Tag: ಯುವ ನಿಧಿ

  • ಯುವನಿಧಿ ಯೋಜನೆ ಅಡಿ 10 ಲಕ್ಷ ಫಲಾನುಭವಿಗಳಿಗೆ ಸಹಾಯದ ಗುರಿ- ಶರಣ ಪ್ರಕಾಶ್ ಪಾಟೀಲ್

    ಯುವನಿಧಿ ಯೋಜನೆ ಅಡಿ 10 ಲಕ್ಷ ಫಲಾನುಭವಿಗಳಿಗೆ ಸಹಾಯದ ಗುರಿ- ಶರಣ ಪ್ರಕಾಶ್ ಪಾಟೀಲ್

    ಬೆಂಗಳೂರು : 10 ಲಕ್ಷ ಅಭ್ಯರ್ಥಿಗಳಿಗೆ ಯುವನಿಧಿ (Yuva Nidhi) ‌ಯೋಜನೆ ಅಡಿ ಸಹಾಯ ಮಾಡುವುದು ಸರ್ಕಾರದ ಗುರಿ ಎಂದು ಸಚಿವ ಶರಣ ಪ್ರಕಾಶ್ ಪಾಟೀಲ್ (Sharan Prakash Patil) ತಿಳಿಸಿದ್ದಾರೆ.

    ವಿಧಾನ ಪರಿಷತ್ ‌ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಡಿ.ಎಸ್. ಅರುಣ್ ಯುವನಿಧಿ ಯೋಜನೆ ಬಗ್ಗೆ ಪ್ರಶ್ನೆ ಕೇಳಿದ್ರು.

    ಡಿ.ಎಸ್. ಅರುಣ್ ಮಾತಾಡಿ ಯುವನಿಧಿ ಯೋಜನೆ ಅಡಿ ಐದೂವರೆ ಲಕ್ಷ ಅಭ್ಯರ್ಥಿಗಳಿಗೆ 450 ಕೋಟಿ ಹಣ ಖರ್ಚು ಮಾಡೋದಾಗಿ ಸರ್ಕಾರ ಹೇಳಿತ್ತು. ಆದರೆ 5.5 ಲಕ್ಷ ವಿದ್ಯಾರ್ಥಿಗಳು ಪೈಕಿ 2.5 ಲಕ್ಷ ಜನ ಮಾತ್ರ ಅರ್ಜಿ ಹಾಕಿದ್ದಾರೆ. ಅದರಲ್ಲೂ 1.74 ಲಕ್ಷ ಅರ್ಜಿಗಳಿಗೆ ಮಾತ್ರ ಹಣ ಹಾಕಲಾಗಿದೆ. ಯುವನಿಧಗೆ ಅರ್ಜಿ ಹಾಕೋದು ಹೇಗೆ ಅಂತ ಅಭ್ಯರ್ಥಿಗಳಿಗೆ ಗೊತ್ತಿಲ್ಲ. ಯುವನಿಧಿ ಯೋಜನೆ ಅಡಿ ಕೊಟ್ಟ ಹಣ ಸರಿಯಾಗಿ ಉಪಯೋಗ ಆಗ್ತಿದೆಯಾ ಅಂತ ಮೌಲ್ಯಮಾಪನ ಆಗಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಯೋಜನೆ ಬಗ್ಗೆ ಮಾಹಿತಿ ಇಲ್ಲ.ಅರ್ಜಿ ತುಂಬೋವಾಗ ಸಮಸ್ಯೆ ಅಂತ ಬರ್ತಿದೆ. ಅನೇಕ ವಿವಿಗಳಲ್ಲಿ ಅಂಕಪಟ್ಟಿ ಕೊಡ್ತಿಲ್ಲ. ಅಂಕಪಟ್ಟಿ ಇಲ್ಲದೆ ಹೋದ್ರೆ ಯೋಜನೆಗೆ ಅರ್ಜಿ ಹಾಕಲು ಆಗೊಲ್ಲ. ಈ ಬಗ್ಗೆ ಕ್ರಮವಾಗಬೇಕು ಅಂತ ಒತ್ತಾಯ ಮಾಡಿದರು. ಇದನ್ನೂ ಓದಿ: ಕೇವಲ 1 ಪಂದ್ಯವಾಡಿ 869 ಕೋಟಿ ನಷ್ಟ – ಭಾರೀ ಸಂಕಷ್ಟದಲ್ಲಿ ಪಾಕ್‌ ಬೋರ್ಡ್‌

    ಇದಕ್ಕೆ ಸಚಿವ ಶರಣು ಪ್ರಕಾಶ್ ಪಾಟೀಲ್ ಉತ್ತರ ನೀಡಿ, ಯುವನಿಧಿ ಯೋಜನೆ ಅಡಿ ಈವರೆಗೆ 2,62,20,7 ಅಭ್ಯರ್ಥಿಗಳು ನೋಂದಣಿ ಮಾಡಿದ್ದಾರೆ. ಇದರಲ್ಲಿ 1,74,170 ಫಲಾನುಭವಿಗಳಗೆ ಯುವನಿಧಿ ಹಣ ಹಾಕಲಾಗಿದೆ. 16,648 ಫಲಾನುಭವಿಗಳಿಗೆ ಹಣ ಹಾಕೋದು ಬಾಕಿ ಇದೆ. ಎಷ್ಟೇ ಜನ ನೋಂದಣಿ ಆದರು ನಾವು ಅವರಿಗೆ ಹಣ ಕೊಡ್ತೀವಿ. ಯುವನಿಧಿ ಈಗ ಪ್ರಾರಂಭಿಕ ಹಂತದಲ್ಲಿ ಇದೆ. ನಮ್ಮ ಟಾರ್ಗೆಟ್ 10 ಲಕ್ಷ ಅಭ್ಯರ್ಥಿಗಳಿಗೆ ‌ಕೊಡಬೇಕು ಅಂತ ಇದೆ. ಅರ್ಜಿ ಹಾಕೋಕೆ ಮುಕ್ತ ಅವಕಾಶ ಇದ್ದು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಹಾಕಬಹುದು ಅಂತ ತಿಳಿಸಿದರು.

    1,74,170 ಅಭ್ಯರ್ಥಿಗಳಿಗೆ ಯುವನಿಧಿ ಯೋಜನೆ ಅಡಿ ಹಣ ಹಾಕಲಾಗ್ತಿದೆ. ಡಿಗ್ರಿ ಮುಗಿಸಿ 6 ತಿಂಗಳು ಆಗಬೇಕು. ಆದಾದ ನಂತರ ಹಣ ಪಾವತಿ ಆಗಲಿದೆ. ಯುವನಿಧಿ ಯೋಜನೆ ಅಡಿ ಕೊಡ್ತಿರೋ ಹಣ ಸರಿಯಾಗಿ ಬಳಕೆ ಆಗ್ತಿದೆಯಾ ಅಂತ ಮೌಲ್ಯಮಾಪನ ಮಾಡಲಾಗ್ತಿದೆ. ಮೌಲ್ಯಮಾಪನಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಅಭ್ಯರ್ಥಿಗಳು ಹಣ ಬೇಕಾ ಬೇಡಾ ಅಂತ ಮಾಹಿತಿ ಕೊಡಲು ಈ ಹಿಂದೆ ಪ್ರತಿ ತಿಂಗಳು ಮಾಹಿತಿ ಕೊಡಬೇಕಾಗಿತ್ತು. ಈ ತಿಂಗಳಿಂದ 3 ತಿಂಗಳಿಗೊಮ್ಮೆ ಅಭ್ಯರ್ಥಿಗಳು ಮಾಹಿತಿ ‌ಅಪ್ ಲೋಡ್ ಮಾಡಲು ಅವಕಾಶ ಕೊಡಲಾಗ್ತಿದೆ. ನಮ್ಮ ಸರ್ಕಾರದ ಬದ್ದತೆ ಇದೆ. ನಾವು ಕೊಟ್ಟಂತೆ ಯುವನಿಧಿ ಯೋಜನೆ ಅನುಷ್ಠಾನ ‌ಮಾಡ್ತೀವಿ ಅಂತ ತಿಳಿಸಿದರು.

  • ಪದವಿ ಪಡೆದರೆ ಯುವನಿಧಿ ಕೊಡ್ಬೇಕು, ಅದಕ್ಕೆ ಸರ್ಕಾರ 8 ವಿವಿಗಳು ಮುಚ್ಚುತ್ತಿದೆ: ಅಶೋಕ್‌

    ಪದವಿ ಪಡೆದರೆ ಯುವನಿಧಿ ಕೊಡ್ಬೇಕು, ಅದಕ್ಕೆ ಸರ್ಕಾರ 8 ವಿವಿಗಳು ಮುಚ್ಚುತ್ತಿದೆ: ಅಶೋಕ್‌

    – ಗ್ಯಾರಂಟಿ ಸರ್ಕಾರದಿಂದ ವಿವಿಗಳನ್ನು ಮುಚ್ಚುವ ಹೊಸ ಭಾಗ್ಯ

    ಬೆಂಗಳೂರು: ಯುವಕರು ಪದವಿ ಪಡೆದರೆ ಯುವನಿಧಿ (Yuva Nidhi) ಕೊಡಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್‌ ಸರ್ಕಾರ (Congress Government) 8 ವಿಶ್ವವಿದ್ಯಾಲಯಗಳನ್ನು (University) ಮುಚ್ಚಲು ಮುಂದಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ (R Ashok) ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಭಾರೀ ಖತರ್ನಾಕ್‌ಗಳು. ಮೊದಲು ಮಂಡ್ಯ ವಿವಿ ಮುಚ್ಚುತ್ತಿದ್ದಾರೆ. ಮಂಡ್ಯ ಗಂಡು ನಾಡು. ಅಲ್ಲೇ ವಿವಿಗೆ ಕೊಡಲಿ ಪೆಟ್ಟು ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ವಿವಿಗಳನ್ನು ಮುಚ್ಚುವ ಹೊಸ ಭಾಗ್ಯ ಕೊಡುತ್ತಿದೆ. ಮಾರಿ ಕಣ್ಣು ಹೋರಿ ಮೇಲೆ ಅನ್ನುವಂತೆ ಸಿದ್ದರಾಮಯ್ಯ ಕಣ್ಣು ವಿವಿಗಳ ಮೇಲೆ ಬಿದ್ದಿದೆ. 9 ವಿವಿಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿ ಸ್ಥಾಪಿಸಿದ್ದ 9 ವಿಶ್ವವಿದ್ಯಾಲಯಗಳಿಗೆ ಬೀಗ 

    ಕೆಆರ್‌ಎಸ್‌ ಪಕ್ಕ ಅಮ್ಯೂಸ್ಮೆಂಟ್ ಪಾರ್ಕ್ ಮಾಡುತ್ತಾರಂತೆ. ಇದಕ್ಕೆ 1000 ಸಾವಿರ ಕೋಟಿ ರೂ. ಕೊಡುತ್ತಿದ್ದಾರೆ. ಜಲಕ್ರೀಡೆಗೆ ಹಣ ನೀಡುತ್ತಾರೆ ಆದರೆ ವಿಶ್ವವಿದ್ಯಾಲಯ ಮುಚ್ಚಿಸುತ್ತಾರೆ. ಈ ಕಾಂಗ್ರೆಸ್‌ನವರು ಅಪರೂಪದ ಪೀಸ್‌ಗಳು ಎಂದು ವಾಗ್ದಾಳಿ ನಡೆಸಿದರು.

    ಉನ್ನತ ಶಿಕ್ಷಣ ವಲಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಉಪನ್ಯಾಸಕರ ನೇಮಕ ಆಗಿಲ್ಲ, ಅತಿಥಿ ಉಪನ್ಯಾಸಕರಿಗೆ ವೇತನ ಇಲ್ಲ. ಶಾಲೆ ಕಾಲೇಜು ಕಟ್ಟಡಗಳ ದುರಸ್ತಿ ಇಲ್ಲ ಪಠ್ಯಪುಸ್ತಕ, ಸಮಸವಸ್ತ್ರ ಕೊಡಲು ಕಾಸಿಲ್ಲ, ಮನಸಿಲ್ಲ. ಕೆಪಿಎಸ್‌ಸಿಯಲ್ಲಿ ತಪ್ಪಿಲ್ಲದೇ ಸರಿಯಾಗಿರುವ ಪ್ರಶ್ನೆ ಪತ್ರಿಕೆ ಕೊಡುವ ಯೋಗ್ಯತೆ ಇಲ್ಲ. ಈಗ ನಾಲ್ಕು ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಈ ಬಜೆಟ್‌ನಲ್ಲಿ ವಿಶ್ವವಿದ್ಯಾಲಯಗಳಿಗೆ ಕೇವಲ 342 ಕೋಟಿ ರೂ. ನೀಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

    ವಿವಿ ಮುಚ್ಚುತ್ತೇವೆ ಎನ್ನುವವರು ವೈನ್ ಸ್ಟೋರ್, ಬಾರ್ ಗಳನ್ನು ಮುಚ್ಚಿ ನೊಡೋಣ. ಇದೇ ಕಾಂಗ್ರೆಸ್ ನೀತಿ. ನಮ್ಮ ವಿದ್ಯಾರ್ಥಿಗಳು ಅಧ್ಯಯನಕ್ಕೆ ಪರ ರಾಜ್ಯಕ್ಕೆ ಹೋಗಬೇಕೇ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದರು.

     

  • ಪ್ರತಿ ತಿಂಗಳು ಎಷ್ಟು ಮಂದಿಗೆ ಯುವನಿಧಿ ಹಣ ಸೇರುತ್ತಿದೆ – ಲೆಕ್ಕ ಕೊಟ್ಟ ಸರ್ಕಾರ

    ಪ್ರತಿ ತಿಂಗಳು ಎಷ್ಟು ಮಂದಿಗೆ ಯುವನಿಧಿ ಹಣ ಸೇರುತ್ತಿದೆ – ಲೆಕ್ಕ ಕೊಟ್ಟ ಸರ್ಕಾರ

    ಬೆಳಗಾವಿ: ಪ್ರತಿ ತಿಂಗಳು ಎಷ್ಟು ಮಂದಿ ಪದವೀಧರರ ಕೈಗೆ ಯುವನಿಧಿ (Yuva Nidhi) ಹಣ ಸೇರುತ್ತಿದೆ ಎಂಬ ಮಾಹಿತಿಯನ್ನು ಸಚಿವ ಶರಣ ಪ್ರಕಾಶ್ ಪಾಟೀಲ್ (Sharan Prakash Patil) ಪರಿಷತ್‌ನಲ್ಲಿ ತಿಳಿಸಿದ್ದಾರೆ.

    ವಿಧಾನ ಪರಿಷತ್ (Vidhana Parishad) ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ನವೀನ್ ಅವರು ರಾಜ್ಯದಲ್ಲಿ ಕಳೆದ 2 ವರ್ಷಗಳಲ್ಲಿ 8 ಲಕ್ಷ ವಿದ್ಯಾರ್ಥಿಗಳು ಪದವಿ ಮುಗಿಸಿದ್ದಾರೆ. ಆದರೆ ಯುವನಿಧಿಗೆ ನೋಂದಣಿ ಆಗಿರೋದು ಕಡಿಮೆ ಆಗಿದೆ ಯಾಕೆ? ಯುವನಿಧಿಗೆ ಪ್ರತಿ ತಿಂಗಳು ಹಣ ಕೊಡ್ತಿದ್ದೀರಾ? ಎಷ್ಟು ಹಣ ಕೊಡ್ತಿದ್ದೀರಾ ಅಂತ ಪ್ರಶ್ನೆ ಮಾಡಿದರು.

     

    ಇದಕ್ಕೆ ಸಚಿವ ಶರಣ ಪ್ರಕಾಶ್ ಪಾಟೀಲ್, ಈವರೆಗೆ 1,81,699 ಪದವೀಧರು ಯುವನಿಧಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರ ಪೈಕಿ 1,45,978 ಪದವೀಧರಿಗೆ ಹಣ ಕೊಡಲಾಗಿದೆ ಎಂದು ಉತ್ತರಿಸಿದರು. ಇದನ್ನೂ ಓದಿ: ಮೊದಲ ದಿನವೇ ಬಿಜೆಪಿ ಶಾಸಕರಲ್ಲಿ ಸಮನ್ವಯದ ಕೊರತೆ

    ನಮ್ಮ ಗ್ಯಾರಂಟಿಯಲ್ಲಿ 2023-24 ರ ಅವಧಿಯಲ್ಲಿ ವಿದ್ಯಾರ್ಥಿಗಳು ಪದವಿ ಮುಗಿಸಿರಬೇಕು. ಉದ್ಯೋಗ ಸಿಗದೇ 6 ತಿಂಗಳು ಆಗಿದ್ದವರಿಗೆ ಮಾತ್ರ ಈ ಯೋಜನೆ ಅನ್ವಯ ಅಗುತ್ತದೆ. ಯುವನಿಧಿಗೆ ಅವರೇ ಅರ್ಜಿ ಹಾಕಬೇಕು. ಅರ್ಜಿ ಹಾಕಿದವರಿಗೆ ಯುವನಿಧಿ ಕೊಡುತ್ತಿದ್ದೇವೆ ಎಂದರು.

     1,81,669 ಪದವೀಧರ ಪೈಕಿ 1,45,978 ಪದವೀಧರಿಗೆ ಹಣ ಪಾವತಿ ಮಾಡಲಾಗಿದೆ. ಉಳಿದವರ ದಾಖಲೆ ಪರಿಶೀಲನೆ ಆಗಿಲ್ಲ. ಉಳಿದವರು ಉನ್ನತ ಶಿಕ್ಷಣಕ್ಕೆ ಹೋಗಿದ್ದಾರೆ. ಹೀಗಾಗಿ ಉಳಿದವರಿಗೆ ಹಣ ಹಾಕಿಲ್ಲ. ಪ್ರತಿ ತಿಂಗಳು ಯುವನಿಧಿ ಹಣ ಹೋಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅನುದಾನ ಕೊಟ್ಟವರ ಕಡೆ ನಾನು: ಕಾಂಗ್ರೆಸ್‌ ಪರ ಎಸ್‌ಟಿಎಸ್‌ ಬ್ಯಾಟಿಂಗ್‌

    ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಯವನಿಧಿಯನ್ನು ಪ್ರಕಟಿಸಲಾಗಿತ್ತು. ಪದವೀಧರರಿಗೆ ಪ್ರತಿತಿಂಗಳು 3,000 ರೂ. ಡಿಪ್ಲೋಮಾ ಪದವೀಧರರಿಗೆ 1,500 ರೂ. ನೀಡಲಾಗುವುದು ಎಂದು ಕಾಂಗ್ರೆಸ್‌ ಘೋಷಿಸಿತ್ತು.

  • ಕಮಲ ಉದುರಿ ಹೋಯ್ತು, ತೆನೆ ಹೊತ್ತ ಮಹಿಳೆ ತೆನೆ ಎಸೆದು ಓಡಿಯಾಯಿತು: ಡಿಕೆಶಿ ಕವನ ವಾಚನ

    ಕಮಲ ಉದುರಿ ಹೋಯ್ತು, ತೆನೆ ಹೊತ್ತ ಮಹಿಳೆ ತೆನೆ ಎಸೆದು ಓಡಿಯಾಯಿತು: ಡಿಕೆಶಿ ಕವನ ವಾಚನ

    ಬೆಂಗಳೂರು: ” ಐದು ಬೆರಳು ಸೇರಿ ಒಂದು ಮುಷ್ಟಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಅರಳಿದ ಕಮಲದ ಹೂವು ಇದನ್ನು ನೋಡಿ ಉದುರಿ ಹೋಯಿತು.
    ಐದು ಗ್ಯಾರಂಟಿ ನೋಡಿ ಮಹಿಳೆ ತಾನು ಹೊತ್ತ ತೆನೆಯ ಎಸೆದು ಹೋದಳು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಕರ್ನಾಟಕ ಸಮೃದ್ಧವಾಯಿತು. ಕರ್ನಾಟಕ ಪ್ರಬುದ್ಧವಾಯಿತು” – ಇದು ಯುವ ನಿಧಿ (Yuva Nidhi) ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ಬಿಜೆಪಿ, ಜೆಡಿಎಸ್‌ಗೆ ಟಾಂಗ್‌ ನೀಡಲು ಹೇಳಿದ ಕವನ.

    ನನಗೆ ಹೆಚ್ಚು ಖುಷಿ ಕೊಟ್ಟಿರುವ ಯೋಜನೆ ಇದಾಗಿದೆ. ಈ ಯೋಜನೆ ಮೂಲಕ ಕನಸಿನ ಕರ್ನಾಟಕದ ಆಸೆ ನನಗೂ ಸಿಎಂಗೂ ಇದೆ. ಈಗಿನ ಯುವಕರು ಅದೃಷ್ಟವಂತರು. ಯಾಕೆಂದರೆ ನನಗೂ ಸಿದ್ದರಾಮಯ್ಯ ಅವರಿಗೆ ಇಂತಹ ಭಾಗ್ಯ ಇರಲಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷ ಆದಾಗ ಮಹಿಳೆಯರು, ಯುವಕರ ಮೇಲೆ ನಂಬಿಕೆ ಇಡಬೇಕು ಅಂತ ಹೇಳಿದ್ದೆ ಎಂದರು.

    ಬಿಜೆಪಿ (BJP) 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದರೂ ಕೊಡಲಿಲ್ಲ. 15 ಲಕ್ಷ ರೂ. ಅಕೌಂಟ್‌ಗೆ ಹಾಕುತ್ತೇವೆ ಎಂದರೂ ಹಾಕಲಿಲ್ಲ. ಎಲ್ಲರ ಕುಟುಂಬಗಳ ನೆರವಿಗಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ನೀವು ಕೊಟ್ಟ ಅಧಿಕಾರದಿಂದ ಈ ಯೋಜನೆ ಜಾರಿ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರದ 5ನೇ ಗ್ಯಾರಂಟಿ‌ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ

    ಯುವಕ-ಯುವತಿಯರು ನೆನಪು ಇಟ್ಟುಕೊಳ್ಳಬೇಕು. ಯಾರು ಮನೆಯ ಜ್ಯೋತಿ ಬೆಳಗುತ್ತಾರೋ ಅವರನ್ನು ಮರೆಯಬಾರದು. ಇದು ನಿಮ್ಮ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ನೀವು ಕೊಟ್ಟ ಅಧಿಕಾರದ ಋಣ ತೀರಿಸಿದ್ದೇವೆ ಎಂದು ತಿಳಿಸಿದರು.

    ಮಹದೇಶ್ವರ ಬೆಟ್ಟಕ್ಕೆ ಯುವಕರು ಕೆಲಸ ಇಲ್ಲ ಅಂತ ಹೋಗುತ್ತಿದ್ದರು. ನಾವು ಇದಕ್ಕಾಗಿ ಈ ಯೋಜನೆ ಜಾರಿ ಮಾಡಿದ್ದೇವೆ. ನಿಮ್ಮ ಆಶೀರ್ವಾದ ನಿಮ್ಮ ಸರ್ಕಾರದ ಮೇಲೆ ಇರಬೇಕು. ಯಾರೂ ಕೂಡಾ ಯುವನಿಧಿ ಯೋಜನೆ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.