Tag: ಯೋಗೀಶ್

  • ‘ಮೂರನೇ ಕೃಷ್ಣಪ್ಪ’ ಟ್ರೈಲರ್ ಗೆ ಧ್ವನಿಯಾದ ಲೂಸ್ ಮಾದ

    ‘ಮೂರನೇ ಕೃಷ್ಣಪ್ಪ’ ಟ್ರೈಲರ್ ಗೆ ಧ್ವನಿಯಾದ ಲೂಸ್ ಮಾದ

    ಮ್ಮ ಅಭಿನಯದ ಮೂಲಕವೇ ಕನ್ನಡ ಸಿನಿಪ್ರೇಕ್ಷಕರನ್ನು ಗಮನಸೆಳೆದ ಸಂಪತ್ ಮೈತ್ರೇಯಾ ಮೂರನೇ ಕೃಷ್ಣಪ್ಪ (Murane Krishnappa) ಸಿನಿಮಾ ಮೂಲಕ ನಾಯಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈಗಾಗ್ಲೇ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ತಯಾರಿ ನಡೆದಿದೆ. ನಾಳೆ ಮೂರನೇ ಕೃಷ್ಣಪ್ಪ ಸಿನಿಮಾದ ಮೊದಲ ನೋಟ ಹೊರಬೀಳಲಿದ್ದು, ಲೂಸ್ ಮಾದ ಯೋಗಿ (Yogeesh)  ಟ್ರೇಲರ್ ಗೆ ಧ್ವನಿಯಾಗಿದ್ದಾರೆ. ಈ ಮೂಲಕ ನವೀನ್ ರೆಡ್ಡಿ ಹೊಸ ಕನಸಿಗೆ ಸಿದ್ಲಿಂಗು ಸಾಥ್ ಕೊಟ್ಟಿದ್ದಾರೆ.

    ಲವ್ ಸ್ಟೋರಿ ಸಿನಿಮಾಗಳ ಸೂತ್ರಧಾರ ನಿರ್ದೇಶಕ ನವೀನ್ ರೆಡ್ಡಿ ಹೊಸ ಪ್ರಯತ್ನ ‘ಮೂರನೇ ಕೃಷ್ಣಪ್ಪ’.. ಅಕಿರ ಹಾಗೂ ರಿಲ್ಯಾಕ್ಸ್ ಸತ್ಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಅವರೀಗ ವಿಭಿನ್ನ ಶೀರ್ಷಿಕೆಯೊಂದಿಗೆ ಫ್ರೆಶ್ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಗಿಸಿ ಪ್ರಚಾರ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ.

    ರೆಡ್ ಡ್ರಾಗ್ಯನ್ ಫಿಲಂಸ್‌ ಪ್ರೊಡಕ್ಷನ್ ಹೌಸ್ ನಡಿ ಮೂರನೇ ಕೃಷ್ಣಪ್ಪ ಚಿತ್ರ ಮೂಡಿ ಬರ್ತಿದೆ. ಈ ಹಿಂದೆ ರಿಲ್ಯಾಕ್ಸ್ ಸತ್ಯ ಚಿತ್ರವನ್ನು ಇದೇ ಪ್ರೊಡಕ್ಷನ್ ನಡಿ ಮೋಹನ್ ರೆಡ್ಡಿ ಜಿ, ರವಿಶಂಕರ್ ನಿರ್ಮಿಸಿದ್ದರು. ಇದೀಗ ಇದೇ ಪ್ರೊಡಕ್ಷನ್ ಹೌಸ್ ನಡಿ ಇವರಿಬ್ಬರು ಮೂರನೇ ಕೃಷ್ಣಪ್ಪ ಸಿನಿಮಾಗೆ ಹಣ ಹಾಕಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಹೊತ್ತು ಬಂದಿರುವ ಈ ಚಿತ್ರದಲ್ಲಿ ಸಂಪತ್ ಮೈತ್ರೀಯಾ, ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಶ್ರೀಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ತುಕಾಲಿ ಸಂತೋಷ್, ಉಗ್ರಂ ಮಂಜು ತಾರಾಬಳಗದಲ್ಲಿದ್ದಾರೆ. ಮೂರನೇ ಕೃಷ್ಣಪ್ಪ ಸಿನಿಮಾಕ್ಕೆ ಆನಂದ್ ರಾಜವಿಕ್ರಮ್ ಸಂಗೀತ, ಶ್ರೀಕಾಂತ್ ಸಂಕಲನ, ಯೋಗಿ ಛಾಯಾಗ್ರಹಣವಿದೆ.

  • ‘ಪರಿಮಳ ಲಾಡ್ಜ್’ ನಲ್ಲಿ ಮತ್ತೆ ಕಾಣಿಸಿಕೊಂಡ ನೀರ್ ದೋಸೆ ನಿರ್ದೇಶಕ ವಿಜಯ್ ಪ್ರಸಾದ್

    ‘ಪರಿಮಳ ಲಾಡ್ಜ್’ ನಲ್ಲಿ ಮತ್ತೆ ಕಾಣಿಸಿಕೊಂಡ ನೀರ್ ದೋಸೆ ನಿರ್ದೇಶಕ ವಿಜಯ್ ಪ್ರಸಾದ್

    ತೋತಾಪುರಿ ಮತ್ತು ಪೆಟ್ರೋಮ್ಯಾಕ್ಸ್ ಸಿನಿಮಾದ ನಂತರ ಮತ್ತೆ ತಮ್ಮ ಪರಿಮಳ ಲಾಡ್ಜ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ ವಿಜಯ್ ಪ್ರಸಾದ್. 2019ರಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದ ಇವರು, ಆನಂತರ ಈ ಪ್ರಾಜೆಕ್ಟ್ ಹಿಂದಕ್ಕಿಟ್ಟು ‘ಪೆಟ್ರೊಮ್ಯಾಕ್ಸ್’ ಸಿನಿಮಾ ಮಾಡಿದರು. ಇದೀಗ ಅವರ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ನಡುವೆ ಮತ್ತೆ ಅವರು ಪರಿಮಳ ಲಾಡ್ಜ್ ನತ್ತ ಮುಖ ಮಾಡಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ವಿಜಯ್ ಪ್ರಸಾದ್, ‘ತೋತಾಪುರಿ, ಪೆಟ್ರೋಮ್ಯಾಕ್ಸ್ ಆಯ್ತು, ಸದ್ಯದಲ್ಲೇ ಪರಿಮಳ ಲಾಡ್ಜ್’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2.. ಹುಷಾರ್, ಮಾರ್ಚ್ 21ಕ್ಕೆ ತೂಫಾನ್ ಅಪ್ಪಳಿಸಲಿದೆ!

    2019ರಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಸಖತ್ ಡಬಲ್ ಮೀನಿಂಗ್ ಸಂಭಾಷಣೆಯಿಂದಾಗಿ ಸದ್ದು ಮಾಡಿತ್ತು. ಈ ಟೀಸರ್ ನಲ್ಲಿ ತಮ್ಮ ತಂಡವನ್ನು ನಿರ್ದೇಶಕ ವಿಜಯ್ ಪ್ರಸಾದ್ ವಿಭಿನ್ನವಾಗಿಯೇ ಪರಿಚಯ ಮಾಡಿಸಿದ್ದರು. ಲಾಡ್ಜ್ ಓನರ್ ಸ್ಕಂದ್ ಎಂಟರ್ ಟೇನ್ಮೆಂಟ್ (ಬ್ಯಾನರ್), ಲಾಡ್ಜ್ ನಲ್ಲಿ ಸಲಿಂಗಕಾಮಿಗಳು (ನಾಯಕ) ಲೂಸ್ ಮಾದ ಯೋಗಿ, ಲಾಡ್ಜನಲ್ಲಿ ಆಳ ನೋಡಿ, ಲಾಳ ಹೊಡ್ದವ್ರು (ತಾರಾಗಣ) ದತ್ತಣ್ಣ,  ಸುಮನ್ ರಂಗನಾಥ್, ಹೇಮಾ ದತ್ತ್, ಲಾಡ್ಜನಲ್ಲಿ ಗುಪ್ತವಾಗಿ ಕ್ಯಾಮೆರಾ ಇಟ್ಟು ಗುನ್ನ ತಿಂದವ್ರು (ಸಿನಿಮಾಟೋಗ್ರಫಿ) ನಿರಂಜನ್ ಬಾಬು, ಲಾಡ್ಜನಲ್ಲಿ ಲಾಡಿ ಜೊತೆ ರಾಗಾನೂ ಎಳ್ದೆವ್ರು (ಸಂಗೀತ ನಿರ್ದೇಶನ) ಅನೂಪ್ ಸೀಳಿನ್, ಲಾಡ್ಜನಲ್ಲಿ ಕಾಸ್ ಬದ್ಲು ಕಾಂಡೋಮ್ ಇಟ್ಕೊಂಡವ್ರು (ನಿರ್ಮಾಪಕ) ಪ್ರಸನ್ನ, ಲಾಡ್ಜನಲ್ಲಿ ಕಾಚ ತೋರ್ಸಿ ಕಥೆ ಮಾಡ್ದವ್ರು (ನಿರ್ದೇಶಕ) ವಿಜಯ ಪ್ರಸಾದ್ ಹೀಗೆಯೇ ಪದಗಳನ್ನು ಬಳಸಿ ವಿಚಿತ್ರವಾದ ಮನರಂಜನೆ ಕೊಟ್ಟಿದ್ದರು. ಈಗ ಅದೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ ನಿರ್ದೇಶಕರು.

    ಸದ್ಯ ಬಿಡುಗಡೆ ಆಗಬೇಕಿರುವ ವಿಜಯ್ ಪ್ರಸಾದ್ ಅವರ ತೋತಾಪುರಿ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸಿದ್ದರೆ, ಮತ್ತೊಂದು ಮಹತ್ವದ ಪಾತ್ರದಲ್ಲಿ ಡಾಲಿ ಧನಂಜಯ್ ಇದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಈ ಸಿನಿಮಾ ಎರಡು ಭಾಗವಾಗಿ ಮೂಡಿ ಬಂದಿದೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಪೆಟ್ರೋಮ್ಯಾಕ್ಸ್ ಕೂಡ ಅತೀ ನಿರೀಕ್ಷೆಯ ಸಿನಿಮಾಗಳ ಸಾಲಿನಲ್ಲಿದೆ. ನೀನಾಸಂ ಸತೀಶ್ ಮತ್ತು ಹರಿಪ್ರಿಯಾ ಕಾಂಬಿನೇಷನ್ ಮೊದಲ ಸಿನಿಮಾವಿದು. ಈಗಾಗಲೇ ಟ್ರೇಲರ್ ಬಿಡುಗಡೆ ಆಗಿದ್ದು, ಸಖತ್ ಮನರಂಜನೆ ನೀಡುವಂತಹ ಅಂಶಗಳನ್ನು ಇದು ಒಳಗೊಂಡಿದೆ.

  • ತಂದೆಯಾದ ಲೂಸ್ ಮಾದ ಯೋಗಿ

    ತಂದೆಯಾದ ಲೂಸ್ ಮಾದ ಯೋಗಿ

    ಬೆಂಗಳೂರು: ಲೂಸ್ ಮಾದ ಎಂದೇ ಖ್ಯಾತಿಯಾಗಿರುವ ನಟ ಯೋಗಿ ಪತ್ನಿ ಸಾಹಿತ್ಯ ಅವರು ಇಂದು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಬೆಳಗ್ಗೆ 5 ಗಂಟೆ ಸುಮಾರಿಗೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮದರ್ ವುಡ್ ಆಸ್ಪತ್ರೆಯಲ್ಲಿ ಸಾಹಿತ್ಯ ಅವರಿಗೆ ಹೆಣ್ಣು ಮಗು ಜನಿಸಿದೆ. ಸದ್ಯಕ್ಕೆ ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

    ನಟ ಯೋಗೀಶ್ ಕುಟುಂಬದವರು ತಮ್ಮ ಮನೆಗೆ ಯುವರಾಣಿ ಬಂದಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನೂ ತಂದೆಯಾದ ಯೋಗಿ ತಮ್ಮ ಮುದ್ದು ಮಗಳನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಖುಷಿ ಪಟ್ಟಿದ್ದಾರೆ.

    ನಟ ಯೋಗಿ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರನ್ನು ಕುಟುಂಬದ ಸಮ್ಮುಖದಲ್ಲಿ 2017 ನವೆಂಬರ್ 2ರಂದು ಮದುವೆಯಾಗಿದ್ದರು. ಸಾಹಿತ್ಯ ಅವರು ಐಟಿ ಉದ್ಯೋಗಿಯಾಗಿದ್ದು, ಯೋಗಿ ಅವರು ಬಾಲ್ಯದ ಗೆಳತಿಯಾಗಿದ್ದಾರೆ. ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿರುವ ವಿಚಾರವನ್ನು ಪೋಷಕರಿಗೆ ತಿಳಿಸಿ, ಕುಟುಂಬಸ್ಥರ ಒಪ್ಪಿಗೆ ಪಡೆದುಕೊಂಡು ಎಲ್ಲರ ಸಮ್ಮುಖದಲ್ಲಿ ಮದುವೆ ಆಗಿದ್ದರು.

  • ತಂದೆಯಾಗುವ ಖುಷಿಯಲ್ಲಿ ಲೂಸ್‍ಮಾದ ಯೋಗಿ

    ತಂದೆಯಾಗುವ ಖುಷಿಯಲ್ಲಿ ಲೂಸ್‍ಮಾದ ಯೋಗಿ

    ಬೆಂಗಳೂರು: ಸ್ಯಾಂಡಲ್‍ವುಡ್ ಲೂಸ್‍ಮಾದ ಎಂದೇ ಖ್ಯಾತಿಯಾಗಿರುವ ನಟ ಯೋಗೀಶ್ ತಂದೆಯಾಗುವ ಖುಷಿಯಲ್ಲಿದ್ದಾರೆ.

    ಈ ಬಗ್ಗೆ ಲೂಸ್‍ಮಾದ ಯೋಗಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪತ್ನಿ ಸಾಹಿತ್ಯಾರ ಫೋಟೋ ಪೋಸ್ಟ್ ಮಾಡುವ ಮೂಲಕ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಪತ್ನಿ ಸಾಹಿತ್ಯ ಅವರು ಸೋಫಾ ಮೇಲೆ ಕುಳಿತಿದ್ದು, ಒಂದು ಚಿಕ್ಕ ಪಾಪುವಿನ ಉಡುಪನ್ನು ತಮ್ಮ ಮೇಲೆ ಇಟ್ಟುಕೊಂಡು, ಅದನ್ನು ತಮ್ಮ ಕೈಯಿಂದ ತೋರಿಸುತ್ತಿರುವ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ.

    ಈ ಫೋಟೋಗೆ “ನಾವು ಬಯಸಿದಂತೆ ನೀವು ಮತ್ತು ನಿಮ್ಮಂತೆ ಇರುವ ಪುಟ್ಟ ಮಗು ಶೀಘ್ರದಲ್ಲೇ ಬರುತ್ತದೆ. ತುಂಬಾ ಸಂತೋಷವಾಗುತ್ತಿದೆ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಮೂಲಕ ಯೋಗಿ ತಂದೆಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

    ಖುಷಿಯ ಸಂಗತಿಯನ್ನು ನಟ ಯೋಗಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಂತೆ ಶುಭಾಶಯವನ್ನು ತಿಳಿಸುತ್ತಿದ್ದಾರೆ. ನಟ ಯೋಗೀಶ್ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರನ್ನು ಕುಟುಂಬದ ಸಮ್ಮುಖದಲ್ಲಿ 2017 ನವೆಂಬರ್ 2ರಂದು ಮದುವೆಯಾಗಿದ್ದರು.

    https://www.instagram.com/p/Bu6IqLyFcHP/

    ಸಾಹಿತ್ಯ ಅವರು ಐಟಿ ಉದ್ಯೋಗಿಯಾಗಿದ್ದು, ಯೋಗೀಶ್ ಅವರು ಬಾಲ್ಯದ ಗೆಳತಿಯಾಗಿದ್ದಾರೆ. ಇವರಿಬ್ಬರು ಪರಸ್ಪರ ಪ್ರೀತಿ ಮಾಡುತ್ತಿರುವ ವಿಚಾರವನ್ನು ಪೋಷಕರಿಗೆ ತಿಳಿಸಿ, ಕುಟುಂಬಸ್ಥರ ಒಪ್ಪಿಗೆ ಪಡೆದುಕೊಂಡು ಎಲ್ಲರ ಸಮ್ಮುಖದಲ್ಲಿ ಮದುವೆ ಆಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಚ್ಛೇ ದಿನ್ ಯಾರಿಗೂ ಬಂದಿಲ್ಲ- ಕೈ ಪರ ಪ್ರಚಾರಕ್ಕಿಳಿದ ಲೂಸ್ ಮಾದ ಯೋಗಿ

    ಅಚ್ಛೇ ದಿನ್ ಯಾರಿಗೂ ಬಂದಿಲ್ಲ- ಕೈ ಪರ ಪ್ರಚಾರಕ್ಕಿಳಿದ ಲೂಸ್ ಮಾದ ಯೋಗಿ

    ಬೆಂಗಳೂರು: ಲೂಸ್ ಮಾದ ಅಂತಲೇ ಖ್ಯಾತಿಗಳಿಸಿರುವ ನಟ ಯೊಗೀಶ್ ಇಂದು ಕಾಂಗ್ರೆಸ್ ಪರ ಪ್ರಚಾರಕ್ಕಿಳಿದಿದ್ದಾರೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಪರವಾಗಿ ಪರಪ್ಪನ ಅಗ್ರಹಾರದಲ್ಲಿ ರೋಡ್ ಶೋನಲ್ಲಿ ಲೂಸ್ ಮಾದ ಭಾಗವಹಿಸಿ ಪ್ರಚಾರ ನಡೆಸಿದರು.

    ಇದೇ ವೇಳೆ ಮಾತನಾಡಿದ ಯೋಗಿ, ಜೈಲಿಗೆ ಹೋಗಿ ಬಂದವರಿಗೆ ಮತ ಹಾಕಬೇಡಿ ಎಂದು ಹೇಳುವ ಮೂಲಕ ಯಡಿಯೂರಪ್ಪ ನವರಿಗೆ ಟಾಂಗ್ ನೀಡಿದ್ದಾರೆ.

    ಬಿಜೆಪಿ ಸರ್ಕಾರದವರು ಯಾವತ್ತೂ ಅಚ್ಛೇ ದಿನ್ ಅಚ್ಛೇ ದಿನ್ ಅಂತ ಹೇಳುತ್ತಾನೇ ಇದ್ದಾರೆ. ಅಚ್ಛೇ ದಿನ್ ಯಾರಿಗೂ ಬಂದಿಲ್ಲ. ಅದು ಏನು ಅನ್ನೋದು ಅರ್ಥನೂ ಆಗಿಲ್ಲ ನಮಗೆ. ಎಲ್ಲರೂ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿ. ನಾನು ಇರೋವರೆಗೂ ಕಾಂಗ್ರೆಸ್ ಗೇ ಸಪೋರ್ಟ್ ಮಾಡೋದು. ನೀವೂ ಕೂಡ ಕಾಂಗ್ರೆಸ್ ಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಡಿಕೇರಿಯಲ್ಲಿ ಮಳೆ ಹುಡ್ಗಿಯಿಂದ ಜೆಡಿಎಸ್ ಪರ ಪ್ರಚಾರ- ಹಾಡಿ ಜನರ ಸಮಸ್ಯೆ ಆಲಿಸಿ ಗದ್ಗದಿತರಾದ ಪೂಜಾಗಾಂಧಿ

    ಬಿಜೆಪಿಯವರು ಯಾವ ಕೆಲಸನೂ ಮಾಡಿಕೊಟ್ಟಿಲ್ಲ. ನಿಮ್ಮಲ್ಲರನ್ನೂ ಮೆಚ್ಚಿಸಬೇಕು ಅಂತ ನಾನು ಇದನ್ನು ಹೇಳುತ್ತಿಲ್ಲ. ನನ್ನ ಸ್ವಂತ ಅನುಭವ ಇದು. ಹೀಗಾಗಿ ನಾನು ನೋಡಿರೋ ವಿಚಾರವನ್ನು ನಿಮಗೆ ಹೇಳಬೇಕು. ಅವರು ಯಾವ ಕೆಲಸನೂ ಮಾಡಲ್ಲ. ಜೈಲಿನಲ್ಲಿದ್ದವರನ್ನು ಇಂದು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಅವರೊಬ್ಬರು ಮುಖ್ಯಮಂತ್ರಿ ಅಭ್ಯರ್ಥಿಯಂತೆ. ಕಳ್ಳರಿಗೆಲ್ಲ ನೀವು ಮತ ಹಾಕಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೊನೆಗೂ ಪ್ರಚಾರಕ್ಕಿಳಿದ ಕುರುಕ್ಷೇತ್ರದ ಅಭಿಮನ್ಯು- ತಂದೆಯ ಹಾದಿಯಲ್ಲಿಯೇ ಹೆಜ್ಜೆ ಇಡುತ್ತೇನೆ ಅಂದ್ರು ನಿಖಿಲ್

    ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿರವರ ಮನ್ ಕೀ ಬಾತ್ ಈ ಬಾರಿ ವಾಂಗಿ ಬಾತ್ ಆಗಲಿದೆ. ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಗೆ ಮತ ನೀಡುವಂತೆ ಕರೆ ನೀಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಸಿಗಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು. ರೋಡ್ ಶೋನಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಭಾಗವಹಿಸಿದ್ದರು.

  • ಲೂಸ್ ಮಾದ ಯೋಗಿ, ಸಾಹಿತ್ಯ ಮದುವೆಗೆ ಅದ್ದೂರಿ ಸಿದ್ಧತೆ-ಫೋಟೋಗಳಲ್ಲಿ ನೋಡಿ

    ಲೂಸ್ ಮಾದ ಯೋಗಿ, ಸಾಹಿತ್ಯ ಮದುವೆಗೆ ಅದ್ದೂರಿ ಸಿದ್ಧತೆ-ಫೋಟೋಗಳಲ್ಲಿ ನೋಡಿ

    ಬೆಂಗಳೂರು: ಲೂಸ್ ಮಾದ ಯೋಗಿ ಮತ್ತು ಸಾಹಿತ್ಯರ ಮದುವೆಯ ಶಾಸ್ತ್ರಗಳು ಸಂಪ್ರದಾಯಬದ್ಧವಾಗಿ ಇಂದು ವರನ ಮನೆಯಲ್ಲಿ ನಡೆದವು.

    ನಗರದ ಕೋಣನಕುಂಟೆಯಲ್ಲಿರುವ ಯೋಗಿ ಅವರ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಚಪ್ಪರ ಪೂಜೆ, ಅರಶಿಣದ ಶಾಸ್ತ್ರ, ಬಳೆ ಶಾಸ್ತ್ರ, ಅರಶಿಣ ಕುಟ್ಟುವ ಶಾಸ್ತ್ರ, ಮಂಗಳ ಸ್ನಾನ, ಅಕ್ಕಿ ಹಸೆ ಶಾಸ್ತ್ರಗಳು ನಡೆದವು. ಈ ಶಾಸ್ತ್ರಗಳಲ್ಲಿ ಯೋಗಿ ಕುಟುಂಬದ ಆಪ್ತರು ಮಾತ್ರ ಭಾಗಿಯಾಗಿದ್ದರು.

    ವರ ಯೋಗೇಶ ಅವರಿಗೆ ಅರಿಶಿಣ ಹಚ್ಚುವ ಕಾರ್ಯಕ್ರಮವೂ ನಡೆಯಿತು. ಯೋಗಿ ಮತ್ತು ಸಾಹಿತ್ಯ ಜೂನ್ 11ರಂದು ಸರಳವಾಗಿ ಗುರು ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡಿದ್ದರು. ಇದೇ ಗುರುವಾರ (ನವೆಂಬರ್ 02)ರಂದು ನಗರದ ಬನಶಂಕರಿ ಹಂತದಲ್ಲಿರುವ ಕನ್ವೆನ್ಷನ್ ಹಾಲ್ ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ.

    ಗುರುವಾರದಂದು ಬೆಳಗಿನ ಜಾವ 5 ಗಂಟೆಗೆ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6 ಗಂಟೆಗೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. 1 ರಿಂದ 10ನೇ ತರಗತಿ ವರೆಗೆ ಯೋಗಿ ಮತ್ತು ಸಾಹಿತ್ಯ ಯಡಿಯೂರಿನ ಎಸ್‍ಎಸ್‍ವಿಕೆ ಶಾಲೆಯಲ್ಲಿ ಒಟ್ಟಿಗೆ ಓದಿದ್ದು, ಸ್ನೇಹ ಪ್ರೀತಿಯಾಗಿ, ಪ್ರೇಮಾಂಕುರಿಸಿ ಇದೀಗ ಮದುವೆಗೆ ಸಜ್ಜಾಗಿದ್ದಾರೆ. ಸಾಹಿತ್ಯ ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.

    https://www.youtube.com/watch?v=zLNqtRmklU8

  • ನಟ ಲೂಸ್ ಮಾದ ಯೋಗಿ ಮದುವೆಗೆ ಭರ್ಜರಿ ತಯಾರಿ

    ನಟ ಲೂಸ್ ಮಾದ ಯೋಗಿ ಮದುವೆಗೆ ಭರ್ಜರಿ ತಯಾರಿ

    ಬೆಂಗಳೂರು: ಸ್ಯಾಂಡಲ್‍ವುಡ್ ನ ಯಂಗ್ ಸ್ಟಾರ್ ಲೂಸ್ ಮಾದ ಖ್ಯಾತಿಯ ಯೋಗಿ ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಬಾಲ್ಯದ ಗೆಳತಿ ಸಾಹಿತ್ಯ ಅರಸ್ ಅವರೊಂದಿಗೆ ಇದೇ ನವೆಂಬರ್ 02ರಂದು ಹಸೆಮಣೆ ಏರಲಿದ್ದಾರೆ.

    ಯೋಗಿ ಮತ್ತು ಸಾಹಿತ್ಯ ಜೂನ್ 11ರಂದು ಸರಳವಾಗಿ ಗುರು ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡಿದ್ದರು. ಇದೇ ಗುರುವಾರ (ನವೆಂಬರ್ 02)ರಂದು ನಗರದ ಬನಶಂಕರಿ ಹಂತದಲ್ಲಿರುವ ಕನ್ವೆನ್ಷನ್ ಹಾಲ್ ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಎರಡು ಕುಟುಂಬಗಳು ಮದುವೆ ತಯಾರಿಯಲ್ಲಿ ಬ್ಯುಸಿಯಾಗಿವೆ. ಲೂಸ್ ಮಾದ ಅವರ ಮದುವೆ ಕರೆಯೋಲೆಯ ಆಮಂತ್ರಣ ಪತ್ರಿಕೆ ತಯಾರಾಗಿದೆ.

    ಗುರುವಾರದಂದು ಬೆಳಗ್ಗಿನ ಜಾವ 5 ಗಂಟೆಗೆ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6 ಗಂಟೆಗೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. 1 ರಿಂದ 10ನೇ ತರಗತಿ ವರೆಗೆ ಯೋಗೇಶ್ ಮತ್ತು ಸಾಹಿತ್ಯ ಯಡಿಯೂರಿನ ಎಸ್‍ಎಸ್‍ವಿಕೆ ಶಾಲೆಯಲ್ಲಿ ಒಟ್ಟಿಗೆ ಓದಿದ್ದು, ಸ್ನೇಹ ಪ್ರೀತಿಯಾಗಿ, ಪ್ರೇಮಾಂಕುರಿಸಿ ಇದೀಗ ಮದುವೆಗೆ ಸಜ್ಜಾಗಿದ್ದಾರೆ. ಸಾಹಿತ್ಯ ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಲೂಸ್ ಮಾದ ಯೋಗೀಶ್

    ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಲೂಸ್ ಮಾದ ಯೋಗೀಶ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಲೂಸ್ ಮಾದ ಖ್ಯಾತಿಯ ಯೋಗೀಶ್ ಗೃಹಸ್ಥಾಶ್ರಮಕ್ಕೆ ಸೇರಲು ಸಜ್ಜಾಗಿದ್ದಾರೆ.

    ಬಾಲ್ಯದಗೆಳತಿ, ಬಹುರಾಷ್ಟ್ರಿಯ ಕಂಪನಿಯ ಉದ್ಯೋಗಿ ಸಾಹಿತ್ಯ ಅರಸ್ ಅವರೊಂದಿಗೆ ಯೋಗೀಶ್ ಸಪ್ತಪದಿ ತುಳಿಯಲಿದ್ದಾರೆ. ಸಾಹಿತ್ಯ ಅರಸ್ ಯೋಗಿ 2 ವರ್ಷದಿಂದ ಲವ್ ಮಾಡುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಈ ಹಿಂದೆ ಹರಡಿತ್ತು.

    ಜೂನ್ 11ರಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲಿದೆ. ಈ ವರ್ಷದ ನವೆಂಬರ್ 2ರಂದು ಗುರು-ಹಿರಿಯರ ಸಮ್ಮುಖದಲ್ಲಿ ಯೋಗಿ, ಸಾಹಿತ್ಯ ಮದುವೆಯಾಗಲಿದ್ದಾರೆ.