Tag: ಯೋಗಿ ಅದಿತ್ಯನಾಥ್

  • ಪ್ರಸಂಗ ಬಂದರೆ ರಾಜ್ಯದಲ್ಲೂ ಯೋಗಿ ಮಾಡೆಲ್ ಜಾರಿ : ಸಿಎಂ

    ಪ್ರಸಂಗ ಬಂದರೆ ರಾಜ್ಯದಲ್ಲೂ ಯೋಗಿ ಮಾಡೆಲ್ ಜಾರಿ : ಸಿಎಂ

    ಬೆಂಗಳೂರು: ಬೆಳ್ಳಾರೆಯ ಪ್ರವೀಣ್ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಹಂತಕರ ಪತ್ತೆಗೆ ಐದು ತಂಡ ರಚನೆ ಮಾಡಲಾಗಿದ್ದು, ಕೇರಳಕ್ಕೂ ಹೋಗಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜಿ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಎಲ್ಲರೂ ಸಂಯಮದಿಂದ ವರ್ತಿಸಬೇಕು ಅಂತ ಮನವಿ ಮಾಡಿಕೊಳ್ಳುತ್ತೇನೆ. ಸಂಘಟಿತ ಅಪರಾಧಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
    ಇದನ್ನೂ ಓದಿ: ಮನೆಯ ಸದಸ್ಯರ ಜೊತೆ ಸಂಘದ ಪ್ರಾರ್ಥನೆ ಮಾಡುತ್ತಿದ್ದ ಪ್ರವೀಣ್‌

    ಈ ಸಂದರ್ಭದಲ್ಲಿ ಮಾಧ್ಯಮಗಳು ಯೋಗಿ ಮಾದರಿಯಲ್ಲಿ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಾ ಎಂಬ ಪ್ರಶ್ನೆಗೆ, ಉತ್ತರ ಪ್ರದೇಶ ಪರಿಸ್ಥಿತಿ ಬೇರೆ ಕರ್ನಾಟಕ ಪರಿಸ್ಥಿತಿ ಬೇರೆ. ನಾವು ಕೇವಲ ಮಾತನಾಡುವುದಿಲ್ಲ. ಕ್ರಮ ಜರುಗಿಸಿ ತೋರಿಸುತ್ತೇವೆ. ಯುಪಿಗೆ ಯೋಗಿ ಸೂಕ್ತ ಸಿಎಂ. ಕರ್ನಾಟಕದಲ್ಲಿ ಎಲ್ಲವನ್ನೂ ಪ್ರಯೋಗ ಮಾಡುತ್ತಿದ್ದು, ಪ್ರಸಂಗ ಬಂದರೆ ರಾಜ್ಯದಲ್ಲೂ ಯೋಗಿ ಮಾಡೆಲ್ ಜಾರಿ ಮಾಡುತ್ತೇವೆ ಎಂದು ಸಿಎಂ ಹೇಳಿದರು.

    ಕೆಲವು ಶಕ್ತಿಗಳು ಅಹಿತಕರ ಘಟನೆ ಸೃಷ್ಟಿ ಮಾಡಲು ಕಾಯುತ್ತಿರುತ್ತವೆ. ಉದಾಹರಣೆಗೆ ಹಿಜಬ್ ಸಮಸ್ಯೆ ಸೃಷ್ಟಿಸಿದರು. ಹಿಜಬ್‌ ಸಮಸ್ಯೆಯನ್ನು ನಿಯಂತ್ರಣ ಮಾಡಿದ್ದೇವೆ. ಕೋರ್ಟ್ ಕೂಡಾ ಆದೇಶ ನೀಡಿದೆ. ಆಜಾನ್ ವಿಚಾರದಲ್ಲೂ ಸುಪ್ರೀಂಕೋರ್ಟ್ ಆದೇಶಗಳ ಪಾಲನೆ ಮೂಲಕ ನಿಯಂತ್ರಣ ಮಾಡಲಾಗಿದೆ. ಇಂಥವನ್ನೂ ನಿಭಾಯಿಸಿ ರಾಜ್ಯದ ಅಭಿವೃದ್ಧಿಯತ್ತಲೂ ಗಮನ ಕೊಟ್ಟಿದ್ದೇವೆ ಎಂದರು.

    ಪಿಎಫ್‌ಐನಂತಹ ಸಂಘಟನೆಗಳು ಬ್ಯಾನ್‌ ಆಗುತ್ತಾ ಎಂಬ ಪ್ರಶ್ನೆಗೆ, ರಾಜ್ಯ ಸರ್ಕಾರಗಳು ಈ ಸಂಘಟನೆಗಳನ್ನು ಬ್ಯಾನ್ ಮಾಡುವ ಪ್ರಯತ್ನ ಮಾಡಿವೆ. ಆದರೆ ಕೋರ್ಟಿನಲ್ಲಿ ಹಿನ್ನಡೆಯಾಗಿದೆ. ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಬೇಕು. ಆದಷ್ಟು ಬೇಗ ಕೇಂದ್ರದಿಂದ ಆ ನಿರ್ಧಾರ ಪ್ರಕಟವಾಗುವ ನಿರೀಕ್ಷೆ ಇದೆ ಎಂದರು.

    ಕಡತಗಳ ವಿಲೇವಾರಿ ವಿಳಂಬ ಆರೋಪ ಸುಳ್ಳು. ಅಭಿವೃದ್ಧಿ ಕುರಿತ ಎಲ್ಲ ಫೈಲ್ ಗಳೂ ವಿಲೇವಾರಿ ಆಗಿವೆ. ವರ್ಗಾವಣೆ ಕುರಿತ ಫೈಲ್‌ಗಳ ವಿಲೇವಾರಿ ಬಾಕಿಯಿದೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

    ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

    ಲಕ್ನೋ: ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಪೈಕಿ ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟಬಹುಮತ ಪಡೆದುಕೊಳ್ಳಲಿದೆ ಮತ್ತು ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದು ಹಲವು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.

    ಎಕ್ಸಿಟ್ ಪೋಲ್‍ನಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಹುಮತ ದೊರೆಯಲಿದೆ ಎಂದು ತಿಳಿಸಲಾಗಿತ್ತು. ಇದೀಗ ಜ್ಯೋತಿಷಿಗಳು ಕೂಡ ಈ ಮಾತನ್ನು ಪುನರಾವರ್ತಿಸಿದ್ದು, ಈ ವರ್ಷದ ಅಧಿಪತಿ ಮಂಗಳ ಆಗಿರುವುದು ಮತ್ತು ಮಂಗಳ ಕ್ಷತ್ರಿಯ ಸಮುದಾಯದ ಅಧಿಪತಿಯೂ ಆಗಿರುವುದರಿಂದ ಯೋಗಿ ಆದಿತ್ಯನಾಥ್ ಅವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ ಅಂಚೆ ಮತ ಎಣಿಕೆ: ಆರಂಭದಲ್ಲಿ ಬಿಜೆಪಿ ಮುನ್ನಡೆ

    ಅಲ್ಲದೇ ಬಿಜೆಪಿ ಉತ್ತರ ಪ್ರದೇಶದಲ್ಲಿ 240 ಸ್ಥಾನಗಳನ್ನು ಗೆದ್ದರೆ, ಸಮಾಜವಾದಿ ಪಕ್ಷ 138-157 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಜ್ಯೋತಿಷಿ ಅಶ್ವಿನಿ ಪಾಂಡೆ ಭವಿಷ್ಯ ನುಡಿದಿದ್ದಾರೆ.

    ಮಥುರಾದಲ್ಲಿ ಅಲೋಕ್ ಗುಪ್ತಾ ಗೆಲ್ಲುತ್ತಾರೆ. ಬಿಜೆಪಿ ಕೂಡ ಗೆಲ್ಲುತ್ತದೆ ಎಂದು ಮೇರಟ್‍ನ ಖ್ಯಾತ ಜ್ಯೋತಿಷಿ ವಿನೋದ್ ತ್ಯಾಗಿ ಭವಿಷ್ಯ ನುಡಿದಿದ್ದು, ಮಧ್ಯಾಹ್ನದ ಹೊತ್ತಿಗೆ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: ಪಂಚರಾಜ್ಯ ಚುನಾವಣೆ: ಯೋಗಿ, ಅಖಿಲೇಶ್‌ ಮುನ್ನಡೆ- ಗೋವಾ, ಪಂಜಾಬ್‌ ಸಿಎಂ ಹಿನ್ನಡೆ

    ಉತ್ತರ ಪ್ರದೇಶದಲ್ಲಿ ಒಟ್ಟು 403 ಕ್ಷೇತ್ರಗಳಿದ್ದು ಬಹುಮತಕ್ಕೆ 202 ಸ್ಥಾನಗಳು ಬೇಕು. 2017ರ ಚುನಾವಣೆಯಲ್ಲಿ ಬಿಜೆಪಿ 312, ಬಿಎಸ್‍ಪಿ 19, ಎಸ್‍ಪಿ+ಕಾಂಗ್ರೆಸ್ 54, ಇತರರು 18 ಕ್ಷೇತ್ರಗಳಲ್ಲಿ ಜಯಗಳಿಸಿದ್ದರು.

  • ದೇಶಾದ್ಯಂತ ಸುದ್ದಿಯಾಗಿದ್ದ ಹತ್ರಾಸ್‌, ಲಖೀಂಪುರದಲ್ಲಿ ಬಿಜೆಪಿಗೆ ಮುನ್ನಡೆ

    ದೇಶಾದ್ಯಂತ ಸುದ್ದಿಯಾಗಿದ್ದ ಹತ್ರಾಸ್‌, ಲಖೀಂಪುರದಲ್ಲಿ ಬಿಜೆಪಿಗೆ ಮುನ್ನಡೆ

    ಲಕ್ನೋ: ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಉತ್ತರ ಪ್ರದೇಶ ಹತ್ರಾಸ್‌ ಮತ್ತು ಲಖೀಂಪುರ ಜಿಲ್ಲೆಯ ಎಲ್ಲ ಕೇತ್ರದಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ.

    ಗ್ಯಾಂಗ್‌ ರೇಪ್‌ ಪ್ರಕರಣದಿಂದ ಹತ್ರಾಸ್‌, ಕೃಷಿ ಕಾಯ್ದೆ ವಿರೋಧಿಸಿ ನಡೆದ ಹಿಂಸಾಚಾರ ಪ್ರಕರಣದಿಂದ ಲಂಖೀಂಪುರ ದೇಶಾದ್ಯಂತ ಸುದ್ದಿಯಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ಮತ್ತು ಬಿಜೆಪಿಗೆ ಈ ಪ್ರಕರಣದಿಂದ ಮುಜುಗರವಾಗಿತ್ತು. ಇದನ್ನೂ ಓದಿ: ಉತ್ತರ ಪ್ರದೇಶ ಅಂಚೆ ಮತ ಎಣಿಕೆ: ಆರಂಭದಲ್ಲಿ ಬಿಜೆಪಿ ಮುನ್ನಡೆ

    ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಈ ವಿಷಯಗಳು ಚರ್ಚೆ ಆಗಿತ್ತು. ಈ ಎರಡು ಪ್ರಕರಣಗಳಿಂದ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು. ಆದರೆ ಆರಂಭದ ಮುನ್ನಡೆ ಗಮನಿಸಿದಾಗ ಈ ಚುನಾವಣೆಯಲ್ಲಿ ಮತದಾರ ಈ ವಿಚಾರವನ್ನು ಪರಿಗಣಿಸದೇ ಮತ ಮಾಡಿರುವುದು ಸ್ಪಷ್ಟವಾಗುತ್ತದೆ.

    ಬೆಳಗ್ಗೆ 10 ಗಂಟೆಯ ಟ್ರೆಂಡ್‌ ಪ್ರಕಾರ ಬಿಜೆಪಿ 270, ಎಸ್‌ಪಿ 106, ಬಿಸ್‌ಪಿ 3, ಕಾಂಗ್ರೆಸ್‌ 4, ಇತರರು 5 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದನ್ನೂ ಓದಿ: ಇಂದು ಪಂಚರಾಜ್ಯ ಚುನಾವಣಾ ಫಲಿತಾಂಶ- ಯುಪಿಯಲ್ಲಿ ಯಾರಿಗೆ ಒಲಿಯುತ್ತೆ ಅದೃಷ್ಟ?

    ಒಟ್ಟು 403 ಕ್ಷೇತ್ರಗಳ ಪೈಕಿ ಬಹುಮತಕ್ಕೆ 203 ಸ್ಥಾನಗಳ ಅಗತ್ಯವಿದೆ. 2017ರ ಚುನಾವಣೆಯಲ್ಲಿ ಬಿಜೆಪಿ 312, ಬಿಎಸ್‌ಪಿ 19, ಎಸ್‌ಪಿ+ಕಾಂಗ್ರೆಸ್ 54, ಇತರರು 18 ಸ್ಥಾನವನ್ನು ಗೆದ್ದಿದ್ದರು.

  • ಕಾಂಗ್ರೆಸ್ ನಿರ್ಮಿಸಿರುವ ರೈಲ್ವೇ, ವಿಮಾನ ನಿಲ್ದಾಣಗಳನ್ನು ಬಿಜೆಪಿ ಮಾರುತ್ತಿದೆ: ಪ್ರಿಯಾಂಕಾ ಗಾಂಧಿ

    ಕಾಂಗ್ರೆಸ್ ನಿರ್ಮಿಸಿರುವ ರೈಲ್ವೇ, ವಿಮಾನ ನಿಲ್ದಾಣಗಳನ್ನು ಬಿಜೆಪಿ ಮಾರುತ್ತಿದೆ: ಪ್ರಿಯಾಂಕಾ ಗಾಂಧಿ

    ಲಕ್ನೋ: ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ನಿರ್ಮಿಸಿರುವ ರೈಲ್ವೇ, ವಿಮಾನ ನಿಲ್ದಾಣ, ರಸ್ತೆಗಳನ್ನು ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    PM MODI

    ಉತ್ತರ ಪ್ರದೇಶದ ಗೋರಖ್‍ಪರ್ ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ದೇಶದಲ್ಲಿ ರೈಲ್ವೇ, ವಿಮಾನ ನಿಲ್ದಾಣ ಮತ್ತು ರಸ್ತೆಗಳನ್ನು ನಿರ್ಮಿಸಿ ಕೊಟ್ಟಿತ್ತು. ಆದರೆ ಬಿಜೆಪಿಯವರು ಕಾಂಗ್ರೆಸ್ ಸರ್ಕಾರ 70 ವರ್ಷಗಳಿಂದ ಏನು ಕೊಟ್ಟಿದೆ ಎಂದು ಪ್ರಶ್ನಿಸುತ್ತಾರೆ. ಅವರಿಗೆ ಪ್ರಶ್ನಿಸುವ ಅಧಿಕಾರವಿಲ್ಲ ಅವರು ನಾವು 70 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಕೇವಲ 7 ವರ್ಷಗಳಲ್ಲಿ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇಂದಿರಾ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ

    ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲಾ ಜಾತಿಗಳು ಮತ್ತು ವರ್ಗಗಳ ಜನರನ್ನು ಶೋಷಣೆ ಮಾಡುತ್ತಿದೆ. ದಲಿತರು, ನೇಕಾರರು, ಅಲ್ಪಸಂಖ್ಯಾತರು, ಒಬಿಸಿಗಳು ಮತ್ತು ಬ್ರಾಹ್ಮಣರು ಶೋಷಣೆಗೆ ಒಳಗಾಗಿದ್ದಾರೆ. ಯೋಗಿ ಗುರು ಗೋರಖನಾಥರ ಬೋಧನೆಗೆ ವಿರುದ್ಧವಾಗಿ ಸರ್ಕಾರವನ್ನು ನಡೆಸುತ್ತಿದ್ದಾರೆ. ಜನರನ್ನು ರಕ್ಷಿಸಬೇಕಾಗಿದ್ದ ಸರ್ಕಾರವೇ ಜನರಿಗೆ ಹಲ್ಲೆ ಮಾಡಿ ಶೋಷಣೆಗೆ ಒಳಪಡಿಸಿದೆ. ರಾಜ್ಯದಲ್ಲಿ ನಿರುದ್ಯೋಗ ಪ್ರಮುಖ ಸಮಸ್ಯೆಯಾಗಿದೆ. ಉತ್ತರಪ್ರದೇಶದಲ್ಲಿ 5 ಕೋಟಿ ನಿರುದ್ಯೋಗಿ ಯುವಕರಿದ್ದಾರೆ. ನಿರುದ್ಯೋಗದಿಂದ ಪ್ರತಿದಿನ ಮೂವರು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಕಾಂಗ್ರೆಸ್ ಪಕ್ಷ, ಬಿಜೆಪಿಯೊಂದಿಗೆ ಯಾವತ್ತು ಸೇರುವುದಿಲ್ಲ. ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷಗಳ(SP and BSP) ಆರೋಪ ಸುಳ್ಳು ಎಂದು ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪಕ್ಷದ ಬಗ್ಗೆ ಕೇಳಿಬರುತ್ತಿದ್ದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸಕ್ಕರೆ ನಾಡಿಗೆ ನೂತನ ಎಸ್‍ಪಿ ಆಗಮನ

  • ಚೀನಾಗೆ ಸ್ಯಾಮ್‍ಸಂಗ್ ಶಾಕ್ – ನೋಯ್ಡಾಕ್ಕೆ  ಡಿಸ್‍ಪ್ಲೇ ಘಟಕ ಸ್ಥಳಾಂತರ

    ಚೀನಾಗೆ ಸ್ಯಾಮ್‍ಸಂಗ್ ಶಾಕ್ – ನೋಯ್ಡಾಕ್ಕೆ ಡಿಸ್‍ಪ್ಲೇ ಘಟಕ ಸ್ಥಳಾಂತರ

    ಲಕ್ನೋ: ಜಗತ್ತಿನ ಪ್ರಮುಖ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸಂಸ್ಥೆ ಸ್ಯಾಮ್‍ಸಂಗ್ ಚೀನಾದಲ್ಲಿದ್ದ ತನ್ನ ಡಿಸ್‍ಪ್ಲೇ ತಯಾರಿಕಾ ಘಟಕವನ್ನು ಉತ್ತರ ಪ್ರದೇಶದ ನೋಯ್ಡಾಗೆ ಸ್ಥಳಾಂತರಿಸಿದೆ.

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತುಕತೆ ನಡೆಸಿದ ಸಿಇಒ ಕೆನ್ ಕಾಂಗ್ ನೇತೃತ್ವದ ನಿಯೋಗ ನೋಯ್ಡಾದಲ್ಲಿ ಘಟಕದ ನಿರ್ಮಾಣ ಕಾಮಗಾರಿ ಕೆಲಸ ಈಗಾಗಲೇ ಮುಕ್ತಾಯವಾಗಿದೆ ಎಂದು ಸ್ಯಾಮ್‍ಸಂಗ್ ತನ್ನ  ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ.

    ಉತ್ತಮ ಕೈಗಾರಿಕಾ ವಾತಾವರಣ ಮತ್ತು ಹೂಡಿಕೆದಾರ ಸ್ನೇಹಿ ನೀತಿಗಳಿಂದಾಗಿ ಚೀನಾದಲ್ಲಿದ್ದ ಡಿಸ್‍ಪ್ಲೇ ಘಟಕವನ್ನು ನೋಯ್ಡಾಗೆ ಸ್ಥಳಾಂತರಿಸಿದ್ದೇವೆ ಎಂದು ಕಂಪನಿ ಹೇಳಿದೆ. ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಯಶಸ್ಸಿಗೆ ಸ್ಯಾಮ್‍ಸಂಗ್‍ನ ನೋಯ್ಡಾ ಕಾರ್ಖಾನೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಸಿಎಂ ಯೋಗಿ ಅದಿತ್ಯನಾಥ್ ಹೇಳಿದ್ದು, ಇದರಿಂದಾಗಿ ರಾಜ್ಯದ ಯುವಕರಿಗೆ ರಾಜ್ಯದಲ್ಲಿ ಉದ್ಯೋಗ ಪಡೆಯಲು ಸಹಾಯವಾಗಲಿದೆ ಎಂದು ಹೇಳಿದ್ದಾರೆ.

    ಕಳೆದ ವರ್ಷ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್, ಮುಂದಿನ 5 ವರ್ಷದಲ್ಲಿ 11 ಲಕ್ಷ ಕೋಟಿ ಹಣವನ್ನು ಭಾರತ ಮತ್ತು ವಿದೇಶದ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಲಿವೆ ಎಂದು ತಿಳಿಸಿದ್ದರು.

    ಭಾರತವನ್ನು ಮೊಬೈಲ್ ಉತ್ಪಾದನಾ ಹಬ್ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್‍ಐ)ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್  ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‍ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಮತ್ತು ವಿಶ್ವದ ಹಲವು ಕಂಪನಿಗಳು ಆಯ್ಕೆಯಾಗಿವೆ. ಇದನ್ನೂ ಓದಿ: ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದನಾ ಘಟಕ ನೋಯ್ಡಾದಲ್ಲಿ ಲೋಕಾರ್ಪಣೆ – ವಿಶೇಷತೆ ಏನು? ಎಷ್ಟು ಮಂದಿಗೆ ಉದ್ಯೋಗ ಸಿಗುತ್ತೆ?

    ಪ್ರಪಂಚದಲ್ಲಿಯೇ ಅತಿದೊಡ್ಡ ಎಲೆಕ್ಟ್ರಾನಿಕ್ ಉಪಕರಣ ಉತ್ಪಾದಕ ಘಟಕವಾಗಿದ್ದು, ನೋಯ್ಡಾದ ಸುಮಾರು 35 ಎಕರೆ ಪ್ರದೇಶದಲ್ಲಿ ತಯಾರಿಕಾ ಘಟಕ ನಿರ್ಮಾಣವಾಗಿದೆ. ಈ ಘಟಕದಲ್ಲಿ ಉತ್ಪನ್ನಗಳಾದ, ಸ್ಮಾರ್ಟ್ ಫೋನ್, ಏರ್ ಕಂಡೀಷನರ್, ರೆಫ್ರಿಜರೇಟರ್, ಫ್ಲ್ಯಾಟ್ ಪ್ಯಾನೆಲ್ ಟಿವಿ, ವಾಷಿಂಗ್ ಮಷಿನ್ ಹಾಗೂ ಅನೇಕ ಉತ್ಪನ್ನಗಳು ತಯಾರಾಗಲಿದೆ.

    ಪ್ರತಿ ತಿಂಗಳಿಗೆ ಸುಮಾರು 1.2 ಕೋಟಿ ಮೊಬೈಲ್ ಫೋನ್ ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಪ್ರಸ್ತುತವಾಗಿ ಸ್ಯಾಮ್‍ಸಂಗ್ ಕಂಪನಿಯು ಭಾರತದಲ್ಲಿ 67 ಲಕ್ಷ ಸ್ಮಾರ್ಟ್ ಫೋನ್‍ಗಳನ್ನು ತಯಾರಿಸುತ್ತಿದೆ.

  • ಯೋಗಿಗೆ ಮೋದಿ ಶುಭ ಹಾರೈಸಿಲ್ಲ ಯಾಕೆ? – ನೆಟ್ಟಿಗರಲ್ಲಿ ಬಿಸಿ ಬಿಸಿ ಚರ್ಚೆ

    ಯೋಗಿಗೆ ಮೋದಿ ಶುಭ ಹಾರೈಸಿಲ್ಲ ಯಾಕೆ? – ನೆಟ್ಟಿಗರಲ್ಲಿ ಬಿಸಿ ಬಿಸಿ ಚರ್ಚೆ

    – ಯೋಗಿ ಮತ್ತೆ ಮೋದಿ ಮಧ್ಯೆ ಹಳಸಿದ್ಯಾ ಸಂಬಂಧ?
    – ಹಿರಿಯ ಸಚಿವರಿಂದ ಸಿಕ್ತು ಸ್ಪಷ್ಟನೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಹೌದು. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಪ್ರಧಾನಿ ಮೋದಿ ದೇಶ ಮತ್ತು ವಿದೇಶದ ಎಲ್ಲ ಗಣ್ಯರಿಗೆ, ರಾಜಕೀಯ ನಾಯಕರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುವ ಸಂಪ್ರದಾಯವನ್ನು ಪಾಲಿಸುತ್ತಾರೆ. ಆದರೆ ಶನಿವಾರ ಯೋಗಿ ಆದಿತ್ಯನಾಥ್ ಅವರು 49ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ವೇಳೆ ಮೋದಿ ಹುಟ್ಟುಹಬ್ಬದ ಶುಭಾಶಯವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸದ್ದಕ್ಕೆ ಪ್ರಧಾನಿ ಮತ್ತು ಯೋಗಿ ಮಧ್ಯೆ ಸಂಬಂಧ ಸರಿ ಇಲ್ಲ ಎಂಬ ವಿಚಾರವನ್ನು ಪ್ರಸ್ತಾಪ ಮಾಡಿ ನೆಟ್ಟಿಗರು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

    ಚರ್ಚೆ ಏನು?
    ಯೋಗಿ ಅದಿತ್ಯನಾಥ್ ಮತ್ತು ನರೇಂದ್ರ ಮೋದಿ ಅವರ ಮಧ್ಯೆ ಸಂಬಂಧ ಹಳಸಿದೆ. ಮೋದಿಗೆ ಆಪ್ತರಾಗಿರುವ ಗುಜರಾತ್ ಕೇಡರ್ ಮಾಜಿ ಐಎಎಸ್ ಅಧಿಕಾರಿ ಅರವಿಂದ ಕುಮಾರ್ ಶರ್ಮಾ ಅವರನ್ನು ಮೋದಿ ಸೂಚನೆಯಂತೆ ಉತ್ತರ ಪ್ರದೇಶದಲ್ಲಿ ಎಂಎಲ್‍ಸಿಯನ್ನಾಗಿ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿಗೆ ಸೇರ್ಪಡೆಯಾದ ಮೋದಿ ಆಪ್ತ ಐಎಎಸ್ ಅಧಿಕಾರಿ

    ಎಂಎಲ್‍ಸಿಯಾದ ಬಳಿಕ ಅರವಿಂದ್ ಅವರನ್ನು ಉಪಮುಖ್ಯಮಂತ್ರಿ ಮಾಡಲು ಮೋದಿ ಮುಂದಾಗಿದ್ದರು. ಇವರನ್ನು ಉಪಮುಖ್ಯಮಂತ್ರಿ ಮಾಡಲು ದಿನೇಶ್ ಶರ್ಮಾ ಮತ್ತು ಕೇಶವ ಪ್ರಸಾದ್ ಮೌರ್ಯರಲ್ಲಿ ಒಬ್ಬರನ್ನು ಕೈಬಿಡಬೇಕಿತ್ತು. ಇದಕ್ಕೆ ಯೋಗಿ ಆದಿತ್ಯನಾಥ್ ಒಪ್ಪಿಗೆ ನೀಡಿಲ್ಲ. ಹೀಗಾಗಿ ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ನಡುವೆ ತೀವ್ರ ಭಿನ್ನಮತ ಹುಟ್ಟಿದೆ. ಈ ಕಾರಣಕ್ಕೆ ಶನಿವಾರ ಯೋಗಿಗೆ ಮೋದಿ ಶುಭಾಶಯ ಹೇಳಲಿಲ್ಲ ಎಂಬ ವಿಚಾರ ಚರ್ಚೆಯಾಗುತ್ತಿದೆ.

    ಮೂಲಗಳು ಏನು ಹೇಳಿವೆ?
    ಪ್ರಧಾನಿ ಮೋದಿ ಯೋಗಿಗೆ ಹುಟ್ಟುಬ್ಬದ ಶುಭಾಶಯವನ್ನು ಯಾಕೆ ಹೇಳಲಿಲ್ಲ ಎಂಬುದರ ಬಗ್ಗೆ ಅಧಿಕೃತವಾಗಿ ಯಾರೂ ಹೇಳಿಲ್ಲ. ಆದರೆ ಹಿರಿಯ ಸಚಿವರು ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ಕಳೆದ ಏಪ್ರಿಲ್‍ನಿಂದ ಯಾವುದೇ ನಾಯಕರಿಗೆ ವೈಯಕ್ತಿಕವಾಗಿ ಶುಭ ಕೋರುವುದನ್ನು ನಿಲ್ಲಿಸಿದ್ದಾರೆ. ಕೊರೊನಾದಿಂದ ರಾಷ್ಟ್ರದಲ್ಲಿ ಜನರಿಗೆ ತೊಂದರೆಯಾಗಿರುವಾಗ ಶುಭ ಕೋರುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ.

    ಟ್ವಿಟ್ಟರ್ ಹ್ಯಾಂಡಲ್ ಗಮಿಸಿದರೆ ಏಪ್ರಿಲ್ ಬಳಿಕ ಪಿಎಂ ಮೋದಿಯವರು ಯಾವೊಬ್ಬ ಮುಖ್ಯಮಂತ್ರಿಗಳಿಗೆ/ ಮಂತ್ರಿಗಳಿಗೆ ಹುಟ್ಟುಹಬ್ಬದ ಶುಭವನ್ನು ಕೋರಿಲ್ಲ. ಏಪ್ರಿಲ್ 24 ರಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹುಟ್ಟುಹಬ್ಬ ಆಚರಿಸಿದ್ದರು. ಬಳಿಕ ಜಾರ್ಖಂಡ್ ನಾಯಕ ಅರ್ಜುನ್ ಮುಂಡಾ ಮತ್ತು ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜನ್ಮದಿನ ಬಂದಿತ್ತು. ಮೇ 5 ರಂದು ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಮೇ 18 ರಂದು ಕ್ಯಾಬಿನೆಟ್ ಸಚಿವ ಥಾವರ್ ಚಂದ್ ಗೆಹ್ಲೋಟ್, ಮೇ 24 ರಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಮೇ 27 ರಂದು ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಹುಟ್ಟುಹಬ್ಬದಂದು ಮೋದಿ ಶುಭ ಹಾರೈಸಿರಲಿಲ್ಲ.

  • ಯುಪಿಯಲ್ಲಿ ಸೈಕಲ್ ಕೇಕೆ, ಪ್ರಧಾನಿ ಮೋದಿಗೆ ಎಚ್ಚರಿಕೆ – ಮಹಾ ಮೈತ್ರಿಗೆ ಇದು ವೇದಿಕೆ!

    ಯುಪಿಯಲ್ಲಿ ಸೈಕಲ್ ಕೇಕೆ, ಪ್ರಧಾನಿ ಮೋದಿಗೆ ಎಚ್ಚರಿಕೆ – ಮಹಾ ಮೈತ್ರಿಗೆ ಇದು ವೇದಿಕೆ!

    ಮೋದಿ.. ಮೋದಿ.. ಯೋಗಿ.. ಯೋಗಿ.. ಇದು ಬಿಜೆಪಿ ಕಾರ್ಯಕರ್ತರ ಅಬ್ಬರಿಸಿ ಬೊಬ್ಬರಿದು ಘೋಷಣೆ ಕೂಗುತ್ತಿದ್ದ ಪರಿ. ಆದರೆ ಇವತ್ತು ಈ ಘೋಷಣೆ ಕೂಗು ತಗ್ಗಿ ಹೋಗಿತ್ತು. ಆನೆಯ ಸಹಾಯದಿಂದ ಸೈಕಲ್ ಸವಾರಿ ಮಾಡಿದವರಿಗೆ ಶಿಳ್ಳೆ, ಚಪ್ಪಾಳೆಯ ಸ್ವಾಗತ ಸಿಕ್ಕಿದೆ.

    ಪ್ರಧಾನಿ ಮೋದಿಯ ಆಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ವಿಪಕ್ಷಗಳು ಒಂದಾಗಬೇಕು ಎನ್ನುವ ಕೂಗಿಗೆ ಪುಷ್ಠಿ ಸಿಕ್ಕಿದೆ. ಇದಕ್ಕೆಲ್ಲಾ ಕಾರಣ ಗಟ್ಟಿ ಕೇತ್ರಗಳಲ್ಲೇ ಬಿಜೆಪಿ ಮಕಾಡೆ ಮಲಗಿದೆ. ಉತ್ತರಪ್ರದೇಶದ ಗೋರಖ್‍ಪುರ್, ಫೂಲ್‍ಪುರ್ ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ನೆಲಕೆಚ್ಚಿದೆ. ಎರಡು ದಶಕಗಳಿಗೂ ಹೆಚ್ಚು ಕಾಲ ನಡೆಸಿದ ಯೋಗಿ ಆರ್ಭಟ ನಿಂತಿದೆ. ಈ ಉಪಚುನಾವಣೆಗಳಲ್ಲಿನ ಸೋಲು ಮೋದಿ, ಯೋಗಿಯ ಜಬರ್ದಸ್ತ್ ಹವಾವನ್ನೇ ಪ್ರಶ್ನಿಸುವಂತಾಗಿದೆ.

    ಅಂದಿದ್ದ ಹವಾ, ಈಗ ಎಲ್ಲೋಯ್ತು ಶಿವಾ ಅನ್ನೋ ಪ್ರಶ್ನೆಗಳ ಸುರಿಮಳೆ ಜೋರಾಗಿವೆ. ಹಾಗಾದ್ರೆ ಈ ಉಪಚುನಾವಣೆ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿನಾ? ಮೋದಿಯ ನಾಗಲೋಟಕ್ಕೆ ಬ್ರೇಕ್ ಹಾಕಲು ಮಿತ್ರಪಕ್ಷಗಳನ್ನು ಕಾಂಗ್ರೆಸ್ ಗುಡ್ಡೆ ಹಾಕುತ್ತಾ ಎನ್ನುವ ಲೆಕ್ಕಚಾರಗಳು ಭರ್ಜರಿಯಾಗಿಯೇ ನಡೆದಿವೆ.

    ಈ ನಡುವೆ ಉಪಚುನಾವಣೆಯ ಫಲಿತಾಂಶದಿಂದ ಕಾಂಗ್ರೆಸ್‍ನ ಶಕ್ತಿಯೇನೂ ವೃದ್ಧಿಯಾಗಿಲ್ಲ. ಆದರೂ ಮೈತ್ರಿ ರಾಜಕಾರಣ ಗಟ್ಟಿಗೊಳಿಸಲು ಕೈಗೆ ವೇದಿಕೆ ಸಿಕ್ಕಂತಾಗಿದೆ. ಎಸ್‍ಪಿ, ಬಿಎಸ್‍ಪಿ ಕಾಂಬಿನೇಶನ್ ಫೈಟ್‍ನಿಂದಾಗಿಯೇ ಬಿಜೆಪಿ ಸೋಲಿಗೆ ಕಾರಣವಾಗಿರೋದು ಸ್ಪಷ್ಟವಾಗಿದ್ದು, ಇದೇ ಮೈತ್ರಿ ಮುಂದಿನ ಲೋಕಸಭಾ ಚುನಾವಣೆಗೆ ಮುಂದುವರಿದರೆ ಬಿಜೆಪಿಗೆ ಕಷ್ಟ ಎನ್ನುವ ಚರ್ಚೆಗಳು  ನಡೆಯಲು ಆರಂಭಿಸಿದೆ. ಅಷ್ಟೇ ಅಲ್ಲ ರಾಷ್ಟ್ರ ರಾಜಕಾರಣದ ದಿಕ್ಸೂಚಿಗೆ ಮುನ್ನುಡಿ ಬರೆದಿದ್ದು, ನಿನ್ನೆಯಷ್ಟೇ ಸೋನಿಯಾಗಾಂಧಿ 20 ಮಿತ್ರ ಪಕ್ಷಗಳ ಜತೆ ಭೋಜನ ಕೂಟ ನಡೆಸಿ ಮೈತ್ರಿ ಕಸರತ್ತು ಆರಂಭಿಸಿದ್ದಾರೆ. ಹಾಗಾಗಿಯೇ ಮೋದಿ ದುಷ್ಮನ್‍ಗಳೆಲ್ಲಾ ಒಂದಾದರೆ 2019ರ ಲೋಕಸಭಾ ಚುನಾವಣೆಯಲ್ಲಿ ಹಾದಿ ಕಠಿಣ ಎನ್ನುವ ಲೆಕ್ಕಾಚಾರಗಳು ಜೋರಾಗಿದೆ.

    ಕರ್ನಾಟಕ ಚುನಾವಣೆಯಲ್ಲೂ ಮೋದಿ, ಶಾ ಜೋಡಿ ಎಚ್ಚರಿಕೆಯ ಹೆಜ್ಜೆಯ ಇಡಬೇಕಾಗಿದ್ದು, ಕಾಂಗ್ರೆಸ್‍ನಿಂದ ಜೆಡಿಎಸ್ ಪಕ್ಷವನ್ನು ದೂರ ಇರುವಂತೆಯೇ ನೋಡಿಕೊಳ್ಳುವುದನ್ನು ಕಲಿಯಬೇಕಿದೆ. ಇಲ್ಲದಿದ್ದರೇ ಗಂಡಾಂತರ ಗ್ಯಾರಂಟಿ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಣೆ ಆರಂಭವಾಗಿದೆ.

    2014ರಿಂದ ಇಲ್ಲಿ ತನಕ ಕೆಲ ಸಣ್ಣ ಸಣ್ಣ ಸೋಲುಗಳನ್ನು ಹೊರತುಪಡಿಸಿದರೆ ಮೋದಿಗೆ ವಿಜಯದ ಮೇಲೆ ವಿಜಯ ದಕ್ಕಿದ್ದು ದೊಡ್ಡ ಸಾಧನೆಯೇ ಸರಿ. ಆದರೆ ಇದೇ ಹವಾದ ಉತ್ತರ ಪ್ರದೇಶದ ಉಪಚುನಾವಣೆಗಳ ಸೋಲಿನಿಂದ ಕಡಿಮೆಯಾಗಲು ಶುರುವಾಯ್ತಾ? ಕರ್ನಾಟಕ ಚುನಾವಣೆ ಮೋದಿ, ಶಾ ಪಾಲಿನ ಅತಿದೊಡ್ಡ ಅಗ್ನಿ ಪರೀಕ್ಷೆಯಲ್ಲವಾ? ಮೈತ್ರಿ ರಾಜಕಾರಣ ಮೋದಿಯ ಮಾಂತ್ರಿಕ ರಾಜಕಾರಣಕ್ಕೆ ಪೆಟ್ಟು ನೀಡುತ್ತಾ ಎಂಬೆಲ್ಲಾ ಪ್ರಶ್ನೆಗಳಿಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.