Tag: ಯೂ ಟರ್ನ್‌ ಸಿನಿಮಾ

  • ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ಸ್ಯಾಂಡಲ್‌ವುಡ್‌ನ `ಯೂ ಟರ್ನ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ಶ್ರದ್ಧಾ ಶ್ರೀನಾಥ್ ರಾತ್ರೋ ರಾತ್ರಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌ವೊಂದನ್ನ ಕೊಟ್ಟಿದ್ದಾರೆ. ಈಗ ಹೆಲೋ ಗುಡ್ ಬೈ ಅಂತಾ ಟ್ವೀಟರ್‌ನಲ್ಲಿ ಶ್ರದ್ಧಾ ಪೋಸ್ಟ್ ಮಾಡಿದ್ದು, ಇದೀಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

    `ಯೂ ಟರ್ನ್’, `ಆಪರೇಷನ್ ಅಲಮೇಲಮ್ಮ’, `ರುಸ್ತುಂ’ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ ನಟಿ ಶ್ರದ್ಧಾ ಶ್ರೀನಾಥ್, ಸದ್ಯ ತೆಲುಗು, ತಮಿಳು, ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋ ನಟಿ ಈಗ ರಾತ್ರೋ ರಾತ್ರಿ ದಿಢೀರ್ ಅಂತಾ ಬ್ಯಾಕ್‌ & ವೈಟ್‌ ಫೋಟೋ ಶೇರ್‌ ಮಾಡಿ ʻಹೆಲೋ ಗುಡ್ ಬೈʼ ಅಂತಾ ಟ್ವೀಟ್ ಮಾಡಿ, ಪೋಸ್ಟ್ ಮಾಡಿರೋದು ಶ್ರದ್ಧಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ:ನಟ ಜೈಜಗದೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಬ್ಯೂಟಿ ಜತೆ ಪ್ರತಿಭೆಯಿರೋ ಮಹಾನ್ ನಟಿ ಶ್ರದ್ಧಾ, ಸ್ಟಾರ್‌ಗಳ ಜತೆಗೆ ತೆರೆಹಂಚಿಕೊಳ್ತಿದ್ದಾರೆ. ಚಿತ್ರರಂಗದಲ್ಲಿ ಒಳ್ಳೆಯ ಏಳಿಗೆ ಇರುವಾಗ ಬೈ ಅಂತಾ ಪೋಸ್ಟ್ ಮಾಡಿದ್ಯಾಕೆ, ವಯಕ್ತಿಕ ಜೀವನದಲ್ಲಿ ಏನಾದ್ರೂ ಸಮಸ್ಯೆ ಇದ್ಯಾ, ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ರಾ ಅಥವಾ ಸಾಮಾಜಿಕ ಜಾಲತಾಣಕ್ಕೆ ಬೈ ಹೇಳಿದ್ರಾ ಎಂದೆಲ್ಲಾ ನಟಿ ಶ್ರದ್ಧಾ ಕುರಿತು ಸಾಕಷ್ಟು ಚರ್ಚೆ ಆಗುತ್ತಿದೆ. ಈ ಎಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ ಕಾದುನೋಡಬೇಕಿದೆ.