುಷ್‌ ಸಚಿವ ಸರ್ಬಾನಂದ ಸೊನೊವಾಲ್, ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು.

    ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಯೋಗದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಕೇವಲ ವ್ಯಕ್ತಿಗೆ ಮಾತ್ರ ಯೋಗ ಅಲ್ಲ. ಇದು ಮನುಕುಲಕ್ಕೆ ಯೋಗ ಮುಖ್ಯ. ಯೋಗದಿಂದ ವ್ಯಕ್ತಿಗೆ ಮಾತ್ರ ಶಾಂತಿ ಸಿಗುವುದಿಲ್ಲ. ಇಡಿ ವಿಶ್ವಕ್ಕೆ ಶಾಂತಿ ಸಿಗುತ್ತದೆ ಎಂದು ಕೊಂಡಾಡಿದರು.

     

    75ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಆಚರಿಸಲಾಗುತ್ತಿರುವ ಅಜಾದಿ ಕೀ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ವಿಶ್ವದ 75 ಭಾಗಗಳಲ್ಲಿ ಯೋಗ ದಿನಾಚರಣೆ ನಡೆಯುತ್ತಿದೆ. ಈ ಮೂಲಕ ಯೋಗ ದೇಶ ದೇಶಗಳನ್ನು ಒಂದಾಗಿಸುತ್ತದೆ. ವಿಶ್ವದ ವಿವಿಧ ಭಾಗದಲ್ಲಿ ಯೋಗ ದಿನಾಚರಣೆ ನಡೆಸುತ್ತಿರುವ ಎಲ್ಲರಿಗೆ ಸಮಸ್ತ ಭಾರತೀಯರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

    ಭಾಷಣ ಮುಗಿದ ಬಳಿಕ ವೇದಿಕೆಯಿಂದ ಕೆಳಗೆ ಇಳಿದ ಮೋದಿ ಯೋಗಾಸನ ಮಾಡಲು ನಿಗದಿಯಾದ ಸ್ಥಳಕ್ಕೆ ತೆರಳಿದರು. ಬೆಳಗ್ಗೆ 7:08ಕ್ಕೆ ಆರಂಭಗೊಂಡ ಯೋಗ ಕಾರ್ಯಕ್ರಮ  ಶಾಂತಿ ಮಂತ್ರದೊಂದಿಗೆ 7:52ಕ್ಕೆ ಮುಕ್ತಾಯಗೊಂಡಿತು.

    15 ಸಾವಿರ ಮಂದಿ ಪೈಕಿ ಸುಮಾರು 8 ಸಾವಿರ ಜನರು ಮೋದಿ ಯೋಗ ಮಾಡುವ ಜಾಗದ ಅಕ್ಕಪಕ್ಕದಲ್ಲೇ ಯೋಗ ಮಾಡಿದ್ದಾರೆ. ಉಳಿದವರು ಅರಮನೆಯ ಹಿಂಭಾಗದ ಆವರಣದಲ್ಲಿ ಯೋಗ ಮಾಡಿದ್ದಾರೆ. 15 ಸಾವಿರ ಜನರಲ್ಲಿ 3 ಸಾವಿರ ಜನರು ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ 12 ಸಾವಿರ ಮಂದಿ ಸ್ಥಳೀಯರು ಭಾಗವಹಿಸಿದ್ದರು.

     

    ಟೀ ಶರ್ಟ್, ಯೋಗ ಮ್ಯಾಟ್, ವಾಟರ್ ಬಾಟಲಿ ಅನ್ನು ಆಯೋಜಕರು ಅದೇ ಸ್ಥಳದಲ್ಲಿ ನೀಡಿದ್ದಾರೆ. ಮೊಬೈಲ್ ಹೊರತು ಪಡಿಸಿ ಬೇರೆ ಯಾವುದೇ ವಸ್ತುಗಳ ತೆಗೆದು ಕೊಂಡು ಹೋಗಲು ಅವಕಾಶವಿರಲಿಲ್ಲ.

    ಯಾರೆಲ್ಲ ಯೋಗ ಮಾಡಿದ್ದಾರೆ?
    5 ಸಾವಿರ ಯೋಗ ಒಕ್ಕೂಟದ ಸದಸ್ಯರು, 1200 ವಿದ್ಯಾರ್ಥಿಗಳು, ಶಿಕ್ಷಕರು, 2,500 ಜೆಎಸ್‍ಎಸ್ ಸಂಸ್ಥೆಯವರು, 600 ದ್ವಿತೀಯ ಪಿಯುಸಿ ತಂಡ, 600 ಕಾಲೇಜ್ ವಿದ್ಯಾರ್ಥಿಗಳು, 150 ನ್ಯಾಚುರೋಪತಿ, ಯೋಗ ಕಾಲೇಜು, 120 ಆಯುರ್ವೇದಿಕ್ ಕಾಲೇಜು, 100 ಕಾರ್ಮಿಕ ಇಲಾಖೆಯ ಸಿಬ್ಬಂದಿ, 70 ಡಿಎಫ್‍ಆರ್‌ಎಲ್, 300 ಎನ್‍ಎಸ್‍ಎಸ್ ವಿದ್ಯಾರ್ಥಿಗಳು, 100 ವಿಶೇಷ ಚೇತನರು, 100 ಹಾಸ್ಟೆಲ್ ವಿದ್ಯಾರ್ಥಿಗಳು, 30 ತೃತೀಯ ಲಿಂಗಿಗಳು, 100 ಕೆಎಸ್ ಆರ್ ಪಿ ಸಿಬ್ಬಂದಿ ಯೋಗ ಮಾಡಿದ್ದಾರೆ.

    ಎರಡು ವರ್ಷ ಕೊರೊನಾ ಕಾರಣದಿಂದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ರದ್ದಾಗಿತ್ತು. ಆದರೆ ಈ ಬಾರಿ ಮೈಸೂರಿನಲ್ಲಿ ಮತ್ತೆ ಈ ಹಿಂದೆ ನಡೆದಂತೆ  ಯಶಸ್ವಿಯಾಗಿ ನಡೆದು ಸಂಪನ್ನಗೊಂಡಿತು.

    Live Tv

  • ಬರೋಬ್ಬರಿ 11 ತಿಂಗಳ ಬಳಿಕ ಪ್ರಧಾನಿ ಭೇಟಿಯಾಗಲಿರುವ ಬಿಎಸ್‍ವೈ

    ಬರೋಬ್ಬರಿ 11 ತಿಂಗಳ ಬಳಿಕ ಪ್ರಧಾನಿ ಭೇಟಿಯಾಗಲಿರುವ ಬಿಎಸ್‍ವೈ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬರೋಬ್ಬರಿ 11 ತಿಂಗಳ ಬಳಿಕ ಇಂದು ಭೇಟಿಯಾಗಲಿದ್ದಾರೆ.

    ಇಂದು ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಅವರನ್ನು ಸ್ವಾಗತಿಸಲು ಯಡಿಯೂರಪ್ಪ ಅವರೇ ಯಲಹಂಕಕ್ಕೆ ತೆರಳಿದ್ದಾರೆ. ಇದರಲ್ಲಿರುವ ವಿಶೇಷತೆ ಎಂದರೆ ಮೋದಿ ಅವರನ್ನು ಯಡಿಯೂರಪ್ಪ ಅವರು ಕಳೆದ ವರ್ಷ ಸಿಎಂ ಆಗಿದ್ದಾಗ ಜುಲೈ ತಿಂಗಳಲ್ಲಿ ಭೇಟಿ ಮಾಡಿದ್ದರು. ಆದರೆ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ಪ್ರಧಾನಿಯನ್ನು ಭೇಟಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಇಂದಿನಿಂದ 2 ದಿನ ಪ್ರಧಾನಿ ರಾಜ್ಯ ಪ್ರವಾಸ – 20 ಗಂಟೆಯಲ್ಲಿ 10 ಕಾರ್ಯಕ್ರಮಗಳಲ್ಲಿ ಮೋದಿ ಭಾಗಿ

    ಯಡಿಯೂರಪ್ಪ ಅವರು ಮೋದಿ ಅವರನ್ನು ಬರೋಬ್ಬರಿ 11 ತಿಂಗಳ ಬಳಿಕ ಭೇಟಿಯಾಗುತ್ತಿರುವ ಹಿನ್ನೆಲೆ ಬಹಳ ಉತ್ಸಾಹಕರಾಗಿದ್ದಾರೆ. ಈ ಹಿನ್ನೆಲೆ ಯಲಹಂಕಕ್ಕೆ ತೆರಳಿ ಮೋದಿ ಅವರನ್ನು ಬರಮಾಡಿಕೊಳ್ಳಲಿದ್ದಾರೆ.

    Live Tv

  • ಮೈಸೂರಿನಲ್ಲಿ ಮೋದಿ 2 ದಿನ- ಎಲ್ಲೆಲ್ಲಿಗೆ ಭೇಟಿ..?, ಕಾರ್ಯಕ್ರಮಗಳೇನು..?

    ಮೈಸೂರಿನಲ್ಲಿ ಮೋದಿ 2 ದಿನ- ಎಲ್ಲೆಲ್ಲಿಗೆ ಭೇಟಿ..?, ಕಾರ್ಯಕ್ರಮಗಳೇನು..?

    ಮೈಸೂರು: ಅಂತರಾಷ್ಟ್ರೀಯ ಯೋಗ ದಿನಕ್ಕೆ ಮೈಸೂರಿಗೆ ಆಗಮಿಸುವ ಮೋದಿ ಅವರ ಕಾರ್ಯಕ್ರಮ ಪಟ್ಟಿ ಅಂತಿಮವಾಗಿದೆ. ಜೂನ್ 20 ಮತ್ತು 21 ಎರಡು ದಿನ ಪ್ರಧಾನಿ ಮೋದಿ ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

    ಹೌದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 20 ರಂದು ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ವಿಮಾನದಲ್ಲಿ ಸಂಜೆ 4.55 ಕ್ಕೆ ಮೈಸೂರು ತಲುಪಲಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ಮೈಸೂರು ಮಹಾರಾಜ ಕಾಲೇಜ್ ಮೈದಾನದಲ್ಲಿ ನಡೆಯಲಿರುವ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 5 ಗಂಟೆಯಿಂದ 6.15 ರವರೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಇದನ್ನೂ ಓದಿ: ಮೋದಿ ಯೋಗಕ್ಕೆ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ- ಇಲ್ಲಿದೆ ಕಾರ್ಯಕ್ರಮದ ವಿವರ

    ಒಂದು ಕಾಲು ಗಂಟೆಯ ಸಂವಾದ ಮುಗಿಸಿ ಅಲ್ಲಿಂದ ನೇರವಾಗಿ ಚಾಮುಂಡಿ ಬೆಟ್ಟದ ಪಾದದ ಬಳಿಯ ಶ್ರೀ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. 7.15 ರವರೆಗೆ ಪ್ರಧಾನಿಗಳು ಮಠದಲ್ಲಿ ಇರಲಿದ್ದಾರೆ. ಮಠದಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ಶ್ರೀ ಚಾಮುಂಡಿ ತಾಯಿಯ ದರ್ಶನ ಪಡೆಯಲಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ರಾತ್ರಿ 7.30 ಕ್ಕೆ ಸರಿಯಾಗಿ ಆಗಮಿಸಲಿರುವ ಪ್ರಧಾನಿ, 15 ನಿಮಿಷ ಬೆಟ್ಟದಲ್ಲಿ ಇರಲಿದ್ದಾರೆ. ತಾಯಿ ದರ್ಶನ ಮುಗಿಸಿ ರಾಯ್ಡಿಸನ್ ಹೋಟೆಲ್ ಗೆ ಬಂದು ವಾಸ್ತವ್ಯ ಹೂಡಲಿದ್ದಾರೆ.

    ಜೂನ್ 21 ರಂದು ಬೆಳಗ್ಗೆ 6.30 ಕ್ಕೆ ಮೈಸೂರು ಅರಮನೆಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 6.30ಕ್ಕೆ ಆರಂಭವಾಗುವ ಯೋಗ 7.45 ಕ್ಕೆ ಮುಕ್ತಾಯವಾಗಲಿದೆ. ಕಾರ್ಯಕ್ರಮದ ನಂತರ ಯದುವಂಶದ ಪ್ರಮೋದಾದೇವಿ ಒಡೆಯರ್, ಯದುವೀರ್ ಅವರನ್ನು ಅರಮನೆಯ ಹಿಂಭಾಗದಲ್ಲಿನ ರಾಜವಂಶಸ್ಥರ ಮನೆಯಲ್ಲೆ ಭೇಟಿಯಾಗುವ ಸಾಧ್ಯತೆ ಇದೆ. ನಂತರ ಅಲ್ಲಿಂದ ನೇರವಾಗಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ವಿಶೇಷ ವಿಮಾನದಲ್ಲಿ ಕೇರಳಕ್ಕೆ ತೆರಳಲಿದ್ದಾರೆ.

    ಚಾಮುಂಡಿ ತಾಯಿ ದರ್ಶನ, ಸುತ್ತೂರು ಮಠಕ್ಕೆ ಭೇಟಿ ಹಾಗೂ ಯದುವಂಶದ ರಾಜವಂಶಸ್ಥರ ಜೊತೆ ಮಾತುಕತೆ ಮೋದಿ ಅವರ ಯೋಗ ಕಾರ್ಯಕ್ರಮ ಹಿನ್ನೆಲೆಯಲ್ಲಿನ ಪ್ರಮುಖ ಭೇಟಿಗಳಾಗಿವೆ.

    Live Tv

  • ಮೋದಿ ರಾಜ್ಯ ಪ್ರವಾಸಕ್ಕೂ ಮುನ್ನ ಬಿಜೆಪಿ ಪ್ಲಾನ್ – ರೋಡ್ ಶೋ, ಸಮಾವೇಶಕ್ಕೆ ಸಿದ್ಧತೆ

    ಮೋದಿ ರಾಜ್ಯ ಪ್ರವಾಸಕ್ಕೂ ಮುನ್ನ ಬಿಜೆಪಿ ಪ್ಲಾನ್ – ರೋಡ್ ಶೋ, ಸಮಾವೇಶಕ್ಕೆ ಸಿದ್ಧತೆ

    ಬೆಂಗಳೂರು: ಆಜಾದಿ ಕಾ ಅಮೃತ್ ಮಹೋತ್ಸವ ಹಾಗೂ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ವೇಳೆ ಬಿಜೆಪಿ ರೋಡ್ ಶೋ ಮತ್ತು ಬೃಹತ್ ಸಮಾವೇಶಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದೆ.

    ಚುನಾವಣಾ ವರ್ಷ ಆರಂಭವಾಗಿರುವದರಿಂದ ಈಗಿನಿಂದಲೇ ಚುನಾವಣಾ ರಣಕಹಳೆ ಮೊಳಗಿಲು ಬಿಜೆಪಿ ತೀರ್ಮಾನಿಸಿದೆ. ಇದಕ್ಕೆ ಮೋದಿ ಪ್ರವಾಸವನ್ನು ಬಳಸಿಕೊಳ್ಳಲು ಮುಂದಾಗಿದೆ. ಜೂನ್ 20ರಂದು ಬೆಂಗಳೂರಿನ ಕೊಮ್ಮಘಟ್ಟ ಮತ್ತು ಜೂನ್ 21ರಂದು ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಎರಡು ಬೃಹತ್ ಸಮಾವೇಶ ಹಮ್ಮಿಕೊಳ್ಳಲು ರಾಜ್ಯ ಬಿಜೆಪಿ ಪ್ಲಾನ್ ಮಾಡ್ತಿದೆ. ಇದನ್ನೂ ಓದಿ: 3 ದಿನ, 30 ಗಂಟೆ ಪ್ರಶ್ನೆ – ಶುಕ್ರವಾರ ಮತ್ತೆ ರಾಹುಲ್‌ಗೆ ಸಮನ್ಸ್

    ಜೂನ್ 20ರಂದು ಬೆಂಗಳೂರಿಗೆ ಎಂಟ್ರಿ ಕೊಡುವಾಗಲೇ ಯಲಹಂಕದಿಂದ ಐಐಎಸ್‍ಸಿವರೆಗೆ 14 ಕಿಲೋಮೀಟರ್ ರೋಡ್ ಶೋ ಮತ್ತು ಕೊಮ್ಮಘಟ್ಟದಿಂದ ಜ್ಞಾನಭಾರತಿ ವಿವಿವರೆಗೂ 12 ಕಿಲೋಮೀಟರ್ ರೋಡ್ ಶೋ ಆಯೋಜಿಸಲು ಇಂದಿನ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದ್ರೆ, ರಾಜ್ಯ ಬಿಜೆಪಿಯ ಈ ಪ್ಲಾನ್‍ಗಳಿಗೆ ಪ್ರಧಾನಿ ಕಚೇರಿಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.

    Live Tv

  • ಯೋಗದಲ್ಲೂ ರಾಜಕಾರಣ – ಪ್ರತಾಪ್ ಸಿಂಹ, ಎಸ್.ಎ.ರಾಮದಾಸ್ ನಡುವೆ ಜಟಾಪಟಿ

    ಯೋಗದಲ್ಲೂ ರಾಜಕಾರಣ – ಪ್ರತಾಪ್ ಸಿಂಹ, ಎಸ್.ಎ.ರಾಮದಾಸ್ ನಡುವೆ ಜಟಾಪಟಿ

    ಮೈಸೂರು: ಜೂನ್ 21ರಂದು ಮೈಸೂರಿನಲ್ಲಿ ನಡೆಯಲಿರುವ ಯೋಗ ದಿನಾಚರಣೆ ಬೆನ್ನೆಲೆ ಯೋಗದಲ್ಲೂ ರಾಜಕಾರಣ ನಡೆಯುತ್ತಿದ್ದು, ಮೈಲೇಜ್‍ಗಾಗಿ ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್ ನಡುವೆ ಪೈಪೋಟಿ ನಡೆದಿದೆ.

    ನಗರದ ಅರಮನೆ ಆವರಣದಲ್ಲಿ ಯೋಗ ದಿನಾಚರಣೆಯ ಬಗ್ಗೆ ಮಾಹಿತಿ ನಿಡುತ್ತಿದ್ದ ವೇಳೆ ಮಾಧ್ಯಮಗಳ ಮುಂದೆಯೇ ಇಬ್ಬರು ಬಿಜೆಪಿ ನಾಯಕರ ಜಟಾಪಟಿ ನಡೆದಿದೆ. ಪ್ರಧಾನಿಯೊಂದಿಗೆ ಪಾಲ್ಗೊಳ್ಳುವ ಯೋಗಪಟುಗಳ ಸಂಖ್ಯೆ ವಿಚಾರದಲ್ಲಿ ದ್ವಂದ್ವವಾಗಿದ್ದು, ಕಾರ್ಯಕ್ರಮದಲ್ಲಿ 7 ರಿಂದ 8 ಸಾವಿರ ಜನರು ಭಾಗವಹಿಸುತ್ತಾರೆ ಎಂದ ಪ್ರತಾಪ್ ಸಿಂಹ ಹೇಳಿದ್ದು, ಈ ವೇಳೆ ಮಧ್ಯ ಪ್ರವೇಶಿಸಿದ ರಾಮದಾಸ್ ಈಗಾಗಲೇ 13 ಸಾವಿರ ನೋಂದಣಿ ಆಗಿದೆ ಎಂದರು. ಇದನ್ನೂ ಓದಿ: ಬೂದಿಮುಚ್ಚಿದ ಕೆಂಡದಂತೆ ಭಾರತ – ಯುಪಿಯಲ್ಲಿ 250ಕ್ಕೂ ಗಲಭೆಕೋರರು ಅರೆಸ್ಟ್

    ಈ ವೇಳೆ ಕೋಪಗೊಂಡ ಪ್ರತಾಪ್ ಸಿಂಹ ಅವರು ನಾನು ಮಾತನಾಡುತ್ತಿದ್ದೇನೆ, ರಾಮದಾಸ್‍ಜೀ ಸುಮ್ಮನಿರಬೇಕು ಎಂದು ಸಿಡಿಮಿಡಿಗೊಂಡರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮದಾಸ್ ಅವರು, ಪ್ರತಾಪ್ ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ. ಹಾಗಾಗಿ ವಿವರಣೆ ನೀಡಲು ಯತ್ನಿಸಿದೆ. ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಫೀರ್ ಪಾಶಾ ದರ್ಗಾ, ಮೂಲ ಅನುಭವ ಮಂಟಪ ವಿವಾದ – 770 ಮಠಾಧೀಶರಿಂದ ಇಂದು ಬೃಹತ್ ಸಮಾವೇಶ

  • ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: 15,000 ಜನ ಭಾಗಿ ಸಾಧ್ಯತೆ

    ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: 15,000 ಜನ ಭಾಗಿ ಸಾಧ್ಯತೆ

    ಬೆಂಗಳೂರು: ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಮೈಸೂರಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು, ಮೈಸೂರು ಅರಮನೆ ಎದುರು 15 ಸಾವಿರ ಜನರು ಯೋಗ ಮಾಡಲಿದ್ದಾರೆ.

    ಈ ಕುರಿತು ಕೈಗೊಂಡಿರುವ ಪೂರ್ವಸಿದ್ಧತೆಗಳ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ 15 ಸಾವಿರ ಯೋಗಪಟುಗಳ ಆಯ್ಕೆ ಪ್ರಕ್ರಿಯೆಯನ್ನು ಜೂನ್ 13 ರೊಳಗೆ ಪೂರ್ಣಗೊಳಿಸುವಂತೆ ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿ ಸೂಚಿಸಿದಂತೆ ಸಮಾಜದ ಎಲ್ಲ ವರ್ಗಗಳ ಜನರನ್ನೂ ಸೇರ್ಪಡೆಗೊಳಿಸುವಂತೆ ತಿಳಿಸಿದರು. ಇದನ್ನೂ ಓದಿ: ಚಿರು ಜಾಗ ತುಂಬುವುದಕ್ಕೆ ರಾಯನ್‍ಗೂ ಸಾಧ್ಯವಿಲ್ಲ: ಮೇಘನಾ ರಾಜ್

    ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಸಾರಿಗೆ ಸೌಲಭ್ಯ, ಲಘು ಉಪಾಹಾರ ಕುಡಿಯುವ ನೀರು ಮತ್ತಿತರ ವ್ಯವಸ್ಥೆಗಳನ್ನು ಯಾವುದೇ ಲೋಪವಿಲ್ಲದಂತೆ ನಿರ್ವಹಿಸಬೇಕು. ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ವಹಿಸುವಂತೆ ಸೂಚಿಸಿದರು.

    ಇದರೊಂದಿಗೆ ಕೇಂದ್ರ ಆಯುಷ್ ಸಚಿವಾಲಯವು ಯೋಗಕ್ಕೆ ಸಂಬಂಧಿಸಿದಂತೆ ವಸ್ತುಪ್ರದರ್ಶನವನ್ನು ಸಹ ಏರ್ಪಡಿಸಿದೆ. ಇದಕ್ಕೆ ಅಗತ್ಯ ಸಹಕಾರವನ್ನು ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

    ಈ ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೋರ್ ಕಮಿಟಿ ಸೇರಿದಂತೆ ಒಟ್ಟು 14 ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿಗಳು ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವಂತೆ ಸೂಚಿಸಿದರು. ಪ್ರಧಾನಿಯವರ ಭೇಟಿ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾಗದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಇದನ್ನೂ ಓದಿ: ಭೋಗಸ್ ಬೋರ್ಡ್ ಆಗಿರುವ ವಕ್ಫ್ ಬೋರ್ಡ್ ರದ್ದು ಮಾಡಬೇಕು: ಮುತಾಲಿಕ್

    ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶದ 75 ಪಾರಂಪರಿಕ ತಾಣಗಳಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದ 5 ತಾಣಗಳಾದ ಮೈಸೂರು, ಹಳೆಬೀಡು, ಹಂಪಿ, ಪಟ್ಟದಕಲ್ ಹಾಗೂ ವಿಜಯಪುರದ ಗೋಲಗುಂಬಜ್ ಈ ಕಾರ್ಯಕ್ರಮಕ್ಕೆ ಆಯ್ಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಹಳೆಬೀಡಿನಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಹಂಪಿಯಲ್ಲಿ ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ ಜೋಷಿ, ಪಟ್ಟದಕಲ್ಲಿನಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ವಿಜಯಪುರದ ಗೋಲಗುಂಬಜ್‌ನಲ್ಲಿ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಪಾಲ್ಗೊಳ್ಳಲಿದ್ದಾರೆ.

    ಇದಲ್ಲದೆ ರಾಜ್ಯ ಮಟ್ಟದಲ್ಲಿ ರಾಜ್ಯದ 75 ಐತಿಹಾಸಿಕ ಸ್ಥಳಗಳಲ್ಲಿ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗುವುದು. ಸಭೆಯಲ್ಲಿ ಸಚಿವರಾದ ಡಾ. ಕೆ. ಸುಧಾಕರ್, ಎಸ್.ಟಿ.ಸೋಮಶೇಖರ್, ರೇಷ್ಮೆ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ಯೋಜನೆ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  • ಜೂನ್ 21ರಂದು ಮೈಸೂರಿಗೆ ಬರಲಿದ್ದಾರೆ ಪ್ರಧಾನಿ ಮೋದಿ

    ಜೂನ್ 21ರಂದು ಮೈಸೂರಿಗೆ ಬರಲಿದ್ದಾರೆ ಪ್ರಧಾನಿ ಮೋದಿ

    ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಜೂನ್ 21 ರಂದು ಅರಮನೆ ನಗರಿ ಮೈಸೂರಿಗೆ ಬರಲಿದ್ದಾರೆ.

    ಹೌದು. ಈ ಬಾರಿ ವಿಶ್ವ ಯೋಗಾ ದಿನಾಚರಣೆಯನ್ನು ಪ್ರಧಾನಿ ಮೈಸೂರಿನಲ್ಲಿ ಆಚರಿಸಲಿದ್ದಾರೆ. ಮೈಸೂರಿನ ರೇಸ್ ಕೋರ್ಸ್ ಮೈದಾನದಲ್ಲಿ ಲಕ್ಷಾಂತರ ಯೋಗಪಟುಗಳ ಸಮ್ಮುಖದಲ್ಲಿ ಪ್ರಧಾನಿಗಳು ಯೋಗಾ ದಿನಾಚರಣೆಗೆ ಚಾಲನೆ ನೀಡಿ ಬಳಿಕ ತಾವು ಕೂಡ ಯೋಗ ಮಾಡಲಿದ್ದಾರೆ.

    ಈ ಬಗ್ಗೆ ಕೇಂದ್ರದ ಆಯುಷ್ ಕಾರ್ಯಾಲಯ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಪ್ರಧಾನ ಮಂತ್ರಿಗಳು ಮೈಸೂರಿಗೆ ಆಗಮಿಸುವುದನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ