Tag: ಯೋಗೀಶ್ ಗೌಡ

  • ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಉಗ್ರನೇ: ವಿನಯ್‌ ಕುಲಕರ್ಣಿ

    ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಉಗ್ರನೇ: ವಿನಯ್‌ ಕುಲಕರ್ಣಿ

    ಬೆಳಗಾವಿ: ನಾನೊಬ್ಬ ರಾಜಕಾರಣಿ ಅಷ್ಟೇ ಅಲ್ಲ, ನಾನೊಬ್ಬ ರೈತ, ನನ್ನ ಫಾರ್ಮ್‌ನಲ್ಲಿ ಐದು ಸಾವಿರ ಜಾನುವಾರುಗಳಿವೆ. ನನ್ನ ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ನಾನು ಅವುಗಳನ್ನು ಸಾಕಿದ್ದೇನೆ ಎಂದು ಧಾರಾವಾಡದ (Dharwad) ತಮ್ಮ ಫಾರ್ಮ್‌ನಲ್ಲಿರುವ ಹಸುಗಳನ್ನು ನೆನೆದು ಮಾಜಿ ಸಚಿವ ವಿನಯ್‌ ಕುಲಕರ್ಣಿ (Vinay Kulkarni) ಭಾವುಕರಾದರು.

    ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ನನ್ನ ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ನಾನು ಹಸುಗಳನ್ನು ಸಾಕಿದ್ದೇನೆ. ಧಾರವಾಡದಲ್ಲಿದ್ದಾಗ ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಫಾರ್ಮ್‌ಗೆ ಹೋಗುತ್ತಿದ್ದೆ. ಬೆಂಗಳೂರು ಪ್ರವಾಸದಲ್ಲಿದ್ದಾಗ ಮಾತ್ರ ನನ್ನ ಫಾರ್ಮ್‌ಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಧಾರವಾಡದಲ್ಲಿದ್ದಾಗ ಪ್ರತಿದಿನ ತಪ್ಪದೇ ಫಾರ್ಮ್‌ಗೆ ಹೋಗಿ ಹಸುಗಳ ಆರೈಕೆ ಮಾಡ್ತಿದ್ದೆ. ಇಷ್ಟು ದಿನ ಫಾರ್ಮ್‌ಗೆ ಹೋಗದೇ ಇರುವುದು ತುಂಬಾ ನೋವು ತರಿಸಿದೆ ಎಂದು ಭಾವುಕರಾದರು.

    ಇದಲ್ಲದೇ ರಾಜ್ಯ, ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಉಗ್ರನಾ? ಸದ್ಯ ಜಾನುವಾರುಗಳನ್ನು ನನ್ನ 22 ವರ್ಷದ ಪುತ್ರಿ ನೋಡಿಕೊಳ್ಳುತ್ತಿದ್ದಾಳೆ. ಎರಡು, ಮೂರು ಹಸು ಕಟ್ಟಿದ ರೈತರೇ ಒಂದು ದಿನ ಮನೆ ಬಿಟ್ಟು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಂತಹದ್ರಲ್ಲಿ ಸಾವಿರಾರು ಹಸುಗಳನ್ನು ಕಟ್ಟಿದ ನಾನು ಮನೆಗೆ ಹೋಗದಿದ್ದರೇ ಮುಖ ಪ್ರಾಣಿಗಳ ಕಥೆ ಏನಾಗಬೇಕು ಎಂದು ತನ್ನ ಫಾರ್ಮ್‌ನಲ್ಲಿರುವ ಜಾನುವಾರುಗಳನ್ನು ನೆನೆದು ಬಾವುಕರಾದರು‌. ಇದನ್ನೂ ಓದಿ: ಹಣ ನೀಡಲಿಲ್ಲವೆಂದು ವೃದ್ಧ ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ- ತಾಯಿ ಸ್ಥಿತಿ ಗಂಭೀರ

    ಯೋಗೇಶ್‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ದೇಶದ ಕಾನೂನಿಗೆ ಗೌರವಿಸುತ್ತೇನೆ. ಕಾನೂನು ಹೋರಾಟ ಮುಂದುವರಿಸುತ್ತೇನೆ. ಬರುವ ದಿನಗಳಲ್ಲಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವ ವಿಶ್ವಾಸವಿದೆ‌. ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ‌. ವಿನಯ್ ಕುಲಕರ್ಣಿ ಕ್ಷೇತ್ರ ಬದಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಧಾರವಾಡ ಪ್ರವೇಶಕ್ಕೆ ‌ಅನುಮತಿ ಸಿಗದಿದ್ದರೂ ಹೊರಗೆ ಇದ್ದೇ ಕಣಕ್ಕಿಳಿಯುತ್ತೇನೆ. ಯಾವುದೇ ಕಾರಣಕ್ಕೂ ಧಾರವಾಡ ಗ್ರಾಮೀಣ ಕ್ಷೇತ್ರ ಬದಲಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: `ಕೆಲವೇ ಕ್ಷಣಗಳಲ್ಲಿ ವಿಧಾನಸೌಧ ಬ್ಲಾಸ್ಟ್’ – ಬೆದರಿಕೆ ಕರೆ ಮಾಡಿದ್ದ ಟೆಕ್ಕಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ಫೆಬ್ರವರಿ 19ರ ವರೆಗೆ ವಿಸ್ತರಣೆ

    ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ಫೆಬ್ರವರಿ 19ರ ವರೆಗೆ ವಿಸ್ತರಣೆ

    ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲು ಸೇರಿರುವ ಮಾಜಿ ಸಚಿವ ವಿನಯ ಕುಲಕರ್ಣಿ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ಜನವರಿ 22ರ ವರೆಗೆ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿದೆ.

    ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನೆಲೆ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯ ಮತ್ತೆ ಬಂಧನದ ಅವಧಿ ವಿಸ್ತರಣೆ ಮಾಡಿ ಆದೇಶಿಸಿದೆ. ವಿನಯ್ ಕುಲಕರ್ಣಿ ಕಳೆದ 3 ತಿಂಗಳಿಂದ ಬೆಳಗಾವಿ ಹಿಂಡಲಗಾ ಜೈಲಿನಲ್ಲಿದ್ದು, ಜಾಮೀನು ಅರ್ಜಿ ಸಹ ಧಾರವಾಡ ಹೈಕೋರ್ಟ್ ನಲ್ಲಿ ತಿರಸ್ಕಾರಗೊಂಡಿದೆ.

    ವಿನಯ್ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರ ನ್ಯಾಯಾಂಗ ಬಂಧನ ಸಹ ಫೆಬ್ರವರಿ 10ಕ್ಕೆ ವಿಸ್ತರಣೆ ಮಾಡಿ ಸಿಬಿಐ ನ್ಯಾಯಾಲಯ ಆದೇಶ ಮಾಡಿದೆ. ಈಗಾಗಲೇ ಸಿಬಿಐ ವಿನಯ್ ಕುಲಕರ್ಣಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ವಿನಯ್ ಪರ ವಕೀಲರು ಸುಪ್ರೀಂ ಕೊರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಬೇಕಿತ್ತು. ಆದರೆ ಧಾರವಾಡ ಸಿಬಿಐ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆದ ಕಾರಣ ಇಲ್ಲೇ ಜಾಮೀನು ಅರ್ಜಿ ಹಾಕುವ ಸಾಧ್ಯತೆ ಇದೆ.

  • ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ

    ವಿನಯ್ ಕುಲಕರ್ಣಿ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ

    ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಯವರ ನ್ಯಾಯಾಂಗ ಬಂಧನವನ್ನ ಮತ್ತೆ ವಿಸ್ತರಣೆ ಮಾಡಲಾಗಿದೆ.

    ನವೆಂಬರ್ 5ರಂದು ಸಿಬಿಐನಿಂದ ಬಂಧಿತರಾಗಿರುವ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ಈಗಾಗಲೇ ವಜಾಗೊಂಡಿದ್ದು, ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಇಂದು ಅವರ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆ ಇಂದು ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನವನ್ನ ಜನವರಿ 8ರ ವರೆಗೆ ವಿಸ್ತರಣೆ ಮಾಡಲಾಯಿತು.

    ಇದೇ ನ್ಯಾಯಾಲಯದಲ್ಲಿ ವಿನಯ್ ಕುಲಕರ್ಣಿಯವರ ಮಾವ ಚಂದ್ರಶೇಖರ್ ಇಂಡಿ ಕೂಡಾ ನ್ಯಾಯಾಂಗ ಬಂಧನದಲ್ಲಿದ್ದು, ಅವರ ನ್ಯಾಯಾಂಗ ಬಂಧನವನ್ನು ಸಹ ಸಿಬಿಐ ವಿಶೇಷ ನ್ಯಾಯಾಲಯ ಜನವರಿ 8ಕ್ಕೆ ವಿಸ್ತರಣೆ ಮಾಡಿದೆ. ಚಂದ್ರಶೇಕರ ಇಂಡಿ ಅಕ್ರಮ ಶಸ್ತ್ರಾಸ್ರ ಪ್ರಕಣದಲ್ಲಿ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿದ್ದರು. ಸದ್ಯ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವಿನಯ್ ಕುಲಕರ್ಣಿ ಇದ್ರೆ, ಧಾರವಾಡ ಜೈಲಿನಲ್ಲಿ ಚಂದ್ರಶೇಖರ್ ಇಂಡಿಯವರನ್ನ ಇಡಲಾಗಿದೆ.

  • ಪತಿಯ ಕೊಲೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬರುತ್ತಿದೆ: ಯೋಗೀಶ್ ಗೌಡ ಪತ್ನಿ

    ಪತಿಯ ಕೊಲೆ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬರುತ್ತಿದೆ: ಯೋಗೀಶ್ ಗೌಡ ಪತ್ನಿ

    – ಕಾಂಗ್ರೆಸ್ ಸೇರಿದ್ರೂ ನ್ಯಾಯ ಮುಖ್ಯ
    – ರಾಜಕೀಯ ಅಲ್ಲ, ಮಕ್ಕಳು ಮುಖ್ಯ

    ಧಾರವಾಡ: ನನ್ನ ಪತಿಯ ಕೊಲೆ ಪ್ರಕರಣ ಒಂದು ಹಂತಕ್ಕೆ ಮುಟ್ಟುತ್ತಿದೆ. ಅದು ನಮಗೆ ಸಂತೋಷ ತಂದಿದೆ ಎಂದು ಮಲ್ಲಮ್ಮ ಹೇಳಿದ್ದಾರೆ.

    ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯೋಗೀಶ್ ಪತ್ನಿ ಮಲ್ಲಮ್ಮ, ನಾನು ಕಾಂಗ್ರೆಸ್ ಪಕ್ಷ ಸೇರಿದರೂ ನನ್ನ ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎರಡು ಭಾವನೆ ಮಾಡಿಲ್ಲ. ಸತ್ಯಾಸತ್ಯತೆ ಹೊರ ಬರಲಿ, ನಾನು ವಿನಯ್ ಕುಲಕರ್ಣಿ ಬಗ್ಗೆ ಏನು ಮಾತನಾಡಲ್ಲ. ಈಗ ತನಿಖೆ ನಡೆದಿದೆ, ಅದು ನಡೆದೇ ನಡೆಯುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾನೂನಿಗಿಂತ ದೊಡ್ಡವರು ನಾವಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ನಾನು ಸಣ್ಣ ಮಕ್ಕಳನ್ನ ಕಟ್ಡಿಕೊಂಡು ಕಷ್ಟ ಅನುಭವಿಸಿದ್ದೇನೆ. ನಾನು ಯಾರನ್ನೂ ನೋಡಿ ಕಾಂಗ್ರೆಸ್ ಸೇರಿರಲಿಲ್ಲ. ನನ್ನ ಮೇಲೆ ಎರಡು ಬಾರಿ ಯಾರೋ ದಾಳಿ ಮಾಡಿದ್ರು. ಆಗ ನಾನು ಪ್ರಹ್ಲಾದ ಜೋಶಿ ಅವರ ಕಾಲು ಬಿದ್ದಿದ್ದೆ. ಅವರು ಯಾವುದಕ್ಕೂ ಸ್ಪಂದನೆ ಮಾಡಲಿಲ್ಲ ಎಂದು ಹೇಳಿದರು.

    30 ಲಕ್ಷ ಸಾಲ ಮಾಡಿಸಿ ಜಿ.ಪಂಚಾಯತ್ ಚುನಾವಣೆ ಮಾಡಿಸಿದ್ರು. ತಾನೇ ನನ್ನ ಹೊಲ ಬರೆಸಿಕೊಳ್ಳಲು ಮುಂದಾದ್ರು. ನನ್ನ ಆಸ್ತಿ ಹೋಗುತ್ತೆ ಅಂತ ಹೇಳಿ ನಾನು ಕಾಂಗ್ರೆಸ್ ಸೇರಿದೆ. ಆದರೆ ನಾನು ವಿನಯ್ ಕುಲಕರ್ಣಿ ಅವರಿಂದ ಪಕ್ಷ ಸೇರಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯನವರ ಬಳಿ ಹೋಗಿದ್ದೆ ಎಂದರು. ಇದನ್ನೂ ಓದಿ; ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ

    ನಾನು ನನ್ನ ಪತಿಯನ್ನ ಕಳೆದುಕೊಂಡಿದ್ದೇನೆ. ಈಗ ನನ್ನ ಮಕ್ಕಳು ಮುಖ್ಯ ನನಗೆ. ನನಗೆ ರಾಜಕೀಯ ಮುಖ್ಯ ಅಲ್ಲ, ನ್ಯಾಯಾಲಯ ಎಲ್ಲರಿಗೆ ನ್ಯಾಯ ಕೊಡೋದಕ್ಕೆ ಇದೆ. ವಿನಯ್ ಕುಲಕರ್ಣಿ ಪಾತ್ರ ಕೊಲೆಯಲ್ಲಿ ಇದೆಯೋ ಇಲ್ಲವೋ ಎಂದು ಸಿಬಿಐ ಅಧಿಕಾರಿಗಳು ಹೊರ ತೆಗೆಯುತ್ತಾರೆ ಎಂದು ವಿಸ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ತಮ್ಮನಂತೆ ಅಣ್ಣ ವಿನಯ್ ಕುಲಕರ್ಣಿಗೂ ಜನ್ಮದಿನ ಮುಂಚೆಯೇ ಸಿಬಿಐ ವಿಚಾರಣೆ