Tag: ಯುವರಾಜ್ ಸಿಂಗ್

  • ಯುವಿ ಕುಟುಂಬದ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣ ಕೈಬಿಟ್ಟ ಆಕಾಂಕ್ಷ

    ಯುವಿ ಕುಟುಂಬದ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣ ಕೈಬಿಟ್ಟ ಆಕಾಂಕ್ಷ

    ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯ ದೂರು ದಾಖಲಿಸಿದ್ದ ಬಿಗ್ ಬಾಸ್ 10 ಆವೃತ್ತಿಯ ಸ್ಪರ್ಧಿ ಆಕಾಂಕ್ಷ ಶರ್ಮಾ ಪ್ರಕರಣವನ್ನು ಕೈಬಿಟ್ಟಿದ್ದಾರೆ.

    ಯುವಿ ಸೋದರನ ಪತ್ನಿಯಾಗಿರುವ ಅಕಾಂಕ್ಷ 2017ರಲ್ಲಿ ಯುವರಾಜ್ ಸಿಂಗ್ ಕುಟುಂಬ ಹಾಗು ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಅಡಿ ಮಾನಸಿಕ ಮತ್ತು ಆರ್ಥಿಕವಾಗಿ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು.

    ಅಕಾಂಕ್ಷರ ದೂರಿನಂತೆ ಗುರುಗ್ರಾಮದ ಪೊಲೀಸ್ ಯುವರಾಜ್ ಸಿಂಗ್ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ಯುವರಾಜ್ ಜೊತೆಗೆ ಅವರ ತಾಯಿ ಶಬ್ಮಮ್, ಸಹೋದರ ಜೊರಾವರ್ ಸಿಂಗ್ ವಿರುದ್ಧ ದೂರು ದಾಖಲಿಸಲಾಗಿತ್ತು. ಸದ್ಯ ದೂರು ಹಿಂಪಡೆದಿರುವ ಆಕಾಂಕ್ಷ, ಯುವಿ ಕುಟುಂಬದ ಕ್ಷಮೆಯಾಚಿಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಜೊರಾವರ್ ಸಿಂಗ್, ಆಕಾಂಕ್ಷ ವಿವಾಹ ವಿಚ್ಛೇದನ ಪಡೆದಿದ್ದರು. ಈ ವೇಳೆ 48 ಲಕ್ಷ ರೂ. ಜೀವನಾಂಶ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಯುವಿ ಸೋದರ ಜೊರಾವರ್ 2014ರಲ್ಲಿ ಅಕಾಂಕ್ಷಾರನ್ನು ಮದುವೆಯಾಗಿದ್ದರು. ಆಕಾಂಕ್ಷ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋ ಭಾಗಿಯಾಗಿದ್ದರು. ಶೋದಲ್ಲಿಯೇ ತನ್ನ ಮೇಲೆ ಕೌಟುಂಬಿಕ ದೌರ್ಜನ್ಯ ನಡೆದಿದೆ ಎಂದು ಹೇಳಿದ್ದರು. ಅಲ್ಲದೇ ಯುವರಾಜ್ ಸಿಂಗ್ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದರು. ಬಿಗ್ ಬಾಸ್ ಶೋದಿಂದ ಹೊರಬಂದ 4 ತಿಂಗಳಲ್ಲೇ ಮನೆ ಬಿಟ್ಟು ಹೊರ ಬಂದಿದ ಅವರು ಬಳಿಕ ಪತಿಯಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.

    https://www.instagram.com/p/B1okzITAqnO/

  • 3ನೇ ಏಕದಿನದಲ್ಲಿ ಯುವಿಯನ್ನು ಹಿಂದಿಕ್ಕುವ ತವಕದಲ್ಲಿ ರೋಹಿತ್

    3ನೇ ಏಕದಿನದಲ್ಲಿ ಯುವಿಯನ್ನು ಹಿಂದಿಕ್ಕುವ ತವಕದಲ್ಲಿ ರೋಹಿತ್

    ನವದೆಹಲಿ: ಇಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರನ್ನು ಉಪನಾಯಕ ರೋಹಿತ್ ಶರ್ಮಾ ಹಿಂದಿಕ್ಕುವ ತವಕದಲ್ಲಿ ಇದ್ದಾರೆ.

    2011ರ ವಿಶ್ವಕಪ್ ಸ್ಟಾರ್ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರು ಭಾರತದ ಪರ 304 ಏಕದಿನ ಪಂದ್ಯಗಳನ್ನಾಡಿ ಒಟ್ಟು 8,701 ರನ್ ಗಳಿಸಿದ್ದರು. ಇಂದು ನಡೆಯಲಿರುವ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 26 ರನ್ ಗಳಿಸಿದರೆ ಯುವರಾಜ್ ಸಿಂಗ್ ಅವರನ್ನು ಹಿಂದಿಕ್ಕಲಿದ್ದಾರೆ.

    ಭಾರತದ ಪರ 217 ಏಕದಿನ ಪಂದ್ಯಗಳನ್ನು ಆಡಿರುವ ರೋಹಿತ್ ಶರ್ಮಾ ಒಟ್ಟು 8,676 ರನ್ ಹೊಡೆದಿದ್ದಾರೆ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಯುವರಾಜ್ ಸಿಂಗ್, 304 ಪಂದ್ಯಗಳನ್ನು ಆಡಿ ಒಟ್ಟು 8,701 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ ಇಂದು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯದಲ್ಲಿ 26 ರನ್ ಗಳಿಸಿದರೆ ಯುವರಾಜ್ ಸಿಂಗ್ ಅವರನ್ನು ಹಿಂದಿಕ್ಕಲಿದ್ದಾರೆ.

    ಈ ಮೂಲಕ ರೋಹಿತ್ ಶರ್ಮಾ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಹೋಗಲಿದ್ದಾರೆ. ಈ ಪಟ್ಟಿಯಲ್ಲಿ 18426 ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ನಂತರ ವಿರಾಟ್ ಕೊಹ್ಲಿ (11,406), ಸೌರವ್ ಗಂಗೂಲಿ (11,363), ರಾಹುಲ್ ದ್ರಾವಿಡ್ (10,889), ಎಂ.ಎಸ್.ಧೋನಿ (10,773), ಮೊಹಮ್ಮದ್ ಅಜರುದ್ದೀನ್ (9,378) ಮತ್ತು ಯುವರಾಜ್ ಸಿಂಗ್ (8,701) ಇದ್ದಾರೆ.

    ಎರಡು ದಾಖಲೆಗಳ ಸನಿಹದಲ್ಲಿ ಕೊಹ್ಲಿ

    ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿದ ನಾಯಕ ವಿರಾಟ್ ಕೊಹ್ಲಿ, ಭಾನುವಾರ ನಡೆದ 2ನೇ ಏಕದಿನ ಪಂದ್ಯಗಳಲ್ಲಿ ಭಾರತದ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಅವರು ಕೇವಲ 174 ರನ್ ಗಳಿಸಿದರೆ ಅಂತಾರಾಷ್ಟ್ರೀಯ ಏಕದಿನ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಜಾಕ್ವೆಸ್ ಕಾಲಿಸ್ ಅವರನ್ನು ಹಿಂದಿಕ್ಕುವ ಅವಕಾಶವಿದೆ. ಏಕದಿನದಲ್ಲಿ 238 ಪಂದ್ಯಗಳನ್ನು ಆಡಿರುವ ಕೊಹ್ಲಿ 11,406 ರನ್ ಗಳಿಸಿದ್ದಾರೆ. 328 ಪಂದ್ಯಗಳನ್ನು ಆಡಿರುವ ಕಾಲೀಸ್ 11,579 ರನ್ ಗಳಿಸಿದ್ದಾರೆ.

    ಇದರ ಜೊತೆ ಇನ್ನೊಂದು ದಾಖಲೆಯ ಸನಿಹದಲ್ಲಿ ಕೊಹ್ಲಿ ಇದ್ದು, ವೆಸ್ಟ್-ಇಂಡೀಸ್‍ನಲ್ಲಿ ಭಾರತ-ವಿಂಡೀಸ್ ಏಕದಿನ ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್‍ಗಳ ಪಟ್ಟಿಯಲ್ಲಿ ಕೊಹ್ಲಿಗೆ ರಾಮ್‍ನರೇಶ್ ಸರ್ವಾನ್ ಅವರನ್ನು ಮೀರಿಸಲು ಕೇವಲ 25 ರನ್‍ಗಳು ಬೇಕಾಗಿದೆ. ಕೊಹ್ಲಿ 14 ಪಂದ್ಯಗಳಿಂದ 61.45 ರ ಸರಾಸರಿಯಲ್ಲಿ 676 ರನ್ ಗಳಿಸಿದ್ದು, ವೆಸ್ಟ್ ಇಂಡೀಸ್‍ನಲ್ಲಿ 3 ಏಕದಿನ ಶತಕಗಳನ್ನು ಸಿಡಿಸಿದ್ದಾರೆ.

    ಶಮಿ ದಾಖಲೆ ಮುರಿಯುವ ಸನಿಹದಲ್ಲಿ ಕುಲ್‍ದೀಪ್
    ಭಾರತದ ಪರ 56 ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದ ವೇಗದ ಬೌಲರ್ ಮೊಹಮ್ಮದ್ ಶಮಿ ಅತೀ ವೇಗದಲ್ಲಿ ನೂರು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದರು. ಆದರೆ 53 ಪಂದ್ಯಗಳನ್ನು ಆಡಿ 96 ವಿಕೆಟ್ ಪಡೆದಿರುವ ಎಡಗೈ ಸ್ಪಿನ್ನರ್ ಕುಲ್‍ದೀಪ್ ಯಾದವ್, ಇಂದು ನಡೆಯಲಿರುವ ಪಂದ್ಯದಲ್ಲಿ 4 ವಿಕೆಟ್ ಪಡೆದರೆ ಶಮಿ ಅವರ ದಾಖಲೆಯನ್ನು ಮುರಿಯಲಿದ್ದಾರೆ.

  • ಕೆನಡಾ ಗ್ಲೋಬಲ್ ಟಿ20 ಲೀಗ್‍- ‘ದುಡ್ಡು ಕೊಟ್ಟರೆ ಮಾತ್ರ ಆಡುತ್ತೇವೆ’

    ಕೆನಡಾ ಗ್ಲೋಬಲ್ ಟಿ20 ಲೀಗ್‍- ‘ದುಡ್ಡು ಕೊಟ್ಟರೆ ಮಾತ್ರ ಆಡುತ್ತೇವೆ’

    ಟೊರೆಂಟೊ: ಕ್ರಿಕೆಟ್ ಜನಪ್ರಿಯತೆಯನ್ನ ಹೆಚ್ಚಿಸಲು ಇತ್ತೀಚೆಗೆ ಕ್ರಿಕೆಟ್ ಲೀಗ್‍ಗಳನ್ನು ಆಯೋಜಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಟೂರ್ನಿ ಇಂತಹ ಟೂರ್ನಿಗಳ ಮತ್ತೊಂದು ಮುಖವನ್ನು ತೋರಿಸಿದೆ.

    ವಿಶ್ವ ಕ್ರಿಕೆಟ್‍ನ ಪ್ರಮುಖ ಕ್ರಿಕೆಟಿಗರು ಭಾಗವಹಿಸಿದ್ದ ಕೆನಡಾ ಗ್ಲೋಬಲ್ ಟಿ20 ಕ್ರಿಕೆಟ್ ಟೂರ್ನಿಯ ಭಾಗವಾಗಿ ಬುಧವಾರ ನಡೆಯಬೇಕಿದ್ದ ಪಂದ್ಯದಲ್ಲಿ ಯಾರು ಊಹೆ ಮಾಡದ ಘಟನೆಯೊಂದು ನಡೆದಿದೆ. ನಿಗದಿತ ವೇಳಾಪಟ್ಟಿ ಅನ್ವಯ ಮಾಂಟ್ರಿಯಲ್ ಟೈಗರ್ಸ್ ಮತ್ತು ಟೊರೆಂಟೊ ನ್ಯಾಷನಲ್ ತಂಡಗಳು ಬುಧವಾರ ಪಂದ್ಯವಾಡಬೇಕಿತ್ತು. ಆದರೆ ಆಟಗಾರರು ಪಂದ್ಯಕ್ಕೆ ಸಮಯವಾಗುತ್ತಿದಂತೆ ತಮ್ಮ ಬೇಡಿಕೆ ಮುಂದಿಟ್ಟು ಮೈದಾನಕ್ಕೆ ತೆರಳದೆ ಹೋಟೆಲ್ ನಲ್ಲೇ ಉಳಿದುಕೊಂಡಿದ್ದರು.

    ಭಾರತದ ಕಾಲಮಾನದ ಅನ್ವಯ ಬುಧವಾರದ ಪಂದ್ಯ ರಾತ್ರಿ 10 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಆಟಗಾರರು ತಮಗೆ ಟೂರ್ನಿ ಆಯೋಜಕರು ಭಾರೀ ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದಾರೆ. ತಮ್ಮ ಹಣವನ್ನು ನೀಡಿದರೆ ಮಾತ್ರ ಆಡುವುದಾಗಿ ಪಟ್ಟು ಹಿಡಿದಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆಟಗಾರರ ನಿರ್ಧಾರದ ಪರಿಣಾಮ ನಿಗದಿತ ಸಮಯವಾದರು ಪಂದ್ಯ ಆರಂಭಗೊಂಡಿರಲಿಲ್ಲ.

    ಇತ್ತ ಪಂದ್ಯವನ್ನು ಪ್ರಸಾರ ಮಾಡಬೇಕಿದ್ದ ವಾಹಿನಿಗಳು ಕಾರಣಾಂತರಗಳಿಂದ ಪಂದ್ಯ ತಡವಾಗುತ್ತಿದೆ ಎಂಬ ಸ್ಕ್ರೋಲಿಂಗ್ ನೀಡಿ ಹಳೆ ಪಂದ್ಯವನ್ನೇ ಮರು ಪ್ರಸಾರ ಮಾಡಿದ್ದವು. ಇತ್ತ ಟೂರ್ನಿಯ ಆಯೋಜಕರು ಆಟಗಾರರ ಮನವೊಲಿಕೆಗೆ ಮುಂದಾಗಿದ್ದರು. ಸರಿಸುಮಾರು 2 ಗಂಟೆಗಳು ತಡವಾಗಿ ಪಂದ್ಯ ಆರಂಭವಾಗಿತ್ತು. ಯುವರಾಜ್ ಸಿಂಗ್ ನಾಯಕತ್ವದ ಟೊರೆಂಟೊ ನ್ಯಾಷನಲ್ಸ್ ತಂಡದಲ್ಲಿ ಬ್ರೆಂಡನ್ ಮೆಕಲಮ್, ಪೋಲಾರ್ಡ್ ರಂತಹ ಖ್ಯಾತ ಆಟಗಾರರು ಇದ್ದು, ಮಾಂಟ್ರಿಯಲ್ ಟೈಗರ್ಸ್ ಪರ ಸುನಿಲ್ ನರೇನ್, ತಿಸಾರ ಪೆರೆರಾ ಸೇರಿದಂತೆ ಹಲವು ಆಟಗಾರರು ಆಡುತ್ತಿದ್ದಾರೆ. ತಡವಾಗಿ ಆರಂಭವಾದ ಈ ಪಂದ್ಯದಲ್ಲಿ ಮೊದಲು ಯುವಿ ನೇತೃತ್ವದ ತಂಡ ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತ್ತು. ಅ ಬಳಿಕ ಗುರಿ ಬೆನ್ನತ್ತಿದ ಟೈಗರ್ಸ್ ತಂಡ 19.3 ಓವರ್ ಗಳಲ್ಲಿ 154 ರನ್ ಗಳಿಸಿ ಅಲೌಟ್ ಆಯ್ತು. ಪಂದ್ಯದಲ್ಲಿ 35 ರನ್ ಗೆಲುವು ಪಡೆದ ಟೊರೆಂಟೊ ನ್ಯಾಷನಲ್ಸ್ ತಂಡ ಟೂರ್ನಿಯಲ್ಲಿ ಪ್ಲೇ ಆಫ್‍ಗೆ ಆರ್ಹತೆ ಪಡೆಯಿತು.

  • ಪ್ರೇಮಿಗಳ ನಡುವೆ ಮಧ್ಯ ಪ್ರವೇಶಿಸಿದ ಯುವರಾಜ್ ಸಿಂಗ್

    ಪ್ರೇಮಿಗಳ ನಡುವೆ ಮಧ್ಯ ಪ್ರವೇಶಿಸಿದ ಯುವರಾಜ್ ಸಿಂಗ್

    ಟೊರೆಂಟೊ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿರುವ ಯುವರಾಜ್ ಸಿಂಗ್ ಗ್ಲೋಬಲ್ ಟಿ20 ಕೆನಡಾ ಲೀಗ್‍ನಲ್ಲಿ ಆಡುತ್ತಿದ್ದಾರೆ. ಲೀಗ್ ನಲ್ಲಿ ಟೊರೆಂಟೊ ನ್ಯಾಷನಲ್ಸ್ ಪರ ಆಡುತ್ತಿರುವ ಯುವಿ ಶನಿವಾರ ನಡೆದ ಪಂದ್ಯದ ಸಂದರ್ಭದಲ್ಲಿ ವಿಶೇಷ ಘಟನೆಗೆ ಕಾರಣರಾದರು.

    ಟೊರೆಂಟೊ ಮತ್ತು ಎಡ್ಮಂಟನ್ ರಾಯಲ್ಸ್ ತಂಡಗಳ ನಡುವಿನ ಪಂದ್ಯದ ಸಂದರ್ಭದಲ್ಲಿ ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ಕೆಲ ಸಮಯ ಆಟ ಸ್ಥಗಿತಗೊಂಡಿತ್ತು. ಇದರಿಂದ ಯುವಿ ಇತರೆ ಆಟಗಾರರೊಂದಿಗೆ ಸಮಯ ಕಳೆಯುತ್ತಿದ್ದರು. ಈ ಸಂದರ್ಭದಲ್ಲಿ ಎಡ್ಮಂಟನ್ ರಾಯಲ್ಸ್ ತಂಡದ ಪರ ಆಡುತ್ತಿದ್ದ ಆಸೀಸ್ ಆಟಗಾರ ಬೆನ್ ಕಟಿಂಗ್‍ರನ್ನು ನ್ಯೂಸ್ ಪ್ರೆಸೆಂಟರ್ ಎರನ್ ಹಾಲೆಂಡ್ ಸಂದರ್ಶನ ಮಾಡುತ್ತಿದ್ದರು. ಇದನ್ನು ಗಮನಿಸಿದ್ದ ಯುವಿ ಇಬ್ಬರ ನಡುವೆ ಮಧ್ಯ ಪ್ರವೇಶ ಮಾಡಿ, ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.

    ಯುವಿ ಎಂಟ್ರಿ ಕೊಟ್ಟು ಪ್ರಶ್ನೆ ಮಾಡುತ್ತಿದಂತೆ ಕ್ಷಣ ಕಾಲ ಅಚ್ಚರಿಗೊಂಡಂತೆ ಕಂಡ ಎರನ್ ಹಾಲೆಂಡ್, ಯುವಿ ಪ್ರಶ್ನೆಗೆ ಉತ್ತರಿಸಲು ಪ್ರಯತ್ನ ನಡೆಸಿದರು. ಆದರೆ ಅಷ್ಟರಲ್ಲೇ ಯುವಿ ಜಾಗ ಖಾಲಿ ಮಾಡಿದ್ದರು. ಅಂದಹಾಗೇ ಎರನ್ ಹಾಲೆಂಡ್ ಮತ್ತು ಬೆನ್ ಕಟಿಂಗ್ ಇಬ್ಬರು ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್ ನಲ್ಲಿದ್ದು, ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಇಬ್ಬರ ಮದುವೆಯೂ ನಡೆಯಲಿದೆ. ಇದರ ನಡುವೆಯೇ ಮಧ್ಯ ಪ್ರವೇಶ ಮಾಡಿದ ಯುವಿ ಪ್ರೀತಿಯಿಂದ ಇಬ್ಬರ ಕಾಲೆಳೆಯಲು ಪ್ರಯತ್ನ ನಡೆಸಿದ್ದಾರೆ.

     

  • ಔಟಾಗದಿದ್ದರೂ ಪೆವಿಲಿಯನ್‍ಗೆ ತೆರಳಿದ ಯುವಿ – ವಿಡಿಯೋ

    ಔಟಾಗದಿದ್ದರೂ ಪೆವಿಲಿಯನ್‍ಗೆ ತೆರಳಿದ ಯುವಿ – ವಿಡಿಯೋ

    ಟೊರೊಂಟೊ: ಅಂತರಾಷ್ಟ್ರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸಿರುವ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತೆ ಬ್ಯಾಟ್ ಹಿಡಿದಿದ್ದಾರೆ. ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್ ಟಿ20 ಟೂರ್ನಿಯಲ್ಲಿ ಟೊರೊಂಟೊ ನ್ಯಾಷನಲ್ಸ್ ತಂಡದ ಪರ ಯುವಿ ಆಡುತ್ತಿದ್ದಾರೆ.

    ಟೂರ್ನಿಯಲ್ಲಿ ಕ್ರಿಸ್ ಗೇಲ್ ನಾಯಕತ್ವದ ವ್ಯಾಂಕೋವರ್ ನೈಟ್ಸ್ ತಂಡದ ವಿರುದ್ಧ ಗುರುವಾರ ಟೊರೊಂಟೊ ನ್ಯಾಷನಲ್ಸ್ ತಂಡ ಮೊದಲ ಪಂದ್ಯವನ್ನು ಆಡಿತ್ತು. ಪಂದ್ಯದಲ್ಲಿ ಯುವಿ 27 ಎಸೆಗಳಲ್ಲಿ ಕೇವಲ 17 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು. ಆದರೆ ಯುವಿ ಪಂದ್ಯದಲ್ಲಿ ಔಟಾಗದೆ ಇದ್ದರೂ ಕೂಡ ಔಟ್ ಎಂದು ಭಾವಿಸಿ ಪೆವಿಲಿಯನ್ ಕಡೆ ನಡೆದಿದ್ದರು.

    ರಿಜ್ವಾನ್ ಬೌಲಿಂಗ್ ನಲ್ಲಿ ಯುವಿ ಔಟಾಗುತ್ತಿದಂತೆ ಪೆವಿಲಿಯನ್ ಕಡೆ ನಡೆದರು. ಆದರೆ ವಿಡಿಯೋ ರಿಪ್ಲೈ ಸಂದರ್ಭದಲ್ಲಿ ನಾಟೌಟ್ ಆಗಿದ್ದು ಕಂಡು ಬಂತು. ಆದರೆ ಈ ವೇಳೆಗಾಗಲೇ ಯುವಿ ಪೆವಿಲಿಯನ್ ಸೇರಿದ್ದರು. ರಿಜ್ವಾನ್ ಎಸೆದ ಚೆಂಡು ಬ್ಯಾಟ್‍ಗೆ ತಾಗಿ ಕೀಪರ್ ಕೈ ಸೇರಿದ್ದರು ಕೂಡ ಕ್ಯಾಚ್ ಪಡೆಯಲು ವಿಫಲರಾದ ಪರಿಣಾಮ ವಿಕೆಟ್‍ಗೆ ಬಡಿದಿತ್ತು. ಚೆಂಡು ಕೀಪರಿಗೆ ತಾಗಿ ವಿಕೆಟ್‍ಗೆ ತಾಗಿದರು ಕೂಡ ಯುವಿ ಕ್ರೀಸ್‍ನಲ್ಲೇ ಇದ್ದು, ಬಳಿಕ ಮುಂದೇ ಸಾಗಿದ್ದರು. ಇದನ್ನು ಗಮನಿಸದ ಯುವಿ ತಾನು ಔಟಾಗಿದ್ದೇನೆ ಎಂದು ಭಾವಿಸಿ ಹೊರ ನಡೆದಿದ್ದರು.

    ಪಂದ್ಯದಲ್ಲಿ ಗೇಲ್ ನಾಯಕತ್ವದ ವ್ಯಾಂಕೋವರ್ ನೈಟ್ಸ್ ತಂಡ 8 ವಿಕೆಟ್ ಗೆಲುವು ಪಡೆದಿದೆ. ಮೊದಲು ಬ್ಯಾಟಿಂಗ್ ನಡೆಸಿದ ಟೊರೊಂಟೊ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. 160 ರನ್ ಗುರಿ ಬೆನ್ನತ್ತಿದ್ದ ವ್ಯಾಂಕೋವರ್ ನೈಟ್ಸ್ 17.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 162 ಸಿಡಿಸಿ ಗೆಲುವು ಪಡೆಯಿತು. ಚಾಡ್ವಿಕ್ ವಾಲ್ಟನ್ 59 ರನ್, ರಾಸಿ ವ್ಯಾನ್ ಡೇರ್ ದುಸ್ಸೇನ್ 65 ರನ್ ಸಿಡಿಸಿದ ಪರಿಣಾಮ ವ್ಯಾಂಕೋವರ್ ನೈಟ್ಸ್ ಗೆಲುವು ಪಡೆಯಿತು.

  • ಗಾಯಗೊಂಡ ಬಳಿಕ ಯುವಿಗಾಗಿ ಮೊದಲ ಬಾರಿ ಬ್ಯಾಟ್ ಹಿಡಿದ ಧವನ್

    ಗಾಯಗೊಂಡ ಬಳಿಕ ಯುವಿಗಾಗಿ ಮೊದಲ ಬಾರಿ ಬ್ಯಾಟ್ ಹಿಡಿದ ಧವನ್

    ಮುಂಬೈ: ಗಾಯದ ಸಮಸ್ಯೆಯಿಂದ ವಿಶ್ವಕಪ್ ಟೂರ್ನಿಯಿಂದ ಅರ್ಧಕ್ಕೆ ವಾಪಸ್ ಆಗಿದ್ದ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಮೊದಲ ಬಾರಿಗೆ ಬ್ಯಾಟ್ ಹಿಡಿದ್ದಾರೆ. ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ನೀಡಿದ್ದ ಬಾಟಲ್ ಕ್ಯಾಪ್ ಚಾಲೆಂಜ್ ಹಿನ್ನೆಲೆಯಲ್ಲಿ ಧವನ್ ವಿಡಿಯೋ ಹರಿಬಿಟ್ಟಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿ ತಮ್ಮದೇ ಶೈಲಿಯಲ್ಲಿ ವಿಡಿಯೋ ಹರಿಬಿಟ್ಟಿದ್ದ ಯುವರಾಜ್ ಸಿಂಗ್ ಅವರು ಧವನ್ ಸೇರಿದಂತೆ ಹಲವು ಆಟಗಾರಿಗೆ ಸವಾಲು ಎಸೆದಿದ್ದರು. ಈ ಸವಾಲು ಸ್ವೀಕರಿಸಿರುವ ಧವನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಆಪ್ ಲೋಡ್ ಮಾಡಿದ್ದಾರೆ.

    ವಿಡಿಯೋದಲ್ಲಿ ಧವನ್, ಯುವಿ ಅವರಂತೆಯೇ ಬ್ಯಾಟ್ ಬೀಸಿ ಬಾಟಲ್ ಕ್ಯಾಪ್ ಚಾಲೆಂಜ್ ಪೂರ್ಣಗೊಳಿಸಿದ್ದಾರೆ. ಗಾಯಗೊಂಡ ಬಳಿಕ ಮೊದಲ ಬಾರಿಗೆ ತಾವು ಬ್ಯಾಟಿಂಗ್ ಮಾಡುತ್ತಿದ್ದು, ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ. ಸದ್ಯ ಯುವರಾಜ್ ಸಿಂಗ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಾರೆ.

    ಧವನ್ ಸದ್ಯ ಗಾಯದ ಸಮಸ್ಯೆಯಿಂದ ಚೇತರಿಕೆ ಪಡೆಯುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಕ್ರೀಯವಾಗಿ ಸಂಪರ್ಕದಲ್ಲಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ 2 ಪಂದ್ಯಗಳನ್ನು ಆಡಿದ್ದ ಧವನ್ 117 ರನ್ ಸಿಡಿಸಿದ್ದರು. ಆದರೆ ಪಂದ್ಯದ ವೇಳೆ ಗಾಯಗೊಂಡಿದ್ದರು. ಇವರ ಸ್ಥಾನದಲ್ಲಿ ರಿಷಬ್ ಪಂತ್ ಆಯ್ಕೆ ಆಗಿದ್ದರು. ಉಳಿದಂತೆ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ವಿರುದ್ಧ ಆಗಸ್ಟ್ 3 ರಿಂದ ಟೂರ್ನಿಯನ್ನು ಆರಂಭಿಸಲಿದೆ. ಗಾಯದ ಸಮಸ್ಯೆಯಿಂದ ಧವನ್ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ವಿಂಡೀಸ್ ಸರಣಿಯಿಂದ ದೂರ ಉಳಿಯಲಿದ್ದಾರೆ.

  • ಎಬಿಡಿ ಇಲ್ಲದೇ ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ – ಯುವರಾಜ್ ಸಿಂಗ್

    ಎಬಿಡಿ ಇಲ್ಲದೇ ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ – ಯುವರಾಜ್ ಸಿಂಗ್

    ನವದೆಹಲಿ: ಸೌತ್ ಆಫ್ರಿಕಾದ ಮಾಜಿ ಆಟಗಾರ ಹಾಗೂ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಎಬಿ ಡಿವಿಲಿಯರ್ಸ್ ಇಲ್ಲದೇ ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

    ವಿಶ್ವಕಪ್‍ನಲ್ಲಿ ಲೀಗ್ ಹಂತದಲ್ಲೇ ಸೋತ ದಕ್ಷಿಣ ಆಫ್ರಿಕಾ ವಿಶ್ವಕಪ್‍ನಿಂದ ಹೊರಬಿದ್ದ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ 2018 ಮೇನಲ್ಲಿ ನಿವೃತ್ತಿ ಹೊಂದಿದ್ದ ಸೌತ್ ಆಫ್ರಿಕಾದ ವಿಕೆಟ್ ಕೀಪರ್-ಬ್ಯಾಟ್ಸ್ ಮ್ಯಾನ್ ಎಬಿ ಡಿವಿಲಿಯರ್ಸ್ ಅವರು ಮತ್ತೆ ವಿಶ್ವಕಪ್ ತಂಡಕ್ಕೆ ಮರಳಲು ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದವು.

    ಈ ಎಲ್ಲಾ ವದಂತಿಗಳಿಗೂ ಶುಕ್ರವಾರ ಇನ್‍ಸ್ಟಾಗ್ರಾಮ್ ಪೋಸ್ಟ್ ಮೂಲಕ ತೆರೆಎಳೆದ ವಿಲಿಯರ್ಸ್, ನಾನು ಸೌತ್ ಆಫ್ರಿಕಾದ ವಿಶ್ವಕಪ್ ತಂಡಕ್ಕೆ ಮತ್ತೆ ಮರಳಲು ಯಾವುದೇ ಬೇಡಿಕೆ ಮಾಡಿಲ್ಲ. ನಾನು ನಿವೃತ್ತಿ ಹೊಂದಿದ್ದು ನನ್ನ ಪತ್ನಿ ಮತ್ತು ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆಯಲು ಇಷ್ಟಪಡುತ್ತೇನೆ. ನಾನು ಮತ್ತೆ ತಂಡಕ್ಕೆ ವಾಪಾಸ್ ಆಗಲು ಯಾವುದೇ ರೀತಿಯ ಯೋಚನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

    https://www.instagram.com/p/Bzz81FmAyDT/?utm_source=ig_embed

    ಈ ಪೋಸ್ಟ್ ಗೆ ಪ್ರತಿಕ್ರಿಯೇ ನೀಡಿರುವ ಯುವರಾಜ್, “ನನ್ನ ಪ್ರೀತಿಯ ಗೆಳೆಯ ಮತ್ತು ಲೆಜೆಂಡ್. ನಾನು ಕ್ರಿಕೆಟ್ ಆಡಿದ ಅದ್ಭುತ ವ್ಯಕ್ತಿಗಳಲ್ಲಿ ನೀನು ತುಂಬ ಒಳ್ಳೆಯ ಆಟಗಾರ. ನೀನು ಇಲ್ಲದೇ ಸೌತ್ ಆಫ್ರಿಕಾಗೆ ವಿಶ್ವಕಪ್ ಗೆಲ್ಲಲು ಯಾವುದೇ ಅವಕಾಶವಿಲ್ಲ. ನೀನು ತಂಡದಲ್ಲಿ ಇಲ್ಲದೇ ಇರುವುದು ನಿನಗಿಂತ ನಿನ್ನ ತಂಡಕ್ಕೆ ಹೆಚ್ಚು ನಷ್ಟ. ದೊಡ್ಡ ಆಟಗಾರರು ಹೆಚ್ಚು ಟೀಕೆಗಳನ್ನು ಎದರಿಸಬೇಕಾಗುತ್ತದೆ. ನೀನು ಏನು ಎಂಬುದು ನಮಗೆ ಗೊತ್ತಿದೆ. ನೀನೊಬ್ಬ ಜೆಂಟಲ್ ಮ್ಯಾನ್” ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಕಮೆಂಟ್ ಮಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು, “ನನ್ನ ಸಹೋದರ ನನಗೆ ತಿಳಿದಿರುವ ಅತ್ಯಂತ ಪ್ರಮಾಣಿಕ ಮತ್ತು ಬದ್ಧ ವ್ಯಕ್ತಿ ನೀನು. ನಿನಗೆ ಈ ರೀತಿ ಆಗಿರುವುದು ನನಗೆ ನೋವಾಗಿದ ಮತ್ತು ನಾವು ನಿನ್ನ ಜೊತೆ ಇದ್ದೇವೆ, ನಿನ್ನನ್ನು ನಂಬುತ್ತೇವೆ. ಕೆಲ ಜನರು ನಿನ್ನ ವೈಯಕ್ತಿಕ ಜೀವನಕ್ಕೆ ಬರುತ್ತಿರುವುದು ನೋಡಿದರೆ ತುಂಬ ದುಃಖವಾಗುತ್ತಿದೆ. ನಿನಗೂ ಮತ್ತು ನಿನ್ನ ಸುಂದರ ಕುಟುಂಬಕ್ಕೆ ಆ ದೇವರು ಹೆಚ್ಚಿನ ಪ್ರೀತಿ ಮತ್ತು ಶಕ್ತಿಯನ್ನು ಕೊಡಲಿ. ನಾನು ಮತ್ತು ಅನುಷ್ಕಾ ಯಾವಾಗಲೂ ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದ್ದಾರೆ.

    ಸೌತ್ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಮತ್ತು 78 ಟಿ-ಟ್ವಿಂಟಿ ಪಂದ್ಯಗಳನ್ನು ಆಡಿರುವ ವಿಲಿಯರ್ಸ್ 8,765 ರನ್ ಗಳನ್ನು ಟೆಸ್ಟ್ ನಲ್ಲಿ, ಏಕದಿನದಲ್ಲಿ 9,577 ರನ್ ಮತ್ತು ಟಿ-ಟ್ವಿಂಟಿ 1,672 ರನ್ ಬಾರಿಸಿದ್ದಾರೆ. ಟೆಸ್ಟ್ ನಲ್ಲಿ 22 ಶತಕ ಮತ್ತು 46 ಅರ್ಧಶತಕ ಬಾರಿಸಿದ್ದಾರೆ. ಇನ್ನೂ ಏಕದಿನ ಪಂದ್ಯಗಲ್ಲಿ 25 ಶತಕ, 53 ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ವಿಶ್ವದ ಅತ್ಯಂತ ವೇಗದ ಶತಕ ಸಿಡಿಸಿದ ಆಟಗಾರ ಎಂದೇ ಹೆಸರರಾದ ವಿಲಿಯರ್ಸ್ ಮೇ 2018 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದರು.

  • ತಡರಾತ್ರಿಯ ಆಟೋ ಸವಾರಿ ಆನಂದಿಸಿದ ಕಿಮ್ ಶರ್ಮಾ

    ತಡರಾತ್ರಿಯ ಆಟೋ ಸವಾರಿ ಆನಂದಿಸಿದ ಕಿಮ್ ಶರ್ಮಾ

    ಮುಂಬೈ: ಮೊಹಬ್ಬತೇನ್ ಚಿತ್ರದ ನಟಿ ಕಿಮ್ ಶರ್ಮಾ ತಡರಾತ್ರಿ ಆಟೋ ಸವಾರಿಯನ್ನು ಆನಂದಿಸಿದ್ದಾರೆ.

    ತಿಳಿ ಗುಲಾಬಿ ಹಾಗೂ ಬೂದು ಬಣ್ಣದ ಟೀ ಶರ್ಟ್, ಶಾರ್ಟ್ಸ್ ತೊಟ್ಟು ಕಿಮ್ ಶರ್ಮಾ ಆಟೋದಲ್ಲಿ ಮುಂಬೈನ ಬಾಂದ್ರಾದ ರಾತ್ರಿಯನ್ನು ನೋಡಿ ಖುಷಿ ಪಟ್ಟಿದ್ದಾರೆ. ಈ ವೇಳೆ ಮಾರ್ಗ ಮಧ್ಯೆ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಮುಖ ಮುಚ್ಚಿಕೊಂಡರು. ಬಳಿಕ ಕ್ಯಾಮೆರಾಮೆನ್ ಫೋಟೋ ಕ್ಲಿಕ್ಕಿಸಿದರೂ ಸುಮ್ಮನೆ ಕುಳಿತು ಪ್ರಯಾಣ ಮುಂದುವರಿಸಿದರು.

    ಕಿಮ್ ಶರ್ಮಾ, ಬಾಲಿವುಡ್ ನಟ ಹರ್ಷವರ್ಧನ್ ರಾಣೆ ಜೊತೆ ಡೇಟಿಂಗ್‍ನಲ್ಲಿದ್ದಾರೆ ಎಂಬ ಗುಸು ಗುಸು ಸಿನಿ ಅಂಗಳದಲ್ಲಿ ಹರಿದಾಡುತಿತ್ತು. ಮಾಧ್ಯಮಗಳ ಕ್ಯಾಮೆರಾ ಕಂಡಕೂಡಲೇ ಗೆಳೆಯನ ಹಿಂದೆ ಬಚ್ಚಿಕೊಳ್ಳುತ್ತಿದ್ದ ಕಿಮ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಜೊತೆಯಾಗಿಯೇ ಕಾರಿನಲ್ಲಿ ಬಂದ ಹಾಟ್ ಜೋಡಿ ಮಾಧ್ಯಮಗಳಿಂದ ದೂರವೇ ಉಳಿದುಕೊಂಡಿದ್ದರು. ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಕಿಮ್ ಗೆಳೆಯ ಹರ್ಷವರ್ಧನ್ ಗೆ ಲಿಪ್ ಟು ಲಿಪ್ ಕಿಸ್ ಕೊಟ್ಟರು. ಈ ಕಿಸ್ಸಿಂಗ್ ಫೋಟೋಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    35 ವರ್ಷದ ಹರ್ಷವರ್ಧನ್ ತನಗಿಂತ ಮೂರು ವರ್ಷ ಹಿರಿಯಳಾದ ಕಿಮ್ ಶರ್ಮಾ (38) ಜೊತೆ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ಧಾರಾವಾಹಿಗಳ ಮೂಲಕ ಮನೆ ಮಾತಾಗಿರುವ ಕಿಮ್ ಶರ್ಮಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೇ ವರ್ಷದ ಕೊನೆಯಲ್ಲಿ ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಆದರೆ ಈಗ ಹಾಟ್ ಜೋಡಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹರ್ಷವರ್ಧನ್ ರಾಣೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಇತ್ತೀಚೆಗೆ ನಿವೃತ್ತಿ ಹೇಳಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ತಮ್ಮ ನಿವಾಸದಲ್ಲಿ ಆಪ್ತರಿಗೆ ಪಾರ್ಟಿಯನ್ನ ಏರ್ಪಡಿಸಿದ್ದರು. ಈ ಪಾರ್ಟಿಗೆ ಯುವಿ ತಮ್ಮ ಮಾಜಿ ಗೆಳತಿ ಕಿಮ್ ಶರ್ಮಾ ಅವರಿಗೂ ಆಹ್ವಾನ ನೀಡಿದ್ದರು.

    ಯುವರಾಜ್ ಸಿಂಗ್‍ರೊಂದಿಗೆ ಪ್ರೀತಿಯಲ್ಲಿದ್ದ ಕಿಮ್ ಶರ್ಮಾ 2007ರ ಬಳಿಕ ಅವರಿಂದ ದೂರವಾಗಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದ್ದ ಕಿಮ್, ಯುವಿ ಹಾಗೂ ಪತ್ನಿಯೊಂದಿಗೆ ಫೋಟೋಗೆ ಪೋಸ್ ನೀಡಿ ಟ್ವಿಸ್ಟ್ ನೀಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು.

    ತಮ್ಮ ನಿವೃತ್ತಿಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಭಾವುಕರಾಗಿದ್ದ ಯುವರಾಜ್ ಸಿಂಗ್, ಅಂದು ಪತ್ನಿ  ಹಿಜೇಲ್ ಕೀಚ್‍ರೊಂದಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ ಪ್ರತಿಕ್ರಿಯೆ ನೀಡಿ ಕಿಮ್ ಕಮೆಂಟ್ ಮಾಡಿ, `ಇನ್ನಷ್ಟು ಪ್ರಕಾಶಿಸಿ ಲವ್ಲಿ ಜೋಡಿ’ ಎಂದು ಬರೆದುಕೊಂಡಿದ್ದರು.

  • ಭಿನ್ನವಾಗಿ ಬಾಟಲ್ ಕ್ಯಾಪ್ ಚಾಲೆಂಜ್ ಸವಾಲು ಗೆದ್ದ ಯುವಿ

    ಭಿನ್ನವಾಗಿ ಬಾಟಲ್ ಕ್ಯಾಪ್ ಚಾಲೆಂಜ್ ಸವಾಲು ಗೆದ್ದ ಯುವಿ

    ಮುಂಬೈ: ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ವೃತ್ತಿ ಜೀವನಕ್ಕೆ ವಿದಾಯ ಹೇಳಿಕ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕ್ರೀಯಾಶೀಲರಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿರುವ ಬಾಟಲ್ ಕ್ಯಾಪ್ ಚಾಲೆಂಜ್ ಸ್ವೀಕರಿಸಿ ವಿಡಿಯೋ ಹರಿಬಿಟ್ಟಿದ್ದಾರೆ.

    ಈಗಾಗಲೇ ಟಾಲಿವುಡ್, ಬಾಲಿವುಡ್, ಕಾಲಿವುಡ್ ಹಲವು ಸ್ಟಾರ್ ನಟರು ಬಾಟಲ್ ಕ್ಯಾಮ್ ಚಾಲೆಂಜ್ ಸ್ವೀಕರಿಸಿ ಹರಿಬಿಟ್ಟಿದ್ದರು. ಆದರೆ ಯುವರಾಜ್ ಸಿಂಗ್ ಈಗ ಇದನ್ನು ಭಿನ್ನವಾಗಿ ಮಾಡಿದ್ದಾರೆ.

    ಸಾಮಾನ್ಯವಾಗಿ ಬಾಟಲ್ ಕ್ಯಾಪನ್ನು ಕಾಲಿನಿಂದ ತೆಗೆಯುವ ಈ ಚಾಲೆಂಜ್ ನಲ್ಲಿ ಯುವಿ ಭಿನ್ನವಾಗಿ ಪ್ರಯತ್ನಿಸಿದ್ದಾರೆ. ಬ್ಯಾಟಿಂಗ್ ಮಾಡಿ ಚೆಂಡನ್ನು ಬಾಟಲ್ ಕ್ಯಾಪ್‍ಗೆ ಬಡಿಯುವಂತೆ ಮಾಡಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರುವ ಯುವಿ, ಬಾಟಲ್ ಕ್ಯಾಪ್ ಚಾಲೆಂಜ್‍ಗೆ ಇದು ನನ್ನ ಮಾದರಿ. ಸಚಿನ್, ಲಾರಾ, ಶಿಖರ್ ಧವನ್, ಗೇಲ್ ಅವರಿಗೆ ಚಾಲೆಂಜ್ ನೀಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವರನ್ನು ವಿಡಿಯೋ ಆಕರ್ಷಿಸಿದೆ. ಅಲ್ಲದೇ ಯುವಿ ಸ್ಟೈಲ್ ಬಾಟಲ್ ಕ್ಯಾಪ್ ಚಾಲೆಂಜ್‍ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    https://www.instagram.com/p/Bzp-skADXzI/

  • ಯುವಿ ಪಾರ್ಟಿಗೆ ಆಗಮಿಸಿ ಟ್ವಿಸ್ಟ್ ಕೊಟ್ಟ ಮಾಜಿ ಗೆಳತಿ

    ಯುವಿ ಪಾರ್ಟಿಗೆ ಆಗಮಿಸಿ ಟ್ವಿಸ್ಟ್ ಕೊಟ್ಟ ಮಾಜಿ ಗೆಳತಿ

    ಮುಂಬೈ: ಇತ್ತೀಚೆಗೆ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಹೇಳಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ತಮ್ಮ ನಿವಾಸದಲ್ಲಿ ಆಪ್ತರಿಗೆ ಪಾರ್ಟಿಯನ್ನ ಏರ್ಪಡಿಸಿದ್ದರು. ಈ ಪಾರ್ಟಿಗೆ ಯುವಿ ತಮ್ಮ ಮಾಜಿ ಗೆಳತಿ ಕಿಮ್ ಶರ್ಮಾ ಅವರಿಗೂ ಆಹ್ವಾನ ನೀಡಿದ್ದರು.

    ಯುವರಾಜ್ ಸಿಂಗ್‍ರೊಂದಿಗೆ ಪ್ರೀತಿಯಲ್ಲಿದ್ದ ಕಿಮ್ ಶರ್ಮಾ 2007ರ ಬಳಿಕ ಅವರಿಂದ ದೂರವಾಗಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದ್ದ ಕಿಮ್, ಯುವಿ ಹಾಗೂ ಪತ್ನಿಯೊಂದಿಗೆ ಫೋಟೋಗೆ ಪೋಸ್ ನೀಡಿ ಟ್ವಿಸ್ಟ್ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

    ತಮ್ಮ ನಿವೃತ್ತಿಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ ಭಾವುಕರಾಗಿದ್ದ ಯುವರಾಜ್ ಸಿಂಗ್, ಅಂದು ಪತ್ನಿ ಹಾಜೆಲ್ ಕೀಚ್‍ರೊಂದಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ ಪ್ರತಿಕ್ರಿಯೆ ನೀಡಿ ಕಿಮ್ ಕಮೆಂಟ್ ಮಾಡಿ, ‘ಇನ್ನಷ್ಟು ಪ್ರಕಾಶಿಸಿ ಲವ್ಲಿ ಜೋಡಿ’ ಎಂದು ಬರೆದುಕೊಂಡಿದ್ದರು.

    ಯುವರಾಜ್ ಸಿಂಗ್ ನೀಡಿದ್ದ ಪಾರ್ಟಿಯಲ್ಲಿ ಹಲವು ಬಾಲಿವುಡ್ ನಟ, ನಟಿಯರು ಭಾಗವಹಿಸಿದ್ದರು. ಪಾರ್ಟಿಯಲ್ಲಿ ಸ್ಟ್ರೈಲಿಸ್ ಆಗಿ ಕಾಣಿಸಿಕೊಂಡಿದ್ದ ಕಿಮ್ ಶರ್ಮಾ ಎಲ್ಲರ ಗಮನ ಸೆಳೆದಿದ್ದರು. ವಿಶೇಷ ಎಂದರೆ ಕಿಮ್ ರಿಂದ ದೂರವಾದ ಬಳಿಕ ಪತಿಕ್ರಿಯೆ ನೀಡಿದ್ದ ಯವಿ, ನಾನು ಮದುವೆಯಾಗುತ್ತಿದ್ದೇನೆ. ನನ್ನ ಜೀವನದ ಪ್ರೀತಿಯಾಗಿದ್ದಳು. ಈಗ ಅವರಿಗೆ ಮದುವೆಯಾಗಿದೆ. ಅವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದರು.

     

    View this post on Instagram

     

    Bollywood actress Kim Sharma at Yuvraj Singh Retirement Party. ????#KimSharma #YuvrajSingh #RetirementParty

    A post shared by Filmyhaiboss (@filmyhaiiboss) on