Tag: ಯೂಟ್ಯೂಬ್ ಚಾನಲ್

  • ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಚಾರ- 19 ಯೂಟ್ಯೂಬ್ ಚಾನೆಲ್ ಬಂದ್

    ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಚಾರ- 19 ಯೂಟ್ಯೂಬ್ ಚಾನೆಲ್ ಬಂದ್

    ನವದೆಹಲಿ: ಸಾಮಾಜಿ ಮಾಧ್ಯಮದ ಅತ್ಯಂತ ದೊಡ್ಡ ವೇದಿಕೆ ಯೂಟ್ಯೂಬ್ ಗಣರಾಜ್ಯೋತ್ಸವಕ್ಕೂ ಮೊದಲೇ ಭಾರತದ ಬಗ್ಗೆ ವಿರೋಧವನ್ನು ಪ್ರಚಾರ ಮಾಡುವ 19 ಚಾನಲ್‌ಗಳನ್ನು ಬ್ಯಾನ್ ಮಾಡಿದೆ.

    ಜನವರಿ 20ರಂದು 19 ಚ್ಯಾನೆಲ್‌ಗಳ ಖಾತೆಯನ್ನು ಯೂಟ್ಯೂಬ್ ಡಿಲೀಟ್ ಮಾಡಿದೆ. 2021ರ ಡಿಸೆಂಬರ್ 21ರಂದು ಭಾರತ ಸರ್ಕಾರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಸಹಾಯದಿಂದ 20 ಯೂಟ್ಯೂಬ್ ಚ್ಯಾನೆಲ್‌ಗಳು ಹಾಗೂ 2 ವೆಬ್‌ಸೈಟ್‌ಗಳನ್ನು ನಿಷೇಧಿಸಿತ್ತು. ಇದನ್ನೂ ಓದಿ: ಭಾರತ ವಿರೋಧಿ ಸುಳ್ಳು ಸುದ್ದಿ ಪ್ರಸಾರ – 35 ಪಾಕ್‌ ಯೂಟ್ಯೂಬ್‌ ಚಾನೆಲ್‌ ಬ್ಲಾಕ್‌

    ಇದೀಗ ಯೂಟ್ಯೂಬ್ ಜಾಗತಿಕವಾಗಿ 19 ಚ್ಯಾನೆಲ್‌ಗಳನ್ನು ನಿಷೇಧಿಸಿದೆ. ಇದರೊಂದಿಗೆ ನಕಲಿ ಸುದ್ದಿಗಳನ್ನು ಪ್ರಚಾರ ಮಾಡುವ ವೆಬ್‌ಸೈಟ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ಕೋವಿನ್ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ: ಕೇಂದ್ರ

    ಯೂಟ್ಯೂಬ್‌ನ ಈ ಕ್ರಮದಿಂದ ಜಾಗತಿಕವಾಗಿ ಹಲವು ಯೂಟ್ಯೂಬ್ ಚಾನಲ್ ಹೊಂದಿದವರು ಭಾರತ ವಿರೋಧಿ ಪ್ರಚಾರದ ವೀಡಿಯೋಗಳನ್ನು ಅಳಿಸಿ ಹಾಕಲು ಪ್ರಾರಂಭಿಸಿದ್ದಾರೆ. ಯೂಟ್ಯೂಬ್ ಮುಂದಿನ ದಿನಗಳಲ್ಲಿ ಇಂತಹ ಹಲವು ಚಾನಲ್‌ಗಳನ್ನು ನಿಷೇಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.