Tag: ಯೊಗೇಶ್ ಗೌಡ

  • ಬಿಜೆಪಿಯವ್ರ ಕಿರುಕುಳದಿಂದ ಯೊಗೇಶ್ ಗೌಡ ಪತ್ನಿ ಕಾಂಗ್ರೆಸ್ ಗೆ ಸೇರ್ಪಡೆ: ಸಿಎಂ

    ಬಿಜೆಪಿಯವ್ರ ಕಿರುಕುಳದಿಂದ ಯೊಗೇಶ್ ಗೌಡ ಪತ್ನಿ ಕಾಂಗ್ರೆಸ್ ಗೆ ಸೇರ್ಪಡೆ: ಸಿಎಂ

    ಕಲಬುರಗಿ: ಬಿಜೆಪಿಯವರ ಕಿರುಕುಳ ತಾಳಲಾರದೇ ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಲ್ಲಮ್ಮಳನ್ನ ಕಾಂಗ್ರೆಸ್ ಹೈಜಾಕ್ ಮಾಡಿದೆ ಎಂಬುದು ಸುಳ್ಳು ಆರೋಪವಾಗಿದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಜಿಲ್ಲಾ ಪಂಚಾಯತ್ ಸದಸ್ಯ ಯೊಗೇಶ್‍ಗೌಡ ಹತ್ಯೆ ಪ್ರಕರಣ ಮತ್ತು ಪತ್ನಿ ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಲ್ಲಮ್ಮ ಅವರನ್ನು ಕಾಂಗ್ರೆಸ್ ಹೈಜಾಕ್ ಮಾಡಿಲ್ಲ. ಅವರಾಗೇ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ ಅಂತ ಹೇಳಿದ್ರು. ಇದನ್ನೂ ಓದಿ: ಕಾಂಗ್ರೆಸ್ ನಿಂದ ಯೋಗೇಶ್ ಗೌಡ ಪತ್ನಿಯ ಹೈಜಾಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!

    ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರಿಂದ ಅಸಂಬದ್ಧ ಪದ ಬಳಕೆ ವಿಚಾರದ ಕುರಿತು ಮಾತನಾಡಿದ ಸಿಎಂ, ಬೋಗಳೆದಾಸಯ್ಯ ಯಾರೆಂಬ ವಿಷಯ ಚರ್ಚೆಗೆ ಬರಬೇಕು. ಬಿಜೆಪಿಯವರಿಗೆ ಚರ್ಚೆಗೆ ಬರುವುದಕ್ಕೆ ತಾಕತ್ತಿಲ್ಲ ಅಂದ್ರು. ಇದನ್ನೂ ಓದಿ: ಕಾಂಗ್ರೆಸ್ ನಿಂದ ಯೋಗೇಶ್‍ಗೌಡ ಪತ್ನಿ ಹೈಜಾಕ್?- ರಾತ್ರೋರಾತ್ರಿ ಕರೆದೊಯ್ದು ಪಕ್ಷ ಸೇರುವಂತೆ ಬೆದರಿಕೆ ಆರೋಪ

    ಇನ್ನು ಕಾಂಗ್ರೆಸ್‍ನಲ್ಲಿ ವಯಸ್ಸಾದವರಿಗೆ ನಿವೃತ್ತಿ ರಾಹುಲ್ ಗಾಂಧಿ ಹೇಳಿಕೆ ಸಂಬಂಧ, ಪಕ್ಷದಲ್ಲಿ ಹಿರಿಯರು ಬೇಕು, ಯುವಕರು ಬೇಕು. ಪ್ರಿಯಾಂಕ ಗಾಂಧಿ ರಾಹುಲ್‍ಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಚುನಾವಣೆಗೆ ನಿಲ್ಲೋದು ಸದ್ಯಕ್ಕೆ ಅಪ್ರಸ್ತುತ. ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು ಸಹ ರಾಜಕೀಯದಲ್ಲಿ ಸಕ್ರಿಯರಾಗಿರುತ್ತಾರೆ. ರಾಯಬರೇಲಿ ಕ್ಷೇತ್ರದಿಂದಲೇ ಸೋನಿಯಾ ಸ್ಫರ್ಧೆ ಮಾಡುತ್ತಾರೆ ಅಂತ ಅವರು ತಿಳಿಸಿದ್ರು.

  • ಕಾಂಗ್ರೆಸ್ ನಿಂದ ಯೋಗೇಶ್ ಗೌಡ ಪತ್ನಿಯ ಹೈಜಾಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!

    ಕಾಂಗ್ರೆಸ್ ನಿಂದ ಯೋಗೇಶ್ ಗೌಡ ಪತ್ನಿಯ ಹೈಜಾಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!

    ಹುಬ್ಬಳ್ಳಿ: ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ನನ್ನ ಬಗ್ಗೆ ಕೇಳಿಬರುತ್ತಿರುವ ಎಲ್ಲಾ ಮಾಹಿತಿಗಳು ಸುಳ್ಳು. ನನ್ನನ್ನು ಕಾಂಗ್ರೆಸ್ ಪಕ್ಷದ ಯಾರು ಸಂಪರ್ಕಿಸಿಲ್ಲ ಅಂತ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಗಂಡನ ಹತ್ಯೆಯಲ್ಲಿ ಸಚಿವ ವಿನಯ್ ಕುಲಕರ್ಣಿ ಪಾತ್ರ ಇದೆ ಅಂತ ನಾನು ಸುಮ್ಮನೆ ಆರೋಪ ಮಾಡಲ್ಲ. ಗಂಡನನ್ನು ಕೊಂದವರಿಗೆ ಶಿಕ್ಷೆ ಆಗಬೇಕು. ನನಗೂ, ನನ್ನ ನಾಲ್ಕು ಮಕ್ಕಳಿಗೂ ನ್ಯಾಯ ಸಿಗಬೇಕು ಅಷ್ಟೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಿಂದ ಯೋಗೇಶ್‍ಗೌಡ ಪತ್ನಿ ಹೈಜಾಕ್?- ರಾತ್ರೋರಾತ್ರಿ ಕರೆದೊಯ್ದು ಪಕ್ಷ ಸೇರುವಂತೆ ಬೆದರಿಕೆ ಆರೋಪ

    ಸಿಎಂ ಸಿದ್ದರಾಮಯ್ಯ ನಮ್ಮ ಜಾತಿಯವರು. ಅವರ ಬಳಿ ಹೋದರೆ ನನಗೆ ನ್ಯಾಯ ಸಿಗುತ್ತೆ. ಅವರು ಸೇರಿಸಿಕೊಂಡ್ರೆ ನಾನು ಕಾಂಗ್ರೆಸ್ ಸೇರುತ್ತೇನೆ. ಸಚಿವ ವಿನಯ್ ಕುಲಕರ್ಣಿ ಇದುವರೆಗೆ ನನ್ನೊಂದಿಗೆ ಯಾವತ್ತೂ ಮಾತಾಡಿಲ್ಲ. ನನ್ನ ಭಾವ ಗುರುನಾಥ್ ಗೌಡ ಪ್ರತಿಯೊಂದಕ್ಕೂ ನನಗೆ ಅಡ್ಡಿಪಡಿಸುತ್ತಿದ್ದಾರೆ. ನಾನು ಯಾರನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಗಂಡನ ಸಾವನ್ನು ನನ್ನ ಭಾವ ಹಾಗೂ ಸ್ಥಳೀಯ ನಾಯಕರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅಂತ ಮಲ್ಲಮ್ಮ ತನ್ನ ಅಳಲು ತೋಡಿಕೊಂಡಿದ್ದಾರೆ.

    ಗುರುವಾರ ರಾತ್ರೋ ರಾತ್ರಿ ಯೋಗೇಶ್ ಗೌಡ ಪತ್ನಿ ಮಲ್ಲಮ್ಮರನ್ನು ಕಾಂಗ್ರೆಸ್ ನಾಯಕರು ಕರೆದೊಯ್ದಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಸುರೇಶಗೌಡ ಹಾಗೂ ನಾಗರಾಜ ಗೌರಿಯ ಮೂಲಕ ಕಾಂಗ್ರೆಸ್ ಗೆ ಸೇರ್ಪಡೆಯಾಗುವಂತೆ ಒತ್ತಾಯಿಸಿದ್ದು, ಜೀವ ಬೆದರಿಕೆ ಒಡ್ಡಿ ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಳ್ಳುವ ಯತ್ನ ನಡೆದಿದೆ ಎಂದು ಯೋಗೇಶ್‍ಗೌಡ ಸಹೋದರ ಗುರುನಾಥ ಗೌಡ ಆರೋಪಿಸಿದ್ದರು.

    https://www.youtube.com/watch?v=BYTYCPOHHdE

  • ಕೇಂದ್ರ ಸರ್ಕಾರ 2 ರೂ. 50 ಪೈಸೆಗೆ ವಿದ್ಯುತ್ ನೀಡಿದ್ರೆ ಬಿಎಸ್‍ವೈ ಹಿಂದೆ ಅಲೆಯುವೆ: ಡಿಕೆಶಿ

    ಕೇಂದ್ರ ಸರ್ಕಾರ 2 ರೂ. 50 ಪೈಸೆಗೆ ವಿದ್ಯುತ್ ನೀಡಿದ್ರೆ ಬಿಎಸ್‍ವೈ ಹಿಂದೆ ಅಲೆಯುವೆ: ಡಿಕೆಶಿ

    ಹುಬ್ಬಳ್ಳಿ: ಕೇಂದ್ರ ಸರ್ಕಾರ ಪ್ರತಿ ಯೂನಿಟ್ ವಿದ್ಯುತ್‍ಗೆ 2 ರೂಪಾಯಿ 50 ಪೈಸೆಯಲ್ಲಿ ನೀಡಿದ್ದೇ ಆದಲ್ಲಿ ನನ್ನ ವೈಯಕ್ತಿಕ ಕೆಲಸ ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಿಂದೆ ಅಲೆಯುವೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ರಾಜ್ಯದ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಪ್ರತಿ ಯೂನಿಟ್‍ಗೆ 2 ರೂಪಾಯಿ 50 ಪೈಸೆಗೆ ವಿದ್ಯುತ್ ನೀಡಲು ಕೇಂದ್ರ ಸಿದ್ಧವಿದೆ ಎಂದಿದ್ದಾರೆ. ಕೇಂದ್ರ ಸರ್ಕಾರ 2.50 ರೂಪಾಯಿ ಗೆ ವಿದ್ಯುತ್ ನೀಡಿದ್ರೆ, ಎಲ್ಲ ಖರೀದಿ ಪ್ರಕ್ರಿಯೆ ರದ್ದು ಮಾಡುವೆ ಅಂದ್ರು.

    ನನ್ನ ಮೇಲೆ ಐಟಿ ದಾಳಿ ನಡೆದಾಗ ಅದೊಂದು ದೇಶದ ದೊಡ್ಡ ಹಗರಣ ಎನ್ನುವಂತೆ ಬಿಜೆಪಿಯವರು ಬಿಂಬಿಸಿದ್ರು. ಆದ್ರೆ ವಿಧಾನ ಸಭೆಯಲ್ಲಿ ಯಾಕೆ ಈ ಬಗ್ಗೆ ಚರ್ಚೆ ಮಾಡಿಲ್ಲ. ಬಿಜೆಪಿ ನಾಯಕರು ಹಿಟ್ ಎಂಡ್ ರನ್ ಇದ್ದ ಹಾಗೆ ಅಂದ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶಡ್ಡಿಂಗ್ ಮಾಡೋದಿಲ್ಲ. ರಾಜ್ಯದ ರೈತರಿಗೆ ಬೇಸಿಗೆಯಲ್ಲಿ ಸಂಪೂರ್ಣ ವಿದ್ಯುತ್ ನೀಡಲಾಗುವುದು ಅಂತ ಅವರು ಹೇಳಿದ್ರು.

    ಇನ್ನು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಬಿಜೆಪಿಯವರು ಮಾಡುತ್ತಿರೋ ಸುಳ್ಳು ಆರೋಪವಾಗಿದೆ. ನಮ್ಮ ಯಾವೊಬ್ಬ ಸಚಿವರು ಕೂಡ ಅಕ್ರಮವನ್ನು ಎಸಗಿಲ್ಲ. ಅವರು ನಮ್ಮ ಬೆಳವಣಿಗೆಯನ್ನು ಕಂಡು ಹತಾಶರಾಗಿದ್ದಾರೆ. ಹೀಗಾಗಿ ಸಚಿವ ಕೆ.ಜೆ ಜಾರ್ಜ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಮೇಲೆ ಸುಳ್ಳು ಆರೋಪ ಮಾಡ್ತಾ ಇದ್ದಾರೆ ಅಂತ ಕಿಡಿಕಾರಿದ್ರು.

    ಬಿಎಸ್‍ವೈ ಹೇಳಿದ್ದು ಏನು?: ಪ್ರತಿ ಯೂನಿಟ್‍ಗೆ 2.50ರಂತೆ ವಿದ್ಯುತ್ ಪೂರೈಸಲು ಕೇಂದ್ರ ಸರ್ಕಾರ ಸಿದ್ಧವಿರುವಾಗ ರಾಜ್ಯ ಸರ್ಕಾರ ಹೆಚ್ಚಿನ ದರ ನೀಡಿ ವಿದ್ಯುತ್ ಖರೀದಿಸುತ್ತಿರುವುದರ ಬಗ್ಗೆ ತನಿಖೆ ನಡೆಸಬೇಕು ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದರು.

    ರಾಜ್ಯದಲ್ಲಿನ ವಿದ್ಯುತ್ ಕೊರತೆ ನೀಗಿಸುವುದಕ್ಕಾಗಿ ಪ್ರತಿ ಯೂನಿಟ್‍ಗೆ ಯುಪಿಸಿಎಲ್‍ನಿಂದ 4.71ರಂತೆ ಮತ್ತು ಜಿಂದಾಲ್‍ನಿಂದ ಪ್ರತಿ ಯೂನಿಟ್‍ಗೆ 4.17 ರಂತೆ ಖರೀದಿಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಅರ್ಧ ದರಕ್ಕೆ ವಿದ್ಯುತ್ ನೀಡುತ್ತೇವೆ ಎಂದು ಹೇಳಿದರೂ ದುಬಾರಿ ಬೆಲೆಯನ್ನು ನೀಡಿ ಖಾಸಗಿಯರಿಂದ ಖರೀದಿಸುತ್ತಿರುವುದು ಯಾಕೆ? ನನ್ನ ಪ್ರಶ್ನೆಗೆ ಡಿಕೆ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕೆಂದು ಆಗ್ರಹಿಸಿದ್ದರು.

  • ವಿನಯ್ ಕುಲಕರ್ಣಿ ಬೆನ್ನು ಬಿಡದ ಕೊಲೆ ಕೇಸ್- ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ

    ವಿನಯ್ ಕುಲಕರ್ಣಿ ಬೆನ್ನು ಬಿಡದ ಕೊಲೆ ಕೇಸ್- ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ

    ಧಾರವಾಡ: ಇಲ್ಲಿನ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿಗೆ ಕಂಟಕವಾಗಿ ಪರಿಣಮಿಸಿದೆ.

    ಮಂತ್ರಿ ಕುಲಕರ್ಣಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಇವತ್ತು ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆ ನಡೆಸಲಿದೆ. ಇಂದು ಅಥಣಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಜೊತೆಗೆ ಡಿವೈಎಸ್‍ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ರಾಜೀನಾಮೆಗೂ ಆಗ್ರಹಿಸಲಿದೆ.

    ಸಿಬಿಐ ಎಫ್‍ಐಆರ್‍ನಲ್ಲಿ ಜಾರ್ಜ್ ಮೊದಲ ಆರೋಪಿಯಾಗಿದ್ದಾರೆ. ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ. ಇದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಪಕ್ಷದ ಕೆಲ ನಾಯಕರೊಂದಿಗೆ ಮಾಡಿರುವ ಷಡ್ಯಂತ್ರ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ಕಂಗೆಟ್ಟಿರುವ ಅವರೆಲ್ಲಾ ತಮ್ಮ ವಿರುದ್ಧ ಸಂಚು ರೂಪಿಸಿದ್ದಾರೆ ಅಂತಾ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಿನಯ್ ಕುಲಕರ್ಣಿ ತಿರುಗೇಟು ನೀಡಿದ್ದಾರೆ.