Tag: ಯುವ ರೈತ

  • ಪ್ರತಿಭಟನಾ ಸ್ಥಳದಿಂದ ಮರಳಿದ್ದ 22ರ ಯುವ ರೈತ ಆತ್ಮಹತ್ಯೆ

    ಪ್ರತಿಭಟನಾ ಸ್ಥಳದಿಂದ ಮರಳಿದ್ದ 22ರ ಯುವ ರೈತ ಆತ್ಮಹತ್ಯೆ

    – ಗ್ರಾಮಕ್ಕೆ ತೆರಳಿ ವಿಷ ಸೇವಿಸಿದ ಸಿಂಗ್

    ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ಗಡಿಯಲ್ಲಿ ನಡೆದ ಪ್ರತಿಭಟನಾ ಸ್ಥಳದಿಂದ ಮರಳಿದ್ದ ಎರಡು ದಿನದ ಬಳಿಕ ಪಂಜಾಬ್ ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

    ಯುವಕನನ್ನು ಗುರ್ಲಭ್ ಸಿಂಗ್(22) ಎಂದು ಗುರುತಿಸಲಾಗಿದೆ. ಬಟಿಂತಾ ಜಿಲ್ಲೆಯ ದಯಾಲ್ ಪುರ ಮಿರ್ಜಾ ಗ್ರಾಮದ ನಿವಾಸಿ. ಡಿಸೆಂಬರ್ 18ರ ಶುಕ್ರವಾರದಂದು ಈತ ಪ್ರತಿಭಟನೆಯಿಂದ ಗ್ರಾಮಕ್ಕೆ ವಾಪಸ್ಸಾಗಿದ್ದನು. ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮನೆಯಲ್ಲಿ ಸಿಂಗ್ ಕೆಲವು ವಿಷಕಾರಿ ಪದಾರ್ಥಗಳನ್ನು ಸೇವಿಸಿದ್ದಾನೆ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸಿಂಗ್ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಆತ್ಮಹತ್ಯೆಯ ಹಿಂದಿನ ಕಾರಣವನ್ನು ಇನ್ನೂ ಕಂಡುಹಿಡಿಯಬೇಕಾಗಿಲ್ಲ. ಆದರೆ ಸಿಂಗ್ ಸಣ್ಣ ಮಟ್ಟದ ಕೃಷಿಕನಾಗಿದ್ದು, 6 ಲಕ್ಷ ರೂ. ಸಾಲ ಮಾಡಿದ್ದನು ಎಂದು ಪೊಲೀಸರು ಹೇಳಿದ್ದಾರೆ. ಕೇಂದ್ರದ ಇತ್ತೀಚಿನ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ದೇಶದ ವಿವಿಧ ಭಾಗಗಳ ರೈತರು ಎರಡು ವಾರಗಳ ಕಾಲ ದೆಹಲಿಯ ವಿವಿಧ ಗಡಿ ಕೇಂದ್ರಗಳಲ್ಲಿ ಕ್ಯಾಂಪ್ ಮಾಡಿದ್ದಾರೆ.

  • ಕಾಲುಜಾರಿ ಹೇಮಾವತಿ ಹೊಳೆಗೆ ಬಿದ್ದು ಯುವ ರೈತ ಸಾವು

    ಕಾಲುಜಾರಿ ಹೇಮಾವತಿ ಹೊಳೆಗೆ ಬಿದ್ದು ಯುವ ರೈತ ಸಾವು

    ಹಾಸನ: ದನಕರುಗಳೊಂದಿಗೆ ಜಮೀನಿಗೆ ತೆರಳುತ್ತಿದ್ದ ಯುವಕ ಕಾಲು ಜಾರಿ ಹೇಮಾವತಿ ಹೊಳೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಥಿ ಸಕಲೇಶಪುರ ತಾಲೂಕಿನ ಐಗೂರು ಗ್ರಾಮದ ಬಳಿ ನಡೆದಿದೆ.

    25 ವರ್ಷದ ನವೀನ್ ಮೃತ ದುರ್ದೈವಿ. ನವೀನ್ ಜಾನುವಾರುಗಳನ್ನು ಮೇಯಿಸಲು ಜಮೀನಿನ ಬಳಿ ತೆರಳುತ್ತಿದ್ದರು. ಈ ವೇಳೆ ಹೇಮಾವತಿ ನದಿಗೆ ಕಾಲು ಜಾರಿ ಬಿದ್ದಿದ್ದಾರೆ. ತಕ್ಷಣ ಅವರನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.

    ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

  • ಸಿಎಂಗೆ ಹಾಡಿನ ಮೂಲಕ ಕೆರೆಗೆ ನೀರು ಹರಿಸುವಂತೆ ಮನವಿ: ಶಿರಾ ಯುವಕನ ವಿಡಿಯೋ ವೈರಲ್

    ಸಿಎಂಗೆ ಹಾಡಿನ ಮೂಲಕ ಕೆರೆಗೆ ನೀರು ಹರಿಸುವಂತೆ ಮನವಿ: ಶಿರಾ ಯುವಕನ ವಿಡಿಯೋ ವೈರಲ್

    ತುಮಕೂರು: ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸುವಂತೆ ಸಿಎಂ ಕುಮಾರಸ್ವಾಮಿಯವರಿಗೆ ಹಾಡಿನ ಮೂಲಕ ಮನಮುಟ್ಟುವ ರೀತಿಯಲ್ಲಿ ಯುವ ರೈತನೋರ್ವ ಹಾಡಿರುವ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

    ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿಸುವಂತೆ ಹಲವಾರು ಹೋರಾಟಗಳು ನಡೆದಿದೆ. ರಕ್ತದ ಮೂಲಕ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದು ಮನವಿಯನ್ನೂ ಮಾಡಲಾಗಿದೆ. ಆದರೂ ಸಹ ಇಲ್ಲಿಯವರೆಗೂ ಮದಲೂರು ಕೆರೆಗೆ ಹನಿ ನೀರೂ ಹರಿದಿಲ್ಲ. ಇದರಿಂದ ಬೇಸತ್ತ ಯುವ ರೈತನೋರ್ವ ಹೃದಯ ಮುಟ್ಟವ ರೀತಿಯಲ್ಲಿ ಹಾಡನ್ನು ರಚಿಸಿ ಹಾಡಿರುವ ವಿಡಿಯೋ ಸಾಕಷ್ಟು ಸುದ್ದಿಯಾಗಿದೆ.

    ಪೂಜಾರ್ ಮುದ್ದನಹಳ್ಳಿ ಯುವ ರೈತ ಮಂಜುನಾಥ್ ಎಂಬಾತ ಹಿರಿಯ ಗಾಯಕ ಸಿ.ಅಶ್ವಥ್ ಹಾಡಿರುವ “ಒಳಿತು ಮಾಡು ಮನುಸ” ಎಂಬ ಹಾಡಿನ ಸಂಗೀತಕ್ಕೆ ತಾನೇ ಬೇರೆ ಸಾಹಿತ್ಯ ಬರೆದು ಹಾಡಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ ರೀತಿಯಲ್ಲಿ ಈ ಹಾಡು ರಚಿಸಿದ್ದಾರೆ. ಅಲ್ಲದೇ ಐದು ನಿಮಿಷ ಸ್ವತಃ ಹಾಡಿರುವ ರೈತನ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮಂಜುನಾಥ್, ನಮ್ಮ ಭಾಗದಲ್ಲಿ ನೀರಿನ ಅಭಾವ ಹೆಚ್ಚಿದ್ದು, ಬೆಳೆ ಬೆಳೆಯಲಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನು ಸಿಎಂ ಕುಮಾರಸ್ವಾಮಿಯವರ ಅಪ್ಪಟ ಅಭಿಮಾನಿಯಾಗಿದ್ದೇನೆ. ಅವರು ರೈತರ ಪರ ಕಾಳಜಿಯನ್ನು ಹೊಂದಿದ್ದಾರೆ. ನಮ್ಮ ಮದಗೂರಿನ ಕೆರೆಗೆ ನೀರು ಹರಿಸುವಂತೆ ಎಷ್ಟೇ ಬಾರಿ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಹೀಗಾಗಿ ಹಾಡಿನ ಮೂಲಕ ಅವರ ಮನ ಮುಟ್ಟುವಂತೆ ಹಾಡಿದ್ದೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv