Tag: ಯೂರಿಯಾ

  • ಕರ್ನಾಟಕದಲ್ಲಿ ರಸಗೊಬ್ಬರದ ಅಭಾವವಿಲ್ಲ: ಪ್ರಹ್ಲಾದ್‌ ಜೋಶಿ

    ಕರ್ನಾಟಕದಲ್ಲಿ ರಸಗೊಬ್ಬರದ ಅಭಾವವಿಲ್ಲ: ಪ್ರಹ್ಲಾದ್‌ ಜೋಶಿ

    ನವದೆಹಲಿ: ಕೇಂದ್ರ ಸರ್ಕಾರ ರಸಗೊಬ್ಬರ ಕಳುಹಿಸಿಲ್ಲ ಎಂಬ ರಾಜ್ಯ ಸರ್ಕಾರದ ಟೀಕೆಯ ಬೆನ್ನಲ್ಲೇ ಕರ್ನಾಟಕದಲ್ಲಿ (Karnataka) ರಸಗೊಬ್ಬರದ ಅಭಾವವಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಖಾತೆಯ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದ್ದಾರೆ.

    ಕೇಂದ್ರ ಸರ್ಕಾರದಿಂದ ಸರಬರಾಜು ಆಗಿರುವ ರಸಗೊಬ್ಬರಗಳಲ್ಲಿ 1.65 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಸಂಗ್ರಹಣೆ ಮಾಡಲಾಗಿದೆ. ರೈತರಿಗೆ (Farmers) ಬೇಕಾದ ರಸಗೊಬ್ಬರಗಳನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ನೀಡಲಾಗಿದ್ದು, ಸರಿಯಾದ ಕ್ರಮದಲ್ಲಿ ಬಳಸಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ಧಮ್ಮು-ತಾಕತಿದ್ರೆ ಕೇಂದ್ರದಿಂದ ಯೂರಿಯಾ ಕೊಡಿಸಲಿ – ಚಲುವರಾಯಸ್ವಾಮಿ

    ರಸಗೊಬ್ಬರದ ಬೇಡಿಕೆ ಹೆಚ್ಚಿದ್ದು, ಅಗತ್ಯ ರಸಗೊಬ್ಬರಗಳನ್ನು ಕರ್ನಾಟಕಕ್ಕೆ ಸರಬರಾಜು ಮಾಡುವಂತೆ ಕೋರಿ ಇಂದು ರಾಜ್ಯದ ಎಲ್ಲಾ ಬಿಜೆಪಿ ಸಂಸದರು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವರಾದ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.  ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ನಾಲ್ವರು ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶ ರದ್ದು

    ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ರೈತರ ಬೆನ್ನೆಲುಬಾಗಿ ನಿಂತಿದ್ದು, ಎಂತಹದ್ದೇ ಸಮಯದಲ್ಲೂ ರೈತರ ಹಿತ ಕಾಪಾಡುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವರಾದ ಜೆಪಿ ನಡ್ಡಾ ಅವರಿಗೆ ಅನಂತ ಧನ್ಯವಾದಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಜೋಶಿ ಬರೆದಿದ್ದಾರೆ.

  • ಕೇಂದ್ರದಿಂದ 1.50 ಲಕ್ಷ ಟನ್‌ ರಸಗೊಬ್ಬರ ಕೊರತೆಯಾಗಿದೆ – ಸಚಿವ ಚಲುವರಾಯಸ್ವಾಮಿ

    ಕೇಂದ್ರದಿಂದ 1.50 ಲಕ್ಷ ಟನ್‌ ರಸಗೊಬ್ಬರ ಕೊರತೆಯಾಗಿದೆ – ಸಚಿವ ಚಲುವರಾಯಸ್ವಾಮಿ

    ಬೆಂಗಳೂರು: ನಮಗೆ ಒಟ್ಟು 6 ಲಕ್ಷದ 88 ಸಾವಿರ ಟನ್ ರಸಗೊಬ್ಬರ (Fertiliser) ಸಪ್ಲೈ ಆಗಬೇಕಿತ್ತು. ಅದರಲ್ಲಿ 5 ಪಕ್ಷದ 27 ಸಾವಿರ ಟನ್ ಸಪ್ಲೈ ಆಗಿದೆ. ಉಳಿದ 1 ಲಕ್ಷದ 50 ಸಾವಿರ ಟನ್ ಬರಬೇಕಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ (Chaluvaraya Swamy) ಹೇಳಿದರು.

    ಕಳೆದ ಒಂದೂವರೆ ತಿಂಗಳಿಂದ ಮಳೆ ಚೆನ್ನಾಗಿ ಆಗ್ತಿದೆ ಮುಂಗಾರು ಬೇಗ ಆರಂಭವಾಗಿದೆ ಡ್ಯಾಮ್‌ಗಳು ಬೇಗ ತುಂಬಿದ್ದರಿಂದ ಸ್ವಲ್ಪ ಸಮಸ್ಯೆ ಆಗಿದೆ. ಜೊತೆಗೆ 2 ಲಕ್ಷ ಹೆಕ್ಟೇರ್ ಜಾಸ್ತಿ ಬೇಸಾಯದ ಏರಿಯಾ ಜಾಸ್ತಿ ಆಗಿದೆ. ಈ ಕಾರಣಗಳಿಂದ ರಸಗೊಬ್ಬರಕ್ಕೆ (Fertiliser) ಬೇಡಿಕೆ ಹೆಚ್ಚಾಗಿದೆ. ಟೀಕೆ ಟಿಪ್ಪಣಿಗಿಂತ ಹೆಚ್ಚಾಗಿ ರೈತರ ಸಮಸ್ಯೆ ಬಗೆಹರಿಸಬೇಕು ಅಂತ ಮುಖ್ಯಮಂತ್ರಿಗಳಿಗೆ ನಾನೇ ಮನವಿ ಮಾಡಿದೆ ಪತ್ರ ಬರೆಯಿರಿ ಅಂತ ಹೇಳಿದೆ. ಆದರೆ ಈ ಸಂದರ್ಭವನ್ನು ಉಪಯೋಗಿಸಿಕೊಂಡು ಜೋಶಿಯವರು ಮಾತನಾಡುತ್ತಿದ್ದಾರೆ ಅಂತ ಅಸಮಾಧಾನ ಹೊರಹಾಕಿದ್ರು.

    ಇರಾನ್‌ನ ಯುದ್ಧದ ಕಾರಣಕ್ಕೆ ಯೂರಿಯಾ ಸಪ್ಲೈ ಬರ್ತಿಲ್ಲ
    ನಾನೇ ಜೋಶಿಯವರಿಗೆ (Pralhad Joshi) ಪತ್ರ ಬರೆದಿದ್ದೇನೆ. ರಾಜ್ಯದ ಎಲ್ಲಾ ಸಂಸದರಿಗೂ ಹಾಗೂ ರಾಜ್ಯ ಪ್ರತಿನಿಧಿಸುವ ಸಚಿವರಿಗೆ ಪತ್ರ ಬರೆದಿದ್ದೇನೆ. ಆದ್ರೆ ಅದರ ಕಡೆ ಗಮನ ಹರಿಸದೇ ಸಿದ್ದರಾಮಯ್ಯರ ಬಗ್ಗೆ ಟೀಕೆ ಮಾಡಿದ್ದಾರೆ. ಜೋಶಿಯವರು ಕೃಷಿ ವಿಚಾರದಲ್ಲಿ ಹೀಗೆಲ್ಲಾ ರಾಜಕಾರಣ ಮಾಡ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ. ರಸಗೊಬ್ಬರವನ್ನ ಟೈಮ್ ಟು ಟೈಮ್ ಕೊಡ್ತಾರೆ. ನಾವು ಕಳೆದ ಬಾರಿ ಹೆಚ್ಚು ದಾಸ್ತಾನು ಮಡಿಕೊಳ್ಳುತ್ತಿದ್ದೆವು. ಆದರೆ ಕೇಂದ್ರ ಸರ್ಕಾರದಲ್ಲಿ 2-3 ಪ್ರಾಬ್ಲಂ ಇದೆ. ಇರಾನ್‌ನ ಯುದ್ಧದ ಕಾರಣಕ್ಕೆ ಯೂರಿಯಾ ಸಪ್ಲೈ ಬರ್ತಿಲ್ಲ, ಚೀನಾದಿಂದ ಸಂಪೂರ್ಣ ಸ್ಥಗಿತವಾಗಿದೆ. ರಾಷ್ಟ ಮಟ್ಟದಲ್ಲಿ ಉತ್ಪಾದನೆ ಕಡಿಮೆ ಆಗಿದೆ. ಇದೆಲ್ಲ ಕೇಂದ್ರ ಸರ್ಕಾರದವರೆ ಕೊಡಬೇಕು ಅಂತ ಹೇಳಿದರು. ಇದನ್ನೂ ಓದಿ: ಬೆಂಗಳೂರಿನ ಧನುಷ್ ಬಾಬುಗೆ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ

    ನಾವು ಟೀಕೆ ಟಿಪ್ಪಣಿಗೆ ಹೋಗಲಿಲ್ಲ. ಹಳೇ ಬ್ಯಾಲೆನ್ಸ್ ಸೇರಿ ತಗೆದುಕೊಂಡು ರೈತರಿಗೆ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ರೈತರಿಗೆ ನ್ಯಾನೋ ಯೂರಿಯಾ ಬಳಸಲು ಸಹಾ ಹೇಳಿದ್ದೇವೆ. ಅವರು ಸಹ ಹೋಗಿ ನಡ್ಡಾ ಅವರ ಜೊತೆ ಕುಳಿತು ಎಷ್ಟು ಸಾಧ್ಯವೋ ಅಷ್ಟು ಬೇಗ ಸಪ್ಲೈ ಕೊಡಿ ಅಂತ ಹೇಳೋದು ಬಿಟ್ಟು ಟೀಕೆ ಟಿಪ್ಪಣಿ ಮಾಡಿದರೆ ಹೇಗೆ? ಅಂತ ಪ್ರಶ್ನಿಸಿದರು. ಇದನ್ನೂ ಓದಿ: ಶಿವಲಿಂಗೇಗೌಡ್ರು ನಮ್ಮನೆಗೆ, ಸಿಎಂ ಮನೆಗೆ ತಿರುಗಿ 4 ಜೊತೆ ಚಪ್ಪಲಿ ಸವೆಸಿದ್ದಾರೆ: ಡಿ.ಕೆ ಶಿವಕುಮಾರ್

    ನನಗೂ ರಾಜಕೀಯವಾಗಿ 35 ವರ್ಷ ಆಗಿದೆ. ನಾನು ಟೀಕೆ ಮಾಡಬಹುದು, ಆದ್ರೆ ನನ್ನದು ರೈತರ ಇಲಾಖೆ ಟೀಕೆ ಮುಖ್ಯ ಅಲ್ಲ ರೈತರ ಸಮಸ್ಯೆ ಬಗೆಹರಿಸಬೇಕು. ರೈತರು ಆತಂಕ ಪಡಬೇಕಿಲ್ಲ. ಯಾವ್ಯಾವಾಗ ಏನು ಬೇಕೋ ಅದನ್ನ ತಲುಪಿಸುತ್ತೇವೆ. ಎಲ್ಲರೂ ಸಮಾಧಾನದಿಂದ ಇರಿ, 2 ದಿನ ಬರುವುದು ತಡವಾದ್ರೆ 3ನೇ ದಿನ 4ನೇ ದಿನ ತರಿಸಿಕೊಡ್ತೇವೆ. ಜೊತೆಗೆ ನ್ಯಾನೋ ಯೂರಿಯಾ ಸಹ ಇಳುವರಿಗೆ ಒಳ್ಳೆಯದು ರೈತರು ಯಾವುದೆ ಘರ್ಷಣೆ ಮಾಡಿಕೊಳ್ಳುವುದು ಬೇಡ ಅಂತ ಸಲಹೆ ನೀಡಿದರು. ಇದನ್ನೂ ಓದಿ: ನಾವು ಬಿಜೆಪಿಯವರಿಗಿಂತ ಜಾಸ್ತಿ ಕೆಲಸ ಮಾಡಿದ್ದೇವೆ – ಪುತ್ರನ ಹೇಳಿಕೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ

  • ರಾಜ್ಯಕ್ಕೆ ಕೊಡಬೇಕಾದ ಯೂರಿಯಾ ಕೂಡಲೇ ಬಿಡುಗಡೆ ಮಾಡಿ – ಕೇಂದ್ರ ಸಚಿವರಿಗೆ ಸಿಎಂ ಪತ್ರ

    ರಾಜ್ಯಕ್ಕೆ ಕೊಡಬೇಕಾದ ಯೂರಿಯಾ ಕೂಡಲೇ ಬಿಡುಗಡೆ ಮಾಡಿ – ಕೇಂದ್ರ ಸಚಿವರಿಗೆ ಸಿಎಂ ಪತ್ರ

    ಬೆಂಗಳೂರು: ರಾಜ್ಯದಲ್ಲಿ ಉಂಟಾಗುತ್ತಿರುವ ಯೂರಿಯಾ (Urea) ಕೊರತೆ ಹಿನ್ನಲೆಯಲ್ಲಿ ರಾಜ್ಯಕ್ಕೆ ಕೊಡಬೇಕಾದ ಯೂರಿಯಾವನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಕೇಂದ್ರ ಸಚಿವ ಜೆ.ಪಿ.ನಡ್ಡಾ (JP Nadda) ಅವರಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ರದ ಮೂಲಕ ಆಗ್ರಹಿಸಿದ್ದಾರೆ.ಇದನ್ನೂ ಓದಿ: Ullu, ALTT ಬಾಲಾಜಿ ಸೇರಿದಂತೆ 25 OTT ಪ್ಲಾಟ್‌ಫಾರಂಗಳು ಬ್ಯಾನ್‌

    ಪತ್ರದಲ್ಲಿ, ರಾಜ್ಯಕ್ಕೆ ಒಟ್ಟು 11.17 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಕೊಡಬೇಕಿತ್ತು. ಇಲ್ಲಿಯವರೆಗೆ 5.16 ಲಕ್ಷ ಮೆಟ್ರಿಕ್ ಟನ್ ಮಾತ್ರ ಕೊಡಲಾಗಿದೆ. ರಾಜ್ಯಕ್ಕೆ ಇನ್ನೂ 6.80 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬರಬೇಕಿದೆ. ಆದರೆ ಕೆಲ ಫರ್ಟಿಲೈಸರ್ ಕಂಪನಿಗಳು ಕೊರತೆಯ ಕಾರಣ ಹೇಳಿ ಯೂರಿಯಾ ಒದಗಿಸುತ್ತಿಲ್ಲ. ಹೀಗಾಗಿ ಕೂಡಲೇ ಯೂರಿಯಾ ಕೊಡುವಂತೆ ಒತ್ತಾಯಿಸಿದ್ದಾರೆ.

    ಕಳೆದ ವರ್ಷಕ್ಕಿಂತ ಈ ಬಾರಿ ಮುಂಗಾರು ಮಳೆ ಹೆಚ್ಚಾಗಿದೆ. ಕಾವೇರಿ, ತುಂಗಭದ್ರಾ, ಕೃಷ್ಣಾದಿಂದ ನೀರು ಬಿಡುಗಡೆಯಾಗಿದೆ. ಇದರಿಂದ ರೈತರು ಕೃಷಿ ಚಟುವಟಿಕೆಗಳನ್ನ ಪ್ರಾರಂಭ ಮಾಡಿದ್ದಾರೆ. ಕಳೆದ ವರ್ಷಕ್ಕಿಂತ ಎರಡು ಲಕ್ಷ ಹೆಕ್ಟೇರ್‌ಗಳಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿದೆ. ಹೀಗಾಗಿ ಕೂಡಲೇ ಯೂರಿಯಾ ಒದಗಿಸುವಂತೆ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಟಿ.ನರಸೀಪುರ ಪುರಸಭೆಯಲ್ಲಿ 40 ಕೋಟಿ ತೆರಿಗೆ ವಂಚನೆ ಆರೋಪ – ಆಡಿಯೋ ಸ್ಫೋಟ

  • ವಿದೇಶದಿಂದ 3,500 ರೂ.ಗೆ ಯೂರಿಯಾ ಖರೀದಿಸಿ ರೈತರಿಗೆ 350 ರೂ.ಗೆ ವಿತರಣೆ : ಮೋದಿ

    ವಿದೇಶದಿಂದ 3,500 ರೂ.ಗೆ ಯೂರಿಯಾ ಖರೀದಿಸಿ ರೈತರಿಗೆ 350 ರೂ.ಗೆ ವಿತರಣೆ : ಮೋದಿ

    ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಜರಾತ್‌ನ ಕಲೋಲ್‌ನಲ್ಲಿ ಇಫ್ಕೋ ನಿರ್ಮಿಸಿದ ವಿಶ್ವದ ಮೊದಲ ನ್ಯಾನೋ ಯೂರಿಯಾ ದ್ರವ ರಸಗೊಬ್ಬರ ಘಟಕವನ್ನು ಉದ್ಘಾಟಿಸಿದ್ದಾರೆ.

    ಗಾಂಧಿನಗರದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಅಲ್ಟ್ರಾಮೋಡರ್ನ್ ನ್ಯಾನೋ ಯೂರಿಯಾ ದ್ರವ ರಸಗೊಬ್ಬರ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಗ್ರಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ವಿದೇಶದಿಂದ 50 ಕೆಜಿ ಯೂರಿಯಾ ಚೀಲವನ್ನು 3,500 ರೂ.ಗೆ ಆಮದು ಮಾಡಿ ಅದೇ ಚೀಲವನ್ನು ರೈತರಿಗೆ 300 ರೂ.ಗೆ ವಿತರಿಸುತ್ತಿದ್ದೇವೆ. ನಮಗೆ ಇದರಿಂದ ಕಷ್ಟವಾದರೂ ನಾವು ರೈತರಿಗೆ ತೊಂದರೆ ನೀಡಲು ಬಯಸುವುದಿಲ್ಲ ಎಂದು ಹೇಳಿದರು.

    ಇಂದು ಭಾರತವು ವಿಶ್ವದಲ್ಲೇ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದ್ದು, ಇದರಲ್ಲಿ ಗುಜರಾತ್ ಪ್ರಮುಖ ಪಾಲನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಡೈರಿ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ ಮತ್ತು ಗ್ರಾಮೀಣ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಡೈರಿ ಕ್ಷೇತ್ರದ ಸಹಕಾರಿ ಮಾದರಿಯ ಉದಾಹರಣೆ ನಮ್ಮ ಮುಂದಿದೆ ಎಂದರು.

    ಇಫ್ಕೋ ನ್ಯಾನೋ ರಸಗೊಬ್ಬರಗಳ ಉತ್ಪಾದನೆಗೆ ಹೆಚ್ಚುವರಿ ಉತ್ಪಾದನಾ ಘಟಕಗಳನ್ನು  ಅಯೋನ್ಲಾ, ಫುಲ್ಪುರ್, ಬೆಂಗಳೂರು ಮತ್ತು ಪರದೀಪ್, ಕಾಂಡ್ಲಾ, ದಿಯೋಘರ್ ಮತ್ತು ಗುವಾಹಟಿಯಲ್ಲಿ ಸ್ಥಾಪಿಸಿದೆ. ಈ ಎಲ್ಲಾ ಘಟಕಗಳು ದಿನಕ್ಕೆ 2 ಲಕ್ಷ ಬಾಟಲಿಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು ಒಟ್ಟು 3,000 ಕೋಟಿ ರೂ.ಗಳ ಹೂಡಿಕೆಯ ಪೈಕಿ 720 ಕೋಟಿ ರೂ.ಗಳನ್ನು ಈಗಾಗಲೇ ಹೂಡಿಕೆ ಮಾಡಲಾಗಿದ್ದು ಸಾವಿರಾರು ಜನರಿಗೆ ಉದ್ಯೋಗವನ್ನು ಸೃಷ್ಟಿಸಲಾಗಿದೆ .

  • ಯೂರಿಯಾ ಮಿಶ್ರಿತ ಹಾಲು ಕುಡಿದ ವಿದ್ಯಾರ್ಥಿಗಳು ಅಸ್ವಸ್ಥ!

    ಯೂರಿಯಾ ಮಿಶ್ರಿತ ಹಾಲು ಕುಡಿದ ವಿದ್ಯಾರ್ಥಿಗಳು ಅಸ್ವಸ್ಥ!

    ಚಿಕ್ಕಮಗಳೂರು: ಸರ್ಕಾರಿ ಶಾಲೆಯಲ್ಲಿ ಅಡುಗೆಯವರ ಎಡವಟ್ಟಿನಿಂದಾಗಿ ಯೂರಿಯಾ ಹಾಲು ಕುಡಿದ 19 ಮಕ್ಕಳು ಅಸ್ವಸ್ಥಗೊಂಡ ಘಟನೆ ಕೊಪ್ಪ ತಾಲೂಕು ಹರಹರಿಪುರ ಸಮೀಪದ ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಮಕ್ಕಳು ಸದ್ಯ ಹರಿಹರಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಕೆಗೊಂಡ ಬಳಿಕ ಸಂಜೆ ಮನೆಗೆ ತೆರಳಿದ್ದಾರೆ. ಕೊಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ನಿಲುವಾಗಿಲು ಮುಖ್ಯಶಿಕ್ಷಕ ಅಶೋಕ, ಹಿರಿಯ ಅಡುಗೆಯವರಾದ ಯಶೋದಮ್ಮ, ಅಡುಗೆ ಸಹಾಯಕರಾದ ಶಾರದಾ ಹಾಗೂ ಗುಲಾಬಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ನಡೆದದ್ದು ಏನು?
    ನಿಲುವಾಗಿಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ಶನಿವಾರ ವಿದ್ಯಾರ್ಥಿಗಳಿಗೆ ಹಾಲು ವಿತರಣೆ ಮಾಡಲಾಗಿದೆ. ಹಾಲು ಕುಡಿಯುತ್ತಿದ್ದಂತೆ ಮಕ್ಕಳು ಹಾಲು ಕಹಿಯಾಗಿದೆ ಎಂದು ಶಿಕ್ಷಕರಿಗೆ ತಿಳಿಸಿದ್ದಾರೆ. ತಕ್ಷಣವೇ ಜಾಗೃತಗೊಂಡ ದೈಹಿಕ ಶಿಕ್ಷಣ ಶಿಕ್ಷಕರು ತಾವು ಸ್ಪಲ್ಪ ಹಾಲು ಕುಡಿದಿದ್ದಾರೆ. ಹಾಲು ವಿಷವಾಗಿದೆ ಅಂತ ಗೊತ್ತಾಗುತ್ತಿದ್ದಂತೆ ಮಕ್ಕಳಿಗೆ ಹಾಲು ಕುಡಿಯದಂತೆ ಸೂಚಿಸಿ, ಮುಖ್ಯಶಿಕ್ಷಕರಿಗೆ ಆ ವೇಳೆಗಾಗಲೇ ಮುಖ್ಯೋಪಾಧ್ಯಾಯರ ಗಮನಕ್ಕೆ ತಂದಿದ್ದಾರೆ. ಅದರೆ ಅಷ್ಟೊತ್ತಿಗಾಗಲೇ ಶಾಲೆಯ 19 ಮಕ್ಕಳು ಹಾಲನ್ನು ಸೇವಿಸಿಯಾಗಿತ್ತು.

    ಹಾಲು ಕುಡಿದ 19 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ವೇಳೆ ಹಾಲಿನಲ್ಲಿ ವಿಷಕಾರಿ ಯೂರಿಯಾ ಸೇರಿರುವುದು ಪತ್ತೆಯಾಗಿದೆ. ಹಾಲಿನಲ್ಲಿ ಯಾರು ಯೂರಿಯಾ ಬೆರೆಸಿದ್ದು ಹಾಗೂ ಶಾಲೆಗೆ ಅದು ಹೇಗೆ ಬಂತು ಎನ್ನವುದು ಅನುಮಾನ ವ್ಯಕ್ತವಾಗಿದೆ.

    ಯಶೋಧಮ್ಮ ಅವರು ಇಂದು ರಜೆ ಇದ್ದರು. ಹೀಗಾಗಿ ಶುಕ್ರವಾರವೇ ಹಾಲಿಗೆ ಬೇಕಾಗಿದ್ದ ಸಕ್ಕರೆ ಪ್ಯಾಕೇಟ್ ನೀಡಿ ಹೋಗಿದ್ದರು. ಅದನ್ನು ಪರಿಶೀಲನೆ ಮಾಡದೇ ಹಾಲಿಗೆ ಹಾಕಿದ್ದೇವೆ ಎಂದು ಸಹಾಯಕಿಯರಾದ ಗುಲಾಬಿ ಹಾಗೂ ಶಾರದಾ ತಿಳಿಸಿದ್ದಾರೆ.

    ಕಳೆದ ಕೆಲವು ದಿನಗಳಿಂದ ಯಶೋಧಮ್ಮ ಹಾಗೂ ಅಡುಗೆ ಸಹಾಯಕರ ನಡುವೆ ಜಗಳವಾಗಿತ್ತು. ಒಬ್ಬರ ಮೇಲೆ ಮತ್ತೊಬ್ಬರು ಗೂಬೆ ಕೂರಿಸಲು ಮಕ್ಕಳ ಜೀವನದ ಜೊತೆಗೆ ಆಟವಾಡಿದ್ದಾರೆ. ಇನ್ನು ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.

    ಅಶೋಕ ಅವರು ನಿಲುವಾಗಿಲು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕರಾಗಿ ಬಂದ ಮೇಲೆ ಅನೇಕ ಬದಲಾವಣೆ ತಂದಿದ್ದರು. ಖಾಸಗಿ ಶಾಲೆಯಂತೆ ನರ್ಸರಿ ತರಗತಿಗಳನ್ನು ಪ್ರಾರಂಭಿಸಿದ್ದರು. ಇದರಿಂದಾಗಿ ಅನೇಕ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೀಟರ್ ಮೂತ್ರಕ್ಕೆ 1 ರೂ. ಕೊಡ್ತಾರಂತೆ- ಮೂತ್ರ ಬ್ಯಾಂಕ್ ಸ್ಥಾಪನೆಗೆ ಮುಂದಾದ ಕೇಂದ್ರ ಸರ್ಕಾರ

    ಲೀಟರ್ ಮೂತ್ರಕ್ಕೆ 1 ರೂ. ಕೊಡ್ತಾರಂತೆ- ಮೂತ್ರ ಬ್ಯಾಂಕ್ ಸ್ಥಾಪನೆಗೆ ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಯೂರಿಯಾ ಉತ್ಪಾದಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಯೊಂದು ತಾಲೂಕು ಕೇಂದ್ರದಲ್ಲಿ ಮೂತ್ರ ಬ್ಯಾಂಕ್ ಸ್ಥಾಪಿಸಲು ಮುಂದಾಗಿದ್ದು, ಆ ಮೂಲಕ ಯೂರಿಯಾ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಹೊರಟಿದ್ದಾರೆ.

    ಮನುಷ್ಯನ ಮೂತ್ರದಲ್ಲಿ ಸಾಕಷ್ಟು ನೈಟ್ರೋಜನ್ ಇದೆ. ಆದರೆ ಇದನ್ನು ವ್ಯರ್ಥ ಮಾಡುತ್ತಿದ್ದೇವೆ. ಕಸದಿಂದ ರಸ ತೆಗೆಯೋದು ನನ್ನ ಪ್ಯಾಶನ್. ಇದನ್ನ ಪ್ರಯತ್ನಿಸೋದ್ರಲ್ಲಿ ಯಾವುದೇ ಹಾನಿ ಇಲ್ಲ. ಈಗಾಗಲೇ ಫಾಸ್ಫರಸ್ ಮತ್ತ ಪೊಟಾಷಿಯಂಗೆ ಬದಲಿ ಸಾವಯವ ಇದೆ. ನೈಟ್ರೋಜನ್ ಕೂಡ ಸೇರಿಸಿದರೆ ಇನ್ನೂ ಹೆಚ್ಚು ಸಹಾಯಕವಾಗುತ್ತದೆ ಎಂದು ಗಡ್ಕರಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ .

    ಈ ಯೋಜನೆ ಇನ್ನೂ ಪ್ರಾಥಮಿಕ ಹಂತದ ಪ್ರಸ್ತಾಪವಾಗಿದೆ. ಇದನ್ನ ವಾಸ್ತಚಿಕವಾಗಿ ಜಾರಿಗೆ ತರಲು ಸ್ವೀಡನ್ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

    ಈ ಯೋಜನೆಯನ್ನು ಪ್ರಯೋಗಿಕವಾಗಿ ಗ್ರಾಮೀಣ ಭಾಗದಲ್ಲಿ ಆರಂಭ ಮಾಡಲಾಗುತ್ತದೆ. ಒಂದು ಬಾರಿಗೆ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಸಂಗ್ರಹಿಸಿದ 10 ಲೀಟರ್ ಮೂತ್ರ ತರಬೇಕು. ಪ್ರತಿ ಲೀಟರ್ ಮೂತ್ರಕ್ಕೆ 1 ರೂ. ನೀಡಲಾಗುತ್ತೆ. ಸರ್ಕಾರದಿಂದಲೇ ಪ್ಲಾಸ್ಟಿಕ್ ಕ್ಯಾನ್ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ನಂತರ ಮೂತ್ರವನ್ನ ಶುದ್ಧೀಕರಣ ಮಾಡಿ ಸಾವಯವ ಗೊಬ್ಬರ ತಯಾರು ಮಾಡಲಾಗುತ್ತದೆ ಎಂದು ವಿವರಿಸಿದರು.

    ಈ ಯೋಜನೆಗೆ ತಗಲುವ ಆರ್ಥಿಕ ವೆಚ್ಚದ ಕುರಿತು ಮತ್ತು ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ಖಚಿತವಾಗಿಲ್ಲ. ಈ ಕುರಿತು ನಾಗ್ಪುರದ ಸಮೀಪದ ಧಪೇವಾಡಾ ಗ್ರಾಮದ ಪ್ರಯೋಗಲಯದಲ್ಲಿ ಆರಂಭಿಕ ಪರೀಕ್ಷೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

  • ಕುಡಿಯೋ ಹಾಲಿಗೆ ಬೆರೆಸ್ತಾರೆ ಎಣ್ಣೆ, ಯೂರಿಯಾ – ಅಥಣಿ, ರಾಯಬಾಗದಲ್ಲಿ ಭಾರೀ ದಂಧೆ

    ಬೆಳಗಾವಿ: ಹಾಲು ಕುಡಿದವರೇ ಬದಕಲ್ಲ, ಇನ್ನು ವಿಷ ಕುಡಿದವರು ಬದುಕ್ತಾರಾ? ಅನ್ನೋ ಗಾದೆ ಮಾತಿದೆ. ಬೆಳಗಾವಿ ಜಿಲ್ಲೆಯ ನಗರ ಪ್ರದೇಶದ ಜನ ಹಾಲಿನ ಹೆಸರಲ್ಲಿ ವಿಷವನ್ನೇ ಕುಡೀತಿದ್ದಾರೆ.

    ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರೋ ಹಾಲಿಗೆ ರಾಸಾಯನಿಕ ಬೆರೆಸುತ್ತಿದ್ದು, ಬೆಳಗಾವಿಯ ಅಥಣಿ ಮತ್ತು ರಾಯಬಾಗ ತಾಲೂಕಿನ ಹಾಲಿನ ದಂಧೆಯ ಬಗ್ಗೆ ಜನರಿಗೆ ಆತಂಕ ಶುರುವಾಗಿದೆ. ಇದ್ರಿಂದ ಭಯಾನಕ ರೋಗಗಳ ಭೀತಿನೂ ಎದುರಾಗಿದೆ.

    ರೈತರಿಂದ ಹಾಲು ಪಡೆಯೋ ಡೈರಿಯವರು, ಹಾಲಿನ ಫ್ಯಾಟ್ ಹಾಗೂ ಡಿಗ್ರಿ ಹೆಚ್ಚಳ ಮಾಡೋಕೆ ಇಂಥ ಅಕ್ರಮ ಹಾದಿ ಹಿಡಿದಿದ್ದಾರೆ. 50 ಲೀಟರ್ ಹಾಲಿಗೆ ಎಣ್ಣೆ, ಯೂರಿಯಾ ಸೇರಿದಂತೆ ವಿಷಪೂರಿತ ಕೆಮಿಕಲ್ ಮಿಕ್ಸ್ ಮಾಡಿ ಅದನ್ನ 100 ಲೀಟರ್‍ಗೆ ಹೆಚ್ಚಿಸ್ತಾರೆ. ಬಳಿಕ ಗ್ರಾಹಕರಿಗೆ ಹಾಲನ್ನ ಮಾರಾಟ ಮಾಡ್ತಿದ್ದಾರೆ. ಈ ಹಾಲಾಹಲದ ದಂಧೆ ಹಿಂದೆ ಭ್ರಷ್ಟ ಅಧಿಕಾರಿಗಳ ಕುಮ್ಮಕ್ಕೂ ಇದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

    ಶುಭ್ರ, ಶುದ್ಧ ಹಾಲಿನಲ್ಲಿ ಪಾತಕಿಗಳು ವಿಷ ತುಂಬಿ ಅಕ್ರಮವಾಗಿ ಲಾಭ ಪಡೀತಿದ್ದಾರೆ. ಈ ಮಿಲ್ಕ್ ಮಾಫಿಯಾ ಹೀಗೆ ಮುಂದುವರಿದ್ರೆ ನಗರದ ಜನ ಆಸ್ಪತ್ರೆಗಳಲ್ಲಿ ಸಾಲು ನಿಲ್ಲೋದು ತಪ್ಪಲ್ಲ.