Tag: ಯೋಗೇಶ್ವರ್

  • ಯೋಗೇಶ್ವರ್ ಭ್ರಷ್ಟಾಚಾರ ಹೊದ್ದು ಮಲಗಿದ್ದಾರೆ – ಮಿತ್ರಮಂಡಳಿಯಲ್ಲಿ ಬಿರುಕು

    ಯೋಗೇಶ್ವರ್ ಭ್ರಷ್ಟಾಚಾರ ಹೊದ್ದು ಮಲಗಿದ್ದಾರೆ – ಮಿತ್ರಮಂಡಳಿಯಲ್ಲಿ ಬಿರುಕು

    ಬೆಂಗಳೂರು: ಸಿಪಿ ಯೋಗೇಶ್ವರ್ ಅವರನ್ನು ಸಚಿವರನ್ನಾಗಿ ಮಾಡಿರುವ ವಿಚಾರ ರಾಜ್ಯ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ್ದು ಮಾತ್ರವಲ್ಲ ಮಿತ್ರಮಂಡಳಿಯಲ್ಲಿ ಬಿರುಕು ಮೂಡಿದೆ.

    ಯೋಗೇಶ್ವರ್ ಬ್ಲಾಕ್‍ಮೇಲ್ ಮಾಡಿ ಮಂತ್ರಿಯಾದರು ಎಂದು ವಿಶ್ವನಾಥ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸುತ್ತಿದ್ದರೆ ಸಚಿವ ರಮೇಶ್ ಜಾರಕಿಹೊಳಿ ಮಾತ್ರ ಯೋಗೇಶ್ವರ್ ಪರ ಬಲವಾಗಿ ಬ್ಯಾಟ್ ಮಾಡಿದ್ದಾರೆ.

    ಯೋಗೇಶ್ವರ್ ಭ್ರಷ್ಟಾಚಾರ ಹೊದ್ದು ಮಲಗಿದ್ದಾರೆ. ಮೆಗಾ ಸಿಟಿ ಹೆಸರಿನಲ್ಲಿ 9,731 ಜನರಿಗೆ ಟೋಪಿ ಹಾಕಿದ್ದಾರೆ. ಇಂತಹ ಭ್ರಷ್ಟ, ದಲ್ಲಾಳಿಯನ್ನ ಮಂತ್ರಿ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ ಎಂದು ಪರಿಷತ್‌ ಸದಸ್ಯ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಆದರೆ ಬೆಳಗಾವಿ ಸಾಹುಕಾರ ಮಾತ್ರ ಯೋಗೇಶ್ವರ್ ತ್ಯಾಗವನ್ನು ಸ್ಮರಿಸಿದ್ದಾರೆ.

    ಯೋಗೇಶ್ವರ್ ಎಲ್ಲರನ್ನು ಒಗ್ಗೂಡಿಸಲು ಸಿಕ್ಕಾಪಟ್ಟೆ ಕಷ್ಟಪಟ್ಟರು. ಆರೋಗ್ಯ ಹಾಳು ಮಾಡಿಕೊಂಡರು. ಮನೆ ಅಡ ಇಟ್ಟು ಎಂಟಿಬಿ ಬಳಿ 9 ಕೋಟಿ ಸಾಲ ಮಾಡಿಕೊಂಡರು. ಈಗ ಮಾತನಾಡುವವರು ಆಗ ಎಲ್ಲಿದ್ದರು ಎಂದು ಪ್ರಶ್ನಿಸಿ ರಮೇಶ್ ಜಾರಕಿಹೊಳಿ ಕಿಡಿಕಾರಿದರು.

    ಯೋಗೇಶ್ವರ್‌ ಅವರಿಗೆ ಮಂತ್ರಿ ಸ್ಥಾನ ನೀಡಿದ್ದು ಸರಿಯಿದೆ. ಯಾಕೆಂದರೆ ಈ ಸರ್ಕಾರ ರಚನೆಯಲ್ಲಿ ಅವರ ಪಾತ್ರ ಬಹಳ ದೊಡ್ಡದಿದೆ. ವಿಶ್ವನಾಥ್ ಹೇಳಿಕೆಗಳನ್ನು ಆಶೀರ್ವಾದ ಎಂದು ಪರಿಗಣಿಸುತ್ತೇನೆ ಎಂದು ಜಾರಕಿಹೊಳಿ ಸುಮ್ಮನಾದರು.

    ಬಿಸಿ ಪಾಟೀಲ್ ಪ್ರತಿಕ್ರಿಯಿಸಿ, ವಿಶ್ವನಾಥ್ ಈ ರೀತಿ ಮಾತನಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಸೋತರೂ ವಿಶ್ವನಾಥ್‍ರನ್ನು ಸಿಎಂ ದೊಡ್ಡ ಮನಸ್ಸು ಮಾಡಿ ಎಂಎಲ್‍ಸಿ ಮಾಡಿದ್ದಾರೆ ಎಂದು ಹೇಳಿದರು.

  • ಕೊರೊನಾ ಸಂಕಷ್ಟದ ನಡುವೆ ಸ್ಥಾನಮಾನಕ್ಕೆ ದೆಹಲಿ ದಂಡಯಾತ್ರೆ

    ಕೊರೊನಾ ಸಂಕಷ್ಟದ ನಡುವೆ ಸ್ಥಾನಮಾನಕ್ಕೆ ದೆಹಲಿ ದಂಡಯಾತ್ರೆ

    – ಡಿಸಿಎಂ ಪಟ್ಟಕ್ಕೆ ಜಾರಕಿಹೋಳಿ, ಸಚಿವ ಸ್ಥಾನಕ್ಕೆ ಯೋಗೇಶ್ವರ್ ಲಾಬಿ

    ನವದೆಹಲಿ: ಕೊರೊನಾ ಸಂಕಷ್ಟದ ನಡುವೆ ರಾಜಕೀಯ ಚಟುವಟಿಕೆಗಳು ಗರಿಗೆದರಲು ಆರಂಭಿಸಿದ್ದು, ಸ್ಥಾನಮಾನಕ್ಕಾಗಿ ದೆಹಲಿ ದಂಡಯಾತ್ರೆ ಶುರುವಾಗಿದೆ. ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾಗಿರುವ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ತಮ್ಮನ್ನು ಡಿಸಿಎಂ ಮಾಡುವಂತೆ ಮನವಿ ಮಾಡಿದ್ದಾರೆ.

    ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ಆಗಮಿಸಿರುವ ರಮೇಶ್ ಜಾರಕಿಹೋಳಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ ಮಾಡಿ ಚರ್ಚೆ ನಡೆಸಿದರು. ರಮೇಶ್ ಜಾರಕಿಹೋಳಿ ಜೊತೆಗೆ ನೂತನ ಪರಿಷತ್ ಸದಸ್ಯ ಯೋಗೇಶ್ವರ್ ಕೂಡ ಉಪಸ್ಥಿತಿ ಇದ್ದು, ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಉಭಯ ನಾಯಕರ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

    ಡಿಸಿಎಂ ಸ್ಥಾನ ನೀಡುವಂತೆ ಮನವಿ ಮಾಡಿರುವ ರಮೇಶ ಜಾರಕಿಹೋಳಿ, ಹಳೆ ಮಾತುಕತೆಯಂತೆ ನಿರ್ಧಾರ ಕೈಗೊಳ್ಳಬೇಕು ಎಂದು ವರಿಷ್ಠರಿಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ತೊರೆದು ಬರುವಾಗ ಬಿಜೆಪಿ ಡಿಸಿಎಂ ಸ್ಥಾನದ ಭರವಸೆ ನೀಡಲಾಗಿತ್ತು. ಈ ಕಾರಣಕ್ಕೆ ಎಲ್ಲರನ್ನು ಒಗ್ಗೂಡಿಸಿಕೊಂಡು ಬಿಜೆಪಿ ಸೆರ್ಪಡೆಯಾಗಿದೆ. ಹೈಕಮಾಂಡ್ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು, ಹೈಕಮಾಂಡ್ ಸಚಿವ ಸ್ಥಾನದ ಭರವಸೆ ನೀಡಿತ್ತು ಈಗ ಅವಕಾಶ ಸಿಕ್ಕಿದ್ದು ಸಚಿವ ಸ್ಥಾನ ನೀಡುವಂತೆ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಜೆ.ಪಿ ನಡ್ಡಾಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

    ಜೆ.ಪಿ ನಡ್ಡಾ ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಉಭಯ ನಾಯಕರು ಭೇಟಿಯಾಗಿದ್ದು ನಾಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಮಂಗಳವಾರ ಭೇಟಿ ಮಾಡಲಿದ್ದಾರೆ.

  • 15 ದಿನ ಹಿಂದೆ ಕಾಂಗ್ರೆಸ್‌ಗೆ ಬರ್ತಿನಿ ಅಂತ ಯೋಗೇಶ್ವರ್‌ ನನ್ನ ಬಳಿ ಚರ್ಚಿಸಿದ್ದ – ಡಿಕೆಶಿ

    15 ದಿನ ಹಿಂದೆ ಕಾಂಗ್ರೆಸ್‌ಗೆ ಬರ್ತಿನಿ ಅಂತ ಯೋಗೇಶ್ವರ್‌ ನನ್ನ ಬಳಿ ಚರ್ಚಿಸಿದ್ದ – ಡಿಕೆಶಿ

    ಬೆಂಗಳೂರು: ಯಡಿಯೂರಪ್ಪ ಅವರನ್ನ ಕೆಳಗೆ ಇಳಿಸುತ್ತಿದ್ದಾರೆ.  ಹೀಗಾಗಿ ನಾನು ಕಾಂಗ್ರೆಸ್‌ಗೆ ಬರುತ್ತೇನೆ ಎಂದು 15 ದಿನದ ಹಿಂದೆ ಯೋಗೇಶ್ವರ್‌ ನನ್ನ ಬಳಿ ಮನವಿ ಮಾಡಿಕೊಂಡಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌  ಹೊಸ ಬಾಂಬ್‌ ಸಿಡಿಸಿದ್ದಾರೆ.

    ಬಿಜೆಪಿಯ ವಿಧಾನಪರಿಷತ್‌ ಸದಸ್ಯ ಸಿಪಿ ಯೋಗೇಶ್ವರ್‌ ತನ್ನ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಡಿಕೆ ಶಿವಕುಮಾರ್‌ ಈಗ ಈ ರೀತಿಯ ಹೇಳಿಕೆ ನೀಡಿ ತಿರುಗೇಟು ನೀಡಿದ್ದಾರೆ.

    ನನ್ನ ಬಳಿ ಬಂದು ಕಾಂಗ್ರೆಸ್ ಪಕ್ಷಕ್ಕೆ ಬರುತ್ತೇನೆ ಎಂದು ಚರ್ಚೆ ಮಾಡಿದ್ದ. ಈ ವೇಳೆ ನಾನೇ ಇಲ್ಲಿಗೆ ಬರುವುದು ಬೇಡ. ಅಲ್ಲೇ ಲಾಯಲ್‌ ಆಗಿ ಇರು ಎಂದು ಹೇಳಿ ಕಳುಹಿಸಿಕೊಟ್ಟಿದ್ದೆ. ಈಗ ಯಾಕೆ ಹೀಗೆ ಮಾತಾಡಿದ್ದರೋ ಗೊತ್ತಿಲ್ಲ. ಮೆಂಟಲ್ ಆಗಿದ್ದಾರಾ ಎಂದು ಎಂದು ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಬಿಜೆಪಿಗೆ ಬರುವಂತೆ ಎಚ್‍ಡಿಕೆಗೆ ನೇರ ಆಹ್ವಾನ ನೀಡಿದ ಸಿಪಿ ಯೋಗೇಶ್ವರ್

    ಯೋಗೇಶ್ವರ್‌ ಹೇಳಿದ್ದು ಏನು?
    ಜಿಲ್ಲೆಯಲ್ಲಿ ಡಿಕೆಶಿ ಸಹೋದರರು ಆಪರೇಷನ್ ಆರಂಭ ಮಾಡಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಅವರ ಪಕ್ಷದಲ್ಲಿ ಭವಿಷ್ಯ ಇಲ್ಲ. ಆದ್ದರಿಂದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಬಿಜೆಪಿಗೆ ಬರಲಿ. ಡಿಕೆ ಶಿವಕುಮಾರ್ ಅವರು ಚುನಾವಣೆಯಲ್ಲಿ ಗೆಲುವು ಪಡೆಯಲು ಕುಮಾರಸ್ವಾಮಿ ಸಹಾಯ ತೆಗೆದುಕೊಂಡಿದ್ದರು. ಆದರೆ ಈಗ ಅವರ ನಡುವೆ ಒಗ್ಗಟ್ಟಿಲ್ಲ. ಇಬ್ಬರ ನಡುವೆ ಅಂತರ್ ಯುದ್ಧ ಪ್ರಾರಂಭವಾಗಿದೆ ಎಂದು ಆರೋಪ ಮಾಡಿದ್ದರು.

  • ಸೈನಿಕನಿಗೆ ಎದುರಾಯ್ತು ಟ್ರಬಲ್ ಶೂಟರ್‌ರಿಂದ ಟ್ರಬಲ್

    ಸೈನಿಕನಿಗೆ ಎದುರಾಯ್ತು ಟ್ರಬಲ್ ಶೂಟರ್‌ರಿಂದ ಟ್ರಬಲ್

    ಬೆಂಗಳೂರು: ಸೈನಿಕ ಯೋಗೇಶ್ವರ್ ಹಾಗೂ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ನಡುವಿನ ಫೈಟ್ ಈಗ ಕೋರ್ಟ್ ಮೆಟ್ಟಿಲೇರುವ ಹಂತಕ್ಕೆ ಹೋಗಿದೆ. ರಾಮನಗರ ಜಿಲ್ಲಾ ರಾಜಕಾರಣದ ಜಿದ್ದಾಜಿದ್ದಿ ಕೋರ್ಟ್ ನಲ್ಲಿ ಮುಖಾಮುಖಿಯಾಗುವಂತಾಗಿದೆ.

    ಜನವರಿ 13 ರಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯೋಗೇಶ್ವರ್ ಹೇಳಿಕೆ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಲು ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ. ಯೋಗೇಶ್ವರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದರು. ಈ ಸಂಬಂಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜೊತೆ ಡಿಕೆಶಿ ಚರ್ಚೆ ಕೂಡ ನಡೆಸಿದ್ದರು. ಆದರೆ ಯೋಗೇಶ್ವರ್ ಸದನದ ಸದಸ್ಯರಲ್ಲದ ಕಾರಣ ಹಕ್ಕು ಚ್ಯುತಿ ಮಂಡನೆ ಬೇಡ ಮಾನನಷ್ಟ ಮೊಕದ್ದಮೆ ಹೂಡುವಂತೆ ರಮೇಶ್ ಕುಮಾರ್ ಸಲಹೆ ನೀಡಿದ್ದಾರೆ.

    ಯೋಗೇಶ್ವರ್ ಹೇಳಿದ್ದು ಏನು?
    ಕನಕಪುರದಲ್ಲಿ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ವಿರೋಧಿಸಿ ಜನವರಿ 13 ರಂದು ಬಿಜೆಪಿ ನಾಯಕರುಗಳು ಕನಕಪುರದಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕನಕಪುರದಲ್ಲಿ ಡಿಕೆಶಿ ಸಹೋದರರು ನೂರಾರು ಕೊಲೆ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

    ಈ ಹೇಳಿಕೆಯನ್ನೇ ಇಟ್ಟುಕೊಂಡು ಸಿ.ಪಿ.ಯೋಗೇಶ್ವರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಡಿಕೆಶಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪಬ್ಲಿಕ್ ಟಿವಿಯ ಜೊತೆಗಿನ ಯೋಗೇಶ್ವರ್ ಸಂದರ್ಶನದ ವಿಡಿಯೋ ಆಧಾರವಾಗಿಟ್ಟುಕೊಂಡು ಮಾನ ನಷ್ಟ ಮೊಕದ್ದಮೆ ಹೂಡಲು ಡಿಕೆಶಿ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.

     

  • ಯೋಗೇಶ್ವರ್, ವಿಶ್ವನಾಥ್‍ಗೆ ಮಂತ್ರಿ ಸ್ಥಾನ ಕೊಡಿ- ಕುಮಟಳ್ಳಿ ಹೊಸ ಡಿಮ್ಯಾಂಡ್

    ಯೋಗೇಶ್ವರ್, ವಿಶ್ವನಾಥ್‍ಗೆ ಮಂತ್ರಿ ಸ್ಥಾನ ಕೊಡಿ- ಕುಮಟಳ್ಳಿ ಹೊಸ ಡಿಮ್ಯಾಂಡ್

    ಬೆಂಗಳೂರು: ಬಿಜೆಪಿಯಲ್ಲಿ ಸಂಪುಟ ವಿಸರಣೆ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ಸಚಿವ ಸ್ಥಾನದ ಆಕಾಂಕ್ಷಿ ಆಗಿರೋ ಶಾಸಕ ಮಹೇಶ್ ಕುಮಟಳ್ಳಿ ಸಿಎಂಗೆ ಮುಂದೆ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ. ನನಗೆ ಸಚಿವ ಸ್ಥಾನ ಕೊಡದೆ ಇದ್ದರೂ ಪರವಾಗಿಲ್ಲ. ಸಿ.ಪಿ ಯೋಗೇಶ್ವರ್ ಹಾಗೂ ವಿಶ್ವನಾಥ್‍ಗೆ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.

    ಶಾಸಕರ ಭವನದಲ್ಲಿ ಮಾತನಾಡಿದ ಶಾಸಕ ಮಹೇಶ್ ಕುಮಟಳ್ಳಿ, ಈ ಸರ್ಕಾರ ಬರಲು 17 ಜನರು ಕಾರಣ. ಅದರಲ್ಲಿ ಎರಡನೇ ರನ್ನರ್ ಅಪ್ ನಾನೇ. ನನಗೆ ಸ್ಥಾನ ಕೊಡದೆ ಇದ್ದರೆ ಅನ್ಯಾಯ ಆಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ವೇಳೆ ನನಗೆ ಸ್ಥಾನ ಕೊಡದೆ ಹೋದರೂ ಪರವಾಗಿಲ್ಲ ಸಿ.ಪಿ ಯೋಗೇಶ್ವರ್, ವಿಶ್ವನಾಥ್‍ಗೆ ಸ್ಥಾನ ಕೊಡಿ ಎಂದು ಸಿಎಂ ಯಡಿಯೂರಪ್ಪಗೆ ಡಿಮ್ಯಾಂಡ್ ಮಾಡಿದ್ದಾರೆ.

    ಯೋಗೇಶ್ವರ್ ಬಿಜೆಪಿ ಸರ್ಕಾರ ಬರಲು ಕಾಣಿಕೆ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳುವಾಗ ನಮ್ಮ ಜೊತೆ ಇದ್ದವರು ಯೋಗೇಶ್ವರ್. ಬಿಜೆಪಿಗೆ ಅವರ ಕೊಡುಗೆ ಇದೆ. ಈ ಸರ್ಕಾರಕ್ಕೂ ಅವರ ಕೊಡುಗೆ ಇದೆ. ಹೀಗಾಗಿ ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡಬೇಕು. ಅದೇ ರೀತಿ ಈ ಸರ್ಕಾರಕ್ಕೆ ವಿಶ್ವನಾಥ್ ಕೊಡುಗೆ ಇದೆ. ಸೋತರು ಅಂತ ಅವರನ್ನು ಕೈ ಬಿಡಬೇಡಿ. ಅವರಿಗೂ ಮಂತ್ರಿ ಸ್ಥಾನ ಕೊಡಿ ಎಂದು ಒತ್ತಾಯ ಮಾಡಿದರು.

    ಇದೇ ವೇಳೆ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹೇಶ್ ಕುಮಟಳ್ಳಿ, ನನಗೆ ಸಿಎಂ ಸಚಿವ ಸ್ಥಾನ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ. ಸಿಎಂ ಯಡಿಯೂರಪ್ಪ ಯಾವತ್ತು ಕೊಟ್ಟ ಮಾತು ತಪ್ಪಿಲ್ಲ. ಗೆದ್ದ 11 ಜನರ ಪೈಕಿ ನನಗೆ ಯಾಕೆ ಕೊಡಲ್ಲ ಅಂತ ಸುದ್ದಿ ಬರುತ್ತಿದಿಯೋ ನನಗೆ ಗೊತ್ತಿಲ್ಲ. ಸಿಎಂ ಮಾತು ಕೊಟ್ಟಿದ್ದರು. ಹೀಗಾಗಿ ನಾನು ಮಂತ್ರಿ ಆಗುತ್ತೀನಿ ಎಂಬ ವಿಶ್ವಾದ ಇದೆ. ಮಂತ್ರಿ ಮಾಡುತ್ತಾರೆ ಅಂತ ನಂಬಿಕೆ ಇದೆ. ಒಂದು ವೇಳೆ ನನ್ನ ಹೆಸರು ಬಿಟ್ಟರೆ ನನಗೆ ಅನ್ಯಾಯವಾಗುತ್ತೆ. ಆದರೂ ಸಿಎಂ, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದ. ಕೊನೆ ಘಳಿಗೆಯಲ್ಲಿ ಸ್ಥಾನ ತಪ್ಪಿದರು ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೀನಿ ಎಂದು ತಿಳಿಸಿದರು.

  • ಶಾಸಕರ ಖರೀದಿ ಮಾಡಲು ಯೋಗೇಶ್ವರ್ ಗೆ 20, 30 ಕೋಟಿ ಎಲ್ಲಿಂದ ಬಂತು: ಹೆಚ್‍ಡಿಕೆ ಪ್ರಶ್ನೆ

    ಶಾಸಕರ ಖರೀದಿ ಮಾಡಲು ಯೋಗೇಶ್ವರ್ ಗೆ 20, 30 ಕೋಟಿ ಎಲ್ಲಿಂದ ಬಂತು: ಹೆಚ್‍ಡಿಕೆ ಪ್ರಶ್ನೆ

    ರಾಮನಗರ: ನಾನು ಸಿಎಂ ಆಗಿದ್ದಾಗ ಪಾಪದ ಹಣವನ್ನು ಶೇಖರಣೆ ಮಾಡಿ 10 ಜನ ಎಂಎಲ್‍ಎಗಳನ್ನು ಖರೀದಿ ಮಾಡುವುದಕ್ಕೆ ಸಾಧ್ಯವಿರಲಿಲ್ಲವೇ? 20, 30 ಕೋಟಿಯನ್ನು ಎಂಎಲ್‍ಎಗಳಿಗೆ ಕೊಟ್ಟು ಅವರನ್ನು ಖರೀದಿ ಮಾಡಿ ನನ್ನ ಸರ್ಕಾರವನ್ನು ಬೀಳಿಸಿದರು. ಅದರ ನೇತೃತ್ವವನ್ನು ಮಾಜಿ ಶಾಸಕ ಯೋಗೇಶ್ವರ್ ವಹಿಸಿಕೊಂಡಿದ್ದರು. ಅವರಿಗೆ ಆ ಹಣ ಎಲ್ಲಿಂದ ಬಂತು ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

    ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್‍ಎಸ್‍ಎಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಮಾತನಾಡಿದ ಅವರು ನಾನು ಮಾಡಿದ ಸಾಲಮನ್ನಾ ಯೋಜನೆ ಸರ್ಟಿಫಿಕೇಟ್ ಸಿಗಲಿಲ್ಲ. ಸಾಲ ಮನ್ನಾ ಯೋಜನೆಯನ್ನಾ ಕೆಲ ಮೀಡಿಯಾದವರು ಅಪಪ್ರಚಾರವನ್ನ ಮಾಡಿದರು. ನಾನು ಸಾಲಮನ್ನಾ ಮಾಡುವ ಮೂಲಕ ರಾಜ್ಯದ ಆರ್ಥಿಕ ಸ್ಥಿತಿಯನ್ನು ಹದಗೆಡಿಸುವ ಕೆಲಸಕ್ಕೆ ಕೈಹಾಕಲಿಲ್ಲ ಎಂದು ಹೇಳಿದರು.

    224 ಕ್ಷೇತ್ರಗಳಲ್ಲಿ ಎಷ್ಟು ಕುಟುಂಬಗಳಿಗೆ ಸಾಲಮನ್ನಾ ಯೋಜನೆಯ ಪಲಾನುಭವಿಗಳಿದ್ದಾರೆ ಎಂಬ ಬುಕ್ ಮಾಡುತ್ತಿದ್ದು ಅದನ್ನ ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇನೆ. ಆಗಲಾದರೂ ಮಾಧ್ಯಮದವರು ಏನ್ ಮಾಡುತ್ತಾರೆ ನೋಡೋಣ? ಅಧಿಕಾರದಿಂದ ಕೆಳಗಿಳಿದು ಬರುವಾಗ ಸಂತೋಷದಿಂದಲೇ ಬಂದೆ. ಇದೀಗ ಉತ್ತರ ಕರ್ನಾಟಕದಲ್ಲಿ ಜನ ಬೀದಿಗೆ ಬಿದ್ದಿದ್ದಾರೆ ಮಕ್ಕಳು ಶಾಲೆಗೆ ಹೋಗಲಾಗ್ತಿಲ್ಲ. ಸರ್ಕಾರಕ್ಕೆ ಅವರ ಬಗ್ಗೆ ಗಮನವಿಲ್ಲ ಎಂದು ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದರು.

    ನಾನು ಸಿಎಂ ಸ್ಥಾನದಲ್ಲಿ ಕೂತು ಪಾಪದ ಹಣ ಶೇಖರಣೆ ಮಾಡಿ 10 ಶಾಸಕರನ್ನು ಖರೀದಿ ಮಾಡಿ ಸರ್ಕಾರವನ್ನು ಉಳಿಸಿಕೊಳ್ಳಬಹುದಿತ್ತಲ್ವಾ. ಸರ್ಕಾರ ಬೀಳಿಸೋಕೆ ಲೀಡರ್ ಶಿಪ್ ವಹಿಸಿದ್ದು ಚನ್ನಪಟ್ಟಣದ ಮಾಜಿ ಶಾಸಕ ಯೋಗೇಶ್ವರ್. ಅವರಿಗೆ 20, 30 ಕೋಟಿ ಶಾಸಕರಿಗೆ ನೀಡೋಕೆ ಹಣ ಎಲ್ಲಿಂದ ಬಂತು? ಯಾವ ಪುರುಷಾರ್ಥಕ್ಕೆ ಸರ್ಕಾರವನ್ನು ಬೀಳಿಸಿದರು ಎಂದು ಪ್ರಶ್ನಿಸಿದರು.

  • ಕೈ-ತೆನೆ ಭದ್ರಕೋಟೆಯಲ್ಲಿ ಯೋಗೇಶ್ವರ್ ಎಂಟ್ರಿಗೆ ಬಿಜೆಪಿ ತಂತ್ರ

    ಕೈ-ತೆನೆ ಭದ್ರಕೋಟೆಯಲ್ಲಿ ಯೋಗೇಶ್ವರ್ ಎಂಟ್ರಿಗೆ ಬಿಜೆಪಿ ತಂತ್ರ

    ಮೈಸೂರು: ಆಪರೇಷನ್ ಕಮಲದಲ್ಲಿ ಮುಖ್ಯ ಪಾತ್ರವಹಿಸಿದ್ದ ಯೋಗೇಶ್ವರ್ ಅವರನ್ನು ಹುಣಸೂರಿನಿಂದ ಕಣಕ್ಕೆ ಇಳಿಸಲು ಬಿಜೆಪಿ ಲೆಕ್ಕಾಚಾರ ಹಾಕಿಕೊಂಡಿದೆ.

    ಹುಣಸೂರು ಕ್ಷೇತ್ರವನ್ನ ಗೆದ್ದೆ ಗೆಲ್ಲಬೇಕು ಎಂದು ಬಿಜೆಪಿ ತಂತ್ರ ರೂಪಿಸಿದ್ದು, ಈ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಕೋಟೆ ಛಿದ್ರಗೊಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಅನರ್ಹ ಶಾಸಕ ಎಚ್.ವಿಶ್ವನಾಥ್ ರಾಜೀನಾಮೆ ಕೊಟ್ಟಿದ್ದಾರೆ. ಈ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಗೆ ಟಿಕೆಟ್ ಕೊಟ್ಟು ಹುಣಸೂರು ಕ್ಷೇತ್ರವನ್ನು ವಶ ಪಡಿಸಿಕೊಳ್ಳುವ ತಂತ್ರವನ್ನು ಬಿಜೆಪಿ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

    ಹುಣಸೂರು ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ನಡುವೆ ಪೈಪೋಟಿ ಇದ್ದ ಕ್ಷೇತ್ರವಾಗಿದೆ. ಹೀಗಾಗಿ ಕಾಂಗ್ರೆಸ್ ಜೆಡಿಎಸ್ ಜೊತೆಗಿನ ಪೈಪೋಟಿಯ ಲಾಭವನ್ನು ಪಡೆಯಲು ಬಿಜೆಪಿ ತೀರ್ಮಾನಿಸಿದ್ದು, ಜಾತಿ ಹಾಗೂ ಹಿಂದುತ್ವದ ಅಜೆಂಡಾದ ಮೂಲಕ ಕ್ಷೇತ್ರವನ್ನು ಪಡೆಯಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.

    ಬಿಜೆಪಿ ಲೆಕ್ಕಾಚಾರ:
    ಈ ಕ್ಷೇತ್ರದಲ್ಲಿ ವಿಶ್ವನಾಥ್ ಪ್ರಾಬಲ್ಯವಿದೆ. ಒಂದು ವೇಳೆ ಈ ಕ್ಷೇತ್ರದಲ್ಲಿ ವಿಶ್ವನಾಥ್ ಪುತ್ರನನ್ನು ಕಣಕ್ಕಿಳಿಸಿದರೆ ಅದು ಪಕ್ಷಕ್ಕೆ ನಷ್ಟವಾಗುತ್ತದೆ. ಮೊದಲೇ ಅದು ಕಾಂಗ್ರೆಸ್ ಜೆಡಿಎಸ್‍ನ ಭದ್ರಕೋಟೆಯಾಗಿದೆ. ಹೀಗಾಗಿ ಈ ಕ್ಷೇತ್ರಕ್ಕೆ ಯೋಗೇಶ್ವರ್ ಕಣಕ್ಕಿಳಿಸಿದರೆ ಒಕ್ಕಲಿಗರ ಮತ ಮತ್ತು ಶಾಸಕ ಪ್ರತಾಪ್ ಸಿಂಹರ ಮೂಲಕ ಹಿಂದುತ್ವ ಮತವನ್ನು ಪಡೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

    ಇನ್ನೊಂದೆಡೆ ಆಪರೇಷನ್ ಕಮಲದ ಸಂದರ್ಭದಲ್ಲಿ ಹೆಚ್ಚು ಸಹಾಯ ಮಾಡಿದ್ದಾರೆ. ಈ ಮೂಲಕ ಅವರಿಗೆ ಬೆಲೆ ಕೊಟ್ಟಂತಾಗುತ್ತದೆ ಎಂಬುದು ಬಿಜೆಪಿ ಪ್ಲ್ಯಾನ್ ಆಗಿದೆ. ಕಳೆದು ವಿಧಾನಸಭಾ ಚುನಾವಣೆಯಲ್ಲೂ ಇವರ ಹೆಸರು ಕೇಳಿ ಬಂದಿತ್ತು.

  • ಯಾವುದೋ ಒತ್ತಾಸೆಗೆ ಮಣಿದು ಸಿಎಂ ಉತ್ತರ ಕರ್ನಾಟಕಕ್ಕೆ ಹೋಗಿದ್ದಾರೆ : ಯೋಗೇಶ್ವರ್

    ಯಾವುದೋ ಒತ್ತಾಸೆಗೆ ಮಣಿದು ಸಿಎಂ ಉತ್ತರ ಕರ್ನಾಟಕಕ್ಕೆ ಹೋಗಿದ್ದಾರೆ : ಯೋಗೇಶ್ವರ್

    ರಾಮನಗರ: ನಾನು ಸಿಎಂ ಬಗ್ಗೆ ಟೀಕೆ ಮಾಡುವುದಿಲ್ಲ, ಆದರೆ ಭಾರತೀಯ ಜನತಾ ಪಾರ್ಟಿಯ ಸದಸ್ಯನಾಗಿ ನಾನು ಸಿಎಂ ನಡವಳಿಕೆಯನ್ನು ಖಂಡಿಸುತ್ತೇನೆ ಎಂದು ಮಾಜಿ ಶಾಸಕ ಸಿ.ಪಿ ಯೋಗೇಶ್ವರ್

    ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗೇಶ್ವರ್, ಭಾರತೀಯ ಜನತಾ ಪಾರ್ಟಿಯ ಸದಸ್ಯನಾಗಿ ನಾನು ಸಿಎಂ ನಡವಳಿಕೆಯನ್ನು ಖಂಡಿಸುತ್ತೇನೆ. ಮಾನ್ಯ ಮುಖ್ಯಮಂತ್ರಿ ಅವರಿಗೆ ಉತ್ತರ ಕರ್ನಾಟಕದ ಭಾಗಕ್ಕೆ ಹೋಗುವುದಕ್ಕೆ ಮನಸ್ಸು ಇರಲಿಲ್ಲ. ಆತ್ಮವಿಶ್ವಾಸ ಸಹ ಇರಲಿಲ್ಲ. ಯಾವುದೋ ಒತ್ತಾಸೆಗೆ ಮಣಿದು ಅವರು ಅಲ್ಲಿಗೆ ಹೋಗಿದ್ದಾರೆ ಎಂದು ಎಂದು ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

    ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ನಡೆಸುವ ಶಕ್ತಿಯನ್ನ ದಿನೇ ದಿನೇ ಕಳೆದುಕೊಳ್ಳುತ್ತಿದ್ದಾರೆ ಎಂದು ಈ ಘಟನೆಯಿಂದ ನಮಗೆ ಅರ್ಥವಾಗುತ್ತದೆ. ಒಂದು ವರ್ಷದ ಬಳಿಕ ಚನ್ನಪಟ್ಟಣ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಮತ್ತೆ ಯಾವಾಗ ಬರುತ್ತಾರೆ ಎಂಬುದನ್ನ ಅವರನ್ನೇ ಕೇಳಬೇಕು ಎಂದರು.

    ಸಿಎಂಗೆ ನಾನು ಅಧಿಕಾರ ಕಳೆದುಕೊಳ್ಳುತ್ತೇನೆ ಎಂಬ ಆತಂಕದಲ್ಲಿದ್ದಾರೆ. ಎಲ್ಲರೂ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಭಯವಾಗುತ್ತಿದೆ. ಆದರೆ ನಾನು ಅವರ ಯಾವುದೇ ರೀತಿಯ ಟೀಕೆ ಮಾಡಲು ಹೋಗುವುದಿಲ್ಲ ಎಂದರು. ಇನ್ನೂ ನೀರಾವರಿ ವಿಚಾರದಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನಾನೇನು ಎಂಜಿನಿಯರ್ ಅಲ್ಲ, ಮುಖ್ಯಮಂತ್ರಿ ಏನು ಬೇಕಾದರೂ ಮಾತನಾಡಬಹುದು. ಅದಕ್ಕೆ ಜನ ಉತ್ತರ ಕೊಡುತ್ತಾರೆ ಎಂದು ಯೋಗೇಶ್ವರ್ ಹೇಳಿದರು.

    ಸಿಎಂ ಹೇಳಿದ್ದೇನು?
    ಕಳೆದ ದಿನ ಸಿಎಂ ರಾಯಚೂರಿಗೆ ಗ್ರಾಮ ವಾಸ್ತವ್ಯಕ್ಕೆ ಹೋಗಿದ್ದರು. ಈ ವೇಳೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು. ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದ್ದರು. ಆಗ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡಬೇಕು ನಿಮಗೆ, ಎಂದು ಹೇಳಿ ಪ್ರತಿಭಟನಾಕಾರರ ಮೇಲೆ ಕೂಗಾಡಿದ್ದರು. ಅಷ್ಟೇ ಅಲ್ಲದೇ ನಾನು ಗ್ರಾಮವಾಸ್ತವ್ಯ ಮಾಡುವುದಿಲ್ಲ ಎಂದು ಹೇಳಿದ್ದರು.

  • ರಾಮನಗರದಲ್ಲಾದ ಮುಖಭಂಗಕ್ಕೆ ಯಡಿಯೂರಪ್ಪ ನೇರ ಹೊಣೆ: ಹೈಕಮಾಂಡ್‍ಗೆ ದೂರು

    ರಾಮನಗರದಲ್ಲಾದ ಮುಖಭಂಗಕ್ಕೆ ಯಡಿಯೂರಪ್ಪ ನೇರ ಹೊಣೆ: ಹೈಕಮಾಂಡ್‍ಗೆ ದೂರು

    ಬೆಂಗಳೂರು: ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದ ಸರಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಹೈಕಮಾಂಡ್‍ಗೆ ದೂರು ದಾಖಲಾಗಿದೆ.

    ರಾಮನಗರದಲ್ಲಾದ ಮುಖಭಂಗಕ್ಕೆ ಯಡಿಯೂರಪ್ಪ ಅವರೇ ನೇರ ಹೊಣೆ. ಸಿ ಪಿ ಯೋಗೇಶ್ವರ್ ಅವರನ್ನು ಬಿಜೆಪಿಗೆ ಕರೆ ತಂದಿದ್ದೇ ಯಡಿಯೂರಪ್ಪ. ಯೋಗೇಶ್ವರ್ ಮಾತು ಕೇಳಿ ಚಂದ್ರಶೇಖರ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡರು. ಪರಿಣಾಮ ಈಗ ನಮ್ಮ ಅಭ್ಯರ್ಥಿಯೇ ಕಣದಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಬಣ ದೂರು ಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.

     

    ಇಂದು ಚಂದ್ರಶೇಖರ್ ಜೊತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಡಿಕೆ ಸುರೇಶ್, ಚಂದ್ರಶೇಖರ್ ಅವರು ಮೂಲತಃ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ನಂಬಿ ಬೆಳೆದವರು. ಆದರೆ ಅವರಿಗೆ ಉಂಟಾದ ಕೆಲ ನಿರ್ಧಾರದಿಂದ ದುಡುಕಿದ್ದರು. ಆದರೆ ಇಂದು ಅವರು ತೆಗೆದುಕೊಂಡಿರುವ ನಿರ್ಣಯಕ್ಕೆ ಪಕ್ಷದ ಕಡೆಯಿಂದ ಸ್ವಾಗತ ಕೋರುತ್ತೇನೆ ಎಂದು ಹೇಳಿದ್ದರು.

    ಬಿಜೆಪಿ ನಾಯಕರು ಧೋರಣೆಯಿಂದ ಚಂದ್ರಶೇಖರ್ ಬೇಸತ್ತಿದ್ದಾರೆ. ಈಗ 5 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಮಂಡ್ಯ ಚುನಾವಣೆಗೆ ಎಲ್ಲ ನಾಯಕರು ರಾಮನಗರದ ಮೇಲೆ ಹೋಗಬೇಕು. ಆದರೆ ರಾಮನಗರಕ್ಕೆ ಯಾವ ನಾಯಕರು ಪ್ರಚಾರಕ್ಕೆ ಬಂದಿಲ್ಲ. ಪ್ರಚಾರದ ವೇಳೆ ನಾಯಕರು ಬಾವುಟ ಕೊಟ್ಟು ಹೋದವರು, ಬಾವುಟ ಏನಾಯಿತು ಎಂದು ಕೇಳುವುದಿಲ್ಲ ಎಂದು ಡಿ.ಕೆ.ಸುರೇಶ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಮಾರಸ್ವಾಮಿಗೆ ಅಧಿಕಾರ ಸಿಕ್ಕಿದ್ದು ಹೇಗಂತ ವಿವರಿಸಿದ್ರು ಸಿ.ಪಿ.ಯೋಗೇಶ್ವರ್

    ಕುಮಾರಸ್ವಾಮಿಗೆ ಅಧಿಕಾರ ಸಿಕ್ಕಿದ್ದು ಹೇಗಂತ ವಿವರಿಸಿದ್ರು ಸಿ.ಪಿ.ಯೋಗೇಶ್ವರ್

    ರಾಮನಗರ: ಕಣ್ಣೀರು ಹಾಕಿ ಮತ ತೆಗೆದುಕೊಳ್ಳುವುದು ನನ್ನ ಜಾಯಮಾನ ಅಲ್ಲ. ಚನ್ನ ಪಟ್ಟಣದಲ್ಲಿ ಇಡೀ ಒಕ್ಕಲಿಗರನ್ನು ನನ್ನ ವಿರುದ್ಧ ಎತ್ತಿ ಕಟ್ಟಲಾಗಿತ್ತು. ಅದಕ್ಕೆ ನಮ್ಮವರೆಲ್ಲಾ ಕುಮಾರಸ್ವಾಮಿ ಸಿಎಂ ಆಗಲಿ ಅಂತಾ ಜೆಡಿಎಸ್‍ಗೆ ವೋಟ್ ಹಾಕಿದ್ರು. ಇತ್ತ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪೂಜೆ ಪುನಸ್ಕಾರ ಮಾಡಿದ್ರು. ಈಗ ಎಲ್ಲವೂ ಸೇರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.

    ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್, ಸಿದ್ದರಾಮಯ್ಯ ಗೆ ಸಮ್ಮಿಶ್ರ ಸರ್ಕಾರ ಮಾಡಲು ಸಹಮತವಿರಲಿಲ್ಲ. ಕುಮಾರಸ್ವಾಮಿ ಡಿಕೆ ಶಿವಕುಮಾರ್ ಒಟ್ಟಿಗೆ ಸೇರಿಕೊಂಡು ಸರ್ಕಾರ ರಚನೆ ಮಾಡಿದ್ದಾರೆ. ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಇವಾಗ ಒಟ್ಟಿಗೆ ಸೇರಿಲ್ಲ, ಮುಂಚೆಯಿಂದಲೂ ಒಟ್ಟಾಗಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಡಿಕೆ ಶಿವಕುಮಾರ್ ಹೂಂಕರಿಸುತ್ತಿದ್ದರು. ಆದ್ರೆ ಈಗ ಅವರ ಪರಿಸ್ಥಿತಿ ಹೇಗಿದೆ ನೋಡಿ ಎಂದು ಹೇಳಿದ್ರು.

    ಇಂದು ಜೆಡಿಎಸ್ ಮತ್ತು ಕಾಂಗ್ರೆಸ್ ಅಣ್ಣತಮ್ಮಂದಿರು ಒಂದಾದ್ರು, ಆದ್ರೆ ಕಾರ್ಯಕರ್ತರು ಒಂದಾಗಬೇಕಲ್ಲ. ಸಿಎಂ ಹೇಳಿದ ಪ್ರಕಾರ ಈ ಸರ್ಕಾರ ಸಾಂದರ್ಭಿಕ ಶಿಶು ಅಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಲು ದೇವೆಗೌಡರ ದಂಡದಿಂದ ಹುಟ್ಟುಹಾಕಿದ ಪ್ರಣಾಳ ಶಿಶು. ಇದು ಜೆಡಿಎಸ್ ಅವರ ತಾತ್ಕಾಲಿಕ ಗೆಲುವು ಅಷ್ಟೇ. ಕಾಂಗ್ರೆಸ್ ನವರು ಮನೆ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. 120 ಸೀಟ್ ಗೆದ್ದರೆ ಅಧಿಕಾರ ಮಾಡುವುದು ಕಷ್ಟ. ಇನ್ನೂ ಈ ಸರ್ಕಾರ ಬಹಳ ದಿನ ಉಳಿಯಲ್ಲ. ರಾಮನಗರದಿಂದ ಸ್ಪರ್ಧೆ ಮಾಡುವುದಿಲ್ಲ. ಚನ್ನಪಟ್ಟಣ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.