Tag: ಯು.ಯು.ಲಲಿತ್

  • ಭಾರತದ 50ನೇ CJI ಆಗಿ ಡಿ.ವೈ ಚಂದ್ರಚೂಡ್ ಪ್ರಮಾಣ ವಚನ ಸ್ವೀಕಾರ

    ಭಾರತದ 50ನೇ CJI ಆಗಿ ಡಿ.ವೈ ಚಂದ್ರಚೂಡ್ ಪ್ರಮಾಣ ವಚನ ಸ್ವೀಕಾರ

    ನವದೆಹಲಿ: ಭಾರತದ ಸುಪ್ರೀಂ ಕೋರ್ಟ್ (Supreme Court) 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ.ವೈ ಚಂದ್ರಚೂಡ್ (DY Chandrachud) ಇಂದು ಪ್ರಮಾಣವಚನ ಸ್ವೀಕರಿಸಿದರು.

    ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ದ್ರೌಪದಿ ಮುರ್ಮು (Droupadi Murmu) ಅವರು ಪ್ರಮಾಣವಚನ ಬೋಧಿಸಿದರು. ಇದನ್ನೂ ಓದಿ: ಪಾಕ್-ಕಿವೀಸ್ ಸೆಮಿಫೈನಲ್‌ – T20 ವಿಶ್ವಕಪ್ ಕ್ರಿಕೆಟ್‌ನಲ್ಲಿಂದು ಬಿಗ್ ಫೈಟ್

    ನಿವೃತ್ತ ನ್ಯಾಯಮೂರ್ತಿ ಎನ್.ವಿ ರಮಣ (NV Ramana) ಅವರ ನಿವೃತ್ತಿಯ ನಂತರ 49ನೇ ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ್ದ ಯು.ಯು ಲಲಿತ್ (UU Lalit) ಮಂಗಳವಾರ (ನವೆಂಬರ್ 8) ತಮ್ಮ ಕರ್ತವ್ಯ ಮುಕ್ತಾಗೊಳಿಸಿದರು. ಇಂದು 50ನೇ ನ್ಯಾಯಮೂರ್ತಿಯಾಗಿ ಚಂದ್ರಚೂಡ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಹಿಂದೆಯೇ ಚಂದ್ರಚೂಡ್ ಅವರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಇದನ್ನೂ ಓದಿ: ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ ನೋಂದಣಿ – ಧರ್ಮಸ್ಥಳ ಸಂಘದ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಯಾರಿದು ಚಂದ್ರಚೂಡ್:
    1959 ನವೆಂಬರ್ 11 ರಂದು ಜನಿಸಿದ ಡಿ.ವೈ ಚಂದ್ರಚೂಡ್ ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್ನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡಿದ್ದರು. ನಂತರ ಬಾಂಬೆ ಹೈಕೋರ್ಟ್ ಅವರಗೆ 1998ರ ಜೂನ್‌ನಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ನೀಡಿತ್ತು. 2000 ದಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗುವುದಕ್ಕೂ ಮೊದಲು 1998ರಿಂದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಅವರು ಕೆಲಸ ಮಾಡಿದ್ದರು. 2013ರ ಅಕ್ಟೋಬರ್ 31ರಂದು ನ್ಯಾ. ಚಂದ್ರಚೂಡ್ ಅವರನ್ನು ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿತ್ತು. 2016ರ ಮೇ 13ರಂದು ನ್ಯಾ. ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ದಯವಿಟ್ಟು ಪ್ರಜಾಪ್ರಭುತ್ವ ಉಳಿಸಿ – ಸಿಜೆಐಗೆ ಮಮತಾ ಬ್ಯಾನರ್ಜಿ ಮನವಿ

    ದಯವಿಟ್ಟು ಪ್ರಜಾಪ್ರಭುತ್ವ ಉಳಿಸಿ – ಸಿಜೆಐಗೆ ಮಮತಾ ಬ್ಯಾನರ್ಜಿ ಮನವಿ

    ಕೋಲ್ಕತ್ತಾ: ದಯವಿಟ್ಟು ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಸುಪ್ರೀಂ ಕೋರ್ಟ್‌ (Supreme Court) ಮುಖ್ಯ ನ್ಯಾಯಮೂರ್ತಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಒತ್ತಾಯಿಸಿದ್ದಾರೆ.

    ದೇಶದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಉಸಿರುಗಟ್ಟಿಸಲಾಗುತ್ತಿದೆ. ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ, ರಾಷ್ಟ್ರವು ಅಧ್ಯಕ್ಷೀಯ ಸರ್ಕಾರಕ್ಕೆ ನೇತೃತ್ವ ವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಬ್ಯಾನರ್ಜಿ ಅವರು, ಪ್ರಜಾಪ್ರಭುತ್ವ ಮತ್ತು ಫೆಡರಲ್ ರಚನೆಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಿಜೆಐಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮನ್ ಕಿ ಬಾತ್‍ನಲ್ಲಿ ಬೆಂಗಳೂರಿನ ಸುರೇಶ್ ಕುಮಾರ್​ರನ್ನು ಪ್ರಶಂಸಿಸಿದ ಮೋದಿ

    ಕೋಲ್ಕತ್ತಾದಲ್ಲಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಜ್ಯೂರಿಡಿಕಲ್ ಸೈನ್ಸಸ್ (ಎನ್‌ಯುಜೆಎಸ್) ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಸಿಜೆಐ ಯು.ಯು.ಲಲಿತ್ (UU Lalit) ಅವರ ಉಪಸ್ಥಿತಿಯಲ್ಲಿ ಬ್ಯಾನರ್ಜಿ ಮಾತನಾಡಿದ್ದಾರೆ.

    ಜನರನ್ನು ಕಿರುಕುಳದಿಂದ ರಕ್ಷಿಸಲು ನ್ಯಾಯಾಂಗ ಮುಂದಾಗಬೇಕು. ಎಲ್ಲಾ ಪ್ರಜಾಸತ್ತಾತ್ಮಕ ಅಧಿಕಾರವನ್ನು ಸಮಾಜದ ಒಂದು ನಿರ್ದಿಷ್ಟ ವರ್ಗವು ವಶಪಡಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ಎಲ್ಲಿದೆ? ದಯವಿಟ್ಟು ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಒಟ್ಟು 9 ಸಾವಿರ ವ್ಯಾಗನ್ ಆರ್, ಸೆಲೆರಿಯೊ, ಇಗ್ನಿಸ್ ಕಾರುಗಳನ್ನು ಹಿಂದಕ್ಕೆ ಪಡೆದ ಮಾರುತಿ

    ನಾನು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರನ್ನು ಅಭಿನಂದಿಸಬೇಕು. ನಾನು ಈ ವೇದಿಕೆಯನ್ನು ಬಳಸಬಹುದೇ ಎಂದು ನನಗೆ ತಿಳಿದಿಲ್ಲ. ಆದರೆ ಎರಡು ತಿಂಗಳಲ್ಲಿ ಅವರು ನ್ಯಾಯಾಂಗ ಎಂದರೆ ಏನು ಎಂದು ತೋರಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.

    ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ನ್ಯಾಯಾಂಗವು ಜನರನ್ನು ಅನ್ಯಾಯದಿಂದ ರಕ್ಷಿಸಬೇಕು. ಜನರ ಕೂಗನ್ನು ಆಲಿಸಬೇಕು. ಇದೀಗ ಜನರು ಮುಚ್ಚಿದ ಬಾಗಿಲುಗಳ ಹಿಂದೆ ಅಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದ್ಯಪಾನ ತಡೆ ನೀತಿ ಜಾರಿಗೆ ತರಲು ಮನವಿ – ಈ ವಿಷಯವನ್ನು ಮುಟ್ಟುವುದಿಲ್ಲ ಎಂದ ಸುಪ್ರೀಂಕೋರ್ಟ್

    ಮದ್ಯಪಾನ ತಡೆ ನೀತಿ ಜಾರಿಗೆ ತರಲು ಮನವಿ – ಈ ವಿಷಯವನ್ನು ಮುಟ್ಟುವುದಿಲ್ಲ ಎಂದ ಸುಪ್ರೀಂಕೋರ್ಟ್

    ನವದೆಹಲಿ: ರಾಷ್ಟ್ರಮಟ್ಟದಲ್ಲಿ ಮದ್ಯಪಾನ ತಡೆ ನೀತಿಯನ್ನು (national liquor policy) ಜಾರಿಗೆ ತರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠ ವಿಚಾರಣೆಗೆ ನಿರಾಕರಿಸಿದೆ.

    ವಿನಿಯೋಗ್ ಪರಿವಾರ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಈ ಪ್ರಕರಣ ಆದಾಯದ ಅಂಶದಿಂದ ಕೂಡಿದೆ. ಕೆಲವು ಸಂದರ್ಭಗಳಲ್ಲಿ ನಾವು ಸೂಚನೆಗಳನ್ನು ನೀಡಿದರೆ ಅದು ರಾಜ್ಯ ಸರ್ಕಾರದ ಆದಾಯವನ್ನು ನಿರ್ಬಂಧಿಸಿದಂತಾಗಲಿದೆ. ಈ ಆದಾಯವನ್ನು ಸರ್ಕಾರಗಳು ಸಾಮಾಜಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿವೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ಮನವಿಯು ಸರ್ಕಾರ ಹೊಸ ನೀತಿ ಹೊಂದಲು ನಿರ್ದೇಶಿಸುವಂತಿದೆ. ನೀತಿ ರೂಪಿಸಲು ಸೂಚಿಸುವುದು ನಮ್ಮ ವ್ಯಾಪ್ತಿ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ (U.U.Lalit) ಹೇಳಿದರು. ಇದನ್ನೂ ಓದಿ: ಕೊಹಿನೂರ್‌ ವಜ್ರ ಜಗನ್ನಾಥ ದೇವರಿಗೆ ಸೇರಿದ್ದು; ಬ್ರಿಟನ್‌ನಿಂದ ವಾಪಸ್‌ ತರಿಸಿ – ರಾಷ್ಟ್ರಪತಿಗೆ ಮನವಿ

    ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಈ ಸಮಸ್ಯೆಯು ಭಾರತದ ಸಂವಿಧಾನದಲ್ಲಿ ಸಮಕಾಲೀನ ಪಟ್ಟಿಯಲ್ಲಿದೆ. ಆದರೂ ಕೇಂದ್ರ ಸರ್ಕಾರವೂ ಸಮಸ್ಯೆಯನ್ನು ಸಂಪೂರ್ಣವಾಗಿ ಕೈತೊಳೆದುಕೊಂಡಿದೆ. ಇದರಿಂದ ಆರೋಗ್ಯ ಸಂಬಂಧಿ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೇ ಅನೇಕ ಕುಟುಂಬಗಳಿಗೆ ಇದು ಮಾರಕವೂ ಆಗಿದೆ ಎಂದರು.

    ಅದೇನೆ ಇದ್ದರೂ ನಾವು ಈ ಬಗ್ಗೆ ನೀತಿಗಳನ್ನು ರೂಪಿಸಲು ನಿರ್ದೇಶನ ನೀಡಲು ಸಾಧ್ಯವಿಲ್ಲ. ಈ ಅರ್ಜಿಯ ವಿಚಾರಣೆ ಬೇರೆಯ ಸ್ವರೂಪ ಪಡೆಯಲಿದೆ. ನೀವೂ ಬೇಕಾದ್ದನ್ನು ಮಾಡಬಹುದು. ನಾವು ಈ ಅರ್ಜಿಯನ್ನು ಮುಟ್ಟುವುದಿಲ್ಲ ಎಂದು ಅರ್ಜಿ ವಜಾ ಮಾಡುವ ಮುನ್ನ ಪೀಠ ಸ್ಪಷ್ಟಪಡಿಸಿತು. ಇದನ್ನೂ ಓದಿ: ಆಹಾರ ಪದಾರ್ಥಗಳು ದುಬಾರಿ – ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ

    Live Tv
    [brid partner=56869869 player=32851 video=960834 autoplay=true]

  • ಭಾರತದ 49ನೇ CJI ಆಗಿ ಯುಯು ಲಲಿತ್ ಪ್ರಮಾಣ ವಚನ ಸ್ವೀಕಾರ

    ಭಾರತದ 49ನೇ CJI ಆಗಿ ಯುಯು ಲಲಿತ್ ಪ್ರಮಾಣ ವಚನ ಸ್ವೀಕಾರ

    ನವದೆಹಲಿ: ಸುಪ್ರೀಂ ಕೋರ್ಟ್ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಯು.ಯು ಲಲಿತ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಬೋಧಿಸಿದ್ದಾರೆ.

    ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ವಕೀಲ ವರ್ಗದಿಂದ ನೇರವಾಗಿ ಪದೋನ್ನತಿ ಪಡೆದ 2ನೇ ಸಿಜೆಐ ಆಗಿದ್ದಾರೆ. ಪದೋನ್ನತಿ ಪಡೆದ ಮೊದಲ ಸಿಜೆಐ ಆಗಿ ಎಸ್.ಎಂ ಸಿಕ್ರಿ ಅವರು 1971 ರಿಂದ ಏಪ್ರಿಲ್ 1973ರ ವರೆಗೆ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಿಂದ ಉದಯ್‌ ಸೂರ್ಯ ಔಟ್

    ನ್ಯಾಯಮೂರ್ತಿ ಲಲಿತ್ ಅವರು ಹಿರಿಯ ವಕೀಲ ಯು.ಆರ್ ಲಲಿತ್ ಪುತ್ರನಾಗಿ 1957ರ ನವೆಂಬರ್ 9ರಲ್ಲಿ ಜನಿಸಿದರು. 1983ರ ಜೂನ್‌ನಲ್ಲಿ ವಕೀಲರಾಗಿ ಸೇವೆ ಆರಂಭಿಸಿದ ಲಲಿತ್ ಅವರು ಡಿಸೆಂಬರ್ 1985ರ ವರೆಗೆ ಬಾಂಬೆ ಹೈಕೋರ್ಟ್ನಲ್ಲಿ ಅಭ್ಯಾಸ ಮಾಡಿದರು. 1986ರಲ್ಲಿ ರಾಷ್ಟ್ರ ರಾಜಧಾನಿಗೆ ತೆರಳಿ ಅಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ ಅವರು 2004ರ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಇದನ್ನೂ ಓದಿ: 2 ಮಕ್ಕಳ ತಾಯಿಯೊಂದಿಗೆ ಪರಾರಿಯಾಗಿ ಜೀವನಕ್ಕೆ ಗಾರೆ ಕೆಲಸ ಮಾಡ್ತಿದ್ದ BE ಗ್ರ್ಯಾಜುಯೆಟ್‌ – ಪೊಲೀಸರ ಅತಿಥಿ

    ಮುಂದೆ ಅವರು 2014ರ ಆಗಸ್ಟ್ 13ರಂದು ವಕೀಲ ವರ್ಗದಿಂದ ನೇರವಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ಇದೇ ವರ್ಷ ನವೆಂಬರ್ 8 ರಂದು ಅವರು ಸಿಜೆಐ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸುಪ್ರೀಂ ಕೋರ್ಟ್ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು.ಲಲಿತ್ ನೇಮಕ

    ಸುಪ್ರೀಂ ಕೋರ್ಟ್ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯು.ಯು.ಲಲಿತ್ ನೇಮಕ

    ನವದೆಹಲಿ: ನ್ಯಾಯಮೂರ್ತಿ ಯು.ಯು.ಲಲಿತ್ (ಉದಯ್ ಉಮೇಶ್ ಲಲಿತ್) ಅವರನ್ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

    ಪ್ರಸ್ತುತ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿರುವ ಎನ್.ವಿ.ರಮಣ ಇದೇ ತಿಂಗಳ ಆಗಸ್ಟ್ 26ರಂದು ನಿವೃತ್ತಿ ಹೊಂದಲಿದ್ದು, ನಂತರ ಆಗಸ್ಟ್ 27ರಿಂದ ಲಲಿತ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಅಲ್ಲದೇ ಲಲಿತ್ ಈ ವರ್ಷದ ನವಂಬರ್ 8 ವರೆಗೆ ಮಾತ್ರವೇ ಮುಖ್ಯನ್ಯಾಯಮೂರ್ತಿಯಾಗಿ ಇರಲಿದ್ದಾರೆ.

    ಪ್ರಸ್ತುತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿರುವ ಲಲಿತ್ 1957 ನವಂಬರ್ 9 ರಲ್ಲಿ ಜನಿಸಿದರು. 1983ರಲ್ಲಿ ವಕೀಲರಾಗಿ ನೇಮಕವಾದರು. ನಂತರ 1985ರ ವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಅಭ್ಯಾಸ ಮಾಡಿದರು. 1986ರ ಜನವರಿ ವರೆಗೆ ದೆಹಲಿ ಹೈಕೋರ್ಟ್ನಲ್ಲಿ ಕರ್ತವ್ಯ ನಿರ್ವಹಿಸಿದರು. ಆ ನಂತರ 2004ರಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿ ನೇಮಕಗೊಂಡರು. 10 ವರ್ಷಗಳ ಬಳಿಕ ಅಂದರೆ 2014 ಆಗಸ್ಟ್ 13ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದರು.

    Live Tv
    [brid partner=56869869 player=32851 video=960834 autoplay=true]

  • ಸುಪ್ರೀಂ ಕೋರ್ಟ್‌ನ ಮುಂದಿನ CJI ಆಗಿ ಯು.ಯು.ಲಲಿತ್‌ ಹೆಸರು ಶಿಫಾರಸು

    ಸುಪ್ರೀಂ ಕೋರ್ಟ್‌ನ ಮುಂದಿನ CJI ಆಗಿ ಯು.ಯು.ಲಲಿತ್‌ ಹೆಸರು ಶಿಫಾರಸು

    ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಮೂರ್ತಿ ಯು.ಯು.ಲಲಿತ್‌ ಅವರ ಹೆಸರನ್ನು ಶಿಫಾರಸು ಮಾಡಿ ಸಿಜೆಐ ಎನ್‌.ವಿ.ರಮಣ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ಎನ್.ವಿ.ರಮಣ ಅವರು 2022ರ ಆಗಸ್ಟ್ 26 ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿ ನೇಮಕಕ್ಕೆ ನ್ಯಾ.ಯು.ಯು.ಲಲಿತ್‌ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ರಮಣ ಅವರು ಭಾರತದ 48ನೇ ಮತ್ತು ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ನ್ಯಾಯಮೂರ್ತಿ ಲಲಿತ್ ಅವರು 49ನೇ ಸಿಜೆಐ ಆಗಲಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ ಭಾರತದ ಮೇಲೆ ಉಗ್ರರ ದಾಳಿ ಭೀತಿ: ಗುಪ್ತಚರ ಇಲಾಖೆ ಎಚ್ಚರಿಕೆ

    ಉದಯ್ ಉಮೇಶ್ ಲಲಿತ್ ಅವರು ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು. ನ್ಯಾಯಾಧೀಶರಾಗುವ ಮೊದಲು, ಅವರು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದರು. ನ್ಯಾಯಮೂರ್ತಿ ಲಲಿತ್ ಅವರು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಏರಿದ 6ನೇ ಹಿರಿಯ ವಕೀಲರಾಗಿದ್ದಾರೆ.

    ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ (CJI) ಆಗುವ ಹಾದಿಯಲ್ಲಿರುವ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ‘ತ್ರಿವಳಿ ತಲಾಖ್’ ರದ್ದು ಸೇರಿದಂತೆ ಹಲವಾರು ಮಹತ್ವದ ತೀರ್ಪುಗಳ ಭಾಗವಾಗಿದ್ದಾರೆ. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಭಾರತದ ಕಮಾಲ್- ಸ್ಕ್ವಾಷ್‌ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್

    Live Tv
    [brid partner=56869869 player=32851 video=960834 autoplay=true]

  • ಸಮಸ್ಯೆಗಳನ್ನು ಚರ್ಚಿಸಿ, ಪರಿಹರಿಸದಿದ್ದರೆ ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗುತ್ತದೆ – CJI

    ಸಮಸ್ಯೆಗಳನ್ನು ಚರ್ಚಿಸಿ, ಪರಿಹರಿಸದಿದ್ದರೆ ನ್ಯಾಯಾಂಗ ವ್ಯವಸ್ಥೆ ದುರ್ಬಲವಾಗುತ್ತದೆ – CJI

    ನವದೆಹಲಿ: ನ್ಯಾಯಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ನ್ಯಾಯಾಧೀಶರು ಚರ್ಚಿಸಿ ಪರಿಹರಿಸದಿದ್ದರೆ, ನ್ಯಾಯಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಎಚ್ಚರಿಸಿದ್ದಾರೆ.

    ನವದೆಹಲಿಯ ವಿಜ್ಞಾನ ಭವನದಲ್ಲಿಂದು ಅಖಿಲ ಭಾರತ ಜಿಲ್ಲಾ ಕಾನೂನು ಸೇವೆಗಳ ಅಧಿಕಾರಿಗಳ ಸಭೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ತಮಿಳುನಾಡು ರಾಜ್ಯ ಶೂಟಿಂಗ್ ಚಾಂಪಿಯನ್‌ಶಿಪ್: 4 ಚಿನ್ನದ ಪದಕ ಗೆದ್ದ ಅಜಿತ್ ಕುಮಾರ್

    ನ್ಯಾಯಾಂಗ ತನ್ನ ಕಾರ್ಯಚಟುವಟಿಕೆಗೆ ಅಡ್ಡಿಯಾಗುವ ಸಮಸ್ಯೆಗಳನ್ನು ಮರೆಮಾಚದೆ, ಮುಚ್ಚಿಡದೇ ಚರ್ಚಿಸಬೇಕು. ಇದರಿಂದ ಜನರಿಗೆ ಉತ್ತಮ ಸೇವೆ ಒದಗಿಸಬಹುದು ಎಂದು ಸಿಜೆಐ ರಮಣ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಲಂಕಾ ಅಧ್ಯಕ್ಷರ ನಿವಾಸದಲ್ಲಿ ದೊರೆತ ಹಣ ನ್ಯಾಯಾಲಯಕ್ಕೆ ಸಲ್ಲಿಕೆ

    ಜನರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶ ನಮಗಿದ್ದರೆ, ನಮ್ಮ ಕಾರ್ಯಚಟುವಟಿಕೆಗೆ ಅಡ್ಡಿಯಾಗುವ ಸಮಸ್ಯೆಗಳನ್ನೂ ನಾವು ಎತ್ತಿ ತೋರಿಸಬೇಕು. ಸಮಸ್ಯೆಗಳನ್ನು ಮರೆಮಾಚುವುದರಲ್ಲಿ ಅಥವಾ ಬಚ್ಚಿಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಈ ಸಮಸ್ಯೆ ಚರ್ಚಿಸದಿದ್ದರೆ, ಬಿಕ್ಕಟ್ಟುಗಳನ್ನು ಪರಿಹರಿಸದಿದ್ದರೆ, ಆಗ ನ್ಯಾಯಾಂಗ ವ್ಯವಸ್ಥೆ ದುರ್ಬಲಗೊಳ್ಳುತ್ತದೆ. ನಮ್ಮ ಸಾಂವಿಧಾನಿಕ ಆಶಯವಾದ ಸಾಮಾಜಿಕ ನ್ಯಾಯವನ್ನು ಪೂರೈಸಲು ಸಾಧ್ಯವಾಗದಿರಬಹುದು ಎಂದು ನನಗೆ ಭಯವಾಗುತ್ತಿದೆ. ಹಾಗಾಗಿ ನಾನು ಚರ್ಚಿಸಿ(ಡಿಸ್ಕಸ್), ಸಂವಾದಿಸಿ (ಡಿಬೇಟ್) ನಂತರ ನಿರ್ಧರಿಸಿ (ಡಿಸೈಡ್) ಎಂದು ಹೇಳುತ್ತೇನೆ. ನಾನೂ ಇದೇ ತತ್ವವನ್ನು ಅನುಸರಿಸುತ್ತಿದ್ದೇನೆ ಎಂದು ಅವರು ವಿವರಿಸಿದ್ದಾರೆ.

    ಜಿಲ್ಲಾ ನ್ಯಾಯಾಧೀಶರು ಬಹುಮುಖಿ ಪಾತ್ರ ನಿರ್ವಹಿಸಬೇಕು. ಜನರ ಮತ್ತು ಸಾಮಾಜಿಕ ಸಮಸ್ಯೆ ಅರ್ಥ ಮಾಡಿಕೊಳ್ಳುವ ಉತ್ತಮ ಹುದ್ದೆಯಲ್ಲಿ ನೀವು (ಜಿಲ್ಲಾ ನ್ಯಾಯಾಧೀಶರು) ಇದ್ದೀರಿ. ಭಾರತದಲ್ಲಿ ಕಾನೂನು ನೆರವು ಆಂದೋಲನಕ್ಕೆ ಜಿಲ್ಲಾ ನ್ಯಾಯಾಂಗವೇ ಪ್ರೇರಕ ಶಕ್ತಿ. ಜಿಲ್ಲಾ ನ್ಯಾಯಾಂಗವನ್ನು ಬಲಪಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಡಿ.ವೈ.ಚಂದ್ರಚೂಡ್ ಹಾಗೂ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪಾಪಿಗೂ ಭವಿಷ್ಯವಿದೆ – ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಲು ನಿರಾಕರಿಸಿದ ಸುಪ್ರೀಂ

    ಪಾಪಿಗೂ ಭವಿಷ್ಯವಿದೆ – ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಲು ನಿರಾಕರಿಸಿದ ಸುಪ್ರೀಂ

    ನವದೆಹಲಿ: ಪ್ರತಿಯೊಬ್ಬ ಸಂತನಿಗೂ ಭೂತಕಾಲವಿರುವಂತೆ ಪ್ರತಿ ಪಾಪಿಗೂ ಭವಿಷ್ಯವಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ.

    ಮಧ್ಯಪ್ರದೇಶದಲ್ಲಿ 4 ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಕೊಂದಿದ್ದ ವ್ಯಕ್ತಿಯೊಬ್ಬನಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ತಗ್ಗಿಸಿದ್ದ ಸುಪ್ರೀಂ ತೀರ್ಪನ್ನು ಪ್ರಶ್ನಿಸಿ ಮೃತ ಬಾಲಕಿಯ ತಾಯಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

    ಎಲ್ಲ ಸೂಕ್ತ ಅಂಶಗಳನ್ನು ಪರಿಗಣಿಸಿದ ಬಳಿಕವೇ ಅಪರಾಧಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಭಿನ್ನ ದೃಷ್ಟಿಕೋನದಿಂದ ಪ್ರಕರಣವನ್ನು ಪರಿಗಣಿಸುವ ರೀತಿಯಲ್ಲಿ ಯಾವುದೇ ವಾದ ಮಂಡನೆಯಾಗಿಲ್ಲ. ಹೀಗಾಗಿ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಹಾಗೂ ಬೇಲಾ ಎಂ.ತ್ರಿವೇದಿ ಅವರಿದ್ದ ಪೀಠ ತಿಳಿಸಿದೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ದಾಳಿ – 50 ಕೋಟಿ ರೂ., 5 ಕೆ.ಜಿ ಚಿನ್ನ ಪತ್ತೆ

    ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಮೊಹಮ್ಮದ್‌ಗೆ ವಿಧಿಸಿದ್ದ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ಪರಿಶೀಲಿಸುವಂತೆ ಮೃತ ಬಾಲಕಿಯ ತಾಯಿ ಅರ್ಜಿ ಸಲ್ಲಿಸಿದ್ದರು. 2021ರ ಏಪ್ರಿಲ್ 19ರಂದು ನೀಡಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಇದು ಮರಣ ದಂಡನೆ ನೀಡುವಂತಹ ಅಪರೂಪದಲ್ಲೇ ಅಪರೂಪದ ಪ್ರಕರಣವಲ್ಲ ಎಂದು ಹೇಳಿತ್ತು. ಇದನ್ನೂ ಓದಿ: 300 ವರ್ಷಗಳ ನಂತ್ರ ಅಂಗೋಲಾದಲ್ಲಿ ಪಿಂಕ್ ಡೈಮಂಡ್ ಪತ್ತೆ!

    ವಿಚಾರಣೆ ವೇಳೆ ಲೇಖಕ ಆಸ್ಕರ್ ವೈಲ್ಡ್‌ನ ಕೆಲ ಸಾಲುಗಳನ್ನು ಉದ್ಗರಿಸಿದ ಸುಪ್ರೀಂ ಕೋರ್ಟ್ `ಸಂತನಿಗೂ ಪಾಪಿಗೂ ಇರುವ ವ್ಯತ್ಯಾಸವೆಂದರೆ ಪ್ರತಿಯೊಬ್ಬ ಸಂತನಿಗೂ ಭೂತಕಾಲವಿದೆ, ಹಾಗೆಯೇ ಪ್ರತಿ ಪಾಪಿಗೂ ಭವಿಷ್ಯವಿದೆ. ಅಪರಾಧಿ ಜೈಲಿನಿಂದ ಬಿಡುಗಡೆಯಾಗಿ ತನ್ನಿಂದಾದ ತಪ್ಪನ್ನು ಸರಿಪಡಿಸಲು ಪ್ರಯತ್ನಿಸುವುದು ಹಾಗೂ ಸಮಾಜಕ್ಕೆ ಉಪಯೋಗವಾಗುವಂತ ಮನುಷ್ಯನಾಗಲು ಒಂದು ಅವಕಾಶ ನೀಡುವುದು ಆಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಆರೋಪಿ ಮೊಹಮ್ಮದ್ ಫಿರೋಜ್‌ಗೆ ಸಿಯೋನಿಯಲ್ಲಿನ ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಸಂತ್ರಸ್ತ ಬಾಲಕಿಯನ್ನು ಅಪಹರಿಸಿದ್ದ ಸಹ ಆರೋಪಿಗೆ ಜೈಲು ಶಿಕ್ಷೆ ನೀಡಿತ್ತು. ಮಧ್ಯಪ್ರದೇಶ ಹೈಕೋರ್ಟ್ ಗಲ್ಲುಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ಇದನ್ನು ಆರೋಪಿ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದ. ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿಯಿತಾದರೂ ಮರಣದಂಡನೆಯನ್ನು ರದ್ದುಗೊಳಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಬೆಳಿಗ್ಗೆ 7 ಗಂಟೆಗೆ ಮಕ್ಕಳು ಶಾಲೆಗೆ ಹೋಗ್ಬೋದಾದ್ರೆ, ನ್ಯಾಯಾಧೀಶರೇಕೆ 9 ಗಂಟೆಗೆ ಬರಬಾರದು – ಯು.ಯು.ಲಲಿತ್ ಪ್ರಶ್ನೆ

    ಬೆಳಿಗ್ಗೆ 7 ಗಂಟೆಗೆ ಮಕ್ಕಳು ಶಾಲೆಗೆ ಹೋಗ್ಬೋದಾದ್ರೆ, ನ್ಯಾಯಾಧೀಶರೇಕೆ 9 ಗಂಟೆಗೆ ಬರಬಾರದು – ಯು.ಯು.ಲಲಿತ್ ಪ್ರಶ್ನೆ

    ನವದೆಹಲಿ: ಮಕ್ಕಳು ಬೆಳಿಗ್ಗೆ 7 ಗಂಟೆಗೆ ಶಾಲೆಗೆ ಹೋಗಬಹುದು ಅನ್ನೋದಾದ್ರೆ ನ್ಯಾಯಾಧೀಶರು, ವಕೀಲರೇಕೆ ತಮ್ಮ ದಿನವನ್ನು 9 ಗಂಟೆಗೆ ಪ್ರಾರಂಭಿಸಬಾರದು ಎಂದು ನ್ಯಾಯಮೂರ್ತಿ ಯು.ಯು.ಲಲಿತ್ ಹೇಳಿದ್ದಾರೆ.

    ಮುಂದಿನ ಆಗಸ್ಟ್ ತಿಂಗಳಿನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಲಿರುವ ಲಲಿತ್ ಅವರಿದ್ದ ತ್ರಿಸದಸ್ಯ ಪೀಠವು ಇಂದು ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿಯೇ ಕುಳಿತು ವಿಚಾರಣೆ ಆರಂಭಿಸಿತು. ಸಾಮಾನ್ಯವಾಗಿ ನ್ಯಾಯಾಲಯವು ಬೆಳಿಗ್ಗೆ 10:30ಕ್ಕೆ ತನ್ನ ವಿಚಾರಣೆ ಪ್ರಾರಂಭಿಸುತ್ತದೆ. ಆದರೆ ನ್ಯಾ. ಯು.ಯು.ಲಲಿತ್ ಇಂದು ಬೆಳಿಗ್ಗೆ 9:30ಕ್ಕೆ ಪ್ರಕರಣದ ವಿಚಾರಣೆ ಪ್ರಾರಂಭಿಸಿದರು. ಇದನ್ನೂ ಓದಿ: ಲಿಪ್‍ಸ್ಟಿಕ್, ಕಾಸ್ಟ್ಲಿ ಮೊಬೈಲ್ ತಗೋತಿರಾ, ಫೀಸ್ ಕಟ್ಟೋಕೆ ಆಗಲ್ವಾ?- ವಿವಿ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು

    SUPREME COURT

    ವಿಚಾರಣೆ ಆರಂಭಿಸಿದ ಬಗ್ಗೆ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಯು.ಯು.ಲಲಿತ್ `ಮಕ್ಕಳು ಬೆಳಿಗ್ಗೆ 7 ಗಂಟೆಯಿಂದಲೇ ಶಾಲೆಗೆ ಹೋಗಬಹುದಾದರೆ ನ್ಯಾಯಾಧೀಶರು ಹಾಗೂ ವಕೀಲರು ತಮ್ಮ ದಿನವನ್ನು ಏಕೆ 9 ಗಂಟೆಗೆ ಪ್ರಾರಂಭಿಸಬಾರದು? ಎಂದು ಪ್ರಶ್ನಿಸಿದರು.

    ನ್ಯಾಯಮೂರ್ತಿ ಲಲಿತ್, ನ್ಯಾ. ಎಸ್.ರವೀಂದ್ರ ಭಟ್, ನ್ಯಾ. ಸುಧಾಂಶು ಧುಲಿಯಾ ಅವರಿದ್ದ ತ್ರಿಸದಸ್ಯ ಪೀಠದಲ್ಲಿ 2ನೇ ದರ್ಜೆಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ರೋಹಟಗಿ, 9.30 ಈ ಸಮಯ ನ್ಯಾಯಾಲಯದ ಚಟುವಟಿಕೆಗಳನ್ನು ಪ್ರಾರಂಭಿಸಲು ಸೂಕ್ತ ಸಮಯ ಎಂದು ಹೇಳಿದರು. ಇದನ್ನೂ ಓದಿ: ಅಲ್ಟ್‌ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ಮತ್ತೊಂದು ಪ್ರಕರಣದಲ್ಲಿ ಜಾಮೀನು

    ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಲಲಿತ್ ಅವರು ನಾವು 9 ಗಂಟೆಗೆ ಕೋರ್ಟ್ನಲ್ಲಿ ಕುಳಿತುಕೊಳ್ಳಬೇಕು ಎಂದು ಶಾಲಾ ಮಕ್ಕಳನ್ನು ಉದಾಹರಣೆ ನೀಡಿದರು. ಇದನ್ನೂ ಓದಿ: ಟೀ ಶರ್ಟ್ ವಿಚಾರಕ್ಕೆ ಲವರ್ಸ್‌ ಕಿತ್ತಾಟ – ಮೆಟ್ರೋದಲ್ಲೇ ಬಾಯ್ ಫ್ರೆಂಡ್ ಕೆನ್ನೆಗೆ ಬಾರಿಸಿದ್ಲು

    ಹೇಗಿರಬೇಕು ವಿಚಾರಣೆ?: ವಾರದಲ್ಲಿ 5 ದಿನಗಳವರೆಗೆ, ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಬೆಳಿಗ್ಗೆ 10.30ಕ್ಕೆ ಪ್ರಕರಣಗಳ ವಿಚಾರಣೆಯನ್ನು ಪ್ರಾರಂಭಿಸುತ್ತಾರೆ. ಸಂಜೆ 4ರ ವರೆಗೆ ಕುಳಿತುಕೊಳ್ಳುತ್ತಾರೆ. ಮಧ್ಯಾಹ್ನ 1 ರಿಂದ 2ರ ವರೆಗೆ ಒಂದು ಗಂಟೆಯ ಊಟದ ವಿರಾಮ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಇನ್ನು ಮುಂದೆ ಸುದೀರ್ಘ ವಿಚಾರಣೆ ಅಗತ್ಯವಿಲ್ಲದಿದ್ದಾಗ ಸುಪ್ರೀಂ ಕೋರ್ಟ್ ಬೆಳಿಗ್ಗೆ 9 ಗಂಟೆಗೇ ಪ್ರಾರಂಭವಾಗಬೇಕು. 11.30ಕ್ಕೆ ಅರ್ಧಗಂಟೆ ವಿರಾಮಕ್ಕಾಗಿ ಎದ್ದೇಳಬೇಕು. ತೀರ್ಪುಗಾರರು ಮತ್ತೆ ವಿಚಾರಣೆ ಪ್ರಾರಂಭಿಸಿ ಮಧ್ಯಾಹ್ನ 2 ಗಂಟೆಗೆ ಮುಕ್ತಾಗೊಳಿಸಬೇಕು. ಇದರಿಂದ ಸಂಜೆ ವೇಳೆ ಹೆಚ್ಚಿನ ಕೆಲಸ ಮಾಡಲು ಸಮಯ ಸಿಗುತ್ತದೆ ಎಂದು ಲಲಿತ್ ಸಲಹೆ ನೀಡಿದರು.

    ಯು.ಯು.ಲಲಿತ್ ಮುಂದಿನ ಆಗಸ್ಟ್ 27ರಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಆಗಲಿದ್ದಾರೆ. ಹಾಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ನವೆಂಬರ್ 8ರ ಮಾತ್ರವೇ ಅಧಿಕಾರದಲ್ಲಿ ಇರುಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]