Tag: ಯೂನಿವರ್ಸಿಟಿ

  • ಕಿಚ್ಚ ಸುದೀಪ್ ಗೌರವ ಡಾಕ್ಟರೇಟ್ ನಿರಾಕರಣೆ: ಏನಂದ್ರು ನಟ?

    ಕಿಚ್ಚ ಸುದೀಪ್ ಗೌರವ ಡಾಕ್ಟರೇಟ್ ನಿರಾಕರಣೆ: ಏನಂದ್ರು ನಟ?

    ನ್ನಡದ ಅನೇಕ ತಾರೆಯರಿಗೆ ನಾನಾ ವಿಶ್ವ ವಿದ್ಯಾಲಯಗಳು (University)  ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಬಹುತೇಕರು ಗೌರವ ಪೂರ್ವಕವಾಗಿಯೇ ಆ ಗೌರವವನ್ನು ಸ್ವೀಕರಿಸಿದ್ದಾರೆ. ಈ ಸಲ ತುಮಕೂರು (Tumkur) ವಿಶ್ವ ವಿದ್ಯಾಲಯವು ಕಿಚ್ಚ ಸುದೀಪ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿತ್ತು. ಈ ವಿಷಯವನ್ನು ಸುದೀಪ್ ಅವರಿಗೂ ತಿಳಿಸಲಾಗಿತ್ತು. ಆದರೆ, ಸುದೀಪ್ (Sudeep) ಆ ಗೌರವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.

    ವಿಶ್ವ ವಿದ್ಯಾಲಯವು ಸುದೀಪ್ ಅವರಿಗೆ ಕರೆ ಮಾಡಿ ಗೌರವ ಡಾಕ್ಟರೇಟ್ (Doctorate) ಆಯ್ಕೆಯ ವಿಷಯ ತಿಳಿಸಿದಾಗ, ‘ನನಗಿಂತಲೂ ಅರ್ಹರು ಸಾಕಷ್ಟು ಜನರು ಇದ್ದಾರೆ. ಅವರಿಗೆ ಈ ಗೌರವ ನೀಡಿ ಎಂದು ನಯವಾಗಿಯೇ ಗೌರವನ್ನು ನಿರಾಕರಿಸಿದ್ದಾರೆ. ಈ ಮೂಲಕ ರಾಹುಲ್ ದ್ರಾವಿಡ್ ಪರಂಪರೆಯನ್ನು ಮುಂದುವರೆಸಿದ್ದಾರೆ.

    ಈ ಹಿಂದೆ ಖ್ಯಾತ ಕ್ರಿಕೆಟ್ ಗೆ ರಾಹುಲ್ ದ್ರಾವಿಡ್ ಅವರಿಗೂ ಗೌರವ ಡಾಕ್ಟರೇಟ್ ನೀಡಲು ವಿವಿ ನಿರ್ಧಾರ  ಮಾಡಿತ್ತು. ಸುದೀಪ್ ಹೇಳಿದ ಮಾತುಗಳನ್ನೂ ಇವರು ಹೇಳಿ ಗೌರವ ಡಾಕ್ಟರೇಟ್ ನಿರಾಕರಿಸಿದ್ದರು. ಬೇಕಾದರೆ ಓದಿ ಡಾಕ್ಟರೇಟ್ ಪದವಿ ಪಡೆಯುವ ಮಾತುಗಳನ್ನೂ ಅವರು ಆಡಿದ್ದರು.

    ಸುದೀಪ್ ಈ ನಡೆ ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ಅನೇಕರು ರಾಹುಲ್ ದ್ರಾವಿಡ್ ಅವರಿಗೆ ಕಿಚ್ಚನ ಹೋಲಿಕೆ ಮಾಡಿ ಪೋಸ್ಟ್ ಮಾಡ್ತಿದ್ದಾರೆ. ಈ ನಿರ್ಧಾರವನ್ನು ಎಲ್ಲವೂ ಗೌರವಿಸುತ್ತೇವೆ ಎಂದಿದ್ದಾರೆ.

  • ವಿದೇಶಕ್ಕೆ ಕರೆದೊಯ್ದು ಕೋಟಿ ಕೋಟಿ ಲೂಟಿ-ಸಾಗರದಲ್ಲೇ ಕಮರಿತು ವಿದ್ಯಾರ್ಥಿಗಳ ಡಾಕ್ಟರ್ ಕನಸು

    ವಿದೇಶಕ್ಕೆ ಕರೆದೊಯ್ದು ಕೋಟಿ ಕೋಟಿ ಲೂಟಿ-ಸಾಗರದಲ್ಲೇ ಕಮರಿತು ವಿದ್ಯಾರ್ಥಿಗಳ ಡಾಕ್ಟರ್ ಕನಸು

    ಬೆಂಗಳೂರು: ಅವರೆಲ್ಲಾ ಡಾಕ್ಟರ್ ಆಗ್ಬೇಕು, ಜನರ ರೋಗವನ್ನು ಕಡಿಮೆ ಮಾಡ್ಬೇಕು ಅಂತೆಲ್ಲಾ ಸಾಗರದಾಚೆಗೆ ಹಾರಿ ಹೋದ್ರು. ಹೀಗೆ ಹಾರಿದವರು ಕಾಲೇಜನ್ನು ಸೇರಲಿಲ್ಲ. ಬದಲಿಗೆ ಒಂದು ಹೋಟೆಲನ್ನು ಸೇರಿದ್ರು. ಬಳಿಕ ಆ ಹೊಟೇಲನ್ನೇ ಕಾಲೇಜು ಮಾಡಿಕೊಂಡು ದ್ರೋಹ ಮಾಡಿದ ಕಿಡಿಗೇಡಿಗಳು ಕೋಟಿ ಕೋಟಿ ದೋಚಿದ್ರು.

    ಹೌದು. ಕಡಿಮೆ ಹಣಕ್ಕೆ ಅಮೆರಿಕಗೆ ಹೋಗಿ ವೈದ್ಯಕೀಯ ವಿದ್ಯೆಯನ್ನು ಕಲಿಯಬಹುದು. ನೀವು ಕೂಡ ಡಾಕ್ಟರ್ ಆಗ್ಬಹುದು ಅಂತ ಸಿಕ್ಕ ಸಿಕ್ಕ ಜನರಿಗೆಲ್ಲಾ ಮಂಕು ಬೂದಿಯನ್ನು ಎರಚುತ್ತಾ ಇರೋ ಅಲೆಗ್ಸಾಂಡರ್ ಯೂನಿವರ್ಸಿಟಿಯ ಬಯಲಾಟ ಇದೀಗ ಅನಾವರಣವಾಗ್ತಿದೆ.

    ನಗರದ ಸುರೇಶ್ ಎಂಬವರು ತನ್ನ ಮಗಳು ಅಮೆರಿಕದಲ್ಲಿ ಡಾಕ್ಟರ್ ಆಗಬೇಕೆಂಬ ಆಸೆಯಿಂದ ಅಲೆಗ್ಸಾಂಡರ್ ಯೂನಿವರ್ಸಿಟಿಗೆ ಹೋಗಿ ಲಕ್ಷ ಲಕ್ಷ ಹಣವನ್ನು ಕಟ್ಟಿದ್ದಾರೆ. ಆದ್ರೆ ಒಂದು ವರ್ಷಕ್ಕೆ 15 ಲಕ್ಷ ಹಣವನ್ನು ಕಟ್ಟುವಂತೆ ಡೀಲ್ ಮಾಡಿದ್ದ ಅಲೆಗ್ಸಾಂಡರ್ ಯೂನಿವರ್ಸಿಟಿ, ಮಕ್ಕಳನ್ನು ಅಮೆರಿಕಗೆ ಕಳುಹಿಸೋದನ್ನ ಬಿಟ್ಟು ಒಂದು ವರ್ಷಗಳ ಕಾಲ ತಮ್ಮ ಕೇಂದ್ರ ಕಚೇರಿ ಕೋರಮಂಗಲದಲ್ಲಿಯೇ ಇರಿಸಿಕೊಂಡಿದ್ದಾರೆ. ಯಾವಾಗ ಪೋಷಕರೆಲ್ಲಾ ಗಲಾಟೆ ಮಾಡೋದಕ್ಕೆ ಶುರು ಮಾಡಿದ್ರೋ, ಆ ಸಂದರ್ಭದಲ್ಲಿ ಎಚ್ಚೆತ್ತ ಯೂನಿರ್ವಸಿಟಿಯವರು ಅಮೆರಿಕಗೆ ಕಳಿಸ್ತೀನಿ ಅಂತ ಬರಬೋಡಾಸ್‍ಗೆ ಕಳುಹಿಸಿದ್ದಾರೆ.

    ಈ ವೇಳೆ ಯುವಿರ್ವಸಿಟಿಯ ಮತ್ತೊಂದು ಮುಖ ಬಯಲಾಗಿದೆ. ಅಮೆರಿಕಗೆ ಹೋಗ್ತಾ ಇದ್ದೀವಿ ಅಂತ ಭ್ರಮೆಯಲ್ಲಿ ಕೂತಿದ್ದ ಮಕ್ಕಳನ್ನು ಬರಬೋಡಾಸ್‍ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಒಂದು ಹೋಟೆಲ್‍ನಲ್ಲಿ ಇರಿಸಿ ಒಂದು ಹಾಸ್ಟೆಲ್‍ನಂತೆ ಮಾಡಿದ್ದಾರೆ. ಇದ್ರಿಂದ ಕೋಪಗೊಂಡ ವಿದ್ಯಾರ್ಥಿಗಳು ಅಲ್ಲಿ ವಿಚಾರ ಮಾಡೋದಕ್ಕೆ ಹೋದ್ರೆ. ನಿಮಗೆ ಸರ್ಟಿಫಿಕೇಟ್ ಬೇಕು ಅಂದ್ರೆ ಕೊಡಿಸ್ತೀವಿ ಯಾಕೆ ಯೋಚ್ನೆ ಮಾಡ್ತಿರಾ ಅಂದಿದ್ದಾರೆ. ಆಸ್ಪತ್ರೆಯಲ್ಲಿ ಪಾಠವನ್ನೇ ಕಲಿಯೋದಕ್ಕೆ ಅವಕಾಶ ಇಲ್ವಲ್ಲ ಅಂದ್ರೆ ನಿಮ್ಮ ಹಣ ವಾಪಸ್ಸು ಕೊಡ್ತೀವಿ ಅಂತ ವಿದ್ಯಾರ್ಥಿನಿಯರನ್ನೆಲ್ಲಾ ವಾಪಸ್ ಕರ್ನಾಟಕಕ್ಕೆ ಕಳುಹಿಸಿದ್ದಾರೆ. ನಮ್ಮ ಮಕ್ಕಳು ಓದೋದು ಬೇಡ ನೀವು ಮೋಸ ಮಾಡಿದ್ದೀರಿ ನಮ್ಮ ಹಣ ವಾಪಸ್ಸು ಕೊಡಿ ಅಂದಿದಕ್ಕೆ 15 ಲಕ್ಷದ ಬದಲು ಕೇವಲ ಐದು ಲಕ್ಷ ಹಣವನ್ನು ವಾಪಸ್ ಕೊಟ್ಟು ಕೈತೊಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

    ಒಟ್ಟಿನಲ್ಲಿ ದೂರದ ದೇಶಕ್ಕೆ ಹೋಗಿ ಓದ್ತೀವಿ, ಡಾಕ್ಟರ್ ಆಗ್ತೀವಿ ಅಂದುಕೊಂಡಿದ್ದ ಎಷ್ಟೋ ಮಕ್ಕಳ ಕನಸು ಸಾಗರದಲ್ಲೇ ಕಮರಿ ಹೋಗಿದ್ದು, ಅತ್ತ ಹಣವೂ ಇಲ್ಲದೇ, ಇತ್ತ ವಿದ್ಯಾಭ್ಯಾಸವೂ ಇಲ್ಲದೇ ಒದ್ದಾಡುವಂತೆ ಆಗಿದೆ. ಶಿಕ್ಷಣದ ಹೆಸರಲ್ಲಿ ವ್ಯಾಪಾರದ ಜೊತೆ ಮೋಸ ಮಾಡ್ತಿರೋ ಸಂಸ್ಥೆಗಳ ಮೇಲೆ ಇದೀಗ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.