Tag: ಯೋಗರಾಜ್ ಸಿಂಗ್

  • ಧೋನಿಯನ್ನು ಯಾವತ್ತೂ ಕ್ಷಮಿಸಲ್ಲ – ಯುವರಾಜ್ ಸಿಂಗ್ ತಂದೆ ಕಿಡಿ

    ಧೋನಿಯನ್ನು ಯಾವತ್ತೂ ಕ್ಷಮಿಸಲ್ಲ – ಯುವರಾಜ್ ಸಿಂಗ್ ತಂದೆ ಕಿಡಿ

    – ಧೋನಿ ತಮ್ಮ ಮುಖವನ್ನು ಕನ್ನಡಿಯಲ್ಲಿ ಒಮ್ಮೆ ನೋಡಿಕೊಳ್ಳಲಿ ಅಂತ ಲೇವಡಿ

    ಮುಂಬೈ: ನನ್ನ ಮಗನ ಭವಿಷ್ಯಕ್ಕೆ ಅಡ್ಡಗಾಲು ಹಾಕಿದ ಮಹೇಂದ್ರ ಸಿಂಗ್ ಧೋನಿಯನ್ನು (MS Dhoni) ನಾನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಯುವರಾಜ್ ಸಿಂಗ್ (Yuvaraj Singh) ತಂದೆ, ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ (Yograj Singh) ಧೋನಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಭಾರತ ತಂಡದ ಪರ ಏಳು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಯೋಗರಾಜ್ ಸಿಂಗ್ ಅವರ ತಂದೆ ಸಾರ್ವಜನಿಕವಾಗಿ ಧೋನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮಗನ ಭವಿಷ್ಯವನ್ನು ಧೋನಿ ಹಾಳು ಮಾಡಿದ್ದಾರೆ. ಹೀಗಾಗಿ ನಾನು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಎಷ್ಟೇ ದೊಡ್ಡ ಕ್ರಿಕೆಟಿಗನಾದರೂ ಧೋನಿ ನನ್ನ ಕ್ಷಮೆಗೆ ಅರ್ಹರಲ್ಲ ಎಂದು ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ಯೋಗರಾಜ್ ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ದರ್ಶನ್‌ ಗ್ಯಾಂಗ್‌ನ ಮತ್ತಿಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾ

    ಧೋನಿ ತಮ್ಮ ಮುಖವನ್ನು ಕನ್ನಡಿಯಲ್ಲಿ ಒಮ್ಮೆ ನೋಡಿಕೊಳ್ಳಲಿ. ಅವರು ದೊಡ್ಡ ಕ್ರಿಕೆಟಿಗನೇ ಇರಬಹುದು. ಆದರೆ ಅವರು ನನ್ನ ಮಗನ ವಿರುದ್ಧ ಏನೆಲ್ಲಾ ಮಾಡಿದ್ದಾನೆ ಎಂಬುದು ಈಗ ಹೊರಗೆ ಬರುತ್ತಿದೆ. ಅದನ್ನು ನನ್ನ ಜೀವನದಲ್ಲಿ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ನಾನು ನನ್ನ ಜೀವನದಲ್ಲಿ 2 ತಪ್ಪುಗಳನ್ನು ಮಾಡಿಲ್ಲ. ಮೊದಲನೆಯದಾಗಿ ಯಾರೇ ತಪ್ಪು ಮಾಡಿದರೂ ನಾನು ಅವರನ್ನು ಕ್ಷಮಿಸಿಲ್ಲ. ಎರಡನೆಯದಾಗಿ ತಪ್ಪು ಮಾಡಿದವರನ್ನು ನಾನು ಯಾವತ್ತಿಗೂ ತಬ್ಬಿಕೊಂಡಿಲ್ಲ. ಅದು ನನ್ನ ಕುಟುಂಬವೇ ಆಗಿರಲಿ, ಮಕ್ಕಳೆ ಆಗಿರಲಿ. ನಾನು ಅದನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: Kolkata Horror | ಟ್ರೈನಿ ವೈದ್ಯೆ ʻಹತ್ಯಾʼಚಾರ ನಡೆದಿದ್ದ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅರೆಸ್ಟ್‌

    ಎಂ.ಎಸ್ ಧೋನಿ ವಿರುದ್ಧ ಯೋಗರಾಜ್ ಸಿಂಗ್ ಈ ರೀತಿಯಾಗಿ ಆರೋಪಿಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಧೋನಿಯನ್ನು ಬಹಿರಂಗವಾಗಿ ದೂರಿದ್ದರು. 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಿಎಸ್‌ಕೆ (CSK) ಸೋಲಲು ಧೋನಿಯೇ ಪ್ರಮುಖ ಕಾರಣ. ಅವರಿಗೆ ಅಸೂಯೆ ಜಾಸ್ತಿ ಇದೆ ಎಂದು ಯೋಗರಾಜ್ ಸಿಂಗ್ ಆರೋಪಿಸಿದ್ದರು. ಇದನ್ನೂ ಓದಿ: Breaking: ಮುಡಾ ಹಗರಣದ ಮೊದಲ ವಿಕೆಟ್ ಪತನ – ಹಿಂದಿನ ಆಯುಕ್ತ ದಿನೇಶ್ ಕುಮಾರ್ ಸಸ್ಪೆಂಡ್‌!

  • ʻಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್‌ ಜೊತೆ ಖ್ಯಾತ ಕ್ರಿಕೆಟರ್‌ ತಂದೆ ನಟನೆ

    ʻಇಂಡಿಯನ್‌ 2ʼ ಚಿತ್ರದಲ್ಲಿ ಕಮಲ್‌ ಹಾಸನ್‌ ಜೊತೆ ಖ್ಯಾತ ಕ್ರಿಕೆಟರ್‌ ತಂದೆ ನಟನೆ

    ಕ್ರಿಕೆಟ್ ಕ್ಷೇತ್ರದಲ್ಲಿ ಮಿಂಚಿದ ಅನೇಕ ಸ್ಟಾರ್ ಕ್ರಿಕೆಟಿಗರು ತಮ್ಮ ನಿವೃತ್ತಿಯ ನಂತರ ಬೇರೆ ಕ್ಷೇತ್ರಗಳತ್ತ ಮುಖ ಮಾಡೋದು ಸರ್ವೇ ಸಾಮಾನ್ಯ. ಇತ್ತೀಚೆಗಷ್ಟೇ ಎಂ.ಎಸ್ ಧೋನಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದೀಗ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್(Yuvaraj Singh) ತಂದೆ ಯೋಗರಾಜ್ ಸಿಂಗ್(Yogaraj Singh) ಕೂಡ ಸಿನಿಮಾಗೆ ಎಂಟ್ರಿ ಕೊಡ್ತಿದ್ದಾರೆ.

    ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಎಂ.ಎಸ್ ಧೋನಿ ನಂತರ ಮಾಜಿ ಕ್ರಿಕೆಟಿಗ ಆಗಿರುವ ಯೋಗರಾಜ್ ಸಿಂಗ್ ಇದೀಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಖ್ಯಾತ ಕ್ರಿಕೆಟರ್ ಯುವರಾಜ್ ಸಿಂಗ್ ತಂದೆ ಕೂಡ ಕ್ರಿಕೆಟ್ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಕಮಲ್ ಹಾಸನ್(Kamal Haasan) ನಟನೆಯ `ಇಂಡಿಯನ್ 2′ (Indian 2) ಚಿತ್ರದಲ್ಲಿ ಯೋಗರಾಜ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಹನ್ಸಿಕಾ ಮೋಟ್ವಾನಿಗೆ ರೊಮ್ಯಾಂಟಿಕ್‌ ಆಗಿ ಪ್ರಪೋಸ್‌ ಮಾಡಿದ ಭಾವಿ ಪತಿ

     

    View this post on Instagram

     

    A post shared by Yograj Singh (@yograjofficial)

    `ಇಂಡಿಯನ್ 2′ ಸಿನಿಮಾ ಶುರುವಾಗಿ ಹಲವು ವರ್ಷಗಳೇ ಆಗಿದೆ. ಆದರೆ ಕೆಲವು ಕಾರಣಗಳಿಂದ ಈ ಚಿತ್ರ ಸ್ಥಗಿತಗೊಂಡಿತ್ತು. ಇದೀಗ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರದ ಸಕ್ಸಸ್ ನಂತರ ಈ ಚಿತ್ರ ಮತ್ತೆ `ಇಂಡಿಯನ್ 2′ ಪ್ರಾಜೆಕ್ಟ್ ಶುರುವಾಗಿದೆ. ಮಾಜಿ ಕ್ರಿಕೆಟರ್ ಯೋಗರಾಜ್ ಸಿಂಗ್ ಈ ಚಿತ್ರದಲ್ಲಿ ಪವರ್‌ಫಯಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಯುವಿ ಬೆನ್ನಿಗೆ ಧೋನಿ, ಕೊಹ್ಲಿ ಚೂರಿ ಹಾಕಿದ್ದರು’- ಯುವರಾಜ್ ಸಿಂಗ್ ತಂದೆ ಆರೋಪ

    ‘ಯುವಿ ಬೆನ್ನಿಗೆ ಧೋನಿ, ಕೊಹ್ಲಿ ಚೂರಿ ಹಾಕಿದ್ದರು’- ಯುವರಾಜ್ ಸಿಂಗ್ ತಂದೆ ಆರೋಪ

    ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

    ಯುವರಾಜ್ ಸಿಂಗ್ ವೃತ್ತಿ ಜೀವನ ಸಂಕಷ್ಟದಲ್ಲಿದ್ದ ಸಮಯದಲ್ಲಿ ಈ ಇಬ್ಬರು ಆಟಗಾರರು ಬೆಂಬಲ ನೀಡಿರಲಿಲ್ಲ. ಯುವರಾಜ್ ಸಿಂಗ್ ಬೆನ್ನಿಗೆ ಸಾಕಷ್ಟು ಮಂದಿ ಚೂರಿ ಹಾಕಿದ್ದು, ಅದರಲ್ಲಿ ಧೋನಿ, ಕೊಹ್ಲಿ ಕೂಡ ಇದ್ದಾರೆ. ಅಲ್ಲದೇ ಅಂದು ಆಯ್ಕೆ ಸಮಿತಿ ಸದಸ್ಯರಾಗಿದ್ದ ಸರಣ್‍ದೀಪ್ ಸಿಂಗ್ ಕೂಡ ಯುವರಾಜ್ ಸಿಂಗ್ ಅವನರನ್ನು ತಂಡದಿಂದ ಕೈಬಿಡುವಂತೆ ಒತ್ತಾಯ ಮಾಡಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ಇತ್ತೀಚೆಗೆ ಇನ್‍ಸ್ಟಾ ಲೈವ್‍ನಲ್ಲಿ ಮಾತನಾಡಿದ್ದ ಯುವಿ, ಮಾಜಿ ನಾಯಕ ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಲಭಿಸಿದ್ದ ಬೆಂಬಲ ಧೋನಿ, ಕೊಹ್ಲಿರಿಂದ ಲಭಿಸಿರಲಿಲ್ಲ ಎಂದು ಹೇಳಿದ್ದರು. ಯುವಿರ ಅಭಿಪ್ರಾಯದ ಕುರಿತಂತೆ ಯೋಗರಾಜ್ ಸಿಂಗ್ ಅವರಿಗೆ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿರುವ ಅವರು, ಇತ್ತೀಚೆಗಷ್ಟೇ ನಾನು ಕೋಚ್ ರವಿಶಾಸ್ತ್ರಿ ಅವರನ್ನು ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲಿ ಅವರು ನನ್ನೊಂದಿಗೆ ಫೋಟೋಗ್ರಾಫ್ ಬೇಕೆಂದು ಕೇಳಿದ್ದರು. ಆಗ ನಾನು ಅವರನ್ನು ಬಳಿಗೆ ಕರೆದು ಟೀಂ ಇಂಡಿಯಾದ ಗ್ರೇಟ್ ಆಟಗಾರರ ಹೆಸರನ್ನು ಪ್ರಸ್ತಾಪಿಸಿ ಅಂತ ಆಟಗಾರರಿಗೆ ಉತ್ತಮ ಸೆಂಡ್ ಆಫ್ ನೀಡುವಂತೆ ಹೇಳಿದ್ದೆ. ಧೋನಿ, ಕೊಹ್ಲಿ ಅಥವಾ ರೋಹಿತ್ ಶರ್ಮಾ ಅವರು ನಿವೃತ್ತಿ ಘೋಷಣೆ ಮಾಡಿದ ಸಂದರ್ಭದಲ್ಲಿ ಆಟಗಾರರಿಗೆ ಅವರು ನೀಡಿರುವ ಕೊಡುಗೆ ಆಧರಿಸಿ ಸೆಂಡ್ ಆಫ್ ನೀಡಬೇಕು ತಿಳಿಸಿದ್ದಾಗಿ ಹೇಳಿದ್ದಾರೆ.

    ಇದೇ ಸಂದರ್ಭದಲ್ಲಿ ಆಯ್ಕೆ ಸಮಿತಿ ಸದಸ್ಯರಾಗಿದ್ದ ಸರಣ್‍ದೀಪ್ ಸಿಂಗ್ ವಿರುದ್ಧ ಅಸಮಾಧಾನ ಹೊರ ಹಾಕಿರುವ ಯೋಗರಾಜ್ ಸಿಂಗ್ ಅವರು, ಸರಣ್‍ದೀಪ್ ಸಿಂಗ್ ನಿರಂತರವಾಗಿ ಯುವಿಯನ್ನು ತಂಡದಿಂದ ಕೈಬಿಡಬೇಕು ಎಂದು ಒತ್ತಡ ಹೇರಿದ್ದರು. ಆಯ್ಕೆ ಸಮಿತಿ ಪ್ರತಿ ಸಭೆಯಲ್ಲೂ ಅವರದ್ದು ಒಂದೇ ಮಾತಾಗಿತ್ತು. ಕ್ರಿಕೆಟ್ ಕುರಿತು ಎಬಿಸಿ ಗೊತ್ತಿರದ ವ್ಯಕ್ತಿಗಳನ್ನು ಆಯ್ಕೆ ಸಮಿತಿಗೆ ತೆಗೆದುಕೊಂಡ ಸಂದರ್ಭದಲ್ಲಿ ಅವರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

    ಯೋಗರಾಜ್ ಸಿಂಗ್ ಇಂತಹ ಆರೋಪ ಮಾಡುತ್ತಿರುವುದು ಇದೇ ಮೊದಲಲ್ಲ. 2011ರ ವಿಶ್ವಕಪ್ ಸಂದರ್ಭದಲ್ಲಿ ಸುರೇಶ್ ರೈನಾರನ್ನು ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಧೋನಿ ಪ್ರಯತ್ನಿಸಿದ್ದಾಗಿ ಆರೋಪಿಸಿದ್ದರು. ಯುವಿ ಉತ್ತಮ ಪ್ರದರ್ಶನ ನೀಡಿದರೆ ತಮಗೆ ಉತ್ತಮ ಹೆಸರು ಬರುವುದಿಲ್ಲ ಎಂಬ ಕಾರಣದಿಂದ ಈ ರೀತಿ ಮಾಡಿದ್ದರು ಎಂದು ಯೋಗರಾಜ್ ಸಿಂಗ್ ಹೇಳಿದ್ದರು.