Tag: ಯೋಗಾಸನ

  • ಆಕಾಶದಲ್ಲಿ ಯೋಗ ಪ್ರದರ್ಶಿಸಿದ ವಾಯುಪಡೆಯ ಸಿಬ್ಬಂದಿ

    ಆಕಾಶದಲ್ಲಿ ಯೋಗ ಪ್ರದರ್ಶಿಸಿದ ವಾಯುಪಡೆಯ ಸಿಬ್ಬಂದಿ

    ನವದೆಹಲಿ: ದೇಶದ ಭೂ, ವಾಯು ಹಾಗೂ ನೌಕಾ ಪಡೆಯಿಂದ ವಿಶ್ವ ಯೋಗದಿನ ಆಚರಿಸಲಾಗಿದ್ದು, ತಾವು ಇರುವ ವಾತಾವರಣದಲ್ಲಿಯೇ ಯೋಗಾಸಗಳನ್ನು ಮಾಡುವ ಮೂಲಕ ಜಗತ್ತಿನ ಜನರ ಗಮನ ಸೆಳೆದಿದ್ದಾರೆ.

    ಭಾರತೀಯ ವಾಯು ಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ನ ತರಬೇತುದಾರರಾದ ಸ್ಯಾಮಲ್ ಹಾಗೂ ಗಜಾನಂದ್ ಯಾದವ್ ಅವರು ಆಕಾಶಸದಲ್ಲಿ ಯೋಗಾಸ ಪ್ರದರ್ಶಿಸಿದ್ರು. ಅವರ ಫೋಟೋ ಕೆಳಗೆ “ಇದು ಉತ್ತಮ ಆರೋಗ್ಯ, ಸಂತೋಷ, ಸಾಮರಸ್ಯ ಮತ್ತು ಐಎಎಫ್ ಏರ್ ವಾರಿಯರ್ ಶಾಂತಿಯ ಸಂದೇಶ. ಆಕಾಶದಲ್ಲಿ ಯೋಗಾಭ್ಯಾಸ ಮಾಡುತ್ತಿರುವ ಭಾರತೀಯ ವಾಯುಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ನ ತರಬೇತುದಾರರು” ಎಂದು ಬರೆದು ಐಎಎಫ್ ಟ್ವೀಟ್ ಮಾಡಿದೆ.

    ವಿಶಾಖಪಟ್ಟಣದ ಬಂಗಾಳ ಕೊಲ್ಲಿಯಲ್ಲಿ ಪೂರ್ವ ನೌಕಾದಳದ ಕಮಾಂಡರ್ ಸಿಬ್ಬಂದಿ ಹಾಗೂ ಪೂರ್ವ ನೌಕಾ ಪಡೆಯ ಜಲಾಂತರ್ಗಾಮಿ (ಸಬ್ ಮೆರಿನ್) ಸಿಬ್ಬಂದಿ ಕೂಡ ವಿಶ್ವ ಯೋಗ ಭಾಗವಹಿಸಿದರು. ಪೂರ್ವ ನೌಕಾ ಪಡೆಯ ಜಲಾಂತರ್ಗಾಮಿ ಸಿಬ್ಬಂದಿ ಸಬ್‍ಮೆರಿನ್ ನಲ್ಲಿಯೇ ಯೋಗಾಸನ ಮಾಡಿದರು.

  • ಕ್ಲಾಸಿಗೆ ಹೋಗದೆ ಯೂಟ್ಯೂಬ್ ನಲ್ಲೇ ಯೋಗ ನೋಡಿ, ಕಲಿತು ಗಿನ್ನೆಸ್ ದಾಖಲೆ ಮಾಡಿದ್ಳು ಉಡುಪಿಯ ಪುಟಾಣಿ!

    ಕ್ಲಾಸಿಗೆ ಹೋಗದೆ ಯೂಟ್ಯೂಬ್ ನಲ್ಲೇ ಯೋಗ ನೋಡಿ, ಕಲಿತು ಗಿನ್ನೆಸ್ ದಾಖಲೆ ಮಾಡಿದ್ಳು ಉಡುಪಿಯ ಪುಟಾಣಿ!

    ಉಡುಪಿ: ಒಂದು ದಿನನೂ ಯೋಗ ಕ್ಲಾಸಿಗೆ ಹೋಗದೆ ಎಲ್ಲರೂ ಹುಬ್ಬೇರಿಸುವ ಕೆಲಸ ಮಾಡಿದ್ದಾಳೆ ಉಡುಪಿಯ ಪೋರಿ ತನುಶ್ರೀ.

    9ರ ಹರೆಯದ ಈಕೆ ಇದೀಗ ವಿಶ್ವ ಮಟ್ಟದಲ್ಲಿ ದಾಖಲೆ ಮಾಡಿದ್ದಾಳೆ. ಯೋಗದ ಮೈ ನವಿರೇಳಿಸುವ ಭಂಗಿ ಪ್ರದರ್ಶಿಸಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾಳೆ. ಗಿರಿಗಿಟ್ಲೆ ತರ ತಿರುಗೋ ಮೂಲಕ ಭಾರತ ಮಣ್ಣಿನ ವ್ಯಾಯಾಮ ಕಲೆಯಾದ ಯೋಗಾಸನ ಮೂಲಕ ಈಕೆ ಗಿನ್ನೆಸ್ ವಿಶ್ವದಾಖಲೆ ಮೆರೆದಿದ್ದಾಳೆ.

    ಉಡುಪಿ ಜಿಲ್ಲೆ ಪಿತ್ರೋಡಿಯ ಉದಯ್ ಕುಮಾರ್ ಹಾಗೂ ಸಂಧ್ಯಾ ದಂಪತಿಯ ಪುತ್ರಿ ತನುಶ್ರೀ, ಯೋಗಾಸನದ ಅತೀ ಕ್ಲಿಷ್ಟಕರವಾದ ನಿರಾಲಂಬ ಪೂರ್ಣ ಚಕ್ರಾಸನವನ್ನು ಒಂದು ನಿಮಿಷದಲ್ಲಿ 42 ಬಾರಿ ಮಾಡುವ ಮೂಲಕ ನೂತನ ದಾಖಲೆ ಬರೆದಿದ್ದಾಳೆ.

    ಪ್ಯಾಲೆಸ್ತೀನ್‍ನ ಮುಹಮ್ಮದ್ ಅಲ್ ಶೇಖ್ ಹೆಸರಲ್ಲಿದ್ದ ದಾಖಲೆಯನ್ನು ತನುಶ್ರೀ ಮುರಿದಿದ್ದಾಳೆ. ಮುಂಬೈಯಿಂದ ಆಗಮಿಸಿದ್ದ ಗಿನ್ನೆಸ್ ಅಧಿಕಾರಿ ಮುಂದೆ ತನುಶ್ರೀ ವಿಶ್ವ ದಾಖಲೆ ಯೋಗ ಮಾಡಿದ್ದಾಳೆ. ಒಂದು ದಿನವೂ ಯೋಗ ಕ್ಲಾಸಿಗೆ ಹೋಗದ ತನುಶ್ರೀ, ಕೇವಲ ಯೂಟ್ಯೂಬ್ ನೋಡಿ ಈ ವಿದ್ಯೆ ಕಲಿತಿದ್ದಾಳೆ ಅಂತ ತಂದೆ ಉದಯಕುಮಾರ್ ಹೇಳಿದ್ದಾರೆ.

    ಅಂದಹಾಗೆ ತನುಶ್ರೀ ಭರತನಾಟ್ಯ ಪಟು ಕೂಡ. ನಿರಾಲಂಬ ಪೂರ್ಣ ಚಕ್ರಾಸನ ಮಾಡಿ ಪಡೆದ ಗಿನ್ನೇಸ್ ರೆಕಾರ್ಡ್ ಅನ್ನು ಬಾಲೆ ತನುಶ್ರೀ ದೇಶಕ್ಕೆ ಸಮರ್ಪಿಸಿದ್ದಾಳೆ.

    ಒಟ್ಟಿನಲ್ಲಿ ಯೋಗಾಭ್ಯಾಸ ಅಂದ್ರೆ ಆರೋಗ್ಯ ಜೀವನಕ್ಕೆ ಇರುವ ವ್ಯಾಯಾಮ ಅಂದುಕೊಂಡೋರೆ ಜಾಸ್ತಿ. ಆದ್ರೆ ಅದ್ರಲ್ಲೂ ವಿಶ್ವದಾಖಲೆ ಮಾಡಲು ಸಾಧ್ಯ ಎಂದು ಈ ಪುಟ್ಟ ಬಾಲೆ ತೋರಿಸಿಕೊಟ್ಟಿದ್ದಾಳೆ. ಯೋಗದಿಂದ ರೋಗ ದೂರ ಎನ್ನುವ ಈ ಬಾಲೆ ಎಲ್ಲರೂ ಯೋಗ ಮಾಡಿ ಅಂತ ರಿಕ್ವೆಸ್ಟ್ ಮಾಡ್ಕೊಂಡಿದ್ದಾಳೆ.