Tag: ಯೂರೋಪ್

  • ಮತ್ತೆ ವಿದೇಶ ಪ್ರವಾಸ- ಕಾಂಬೋಡಿಯಾಗೆ ತೆರಳಿದ ಮಾಜಿ ಸಿಎಂ ಹೆಚ್‍ಡಿಕೆ

    ಮತ್ತೆ ವಿದೇಶ ಪ್ರವಾಸ- ಕಾಂಬೋಡಿಯಾಗೆ ತೆರಳಿದ ಮಾಜಿ ಸಿಎಂ ಹೆಚ್‍ಡಿಕೆ

    ಬೆಂಗಳೂರು: ಯುರೋಪ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಇದೀ ಮತ್ತೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

    ಹೌದು. ಹೆಚ್. ಡಿ ಕುಮಾರಸ್ವಾಮಿಯವರು ಸೋಮವಾರ ರಾತ್ರಿ ಕಾಂಬೋಡಿಯಾಗೆ (Cambodia) ತೆರಳಿದ್ದಾರೆ. ಆಪ್ತರ ಜೊತೆ 4 ದಿನಗಳ ಕಾಲ ಪ್ರವಾಸಕ್ಕೆ ತೆರಳಿದ್ದಾರೆ. ಆಗಸ್ಟ್ 12 ರಂದು ವಾಪಸ್ ಆಗಲಿದ್ದಾರೆ.

    ಕುಟುಂಬದ ಸದಸ್ಯರೊಂದಿಗೆ ಜು.23ರಂದು ಹೆಚ್‍ಡಿಕೆ ಯೂರೋಪ್ (Europe) ಪ್ರವಾಸ ಕೈಗೊಂಡಿದ್ದರು. ಕುಮಾರಸ್ವಾಮಿ ಅವರು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ವಿದೇಶಕ್ಕೆ ತೆರಳಿದ್ದರು. ಯೂರೋಪಿನ ವಿವಿಧ ನಗರ ಹಾಗೂ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದು, ಎರಡು ವಾರಗಳ ಪ್ರವಾಸ ಪೂರ್ಣಗೊಳಿಸಿ, ಬೆಂಗಳೂರಿಗೆ ವಾಪಸ್ಸಾಗಿದ್ದರು.

    ಹೆಚ್‍ಡಿಕೆ ಫಾರಿನ್ ಟೂರ್ ನಿಂದ ವಾಪಸ್ ಬರ್ತಿದ್ದಿದ್ದಂತೆ ಚಾರ್ಜ್‍ಶೀಟ್ ಪಾಲಿಟಿಕ್ಸ್ ಶುರುವಾಗಿತ್ತು. ಸಿಎಂ, ಪರಂ ಸಭೆಯಲ್ಲಿ `ವೈಎಸ್‍ಟಿ ಟ್ಯಾಕ್ಸ್ ಏಕೆ ಇದ್ದರು..? ಗರುಡಾ ಮಾಲ್ ಬಳಿಯ ಪೊಲೀಸ್ ಮೆಸ್‍ನಲ್ಲಿ ಸಭೆ ನಡೆದಿತ್ತು ಎಂದು ಹೆಚ್‍ಡಿಕೆ ಫ್ರೆಶ್ ಫೈಲ್ಸ್ ಬಿಟ್ಟಿದ್ದರು. ಹಲವು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ತಡೆ ಬೆನ್ನಲ್ಲೇ ಹೆಚ್‍ಡಿಕೆ ವೈಎಸ್‍ಟಿ ರಹಸ್ಯ ಬಾಂಬ್ ಹಾಕಿರುವುದು ಚರ್ಚೆಗೆ ಗ್ರಾಸವಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಮಾಧ್ಯಮಕ್ಕೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್

    ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಮಾಧ್ಯಮಕ್ಕೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್

    ವಾಷಿಂಗ್ಟನ್‌: ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾದಿಂದ ಭಾರತ ತೈಲವನ್ನು ಖರೀದಿಸುತ್ತಿರುವ ಕುರಿತು ಪ್ರಶ್ನಿಸಿದ ವಿದೇಶಿ ಪತ್ರಕರ್ತೆಗೆ  ಭಾರತ ವಿದೇಶಾಂಗ ಸಚಿವ ಜೈಶಂಕರ್ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.

    ಯೂರೋಪ್ ರಷ್ಯಾದಿಂದ ಅರ್ಧ ದಿನಕ್ಕೆ ಖರೀದಿಸುವಷ್ಟು ಪ್ರಮಾಣದ ತೈಲವನ್ನು ಭಾರತ ಒಂದು ತಿಂಗಳ ಅವಧಿಗೆ ಖರೀದಿಸುತ್ತದೆ ಎಂದು ಉತ್ತರಿಸುವ ಮೂಲಕ ಪತ್ರಕರ್ತನಿಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನಾ ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದಿದ್ದ ಪ್ರಧಾನಿ ಮೋದಿ ಏನ್ಮಾಡ್ತಿದ್ದಾರೆ: ನಾಸೀರ್ ಹುಸೇನ್ ಪ್ರಶ್ನೆ

    ಭಾರತ ಮತ್ತು ಅಮೆರಿಕ ನಡುವೆ ನಡೆದ 2+2 ಸಭೆಯಲ್ಲಿ ಮಾತನಾಡಿದ ಅವರು, ನೀವು ತೈಲ ಖರೀದಿಯನ್ನು ಉಲ್ಲೇಖಿಸುವುದನ್ನು ನಾನು ಗಮನಿಸಿದ್ದೇನೆ. ರಷ್ಯಾದಿಂದ ಇಂಧನ ಖರೀದಿಗೆ ಸಂಬಂಧಿಸಿದಂತೆ ನಿಮ್ಮ ಗಮನವನ್ನು ಯುರೋಪ್ ಕಡೆಗೆ ಕೇಂದ್ರೀಕರಿಸಬೇಕೆಂದು ನಾನು ಸಲಹೆ ನೀಡುತ್ತೇನೆ. ಬಹುಶಃ ನಾವು ಅಗತ್ಯವಿರುವಷ್ಟನ್ನು ಮಾತ್ರ ಖರೀದಿಸುತ್ತೇವೆ. ಆದರೆ ಅಂಕಿಅಂಶಗಳನ್ನು ನೋಡುವಾಗ, ಬಹುಶಃ ತಿಂಗಳಿಗೆ ನಮ್ಮ ಒಟ್ಟು ಖರೀದಿಯು ಯುರೋಪ್‌ನ ಅರ್ಧ ದಿನಕ್ಕಿಂತಲೂ ಕಡಿಮೆಯಿರಬಹುದು. ಆದ್ದರಿಂದ ನೀವು ಅದರ ಬಗ್ಗೆ ಯೋಚಿಸಬೇಕಿದೆ ಎಂದು ತಿರುಗೇಟು ನೀಡಿದ್ದಾರೆ.

    ರಷ್ಯಾವನ್ನು ಭಾರತ ಯಾಕೆ ಖಂಡಿಸುವುದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, ನಾವು ಯುಎನ್‌ನಲ್ಲಿ, ನಮ್ಮ ಸಂಸತ್ತಿನಲ್ಲಿ ಮತ್ತು ಇತರ ವೇದಿಕೆಗಳಲ್ಲಿ ನಮ್ಮ ನಿಲುವನ್ನು ತಿಳಿಸಿದ್ದೇವೆ. ನಾವು ಸಂಘರ್ಷಕ್ಕೆ ವಿರುದ್ಧವಾಗಿದ್ದೇವೆ. ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಭಿನ್ನಾಭಿಪ್ರಾಯವನ್ನು (ರಷ್ಯಾ-ಉಕ್ರೇನ್) ಬಗೆಹರಿಸಿಕೊಳ್ಳಬೇಕು ಎಂದು ಈಗಾಗಲೇ ತಿಳಿಸಿದ್ದೇವೆ. ಆ ನಿಟ್ಟಿನಲ್ಲಿ ನಡೆಯುವುದಾದರೆ ಸೂಕ್ತ ಸಹಕಾರ ನೀಡಲು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ತಿರುಪತಿ ದೇಗುಲದಲ್ಲಿ ಕಾಲ್ತುಳಿತ – ವೆಂಕಟೇಶ್ವರನ ದರ್ಶನಕ್ಕೆ ಭಕ್ತಾದಿಗಳ ನೂಕುನುಗ್ಗಲು

    russia 1

    ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಜೆ ಬ್ಲಿಂಕೆನ್ ಮಾತನಾಡಿ, ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಮ್ ಖರೀದಿಸಲು ಕಾಟ್ಸಾ ಕಾನೂನಿನಡಿಯಲ್ಲಿ ಅಮೆರಿಕವು ತನ್ನ ಪ್ರಮುಖ ಪಾಲುದಾರರಲ್ಲಿ ಒಂದಾದ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಬೇಕೇ ಅಥವಾ ನಿರ್ಬಂಧವನ್ನು ಮನ್ನಾ ಮಾಡಬೇಕೇ ಎಂಬ ಬಗ್ಗೆ ಅಮೆರಿಕ ಯಾವುದೇ ನಿರ್ಣಯ ಮಾಡಿಲ್ಲ ಎಂದು ಹೇಳಿದ್ದಾರೆ.

    ಭಾರತದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಕುರಿತು ಬ್ಲಿಂಕೆನ್ ಮಾತನಾಡಿ, ಮಾನವ ಹಕ್ಕುಗಳನ್ನು ರಕ್ಷಿಸುವಂತಹ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಾವು ಬದ್ಧರಾಗಿದ್ದೇವೆ. ನಾವು ಈ ಮೌಲ್ಯಗಳೊಂದಿಗೆ ನಮ್ಮ ಪಾಲುದಾರ ಭಾರತದೊಂದಿಗೆ ನಿಯಮಿತವಾಗಿ ತೊಡಗಿಸಿಕೊಳ್ಳುತ್ತೇವೆ. ಸರ್ಕಾರ, ಪೋಲೀಸ್ ಮತ್ತು ಜೈಲು ಅಧಿಕಾರಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯ ಹೆಚ್ಚಳ ಸೇರಿದಂತೆ ಭಾರತದಲ್ಲಿನ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಡುಗಡೆಯಾದ ಕೈದಿಗಳ ಶಿಕ್ಷಣ ಖರ್ಚನ್ನು ಭರಿಸುತ್ತಿದೆ ಇಂದೋರ್ ಜೈಲು

  • ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    ಪ್ಯಾರಿಸ್: ಉಕ್ರೇನ್-ರಷ್ಯಾದ ಯುದ್ಧ ಪ್ರಾರಂಭವಾದ ಬಳಿಕ ಶುಕ್ರವಾರ ಸೈಬರ್ ಅಟ್ಯಾಕ್ ಆಗಿರುವ ಬಗ್ಗೆ ವದಂತಿಗಳು ಹಬ್ಬಿವೆ. ಈ ಕಾರಣದಿಂದ ಯೂರೋಪ್‌ನಾದ್ಯಂತ ಇಂಟರ್‌ನೆಟ್ ಅನ್ನು ಸ್ಥಗಿತಗೊಳಿಸಿದ್ದು, ಸಾವಿರಾರು ಬಳಕೆದಾರರು ಇಂಟರ್‌ನೆಟ್ ಇಲ್ಲದೇ ದಿನದೂಡುತ್ತಿದ್ದಾರೆ.

    ಫ್ರಾನ್ಸ್ ಅಂಗಸಂಸ್ಥೆ ನಾರ್ಡ್‌ನೆಟ್ ಒದಗಿಸುತ್ತಿದ್ದ ಉಪಗ್ರಹ ಇಂಟರ್‌ನೆಟ್ ಸೇವೆಯನ್ನು ಸುಮಾರು 9 ಸಾವಿರ ಚಂದಾದಾರರು ಬಳಸುತ್ತಿದ್ದು, ಈ ಸೇವೆಯನ್ನು ಫೆಬ್ರವರಿ 24ರಂದು ಸ್ಥಗಿತಗೊಳಿಸಲಾಗಿದೆ. ಇದೀಗ ಅಷ್ಟೂ ಜನರು ಇಂಟರ್‌ನೆಟ್ ಸೇವೆ ಇಲ್ಲದೇ ಇರಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಇತರ ಇಂಟರ್‌ನೆಟ್ ಮೂಲಗಳನ್ನು ಹುಡುಕಬೇಕಾದ ಸಂದಿಗ್ಧತೆ ಎದುರಾಗಿದೆ. ಇದನ್ನೂ ಓದಿ: ಉಕ್ರೇನ್‌ನ 2 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಯೂರೋಪ್, ಜರ್ಮನಿ, ಫ್ರಾನ್ಸ್, ಹಂಗೇರಿ, ಗ್ರೀಸ್, ಇಟಲಿ ಹಾಗೂ ಪೋಲೆಂಡ್‌ನಲ್ಲಿ ಬಿಗ್‌ಬ್ಲೂನ 40,000 ಚಂದಾದಾರರಿದ್ದಾರೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ಜನರಿಗೆ ಇಂಟರ್‌ನೆಟ್ ಸ್ಥಗಿತದ ಪರಿಣಾಮ ಬೀರಿದೆ. ಈ ಮಾಹಿತಿಯನ್ನು ಬಿಗ್‌ಬ್ಲೂ ಉಪಗ್ರಹ ಇಂಟರ್‌ನೆಟ್ ಸೇವೆಯ ಮೂಲ ಕಂಪನಿ ಯುಟೆಲ್‌ಸಾಟ್ ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ 28 ಮಕ್ಕಳು ಸಾವು, 840 ಮಕ್ಕಳಿಗೆ ಗಾಯ – ಉಕ್ರೇನ್ ಸರ್ಕಾರ

    ಉಕ್ರೇನ್ ರಷ್ಯಾದ ಯುದ್ಧದಿಂದಾಗಿ ಸೈಬರ್ ದಾಳಿ ನಡೆದಿದೆ. ಹೀಗಾಗಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಫ್ರಾನ್ಸ್‌ನ ಬಾಹ್ಯಾಕಾಶ ಕಮಾಂಡ್ ಮುಖ್ಯಸ್ಥ ಜನರಲ್ ಮೈಕೆಲ್ ಫ್ರೆಡ್ಲಿಂಗ್ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲಾಗಿಲ್ಲ. ಇದರ ಬಗ್ಗೆ ಪೊಲೀಸ್ ಹಾಗೂ ರಾಜ್ಯದ ಪಾಲುದಾರರಿಗೆ ಸೂಚನೆ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದಿದ್ದಾರೆ.

  • ರಷ್ಯಾ ಯುದ್ಧ ಇಡೀ ಯೂರೋಪ್‌ ಭದ್ರತೆಗೆ ಪೆಟ್ಟು ನೀಡಿದೆ: ಬ್ರಿಟಿಷ್‌ ಪ್ರಧಾನಿ ಕಳವಳ

    ರಷ್ಯಾ ಯುದ್ಧ ಇಡೀ ಯೂರೋಪ್‌ ಭದ್ರತೆಗೆ ಪೆಟ್ಟು ನೀಡಿದೆ: ಬ್ರಿಟಿಷ್‌ ಪ್ರಧಾನಿ ಕಳವಳ

    ಲಂಡನ್‌: ಉಕ್ರೇನ್‌ ವಿರುದ್ಧದ ರಷ್ಯಾ ಅಜಾಗರೂಕ ಕಾರ್ಯಾಚರಣೆಯು ಇಡೀ ಯೂರೋಪ್‌ ಭದ್ರತೆಗೆ ಕೊಟ್ಟ ಹೊಡೆತವಾಗಿದೆ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಕಳವಳ ವ್ಯಕ್ತಪಡಿಸಿದ್ದಾರೆ.

    ರಷ್ಯಾದ ಪಡೆಗಳು ಉಕ್ರೇನಿಯನ್ ಪರಮಾಣು ವಿದ್ಯುತ್ ಸ್ಥಾವರವನ್ನು ಆಕ್ರಮಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯುರೋಪಿನಾದ್ಯಂತ ಅಪಾಯವನ್ನುಂಟುಮಾಡುತ್ತಿದ್ದಾರೆ ಎಂದು ಬೋರಿಸ್ ಜಾನ್ಸನ್ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶ ರಾಕೆಟ್‌ನಿಂದ ಅಮೆರಿಕ, ಜಪಾನ್‌ ಧ್ವಜ ತೆಗೆದು ಭಾರತ ಧ್ವಜ ಉಳಿಸಿಕೊಂಡ ರಷ್ಯಾ- Video Viral

    ರಷ್ಯಾ ಅಧ್ಯಕ್ಷ ಪುಟಿನ್ ಅವರ ಅಜಾಗರೂಕ ಕ್ರಮಗಳು ಈಗ ನೇರವಾಗಿ ಯುರೋಪ್‌ನ ಸುರಕ್ಷತೆಗೆ ಬೆದರಿಕೆ ಹಾಕಬಹುದು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ಅಗತ್ಯವಿದೆ ಎಂದು ಜಾನ್ಸನ್‌ ಆಶಯ ವ್ಯಕ್ತಪಡಿಸಿದ್ದಾರೆ.

    ನ್ಯಾಟೋ ಒಕ್ಕೂಟಕ್ಕೆ ಸೇರುವ ಉಕ್ರೇನ್‌ ನಿರ್ಧಾರವನ್ನು ವಿರೋಧಿಸಿ ಉಕ್ರೇನ್‌ ಮೇಲೆ ರಷ್ಯಾ ಯುದ್ಧವನ್ನು ನಡೆಸುತ್ತಿದೆ. ಆದರೆ ಯೂರೋಪ್‌ ರಾಷ್ಟ್ರಗಳು ರಷ್ಯಾ ಕ್ರಮವನ್ನು ಖಂಡಿಸಿವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ, ಸಾಮಾನ್ಯ ಸಭೆಯಲ್ಲಿ ಬ್ರಿಟನ್‌ ಸೇರಿದಂತೆ 141 ರಾಷ್ಟ್ರಗಳು ರಷ್ಯಾ ವಿರುದ್ಧ ಮತ ಚಲಾಯಿಸಿವೆ. ಇದನ್ನೂ ಓದಿ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು

  • ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ: ಯೂರೋಪ್‌ ನಾಯಕರಿಗೆ ಉಕ್ರೇನ್‌ ಅಧ್ಯಕ್ಷ ಕರೆ

    ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ: ಯೂರೋಪ್‌ ನಾಯಕರಿಗೆ ಉಕ್ರೇನ್‌ ಅಧ್ಯಕ್ಷ ಕರೆ

    ಕೀವ್: ನೀವು ನಮ್ಮೊಂದಿಗಿದ್ದೇವೆ ಎಂಬುದನ್ನು ಸಾಬೀತುಪಡಿಸಿ, ಕತ್ತಲಿನ ವಿರುದ್ಧ ಬೆಳಕು ಜಯ ಸಾಧಿಸುತ್ತೆ ಎಂದು ಯೂರೋಪ್‌ ರಾಷ್ಟ್ರಗಳ ನಾಯಕರಿಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಭಾವಾವೇಷದಲ್ಲಿ ಕರೆ ನೀಡಿದ್ದಾರೆ.

    ಯೂರೋಪ್‌ ನಾಯಕರೊಂದಿಗೆ ವೀಡಿಯೋ ಕರೆಯಲ್ಲಿ ಮಾತನಾಡಿದ ಅವರು, ನಾವು ನಮ್ಮ ನೆಲಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ. ನಮ್ಮ ದೇಶದ ಎಲ್ಲಾ ದೊಡ್ಡ ನಗರಗಳನ್ನು ಈಗ ನಿರ್ಬಂಧಿಸಲಾಗಿದೆ. ನೀವು ನಮ್ಮೊಂದಿಗಿದ್ದೀರಿ ಎಂಬುದನ್ನು ಸಾಬೀತುಪಡಿಸಿ. ನಮ್ಮನ್ನು ಇಲ್ಲಿಂದ ಹೋಗಲು ಬಿಡುವುದಿಲ್ಲ ಎಂದು ನೀವು ಸಾಬೀತುಪಡಿಸಿ. ನೀವು ನಿಜವಾಗಿಯೂ ಯುರೋಪಿಯನ್ನರು ಎಂದು ತೋರಿಸಿ. ಜೀವನವು ಸಾವಿನ ವಿರುದ್ಧ ಹಾಗೂ ಬೆಳಕು ಕತ್ತಲೆಯ ವಿರುದ್ಧ ಗೆಲ್ಲುತ್ತದೆ ಎಂದು ಭಾವುಕವಾಗಿ ನುಡಿದಿದ್ದಾರೆ. ಇದನ್ನೂ ಓದಿ: ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್‌ ಕಾರ್ಡ್‌ ಬ್ಲಾಕ್‌ – ATMಗಳ ಮುಂದೆ ರಷ್ಯನ್ನರ ದಂಡು

    ಇಂದು ನಾವು ನಿಮ್ಮೆಲ್ಲರನ್ನೂ, ಯೂರೋಪಿಯನ್‌ ಒಕ್ಕೂಟದ ದೇಶಗಳನ್ನು ಒಗ್ಗೂಡಿಸಿದ್ದೇವೆ. ಇದು ನನಗೆ ಖುಷಿಯ ವಿಚಾರ. ಆದರೆ ಇದಕ್ಕಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಲೆ ತೆರಬೇಕು ಎಂದು ನನಗೆ ತಿಳಿದಿರಲಿಲ್ಲ. ರಷ್ಯಾ ಆಕ್ರಮಣ ನನಗೆ, ಪ್ರತಿಯೊಬ್ಬ ಉಕ್ರೇನಿಯನ್ನರಿಗೆ ಮತ್ತು ದೇಶಕ್ಕೆ ದೊಡ್ಡ ದುರಂತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇಂದು ನಾವು ಮೌಲ್ಯಗಳಿಗಾಗಿ, ಹಕ್ಕುಗಳಿಗಾಗಿ, ಸ್ವಾತಂತ್ರ್ಯಕ್ಕಾಗಿ, ಸಮಾನವಾಗಿರಬೇಕೆಂಬ ಬಯಕೆಗಾಗಿ ಹೋರಾಡುತ್ತಿದ್ದೇವೆ. ರಷ್ಯಾ ಭಯೋತ್ಪಾದಕ ರಾಷ್ಟ್ರವಾಗಿದೆ. ಇದನ್ನು ಯಾರೂ ಕ್ಷಮಿಸುವುದಿಲ್ಲ, ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?

    ಉಕ್ರೇನ್‌ ಮೇಲೆ ಕಳೆದ ವಾರ ರಷ್ಯಾ ಯುದ್ಧವನ್ನು ಘೋಷಿಸಿತು. ರಷ್ಯಾ ಸೇನಾ ಪಡೆ ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದ್ದು, ಹಂತಹಂತವಾಗಿ ಉಕ್ರೇನ್‌ ಅನ್ನು ಅತಿಕ್ರಮಿಸುತ್ತಿದೆ. ಇದರಿಂದ ನೂರಾರು ಸಂಖ್ಯೆಯಲ್ಲಿ ಜನರು, ಸೈನಿಕರು ಸಾಯುತ್ತಿದ್ದಾರೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

  • ಕೊರೊನಾ ಎಫೆಕ್ಟ್- ಪತ್ನಿಯನ್ನ ಬಾತ್‍ರೂಮಿನಲ್ಲಿ ಲಾಕ್ ಮಾಡಿದ ಪತಿ

    ಕೊರೊನಾ ಎಫೆಕ್ಟ್- ಪತ್ನಿಯನ್ನ ಬಾತ್‍ರೂಮಿನಲ್ಲಿ ಲಾಕ್ ಮಾಡಿದ ಪತಿ

    – ಪೊಲೀಸರಿಗೆ ಫೋನ್ ಮಾಡಿದ ಹೆಂಡ್ತಿ

    ವಿಲ್ನಿಯಸ್: ದೇಶಾದ್ಯಂತ ಕೊರೊನಾ ವೈರಸ್ ಭೀತಿ ಶುರುವಾಗಿದ್ದು, ಇದೇ ಭಯದಿಂದ ಪತಿಯೊಬ್ಬ ತನ್ನ ಪತ್ನಿಗೆ ಕೊರೊನಾ ವೈರಸ್ ಬಂದಿರಬಹುದು ಎಂಬ ಅನುಮಾನದಿಂದ ಬಾತ್‍ರೂಮಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದ ಘಟನೆ ಯೂರೋಪ್‍ನ ಲಿಥುವೇನಿಯದಲ್ಲಿ ನಡೆದಿದೆ.

    ಪತ್ನಿ ಚೀನಾದ ಮಹಿಳೆಯೊಬ್ಬರನ್ನು ಭೇಟಿಯಾಗಿ ಇಟಲಿಯಿಂದ ಆಗಮಿಸಿದ್ದಳು. ಹೀಗಾಗಿ ಪತ್ನಿಗೆ ಕೊರೊನಾ ವೈರಸ್ ಬಂದಿರಬಹುದು ಎಂದು ಆಕೆಯನ್ನು ಬಾತ್‍ರೂಮಿನಲ್ಲಿ ಕೂಡಿ ಹಾಕಿದ್ದನು. ಇತ್ತ ಪತ್ನಿ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾಳೆ. ಮಾಹಿತಿ ತಿಳಿದು ಪೊಲೀಸರು ಅವರಿದ್ದ ಅಪಾರ್ಟ್ ಮೆಂಟ್‍ಗೆ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ.

    ಕೊರೊನಾ ವೈರಸ್ ಸೋಂಕನ್ನು ಹೇಗೆ ತಪ್ಪಿಸಬೇಕು ಎಂಬ ಬಗ್ಗೆ ವೈದ್ಯರೊಂದಿಗೆ ಫೋನ್‍ನಲ್ಲಿ ಮಾತನಾಡಿದ ನಂತರ ಪತ್ನಿಯನ್ನು ಬಾತ್‍ರೂಮಿನಲ್ಲಿ ಕೂಡಿಹಾಕಿದ್ದಾನೆ. ಬಾತ್‍ರೂಮಿನಲ್ಲಿ ಕೂಡಿ ಹಾಕಿದ್ದರೂ ಪತ್ನಿ ದೂರು ನೀಡಲಿಲ್ಲ. ಹೀಗಾಗಿ ಆತನನ್ನು ಬಂಧಿಸಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯಲ್ಲಿ ಕೊರೊನಾ ವೈರಸ್ ಇಲ್ಲ ಎಂಬುದು ತಿಳಿದುಬಂದಿದೆ. ಚೀನಾದ ನಗರವಾದ ವುಹಾನ್‍ನಲ್ಲಿ ಜನವರಿಯಲ್ಲಿ ಈ ವೈರಸ್ ಪತ್ತೆಯಾಗಿತ್ತು. ಇದರಿಂದ ಚೀನಾದಲ್ಲಿ ಸಾವಿರಾರು ಬಂದಿ ಮೃತಪಟ್ಟಿದ್ದಾರೆ. ನಂತರ ಚೀನಾದಿಂದ ಬೇರೆ ಬೇರೆ ದೇಶಗಳಿಗೂ ಕೊರೊನಾ ವೈರಸ್ ಹಬ್ಬಿದೆ. ಈ ಭಯಂಕರ ವೈರಸ್ ನಿಂದ ದೇಶಾದ್ಯಂತ ಜನರು ಭಯಭೀತರಾಗಿದ್ದಾರೆ.

  • ಚಿತ್ರ ತಂಡದ ಪ್ರಕಾರ ಮಯೂರಿ ಯುರೋಪಿನಲ್ಲಿದ್ದಾಳೆ!

    ಚಿತ್ರ ತಂಡದ ಪ್ರಕಾರ ಮಯೂರಿ ಯುರೋಪಿನಲ್ಲಿದ್ದಾಳೆ!

    ಬೆಂಗಳೂರು: ಜೆಕೆಗೆ ಜೋಡಿಯಾಗಿ ಧಾರಾವಾಹಿ ಮೂಲಕ ಎಂಟ್ರಿ ಕೊಟ್ಟಿದ್ದ ಮಯೂರಿ ವ್ಯಾಪಕವಾಗಿ ಮೆಚ್ಚುಗೆ ಗಳಿಸಿಕೊಂಡಿದ್ದು, ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದು ಅದರಿಂದಲೇ. ಆ ನಂತರ ಚಿತ್ರರಂಗಕ್ಕೂ ಅಡಿಯಿರಿಸಿದ್ದ ಮಯೂರಿ ಇದೀಗ ‘ನನ್ನ ಪ್ರಕಾರ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

    ಟೈಟಲ್ ನಲ್ಲಿಯೇ ಏನೋ ವೈಶಿಷ್ಟ್ಯದ ಮುನ್ಸೂಚನೆ ಕೊಡುತ್ತಿರೋ ನನ್ನ ಪ್ರಕಾರ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದು ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಇದೇ ಹಂತದಲ್ಲಿ ಮಯೂರಿ ತನ್ನ ಪಾತ್ರಕ್ಕೆ ಒಂದೇ ಗುಕ್ಕಿನಲ್ಲಿ ಡಬ್ಬಿಂಗ್ ಮಾಡಿ ಮುಗಿಸಿದ್ದಾರಂತೆ.

    ಬಿಡುವಿರದಂತೆ ತಿಂಗಳುಗಳ ಕಾಲ ನಿರಂತರವಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಮಯೂರಿ ಕೊಂಚವೂ ಗ್ಯಾಪು ತೆಗೆದುಕೊಳ್ಳದೆ ಡಬ್ಬಿಂಗ್ ಮಾಡಿ ಮುಗಿಸಿದ್ದಳು. ಇದೀಗ ಈ ಆಯಾಸ ನೀಗಿಕೊಳ್ಳುವ ಸಲುವಾಗಿ ಯೂರೋಪ್ ಗೆ ಹಾರಿದ್ದಾಳೆ. ಅಲ್ಲಿ ಹಾಯಾಗಿ ಒಂದಷ್ಟು ಕಾಲ ಸುತ್ತಾಡಿ ರಿಲೀಫ್ ಮೂಡಿಗೆ ಜಾರಿ ಹೊಸ ಉತ್ಸಾಹ ತುಂಬಿಕೊಂಡು ಮತ್ತೆ ಬರಲಿದ್ದಾರಂತೆ.

    ಹಾಗೆ ವಿದೇಶದಿಂದ ಬಂದ ಕೂಡಲೇ ಮಯೂರಿ ನನ್ನ ಪ್ರಕಾರ ಚಿತ್ರದ ಪ್ರಮೋಷನ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಚಿತ್ರ ತನಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ಕೊಡಲಿದೆ ಎಂಬ ನಂಬಿಕೆಯಲ್ಲಿರುವ ಮಯೂರಿ ಬೇಗನೆ ವಿದೇಶದಿಂದ ವಾಪಾಸಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಉತ್ಸುಕಳಾಗಿದ್ದಾಳೆ.