Tag: ಯುವ ಜನತೆ

  • ಯುವಸ್ನೇಹಿ, ಬದುಕಿನ ದಾರಿ ಯೋಜನೆ ಪ್ರಕಟ – ಯುವಜನತೆಗೆ ಸಿಗುತ್ತೆ ಹಣ

    ಯುವಸ್ನೇಹಿ, ಬದುಕಿನ ದಾರಿ ಯೋಜನೆ ಪ್ರಕಟ – ಯುವಜನತೆಗೆ ಸಿಗುತ್ತೆ ಹಣ

    ಬೆಂಗಳೂರು: ಕರ್ನಾಟಕ ಬಜೆಟ್‌ನಲ್ಲಿ ʼಯುವ ಸ್ನೇಹಿʼ ಮತ್ತು ʼಬದುಕಿನ ದಾರಿʼ ಹೆಸರಿನಲ್ಲಿ ಹೊಸ ಯೋಜನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

    ಯುವ ಸ್ನೇಹಿ: ಪದವಿ ಶಿಕ್ಷಣವನ್ನು ಮುಗಿಸಿ, ಮೂರು ವರ್ಷಗಳ ನಂತರವೂ ಯಾವುದೇ ಉದ್ಯೋಗ ದೊರೆಯದ ಯುವಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಲು ‘ಯುವಸ್ನೇಹಿ ಎಂಬ ಹೊಸ ಯೋಜನೆಯಡಿ ತಲಾ 2,000 ರೂ. ಗಳ ಒಂದು ಬಾರಿಯ ಆರ್ಥಿಕ ನೆರವು ನೀಡಲಾಗುವುದು.

    ಬದುಕಿನ ದಾರಿ: ಹೊಸ ಯೋಜನೆಯಡಿ ಶಾಲಾ ಶಿಕ್ಷಣದ ನಂತರ ವಿವಿಧ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗದೇ ಇರುವ ಯುವಜನರಿಗೆ ಐಟಿಐಗಳಲ್ಲಿ 3 ತಿಂಗಳ ಅವಧಿಯ ವೃತ್ತಿಪರ ಸರ್ಟಿಫಿಕೇಟ್ ತರಬೇತಿ ಪಡೆಯಲು ಮಾಸಿಕ 1,500 ರೂ. ಗಳ ಶಿಷ್ಯವೇತನವನ್ನು ನೀಡಲಾಗುವುದು. ತರಬೇತಿಯನ್ನು ಪೂರ್ಣಗೊಳಿಸಿರುವವರಿಗೆ Apprenticeship ಕಾರ್ಯಕ್ರಮದಡಿಯಲ್ಲಿ 3 ತಿಂಗಳಿಗೆ ಮಾಸಿಕ 1,500 ರೂ. ಗಳ ಶಿಶಿಕ್ಷು ಭತ್ಯೆಯನ್ನು ನೀಡಲಾಗುವುದು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಲ್ಲಿ ಸೋಂಕಿಗೆ ತುತ್ತಾದವರಲ್ಲಿ ಯುವಕರದ್ದೇ ಸಿಂಹ ಪಾಲು!

    ಬೆಂಗಳೂರಲ್ಲಿ ಸೋಂಕಿಗೆ ತುತ್ತಾದವರಲ್ಲಿ ಯುವಕರದ್ದೇ ಸಿಂಹ ಪಾಲು!

    ಬೆಂಗಳೂರು: ಬೆಂಗಳೂರಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಈಗಾಗಗಲೇ 3ನೇ ಅಲೆ ಪ್ರಾರಂಭವಾಗುತ್ತಿದೆ ಎಂಬ ಭೀತಿಯಲ್ಲಿ ಜನರಿದ್ದಾರೆ. ಈ ಸಲ ಕೊರೊನಾ ಸೋಂಕಿಗೆ ಯುವ ಜನಾಂಗ ಹೆಚ್ಚು ತುತ್ತಾಗುತ್ತಿರುವ ಆಘಾತಕಾರಿ ವಿಷಯ ಹೊರಬಂದಿದೆ.

    ಎರಡನೇ ಅಲೆ ವೇಳೆಯಲ್ಲಿ ಕೊರೊನಾ ಸೋಂಕಿಗೆ ಯುವಕರೇ ಹೆಚ್ಚು ತುತ್ತಾಗಿದ್ದರು. ಕಳೆದ ಬಾರಿಯಂತೆ ಈ ಬಾರಿಯೂ ಯುವಜನತೆ ಹೆಚ್ಚು ಸೋಂಕು ಪತ್ತೆ ಆಗುತ್ತಿರುವುದು ಆತಂಕಕಾರಿ ವಿಷಯವಾಗಿದೆ.

    ಬೆಂಗಳೂರು ನಗರದಲ್ಲಿ ಈಗಾಗಲೇ 32 ಸಾವಿರ ಸಕ್ರಿಯ ಕೇಸ್‌ಗಳಿವೆ. ಅದರಲ್ಲಿ 20 ಸಾವಿರ ಸೋಂಕಿತರು ಯುವಜನೆ ಆಗಿದ್ದಾರೆ. ಮೂರನೇ ಅಲೆಯಲ್ಲಿ 20-39 ವರ್ಷದೊಳಗಿನ ಯುವಕರೇ ಹೆಚ್ಚು ಟಾರ್ಗೆಟ್ ಆಗುತ್ತಿದ್ದಾರೆ. ಪ್ರತಿದಿನ ನಗರವೊಂದರಲ್ಲೇ ಸಾವಿರಕ್ಕೂ ಹೆಚ್ಚು ಯುವಕರಲ್ಲಿ ಸೋಂಕು ಉಲ್ಬಣಗೊಳ್ಳುತ್ತಿದೆ. ಕಳೆದ ಐದು ದಿನದಲ್ಲಿ ಬರೊಬ್ಬರಿ 8 ಸಾವಿರ ಯುವಕರಲ್ಲಿ ಸೋಂಕು ಪತ್ತೆಯಾಗಿದೆ.

    ಸೋಂಕಿಗೆ ಕಾರಣವೇನು?: ಬೇರೆ ವಯೋಮಾನದವರಿಗಿಂತ ಯುವ ಸಮುದಾಯ ಸಮಾಜದಲ್ಲಿ ಹೆಚ್ಚು ಸಕ್ರಿಯವಾಗಿರುವುದು ಪ್ರಮುಖ ಕಾರಣವಾಗಿದೆ. ಹೊರಗಡೆ ಹೋಗಿ ದುಡಿಯುತ್ತಿರುವವರಲ್ಲಿ ಯುವ ಸಮೂದಾಯದ ಸಂಖ್ಯೆ ಅಧಿಕವಾಗಿದೆ. ಇದರಿಂದಾಗಿ ಅವರು ಇತರರ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚಿರುವುದರಿಂದ ಯುವ ಜನಾಂಗದಲ್ಲಿ ಕೊರೊನಾ ಹೆಚ್ಚು ಕಾಣಿಸಿಕೊಳ್ಳುತ್ತಿದೆ.

    ಮತ್ತೊಂದು ಪ್ರಮುಖ ಕಾರಣವೆಂದರೆ ಇತ್ತೀಚಿನ ದಿನಗಳಲ್ಲಿ ಕೊರೊನಾವನ್ನು ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆ. ಅದರಲ್ಲೂ ಯುವ ಜನತೆಯಲ್ಲಿ ಸೋಂಕಿನ ಬಗ್ಗೆ ಹೆಚ್ಚುತ್ತಿರುವ ನಿರ್ಲಕ್ಷ್ಯದಿಂದ ಉಲ್ಬಣಗೊಂಡಿದೆ. ಇದನ್ನೂ ಓದಿ: ಇಂದಿನಿಂದ ಬೂಸ್ಟರ್ ಡೋಸ್ – ಯಾರು ಪಡೆಯಬಹುದು? ಅರ್ಹತೆ ಏನು?

    ಯುವಜನಾಂಗದಲ್ಲಿ ಗುಣಲಕ್ಷಣ ಇಲ್ಲದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಇದರಿಂದಾಗಿ ಯುವಕರ ಮನೆಯ ಸದ್ಯಸ್ಯರಿಗೆ ಹಾಗೂ ಇನ್ನಿತರರಿಗೆ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಕೋವಿಡ್ ಟೆಸ್ಟಿಂಗ್‌ಗೆ ಯುವ ಜನಾಂಗದವರೇ ಹೆಚ್ಚಾಗಿ ಒಳಗಾಗುತ್ತಿದ್ದಾರೆ. ಇದನ್ನೂ ಓದಿ: ನಾಯಕತ್ವಕ್ಕಾಗಿ ಡಿಕೆಶಿಯಿಂದ ಪಾದಯಾತ್ರೆ ಡ್ರಾಮಾ: ಕಟೀಲ್

  • ನೈಟ್ ಕರ್ಫ್ಯೂ ಹೊತ್ತಲ್ಲಿ ಯುವಜನತೆಯ ಮೋಜು ಮಸ್ತಿ – ಪೊಲೀಸರ ಮುಂದೆಯೇ ಬಿಂದಾಸ್ ಸುತ್ತಾಟ

    ನೈಟ್ ಕರ್ಫ್ಯೂ ಹೊತ್ತಲ್ಲಿ ಯುವಜನತೆಯ ಮೋಜು ಮಸ್ತಿ – ಪೊಲೀಸರ ಮುಂದೆಯೇ ಬಿಂದಾಸ್ ಸುತ್ತಾಟ

    ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಕೊರೊನಾ ಮೂರನೇ ಅಲೆ ಭೀತಿ ಶುರುವಾಗಿದೆ. ಕೊರೊನಾ ಸಾಂಕ್ರಮಿಕ ರೋಗ ತಡೆಗಟ್ಟಲು ಸರ್ಕಾರ ಹಲವರು ನಿಯಮಗಳನ್ನು ವಿಧಿಸಿದೆ. ಹೀಗಿದ್ದರೂ ಬೆಂಗಳೂರಿನಲ್ಲಿ ಯುವಕ ಯುವತಿಯರು ನೈಟ್ ಕರ್ಫ್ಯೂ ವೇಳೆ ಮೋಜು-ಮಸ್ತಿ ಮಾಡುತ್ತಿದ್ದಾರೆ.

    bangaluru car

    ನಗರದ ಸದಾಶಿವನಗರದಲ್ಲಿ ಯುವಕ, ಯುವತಿಯರು ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಭರ್ಜರಿ ಮ್ಯೂಸಿಕ್ ಹಾಕಿಕೊಂಡು ಸುತ್ತಾಡಿದ್ದಾರೆ. ಅಲ್ಲದೇ ಕಾರಿನ ರೂಫ್ ಡೋರ್ ಓಪನ್ ಮಾಡಿಕೊಂಡು ಮೂವಿಂಗ್ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಾ, ಜೋರಾಗಿ ಕೂಗಾಡುತ್ತಾ ಪೊಲೀಸರ ಮುಂದೆಯೇ ಸಾಗಿದ್ದಾರೆ. ಇದನ್ನೂ ಓದಿ: ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್

    ಒಟ್ಟಾರೆ ಕೊರೊನಾ ನಿಯಮವನ್ನು ಉಲ್ಲಂಘಿಸಿ ಹೇಳೋರಿಲ್ಲ, ಕೇಳೋರಿಲ್ಲ ಎಂಬಂತೆ ಕಾರಿನಲ್ಲಿ ಯುವಕ, ಯುವತಿಯರು ವೀಕೆಂಡ್‍ನಲ್ಲಿ ಲೇಟ್ ನೈಟ್ ಜಾಲಿ ರೈಡ್ ಹೋಗಿದ್ದಾರೆ. ಇದೀಗ ಈ ವೀಡಿಯೋ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗುತ್ತಿದೆ. ಇದನ್ನೂ ಓದಿ: ವಿಜಯಪುರದ ಕುವರಿಗೆ ರಾಷ್ಟ್ರೀಯ ಪ್ರಶಸ್ತಿ

  • 3 ವರ್ಷ ಕಾಲ ಸೈನಿಕರಾಗಿ ದೇಶ ಸೇವೆ – ಭಾರತೀಯ ಸೇನೆಯಲ್ಲಿ ತಾತ್ಕಾಲಿಕ ಉದ್ಯೋಗ

    3 ವರ್ಷ ಕಾಲ ಸೈನಿಕರಾಗಿ ದೇಶ ಸೇವೆ – ಭಾರತೀಯ ಸೇನೆಯಲ್ಲಿ ತಾತ್ಕಾಲಿಕ ಉದ್ಯೋಗ

    – ಸೇನೆ ಸೇರುವ ಮಂದಿಗೆ ಸುವರ್ಣಾವಕಾಶ
    – ಟೂರ್ ಆಫ್ ಡ್ಯೂಟಿ ಜಾರಿಗೆ ಗಂಭೀರ ಚಿಂತನೆ

    ನವದೆಹಲಿ: ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ಯುವ ಜನತೆಯಲ್ಲಿರುತ್ತದೆ. ಆದರೆ ಯಾವುದೋ ಕಾರಣದಿಂದಾಗಿ ಈ ಆಸೆ ಈಡೇರುವುದಿಲ್ಲ. ಆದರೆ ಈಗ 3 ವರ್ಷಗಳ ಕಾಲ ತಾತ್ಕಾಲಿಕ ಉದ್ಯೋಗ ನೀಡುವ ಬಗ್ಗೆ ಭಾರತೀಯ ಸೇನೆ ಗಂಭೀರ ಚಿಂತನೆ ನಡೆಸಿದೆ.

    ಹೌದು, ಮಿಲಿಟರಿ ಸೇರಿದರೆ ನಿವೃತ್ತಿಯಾಗುವರೆಗೆ ಕರ್ತವ್ಯ ಮಾಡಬೇಕಾಗುತ್ತದೆ. ಆದರೆ ಈಗ ಮೂರು ವರ್ಷಗಳ ಕಾಲ ‘ಟೂರ್ ಆಫ್ ಡ್ಯೂಟಿ’ ಹೆಸರಿನಲ್ಲಿ ಯುವಜನತೆಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಅನುಮತಿ ನೀಡಲು ಮುಂದಾಗಿದೆ. ಸೇನೆಗೆ ಸೇರುವವರ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಅವರನ್ನು ಉತ್ತೇಜಿಸಲು ಈ ಯೋಜನೆಗೆ ಕೈ ಹಾಕಿದೆ.

    ಒಂದು ವೇಳೆ ಈ ಪ್ರಸ್ತಾಪಕ್ಕೆ ಅನುಮತಿ ಸಿಕ್ಕರೆ ಆರಂಭದಲ್ಲಿ 100 ಅಧಿಕಾರಿಗಳು ಮತ್ತು 1 ಸಾವಿರ ಸೈನಿಕರ ನೇಮಕವಾಗಲಿದೆ. ಈ ಸಂಬಂಧ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಪ್ರತಿಕ್ರಿಯಿಸಿ, ವಿವಿಧ ಸೇನಾ ಕಮಾಂಡ್ ಗಳ ಪ್ರತಿಕ್ರಿಯೆ ಪಡೆಯಲಾಗಿದೆ. ಟೂರ್ ಆಫ್ ಡ್ಯೂಟಿಯನ್ನು ಪ್ರಯೋಗಿಕವಾಗಿ ಆರಂಭಿಸಲಾಗುತ್ತಿದ್ದು, ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನೇಮಕವಾಗಲಿರುವ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

    26/ 27 ವಯಸ್ಸಿನ ಯುವಜನತೆಗೆ ತರಬೇತಿ ನೀಡಿ ಉದ್ಯೋಗ ನೀಡಿದಾಗ ತಾತ್ಕಲಿಕವಾಗಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ. ಇಲ್ಲಿ ಸೇವೆ ಸಲ್ಲಿಸಿದ ಬಳಿಕ ಪ್ರಮಾಣಪತ್ರ ನೀಡಲಾಗುತ್ತದೆ. ಒಂದು ವೇಳೆ ಸೇನೆಯಲ್ಲಿ ಮುಂದುವರಿಯಲು ಆಸಕ್ತಿ ತೋರಿಸಿದರೆ ಅವರನ್ನು ಮುಂದುವರಿಸಲಾಗುತ್ತದೆ. ಟೂರ್ ಆಫ್ ಡ್ಯೂಟಿಯನ್ನು ಪೂರ್ಣಗೊಂಡ ಬಳಿಕ ಆ ಸೈನಿಕರು ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದಲ್ಲಿ ಅವರ ಇಷ್ಟದ ಉದ್ಯೋಗಕ್ಕೆ ಸೇರಬಹುದು ಎಂಬ ನಂಬಿಕೆಯನ್ನು ಸೇನೆ ಇಟ್ಟುಕೊಂಡಿದೆ.

    ಯುವಜನತೆಗೆ ಸೇನೆ ಸೇರಬೇಕೆಂಬ ಆಸೆ ಇರುತ್ತದೆ. ಆದರೆ ಪೂರ್ಣಾವಧಿಗೆ ಸೇರಬೇಕೆಂಬ ಆಸೆ ಇರುವುದಿಲ್ಲ. ಸೇನೆಯ ಬಗ್ಗೆ ತಿಳಿದುಕೊಳ್ಳಲು, ರಾಷ್ಟ್ರ ಭಕ್ತಿ ತೋರಿಸಲು, ಸಾಹಸ, ಅನುಭವ ಪಡೆದುಕೊಳ್ಳಲು ಇದು ಸಹಕಾರಿಯಾಗಲಿದೆ.

    ನಾಗರಿಕರಿಗೆ ಮೂರು ವರ್ಷಗಳ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಈಗಾಗಲೇ ಇಸ್ರೇಲಿನಲ್ಲಿದೆ. ಭಾರತದಲ್ಲಿ ಆಸಕ್ತರಿಗೆ ಮಾತ್ರ ಅವಕಾಶ ನೀಡುತ್ತಿದ್ದು ಇಸ್ರೇಲಿನಲ್ಲಿ ಇದು ಕಡ್ಡಾಯ. ಇಸ್ರೇಲ್ ಸುತ್ತ 7 ರಾಷ್ಟ್ರಗಳು ಇರುವ ಅಗತ್ಯಬಿದ್ದಾಗ ಜನರ ನೆರವನ್ನು ಪಡೆಯಲು ಸೇನಾ ತರಬೇತಿಯನ್ನು ನೀಡುತ್ತದೆ. 18 ವರ್ಷ ಮೇಲ್ಪಟ್ಟ ಯುವಕರು 36 ತಿಂಗಳ ಕಾಲ, ಯುವತಿಯು 24 ತಿಂಗಳ ಕಾಲ ಸೇನಾ ತರಬೇತಿ ಪಡೆಯುವುದನ್ನು ಇಸ್ರೇಲ್ ಕಡ್ಡಾಯಗೊಳಿಸಿದೆ.

     

  • ಕೂಲ್ ಕೂಲ್ ಬೆಂಗ್ಳೂರಿನ ವಾತಾವರಣಕ್ಕೆ ಸಿಟಿ ಮಂದಿ ಫಿದಾ!

    ಕೂಲ್ ಕೂಲ್ ಬೆಂಗ್ಳೂರಿನ ವಾತಾವರಣಕ್ಕೆ ಸಿಟಿ ಮಂದಿ ಫಿದಾ!

    ಬೆಂಗಳೂರು: ಮನೆ ಹೊರಗೆ ಮೋಡ ಮುಸುಕಿದ ವಾತಾವರಣ. ಜೊತೆಗೆ ತುಂತುರು ಮಳೆಯ ಸಿಂಚನ. ಹಾಸಿಗೆ ಮೇಲಿಂದ ಎದ್ದು ಬರಲು ಆಗದೆ ಇರುವಷ್ಟು ಚಳಿ. ಬೆಂಗಳೂರು ನಗರದ ಮಂದಿಯನ್ನು ಈ ರೀತಿಯಲ್ಲಿ ಕಾಡುತ್ತಿರುವ ವಾತಾವರಣಕ್ಕೆ ಜನ ಫುಲ್ ಫಿದಾ ಆಗಿದ್ದಾರೆ. ಆದರೆ ಇದೇ ರೀತಿ ವಾತಾವರಣ ಮುಂದುವರಿದರೆ ಆರೋಗ್ಯದ ಮೇಲೆ ಪರಿಣಾಮವಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

    ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮವಾಗಿ ಉದ್ಯಾನ ನಗರಿಯಲ್ಲಿ ಮುಂಜಾನೆಯಿಂದ ತುಂತುರು ಮಳೆಯಾಗುತ್ತಿದೆ. ಬೆಳಗ್ಗೆ 10 ಗಂಟೆಯಾದರೂ ಮೋಡ ಮುಸುಕಿದ ವಾತಾವರಣದಿಂದ ಕೂಡಿದ್ದು, ತಣ್ಣನೆಯ ಗಾಳಿ, ಚಳಿಯ ಜೊತೆಗೆ ತುಂತುರು ಹನಿಗಳ ಸಿಂಚನವಾಗುತ್ತಿದೆ. ಇದು ಜನರಿಗೆ ನಾವು ಬೆಂಗಳೂರಿನಲ್ಲಿದ್ದೇವಾ ಅಥವಾ ಯಾವುದೋ ಮಲೆನಾಡಿನಲ್ಲಿದ್ದೇವಾ ಎನ್ನುವ ಅನುಭವವನ್ನು ಉಂಟು ಮಾಡಿದೆ.

    ಈ ರೀತಿಯ ವಾತಾವರಣ ಇರುವುದರಿಂದ ಆರೋಗ್ಯದ ಮೇಲೆ ಬಹುಬೇಗ ಪರಿಣಾಮ ಬಿರುವ ಸಾಧ್ಯತೆ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದು, ತುಂತುರು ಮಳೆ, ಶೀತಗಾಳಿಯಿಂದ ಪ್ರಮುಖವಾಗಿ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುವ ಕುರಿತು ಸೂಚನೆ ನೀಡಿದ್ದಾರೆ. ಚಳಿಗಾಲದ ಮಳೆಯಲ್ಲಿ ನೆನೆಯುವುದರಿಂದ ನೆಗಡಿ, ಕೆಮ್ಮು, ಗಂಟಲು ನೋವು ಆರೋಗ್ಯದ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುವ ಲಕ್ಷಣಗಳಿದ್ದು, ಮಕ್ಕಳು ಮತ್ತು ವೃದ್ಧರು ಅದಷ್ಟು ಬೆಚ್ಚಗಿನ ವಾತಾವರಣದಲ್ಲಿ ಇರುವಂತೆ ನೋಡಿಕೊಳ್ಳಿ ಎಂದಿದ್ದಾರೆ.

    ತುಂತುರು ಮಳೆಯ ಹವಾಮಾನ ಯುವ ಜನತೆಗೆ ಉಲ್ಲಾಸ ತಂದಿದೆ. ನಗರದಲ್ಲಿ ಇನ್ನು ಎರಡು ದಿನಗಳ ಕಾಲ ಹೀಗೆ ತುಂತುರು ಮಳೆ ಮತ್ತು ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲಸ ತೆರಳುವವರು ತುಂತುರು ಮಳೆಯಿಂದ ಸ್ವಲ್ಪ ಎಚ್ಚರ ವಹಿಸಿ ಕುಲ್ ಕುಲ್ ವಾತಾವರಣ ಎಂಜಾಯ್ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv