Tag: ಯೋಗಿ ಆದಿತ್ಯ್‍ನಾಥ್

  • ಉತ್ತರಪ್ರದೇಶ ಜೈಲಿನಲ್ಲಿ ಮೊಳಗಲಿದೆ ಗಾಯತ್ರಿ, ಮಹಾ ಮೃತ್ಯುಂಜಯ ಮಂತ್ರ

    ಉತ್ತರಪ್ರದೇಶ ಜೈಲಿನಲ್ಲಿ ಮೊಳಗಲಿದೆ ಗಾಯತ್ರಿ, ಮಹಾ ಮೃತ್ಯುಂಜಯ ಮಂತ್ರ

    ಲಕ್ನೋ: ಇನ್ನು ಮುಂದೆ ಉತ್ತರ ಪ್ರದೇಶದ ಎಲ್ಲ ಜೈಲುಗಳಲ್ಲಿ ಗಾಯತ್ರಿ ಮಂತ್ರ ಮತ್ತು ಮಹಾ ಮೃತ್ಯುಂಜಯ ಮಂತ್ರಗಳು ಮೊಳಗಲಿವೆ.

    ಜೈಲಿನಲ್ಲಿರುವ ಖೈದಿಗಳ ಮಾನಸಿಕ ಶಾಂತಿಗಾಗಿ ಈ ಮಂತ್ರಗಳನ್ನು ಮೊಳಗಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಈಗಾಗಲೇ ರಾಜ್ಯ ಕಾರಾಗೃಹ ಸಚಿವ ಧರಂವೀರ್ ಪ್ರಜಾಪತಿ ಅವರು ಕಾರಾಗೃಹ ಆಡಳಿತ ಮಂಡಳಿಗೆ ಈ ಮಂತ್ರಗಳನ್ನು ಮೊಳಗಿಸುವಂತೆ ಆದೇಶಿಸಿದ್ದಾರೆ. ಇದನ್ನೂ ಓದಿ: ಶಕ್ತಿ ಸ್ವರೂಪಿಣಿ ದೇವಿಯು ಅಪಾರ ದ್ವೇಷದಿಂದ ಕೂಡಿದ ಬಿಜೆಪಿ ನಾಯಕರ ಆತ್ಮವನ್ನು ಶುದ್ಧೀಕರಿಸಲಿ: ಸುರ್ಜೇವಾಲಾ

    jail

    ಮಾಹಿತಿ ಪ್ರಕಾರ ಧರಂವೀರ್ ಪ್ರಜಾಪತಿ ಅವರ ಸೂಚನೆ ಮೇರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಯತ್ರಿ, ಮಹಾಮೃತ್ಯುಂಜಯ ಮಂತ್ರಗಳು ಕೇಳಿ ಬರುತ್ತಿವೆ. ಈ ಮಂತ್ರಗಳ ಪಠಣ ಮಾಡುವುದರಿಂದ ಖೈದಿಗಳಿಗೆ ನೆಮ್ಮದಿ ಸಿಗುತ್ತದೆ. ಜೈಲಿನಿಂದ ಹೊರಬಂದು ಉತ್ತಮ ನಾಗರಿಕರಾಗುತ್ತಾರೆ. ಜೊತೆಗೆ ಅವರು ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕ ಹೊಂದಿರುತ್ತಾರೆ ಎಂಬುದು ಸರ್ಕಾರದ ನಂಬಿಕೆ. ಆದ್ದರಿಂದ ಕಾರಾಗೃಹಗಳಲ್ಲಿ ಈ ಮಂತ್ರಗಳ ರಾಗಗಳನ್ನು ನುಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

    ಇದರೊಂದಿಗೆ ಯೋಗಿ ಆದಿತ್ಯನಾಥ್ ಸರ್ಕಾರವು ಕಾರಾಗೃಹಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಹಾಗೂ ಸರಕನ್ನು ನಿಷೆಧಿಸಿದೆ.

  • ಎಸ್‍ಪಿ ಆಡಳಿತದಲ್ಲಿ ಉತ್ತರ ಪ್ರದೇಶ ಅಪರಾಧ ಪ್ರಕರಣಗಳಲ್ಲಿ ನಂಬರ್ 1 ಆಗಿತ್ತು : ಅಮಿತ್ ಶಾ

    ಎಸ್‍ಪಿ ಆಡಳಿತದಲ್ಲಿ ಉತ್ತರ ಪ್ರದೇಶ ಅಪರಾಧ ಪ್ರಕರಣಗಳಲ್ಲಿ ನಂಬರ್ 1 ಆಗಿತ್ತು : ಅಮಿತ್ ಶಾ

    ಲಕ್ನೋ: ಸಮಾಜವಾದಿ ಪಕ್ಷ (ಎಸ್‍ಪಿ) ಆಡಳಿತದಲ್ಲಿ ಉತ್ತರ ಪ್ರದೇಶವು ಅಪರಾಧ ಪ್ರಕರಣಗಳಲ್ಲಿ ನಂಬರ್ 1 ಆಗಿತ್ತು ಎಂದು ಅಖಿಲೇಶ್ ಯಾದವ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.

    ಎಸ್‍ಪಿಯನ್ನು ಗುರಿಯಾಗಿಸಿ ಬಲಿಯಾದಲ್ಲಿ ನಡೆದ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಖಿಲೇಶ್ ಯಾದವ್ ಅವರ ಸರ್ಕಾರದ ಅವಧಿಯಲ್ಲಿ ಉತ್ತರ ಪ್ರದೇಶವು ಲೂಟಿ, ಕೊಲೆ ಮತ್ತು ಅತ್ಯಾಚಾರದಂತಹ ಅಪರಾಧಗಳಲ್ಲಿ ನಂಬರ್ 1 ಆಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಗೌರವದಿಂದ ನೋವಾಗಿದೆ: ಬಿಜೆಪಿ ಸೇರ್ಪಡೆಯಾದ ಗುಲಾಂ ನಬಿ ಸೋದರಳಿಯ

    ಯಾದವ್ ಯುಪಿಗಾಗಿ ಕೆಲಸ ಮಾಡಲಿಲ್ಲ. ಎಸ್‍ಪಿ ಆಡಳಿತವಿದ್ದಾಗ ಲೂಟಿಗಳು, ಕೊಲೆಗಳು, ಅತ್ಯಾಚಾರಗಳಲ್ಲಿ 1 ಆಗಿತ್ತು. ಅಖಿಲೇಶ್ ಯಾದವ್ ಅವರೇ ನಿಮಗೆ ನಾಚಿಕೆಯಾಗಬೇಕು. ನೀವು ಜನರ ಬಳಿ ಬಂದು ಮತ ಕೇಳಲು ಯಾವ ಮುಖವನ್ನು ಇಟ್ಟುಕೊಂಡು ಬರುತ್ತೀರಾ. ನೀವು ಜನರಿಗೆ ಏನೂ ಮಾಡಿಲ್ಲ. ಯೋಗಿ ಜಿ ನಾಯಕತ್ವದಲ್ಲಿ, ಲೂಟಿಯಲ್ಲಿ 70% ಕುಸಿತ, ಕೊಲೆಗಳಲ್ಲಿ 29% ಕುಸಿತವಾಗಿದೆ ಎಂದರು.

    ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವನ್ನು ಹೊಗಳಿದ ಅವರು, ಯೋಗಿ ಅವರು ಮಾಫಿಯಾಗಳಿಂದ ರಾಜ್ಯವನ್ನು ಈಗಾಗಲೇ ಮುಕ್ತಗೊಳಿಸಿದ್ದಾರೆ. ಈ ಹಿಂದೆ ಸರ್ಕಾರಿ ಭೂಮಿಯನ್ನು ಬಾಹುಬಲಿಗಳು ಕಿತ್ತುಕೊಂಡಿದ್ದರು. ದಲಿತರು, ಹಿಂದುಳಿದವರು, ಎಲ್ಲರೂ ವಂಚಿತರಾಗಿದ್ದರು. ಈ ಪರಿವಾರವಾದಿಗಳು ತಮ್ಮ ಅಧಿಕಾರ ಅವಧಿಯಲ್ಲಿ ಬಡವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಬಿಜೆಪಿಯು ಭೂಮಾಫಿಯಾಗಳಿಂದ ಜನರ ಭೂಮಿಯನ್ನು ಮುಕ್ತಗೊಳಿಸಿದೆ ಎಂದು ಹೇಳಿದರು.

    ಈ ಹಿಂದೆ ಉತ್ತರ ಪ್ರದೇಶಕ್ಕೆ ಮೊಹರಂ ಹಬ್ಬದಂದು ವಿದ್ಯುತ್ ಬರುತ್ತಿತ್ತು. ಆದರೆ ಪರಶುರಾಮ ಜಯಂತಿ, ಶ್ರೀರಾಮ ನವಮಿ ಮತ್ತು ಶ್ರೀಕೃಷ್ಣ ಜನ್ಮೋತ್ಸವದಂದು ವಿದ್ಯುತ್ ಪೂರೈಕೆ ಇರಲಿಲ್ಲ ಎಂದು ಸಿಡಿದರು.

    ರಾಜ್ಯದಲ್ಲಿ ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನಾಲ್ಕು ಹಂತದ ಮತದಾನವು ಅದಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಳೆಯ ಪಕ್ಷವು ಎಪ್ಪತ್ತರ ದಶಕದಲ್ಲಿ ‘ಗರೀಬಿ ಹಟಾವೋ’ ಘೋಷಣೆಯನ್ನು ನೀಡಿತ್ತು. ಆದರೆ ಬಡವರನ್ನು ಮರೆತೆ ಹೋದರು. ಅವರು ಬಡತನವನ್ನು ತೊಡೆದುಹಾಕಲು ಸಾಧ್ಯವಾಗಲಿಲ್ಲ. ಆದರೆ ಬಡ ಜನರನ್ನು ಹೋಗಲಾಡಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಮೋದಿ ಸರ್ಕಾರವು ಬಡವರ ಕಲ್ಯಾಣಕ್ಕಾಗಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಮಾಲೀಕ ಯುದ್ಧಕ್ಕೆ ಹೋಗಿದ್ದಾರೆ, ಅವರ ಮಕ್ಕಳನ್ನು ಬಿಟ್ಟು ನಾನು ಬರಲ್ಲ ಎಂದ ವಿದ್ಯಾರ್ಥಿನಿ!

    ಉತ್ತರ ಪ್ರದೇಶದಲ್ಲಿ ಇಂದು ಐದನೇ ಹಂತದ ಮತದಾನ ನಡೆಯುತ್ತಿದ್ದು, ಮಾರ್ಚ್ 3 ಮತ್ತು ಮಾರ್ಚ್ 7 ರಂದು ಕೊನೆಯ ಎರಡು ಹಂತಗಳು ನಡೆಯಲಿವೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.