Tag: ಯೋಗೇಶ್ ನಾರಾಯಣ್

  • `ಎರಡನೇ ಸಲ’ ಸಿನಿಮಾ ಪ್ರದರ್ಶನ  ಬುಧವಾರದಿಂದ ಸ್ಥಗಿತ

    `ಎರಡನೇ ಸಲ’ ಸಿನಿಮಾ ಪ್ರದರ್ಶನ ಬುಧವಾರದಿಂದ ಸ್ಥಗಿತ

    ಬೆಂಗಳೂರು: ಎರಡನೇ ಸಲ ಸಿನಿಮಾವನ್ನು ಬುಧವಾರದಿಂದ ಸ್ಥಗಿತಗೊಳಿಸಲು ಚಿತ್ರತಂಡ ತೀರ್ಮಾನಿಸಿದೆ.

    ಚಿತ್ರ ರಿಲೀಸ್‍ಗಿಂತ ಮೊದಲು ರಿಲೀಸ್ ನಂತರವೂ ನಿರ್ದೇಶಕ ಗುರುಪ್ರಸಾದ್ ಚಿತ್ರದ ಪ್ರಚಾರಕ್ಕೆ ಬಾರದೇ ಇರುವ ಕಾರಣ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗುವುದು ಎಂದು ನಿರ್ಮಾಪಕ ಯೋಗೇಶ್ ನಾರಾಯಣ್ ಹೇಳಿದ್ದಾರೆ.

    ಈ ವಿಚಾರವಾಗಿ ನಿರ್ಮಾಪಕ ಯೋಗೇಶ್ ನಾರಾಯಣ್ ಫಿಲ್ಮ್ ಚೇಂಬರ್‍ನಲ್ಲಿ ದೂರು ನೀಡಿದ್ದು ನಾಳೆ ಗುರುಪ್ರಸಾದ್‍ ಅವರನ್ನು ಕರೆಸಿ ಮಾತನಾಡೋದಾಗಿ ಫಿಲ್ಮ್ ಚೆಂಬರ್ ಭರವಸೆ ನೀಡಿದೆ ಎನ್ನುವ ಮಾಹಿತಿ ಸಿಕ್ಕಿದೆ.

    ಈ ಆರೋಪದ ಜೊತೆಗೆ ಎರಡನೇ ಸಲ ಚಿತ್ರಕ್ಕೆ ಪ್ರೈಂ ಟೈಂನಲ್ಲಿ ಶೋ ನೀಡುತ್ತಿಲ್ಲ ಅನ್ನುವ ಅಸಮಾಧಾನದಿಂದ ಎರಡನೇ ಸಲ ಪ್ರದರ್ಶನವನ್ನೇ ಹಿಂಪಡೆಯುವ ನಿರ್ಧಾರಕ್ಕೆ ನಿರ್ಮಾಪಕರು ಬಂದಿದ್ದಾರೆ.

    ಧನಂಜಯ್, ಸಂಗೀತಾ ಭಟ್, ಲಕ್ಷ್ಮಿ, ಅವಿನಾಶ್, ಪದ್ಮಜ ರಾವ್ ತಾರಾಗಣದ ಅನೂಪ್ ಸೀಳಿನ್ ಸಂಗೀತಾ ಇರುವ ಎರಡನೇ ಸಲ ಮಾರ್ಚ್ 3ರಂದು ಬಿಡುಗಡೆಯಾಗಿತ್ತು.