Tag: ಯುವ ರಾಜ್ ಕುಮಾರ್

  • ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್

    ದೊಡ್ಮನೆ ಕುಡಿ ‘ಯುವʼ ಸಿನಿಮಾ ಏನಾಯ್ತು? ಇಲ್ಲಿದೆ ಅಪ್‌ಡೇಟ್

    ಯುವರಾಜ್‌ಕುಮಾರ್ (Yuva Rajkumar) ಹಾಗೂ ಶ್ರೀದೇವಿ (Sridevi)  ದಂಪತಿ ತಾತನ ಮನೆಯ ಮಡಿಲಲ್ಲಿ ಒಂದು ದಿನ ಕಳೆದಿದ್ದಾರೆ. ದೊಡ್ಮನೆಯ ಮೂರನೇ ತಲೆಮಾರಿನ ಕುಡಿ ಅಣ್ಣಾವ್ರು ಹುಟ್ಟಿ ಬೆಳೆದ ಜಾಗದಲ್ಲಿ ಓಡಾಡಿದ್ದಾರೆ. ಆ ಪುಟ್ಟ ಗುಡಿಸಲಲ್ಲಿ ಜೋಗುಳ ಕೇಳಿಸಿಕೊಂಡಿದ್ದ ರಾಜ್‌ಕುಮಾರ್ ದೇವರನ್ನು ನೆನೆದು ಆಶೀರ್ವಾದ ಬೇಡಿದ್ದಾರೆ. ಶಿವಣ್ಣ, ರಾಘಣ್ಣ ಹಾಗೂ ಅಪ್ಪು ಹಾಕಿಕೊಟ್ಟ ಹಾದಿಯಲ್ಲಿ ಹೊಸ ಕುದುರೆ ಓಡುತ್ತಿದೆ. ಏನೆಂದು ಬೇಡಿಕೊಂಡರು ಯುವರಾಜ್‌ಕುಮಾರ್ ? ಅಪ್ಪು ನೆನೆದು ಯಾಕೆ ಭಾವುಕರಾದರು? ಯುವ ಸಿನಿಮಾ ಎಲ್ಲಿಗೆ ಬಂದಿದೆ? ಏನಾಯ್ತು.. ಇಲ್ಲಿದೆ ಅಪ್‌ಡೇಟ್

    ಅಣ್ಣಾವ್ರು..ಮೂರು ಅಕ್ಷರಗಳ ಈ ಶಬ್ದ ಕೇಳಿದರೆ ಕನ್ನಡಿಗರು ಎದ್ದು ನಿಲ್ಲುತ್ತಾರೆ. ಅದೊಂದು ಕಣ್ಣಿಗೆ ಕಂಡ ದೇವರನ್ನು ನೆನೆದು ಕಣ್ಣೀರು ಹಾಕುತ್ತಾರೆ. ಇದ್ದರೆ ಇರಬೇಕಪ್ಪಾ ನಮಗೆ ರಾಜ್ಕುಮಾರ್‌ರಂಥ ಮಗ ಎಂದು ಭಾವುಕರಾಗುತ್ತಾರೆ. ಅದು ಅಣ್ಣಾವ್ರು ಗಳಿಸಿದ ಆಸ್ತಿ. ಕನ್ನಡಿಗರ ಮನದಲ್ಲಿ ಬೇರು ಬಿಟ್ಟ ಕಿತ್ತಿ ಒಗೆಯಲಾದ ಶಕ್ತಿ. ರಾಜ್ ಕೇವಲ ಸಿನಿಮಾದಿಂದ ಮಾತ್ರ ನಮ್ಮಲ್ಲಿ ಪ್ರೀತಿ ಹುಟ್ಟಿಸಲಿಲ್ಲ. ಅದನ್ನು ಮೀರಿದ ಜೀವನ ಪಾಠ ಕಲಿಸಿದರು. ಎಷ್ಟೇ ಎತ್ತರಕ್ಕೆ ಬೆಳೆದರೂ ನಿಂತ ನೆಲ ಮರೆಯಬೇಡ ಹತ್ತಿ ಬಂದ ಏಣಿಯನ್ನು ದೂರ ತಳ್ಳಬೇಡ ಇದನ್ನೆಲ್ಲ ಅವರು ಹೇಳಲಿಲ್ಲ. ಹಾಗೆಯೇ ಬದುಕಿ ಬಿಟ್ಟರು. ಆ ಹಾದಿಯಲ್ಲಿ ಶಿವಣ್ಣ, ರಾಘಣ್ಣ- ಅಪ್ಪು ನೀರು ಚೆಲ್ಲುತ್ತಾ ನಡೆದರು. ಇದನ್ನೂ ಓದಿ:‘ಪೊನ್ನಿಯಿನ್ ಸೆಲ್ವನ್’ ಸ್ಟಾರ್ ಜಯಂರವಿ ಹೊಸ ಚಿತ್ರಕ್ಕೆ ಕೃತಿ ಶೆಟ್ಟಿ, ಕಲ್ಯಾಣಿ ಸಾಥ್

    ಅಪ್ಪು…ಅದೊಂದು ಜೀವವನ್ನು ನೆನೆಸಿಕೊಳ್ಳುವುದೇ ಸಣ್ಣ ಕರುಳಿಗೆ ಸಂಕಟ. ಎಲ್ಲೇ ರಾಜರತ್ನನ ಭಾವಚಿತ್ರ ನೋಡಲಿ…ಯಾರೇ ಆಗಿರಲಿ…ಕ್ಷಣ ಮನಸು ಕಲ್ಲವಿಲ…ಅಲ್ಲಕಲ್ಲೋಲ. ನಿಜಕ್ಕೂ ಪುನೀತ್ ನಮ್ಮ ಜೊತೆ ಇಲ್ಲವಾ? ಅದು ಸಾಧ್ಯವಾಗಿದ್ದು ಸತ್ಯವಾ? ಈ ಪ್ರಶ್ನೆಗಳೆ ಎದೆಯಲ್ಲಿ ಜೋಕಾಲಿ. ಏನು ಮಾಡಿದರೂ…ಎಷ್ಟು ನಿತ್ರಾಣವಾದರೂ. ಇಲ್ಲ…ಅಪ್ಪು ಮತ್ತೆ ಕಣ್ಣ ಮುಂದೆ ನಿಲ್ಲುವುದಿಲ್ಲ. ಅದನ್ನು ಅರಗಿಸಿಕೊಳ್ಳಲಾಗದೆ ನಾವು ಹೈರಾಣುವುದು ತಪ್ಪುವುದಿಲ್ಲ. ಇದೇ ಅಪ್ಪು, ಅಪ್ಪಾಜಿಯ ಜೀವಜ್ಜೀವ ಕೂಸಾಗಿದ್ದರು. ಕೊನೇ ಮಗ…ಅಚ್ಚೆ ಅಚ್ಚೇ ಮಾಡಿ ಬೆಳೆಸಿದ ಕಂದನ ಸಾವನ್ನು ಅಪ್ಪ ಅಮ್ಮ ನೋಡಲಿಲ್ಲವಲ್ಲ…ಅದೇ ಅಗತ್ಯಕ್ಕಿಂತ ಹೆಚ್ಚಲ್ಲದ ಸಮಾಧಾನ.

    ಪುನೀತ್ ಕೂಡ ಗಾಜನೂರಿಗೆ (Gajunuru) ಹೋಗುತ್ತಿದ್ದರು. ಬಾಲ್ಯದಲ್ಲಿ ಹಳ್ಳಿಯ ಮಣ್ಣಿನಲ್ಲಿ ಮಗುವಾಗುತ್ತಿದ್ದರು. ತೋಟದಲ್ಲಿ ಹಣ್ಣು ಕೀಳುತ್ತಾ, ಬಾವಿಯಲ್ಲಿ ಈಜಾಡುತ್ತಾ, ಹೊಟ್ಟೆ ಹಸಿದಾಗ ಅಜ್ಜಿ ಕೈ ತುತ್ತು ಹೊಟ್ಟೆಗಿಳಿಸುತ್ತಾ ಬೆಳೆದರು. ದೊಡ್ಡವರಾದ ಮೇಲೂ ಆ ನೆನಪನ್ನು ಅಳಿಸಿ ಹಾಕಲಿಲ್ಲ. ಗಾಜನೂರಿನ ಸುತ್ತ ಮುತ್ತ ಶೂಟಿಂಗ್ ನಡೆದರೆ ಸಾಕು…ಅಪ್ಪ ಹುಟ್ಟಿದ ಮನೆಯ ಕದ ತಟ್ಟುತ್ತಿದ್ದರು. ಈಗ ಅದನ್ನೇ ಮಾಡುತ್ತಿದ್ದಾರೆ ಯುವರಾಜ್‌ಕುಮಾರ್. ತಾತನ ಜೊತೆ ಇದೇ ಹಳ್ಳಿಯಲ್ಲಿ ಓಡಾಡಿದ್ದು, ತುತ್ತು ಗಂಟಲಿಗೆ ಇಳಿಸಿದ್ದನ್ನು ನೆನೆಯುತ್ತಾರೆ. ಅಪ್ಪು ಚಿಕ್ಕಪ್ಪನ ಹೆಗಲ ಮೇಲೆ ಕುಂತಿದ್ದು…ಎಲ್ಲವೂ ಈಗತಾನೇ ಅರಳಿದ ಹೂವಿನ ಘಮಲು. ಮತ್ತೆ ಅದೇ ಗುಡಿಸಲಿ ಮುಂದೆ ಯುವ ದಂಪತಿ…

    ಯುವರಾಜ್‌ಕುಮಾರ್, ಶ್ರೀದೇವಿ…ಇಬ್ಬರೂ ಬಿಡುವು ಮಾಡಿಕೊಂಡು ಗಾಜನೂರಿಗೆ ಹೋಗಿದ್ದಾರೆ. ಊರಿನ ತುಂಬಾ ಸುತ್ತಾಡಿದ್ದಾರೆ. ಬಾಲ್ಯದ ನೆನಪುಗಳಿಗೆ ಮರು ಜೀವ ನೀಡಿದ್ದಾರೆ. ತಾತನ ಜೊತೆ ಬಂದಿದ್ದು ಸಂಭ್ರಮ.ಅಪ್ಪು ಜೊತೆ ಇರಲಾರದ್ದು ತೀರಲಾಗದ ಸಂಕಟ. ಎರಡನ್ನೂ ಒಟ್ಟೊಟ್ಟಿಗೇ ಅನುಭವಿಸುತ್ತಾ. ಆ ಇಬ್ಬರು ದೇವರ ಆಶೀರ್ವಾದ ಬೇಡಿದ್ದಾರೆ. ನಿಮ್ಮ ಹೆಸರನ್ನು ಉಳಿಸಿ ಬೆಳೆಸುವ ಶಕ್ತಿ ಕೊಡು ಎಂದು ಕೈ ಮುಗಿದಿದ್ದಾರೆ. ಕಾರಣ ಯುವ ಸಿನಿಮಾ ಕೆಲವೇ ತಿಂಗಳಲ್ಲಿ ಮೆರವಣಿಗೆ ಹೊರಡಲಿದೆ. ಅಪ್ಪು ಬಿಟ್ಟು ಹೋದ ಜಾಗವನ್ನು ತುಂಬಬೇಕಾದ ಅಗತ್ಯ ಹಾಗೂ ಜವಾಬ್ದಾರಿ ಯುವ ಹೆಗಲ ಮೇಲಿದೆ. ದೊಡ್ಮನೆ ಬಾವುಟ ಹಾರಿಸುವ ಶಪಥ ಬಾಕಿ ಇದೆ.

    ‘ಯುವ’ (Yuva Kannada Film) ಚಿತ್ರ ಈಗಾಗಲೇ ಶೇಕಡಾ ಐವತ್ತರಷ್ಟು ಮುಗಿದಿದೆ. ಸಂತೋಷ್ ಆನಂದ್‌ರಾಮ್ (Santhosh Anandram) ಕ್ಯಾಮೆರಾ ಹಿಂದೆ ನಿಂತು…ಯುವ ರಾಜನ ಕಿರೀಟಕ್ಕೆ ಮುತ್ತಿನ ಹರಳನ್ನು ಪೋಣಿಸುತ್ತಿದ್ದಾರೆ. ಯುವ ಕೂಡ ಅಷ್ಟೇ ನಿಯತ್ತಿನಿಂದ ಬಣ್ಣ ಹಚ್ಚುತ್ತಿದ್ದಾರೆ. ಹೊಂಬಾಳೆ ಸಂಸ್ಥೆ (Hombale Films) ಖಜಾನೆ ತೆಗೆದು ಕುಳಿತಿದೆ. ಎಲ್ಲರ ಕಣ್ಣಲ್ಲಿ ಮನಸಲ್ಲಿ ಒಂದೇ ಒಂದು ಆಸೆ ಒಂದೇ ಒಂದು ಗುರಿ ಅದೇ ಯುವರಾಜನ ಮಹಾ ಜಾತ್ರೆ. ಕನ್ನಡಿಗರು ಮತ್ತೆ ದೊಡ್ಮನೆಯ ಕುಡಿಯನ್ನು ಹೊತ್ತು ಮೆರೆಸಬೇಕು. ಅಪ್ಪು ನೋವನ್ನು ಮರೆಸಬೇಕು. ಇದಷ್ಟೇ ಕಾಳಜಿ ಕಕ್ಕುಲಾತಿ. ಅಣ್ಣಾವ್ರ ಮೊಮ್ಮಗ, ಅಪ್ಪು ಚಿಕ್ಕಪ್ಪನ ಮಗನಿಗೆ ನವಿಲು ಗರಿ ಬೀಸಣಿಕೆ ಬೀಸದಿರುತ್ತಾರಾ ಕನ್ನಡಿಗರು?

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೊಚ್ಚಲ ಸಿನಿಮಾ ಟೈಟಲ್ ಅನೌನ್ಸ್‌ಮೆಂಟ್‌ಗೆ ಕೌಂಟ್‌ಡೌನ್: ಯುವ ರಾಜ್‌ಕುಮಾರ್ ಟೆಂಪಲ್ ರನ್

    ಚೊಚ್ಚಲ ಸಿನಿಮಾ ಟೈಟಲ್ ಅನೌನ್ಸ್‌ಮೆಂಟ್‌ಗೆ ಕೌಂಟ್‌ಡೌನ್: ಯುವ ರಾಜ್‌ಕುಮಾರ್ ಟೆಂಪಲ್ ರನ್

    ಡಾ.ರಾಜ್‌ಕುಮಾರ್ (Rajkumar) ಕುಟುಂಬದ ಕುಡಿ ಯುವ ರಾಜ್‌ಕುಮಾರ್ (Yuva Rajkumar) ಸ್ಯಾಂಡಲ್‌ವುಡ್‌ಗೆ (Sandalwood) ಎಂಟ್ರಿ ಕೊಡಲು ವೇದಿಕೆ ಸಜ್ಜಾಗಿದೆ. (ಫೆ.3) ಶುಕ್ರವಾರ ಸಂಜೆ ಟೈಟಲ್ ರಿವೀಲ್ ಆಗುವ ಮುಂಚೆಯೇ ಶೇಷಾದ್ರಿಪುರಂನಲ್ಲಿರುವ ಸುಬ್ರಹ್ಮಣ್ಯ ಸ್ವಾಮಿಗೆ (Subramanya Temple) ಯುವ ಮತ್ತು ಚಿತ್ರತಂಡ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಮುಂದಿನ ಉತ್ತರಾಧಿಕಾರಿ ಯುವನ ಸಿನಿಮಾ ಎಂಟ್ರಿಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಂತೋಷ್ ಆನಂದ್ ರಾಮ್- ಯುವ ಕಾಂಬಿನೇಷನ್ ಚಿತ್ರಕ್ಕೆ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡ್ತಿದೆ. ಇದನ್ನೂ ಓದಿ: ಫಸ್ಟ್ ನೈಟ್‌ನ ಬೆಡ್‌ರೂಮ್ ಫೋಟೋ ಹಂಚಿಕೊಂಡ ನಟಿ ಸ್ವರಾ ಭಾಸ್ಕರ್

    ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾಗೆ ಚಾಲನೆ ಸಿಗುವ ಮುನ್ನ ಶೇಷಾದ್ರಿಪುರಂನಲ್ಲಿರುವ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಯುವ ಜೊತೆ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌, ವಿಜಯ್‌ ಕಿರಗಂದೂರು ಸಾಥ್‌ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿರುವ ಯುವ ನಟಿಸಲಿರುವ ಚೊಚ್ಚಲ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಇನ್ನೂ ಯುವ ನಟನೆಯ ಚೊಚ್ಚಲ ಸಿನಿಮಾಗೆ `ಜ್ವಾಲಾಮುಖಿ’ ಅಥವಾ `ಅಶ್ವಮೇಧ’ ಟೈಟಲ್ ಇಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಸದ್ಯದಲ್ಲೇ ಉತ್ತರ ಸಿಗಲಿದೆ.

  • ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾದ ಡಾ. ರಾಜ್  ಕುಟುಂಬದ ಸದಸ್ಯರು

    ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾದ ಡಾ. ರಾಜ್ ಕುಟುಂಬದ ಸದಸ್ಯರು

    ಡಾ.ರಾಜ್ ಕುಮಾರ್ ಕುಟುಂಬದ ಸದಸ್ಯರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಅವರ ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿಯಾದ ಡಾ.ರಾಜ್ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋ ಜಾಗದಲ್ಲಿ ತಮ್ಮ ಕುಟುಂಬದ ಮೂವರ ಸಮಾಧಿಗಳು ಇರುವುದರಿಂದ ಅವುಗಳ ಅಭಿವೃದ್ಧಿ ಕುರಿತು ಚರ್ಚೆ ಮಾಡಿದ್ದಾರೆ.

    ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಸಮಾಧಿಗಳು ಕಂಠೀರವ ಸ್ಟುಡಿಯೋ ಒಂದೇ ಭಾಗದಲ್ಲಿವೆ. ಅಲ್ಲದೇ, ಈಗಾಗಲೇ ಡಾ.ರಾಜ್ ಕುಮಾರ್ ಪುಣ್ಯಭೂಮಿ ಟ್ರಸ್ಟ್ ಕೂಡ ಇದೆ. ಡಾ.ರಾಜ್ ಕುಮಾರ್ ಸ್ಮಾರಕಕ್ಕೆ ಸಂಬಂಧಿಸಿದಂತೆ ಹಲವು ಕೆಲಸಗಳೂ ನಡೆದಿವೆ. ಪಾರ್ವತಮ್ಮ ರಾಜ್ ಕುಮಾರ್ ಮತ್ತು ಪುನೀತ್ ಅವರ ಸಮಾಧಿ ಕೂಡ ಅದೇ ಸ್ಥಳದಲ್ಲೇ ಇರುವುದರಿಂದ, ಆ ಜಾಗವನ್ನು ಅಭಿವೃದ್ಧಿ ಪಡಿಸಲು ಡಾ.ರಾಜ್ ಕುಟುಂಬ ಯೋಜನೆಯೊಂದನ್ನು ಸಿದ್ಧಪಡಿಸಿದೆ. ಅದನ್ನೇ ಸಿಎಂ ಜೊತೆ ಚರ್ಚಿಸಲು ಕುಟುಂಬ ಭೇಟಿಯಾಗಿದೆ. ಇದನ್ನೂ ಓದಿ:ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್

    ಡಾ.ರಾಜ್ ಪುತ್ರ ನಟ, ರಾಘವೇಂದ್ರ ರಾಜಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನಿತ್ ರಾಜಕುಮಾರ ಮತ್ತು ನಟ ಯುವ ರಾಜಕುಮಾರ್ ಸೇರಿದಂತೆ ಹಲವು ಸದಸ್ಯರು ಸಿಎಂ ಮನೆಗೆ ಆಗಮಿಸಿದ್ದರು. ರಾಜ್ ಕುಟುಂಬದಿಂದ ಸಿದ್ದಪಡಿಸಿದ ಪಿಪಿಟಿ ವೀಕ್ಷಣೆ ಮಾಡಿದ ಸಿಎಂ, PWD ಇಲಾಖೆಯಿಂದ ಯೋಜನೆ ಅಂದಾಜು ಮೊತ್ತ ತರಿಸಲು ಸೂಚನೆ ನೀಡಿದ್ದಾರೆ. PwD ಇಲಾಖೆಯಿಂದ ಯೋಜನೆಯ  ರೂಪರೇಷೆ ತಯಾರಿಸುವುದಾಗಿ ಸಿಎಂ ಭರವಸೆ ಬಳಿಕ ಮತ್ತೊಂದು ಸುತ್ತಿನೆ ಸಭೆ ಮಾಡೋಣ ಎಂದಿದ್ದಾರಂತೆ ಬೊಮ್ಮಾಯಿ‌.

    Live Tv
    [brid partner=56869869 player=32851 video=960834 autoplay=true]

  • ಪುನೀತ್ ಅಭಿಮಾನಿಗಳ ಕನಸು ಈಡೇರಿಸಿದ ಸಂತೋಷ್ ಆನಂದ್ ರಾಮ್: ಯುವರಾಜ ಸಿನಿಮಾ ಫಿಕ್ಸ್

    ಪುನೀತ್ ಅಭಿಮಾನಿಗಳ ಕನಸು ಈಡೇರಿಸಿದ ಸಂತೋಷ್ ಆನಂದ್ ರಾಮ್: ಯುವರಾಜ ಸಿನಿಮಾ ಫಿಕ್ಸ್

    ಪುನೀತ್ ರಾಜ್ ಕುಮಾರ್ ನಿಧನದ ನಂತರ ಅವರು ಮಾಡಬೇಕಿದ್ದ ಹಲವು ಚಿತ್ರಗಳು ಹಾಗೆಯೇ ನಿಂತು ಹೋಗಲಿವೆ ಎನ್ನಲಾಗಿತ್ತು. ಅಲ್ಲದೇ, ಸಂತೋಷ್ ಆನಂದ್ ರಾಮ್ ಜತೆ ಅಪ್ಪು ಮಾಡಬೇಕಿದ್ದ ನಿರೀಕ್ಷಿತ ಚಿತ್ರದ ಬಗ್ಗೆಯೂ ಸಾಕಷ್ಟು ಚರ್ಚೆ ಆಗಿತ್ತು. ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಮನವಿಯೊಂದನ್ನು ಮಾಡಿದ್ದರು. ನೀವು ಪುನೀತ್ ರಾಜ್ ಕುಮಾರ್ ಅವರಿಗೆ ಮಾಡಬೇಕಿದ್ದ ಚಿತ್ರವನ್ನು ಯುವರಾಜ ಕುಮಾರ್ ಗಾಗಿ ಮಾಡಬೇಕೆ ಎನ್ನುವುದು ಅವರೆಲ್ಲರ ಒತ್ತಾಸೆಯಾಗಿತ್ತು. ಇದನ್ನೂ ಓದಿ : ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪುರಸ್ಕಾರ

    ಪುನೀತ್ ಅವರ ಅಭಿಮಾನಿಗಳ ಆಸೆಯನ್ನು ಕೊನೆಗೂ ಸಂತೋಷ್ ಆನಂದ್ ರಾಮ್ ಈಡೇರಿಸಿದ್ದಾರೆ ಎನ್ನಲಾಗುತ್ತಿದೆ. ತಾವು ಅಪ್ಪು ಅವರಿಗಾಗಿ ಮಾಡಿಕೊಂಡಿದ್ದ ಕಥೆಯನ್ನು ಕೊಂಚ ಬದಲಾಯಿಸಿಕೊಂಡು ಯುವರಾಜ್ ಕುಮಾರ್ ಗಾಗಿ ಸಿನಿಮಾ ಮಾಡುತ್ತಿದ್ದಾರಂತೆ. ಈ ಸಿನಿಮಾದ ಅಧಿಕೃತ ಮಾಹಿತಿ ಏ.24 ರಂದು ಹೊರ ಬೀಳಲಿದೆ. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ

    ಏ.24 ಡಾ.ರಾಜ್ ಕುಮಾರ್ ಜನ್ಮದಿನ. ಅಂದು ಸಂತೋಷ್ ಆನಂದ್ ರಾಮ್ ಮತ್ತು ಯುವರಾಜ್ ಕುಮಾರ್ ಕಾಂಬಿನೇಷನ್ ನ ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಚಿತ್ರತಂಡ ಹಂಚಿಕೊಳ್ಳಲಿದೆಯಂತೆ. ಅಂದುಕೊಂಡಂತೆ ಆಗಿದ್ದರೆ, ಯುವರಾಜ್ ಕುಮಾರ್ ರ ಚೊಚ್ಚಲ ಸಿನಿಮಾ ‘ಯುವ ರಣಧೀರ ಕಂಠೀರವ’  ಇಷ್ಟೊತ್ತಿಗೆ ಸಿದ್ಧವಾಗಬೇಕಿತ್ತು. ಅದೇ ಯುವ ರಾಜ್ ಕುಮಾರ್ ಅವರ ಮೊದಲ ಸಿನಿಮಾನೂ ಆಗಬೇಕಿತ್ತು. ಆದರೆ, ಸದ್ಯ ಆ ಸಿನಿಮಾದ ಕೆಲಸಗಳನ್ನು ನಿಲ್ಲಿಸಲಾಗಿದೆಯಂತೆ. ಈ ಕಾರಣದಿಂದಾಗಿಯೇ ಸಂತೋಷ್ ಆನಂದ್ ರಾಮ್ ಅವರ ಸಿನಿಮಾ ಯುವ ಅವರಿಗೆ ಚೊಚ್ಚಲು ಚಿತ್ರವಾಗಲಿದೆ. ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ: ವಕ್ಫ್ ಮಂಡಳಿಯ ಸುತ್ತೋಲೆಯಲ್ಲಿ ಏನಿದೆ? ಸುಪ್ರೀಂ ಕೋರ್ಟ್ ಹೇಳಿದ್ದೇನು?

     

    ಸಂತೋಷ್ ಅವರ ಈ ಹಿಂದಿನ ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೂ ಬಂಡವಾಳ ಹೂಡಲಿದೆ. ಅದ್ಧೂರಿಯಾಗಿಯೇ ಯುವ ರಾಜ್ ಕುಮಾರ್ ಅವರನ್ನು ಲಾಂಚ್ ಮಾಡುವ ಪ್ಲ್ಯಾನ್ ಹೊಂಬಾಳೆಯವರದ್ದು. ಈ ಚಿತ್ರಕ್ಕಾಗಿ ಆಗಲೇ ಕೆಲವು ಕೆಲಸಗಳು ನಡೆದಿದ್ದು, ಇಪ್ಪತ್ತು ದಿನ ಕಳೆದರೆ, ಸ್ಪಷ್ಟ ಮಾಹಿತಿ ಸಿಗಲಿದೆ.

  • 32ನೇ ವಸಂತಕ್ಕೆ ಕಾಲಿಟ್ಟ ವಿನಯ್ ರಾಜ್ ಕುಮಾರ್

    32ನೇ ವಸಂತಕ್ಕೆ ಕಾಲಿಟ್ಟ ವಿನಯ್ ರಾಜ್ ಕುಮಾರ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ವಿನಯ್ ರಾಜ್​ಕುಮಾರ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ವರನಟ ಡಾ. ರಾಜ್ ಕುಮಾರ್ ಪುತ್ರ ರಾಘವೇಂದ್ರ ರಾಜ್‍ರವರ ಮುದ್ದಾದ ಮಗ ವಿನಯ್ ರಾಜ್ ಕುಮಾರ್ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಗನ ಹುಟ್ಟುಹಬ್ಬಕ್ಕೆ ರಾಘವೇಂದ್ರ ರಾಜ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.

    ರಾಘವೇಂದ್ರ ರಾಜ್‌ಕುಮಾರ್‌ರವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಡಾ ರಾಜ್ ಕುಮಾರ್ ಹಾಡಿರುವ ಚಿನ್ನ ಎಂದು ನಗುತ್ತಿರು ನನ್ನ ಕಂದ ಬಿಡದಿರು ಎಂಬ ಹಾಡನ ಜೊತೆಗೆ ಪತ್ನಿ ಹಾಗೂ ಮಕ್ಕಳ ಜೊತೆಗಿರುವ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಹ್ಯಾಪಿ ಬರ್ತ್ ಡೇ ವಿನಯ್ ಮಗನೇ ಎಂದು ಬರೆದುಕೊಂಡಿದ್ದಾರೆ.

    ಅಣ್ಣನ ಹುಟ್ಟು ಹಬ್ಬದ ಪ್ರಯುಕ್ತ ಸಹೋದರ ಯುವರಾಜ್ ಕುಮಾರ್ ಕೂಡ, ಪ್ರೀತಿಯ ಅಣ್ಣನಿಗೆ ಶುಭಾಶಯ ತಿಳಿಸುವ ಮೂಲಕ ವಿನಯ್ ಜೊತೆಗಿರುವ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಪ್ರತಿವರ್ಷ ಅಭಿಮಾನಿಗಳೊಂದಿಗೆ ಬರ್ತ್‍ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದ ವಿನಯ್ ರಾಜ್ ಕುಮಾರ್ ಹುಟ್ಟುಹಬ್ಬದ ಆಚರಣೆಗೆ ಈ ವರ್ಷ ಕೊರೊನಾ ಬ್ರೇಕ್ ಹಾಕಿದೆ. ಆದರೂ ಅಭಿಮಾನಿಗಳು ಹಾಗೂ ಸ್ನೇಹಿತರು ವಿನಯ್‍ಗೆ ಸೋಶಿಯಲ್ ಮೀಡಿಯಾದ ಮೂಲಕ ವಿಶ್ ಮಾಡುತ್ತಿದ್ದಾರೆ. ಸಿದ್ಧಾರ್ಥ್ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ ವಿನಯ್ ರಾಜ್ ಕುಮಾರ್ ಕೈಯಲ್ಲಿ ಸದ್ಯ ಸಾಲು ಸಾಲು ಸಿನಿಮಾಗಳಿದೆ.