Tag: ಯೂ ಟರ್ನ್

  • ಶ್ರದ್ಧಾ ಹೆಸರಿನ ಮುಂದಿರುವ ಈ ರಮಾ ಯಾರು?

    ಶ್ರದ್ಧಾ ಹೆಸರಿನ ಮುಂದಿರುವ ಈ ರಮಾ ಯಾರು?

    `ಯೂ ಟರ್ನ್’ ಬೆಡಗಿ ಶ್ರದ್ಧಾ ಶ್ರೀನಾಥ್ ಫುಲ್ ಗರಂ ಆಗಿದ್ದಾರೆ. ತನ್ನ ಹೆಸರನ್ನು ತಪ್ಪಾಗಿ ಬರೆಯುವವರಿಗೆ ಕರೆದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಇನ್ಸ್ಟಾಗ್ರಾಂನಲ್ಲಿ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ.

    ಕನ್ನಡತಿ ಶ್ರದ್ಧಾ ಶ್ರೀನಾಥ್ `ಯೂ ಟರ್ನ್’, `ಆಪರೇಷನ್ ಅಲಮೇಲಮ್ಮ’ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ ಈಗ ಬಹುಭಾಷಾ ನಾಯಕಿಯಾಗಿ ಮಿಂಚ್ತಿದ್ದಾರೆ. ಇನ್ನು ಚಿತ್ರರಂಗದಲ್ಲಿ ಶ್ರದ್ಧಾ ದಾಸ್, ಶ್ರದ್ಧಾ ಕಪೂರ್ ಅಂತಾ ಸಾಕಷ್ಟು ನಟಿಯರಿದ್ದಾರೆ. ಹೀಗಿರುವಾಗ ಮಾಧ್ಯಮವೊಂದು ಶ್ರದ್ಧಾ ಶ್ರೀನಾಥ್ ಹೆಸರನ್ನ ತಪ್ಪಾಗಿ ಬರೆಯಲಾಗಿದೆ. ಹಾಗಾಗಿ ಶ್ರದ್ಧಾ ಅಪ್‌ಸೆಟ್ ಆಗಿ ತಮ್ಮ ಹೆಸರನ್ನೇ ಬದಲಿಸಿ, ತಪ್ಪಾಗಿ ತಮ್ಮ ಹೆಸರನ್ನು ಹೇಳುವವರಿಗೆ ಟ್ವಿಟ್ಟರ್‌ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:‘ಆಪರೇಷನ್ ಲಂಡನ್ ಕೆಫೆ’ ಚಿತ್ರತಂಡದಿಂದ ಮೇಘಾ ಶೆಟ್ಟಿ ಹುಟ್ಟು ಹಬ್ಬಕ್ಕೆ ಗಿಫ್ಟ್

    ನನ್ನ ಹೆಸರನ್ನು ಯಾರೆಲ್ಲಾ ಸರಿಯಾಗಿ ಹೇಳುತ್ತಿದ್ದಾರೋ ಅವರಿಗೆಲ್ಲಾ ಧನ್ಯವಾದಗಳು. ದಾಸ್ ಅಥವಾ ಕಪೂರ್ ಅಂತ ಕೀ ಬೋರ್ಡ್ ತೋರಿಸುತ್ತಿದ್ದರೂ ನನ್ನ ಹೆಸರನ್ನು ಸರಿಯಾಗಿ ಬರೆಯುತ್ತಿರುವವರಿಗೆ ಧನ್ಯವಾದಗಳು. ಶ್ರೀನಾಥ್ ಅನ್ನುವುದು ಸರಿಯಾದ ಹೆಸರು ಎಂದು ನಿಮ್ಮ ಮನಸ್ಸಿಗೆ ಬರುತ್ತಿದ್ದರೆ ಅಷ್ಟೇ ಸಾಕು. ಅದೇ ನೀವು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಗೆ ಸಾಕ್ಷಿ. ಇನ್ನು ಇನ್ಸ್ಟಾಗ್ರಾಂನಲ್ಲಿ ಹೆಸರು ಬದಲಿಸಿಕೊಂಡಿರುವುದನ್ನು ಟ್ವೀಟ್ ಮಾಡಿ ಶ್ರದ್ಧಾ ಶ್ರೀನಾಥ್ ತಿಳಿಸಿದ್ದಾರೆ.ಇನ್ಸ್ಟಾಗ್ರಾಂನಲ್ಲಿ ನನ್ನ ಹೆಸರನ್ನು ಶ್ರದ್ಧಾ ರಮಾ ಶ್ರೀನಾಥ್ ಎಂದು ಬದಲಿಸಿಕೊಂಡಿದ್ದೇನೆ. ಟ್ವಿಟ್ಟರ್‌ನಲ್ಲೂ ಇದೇ ರೀತಿ ಬದಲಿಸಿಕೊಂಡರೆ ಸರಿ ಅನ್ನಿಸುತ್ತೆ. ರಮಾ ನನ್ನ ತಾಯಿಯ ಹೆಸರು. ಹಾಗಾಗಿ ಇನ್ನು ಮುಂದೆ ನನ್ನನ್ನು ಶ್ರದ್ಧಾ ರಮಾ ಶ್ರೀನಾಥ್ ಎಂದು ಪರಿಚಯಿಸಿಕೊಳ್ಳುತ್ತೇನೆ. ನೀವೇ ನೋಡುತ್ತೀರಾ ಎಂದು ಟ್ವೀಟ್ ಮಾಡಿದ್ದಾರೆ.

    ನನ್ನನ್ನು ಶ್ರದ್ಧಾ ದಾಸ್ ಅಂತ ಶ್ರದ್ಧಾ ಕಪೂರ್ ಅಂತ ಅಲ್ಲದೇ ಶ್ರದ್ಧಾ ಶ್ರೀನಾಥ್ ಎಂದು ಕರೆದರೆ ಸಾಕು. ದೊಡ್ಡ ದೊಡ್ಡ ಮಾಧ್ಯಮ ಸಂಸ್ಥೆಗಳು ನನ್ನ ಹೆಸರನ್ನು ಸರಿಯಾಗಿ ಬರೆಯುತ್ತಿಲ್ಲ. ಆದರೆ ಇನ್ನಾದರೂ ನನ್ನ ಹೆಸರನ್ನು ಸರಿಯಾಗಿ ಬರೆಯಿರಿ ಅಂತ ತಿರುಗೇಟು ಕೊಟ್ಟಿದ್ದಾರೆ. ಇನ್ನು ಶ್ರದ್ಧಾ ಟ್ವಿಟ್‌ಗೆ ನೆಟ್ಟಿಗರಿಂದ ಉತ್ತಮ ಬೆಂಬಲ ಸಿಕ್ಕಿದೆ. ಒಟ್ನಲ್ಲಿ ನಟಿಯ ನಡೆ ನೋಡಿ ಫ್ಯಾನ್ಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪವನ್ ಕುಮಾರ್ ಬಗ್ಗೆ ಏನಂದ್ಳು ಗೊತ್ತಾ ಸಮಂತಾ?

    ಪವನ್ ಕುಮಾರ್ ಬಗ್ಗೆ ಏನಂದ್ಳು ಗೊತ್ತಾ ಸಮಂತಾ?

    ಹೈದರಾಬಾದ್: ಕನ್ನಡದಲ್ಲಿ ಕಥೆಗಳಿಲ್ಲ ಎಂಬ ಬಗ್ಗೆ ಆಗಾಗ ಚರ್ಚೆಗಳಾಗುತ್ತವೆ. ಇಂಥಾ ಮಾತಾಡುವವರನ್ನು ಜನ ಬೇಷರತ್ತಾಗಿಯೇ ತರಾಟೆಗೆ ತೆಗೆದುಕೊಳ್ಳುತ್ತಲೂ ಇದ್ದಾರೆ. ಆದರೆ ಕನ್ನಡದಲ್ಲಿ ಪರಭಾಷೆಗಳನ್ನೇ ಅದುರಿಸುವಂಥಾ ಚಮತ್ಕಾರಿಕ ಕಥೆಗಳಿದ್ದಾವೆಂಬ ಖದರ್ರೂ ಕೂಡಾ ಆಗಾಗ ಪ್ರದರ್ಶನಗೊಳ್ಳುತ್ತಿರುತ್ತವೆ. ಸದ್ಯ ತೆಲುಗು ಭಾಷೆಯಲ್ಲೂ ಕನ್ನಡದ ಹಿರಿಮೆಯನ್ನು ಪವನ್ ಕುಮಾರ್ ನಿರ್ದೇಶನದ ಯು ಟರ್ನ್ ಚಿತ್ರ ಎತ್ತಿ ಹಿಡಿದಿದೆ.

    ಯೂ ಟರ್ನ್ ಚಿತ್ರ ತೆಲುಗಿಗೆ ರೀಮೇಕ್ ಆಗುತ್ತಿರೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಯೂ ಟರ್ನ್ ಹೆಸರಿನಲ್ಲಿಯೇ ತೆಲುಗಿನಲ್ಲಿಯೂ ತಯಾರಾಗುತ್ತಿರೋ ಈ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ್ದ ಪಾತ್ರದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕನ್ನಡದಲ್ಲಿ ನೋಡಿ ಬಹುವಾಗಿ ಇಷ್ಟಪಟ್ಟಿದ್ದ ಸಮಂತಾ ಇದೀಗ ಮೂಲ ನಿರ್ದೇಶಕ ಪವನ್ ಕುಮಾರ್ ಪರಿಶ್ರಮ, ಟ್ಯಾಲೆಂಟನ್ನು ಮೆಚ್ಚಿ ಕೊಂಡಾಡಿದ್ದಾಳೆ.

    ಈ ಚಿತ್ರ ತೆಲುಗಿಗೆ ರೀಮೇಕ್ ಆಗುವ ಮಾತುಕತೆ ನಡೆದು ಮುಖ್ಯ ಪಾತ್ರಕ್ಕೆ ಸಮಂತಾಳನ್ನು ಅಪ್ರೋಚ್ ಮಾಡಿದ್ದಾಗಲೇ ಆಕೆ ಥ್ರಿಲ್ ಆಗಿದ್ದಳಂತೆ. ಅದಾಗಲೇ ಕನ್ನಡದ ಯೂ ಟರ್ನ್ ಚಿತ್ರವನ್ನು ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದ ಸಮಂತಾ ಅದೇ ಚಿತ್ರದ ಪಾತ್ರ ತನಗೊಲಿದು ಬಂದಿದ್ದರ ಬಗ್ಗೆ ಖುಷಿಯಾಗಿದ್ದಳಂತೆ. ಅದಾದ ನಂತರದಲ್ಲಿ ಕೇವಲ ನಟಿಯಾಗಿ ತನ್ನ ಪಾತ್ರವನ್ನು ಮಾತ್ರವೇ ಮಾಡದೇ ಇದನ್ನು ತನ್ನ ಚಿತ್ರ ಎಂಬ ಕಕ್ಕುಲಾತಿಯಿಂದ ಪ್ರಮೋಷನ್ ನಲ್ಲೂ ತೊಡಗಿಕೊಂಡಿರೋ ಸಮಂತಾ ಬಗ್ಗೆ ಪವನ್ ಕೂಡಾ ಮೆಚ್ಚುಗೆಯ ಮಾತಾಡಿದ್ದಾರೆ.

    ಇಂಥಾದ್ದೊಂದು ಭಿನ್ನ ಆಲೋಚನೆಯ ಚಿತ್ರ ಮಾಡಿ ತನಗೆ ನಟಿಸಲು ಅನುವು ಮಾಡಿ ಕೊಟ್ಟಿರೋ ಪವನ್ ಕುಮಾರ್ ಅವರನ್ನು ಮೆಚ್ಚಿಕೊಳ್ಳುತ್ತಲೇ, ಒಂದು ಕಥೆಯನ್ನು ಡಿಫರೆಂಟಾಗಿ ನಿರೂಪಣೆ ಮಾಡಿರೋ ಪವನ್ ಕಲೆಗಾರಿಕೆಯನ್ನೂ ಕೂಡಾ ಸಮಂತಾ ಕೊಂಡಾಡಿದ್ದಾಳೆ.

    ಈ ಮೂಲಕವೇ ಒಂದಷ್ಟು ಕಾಲ ಖಾಸಗಿ ಜೀವನದಲ್ಲಿ ಕಳೆದು ಹೋಗಿದ್ದ ಸಮಂತಾಗೆ ಗ್ರ್ಯಾಂಡ್ ಎಂಟ್ರಿ ಸಿಕ್ಕಂತಾಗಿದೆ. ಮೊನ್ನೆಯಷ್ಟೇ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಅದಕ್ಕೆ ವ್ಯಾಪಕ ಮೆಚ್ಚುಗೆ ಸಿಕ್ಕಿದೆ. ಆ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ.

    https://twitter.com/Samanthaprabhu2/status/1020941653442379776