ಬೆಂಗಳೂರು: ಪಬ್ಲಿಕ್ ಟಿವಿಯ ಯೂಟ್ಯೂಬ್ ಚಾನೆಲ್ 10 ಲಕ್ಷ ಸಬ್‍ಸ್ಕ್ರೈಬರ್ಸ್ ಗಡಿ ದಾಟಿದ್ದಕ್ಕೆ ಯೂಟ್ಯೂಬ್ ಗೋಲ್ಡ್ ಕ್ರಿಯೇಟರ್ ಅವಾರ್ಡ್ ನೀಡಿದೆ.
ಈ ಅವಾರ್ಡ್ ನಿಮ್ಮಿಂದಾಗಿ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಈ ಹಿಂದೆ 1 ಲಕ್ಷ ಚಂದಾದಾರು ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿದಾಗ ಸಿಲ್ವರ್ ಕ್ರಿಯೇಟರ್ ಅವಾರ್ಡ್ ಸಿಕ್ಕಿತ್ತು. ಸದಾ ನಮ್ಮನ್ನು ಪ್ರೋತ್ಸಾಹಿಸಿದ ನಿಮಗೆಲ್ಲರಿಗೂ ನಮ್ಮ ಕಡೆಯಿಂದ ಧನ್ಯವಾದಗಳು.
ಸದ್ಯ ಪಬ್ಲಿಕ್ ಟಿವಿಯನ್ನು ಯೂಟ್ಯೂಬ್ ನಲ್ಲಿ 13.66 ಲಕ್ಷ ಮಂದಿ ಸಬ್‍ಸ್ಕ್ರೈಬ್ ಮಾಡಿದ್ದು, ಫೇಸ್‍ಬುಕ್ ನಲ್ಲಿ 21.78 ಲಕ್ಷ ಜನ ಲೈಕ್ ಮಾಡಿದ್ದರೆ, ಟ್ವಿಟ್ಟರ್ ನಲ್ಲಿ 99 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ.
ಬೆಂಗಳೂರು: ‘ದಿ ವಿಲನ್’ ಸಿನಿಮಾ ಚಿತ್ರತಂಡ ಸೋಮವಾರ ಸಂಜೆ 7 ಗಂಟೆಗೆ ಟೀಸರ್ ಬಿಡುಗಡೆ ಮಾಡಿದ್ದು, ಇದೀಗ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ವಿಡಿಯೋವಾಗಿದೆ. ಟೀಸರ್ ಬಿಡುಗಡೆ ಸುದ್ದಿಗೋಷ್ಟಿಯಲ್ಲಿ `ಸಿನಿಮಾವನ್ನು ಸಿನಿಮಾದಂತೆ ನೋಡಿ’ ಎಂದು ಹೇಳುವ ಮೂಲಕ ಶಿವಣ್ಣ ಅವರು ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ದಿ ವಿಲನ್ ಸಿನಿಮಾದ ಬಿಡುಗಡೆಗೆ ದಿನಗಣನೇ ಶುರುವಾಗಿದ್ದು, ರಿಲೀಸ್ ಮುನ್ನ ಚಿತ್ರತಂಡ ಸಿನಿಮಾದ ನಾಲ್ಕು ಟೀಸರ್‌ಗಳನ್ನು ನಿದೇರ್ಶಕ ಪ್ರೇಮ್ ಅವರು ಬಿಡುಗಡೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಯೂಟ್ಯೂಬ್ ನಲ್ಲಿ ಸಖತ್ ಮಿಂಚುತ್ತಿದೆ.
ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಕಿಚ್ಚ ಸುದೀಪ್ ಅಭಿನಯದ ದಿ-ವಿಲನ್ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡುತ್ತಿದ್ದಂತೆ 8 ಲಕ್ಷದ 50 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. ಈ ವಿಡಿಯೋದಲ್ಲಿ ಶಿವಣ್ಣ ಅವರ ಡೈಲಾಗ್‍ಗಳಿಗೆ ಈಗಾಗಲೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೇ ದಿ ವಿಲನ್ ಸಿನಿಮಾದಲ್ಲಿ ಶಿವಣ್ಣ ಅವರ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸುದೀಪ್ ಅವರು ದಿ ವಿಲನ್ ಅಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರತಂಡ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಅಕ್ಟೋಬರ್ 18 ರಂದು ದಿ ವಿಲನ್ ಸಿನಿಮಾ ತೆರೆ ಮೇಲೆ ಮಿಂಚಲು ಸಜ್ಜಾಗಿದೆ.
ಶಿವಣ್ಣ ವಾರ್ನಿಂಗ್:
ಸೋಮವಾರ ನಡೆದ ದಿ ವಿಲನ್ ಸಿನಿಮಾ ಸುದ್ದಿಗೋಷ್ಟಿಯಲ್ಲಿ ಅಭಿಮಾನಿಗಳಿಗೆ ಶಿವಣ್ಣ ಅವರು ವಾರ್ನಿಂಗ್ ಮಾಡಿದ್ದು, ಈ ತಿಂಗಳು 18 ಕ್ಕೆ ‘ದಿ ವಿಲನ್’ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಸಿನಿಮಾವನ್ನ ಸಿನಿಮಾ ಥರ ನೋಡಿ. ನಾವು ಇಂಡಸ್ಟ್ರಿಯಲ್ಲಿ ಎಲ್ಲರೂ ಒಂದೇ. ನಾನು ಸುದೀಪ್ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ದೇವೆ. ನಾವು ಹೆಚ್ಚು ಅವರು ಕಮ್ಮಿ ಅಂತ ಜಗಳ ತೆಗೆಯಬೇಡಿ. ಅಭಿಮಾನಿಗಳಿಗೆ ಹೇಳುತ್ತಿದ್ದೇನೆ, ಯಾವುದೇ ಕಾರಣಕ್ಕೂ ಗಲಾಟೆಗೆ ಅವಕಾಶ ಕೊಡಬೇಡಿ. ನಾವು ಆ ಗಲಾಟೆ ಈ ಗಲಾಟೆ ಅಂತ ಸುದ್ದಿಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದೇವೆ. ಥಿಯೇಟರ್‌ಗೆ ಹೋಗಿ ನಿಮ್ಮ ಜೊತೆ ನಾನೇ ಬರುತ್ತೇನೆ ಸಿನಿಮಾವನ್ನ ಸಿನಿಮಾ ರೀತಿ ನೋಡಿ ಎಂದು ಖಡಕ್ ಸೂಚನೆ ನೀಡಿದರು.
ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿ ಸಿಸಿಮಾಗಳಂತಹ ಸೂಪರ್ ಡೂಪರ್ ಹಿಟ್ ಕೊಟ್ಟಂತ ನಿರ್ದೇಶಕ ಪ್ರೇಮ್, ಶಿವಣ್ಣ ಹಾಗೂ ಕಿಚ್ಚ ಸುದೀಪ್‍ರನ್ನು ಹಾಕಿಕೊಂಡು ದಿ ವಿಲನ್ ಸಿನಿಮಾವನ್ನು ಮಾಡಿದ್ದು, ಜನರಲ್ಲಿ ಕುತೂಹಲದ ಮಳೆಯನ್ನೇ ಸುರಿಸುತ್ತಿತ್ತು. ದಿ ವಿಲನ್ ಸಿನಿಮಾಕ್ಕೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿದ್ದು, ಸಿ.ಆರ್ ಮನೋಹರ್ ನಿರ್ಮಾಣ ಮಾಡಿದ್ದಾರೆ. ಸುದೀಪ್, ಶಿವಣ್ಣ, ಆಮಿ ಜಾಕ್ಸನ್ ಜೊತೆಯಲ್ಲಿ ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿದಂತೆ ಹಲವರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಕ್ಯಾಲಿಫೋರ್ನಿಯಾ: ಇನ್ನು ಮುಂದೆ ವಾಟ್ಸಪ್ ನಲ್ಲಿ ಯೂ ಟ್ಯೂಬ್ ವಿಡಿಯೋವನ್ನು ನೇರವಾಗಿ ನೋಡಬಹುದು.
ಹೌದು, ಇಲ್ಲಿಯವರೆಗೆ ವಾಟ್ಸಪ್ ನಲ್ಲಿ ಯೂ ಟ್ಯೂಬ್ ಲಿಂಕ್ ಕಳುಹಿಸಿದ್ರೆ ಯೂಟ್ಯೂಬ್ ಆಪ್ ಮೂಲಕ ವಿಡಿಯೋ ಪ್ಲೇ ಆಗುತಿತ್ತು. ಆದರೆ ಈಗ ವಾಟ್ಸಪ್ ನಲ್ಲಿ ಯೂ ಟ್ಯೂಬ್ ಇಂಟಿಗ್ರೇಷನ್ ಆಗಿದ್ದು ಸುಲಭವಾಗಿ ವಿಡಿಯೋಗಳನ್ನು ವೀಕ್ಷಿಸಬಹುದಾಗಿದೆ.
ಸದ್ಯಕ್ಕೆ ಇದು ಐಓಎಸ್ ಬಳಕೆದಾರರಿಗೆ ಮಾತ್ರ ಲಭ್ಯವಾಗಿದ್ದು, ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಿಲ್ಲ. ಯಾವಾಗ ಆಪ್ ಅಪಡೇಟ್ ಸಿಗಲಿದೆ ಎನ್ನುವುದನ್ನು ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ತಿಳಿಸಿಲ್ಲ.