Tag: ಯುವರಾಜ್ ಸಿಂಗ್

  • ಅಭಿಮಾನಿಗಳಿಗೆ ಸಿಹಿ ಸುದ್ದಿ – ಮತ್ತೆ ನೋಡ್ಬಹುದು ಯುವಿ ಬ್ಯಾಟಿಂಗ್

    ಅಭಿಮಾನಿಗಳಿಗೆ ಸಿಹಿ ಸುದ್ದಿ – ಮತ್ತೆ ನೋಡ್ಬಹುದು ಯುವಿ ಬ್ಯಾಟಿಂಗ್

    ಮುಂಬೈ: ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದ ಯುವರಾಜ್ ಸಿಂಗ್ ಮತ್ತೆ ಬ್ಯಾಟಿಂಗ್ ನಡೆಸಲು ಸಿದ್ಧತೆ ನಡೆಸಿದ್ದು, ಕೆನಡಾ ಗ್ಲೋಬಲ್ ಟಿ20 ಟೂರ್ನಿಗೆ ಸಹಿ ಹಾಕಿದ್ದಾರೆ.

    ಟೂರ್ನಿಯ ಟೊರೆಂಟೊ ನ್ಯಾಷನಲ್ಸ್ ತಂಡದ ಪರ ಯುವರಾಜ್ ಆಡುವುದು ಖಚಿತವಾಗಿದ್ದು, ಬಿಸಿಸಿಐ ಕೂಡ ಯುವಿಗೆ ಅನುಮತಿಯನ್ನು ನೀಡಿದೆ. ಜುಲೈ 25 ರಿಂದ ಆರಂಭವಾಗುವ ಟೂರ್ನಿಯಲ್ಲಿ ಯುವರಾಜ್ ಭಾಗವಹಿಸುತ್ತಿದ್ದಾರೆ.

    ಈಗಾಗಲೇ ಟೂರ್ನಿಯಲ್ಲಿ ಕ್ರಿಸ್ ಗೇಲ್, ಬ್ರೆಂಡನ್ ಮೆಕಲಮ್, ರುಸೆಲ್, ಸುನೀಲ್ ನರೇನ್, ಕ್ರಿಸ್ ಲೀನ್, ಡ್ವೇನ್ ಬ್ರಾವೋ, ಡುಪ್ಲೆಸಿಸ್, ಶಾಹಿದ್ ಆಫ್ರಿದಿ, ಶಕೀಬ್ ಹಲ್ ಹಸನ್ ಸೇರಿದಂತೆ ಹಲವು ಆಟಗಾರರು ಭಾಗವಹಿಸುತ್ತಿದ್ದಾರೆ. ಇವರಲ್ಲಿ ಬ್ರೆಂಡನ್ ಮೆಲಕಮ್ ಅವರು ಮಾತ್ರ ಟೊರೆಂಟೊ ನ್ಯಾಷನಲ್ಸ್ ಪರ ಆಡುತ್ತಿದ್ದಾರೆ.

    ಈ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸುತ್ತಿದ್ದು, 22 ಪಂದ್ಯಗಳು ಟೂರ್ನಿಯಲ್ಲಿ ನಡೆಯಲಿದೆ. ಜೂನ್ 10 ರಂದು ಯುವಿ ಅಂತರಾಷ್ಟ್ರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದರು. ಅಲ್ಲದೇ ಈ ವೇಳೆ ತಾವು ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು. ಇದರಂತೆ ಕೆನಡಾ ಟಿ20 ಲೀಗ್ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನಿವೃತ್ತಿ ಬೆನ್ನಲ್ಲೇ ವಿದೇಶಿ ಟೂರ್ನಿಯಲ್ಲಿ ಆಡಲು ಅನುಮತಿ ಕೋರಿದ ಯುವಿ

    ನಿವೃತ್ತಿ ಬೆನ್ನಲ್ಲೇ ವಿದೇಶಿ ಟೂರ್ನಿಯಲ್ಲಿ ಆಡಲು ಅನುಮತಿ ಕೋರಿದ ಯುವಿ

    ಮುಂಬೈ: ಅಂತರಾಷ್ಟ್ರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ ಮಾಡಿದ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ವಿದೇಶಿ ಕ್ರಿಕೆಟ್ ಟಿ20 ಟೂರ್ನಿಗಳಲ್ಲಿ ಭಾಗವಹಿಸಲು ಬಿಸಿಸಿಐನಿಂದ ಅನುಮತಿ ಕೋರಿದ್ದಾರೆ.

    ಕಳೆದ ವಾರವಷ್ಟೇ ಯುವರಾಜ್ ಸಿಂಗ್ ನಿವೃತ್ತಿ ಘೋಷಣೆ ಮಾಡಿದ್ದರು. ಅಲ್ಲದೇ ಇದೇ ವೇಳೆ ಕ್ರಿಕೆಟ್‍ಗಾಗಿ ವಿದೇಶಿ ಟಿ20 ಟೂರ್ನಿಗಳಲ್ಲಿ ಆಡುವುದಾಗಿ ತಿಳಿಸಿದ್ದರು. ಇದರಂತೆ ಸದ್ಯ ಯುವರಾಜ್ ಬಿಸಿಸಿಐನಿಂದ ಅನುಮತಿ ಕೋರಿದ್ದಾರೆ.

    ಟೀಂ ಇಂಡಿಯಾ ಕ್ರಿಕೆಟ್ ಸ್ಥಾನ ಸಿಗುವುದು ಅನುಮಾನ ವ್ಯಕ್ತವಾದ ಬೆನ್ನಲ್ಲೇ ವಿದೇಶಿ ಟೂರ್ನಿಗಳಲ್ಲಿ ಭಾಗವಹಿಸಲು ನಿಯಮಗಳು ಅಡ್ಡಿ ಉಂಟಾಗುವ ಉದ್ದೇಶದಿಂದ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. ಈ ಹಿಂದೆ ವಿರೇಂದ್ರ ಸೆಹ್ವಾಗ್ ಹಾಗೂ ಜಹೀರ್ ಖಾನ್ ನಿವೃತ್ತಿ ಪಡೆದು ಯುಎಇಯಲ್ಲಿ ನಡೆದ ಟಿ10 ಲೀಗ್‍ನಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದರು.

    ಇರ್ಫಾನ್ ಫಠಾಣ್ ಕೂಡ ಈ ಹಿಂದೆ ಕೆರೆಬಿಯನ್ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸಲು ಹೆಸರು ನಮೂದಿಸಿದ್ದರು. ಆದರೆ ಫಸ್ಟ್ ಕ್ಲಾಸ್ ಕ್ರಿಕೆಟ್‍ನಲ್ಲಿ ಇರ್ಫಾನ್ ಆಡುತ್ತಿದ್ದ ಕಾರಣ ಬಿಸಿಸಿಐ ಅನುಮತಿ ನೀಡಿರಲಿಲ್ಲ. ಕಳೆದ 2 ವರ್ಷಗಳ ಹಿಂದೆ ಹಾಂಗ್ ಕಾಂಗ್ ಟಿ20 ಟೂರ್ನಿಯಲ್ಲಿ ಯೂಸುಫ್ ಅವರ ಅನುಮತಿ ನಿರಾಕರಿಸಲಾಗಿತ್ತು.

    ಸದ್ಯ 37 ವರ್ಷದ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ್ದರು. ಕ್ರಿಕೆಟ್‍ನಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಯುವಿ ಬಿಸಿಸಿಐ ನೊಂದಿಗೆ ಒಪ್ಪಂದ ಹೊಂದಿರುವ ಕಾರಣ ಅನುಮತಿ ಲಭಿಸುತ್ತ ಇಲ್ಲವಾ ಎಂದು ಕಾದು ನೋಡಬೇಕಿದೆ.

  • ಯುವಿ ಬಗ್ಗೆ ಕಿಚ್ಚನ ಮನದಾಳದ ಮಾತು

    ಯುವಿ ಬಗ್ಗೆ ಕಿಚ್ಚನ ಮನದಾಳದ ಮಾತು

    ಬೆಂಗಳೂರು: ಭಾರತ ಕ್ರಿಕೆಟ್ ತಂಡ ಎಡಗೈ ಸ್ಫೋಟಕ ಆಟಗಾರ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ. ಇವರ ವಿದಾಯಕ್ಕೆ ಅಭಿಮಾನಿಗಳು, ಕ್ರಿಕೆಟಿಗರು ಸೇರಿದಂತೆ ಸಿನಿಮಾರಂಗದವರು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಕಿಚ್ಚ ಸುದೀಪ್ ಅವರು ಯುವರಾಜ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ನಾನು ದ್ವೇಷಿಸುತ್ತಿದ್ದ ಕ್ರಿಕೆಟ್ ಎಲ್ಲವನ್ನೂ ಕಲಿಸಿಕೊಟ್ಟಿತು: ಯುವಿ

    ನಟ ಸುದೀಪ್ ಟ್ವೀಟ್ ಮಾಡುವ ಮೂಲಕ ಯುವರಾಜ್ ಅವರ ಬಗ್ಗೆ ತನ್ನ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ. “ಇಂದು ನಿಮ್ಮ ಬಗ್ಗೆ ಟ್ವೀಟ್ ಮಾಡುತ್ತಿರುವ ನಮ್ಮ ಬಗ್ಗೆ ನಿಮಗೆ ತಿಳಿಯದೆ ಇರಬಹುದು. ಆದರೆ ನಾವು ನಿಮ್ಮನ್ನು ಎಷ್ಟು ಪ್ರೀತಿಸುತ್ತೇವೆ ಮತ್ತು ನೀವು ಅನೇಕರಿಗೆ ಅದಮ್ಯ ಸ್ಫೂರ್ತಿದಾಯಕರಾಗಿದ್ದೀರಿ ಎಂಬುದನ್ನ ಹೇಳುವ ಸಲುವಾಗಿ ನಾವು ಟ್ವೀಟ್ ಮಾಡುತ್ತೇವೆ. ನಿಮ್ಮನ್ನು ಮತ್ತೆ ಬ್ಲೂ ಜೆರ್ಸಿಯಲ್ಲಿ ನೋಡಲು ಬಯಸುತ್ತೇನೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ” ಎಂದು ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಮರು ಆಯ್ಕೆಯಾದಾಗ ಕಣ್ಣೀರಿಟ್ಟಿದ್ದ ಯುವಿಯನ್ನು ನೆನೆದ ಪತ್ನಿ

    ಯುವರಾಜ್ ಸಿಂಗ್ 2000ನೇ ಇಸ್ವಿಯಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಅವರು ಇದೂವರೆಗೂ 304 ಏಕದಿನ ಪಂದ್ಯಗಳಲ್ಲಿ ಆಡಿ 8,701 ರನ್ ಸಿಡಿಸಿದ್ದಾರೆ. ನಟ ಸುದೀಪ್ ಅವರಿಗೆ ಕ್ರಿಕೆಟ್ ಆಟ ಎಂದರೆ ಆಸಕ್ತಿ ಇದೆ. ಸಿಸಿಎಲ್, ಕೆಪಿಎಲ್, ಕೆಸಿಸಿ, ಲಂಡನ್ ಕಾರ್ಪೋರೇಟ್ ಕ್ರಿಕೆಟ್ ಟೂರ್ನಿ ಸೇರಿದಂತೆ ಅನೇಕ ಕಡೆ ಕ್ರಿಕೆಟ್ ಆಡಿರುವ ಅನುಭವವಿದೆ.

  • ಟೀಂ ಇಂಡಿಯಾಗೆ ಮರು ಆಯ್ಕೆಯಾದಾಗ ಕಣ್ಣೀರಿಟ್ಟಿದ್ದ ಯುವಿಯನ್ನು ನೆನೆದ ಪತ್ನಿ

    ಟೀಂ ಇಂಡಿಯಾಗೆ ಮರು ಆಯ್ಕೆಯಾದಾಗ ಕಣ್ಣೀರಿಟ್ಟಿದ್ದ ಯುವಿಯನ್ನು ನೆನೆದ ಪತ್ನಿ

    ನವದೆಹಲಿ: ಸಿಕ್ಸರ್ ಕಿಂಗ್, ಟಿ-20 ಕ್ರಿಕೆಟ್‍ನಲ್ಲಿ ಕೇವಲ 12 ಎಸೆತದಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದ ಎಡಗೈ ಸ್ಫೋಟಕ ಆಟಗಾರ ಯುವರಾಜ್ ಸಿಂಗ್ ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಾರೆ. ಈ ಸಮಯದಲ್ಲಿ ಅವರ ಪತ್ನಿ ಹೆಜೇಲ್ ಕೀಚ್ ಅವರು ಟೀಂ ಇಂಡಿಯಾಗೆ ಮರು ಆಯ್ಕೆಯದಾಗ ಯುವರಾಜ್ ಸಿಂಗ್ ಕಣ್ಣೀರಿಟ್ಟಿದ್ದನ್ನು ನೆನಪಿಸಿಕೊಂಡಿದ್ದಾರೆ.

    2011ರ ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದ ಯುವರಾಜ್ ಸೋಮವಾರ ಮುಂಬೈನ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ಈ ವೇಳೆಯಲ್ಲಿ ಅವರು ಪತ್ನಿ ಹಜೇಲ್ ಕೀಚ್ 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿಗೆ ಆಯ್ಕೆಯಾದ ಯುವರಾಜ್ ಸಿಂಗ್ ಅವರು ಕಣ್ಣೀರು ಹಾಕಿದ್ದ ಘಟನೆಯನ್ನು ಹಂಚಿಕೊಂಡಿದ್ದಾರೆ.

    ಯುವರಾಜ್ ಸಿಂಗ್ ಅವರು ಯಾವುದನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ಈ ದಿನ ವಿದಾಯ ಹೇಳಿರುವ ಅವರು ತನ್ನ ವೃತ್ತಿ ಜೀವನದಲ್ಲಿ ಹಲವು ಬಾರಿ ಭಾರತ ತಂಡಕ್ಕೆ ಕಮ್‍ಬ್ಯಾಕ್ ಮಾಡಿದ್ದಾರೆ. ಆದರೆ 2016 ರಲ್ಲಿ ಅವರು ಆಯ್ಕೆಯದಾಗ ಭಾವುಕರಾಗಿ ಅತ್ತಿದ್ದರು ಎಂದು ಹಜೇಲ್ ಕೀಚ್ ಹೇಳಿದ್ದಾರೆ.

    “2016ರಲ್ಲಿ ನಮ್ಮ ಮದುವೆಗೂ ಮುಂಚೆ ಅವರು ಭಾರತ ತಂಡಕ್ಕೆ ಮರು ಆಯ್ಕೆಯಾದರು. ಆಗ ಅವರಿಗೆ ಕಿಟ್ ಮತ್ತು ಸೂಟ್ಕೇಸ್ ಬಂದಿದ್ದವು ಆದನ್ನು ನೋಡಿದ ಯುವರಾಜ್ ಸಿಂಗ್ ಆಳುತ್ತಿದ್ದರು. ಆವರು ಏಕೆ ಆಳುತ್ತಿದ್ದಾರೆ ಎಂದು ನನಗೆ ಅರ್ಥವಾಗಲಿಲ್ಲ. ಆಗ ನಾನು ಅವರನ್ನು ಕೇಳಿದೆ ಆಗ ಆವರು ನಾನು ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗುತ್ತೇನೆ ಎಂದು ಊಹಿಸಿರಲಿಲ್ಲ ಎಂದು ಹೇಳಿದರು” ಎಂದು ಹಜೇಲ್ ಕೀಚ್ ತಿಳಿಸಿದರು.

    ನಾನು ಅವರ ಪತ್ನಿಯಾಗಿ ಅವರಿಗೆ ಏನೂ ಮಾಡಬೇಕು ಎಂದು ಹೇಳುವ ಸ್ಥಳದಲ್ಲಿ ನಾನಿಲ್ಲ. ಆದರೆ ಅವರು 2 ವರ್ಷಗಳ ಕಾಲ ಯೋಚಿಸಿ ನಾನು ಕ್ರಿಕೆಟ್‍ಗೆ ವಿದಾಯ ಹೇಳುತ್ತೇನೆ ಎಂದು ತೀರ್ಮಾನ ಮಾಡಿದ್ದಾರೆ. ಆ ತೀರ್ಮಾನಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.

    2000 ರಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇದುವರೆಗೂ 304 ಏಕದಿನ ಪಂದ್ಯಗಳಲ್ಲಿ 8,701 ರನ್ ಸಿಡಿಸಿದ್ದಾರೆ. 2017 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದರು. 2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು, 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007 ರಲ್ಲಿ ಮೊದಲ ಟಿ20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದಾರೆ. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ.

  • ನೀನು ಉತ್ತಮ ವಿದಾಯಕ್ಕೆ ಅರ್ಹನಾಗಿದ್ದೆ, ಲವ್ ಯೂ ಸಹೋದರ- ರೋಹಿತ್ ಶರ್ಮಾ

    ನೀನು ಉತ್ತಮ ವಿದಾಯಕ್ಕೆ ಅರ್ಹನಾಗಿದ್ದೆ, ಲವ್ ಯೂ ಸಹೋದರ- ರೋಹಿತ್ ಶರ್ಮಾ

    ಬೆಂಗಳೂರು: ಸಿಕ್ಸರ್ ಕಿಂಗ್, ಟಿ-20 ಕ್ರಿಕೆಟ್‍ನಲ್ಲಿ ಕೇವಲ 12 ಎಸೆತದಲ್ಲಿ ಅರ್ಧಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದ ಎಡಗೈ ಸ್ಫೋಟಕ ಆಟಗಾರ ಯುವರಾಜ್ ಸಿಂಗ್ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಾರೆ. ಯುವರಾಜ್ ಸಿಂಗ್ ಅವರ ವಿದಾಯಕ್ಕೆ ಟೀಂ ಇಂಡಿಯದ ಉಪನಾಯಕ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ

    ಇಂಗ್ಲೆಂಡಿನಲ್ಲಿ ವಿಶ್ವಕಪ್ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ 2011ರ ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದ ಯುವರಾಜ್ ಸೋಮವಾರ ಮುಂಬೈ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ಸಹೋದರನ ವಿದಾಯಕ್ಕೆ ಮನನೊಂದ ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದು ನೀನು ಉತ್ತಮ ವಿದಾಯಕ್ಕೆ ಅರ್ಹನಾಗಿದ್ದೆ ಎಂದು ಹೇಳಿದ್ದಾರೆ.

    ಯುವಿ ವಿದಾಯದ ಕುರಿತು ಟ್ವೀಟ್ ಮಾಡಿರುವ ರೋಹಿತ್ ಶರ್ಮಾ “ನಿನಗೆ ಗೊತ್ತಿಲ್ಲ ನಿನಗೆ ಏನ್ ಸಿಕ್ಕಿತ್ತು ಆದು ಕಳೆದು ಹೋಗಿದೆ. ಲವ್ ಯೂ ಸಹೋದರ, ನೀನು ಉತ್ತಮ ವಿದಾಯಕ್ಕೆ ಅರ್ಹನಾಗಿದ್ದೆ” ಎಂದು ಟ್ವೀಟ್ ಮಾಡಿದ್ದಾರೆ.

    17 ವರ್ಷಗಳ ಕಾಲ ಭಾರತದ ಕ್ರಿಕೆಟ್ ತಂಡಕ್ಕೆ ತನ್ನದೇ ಆದ ಉತ್ತಮ ಸೇವೆ ಸಲ್ಲಿಸಿದ್ದಾರೆ. ಈ ರೀತಿಯ ಒಳ್ಳೆಯ ಆಟಗಾರನ್ನು ವಿದಾಯ ಪಂದ್ಯ ನೀಡದೆ ಅವರಿಗೆ ವಿದಾಯ ಹೇಳುವ ಸಮಯ ಬಂದಿದೆ ಅವರು ಉತ್ತಮ ವಿದಾಯ ಪಂದ್ಯಕ್ಕೆ ಅರ್ಹರು ಎಂದು ಹೇಳಿದ್ದಾರೆ.

    2019 ರ ವಿಶ್ವಕಪ್‍ನಲ್ಲಿ ಅಡಬೇಕು ಎಂದು ಆಸೆ ಇದ್ದ ಯುವರಾಜ್ ಸಿಂಗ್ ಅವರು, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿ.ವಿ.ಎಸ್ ಲಕ್ಷ್ಮಣ್ ಮತ್ತು ಗೌತಮ್ ಗಂಭೀರ್ ಅವರ ರೀತಿಯಲ್ಲೇ ವಿದಾಯ ಪಂದ್ಯವನ್ನು ಆಡದೇ ತನ್ನ 17 ವರ್ಷದ ಕ್ರಿಕೆಟ್ ಜೀವನಕ್ಕೆ ಸೋಮವಾರ ವಿದಾಯ ಹೇಳಿದರು.

     

    2000 ರಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇದುವರೆಗೂ 304 ಏಕದಿನ ಪಂದ್ಯಗಳಲ್ಲಿ 8,701 ರನ್ ಸಿಡಿಸಿದ್ದಾರೆ. 2017 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದರು. 2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು, 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007 ರಲ್ಲಿ ಮೊದಲ ಟಿ20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದಾರೆ. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ.

  • ನಾನು ದ್ವೇಷಿಸುತ್ತಿದ್ದ ಕ್ರಿಕೆಟ್ ಎಲ್ಲವನ್ನೂ ಕಲಿಸಿಕೊಟ್ಟಿತು: ಯುವಿ

    ನಾನು ದ್ವೇಷಿಸುತ್ತಿದ್ದ ಕ್ರಿಕೆಟ್ ಎಲ್ಲವನ್ನೂ ಕಲಿಸಿಕೊಟ್ಟಿತು: ಯುವಿ

    – ಹೇಗೆ ಧೂಳು ಕೊಡವಿ ಎದ್ದೇಳಬೇಕೆಂದು ಕಲಿಸಿದ್ದು ಕ್ರಿಕೆಟ್
    – ವಿದಾಯದ ವೇಳೆ ಭಾವನಾತ್ಮಕ ಮಾತು

    ಮುಂಬೈ: ನಾನು ದ್ವೇಷಿಸುತ್ತಿದ್ದ ಕ್ರಿಕೆಟ್ ಎಲ್ಲವನ್ನೂ ಕಲಿಸಿಕೊಟ್ಟಿತು ಎಂದು ಸಿಕ್ಸರ್‍ಗಳ ಸರದಾರ ಯುವರಾಜ್ ಸಿಂಗ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯದ ನೀಡಿದ ಕುರಿತು ಮಾತನಾಡಿದ ಯುವಿ, ವಿಶ್ವದಾದ್ಯಂತ ಇರುವ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು. ನನ್ನ ಬೆಂಬಲಕ್ಕೆ ನಿಂತು, ಮಾರ್ಗದರ್ಶನ ನೀಡಿದ ತಾಯಿ, ತಂದೆ, ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಆತ್ಮೀಯರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಇದನ್ನೂ ಓದಿ: ಸಿಕ್ಸರ್‌ಗಳ ಸರದಾರ, ಕ್ಯಾನ್ಸರ್ ಗೆದ್ದ ಯುವಿ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ

    25 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಸುಮಾರು 17 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಒಳಗೆ, ಹೊರಗೆ ಇದ್ದ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಹೇಗೆ ಹೋರಾಡಬೇಕು, ಹೇಗೆ ಬೀಳಬೇಕು, ಹೇಗೆ ಧೂಳು ಕೊಡವಿಕೊಳ್ಳಬೇಕು ಮತ್ತು ಪುನಃ ಎದ್ದು ಮುನ್ನಡೆಯಬೇಕು ಎನ್ನುವುದನ್ನು ಕ್ರಿಕೆಟ್ ಕಲಿಸಿಕೊಟ್ಟಿದೆ ಎಂದು ಹೇಳಿದರು. ಇದನ್ನೂ ಓದಿ: ಫ್ಲಿಂಟಾಫ್ ಕಿರಿಕ್‍ಗೆ ಚಿಮ್ಮಿತು 6 ಸಿಕ್ಸ್ – ಸಿಕ್ಸರ್ ಸುರಿಮಳೆಗೈದ ಯುವಿ

    ಟೀಂ ಇಂಡಿಯಾ ಪರ 400 ಪಂದ್ಯಗಳನ್ನು ಆಡಿದ ನಾನು ಅದೃಷ್ಟಶಾಲಿ. ನಾನು ಆಟ ಆಡಲು ಆರಂಭಿಸಿದಾಗ ಇದನ್ನು ಊಹಿಸಿರಲಿಲ್ಲ. ಈ ಆಟದ ಜೊತೆಗೆ ನಾನು ಪ್ರೀತಿ ಮತ್ತು ದ್ವೇಷದ ಸಂಬಂಧವನ್ನು ಹೊಂದಿದ್ದೇನೆ. 28 ವರ್ಷಗಳ ಬಳಿಕ ಸೃಷ್ಟಿಯಾದ ಇತಿಹಾಸದ ಭಾಗವಾಗಿದ್ದೇನೆ. ಇದಕ್ಕಿಂತ ಹೆಚ್ಚಿನದನ್ನು ನಾನು ಕೇಳಬಹುದು ಹೇಳಿದರು.

    ಕ್ಯಾನ್ಸರ್ ಚಿಕಿತ್ಸೆ ನೀಡಿದ ನನ್ನ ವೈದ್ಯರಿಗೆ ಧನ್ಯವಾದಗಳು. ಕ್ಯಾನ್ಸರ್ ರೋಗಿಗಳ ಬಗ್ಗೆ ಕೈಗೊಳ್ಳುತ್ತಿರುವ ಕಾರ್ಯವನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದರು.

  • ಫ್ಲಿಂಟಾಫ್ ಕಿರಿಕ್‍ಗೆ ಚಿಮ್ಮಿತು 6 ಸಿಕ್ಸ್ – ಸಿಕ್ಸರ್ ಸುರಿಮಳೆಗೈದ ಯುವಿ

    ಫ್ಲಿಂಟಾಫ್ ಕಿರಿಕ್‍ಗೆ ಚಿಮ್ಮಿತು 6 ಸಿಕ್ಸ್ – ಸಿಕ್ಸರ್ ಸುರಿಮಳೆಗೈದ ಯುವಿ

    ಬೆಂಗಳೂರು: ಟಿ 20 ಕ್ರಿಕೆಟ್‍ನಲ್ಲಿ 6 ಎಸೆತಗಳಿಗೆ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆಗೈದ ಯುವರಾಜ್ ಸಿಂಗ್ ಇಂದು ಎಲ್ಲ ಮಾದರಿಯ ಕ್ರಿಕೆಟಿನಿಂದ ನಿವೃತ್ತರಾಗಿದ್ದಾರೆ.

    ಯುವಿ ಆಲ್‍ರೌಂಡರ್ ಬ್ಯಾಟ್ಸ್ ಮನ್ ಎನ್ನುವುದು ಮೊದಲೇ ದೃಢಪಟ್ಟಿತ್ತು. ಆದರೆ ಅವರನ್ನು ಕೆರಳಿಸಿದರೆ ಆಗುವ ಫಲಿತಾಂಶ ಏನು ಎನ್ನುವುದು ಗೊತ್ತಾಗಿದ್ದು 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ.

    ಫ್ಲಿಂಟಾಫ್ ಎಸೆದ 18ನೇ ಓವರಿನಲ್ಲಿ ಯುವಿ 4 ಮತ್ತು 5ನೇ ಎಸೆತದಲ್ಲಿ ಬೌಂಡರಿ ಹೊಡೆದಿದ್ದರು. ಈ ಓವರ್ ಕೊನೆಯ ಎಸೆತದಲ್ಲಿ ಒಂದು ರನ್ ಓಡಿದ್ದರು. ಈ ಸಂದರ್ಭದಲ್ಲಿ ಫ್ಲಿಂಟಾಫ್ ಯುವರಾಜ್ ಬಳಿ ಬಂದು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಇದಕ್ಕೆ ಯುವರಾಜ್ ಸಿಟ್ಟಾಗಿ ಅಲ್ಲೇ ಆಕ್ರೋಶ ಹೊರಹಾಕಿದರು. ಈ ವೇಳೆ ಅಂಪೈರ್ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನ ಮಾಡಿದ್ದಾರೆ.

    https://www.youtube.com/watch?v=alwKupWlO8g

    19ನೇ ಓವರ್ ಎಸೆಯಲು ಬಂದಿದ್ದು ಸ್ಟುವರ್ಟ್ ಬ್ರಾಡ್. ಮೊದಲೇ ಸಿಟ್ಟಿನಲ್ಲಿದ್ದ ಯುವಿ ಮೊದಲ ಎಸೆತವನ್ನು ಸಿಕ್ಸರ್‍ಗೆ ಅಟ್ಟಿದರು. ನಂತರ ಸತತ ಎರಡು ಎಸೆತವನ್ನು ಸಿಕ್ಸರ್‍ಗೆ ಅಟ್ಟಿ ಹ್ಯಾಟ್ರಿಕ್ ಸಾಧನೆ ಮಾಡಿದರು. 4ನೇ ಎಸೆತ ಆಫ್ ಸೈಡ್ ಫುಲ್ ಟಾಸ್ ಬಂದರೂ ಯುವಿ ಅದನ್ನು ಸಿಕ್ಸ್ ಆಗಿ ಪರಿವರ್ತಿಸಿದರು. 5ನೇ ಎಸೆತಕ್ಕೂ ಮುನ್ನ ಬ್ರಾಡ್ ಮತ್ತು ನಾಯಕ ಕಾಲಿಂಗ್‍ವುಡ್ ಚರ್ಚೆ ನಡೆಸಿದರು. ಆದರೆ ಈ ಚರ್ಚೆ ಯಾವುದೇ ಫಲಕಾರಿಯಾಗಲಿಲ್ಲ. 5ನೇ ಎಸೆತವೂ ಸಿಕ್ಸ್‍ಗೆ ಹೋಯಿತು. 5ನೇ ಎಸೆತ ಸ್ಟೇಡಿಯಂ ಹೋಗುತ್ತಿದ್ದಂತೆ ಇಂಗ್ಲೆಂಡ್ ಆಟಗಾರರು ಮುಖದ ಮೇಲೆ ಬೆರಳನ್ನು ಇಟ್ಟರು. ಕೊನೆಗೆ 6ನೇ ಎಸೆತದಲ್ಲೂ ಯುವರಾಜ್ ಸಿಕ್ಸರ್ ಹೊಡೆಯುವ ಮೂಲಕ ಟಿ20 ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದರು.

    ಈ ಓವರಿಗೂ ಮುನ್ನ ಯುವರಾಜ್ 6 ಎಸೆತದಲ್ಲಿ 2 ಬೌಂಡರಿ ನೆರವಿನಿಂದ 14 ರನ್ ಗಳಿಸಿದ್ದರೆ, 19 ಓವರ್ ಮುಕ್ತಾಯಕ್ಕೆ ಯುವರಾಜ್ 12 ಎಸೆತದಲ್ಲಿ 50 ರನ್ ಚಚ್ಚಿ ಟಿ 20 ಕ್ರಿಕೆಟ್‍ನಲ್ಲಿ ವೇಗದ ಅರ್ಧಶತಕ ಸಿಡಿಸಿದರು. 18 ಓವರ್ ವೇಳೆ 3 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದ್ದ ಭಾರತದ ಸ್ಕೋರ್ 19 ಓವರ್ ಮುಕ್ತಾಯಕ್ಕೆ 207 ರನ್ ಗಳಿಸಿತ್ತು. ಫ್ಲಿಂಟಾಫ್ ಎಸೆದ ಕೊನೆಯ ಓವರ್‍ನಲ್ಲೂ ಯುವರಾಜ್ ಸಿಕ್ಸ್ ಸಿಡಿಸಿ 58 ರನ್(16 ಎಸೆತ, 3 ಬೌಂಡರಿ, 7 ಸಿಕ್ಸರ್, 362.50 ಸ್ಟ್ರೈಕ್ ರೇಟ್) ಗಳಿಸಿ ಔಟಾದರು. ಅಂತಿಮವಾಗಿ ಭಾರತ 4 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು.

    ಫ್ಲಿಂಟಾಫ್ ಜೊತೆ ಜಗಳ ಯಾಕಾಯ್ತು ಎನ್ನುವುದನ್ನು ಯುವರಾಜ್ ಸಿಂಗ್ 2016 ರಲ್ಲಿ ಬಹಿರಂಗ ಪಡಿಸಿದ್ದರು. 18ನೇ ಓವರ್ ಬಳಿಕ ನನ್ನ ಬಳಿ ಬಂದ ಫ್ಲಿಂಟಾಫ್, F ***ing ರೆಡಿಕ್ಯೂಲಸ್ ಶಾಟ್ ಎಂದು ಹೇಳಿದರು. ಅದಕ್ಕೆ ನಾನು F*** ಯೂ ಎಂದೆ. ನನ್ನ ಉತ್ತರಕ್ಕೆ ಫ್ಲಿಂಟಾಫ್ ಏನು ಹೇಳಿದ್ದು ಎಂದು ಪ್ರಶ್ನಿಸಿದರು. ಇದಕ್ಕೆ, ನಾನು ಏನು ಹೇಳಿದ್ದು ಏನು ಅನ್ನೋದು ಗೊತ್ತಾಯ್ತು ಅಲ್ಲವೇ ಎಂದು ಹೇಳಿದೆ. ಹೀಗೆ ಹೇಳಿದ್ದಕ್ಕೆ ಫ್ಲಿಂಟಾಫ್ ನಾನು ನಿನ್ನ ಗಂಟಲು ಕತ್ತರಿಸುತ್ತೇನೆ ಎಂದು ತಿರುಗೇಟು ನೀಡಿದರು. ಈ ಮಾತು ನನಗೆ ಸಿಟ್ಟು ತರಿಸಿತ್ತು. ಕೂಡಲೇ ನಾನು, ಈ ಬ್ಯಾಟ್ ನನ್ನ ಕೈಯಲ್ಲಿದೆ. ಈ ಬ್ಯಾಟ್ ಮೂಲಕವೇ ಹೊಡೆಯುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದೆ ಎಂದು ಹಳೆಯ ಘಟನೆಯನ್ನು ರಿವೀಲ್ ಮಾಡಿದ್ದರು.

     

  • ಸಿಕ್ಸರ್‌ಗಳ ಸರದಾರ, ಕ್ಯಾನ್ಸರ್ ಗೆದ್ದ ಯುವಿ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ

    ಸಿಕ್ಸರ್‌ಗಳ ಸರದಾರ, ಕ್ಯಾನ್ಸರ್ ಗೆದ್ದ ಯುವಿ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ

    ಮುಂಬೈ: ಟಿ-20 ಕ್ರಿಕೆಟ್‍ನಲ್ಲಿ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದ ಎಡಗೈ ಸ್ಫೋಟಕ ಆಟಗಾರ ಯುವರಾಜ್ ಸಿಂಗ್ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಾರೆ.

    ಇಂಗ್ಲೆಂಡಿನಲ್ಲಿ ವಿಶ್ವಕಪ್ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ 2011ರ ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದ ಯುವರಾಜ್ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು.

    ಈ ಕಾರ್ಯಕ್ರಮದಲ್ಲಿ ಯುವರಾಜ್ ಸಿಂಗ್ ತನಗೆ ಸಿಕ್ಕಿದ ಎಲ್ಲ ಪ್ರಶಸ್ತಿಗಳು, ಟ್ರೋಫಿಗಳು, ಸ್ಮರಣಿಕೆಗಳು, ಬ್ಯಾಟ್ ಮತ್ತು ತಮ್ಮ 12ನೇ ನಂಬರಿನ ಜೆರ್ಸಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದರು.

    ಈ ಹಿಂದೆ ಮುಂಬರುವ 2019 ರ ಐಸಿಸಿ ವಿಶ್ವಕಪ್ ಬಳಿಕ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ 2011 ವಿಶ್ವ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಲ್ ರೌಂಡರ್ ಯುವರಾಜ್ ಸಿಂಗ್ ಹೇಳಿದ್ದರು.

    ಖಾಸಗಿ ಮಾಧ್ಯಮವೊಂದಕ್ಕೆ ಈ ಕುರಿತು ಪ್ರತಿಕ್ರಿಯಿಯಿಸಿದ್ದ 37 ವರ್ಷದ ಯುವರಾಜ್ ಸಿಂಗ್, ಸದ್ಯ 2019 ವಿಶ್ವಕಪ್ ವೇಳೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಕಡೆ ಗಮನ ಹರಿಸಿದ್ದು, ಬಳಿಕ ನಿವೃತ್ತಿಯ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇನೆ. ಕಳೆದ ಎರಡು ದಶಕಗಳಿಂದ ತಾನು ಭಾರತದ ತಂಡದ ಪರ ಆಡುತ್ತಿದ್ದೇನೆ. ಆದರೆ ಮುಂದೊಂದು ದಿನ ನನ್ನ ನಿವೃತ್ತಿಯ ಜೀವನ ಎದುರಾಗುತ್ತದೆ ಎಂದು ತಿಳಿಸಿದ್ದರು.

    2011 ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಟೂರ್ನಿಯಲ್ಲಿ 90.50 ಸರಾಸರಿಯಲ್ಲಿ 362 ರನ್ ಹಾಗೂ 15 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು.

    2000 ರಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ ಇದುವರೆಗೂ 304 ಏಕದಿನ ಪಂದ್ಯಗಳಲ್ಲಿ 8,701 ರನ್ ಸಿಡಿಸಿದ್ದಾರೆ. 2017 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊನೆ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದಾರೆ. 2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು, 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007 ರಲ್ಲಿ ಮೊದಲ ಟಿ20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದಾರೆ. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ.

    ಕ್ರಿಕೆಟ್ ವೃತ್ತಿ ಜೀವನದ ಆರಂಭ 6, 7 ವರ್ಷಗಳ ಕಾಲ ಉತ್ತಮವಾಗಿ ಆಡಿದ್ದೇನೆ. ನಂತರ ಅವಧಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾದವು. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಿತು. ಆದರೆ ಕ್ಯಾನ್ಸರ್ ನಿಂದ ಗುಣಮುಖನಾದೆ. ಬಳಿಕ ತಂಡದಲ್ಲಿ ನನಗೆ ನಿರಂತರವಾಗಿ ಅವಕಾಶ ಸಿಗಲಿಲ್ಲ. ಕೆಲವು ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು ಎಂದು ಈ ಹಿಂದೆ ಯುವಿ ತಿಳಿಸಿದ್ದರು.

    2011ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ತಂಡದಲ್ಲಿ ನಿರಂತರವಾಗಿ ಆಡಿದ್ದ ಯುವಿ ಆನಂತರ ಕ್ಯಾನ್ಸರ್ ನಿಂದ ಬಳಲಿದ್ದರು. ಆದರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದು ಬಂದ ಅವರು ಬಳಿಕ ಫಾರ್ಮ್ ಸಮಸ್ಯೆಯಿಂದ ಬಳಲಿದ್ದರು.

    ಯುರಾಜ್ ಸಿಂಗ್‍ಗೆ ಅವರಿಗೆ ಈ ಬಾರಿ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ಜೀವದಾನ ನೀಡಿತ್ತು. ಯುವಿ ಮೂಲ ಬೆಲೆ 1 ಕೋಟಿ ರೂ. ಗೆ ಖರೀದಿ ಮಾಡಿತ್ತು. ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯುವರಾಜ್ ರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಹಿಂದೇಟು ಹಾಕಿದ್ದರು. ಮೊದಲ ಸುತ್ತಿನಲ್ಲಿ ಯುವಿರನ್ನು ಖರೀದಿ ಮಾಡಲು ಯಾವ ತಂಡಗಳು ಮುಂದೆ ಬರಲಿಲ್ಲ. ಬಳಿಕ 2ನೇ ಸುತ್ತಿನಲ್ಲಿ ಮುಂಬೈ ಖರೀದಿ ಮಾಡಿತು.

    ತಮ್ಮ ವೃತ್ತಿ ಜೀವನದ ಅತ್ಯುನ್ನತ್ತ ಶಿಖರದಲ್ಲಿರುವಾಗ ಯುವಿ 2014 ರಲ್ಲಿ ಬರೋಬ್ಬರಿ 16 ಕೋಟಿ ರೂ. ಹಾಗೂ 2015ರಲ್ಲಿ 16 ಕೋಟಿ ರೂ. ಗಳಿಗೆ ಹರಾಜುಗೊಳ್ಳುವ ಮೂಲಕ ದುಬಾರಿ ಆಟಗಾರನೆಂಬ ದಾಖಲೆ ಬರೆದಿದ್ದರು. ಆದರೆ ಆ ಬಳಿಕ 2017, 2018, 2019 ರಲ್ಲಿ ಕ್ರಮವಾಗಿ 7, 2, 1 ಕೋಟಿ ರೂ.ಗೆ ಹರಾಜು ಆಗಿದ್ದರು.ಕಳೆದ ಐಪಿಎಲ್ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಿದ್ದರು. ಆದರೆ ಟೂರ್ನಿಯಲ್ಲಿ 8 ಇನ್ನಿಂಗ್ಸ್ ಗಳಿಂದ ಕೇವಲ 65 ರನ್ ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ದರು.

  • ಶೀಘ್ರವೇ ಯುವಿ ಕ್ರಿಕೆಟ್ ನಿವೃತ್ತಿಗೆ ಚಿಂತನೆ!

    ಶೀಘ್ರವೇ ಯುವಿ ಕ್ರಿಕೆಟ್ ನಿವೃತ್ತಿಗೆ ಚಿಂತನೆ!

    ಮುಂಬೈ: ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಪರ ಆಡಿದ್ದ ಯುವರಾಜ್ ಸಿಂಗ್ ವಿದೇಶಿ 20 ಟೂರ್ನಿಗಳತ್ತ ಮುಖ ಮಾಡಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಿಸಲು ಚಿಂತನೆ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಫಾರ್ಮ್ ಸಮಸ್ಯೆಯಿಂದ ಟೀಂ ಇಂಡಿಯಾ ತಂಡದಿಂದ ದೂರವೇ ಉಳಿದಿರುವ ಯುವಿ ಮತ್ತೆ ತಂಡಕ್ಕೆ ಆಯ್ಕೆ ಆಗುವುದು ಕಷ್ಟಸಾಧ್ಯ ಎಂದು ಹಲವು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತ ಈ ಬಾರಿಯ ಐಪಿಎಲ್ ನಲ್ಲೂ ಯುವಿ ಕೇವಲ 4 ಪಂದ್ಯಗಳನಷ್ಟೇ ಆಡಲು ಅವಕಾಶ ಲಭಿಸಿತ್ತು.

    ಸದ್ಯ ಯುವಿಗೆ ಗ್ಲೋಬಲ್ ಟಿ20 ಹಾಗೂ ಐರ್ಲೆಂಡ್ ನಲ್ಲಿ ನಡೆಯಲಿರುವ ಯುರೋ ಟಿ20 ಟೂರ್ನಿಗಳಿಂದ ಆಫರ್ ಲಭಿಸಿದ್ದು, ಈ ಸರಣಿಗಳಲ್ಲಿ ಭಾಗವಹಿಸ ಬೇಕಾದರೆ ಯುವಿ ನಿಯಮಗಳ ಅನ್ವಯ ನಿವೃತ್ತಿ ಘೋಷಿಸಬೇಕಾಗುತ್ತದೆ. ಯುವಿ ಫಸ್ಟ್ ಕ್ಲಸ್ ಕ್ರಿಕೆಟ್ ಹಾಗೂ ಬಿಸಿಸಿಐ ಟಿ20 ಅಂತರಾಷ್ಟ್ರಿಯ ಪಂದ್ಯಗಳಲ್ಲಿ ಆಡಲು ಒಪ್ಪಂದ ಮಾಡಿಕೊಂಡಿದ್ದು, ಪರಿಣಾಮ ವಿದೇಶಿ ಟೂರ್ನಿಗಳಲ್ಲಿ ಆಡಲು ಬಿಸಿಸಿಐ ಅನುಮತಿ ಅಗತ್ಯವಿದೆ.

    ಕೆಲದಿನಗಳ ಹಿಂದೆಯಷ್ಟೇ ಟೀಂ ಇಂಡಿಯಾ ಹಿರಿಯ ಆಟಗಾರ ಇರ್ಫಾನ್ ಪಠಾಣ್ ಅವರು ಕೆರಿಬಿಯನ್ ಲೀಗ್ ನಲ್ಲಿ ಆಡಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇರ್ಫಾನ್ ಫಸ್ಟ್ ಕ್ಲಸ್ ಕ್ರಿಕೆಟ್‍ಗೆ ನಿವೃತಿ ಘೋಷಣೆ ಮಾಡಿರದ ಕಾರಣ ಬಿಸಿಸಿಐ ಹೆಸರನ್ನು ಹಿಂಪಡೆಯುವಂತೆ ಸೂಚಿಸಿತ್ತು. ಯುವರಾಜ್ ಸಿಂಗ್ ಅವರಿಗೂ ಇದೇ ನಿಯಮಗಳು ಅನ್ವಯವಾಗುವುದಿರಂದ ಯುವಿ ನಿವೃತ್ತಿ ಘೋಷಿಸಿ ವಿದೇಶಿ ಟೂರ್ನಿಗಳಲ್ಲಿ ಆಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ, ಇರ್ಫಾನ್ ಹೆಸರನ್ನು ಡ್ರಾಪ್ ಮಾಡುವಂತೆ ಹೇಳಿರುವುದರಿಂದ ಯುವರಾಜ್ ಅವರಿಗೂ ಈ ನಿಯಮಗಳನ್ನು ಪರಿಶೀಲಿಸಬೇಕಿದೆ. ಅವರು ಪ್ರಥಮ ದರ್ಜೆ ಕ್ರಿಕೆಟ್ ವಿದಾಯ ಹೇಳಿದರೂ ಕೂಡ ಬಿಸಿಸಿಐ ಅಡಿಯಲ್ಲಿ ಟಿ20 ಮಾದರಿಗೆ ನೋಂದಾಯಿಸಲಾಗಿರುವ ಸಕ್ರೀಯ ಆಟಗಾರರಾಗಿದ್ದಾರೆ ಎಂದು ಹೇಳಿದ್ದಾರೆ.

  • ಫೋಟೋ ಹಾಕಿದ ಕೊಹ್ಲಿಯನ್ನು ಟ್ರೋಲ್ ಮಾಡಿದ ಯುವಿ

    ಫೋಟೋ ಹಾಕಿದ ಕೊಹ್ಲಿಯನ್ನು ಟ್ರೋಲ್ ಮಾಡಿದ ಯುವಿ

    ನವದೆಹಲಿ: ಇನ್ಸಟಾಗ್ರಾಮ್‍ಗೆ ಫೋಟೋ ಹಾಕಿದ್ದ ವಿರಾಟ್ ಕೊಹ್ಲಿಗೆ ಕಮೆಂಟ್ ಮಾಡುವ ಮೂಲಕ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಕಾಲೆಳೆದಿದ್ದಾರೆ.

    ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ಇನ್ಸಾಟಗ್ರಾಮ್ ಖಾತೆಯಲ್ಲಿ ಜೆಕ್ ರಿಪಬ್ಲಿಕ್‍ನ ರಾಜಧಾನಿ ಫ್ರಾಗ್ ನಗರದಲ್ಲಿನ ಓಲ್ಡ್ ಟೌನ್ ಸ್ಕ್ವೇರ್ ನಲ್ಲಿ ತೆಗೆದಿರುವ ಹಳೆಯ ಸೆಲ್ಫಿ ಫೋಟೋ ಹಾಕಿಕೊಂಡು ‘ಫ್ಲಾಶ್‍ಬ್ಯಾಕ್‍ಫ್ರೈಡೆ’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಗೆಳಯರೇ ಈ ನಗರ ಯಾವುದು ಎಂದು ಊಹಿಸುವಿರಾ?” ಎಂದು ಬರೆದಿದ್ದಾರೆ.

    https://www.instagram.com/p/Bxj7q7cgb_q/?utm_source=ig_embed

    ಫೋಟೋಗೆ ಕಮೆಂಟ್ ಮಾಡಿರುವ ಯುವರಾಜ್ ಸಿಂಗ್ ಪಂಜಾಬಿನ ಐತಿಹಾಸಿಕ ನಗರ ಕೋಟಕ್ಪುರ ಎಂದು ಕಾಣುತ್ತದೆ ಎಂದು ಬರೆದು ಹರ್ಭಜನ್ ಸಿಂಗ್ ಅವರನ್ನು ಟ್ಯಾಗ್ ಮಾಡಿ ಕೊಹ್ಲಿಯನ್ನು ಕಿಚಾಯಿಸಿದ್ದಾರೆ.

    ಐಪಿಎಲ್ 12ನೇ ಅವೃತ್ತಿಯಲ್ಲಿ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದ ಕೊಹ್ಲಿಗೆ ಈ ಬಾರಿ ಯಶಸ್ಸು ಸಿಕ್ಕಿರಲಿಲ್ಲ. ಐಪಿಎಲ್ ಬಳಿಕ ವಿಶ್ವಕಪ್‍ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಕೊಹ್ಲಿ ಮೇಲೆ ಭಾರೀ ನೀರಿಕ್ಷೆಗಳಿವೆ.

    ಇಂಗ್ಲೆಂಡ್‍ನಲ್ಲಿ ಮೇ 30 ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು. ಈ ವಿಶ್ವಕಪ್‍ನಲ್ಲಿ ತನ್ನ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಜೂನ್ 5ರಂದು ಸೌತ್ ಆಫ್ರಿಕಾ ವಿರುದ್ಧ ಆಡಲಿದೆ.