Tag: ಯುವ ಜೋಡಿ

  • ದುಷ್ಕರ್ಮಿಗಳಿಂದ ಯುವ ಜೋಡಿ ಮೇಲೆ ಹಲ್ಲೆ – ಯುವತಿ ಸ್ಥಳದಲ್ಲೇ ಸಾವು

    ದುಷ್ಕರ್ಮಿಗಳಿಂದ ಯುವ ಜೋಡಿ ಮೇಲೆ ಹಲ್ಲೆ – ಯುವತಿ ಸ್ಥಳದಲ್ಲೇ ಸಾವು

    ಹೈದರಾಬಾದ್: ಯುವ ಜೋಡಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಯುವತಿ ಸ್ಥಳದಲ್ಲೇ ಮೃತಪಟ್ಟು, ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ಗುಂಟುಪಲ್ಲಿಯ ಪಶ್ಚಿಮ ಗೋದಾವರಿಯಲ್ಲಿ ನಡೆದಿದೆ.

    ಶ್ರೀಧಾರಿಣಿ ಮೃತಪಟ್ಟ ಯುವತಿ. ನವೀನ್ ಗಂಭೀರವಾಗಿ ಗಾಯಗೊಂಡ ಯುವಕ. ನವೀನ್ ಮೂಲತಃ ಬೀಮಿಲಿ ಮಂಡಲ್‍ನವನಾಗಿದ್ದು, ಧಾರಿಣಿ ಉಂಗುತುರ್ ಮಂಡಲ್‍ನ ಎಂಎಂ ಪುರಂದವಳು. ಭಾನುವಾರ ಬೆಳಗ್ಗೆ 11.30ಕ್ಕೆ ನವೀನ್ ಹಾಗೂ ಧಾರಿಣಿ ಬುದ್ಧ ಸ್ಮಾರಕ ನೋಡಲು ಬೈಕಿನಲ್ಲಿ ತೆರಳಿದ್ದರು.

    ಸ್ಥಳೀಯರ ಹಾಗೂ ಪೊಲೀಸರ ಮಾಹಿತಿ ಪ್ರಕಾರ ಕಾಮವರ್ಪುಕೋಟ ಬಳಿಯಿರುವ ಬೌದ್ಧ ಅರಮಲ ಗುಹೆಯಲ್ಲಿ ಭಾನುವಾರ ಹೆಚ್ಚು ಮಂದಿ ಆಗಮಿಸುತ್ತಾರೆ. ಹಾಗಾಗಿ ಆ ಜಾಗದಲ್ಲಿರುವ ನಿರ್ಜನ ಪ್ರದೇಶಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಸತೀಶ್ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ನಿನ್ನೆ ಮಧ್ಯಾಹ್ನ ಸುಮಾರು 2.45ಕ್ಕೆ ಪರಿಶೀಲನೆ ನಡೆಸಿದ್ದಾಗ ಗುಹೆ ಬಳಿ ಜೋಡಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ.

    ಸತೀಶ್ ಆ ಜೋಡಿಯನ್ನು ನೋಡಿದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಯುವತಿ ಮೃತಪಟ್ಟಿದ್ದಳು. ಸಿಂತಾಲಾಪುಡಿಯ ಸರ್ಕಲ್ ಇನ್ಸ್ ಪೆಕ್ಟರ್ ವಿಲ್ಸನ್ ಗಾಯಗೊಂಡಿದ್ದ ನವೀನ್ ನನ್ನು ಸ್ಥಳೀಯರ ಸಹಾಯದಿಂದ ಎಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಡಿಎಸ್‍ಪಿ ಸಿ.ಎಚ್ ಮುರಳಿಕೃಷ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸುವಾಗ ಧಾರಿಣಿ ತಲೆಯ ಹಿಂಭಾಗದಲ್ಲಿ ಗಂಭೀರ ಪ್ರಮಾಣದ ಏಟು ಬಿದ್ದಿದೆ. ಧಾರಿಣಿಯ ಮೃತದೇಹದ ಬಳಿ ಕಳ್ಳತನಕ್ಕೆ ಉಪಯೋಗಿಸುವ ಶಸ್ತ್ರಗಳಿಂದ ಜೋಡಿಯ ಮೇಲೆ ಹಲ್ಲೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಯುವತಿಯ ಉಡುಪು ಅಸ್ತವ್ಯಸ್ತ ಆಗಿರುವುದನ್ನು ಕಂಡು ಆಕೆಗೆ ಲೈಂಗಿಕವಾಗಿ ಕಿರುಕುಳ ನೀಡಿರಬಹುದು ಎನ್ನುವ ಶಂಕೆ ಕೇಳಿಬಂದಿದೆ.

    ಶ್ರೀ ಧಾರಿಣಿ ಪೋಲಾಸನಿಪಲ್ಲಿಯ ಕಾಲೇಜಿನಲ್ಲಿ ಪ್ರಥಮ ವರ್ಷ ಬಿಎಸ್‍ಸಿ ಓದುತ್ತಿದ್ದರೆ, ನವೀನ್ ಬಿಕಾಂ ಮೊದಲನೇ ವರ್ಷ ಅರ್ಧಕ್ಕೆ ನಿಲ್ಲಿಸಿ ತಂದೆಗೆ ಪೈಟಿಂಗ್ ಕೆಲಸದಲ್ಲಿ ಸಹಾಯ ಮಾಡುತ್ತಿದ್ದನು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೀತ್ಸಿ ಮದ್ವೆಯಾದ್ದರಿಂದ ಸಾಮಾಜಿಕ ಬಹಿಷ್ಕಾರ: ಪೊಲೀಸರ ಮೊರೆ ಹೋದ ಯುವ ಜೋಡಿ

    ಪ್ರೀತ್ಸಿ ಮದ್ವೆಯಾದ್ದರಿಂದ ಸಾಮಾಜಿಕ ಬಹಿಷ್ಕಾರ: ಪೊಲೀಸರ ಮೊರೆ ಹೋದ ಯುವ ಜೋಡಿ

    ಮಂಡ್ಯ: ಪ್ರೀತಿಸಿ ಮದುವೆಯಾದ್ದರಿಂದ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಯುವ ಜೋಡಿಯೊಂದು ನ್ಯಾಯ ಕೊಡಿಸುವಂತೆ ಪೊಲೀಸರ ಮೊರೆ ಹೋಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

    ಸ್ಫೂರ್ತಿ ಮತ್ತು ಮನು ಎಂಬ ಯುವ ಜೋಡಿಯೇ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಯುವ ಜೋಡಿ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ರಾಜೀವ್‍ಗಾಂಧಿ ನಗರದ ಮನು ಮತ್ತು ನಗುವನಹಳ್ಳಿ ಕಾಲೋನಿಯ ನಿವಾಸಿ ಸ್ಫೂರ್ತಿ ಇಬ್ಬರು ಒಂದೇ ಕುಲದವರಾಗಿದ್ದು ಕಳೆದ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಈ ವಿಷಯ ತಿಳಿದ ಹುಡುಗಿಯ ಗ್ರಾಮದ ಕೆಲವರು ಪ್ರೀತಿಸಿ ಮದುವೆಯಾಗುವುದು ನಮ್ಮ ಕುಲಕ್ಕೆ ಅವಮಾನ. ಹೀಗಾಗಿ ಇಬ್ಬರೂ 60 ಸಾವಿರ ತಪ್ಪು ಕಾಣಿಕೆ ಕಟ್ಟಿ ಮದುವೆಯಾಗಿ ಎಂದು ಕಳೆದೊಂದು ತಿಂಗಳ ಹಿಂದೆ ನ್ಯಾಯ ಪಂಚಾಯಿತಿ ಮಾಡಿದ್ದಾರೆ.

    ದಂಡ ಕಟ್ಟಲು ಒಪ್ಪದ ಯುವ ಜೋಡಿ ಎಂಟು ದಿನಗಳ ಹಿಂದೆ ಮದುವೆಯಾಗಿದ್ದಾರೆ. ಇದರಿಂದ ಯುವತಿಯ ಗ್ರಾಮದಲ್ಲಿ ಯುವ ಜೋಡಿಗೆ ಮತ್ತು ಅವರ ಕುಟುಂಬದವರಿಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

    ನೊಂದ ಯುವ ಜೋಡಿ ನಾವು ನಮ್ಮಿಬ್ಬರ ಕುಟುಂಬದವರ ಒಪ್ಪಿಗೆ ಪಡೆದೇ ಮದುವೆಯಾಗಿದ್ದೇವೆ. ಇದರಲ್ಲೇನು ತಪ್ಪಿದೆ. ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರ ಮೊರೆ ಹೋದರೂ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಯುವ ಜೋಡಿ ಆರೋಪಿಸುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವ ಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ- ದಾರಿ ಮಧ್ಯೆ ಅಡ್ಡಗಟ್ಟಿ ಮದುವೆ ಮಾಡಿಸಿದ್ರು!

    ಯುವ ಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ- ದಾರಿ ಮಧ್ಯೆ ಅಡ್ಡಗಟ್ಟಿ ಮದುವೆ ಮಾಡಿಸಿದ್ರು!

    ಗುವಾಹಟಿ: ಯುವಕರ ಗುಂಪೊಂದು ದಾರಿ ಮಧ್ಯೆ ಯುವ ಜೋಡಿಯನ್ನು ತಡೆದು ಹಲ್ಲೆ ನಡೆಸಿ ನೈತಿಕ ಪೊಲೀಸ್  ಗಿರಿ ಪ್ರರ್ಶಿಸಿದ ಘಟನೆ ಮಂಗಳವಾರ ಅಸ್ಸಾಂ ನ ಗೋಲ್ಪಾರಾ ಜಿಲ್ಲೆಯಲ್ಲಿ ನಡೆದಿದೆ.

    ಅವಿವಾಹಿತ ಯುವಕ-ಯುವತಿ ಬೈಕ್‍ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಜನರ ಗುಂಪೊಂದು ರಸ್ತೆ ಅಡ್ಡಗಟ್ಟಿದೆ. ಬಳಿಕ ಬಲವಂತವಾಗಿ ಬೈಕ್‍ನಿಂದ ಇಳಿಯುವಂತೆ ಹೇಳಿದ್ದಾರೆ. ಇಳಿದ ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಜೋಡಿಯನ್ನು ಗ್ರಾಮಕ್ಕೆ ಕರೆದು ತಂದ ಯುವಕರ ಗುಂಪು, ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿಯ ಸಹೋದರ ಹೇಳಿದ್ದಾರೆ.

    ಸದ್ಯ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳನ್ನು ಸ್ಥಳದಲ್ಲಿದ್ದ ಕೆಲವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ಕೋಲು ಹಿಡಿದು ಜೋಡಿಗೆ ಬೆದರಿಕೆ ಹಾಕಿ, ಯುವತಿಗೆ ಬಿದಿರು ಕೋಲಿನಿಂದ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ.

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಆಧರಿಸಿ ಘಟನೆಯಲ್ಲಿ ಜೋಡಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಉಳಿದವರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ ಅಂತ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

    ಘಟನೆ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸರು, ಈ ಕುರಿತು ತಮಗೇ ಯಾವುದೇ ದೂರು ಬಂದಿಲ್ಲ. ಆದರೆ ವಿಡಿಯೋ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಒಬ್ಬ ಆರೋಪಿಯನ್ನು ಶುಕ್ರವಾರ ಹಾಗೂ ಮತ್ತೊಬ್ಬನನ್ನು ಶನಿವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಅಸ್ಸಾಂ ಡಿಜಿಪಿ ಕುಲಧರ್ ಸೈಕಿಯಾ ಹೇಳಿದ್ದಾರೆ.

    ಇದೇ ಪ್ರದೇಶದಲ್ಲಿ ಕಳೆದ ಮೂರು ದಿನಗಳ ಹಿಂದೆ ಕಾರಿನಲ್ಲಿ ಚಲಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ತೆಡೆದು ಮಕ್ಕಳ ಕಳ್ಳರು ಎಂದು ಹಲ್ಲೆ ನಡೆಸಿ ಕೊಲೆ ಮಾಡಿಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿ ಮದುವೆ ಮಾಡಿಸಿದ್ದಾರೆ.