ಮಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಹೈದರಾಬಾದ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವ ವಿಜ್ಞಾನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.
ಎರಡು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ಭರತ್ ಸೇರಿಕೊಂಡಿದ್ದ. ಕಳೆದ ಒಂದು ವಾರದ ಹಿಂದೆ ಊರಿಗೆ ಬಂದಿದ್ದ. ಸಂಸ್ಥೆಗೆ ರಾಜೀನಾಮೆ ಪತ್ರ ನೀಡಿದ್ದರೂ ರಾಜೀನಾಮೆ ಸ್ವೀಕಾರ ಮಾಡಿರಲಿಲ್ಲ. ನಿನ್ನೆ ರಾತ್ರಿ DRDO ಕಚೇರಿಯಿಂದ ಫೋನ್ ಬಂದಿತ್ತು. ಆ ಬಳಿಕ ಇಂದು (ಶುಕ್ರವಾರ) ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಚಿಕ್ಕೋಡಿ/ಬೆಳಗಾವಿ: ರೈತರಿಗೆ ಸರ್ಕಾರ ಸಾಲಮನ್ನಾ ಮಾಡುವುದು ಬೇಡ, ಆಫೀಸ್‍ಗೆ ಹೋದರೆ ರೈತರನ್ನ ಕೂರಿಸಿ ಏನಪ್ಪ ಅಂತ ಕೇಳುವಂತ ಅಧಿಕಾರಿ ಬೇಕು ಎಂದು ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಹೇಳಿದರು.
ಜಿಲ್ಲೆಯ ನದಿ ಇಂಗಳಗಾಂವದಲ್ಲಿ ನಡೆದ ಅದಮ್ಯ ಫೌಂಡೇಶನ್ ವತಿಯಿಂದ ಅದಮ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶೇಷ ಆಹ್ವಾನಿತರಾಗಿ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಆಗಮಿಸಿದ್ದರು. ಈ ವೇಳೆ ಮಾತನಾಡಿ, ಮೊಬೈಲ್‍ಗಳ ಮಿತವಾದ ಬಳಕೆಯ ಜೊತೆಗೆ ತಂತ್ರಜ್ಞಾನದ ಅರಿವು ಇರಬೇಕು. ಸತತವಾದ ಪರಿಶ್ರಮ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸು ಬರುತ್ತದೆ ಎಂದರು.
ನಮ್ಮ ದೇಶದಲ್ಲಿ ರೈತನಿಗೆ ಸರ್ಕಾರ ಮಾಡುವ ಸಾಲಮನ್ನಾ ಬೇಡ. ಅವರು ಒಂದು ಕಚೇರಿಗೆ ಹೋದರೆ ಕೂರಿಸಿ ಏನಪ್ಪ ಅಂತ ಕೇಳುವಂತ ಅಧಿಕಾರಿ ಬೇಕು. ನಾನು ಒಬ್ಬ ರೈತನ ಮಗನಾಗಿ ರೈತರ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.
ಸಮಾಜದ ಮೂಲೆಯಲ್ಲಿರುವ ಯುವ ಸಾಧಕರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಕೆಲಸ ಅದಮ್ಯ ಫೌಂಡೇಶನ್ ಮಾಡುತ್ತಿದ್ದು, ಅವರ ಕೆಲಸ ಶ್ಲಾಘನೀಯ. ಸತತವಾದ ಪರಿಶ್ರಮ ಒಂದೇ ಸಾಧನೆಯ ಮುಖ್ಯ ಅಸ್ತ್ರ. ತಂದೆ ತಾಯಿಗಳನ್ನು ಪೂಜ್ಯನಿಯ ಭಾವದಿಂದ ನೋಡಿಕೊಂಡು ಮೌಲ್ಯಯುತವಾಗಿ ಇಂದಿನ ಯುವ ಸಮೂಹ ಜೀವನ ನಡೆಸಬೇಕು ಎಂದು ತಿಳಿಸಿದ್ದಾರೆ.
ಅದಮ್ಯ ಫೌಂಡೇಶನ್ ಪ್ರಾರಂಭವಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅದಮ್ಯೋತ್ಸವ ಕಾರ್ಯಕ್ರಮದಲ್ಲಿ ಯುವ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದ ಯುವಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಳೆದ ವರ್ಷ ಪುಲ್ವಾಮಾ ದಾಳಿಯಲ್ಲಿ ವೀರ ಮರಣ ಹೊಂದಿದ್ದ ಭಾರತೀಯ ಯೋದರಿಗೆ ಗೀತ ನಮನ ಸಲ್ಲಿಸಲಾಗಿದೆ.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಇಂದಿನ ಯುವಕರು ಬೇಡದ ಕೆಲಸಗಳಿಂದ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂತವರಿಗೆ ಬದುಕಿನ ಮೌಲ್ಯಗಳ ಜೊತೆಗೆ ಆಧ್ಯಾತ್ಮಿಕ ಸಾರ ನೀಡಬೇಕಾದ ಅವಶ್ಯಕತೆ ಇದೆ. ಈ ಕೆಲಸವನ್ನು ಕಳೆದ ಒಂದು ವರ್ಷದಿಂದ ಅದಮ್ಯ ಫೌಂಡೇಶನ್ ಮಾಡುತ್ತಿದೆ ಎಂದರು.
ಚಿತ್ರದುರ್ಗ: ವಿದ್ಯಾರ್ಥಿಗಳು ಅಂದರೆ ಎಸ್‍ಎಸ್‍ಎಲ್‍ಸಿ ಪಾಸ್ ಆದರೆ ಸಾಕಪ್ಪಾ, ಅದೇ ನಮ್ಮ ಪಾಲಿಗೆ ದೊಡ್ಡ ಸಾಧನೆ ಅಂತ ಹಗಲು, ಇರುಳು ಕೇವಲ ಪಠ್ಯ ಪುಸ್ತಕದ ಅಭ್ಯಾಸಕ್ಕೆ ಸೀಮಿತವಾಗಿರುತ್ತಾರೆ. ಆದರೆ ಕೋಟೆನಾಡು ಚಿತ್ರದುರ್ಗದ 10ನೇ ಕ್ಲಾಸ್ ವಿದ್ಯಾರ್ಥಿ ಸುಮನ್ ಶ್ರಮವಿಲ್ಲದೆ ಕೇವಲ ಸೌರಶಕ್ತಿ ಹಾಗು ವಿದ್ಯುತ್ಚಕ್ತಿಯಿಂದಲೇ ಓಡುವ ಬೈಸಿಕಲ್‍ನ್ನ ಅವಿಷ್ಕಾರ ಮಾಡಿದ ಯುವ ವಿಜ್ಞಾನಿ ಎನಿಸಿಕೊಂಡಿದ್ದಾನೆ.
ಕೋಟೆನಾಡು ಚಿತ್ರದುರ್ಗದ ಸಂಪಿಗೆ ಸಿದ್ದೇಶ್ವರ ಫ್ರೌಡಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿ ಸುಮನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ತನ್ನಲ್ಲಿರುವ ವಿಜ್ಞಾನದ ಮೇಲಿನ ಆಸಕ್ತಿಯಿಂದಾಗಿ ಇಂದು “ಮೊಟೋ ಬೈಸಿಕಲ್” ಒಂದನ್ನು ಸ್ವತಃ ತಾನೇ ತಯಾರಿಸಿದ್ದಾನೆ. ಈ ಸೈಕಲ್‍ಗೆ ಯಾವುದೇ ಪೆಟ್ರೋಲ್, ಡೀಸೆಲ್ ಇಂಧನಗಳನ್ನು ಬಳಸುವ ಅಗತ್ಯವಿಲ್ಲ. ಕೇವಲ ಸೌರಶಕ್ತಿ ಹಾಗೂ ವಿದ್ಯುತ್‍ಚ್ಛಕ್ತಿಯಿಂದಲೇ ಚಾರ್ಜ್ ಮಾಡಿಕೊಂಡು ಸವಾರಿ ಮಾಡಬಹುದು.
ಒಂದು ದಿನಕ್ಕೆ 60 ಕಿಲೋ ಮೀಟರ್ ಸ್ಪೀಡ್‍ನಲ್ಲಿ, ಸುಮಾರು 40 ಕಿಲೋ ಮೀಟರ್‍ಗಳಷ್ಟು ಮೈಲೇಜನ್ನು ಈ ಸೋಲಾರ್ ಬೈಸಿಕಲ್ ಕೊಡುತ್ತದೆ. ಜೊತೆಗೆ ಮಾಮೂಲಿ ಬೈಸಿಕಲ್‍ನ ಪೆಡಲ್‍ಗಳನ್ನು ತುಳಿಯೋದ್ರಿಂದಲೂ ಸಹ ಡೈನಾಮೋ ಚಾರ್ಜ್ ಆಗಿ ಕೂಡ ಸೈಕಲ್ ರನ್ ಆಗುತ್ತದೆ. ಹೀಗಾಗಿ ಈ ಸೈಕಲ್ ಒಂದು ರೀತಿಯ ಮೋಟಾರ್ ವಾಹನ ಎನಿಸಿದರೂ ತಪ್ಪಿಲ್ಲ. ಶ್ರಮವಿಲ್ಲದೆ ಪರಿಸರಕ್ಕೂ ಹಾನಿ ಮಾಡದೆ ಬಿಂದಾಸ್ ಅಗಿ ಜರ್ನಿ ಮಾಡಬಹುದು. ಇದನ್ನು ಬಳಸುವ ಮೂಲಕ ದ್ವಿಚಕ್ರವಾಹಗಳ ಬಳಕೆ ಅಂತ್ಯ ಹಾಡಬಹುದು ಎಂದು ಸುಮನ್ ಹೇಳುತ್ತಾನೆ.
ಈ ಸಾಧನೆ ಮಾಡಲು ಶಾಲೆಯ ಶಿಕ್ಷಕರು ಹಾಗೂ ಕುಟುಂಬಸ್ಥರು ಸಹ ಈತನಿಗೆ ಪ್ರೋತ್ಸಾಹಿಸಿದ್ದೂ, ಮೊದಲಿನಿಂದಲೂ ಶಾಲೆಯಲ್ಲಿ ವಿವಿಧ ಪ್ರಯೋಗಗಳನ್ನು ಮಾಡುತ್ತಿದ್ದನು. ಆದ್ದರಿಂದ ಇತ್ತೀಚೆಗೆ ನಡೆದ (INSPIRE AWARD EXHIBITION) ‘ಇನ್ಸ್ ಪೈರ್ ಅವಾರ್ಡ್ ಎಕ್ಸಿಬಿಷನ್’ ಸ್ಪರ್ಧೆಯಲ್ಲಿ ಭಾಗವಹಿಸಿ ಈ ಸೈಕಲ್ ಆವಿಷ್ಕಾರದ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಅಲ್ಲದೇ ಮುಂಬರುವ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ದೆಹಲಿಯ ರಾಷ್ಟ್ರ್ರೀಯ ಸ್ಪರ್ಧೆಗೆ ಸಹ ಸುಮನ್ ಕರ್ನಾಟಕದಿಂದ ಭಾಗವಹಿಸಲಿದ್ದೂ, ಈತನ ಸಾಧನೆ ಇತರೆ ಶಾಲಾ ವಿದ್ಯಾರ್ಥಿಗಳಿಗೆ ಮಾದರಿ ಎನಿಸಿದೆ ಎಂದು ಶಾಲೆಯ ಶಿಕ್ಷಕಿ ಸುವರ್ಣ ಹರ್ಷ ವ್ಯಕ್ತಪಡಿಸಿದ್ದಾರೆ
ವಾಯು ಮಾಲಿನ್ಯದಿಂದ ಕಂಗೆಟ್ಟಿರೋ ಈ ಕಾಲಘಟ್ಟದಲ್ಲಿ ಇಂತಹ ಪರಿಸರ ಸ್ನೇಹಿ ವಾಹನಗಳು ಜಗತ್ತಿಗೆ ಪರಿಚಯವಾಗ್ತಿರೋದು ಸಂತಸದ ವಿಷಯ. ಹೀಗಾಗಿ ರಾಷ್ಟ್ರಮಟ್ಟದಲ್ಲೂ ಸುಮನ್ ಕೀರ್ತಿಯನ್ನು ಸಾಧಿಸಲಿ ಹಾಗು ಇನ್ನಷ್ಟು ಆವಿಷ್ಕಾರಗಳು ಈ ಯುವವಿಜ್ಞಾನಿಯಿಂದ ಹೊರಬಂದು ಪ್ರಪಂಚಕ್ಕೆ ಈತನ ಸಾಧನೆ ಮಾದರಿಯಾಗಲಿ ಅನ್ನೋದು ಎಲ್ಲರ ಆಶಯ.