Tag: ಯುವರಾಜ್ ಸಿಂಗ್

  • ಕೆ.ಎಲ್.ರಾಹುಲ್ ‘112 ರನ್’ ಹಿಂದಿದೆ ಸಾಧನೆಗಳ ಪಟ್ಟಿ- ಟೀಂ ಇಂಡಿಯಾ ದಿಗ್ಗಜ ಕೀಪರ್‌ಗಳ ಪಟ್ಟಿ ಸೇರಿದ ರಾಹುಲ್

    ಕೆ.ಎಲ್.ರಾಹುಲ್ ‘112 ರನ್’ ಹಿಂದಿದೆ ಸಾಧನೆಗಳ ಪಟ್ಟಿ- ಟೀಂ ಇಂಡಿಯಾ ದಿಗ್ಗಜ ಕೀಪರ್‌ಗಳ ಪಟ್ಟಿ ಸೇರಿದ ರಾಹುಲ್

    – 5ನೇ ಕ್ರಮಾಂಕದ ಬ್ಯಾಟಿಂಗ್‍ನಲ್ಲಿ ರಾಹುಲ್ ಮೈಲುಗಲ್ಲು
    – ಕಿವೀಸ್ ವಿರುದ್ಧ ಶತಕ ಸಿಡಿಸಿದ ಭಾರತದ ಮೊದಲ ಕೀಪರ್
    – ರೈನಾ ದಾಖಲೆ ಮುರಿದ ಕನ್ನಡಿಗ

    ಮೌಂಟ್ ಮಾಂಗನುಯಿ: ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಕೀಪಿಂಗ್‍ನಲ್ಲೂ ಸಖತ್ ಮಿಂಚುತ್ತಿದ್ದಾರೆ. ನ್ಯೂಜಿಲೆಂಡ್ ಪ್ರಸಾದ ಟಿ20 ಹಾಗೂ ಏಕದಿನ ಪಂದ್ಯದಲ್ಲಿ ರಾಹುಲ್ ಮಿಂಚಿದ್ದಾರೆ. ಅದರಲ್ಲೂ ಏಕದಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಶತಕ ಸಿಡಿಸಿ ಅನೇಕ ಸಾಧನೆಗಳ ಪಟ್ಟಿಗೆ ಸೇರಿದ್ದಾರೆ.

    2019-20ರ ಋತುವಿನಲ್ಲಿ ಕೆ.ಎಲ್.ರಾಹುಲ್ ಭಾರತದ ಪರ ಸೀಮಿತ ಓವರ್‌ಗಳ ಕ್ರಿಕೆಟ್‍ನಲ್ಲಿ ತಂಡದ ಅವಶ್ಯಕತೆಗೆ ಅನುಗುಣವಾಗಿ ವಿವಿಧ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಎಲ್ಲ ಕ್ರಮಾಂಕದಲ್ಲೂ ಕೆ.ಎಲ್.ರಾಹುಲ್ ಅದ್ಭುತ ಬ್ಯಾಟಿಂಗ್‍ನಿಂದ ತಂಡಕ್ಕೆ ಆಸರೆ ಆಗುತ್ತಲೇ ಬಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ಭಾರತ ವೈಟ್‍ವಾಶ್‍ಗೆ ತುತ್ತಾಗುವ ಸಂದರ್ಭದ ಅಂಚಿನಲ್ಲಿ ರಾಹುಲ್ ತಮ್ಮ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿ ಚೊಚ್ಚಲ ಏಕದಿನ ಶತಕವನ್ನು ದಾಖಲಿಸಿದರು. ಈವರೆಗೆ ಕೆ.ಎಲ್.ರಾಹುಲ್ ನಾಲ್ಕು ಏಕದಿನ ಶತಕ ಸಿಡಿಸಿದ್ದಾರೆ. ಇದನ್ನೂ ಓದಿ: ‘ಬೇಡ ಮಗಾ ಬೇಡ, ನಾರ್ಮಲ್ ಆಡು’- ಕಿವೀಸ್ ನೆಲದಲ್ಲಿ ಕನ್ನಡ ಡಿಂಡಿಮ

    ಇಂದಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆ ಆಡಿದರು. ಅದರಲ್ಲೂ ಮನೀಶ್ ಪಾಂಡೆ ಹಾಗೂ ಕೆ.ಎಲ್.ರಾಹುಲ್ ಜೋಡಿ ಮೈದಾನದಲ್ಲಿ ಕಮಾಲ್ ಮಾಡಿತು. ಭಾರತದ ಇನ್ನಿಂಗ್ಸ್ ನ 31ನೇ ಓವರಿನಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಒಪ್ಪಿಸಿದರು. ಈ ವೇಳೆ ಟೀಂ ಇಂಡಿಯಾ 162 ರನ್ ಗಳಿಸಿತ್ತು. ಬಳಿಕ ಕೆ.ಎಲ್.ರಾಹುಲ್‍ಗೆ ಮನೀಶ್ ಪಾಂಡೆ ಸಾಥ್ ನೀಡಿದರು. ಈ ಜೋಡಿ 5ನೇ ವಿಕೆಟ್‍ಗೆ 107 ರನ್‍ಗಳ ಜೊತೆಯಾಟದ ಕೊಡುಗೆ ನೀಡಿತು. ಕೆ.ಎಲ್.ರಾಹುಲ್ 112 ರನ್ (113 ಎಸೆತ, 9 ಬೌಂಡರಿ ಹಾಗೂ 2 ಸಿಕ್ಸರ್) ಸಿಡಿಸಿ ವಿಕೆಟ್ ಒಪ್ಪಿಸಿದರು.

    ರಾಹುಲ್ 112 ರನ್:
    ಏಷ್ಯಾದ ಹೊರಗಿನ ನೆಲದಲ್ಲಿ ಶತಕ ಸಿಡಿಸಿದ ಎರಡನೇ ಭಾರತೀಯ ವಿಕೆಟ್ ಕೀಪರ್ ಎಂಬ ಹಿರಿಮೆಗೆ ರಾಹುಲ್ ಪಾತ್ರರಾಗಿದ್ದಾರೆ. 1999ರ ವಿಶ್ವಕಪ್ ಟೂರ್ನಿಯ ಭಾಗವಾಗಿ ಟೌಂಟನ್‍ನಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಶ್ರೀಲಂಕಾ ವಿರುದ್ಧ 145ರನ್ ಗಳಿಸಿದ್ದರು. ಇದು ಭಾರತದ ಕೀಪರ್-ಬ್ಯಾಟ್ಸ್‌ಮನ್ ಏಷ್ಯಾದ ಹೊರಗಿನ ನೆಲದಲ್ಲಿ ಮಾಡಿದ ಮೊದಲ ಏಕದಿನ ಶತಕವಾಗಿತ್ತು. ಇದನ್ನೂ ಓದಿ: ಕೆ.ಎಲ್.ರಾಹುಲ್ ‘360 ಡಿಗ್ರಿ’ ಬ್ಯಾಟ್ಸ್‌ಮನ್‌: ಮಂಜ್ರೇಕರ್

    ಕೀಪರ್ ಆಗಿ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿ ಭಾರತೀಯ ಆಟಗಾರರ ದಿಗ್ಗಜರ ಪಟ್ಟಿಗೆ ರಾಹುಲ್ ಸೇರಿದ್ದಾರೆ. ಎಂಎಸ್ ಧೋನಿ 9 ಬಾರಿ ಶತಕ ಹಾಗೂ 73 ಬಾರಿ ಅರ್ಧ ಶತಕ ದಾಖಲಿಸಿದ್ದಾರೆ. ರಾಹುಲ್ ದ್ರಾವಿಡ್ ಕೀಪರ್ ಆಗಿ 4 ಶತಕ ಬಾರಿದ್ದಾರೆ. ಈ ಪಟ್ಟಿಗೆ ರಾಹುಲ್ ಎಂಟ್ರಿ ಕೊಟ್ಟಿದ್ದು, ದಾಖಲೆಯ ನಿರೀಕ್ಷೆ ಹೆಚ್ಚಿಸಿದ್ದಾರೆ. ಕೊನೆಯದಾಗಿ ಎಂ.ಎಸ್.ಧೋನಿ ಅವರು 2007ರಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 134 ರನ್ ಗಳಿಸಿದ್ದರು. ಇದನ್ನೂ ಓದಿ: ಕೆಎಲ್ ಅಂದ್ರೆ ಖಡಕ್ ಲಡ್ಕಾ- ರಾಹುಲ್‍ರನ್ನ ಹೊಗಳಿದ ಸೆಹ್ವಾಗ್

    ವಿವಿಧ ದೇಶಗಳಲ್ಲಿ ರಾಹುಲ್ ಶತಕ:
    ಕೆ.ಎಲ್.ರಾಹುಲ್ ನಾಲ್ಕು ವಿಭಿನ್ನ ದೇಶಗಳಲ್ಲಿ ಶತಕ ಸಿಡಿಸಿದ್ದಾರೆ. ಜಿಂಬಾಬ್ವೆ, ಇಂಗ್ಲೆಂಡ್, ಭಾರತ ಮತ್ತು ನ್ಯೂಜಿಲೆಂಡ್ ನೆಲದಲ್ಲಿ ಅಂತರರಾಷ್ಟ್ರೀಯ ಏಕದಿನ ಪಂದ್ಯದ ಶತಕ ದಾಖಲಿದ್ದಾರೆ. ವಿವಿಧ ರಾಷ್ಟ್ರಗಳಲ್ಲಿ ಮೊದಲ ನಾಲ್ಕು ಏಕದಿನ ಶತಕಗಳನ್ನು ಗಳಿಸಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರು ತಮ್ಮ ಮೊದಲ ಆರು ಏಕದಿನ ಶತಕಗಳನ್ನು ವಿವಿಧ ದೇಶಗಳಲ್ಲಿ ಸಿಡಿಸಿದ್ದರು. ಅವರು ಬಾಂಗ್ಲಾದೇಶ, ಆಸ್ಟ್ರೇಲಿಯಾ, ಶ್ರೀಲಂಕಾ, ಜಿಂಬಾಬ್ವೆ, ಭಾರತ ಹಾಗೂ ಪಾಕಿಸ್ತಾನದಲ್ಲಿ ಶತಕ ಗಳಿಸಿದ್ದರು.

    ವಿಶೇಷವೆಂದರೆ ಟೆಸ್ಟ್ ಕ್ರಿಕೆಟ್‍ನಲ್ಲಿ ಕೆ.ಎಲ್.ರಾಹುಲ್ ಎಲ್ಲಾ ಐದು ಶತಕಗಳನ್ನು ಐದು ವಿಭಿನ್ನ ದೇಶಗಳಲ್ಲಿ ದಾಖಲಿಸಿದ್ದಾರೆ. ಅಜಿಂಕ್ಯ ರಹಾನೆ ವಿವಿಧ ದೇಶಗಳಲ್ಲಿ ತಮ್ಮ ಮೊದಲ 5 ಟೆಸ್ಟ್ ಶತಕ ಗಳಿಸಿದ ಏಕೈಕ ಭಾರತೀಯ ಕ್ರಿಕೆಟರ್. ಇದನ್ನೂ ಓದಿ: ಮಿಂಚಿನ ವೇಗದಲ್ಲಿ ರನೌಟ್ ಮಾಡಿದ ರಾಹುಲ್- ವಿಡಿಯೋ 

    ಭಾರತದ ಮೊದಲಿಗ:
    ಕೆ.ಎಲ್.ರಾಹುಲ್ ನ್ಯೂಜಿಲೆಂಡ್ ನೆಲದಲ್ಲಿ ಕೀವಿಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ 5ನೇ ವಿಕೆಟ್ ಕೀಪರ್ ಹಾಗೂ ಭಾರತದ ಮೊದಲಿಗರಾಗಿದ್ದಾರೆ. ಆ್ಯಡಮ್ ಗಿಲ್‍ಕ್ರಿಸ್ಟ್ 1998 ರಲ್ಲಿ 118 ರನ್ ಮತ್ತು 2000ರಲ್ಲಿ 128 ರನ್, ಬ್ರಾಡ್ ಹ್ಯಾಡಿನ್ 2010ರಲ್ಲಿ 110 ರನ್, ಎಬಿ ಡಿವಿಲಿಯರ್ಸ್ 2012ರಲ್ಲಿ ಔಟಾಗದೆ 106 ರನ್ ಮತ್ತು ಕುಮಾರ್ ಸಂಗಕ್ಕಾರ ಅಜೇಯ 2015ರಲ್ಲಿ 113 ರನ್ ಗಳಿಸಿದ್ದರು. ಈಗ ಕೆ.ಎಲ್.ರಾಹುಲ್ ಈ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಡಿವಿಲಿಯರ್ಸ್ ಮತ್ತು ಕೆ.ಎಲ್.ರಾಹುಲ್ ಮಾತ್ರ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಸಿಡಿಸಿದ್ದಾರೆ.

    ರೈನಾ ದಾಖಲೆ ಬೀಟ್:
    ನ್ಯೂಜಿಲೆಂಡ್ ನೆಲದಲ್ಲಿ ನಡೆದ ಏಕದಿನ ಪಂದ್ಯವೊಂದರಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ ದಾಖಲೆ ಕೆ.ಎಲ್.ರಾಹುಲ್ ಹೆಸರಿಗೆ ಸೇರಿದೆ. ಇಂದಿನ ಪಂದ್ಯದಲ್ಲಿ ರಾಹುಲ್ 112 ರನ್ ಗಳಿಸಿದ್ದಾರೆ. ಈ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 103ರನ್ ಗಳಿಸಿದ್ದರು. ಉಳಿದಂತೆ 2015ರ ವಿಶ್ವಪಕ್ ಟೂರ್ನಿಯ ಭಾಗವಾಗಿ ನ್ಯೂಜಿಲೆಂಡ್‍ನ ಈಡನ್ ಪಾರ್ಕ್ ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಸುರೇಶ್ ರೈನಾ ಅಜೇಯ 103 ರನ್ ದಾಖಲಿಸಿದ್ದರು.

    5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೆ.ಎಲ್.ರಾಹುಲ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಇಂದಿನ ಪಂದ್ಯದಲ್ಲಿ 112 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಅವರು 2004ರ ಎಸ್‍ಸಿಜಿ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 139 ರನ್ ಗಳಿಸಿದ್ದರು. 2005ರಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಯುವರಾಜ್ ಜಿಂಬಾಬ್ವೆ ವಿರುದ್ಧ 120 ರನ್ ಗಳಿಸಿದ್ದರು. ಇದನ್ನೂ ಓದಿ: ನನಗೂ ಕೆ.ಎಲ್.ರಾಹುಲ್‌ಗೂ ಸಂಬಂಧವಿಲ್ಲ, ಬೇಕಿದ್ರೆ ಮಗಳನ್ನ ಕೇಳಿಕೊಳ್ಳಿ- ಸುನಿಲ್ ಶೆಟ್ಟಿ

    2010ರಿಂದ ಇಲ್ಲಿಯವರೆಗೆ ಏಕದಿನ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್‌ ಕೆ.ಎಲ್.ರಾಹುಲ್ ಆಗಿದ್ದಾರೆ. ಇಂದಿನ ಪಂದ್ಯದಲ್ಲಿ ರಾಹುಲ್ 112 ರನ್ ಹೊಡೆದಿದ್ದಾರೆ. ಎಂ.ಎಸ್.ಧೋನಿ 2017ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ 134 ರನ್ ಗಳಿಸಿದ್ದರು.

    5ನೇ ಕ್ರಮಾಂಕದಲ್ಲಿ ರಾಹುಲ್ ಕಮಾಲ್:
    ಕೆ.ಎಲ್.ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅಜೇಯ 88 ರನ್, ಎರಡನೇ ಪಂದ್ಯದಲ್ಲಿ 4 ರನ್ ಹಾಗೂ ಮೂರನೇ ಪಂದ್ಯದಲ್ಲಿ 112 ರನ್ ಸೇರಿ ಒಟ್ಟು 204 ರನ್ ಗಳಿಸಿದ್ದಾರೆ. ಈ ಮೂಲಕ ರಾಹುಲ್ ಏಷ್ಯಾದ ಹೊರಗಿನ ದೇಶದಲ್ಲಿ ನಡೆದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಗಳಿಸಿದ 2ನೇ ಭಾರತೀಯರಾಗಿದ್ದಾರೆ. 2011ರಲ್ಲಿ ವೆಸ್ಟ್ ಇಂಡೀಸ್ ನೆಲದಲ್ಲಿ ನಡೆದಿದ್ದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ 257 ರನ್ ಗಳಿಸಿದ್ದರು.

  • ಟಿ-20ಯಲ್ಲಿ ದ್ವಿಶತಕ- ಯುವಿ ಲಿಸ್ಟ್‌ನಲ್ಲಿ ಹಿಟ್‍ಮ್ಯಾನ್ ರೋಹಿತ್

    ಟಿ-20ಯಲ್ಲಿ ದ್ವಿಶತಕ- ಯುವಿ ಲಿಸ್ಟ್‌ನಲ್ಲಿ ಹಿಟ್‍ಮ್ಯಾನ್ ರೋಹಿತ್

    ಮುಂಬೈ: ಟಿ20 ಕ್ರಿಕೆಟ್ ಮಾದರಿಯಲ್ಲಿ ಮೂವರು ಆಟಗಾರರಿಗೆ ದ್ವಿಶತಕ ಸಿಡಿಸಲು ಸಾಧ್ಯವಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

    ಆಸ್ಟ್ರೇಲಿಯಾದಲ್ಲಿ ಉಂಟಾಗಿದ್ದ ಕಾಡ್ಗಿಚ್ಚಿನಿಂದ ತೊಂದರೆ ಅನುಭವಿಸಿದ ಜನರಿಗೆ ನೆರವು ನೀಡುವ ಉದ್ದೇಶದಿಂದ ಚಾರಿಟಿಯೊಂದು ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಗಳಲ್ಲಿ ಭಾಗವಹಿಸಲು ಯುವಿ ತೆರಳಿದ್ದರು. ಈ ವೇಳೆ ತಮ್ಮ ಬೌಲಿಂಗ್ ನಿಂದ ಎಲ್ಲರ ಗಮನ ಸೆಳೆದರು. ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಭಾಗಿಯಾಗಿದ್ದ ಯುವಿ ಅವರಿಗೆ ಟಿ20 ಮಾದರಿಯಲ್ಲಿ ದ್ವಿಶತಕ ದಾಖಲಿಸುವ ಸಾಮರ್ಥ್ಯ ಹೊಂದಿರುವ ಆಟಗಾರರು ಯಾರು ಎಂದು ಪ್ರಶ್ನೆ ಎದುರಾಗಿತ್ತು. ಇದಕ್ಕೂತ್ತರಿಸಿದ ಯುವಿ, ಮೂವರು ಆಟಗಾರರ ಹೆಸರುಗಳನ್ನು ಮುಂದಿಟ್ಟರು.

    ಟಿ20 ಮಾದರಿಯಲ್ಲಿ ದ್ವಿಶತಕ ಸಾಧಿಸುವುದು ಕಷ್ಟಸಾಧ್ಯ. ಕ್ರಿಸ್‍ಗೇಲ್, ಎಬಿ ಡಿವಿಲಿಯರ್ಸ್ ಅವರಿಗೆ ದ್ವಿಶತಕ ಸಾಧಿಸುವ ಅವಕಾಶವಿತ್ತು. ಈ ಇಬ್ಬರೂ ದ್ವಿಶತಕ ಸಿಡಿಸುವ ಸಾಮರ್ಥ್ಯವಿದೆ. ಉಳಿದಂತೆ ರೋಹಿತ್ ಶರ್ಮಾ ಕೂಡ ಟಿ20 ಮಾದರಿಯಲ್ಲಿ ದ್ವಿಶತಕ ಗಳಿಸಬಹುದು ಎಂದು ಯುವಿ ಹೇಳಿದರು.

    ಅಂದಹಾಗೇ 2013ರಲ್ಲೇ ಕ್ರಿಸ್‍ಗೇಲ್ ಟಿ20 ಮಾದರಿಯಲ್ಲಿ ದ್ವಿಶತಕ ಸಿಡಿಸುವ ಸನಿಹ ತಲುಪಿದ್ದರು. ಪುಣೆ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ರಿಸ್‍ಗೇಲ್ 175 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಗೇಲ್ ದ್ವಿಶತಕ ಗಳಿಸುವ ಅವಕಾಶವಿದ್ದರೂ ಪಂದ್ಯದ ಇನ್ನಿಂಗ್ಸ್ ನ 20 ಓವರ್ ಗಳು ಅಂತ್ಯವಾಗಿತ್ತು.

  • ಯುವಿಯನ್ನು ಹಿಂದಿಕ್ಕಲು ರಾಹುಲ್‍ಗೆ ಬೇಕಿದೆ 40 ರನ್- 1 ರನ್ ಹೊಡೆದ್ರೆ ಕೊಹ್ಲಿ ಮತ್ತೆ ನಂ.1

    ಯುವಿಯನ್ನು ಹಿಂದಿಕ್ಕಲು ರಾಹುಲ್‍ಗೆ ಬೇಕಿದೆ 40 ರನ್- 1 ರನ್ ಹೊಡೆದ್ರೆ ಕೊಹ್ಲಿ ಮತ್ತೆ ನಂ.1

    ಬೆಂಗಳೂರು: ಗೆಲುವಿನ ಹಾದಿಯಲ್ಲಿ ಮುನ್ನುಗ್ಗುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 2020 ವರ್ಷಾರಂಭದಲ್ಲಿ ಅತಿಥಿ ಶ್ರೀಲಂಕಾ ತಂಡವನ್ನು ಮಣಿಸಲು ಸಿದ್ಧತೆ ನಡೆಸಿದೆ. ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರಿಸಿದ್ದ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ದಾಖಲೆ ಬರೆಯುವ ಸಾಧ್ಯತೆಯಿದೆ.

    ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಲಭ್ಯವಿಲ್ಲ. ಆಯ್ಕೆ ಸಮಿತಿಯು ಅವರಿಗೆ ಸರಣಿಯಲ್ಲಿ ವಿಶ್ರಾಂತಿ ನೀಡಿದೆ. ಹೀಗಾಗಿ ರನ್ ಮೆಷಿನ್ ವಿರಾಟ್ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್‍ಗಳಿಸಿದ ದಾಖಲೆಯನ್ನು ಬರೆಯಲು ಸಿದ್ಧರಾಗಿದ್ದಾರೆ. ಈ ಇಬ್ಬರು ಆಟಗಾರರು ಅಂತರಾಷ್ಟ್ರೀಯ ಟಿ20ಯಲ್ಲಿ ಭಾರತದ ಪರ ತಲಾ 2,633 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.

    ಶ್ರೀಲಂಕಾ ವಿರುದ್ಧ ಜನವರಿ 5ರಂದು ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಒಂದು ರನ್ ಗಳಿಸಿದರೆ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20 ಅತಿ ಹೆಚ್ಚು ರನ್‍ಗಳಿಸಿ ದಾಖಲೆ ಬರೆಯಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ 19 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ರೋಹಿತ್ ದಾಖಲೆಯನ್ನು ಹಿಂದಿಕ್ಕಿದ್ದರು. ಆದರೆ 3ನೇ ಹಾಗೂ ಕೊನೆಯ ಪಂದ್ಯದಲ್ಲಿ 71 ಸಿಡಿಸುವ ಮೂಲಕ ರೋಹಿತ್ ಶರ್ಮಾ ಮತ್ತೆ ಅಗ್ರಸ್ಥಾನಕ್ಕೆ ಏರಿದ್ದರು. ಈ ಬೆನ್ನಲ್ಲೇ ಮೈದಾಕ್ಕಿಳಿದ ವಿರಾಟ್ 70 ರನ್ ಗಳಿಸಿ ರೋಹಿತ್‍ರನ್ನು ಸರಿಗಟ್ಟಿದ್ದರು.

    ರೋಹಿತ್ ಶರ್ಮಾ 96 ಇನ್ನಿಂಗ್ಸ್ ಗಳಲ್ಲಿ 2,633 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 70 ಇನ್ನಿಂಗ್ಸ್ ಗಳಲ್ಲಿ ಈ ದಾಖಲೆ ಮಾಡಿದ್ದಾರೆ. ರೋಹಿತ್ ಶರ್ಮಾ 234 ಬೌಂಡರಿ, 120 ಸಿಕ್ಸರ್ ಸಿಡಿಸಿದರೆ, ವಿರಾಟ್ 247 ಬೌಂಡರಿ, 71 ಸಿಕ್ಸರ್ ದಾಖಲಿಸಿದ್ದಾರೆ.

    ಯುವಿಯನ್ನು ಹಿಂದಿಕ್ಕಲಿರುವ ರಾಹುಲ್:
    ಅಂತರರಾಷ್ಟ್ರೀಯ ಟಿ20ಯಲ್ಲಿ 8 ಅರ್ಧ ಶತಕ ಸಿಡಿಸುವ ಮೂಲಕ ಕೆ.ಎಲ್.ರಾಹುಲ್ ಈಗಾಗಲೇ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಈಗ ಯುವಿ ಒಟ್ಟು ರನ್ ಹಿಂದಿಕ್ಕಲು ರಾಹುಲ್ ಸಿದ್ಧರಾಗಿದ್ದಾರೆ. ಈ ಸಾಧನೆ ಮಾಡಲು ರಾಹುಲ್‍ಗೆ 40 ರನ್ ಅಗತ್ಯವಿದೆ.

    ಯುವಿ 51 ಇನ್ನಿಂಗ್ಸ್ ಗಳಲ್ಲಿ 8 ಅರ್ಧಶತಕಗಳ ಸಾಧನೆ ಮಾಡಿದರೆ, ಕೆ.ಎಲ್.ರಾಹುಲ್ 31 ಇನ್ನಿಂಗ್ಸ್ ಗಳಲ್ಲಿ ಪೂರೈಸಿದ್ದಾರೆ. ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ 51 ಇನ್ನಿಂಗ್ಸ್ ಗಳಲ್ಲಿ 1,177 ರನ್ ಗಳಿಸಿದರೆ, ಕೆ.ಎಲ್.ರಾಹುಲ್ 31 ಇನ್ನಿಂಗ್ಸ್ ಗಳಲ್ಲಿ 1,138 ರನ್ ಪೇರಿಸಿದ್ದಾರೆ.

    ಭಾರತವೇ ಫೇವರೇಟ್:
    2017ರಿಂದ ಈವರೆಗೆ ಟೀಂ ಇಂಡಿಯಾ ಹಾಗೂ ಶ್ರೀಲಂಕಾ ತಂಡದ ಮಧ್ಯೆ ಐದು ಟಿ20 ಪಂದ್ಯಗಳು ನಡೆದಿದ್ದು, ಅದರಲ್ಲಿ 4 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. 2017ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ಟೀಂ ಇಂಡಿಯಾ ವಿರುದ್ಧ ಆಡಿದ್ದ ಮೂರು ಟಿ20 ಸರಣಿಯಲ್ಲಿ 3-0 ಅಂತರದಿಂದ ಸೋತಿತ್ತು. ಬಳಿಕ 2018ರಲ್ಲಿ ನಡೆದ ನಿದಾಸ್ ಟ್ರೋಫಿಯಲ್ಲಿ ಸರಣಿಯಲ್ಲಿ ಭಾರತ ಮತ್ತು ಲಂಕಾ ತಲಾ ಒಂದೊಂದು ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಮೂಲಕ 2018ರ ನಿದಾಸ್ ಟ್ರೋಫಿಯ ಫೈನಲ್ ಪ್ರವೇಶಿಸಿದ್ದ ಭಾರತ ತಂಡವು ದಿನೇಶ್ ಕಾರ್ತಿಕ್ ಅವರ ಸ್ಫೋಟಕ ಬ್ಯಾಟಿಂಗ್ ನಿಂದಾಗಿ(ಔಟಾಗದೇ 29 ರನ್, 8 ಎಸೆತ, 2 ಬೌಂಡರಿ, 3 ಸಿಕ್ಸರ್) ಬಾಂಗ್ಲಾದೇಶವನ್ನು ಮಣಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.

    ಸರಣಿ ವೇಳಾಪಟ್ಟಿ:
    ಮೊದಲ ಟಿ20: ಜನವರಿ 5, ಗುವಾಹಟಿ
    ದ್ವಿತೀಯ ಟಿ20: ಜನವರಿ 7, ಇಂದೋರ್
    ಅಂತಿಮ ಟಿ20: ಜನವರಿ 10, ಪುಣೆ

    ಭಾರತ ತಂಡ:
    ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‍ಕೀಪರ್), ರವೀಂದ್ರ ಜಡೇಜಾ, ಶಿವಂ ದುಬೇ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್‍ಪ್ರೀತ್ ಬುಮ್ರಾ, ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಮನೀಶ್ ಪಾಂಡೆ, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್.

    ಶ್ರೀಲಂಕಾ ತಂಡ:
    ಲಸಿತ್ ಮಾಲಿಂಗ (ನಾಯಕ), ಧನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಏಂಜಲೊ ಮ್ಯಾಥ್ಯೂಸ್, ದಸುನ್ ಶನಕ, ಕುಸಲ್ ಪೆರೆರಾ, ನಿರೋಶನ್ ಡಿಕ್ವೆಲ್ಲಾ, ಧನಂಜಯ ಡಿ’ಸಿಲ್ವಾ, ಇಸುರು ಉದನಾ, ಭಾನುಕ ರಾಜಪಕ್ಷ, ಒಶಾದ ಫರ್ನಾಂಡೊ, ವಾನಿಂದು ಹಸರಂಗ, ಲಾಹಿರು ಕುಮಾರ, ಕುಶಲ್ ಮೆಂಡಿಸ್, ಲಕ್ಷಣ್ ಸಂದಕನ್, ಕಸುನ್ ರಜಿತ.

  • ಯುವಿಗೆ 16 ಕೋಟಿ, ಬೆನ್‌ ಸ್ಟೋಕ್ಸ್‌ಗೆ 14.50 ಕೋಟಿ – 2014 ರಿಂದ 2019 ರವರಗಿನ ದುಬಾರಿ ಆಟಗಾರರ ಪಟ್ಟಿ

    ಯುವಿಗೆ 16 ಕೋಟಿ, ಬೆನ್‌ ಸ್ಟೋಕ್ಸ್‌ಗೆ 14.50 ಕೋಟಿ – 2014 ರಿಂದ 2019 ರವರಗಿನ ದುಬಾರಿ ಆಟಗಾರರ ಪಟ್ಟಿ

    ಬೆಂಗಳೂರು: ಕ್ರಿಕೆಟ್ ಜಗತ್ತಿನ ದುಬಾರಿ ಟೂರ್ನಿ ಎಂದೇ ಹೆಸರುವಾಸಿ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ರ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಸಕಲ ಸಿದ್ಧತೆ ನಡೆಯುತ್ತಿದೆ.

    ಇದೇ ತಿಂಗಳ 19 ರಂದು ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ಈ ಹರಾಜು ಪ್ರಕ್ರಿಯೆ ನಡೆಯಲಿದ್ದು, 971 ಮಂದಿಯ ಪಟ್ಟಿಯನ್ನು 332ಕ್ಕೆ ಇಳಿಕೆ ಮಾಡಿ ಐಪಿಎಲ್ ಆಡಳಿತ ಮಂಡಳಿ ಪಟ್ಟಿಯನ್ನು ತಂಡದ ಫ್ರಾಂಚೈಸಿಗಳಿಗೆ ನೀಡಿದೆ. ಈ ಪಟ್ಟಿಯಲ್ಲಿ ಭಾರತದ 19 ಮಂದಿ ಆಟಗಾರರು ಹಾಗೂ ಫ್ರಾಂಚೈಸಿಗಳು ಮನವಿ ಮಾಡಿದ 24 ಮಂದಿ ಕ್ರಿಕೆಟಿಗರು ಸೇರಿದ್ದಾರೆ.

    ಇಲ್ಲಿಯವರೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ನಮ್ಮ ದೇಶಿಯ ಆಟಗಾರರೇ ಹೆಚ್ಚು ದುಬಾರಿ ಹಣಕ್ಕೆ ಬಿಡ್ ಆಗಿದ್ದು, 2015 ರಲ್ಲಿ 16 ಕೋಟಿಗೆ ಬಿಡ್ ಆಗಿದ್ದ ಭಾರತದ ಮಾಜಿ ಆಟಗಾರರು ಯುವರಾಜ್ ಸಿಂಗ್ ಅತೀ ಹೆಚ್ಚು ದುಬಾರಿ ಆಟಗಾರ ಆಗಿದ್ದಾರೆ. ಕಳೆದ ವರ್ಷ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾರತದ ವೇಗಿ ಜಯದೇವ್ ಉನಾದ್ಕಟ್ ಅವರು 8.40 ಕೋಟಿಗೆ ಬಿಡ್ ಆಗಿದ್ದು, 2019 ರ ದುಬಾರಿ ಆಟಗಾರ ಆಗಿದ್ದರು.

    2014 ರಿಂದ 2019 ರವರಗಿನ ಅತೀ ಹೆಚ್ಚು ದುಬಾರಿ ಆಟಗಾರರ ಪಟ್ಟಿ

    2019 ಟಾಪ್ ಫೈವ್ ದುಬಾರಿ ಆಟಗಾರರು
    8.40 ಕೋಟಿ – ಜಯದೇವ್ ಉನಾದ್ಕಟ್ (ಆರ್.ಆರ್)
    8.40 ಕೋಟಿ – ವರುಣ್ ಚಕ್ರವರ್ತಿ (ಕಿಂಗ್ಸ್ ಇಲೆವನ್)
    7.20 ಕೋಟಿ – ಸ್ಯಾಮ್ ಕರ್ರನ್ (ಕಿಂಗ್ಸ್ ಇಲೆವನ್)
    6.40 ಕೋಟಿ – ಕಾಲಿನ್ ಇಂಗ್ರಾಮ್ (ಡಿಸಿ)
    5.00 ಕೋಟಿ – ಮೋಹಿತ್ ಶರ್ಮಾ (ಸಿಎಸ್‍ಕೆ), ಅಕ್ಷರ್ ಪಟೇಲ್ (ಡಿಸಿ), ಕಾರ್ಲೋಸ್ ಬ್ರಾಥ್‍ವೈಟ್ (ಕೆಕೆಆರ್), ಶಿವಂ ದುಬೆ (ಆರ್. ಸಿ.ಬಿ)

    2018 ಟಾಪ್ ಫೈವ್ ದುಬಾರಿ ಆಟಗಾರರು
    12.50 ಕೋಟಿ – ಬೆನ್ ಸ್ಟೋಕ್ಸ್ (ಆರ್.ಆರ್)
    11.50 ಕೋಟಿ – ಜಯದೇವ್ ಉನಾದ್ಕಟ್ (ಆರ್.ಆರ್)
    11.00 ಕೋಟಿ – ಕೆಎಲ್ ರಾಹುಲ್ (ಕಿಂಗ್ಸ್ ಇಲೆವನ್)
    11.00 ಕೋಟಿ – ಮನೀಶ್ ಪಾಂಡೆ (ಎಸ್.ಆರ್.ಹೆಚ್)
    9.60 ಕೋಟಿ – ಕ್ರಿಸ್ ಲಿನ್ (ಕೆಕೆಆರ್)

    2017 ಟಾಪ್ ಫೈವ್ ದುಬಾರಿ ಆಟಗಾರರು
    14.50 ಕೋಟಿ – ಬೆನ್ ಸ್ಟೋಕ್ಸ್ (ಆರ್.ಪಿ.ಎಸ್)
    12.00 ಕೋಟಿ – ಟೈಮಲ್ ಮಿಲ್ಸ್ (ಆರ್.ಸಿ.ಬಿ)
    5.00 ಕೋಟಿ – ಕಗಿಸೊ ರಬಾಡಾ (ಡಿಡಿ)
    5.00 ಕೋಟಿ – ಟ್ರೆಂಟ್ ಬೌಲ್ಟ್ (ಕೆಕೆಆರ್)
    4.50 ಕೋಟಿ – ಪ್ಯಾಟ್ ಕಮ್ಮಿನ್ಸ್ (ಡಿಡಿ)

    2016 ಟಾಪ್ ಫೈವ್ ದುಬಾರಿ ಆಟಗಾರರು
    9.50 ಕೋಟಿ – ಶೇನ್ ವ್ಯಾಟ್ಸನ್ (ಆರ್.ಸಿ.ಬಿ)
    8.50 ಕೋಟಿ – ಪವನ್ ನೇಗಿ (ಡಿಡಿ)
    7.00 ಕೋಟಿ – ಯುವರಾಜ್ ಸಿಂಗ್ (ಎಸ್.ಆರ್.ಹೆಚ್)
    7.00 ಕೋಟಿ – ಕ್ರಿಸ್ ಮೋರಿಸ್ (ಡಿಡಿ)
    6.50 ಕೋಟಿ – ಮೋಹಿತ್ ಶರ್ಮಾ (ಕಿಂಗ್ಸ್ ಇಲೆವನ್)

    2015 ಟಾಪ್ ಫೈವ್ ದುಬಾರಿ ಆಟಗಾರರು
    16.0 ಕೋಟಿ – ಯುವರಾಜ್ ಸಿಂಗ್ (ಡಿಡಿ)
    10.5 ಕೋಟಿ – ದಿನೇಶ್ ಕಾರ್ತಿಕ್ (ಆರ್.ಸಿಬಿ)
    7.50 ಕೋಟಿ – ಏಂಜೆಲೊ ಮ್ಯಾಥ್ಯೂಸ್ (ಡಿಡಿ)
    4.00 ಕೋಟಿ – ಜಹೀರ್ ಖಾನ್ (ಡಿಡಿ)
    3.80 ಕೋಟಿ – ಟ್ರೆಂಟ್ ಬೌಲ್ಟ್ (ಎಸ್.ಆರ್.ಹೆಚ್)

    2014 ಟಾಪ್ ಫೈವ್ ದುಬಾರಿ ಆಟಗಾರರು
    14.0 ಕೋಟಿ – ಯುವರಾಜ್ ಸಿಂಗ್ (ಆರ್.ಸಿ.ಬಿ)
    12.5 ಕೋಟಿ – ದಿನೇಶ್ ಕಾರ್ತಿಕ್ (ಡಿಡಿ)
    9.00 ಕೋಟಿ – ಕೆವಿನ್ ಪೀಟರ್ಸನ್ (ಡಿಡಿ)
    6.50 ಕೋಟಿ – ಮಿಚೆಲ್ ಜಾನ್ಸನ್ (ಕಿಂಗ್ಸ್ ಇಲೆವನ್)
    6.00 ಕೋಟಿ – ಗ್ಲೆನ್ ಮ್ಯಾಕ್ಸ್ ವೆಲ್ (ಕಿಂಗ್ಸ್ ಇಲೆವನ್)

  • ಟೀಂ ಇಂಡಿಯಾ ಫೀಲ್ಡಿಂಗ್ ಬಗ್ಗೆ ಯುವಿ ಅಸಮಾಧಾನ

    ಟೀಂ ಇಂಡಿಯಾ ಫೀಲ್ಡಿಂಗ್ ಬಗ್ಗೆ ಯುವಿ ಅಸಮಾಧಾನ

    ನವದೆಹಲಿ: ವೆಸ್ಟ್ಇಂಡೀಸ್ ವಿರುದ್ಧದ ಟಿ-20ಯ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಫೀಲ್ಡಿಂಗ್ ಬಗ್ಗೆ ಭಾರತ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಟೀಕಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‍ಗಳಿಂದ ಜಯ ಸಾಧಿಸಿತ್ತಾದರೂ ಫೀಲ್ಡಿಂಗ್‍ನಲ್ಲಿ ಅನೇಕ ತಪ್ಪುಗಳನ್ನು ಎಸಗಿತ್ತು.

    ಹೈದರಾಬಾದ್‍ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಟಿ-20 ಪಂದ್ಯದಲ್ಲಿ ಭಾರತದ ವಿರುದ್ಧದ ವೀಂಡಿಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್‍ಗಳ ನಷ್ಟಕ್ಕೆ 207 ರನ್ ಗಳಿಸಿತ್ತು. ಭಾರತದ ನಿಧಾನಗತಿಯ ಫೀಲ್ಡಿಂಗ್‍ನಿಂದಾಗಿ ವೆಸ್ಟ್ ಇಂಡೀಸ್ ಬೃಹತ್ ಮೊತ್ತ ಪೇರಿಸಿತ್ತು. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಮತ್ತು ರೋಹಿತ್ ಶರ್ಮಾ ತಲಾ ಒಂದು ಕ್ಯಾಚ್‍ಗಳನ್ನು ಕೈಬಿಟ್ಟರೆ, ನಾಯಕ ವಿರಾಟ್ ಕೊಹ್ಲಿ ಕೂಡ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡಿದ್ದರು. ಇದನ್ನೂ ಓದಿ: 16 ಎಸೆತಗಳಲ್ಲಿ 50 ರನ್ – ಕೊಹ್ಲಿಯ ‘ನೋಟ್ ಬುಕ್ ಸೆಲಬ್ರೇಷನ್’ ಹಿಂದಿದೆ ಒಂದು ಕಥೆ

    ಈ ವಿಚಾರವಾಗಿ ಶುಕ್ರವಾರ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್, ಭಾರತ ಇಂದು ಮೈದಾನದಲ್ಲಿ ತುಂಬಾ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡಿದೆ. ಯುವ ಆಟಗಾರರು ಸರಿಯಾಗಿ ಬಾಲ್ ಹಿಡಿಯದ ಕಾರಣ ಕ್ರಿಕೆಟಿನಲ್ಲಿ ದುಬಾರಿ ಆಯ್ತು. ಈ ರೀತಿಯ ರನ್‍ಗಳಿಗೆ ಕಡಿವಾಣ ಹೇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇನ್ನಿಂಗ್ಸ್ ನ 16ನೇ ಓವರ್ ನಲ್ಲಿ 44 ರನ್ ಗಳಿಸಿದ್ದ ಶಿಮ್ರಾನ್ ಹೆಟ್ಮಾಯೆರ್ ನೀಡಿದ್ದ ಕ್ಯಾಚ್ ಅನ್ನು ವಾಷಿಂಗ್ಟನ್ ಸುಂದರ್ ಕೈಬಿಟ್ಟರು. ಪರಿಣಾಮ ಶಿಮ್ರಾನ್ ಟಿ-20ಯಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದರು. ಇದೇ ಓವರ್ ನಲ್ಲಿ ರೋಹಿತ್ ಶರ್ಮಾ 24 ರನ್‍ಗಳಿಸಿದ್ದ ಪೊಲಾರ್ಡ್ ಕ್ಯಾಚ್ ಕೈಬಿಟ್ಟರು. ಇದರಿಂದಾಗಿ 19 ಎಸೆತಗಳಲ್ಲಿ 37 ರನ್ ಗಳಿಸಿದರು. ಈ ಮೂಲಕ ವೆಸ್ಟ್ ಇಂಡೀಸ್ ಭಾರತದ ವಿರುದ್ಧ ಎರಡನೇ ಅತಿ ಹೆಚ್ಚು ಮೊತ್ತವನ್ನು ದಾಖಲಿಸಿತು.

    ವಿಂಡೀಸ್ ಒಡ್ಡಿದ್ದ ಬೃಹತ್ ಮೊತ್ತದ ಸವಾಲನ್ನು ನಾಯಕ ವಿರಾಟ್ ಕೊಹ್ಲಿ ಬೇಧಿಸಿದರು. ಪಂದ್ಯದಲ್ಲಿ 94 ರನ್ (50 ಎಸೆತ, 6 ಬೌಂಡರಿ, 6 ಸಿಕ್ಸರ್) ಗಳಿಸಿದ ಕೊಹ್ಲಿ ಸಿಕ್ಸರ್, ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟು ಅಜೇಯರಾಗಿ ಉಳಿದರು. ಇದು ಕೊಹ್ಲಿ ಅವರ ಟಿ20 ಮಾದರಿಯ ಟಾಪ್ ಸ್ಕೋರ್ ಆಗಿದೆ.

  • ಮನೀಶ್ ಪಾಂಡೆ ಮದುವೆಯಲ್ಲಿ ಎಲ್ಲರ ಗಮನ ಸೆಳೆದ ಯುವರಾಜ್: ವಿಡಿಯೋ

    ಮನೀಶ್ ಪಾಂಡೆ ಮದುವೆಯಲ್ಲಿ ಎಲ್ಲರ ಗಮನ ಸೆಳೆದ ಯುವರಾಜ್: ವಿಡಿಯೋ

    ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಟೈಲಿಶ್ ಆಟಗಾರ ಮನೀಶ್ ಪಾಂಡೆ ಆರತಕ್ಷತೆಯಲ್ಲಿ ಮಾಜಿ ಆಟಗಾರ ಯುವರಾಜ್ ಸಿಂಗ್ ಪಂಜಾಬಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೆ ಅವರು ಡ್ಯಾನ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಸೋಮವಾರ ಮನೀಶ್ ನಟಿ ಆಶ್ರಿತಾ ಶೆಟ್ಟಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ಆಚರಣೆ ಎರಡು ದಿನಗಳ ಕಾಲ ನಡೆದಿದೆ. ಮನೀಶ್ ಅವರ ಆರತಕ್ಷತೆಯಲ್ಲಿ ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಭಾಗವಹಿಸಿದ್ದರು. ಈ ವೇಳೆ ಅವರು ಡೋಲು ಸದ್ದಿಗೆ ಬಾಂಗ್ರಾ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ತುಳು ನಟಿಯನ್ನು ವರಿಸಲಿದ್ದಾರೆ ಕ್ರಿಕೆಟಿಗ ಮನೀಶ್ ಪಾಂಡೆ

    ಯುವರಾಜ್ ಅವರು ಒಬ್ಬರೇ ನೃತ್ಯ ಮಾಡುತ್ತಿರುವುದನ್ನು ನೋಡಿ ಮನೀಶ್ ಕೂಡ ಅವರ ಜೊತೆ ಸೇರಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಡೋಲು ಬಾರಿಸುತ್ತಿದ್ದವರು ಯುವರಾಜ್ ಹಾಗೂ ಮನೀಶ್ ಡ್ಯಾನ್ಸ್ ನೋಡಿ ಖುಷಿಪಟ್ಟಿದ್ದಾರೆ. ಇದನ್ನೂ ಓದಿ: ರಾತ್ರಿ ಟ್ರೋಫಿ ಗೆದ್ದು ಮರುದಿನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಶ್ ಪಾಂಡೆ

    ಯುವರಾಜ್ ಸಿಂಗ್ ತಮ್ಮ ಇನ್‍ಸ್ಟಾದಲ್ಲಿ ಮನೀಶ್ ಹಾಗೂ ಆಶ್ರಿತಾ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಪ್ರೀತಿಯ ಮನೀಶ್ ಹಾಗೂ ಆಶ್ರಿತಾ ನೀವು ಜೀವನದಲ್ಲಿ ಯಾವಾಗಲೂ ಸಂತೋಷವಾಗಿರಿ ಎಂದು ನಾನು ಹಾರೈಸುತ್ತೇನೆ. ಉಳಿದರು ನಮ್ಮ ಹಿಂದೆ ನಿಂತಿರುವ ಡೋಲು ಬಾರಿಸುವವನನ್ನು ನೋಡಿ” ಎಂದು ಬರೆದುಕೊಂಡಿದ್ದರು.

    ಸೋಮವಾರ ಮನೀಶ್, ನಟಿ ಆಶ್ರಿತಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದರು. ಹಿಂದಿನ ದಿನ ಎಂದರೆ ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಮನೀಶ್ ಅವರ ನಾಯಕತ್ವದಲ್ಲಿ ತಮಿಳುನಾಡಿನ ತಂಡದ ವಿರುದ್ಧ ಕರ್ನಾಟಕ ತಂಡ ಜಯಗಳಿಸಿತ್ತು. ಈ ಪಂದ್ಯದಲ್ಲಿ ಮನೀಶ್ 60 ರನ್‍ಗಳನ್ನು ಗಳಿಸಿದ್ದರು.

     

    View this post on Instagram

     

    Nice dance #yuvrajsingh and #manishpandey #ashritashetty with my team #dholibros Rocking ???????????? performance

    A post shared by Vijay Bhatt (@vijaybhatt888) on

  • ಮತ್ತೆ ಐಪಿಎಲ್ ಹರಾಜು ಎದುರಿಸುತ್ತಾರಾ ಯುವಿ, ಉತ್ತಪ್ಪ?

    ಮತ್ತೆ ಐಪಿಎಲ್ ಹರಾಜು ಎದುರಿಸುತ್ತಾರಾ ಯುವಿ, ಉತ್ತಪ್ಪ?

    – 2020ರ ಆವೃತ್ತಿಯ ಹರಾಜು ಡಿಸೆಂಬರ್ 19ಕ್ಕೆ ಫಿಕ್ಸ್
    – 12 ಆಟಗಾರರನ್ನು ಕೈಬಿಟ್ಟ ಆರ್‌ಸಿಬಿ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದ್ದು, 2020ರ ಆವೃತ್ತಿಯ ಆಟಗಾರರ ಹರಾಜು ಕೋಲ್ಕತ್ತಾದಲ್ಲಿ ಡಿಸೆಂಬರ್ 19 ರಂದು ನಡೆಯಲಿದೆ. ಆದರೆ ಅತ್ಯಂತ ಆಶ್ಚರ್ಯವೆಂದರೆ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಯುವರಾಜ್ ಸಿಂಗ್, ಕ್ರಿಸ್ ಲೀನ್, ಡೇವಿಡ್ ಮಿಲ್ಲರ್ ಅವರನ್ನು ತಂಡಗಳು ಕೈಬಿಟ್ಟಿವೆ.

    ಐಪಿಎಲ್‍ನ 8 ತಂಡಗಳ ಫ್ರಾಂಚೈಸ್ ಗಳು ಒಟ್ಟು 71 ಆಟಗಾರರನ್ನು ಕೈಬಿಟ್ಟಿದ್ದು, 127 ಆಟಗಾರರನ್ನು ಉಳಿಸಿಕೊಂಡಿದ್ದಾರೆ. ಈ ಪೈಕಿ ಮುಂಬೈ ಇಂಡಿಯನ್ಸ್ ನಿಂದ ಹೊರಬಿದ್ದ ಯುವರಾಜ್ ಸಿಂಗ್ ಹಾಗೂ ಕೋಲ್ಕತ್ತಾದಿಂದ ಕೈಬಿಟ್ಟ ರಾಬಿನ್ ಉತ್ತಪ್ಪ 2020ರ ಆವೃತ್ತಿಯ ಹರಾಜು ಎದುರಿಸುತ್ತಾರಾ ಎನ್ನುವ ಚರ್ಚೆ ಶುರುವಾಗಿದೆ. ಇದನ್ನೂ ಓದಿ: 9 ವರ್ಷದ ರಾಜಸ್ಥಾನ್ ನಂಟು ಮುರಿದು ದೆಹಲಿ ಪರ ಬ್ಯಾಟ್ ಬೀಸಲಿದ್ದಾರೆ ರಹಾನೆ

    2019ರಲ್ಲಿ ಕೆಕೆಆರ್ ಪರ ಉತ್ತಪ್ಪ 12 ಪಂದ್ಯಗಳನ್ನು ಆಡಿದ್ದರು. ಆದರೆ ಉತ್ತಪ್ಪ ಒಂದು ಬಾರಿ ಮಾತ್ರ ಅರ್ಧ ಶತಕ ಬಾರಿಸಿದ್ದರು. ಅವರ ಸ್ಟ್ರೈಕ್ ರೇಟ್ ಕಳೆದ 5 ವರ್ಷಗಳಲ್ಲಿ 115.10 ರಷ್ಟಿತ್ತು. ಈ ಕಾರಣದಿಂದಾಗಿ ಕೆಕೆಆರ್ ರಾಬಿನ್ ಉತ್ತಪ್ಪ ಅವರನ್ನು ಕೈಬಿಟ್ಟಿದೆ. 2019ರ ಆವೃತ್ತಿಯಲ್ಲಿ ಕೆಕೆಆರ್ ಅವರಿಗೆ 6.4 ಕೋಟಿ ಪಾವತಿಸಿತ್ತು. ಇದನ್ನೂ ಓದಿ: ಐಪಿಎಲ್ ಉದ್ಘಾಟನಾ ಸಮಾರಂಭ ‘ವೇಸ್ಟ್ ಆಫ್ ಮನಿ’ ಎಂದ ಬಿಸಿಸಿಐ

    ಯಾವ ತಂಡ? ಯಾರು ಹೊರಕ್ಕೆ?:
    ಕೋಲ್ಕತಾ ನೈಟ್ ರೈಡರ್ಸ್: ರಾಬಿನ್ ಉತ್ತಪ್ಪ, ಕ್ರಿಸ್ ಲೀನ್, ಜೋ ಡೆನಾಲಿ, ಎನ್ರಿಚ್ ನಾರ್ಟೇಜ್, ಪಿಯೂಷ್ ಚಾವ್ಲಾ, ಕಾರ್ಲೋಸ್ ಬ್ರಾಥ್‍ವೈಟ್, ಪೃಥ್ವಿರಾಜ್, ನಿಖಿಲ್ ನಾಯಕ್, ಕರಿಯಪ್ಪ, ಮ್ಯಾಥ್ಯೂ ಕೆಲ್ಲಿ, ಎಸ್ ಮುಂಡೆ.

    ಮುಂಬೈ ಇಂಡಿಯನ್ಸ್: ಯುವರಾಜ್ ಸಿಂಗ್, ಆಡಮ್ ಮಿಲ್ನೆ, ಎಲ್ಜಾರಿ ಜೋಸೆಫ್, ಬರೀಂದರ್ ಸರನ್, ಬೆನ್ ಕಟಿಂಗ್, ಬುರೆನ್ ಹೆಂಡ್ರಿಕ್ಸ್, ಎವಿನ್ ಲೂಯಿಸ್, ಜೇಸನ್ ಬೆಹ್ರೆಂಡ್ರೂಫ್, ಪಂಕಜ್ ಜೈಸ್ವಾಲ್, ರಾಸಿಕ್ ಧಾರ್. ಇದನ್ನೂ ಓದಿ: ಬುಮ್ರಾ ಆರ್‌ಸಿಬಿಗೆ ಹೋಗ್ತಾರಾ? ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಮುಂಬೈ ಇಂಡಿಯನ್ಸ್

    ಚೆನ್ನೈ ಸೂಪರ್ ಕಿಂಗ್ಸ್: ಚೈತನ್ಯ ಬಿಶ್ನಾಯ್, ಡೇವಿಡ್ ವಿಲ್ಲಿ, ಧ್ರುವ ಶೌರಿ, ಮೋಹಿತ್ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್, ಸ್ಕಾಟ್

    ಸನ್‍ರೈಸರ್ಸ್ ಹೈದರಾಬಾದ್: ಯೂಸುಫ್ ಪಠಾಣ್, ಶಕೀಬ್ ಅಲ್ ಹಸನ್, ಮಾರ್ಟಿನ್ ಗುಪ್ಟಿಲ್, ದೀಪಕ್ ಹೂಡಾ, ರಿಕಿ ಭೂಯಿ.

    ದೆಹಲಿ ಕ್ಯಾಪಿಟಲ್ಸ್: ಅಂಕುಶ್ ಬೈಸ್, ಬಿ ಅಯ್ಯಪ್ಪ, ಕ್ರಿಸ್ ಮೋರಿಸ್, ಕಾಲಿನ್ ಇಂಗ್ರಾಮ್, ಕಾಲಿನ್ ಮುನ್ರೋ, ಹನುಮಾ ವಿಹಾರಿ, ಜಲಜ್ ಸಕ್ಸೇನಾ, ಮಂಜೋತ್ ಕಲ್ರಾ, ನಾಥು ಸಿಂಗ್.

    ಕಿಂಗ್ಸ್ ಇಲೆವೆನ್ ಪಂಜಾಬ್: ಅಗ್ನಿವೇಶ್ ಅಯಾಚಿ, ಆಂಡ್ರ್ಯೂ ಟೈ, ಡೇವಿಡ್ ಮಿಲ್ಲರ್, ಹೆನ್ರಿಕ್ಸ್, ಪ್ರಭಾಸಿಮ್ರಾನ್ ಸಿಂಗ್, ಸ್ಯಾಮ್ ಕುರನ್, ವರುಣ್ ಚಕ್ರವರ್ತಿ.

    ರಾಜಸ್ಥಾನ್ ರಾಯಲ್ಸ್: ಆರ್ಯಮನ್ ಬಿರ್ಲಾ, ಆಷ್ಟನ್ ಟರ್ನರ್, ಇಶ್ ಸೋಧಿ, ಜಯದೇವ್ ಉನಾದ್ಕಟ್, ಲಿಯಾಮ್ ಲಿವಿಂಗ್ಸ್ಟೋನ್, ಓಶೆನ್ ಥಾಮಸ್, ಪ್ರಶಾಂತ್ ಚೋಪ್ರಾ, ರಾಹುಲ್ ತ್ರಿಪಾಠಿ, ಶುಭಮ್ ರಂಜನೆ, ಸ್ಟುವರ್ಟ್ ಬಿನ್ನಿ, ಸುದೇಶನ್ ಮಿಥುನ್.

    ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆಕ್ಸ್‍ದೀಪ್ ನಾಥ್, ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಡೇಲ್ ಸ್ಟೇನ್, ಹೆನ್ರಿಕ್ ಕ್ಲಾಸೆನ್, ಹಿಮ್ಮತ್ ಸಿಂಗ್, ಕುಲ್ವಂತ್ ಕಜ್ರೋಲಿಯಾ, ಮಾರ್ಕಸ್ ಸ್ಟೊಯಿನಿಸ್, ನಾಥನ್ ಕೌಲ್ಟರ್ ನೈಲ್, ಮಿಲಿಂದ್ ಕುಮಾರ್, ಪ್ರಯಾಸ್, ಶಿಮ್ರಾನ್ ಹೆಟ್ಮಿಯರ್, ಟಿಮ್ ಸೌಥಿ.

    ಆಟಗಾರರ ಖರೀದಿಯ ಬಜೆಟ್ ಏರಿಕೆ:
    ಐಪಿಎಲ್ 2019ರಲ್ಲಿ, ಪ್ರತಿ ಫ್ರ್ಯಾಂಚೈಸ್ ಆಟಗಾರರನ್ನು ಖರೀದಿಸಲು 82 ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. ಈ ಮೊತ್ತದಲ್ಲಿ ಏರಿಕೆಯಾಗಿದ್ದು, 2020ರ ಆವೃತ್ತಿಯ ಹರಾಜಿನಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಆಯ್ಕೆ ಮಾಡಲು 85 ಕೋಟಿ ರೂ. ಬಜೆಟ್ ಹೊಂದಬಹುದಾಗಿದೆ.

    ಡಿಸೆಂಬರ್‌ನಲ್ಲಿ ನಡೆಯಲಿರುವ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನೆಚ್ಚಿನ ಆಟಗಾರರನ್ನು ಖರೀದಿಸಲು ಅತಿ ಹೆಚ್ಚು, 42.70 ಕೋಟಿ ರೂ. ಹೊಂದಿದೆ. ಇದರ ನಂತರದ ಬಿಗ್ ಬಜೆಟ್‍ನಲ್ಲಿ ಕೆಕೆಆರ್ 35.65 ಕೋಟಿ ರೂ. ಮತ್ತು ರಾಜಸ್ಥಾನ್ ರಾಯಲ್ಸ್ 28.90 ಕೋಟಿ ರೂ. ಗಳನ್ನು ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರಾಜಿನ ಮೊದಲು ಗರಿಷ್ಠ 12 ಆಟಗಾರರನ್ನು ಬಿಡುಗಡೆ ಮಾಡಿದೆ. ಸನ್‍ರೈಸರ್ಸ್ ಹೈದರಾಬಾದ್ ಹರಾಜಿನ ಮೊದಲು ಐಪಿಎಲ್ 2020ರ ಆವೃತ್ತಿಗಾಗಿ ಅತಿ ಕಡಿಮೆ 5 ಆಟಗಾರರನ್ನು ಬಿಟ್ಟಿದೆ.

  • ನನಗೆ ತೊಂದರೆ ಕೊಟ್ಟರೆ ಶೂಟ್ ಮಾಡ್ತೀನಿ – ಪತ್ನಿಗೆ ಎಚ್ಚರಿಕೆ ಕೊಟ್ಟ ಯುವಿ

    ನನಗೆ ತೊಂದರೆ ಕೊಟ್ಟರೆ ಶೂಟ್ ಮಾಡ್ತೀನಿ – ಪತ್ನಿಗೆ ಎಚ್ಚರಿಕೆ ಕೊಟ್ಟ ಯುವಿ

    ನವದೆಹಲಿ: ನನಗೆ ತೊಂದರೆ ಕೊಟ್ಟರೆ ಶೂಟ್ ಮಾಡುತ್ತೇನೆ ಎಂದು ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಪತ್ನಿ ಹೆಜೇಲ್ ಕೀಚ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

    ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ಕುಟುಂಬ ಮತ್ತು ಸ್ನೇಹಿತರ ಜೊತೆ ಆನಂದದ ಜೀವನ ಕಳೆಯುತ್ತಿರುವ ಯುವರಾಜ್ ಸಿಂಗ್, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಡಿಯೋವನ್ನು ಹಾಕಿದ್ದು, ಅದರಲ್ಲಿ ಮುಂದಿನ ಬಾರಿ ನನಗೆ ಹೀಗೆ ತೊಂದರೆ ಕೊಟ್ಟರೆ ನಾನು ನಿನ್ನನ್ನು ವಾರ್ ಗನ್‌ನಿಂದ ಶೂಟ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/B4f1UcIDwHH/?utm_source=ig_embed

    ಯೂವಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಅವರು ವರ್ಚುವಲ್ ರಿಯಾಲಿಟಿ ಗೇಮ್ ಆಡುತ್ತಿದ್ದು, ಈ ವೇಳೆ ಯುವರಾಜ್ ಸಿಂಗ್ ಮಾಡಿದ ರೀತಿಯಲ್ಲೇ ಅವರ ಪತ್ನಿ ಕೂಡ ಅನುಕರಣೆ ಮಾಡಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಯುವರಾಜ್ ಸಿಂಗ್ ಮುಂದಿನ ಬಾರಿ ನನಗೆ ಹೀಗೆ ತೊಂದರೆ ಕೊಟ್ಟರೆ ನಾನು ನಿನನ್ನು ವಾರ್ ಗನ್‌ನಿಂದ ಶೂಟ್ ಮಾಡುತ್ತೇನೆ ಎಂದು ಬರೆದು ಅವರ ಪತ್ನಿಗೆ ಟ್ಯಾಗ್ ಮಾಡಿದ್ದಾರೆ.

    ಯುವರಾಜ್ ಸಿಂಗ್ ಅವರ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಅದಕ್ಕೆ ಕಾಮೆಂಟ್ ಮಾಡಿರುವ ಹಜೇಲ್ ಕೀಚ್ ಅವರು ಅಯ್ಯೋ ದೇವರೇ ನನಗೆ ನೀನು ಈ ವಿಡಿಯೋ ಪೋಸ್ಟ್ ಮಾಡಿದ್ದೀಯ ಎಂದು ನಂಬಲು ಆಗುತ್ತಿಲ್ಲ. ನಾನು ನಿನ್ನನ್ನು ಕೊಂದು ಬಿಡುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

    ಯೂವಿಯ ಈ ವಿಡಿಯೋ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದು, ಯುವರಾಜ್ ಸಿಂಗ್ ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ. ನೀವು ನಮ್ಮ ರೋಲ್ ಮಾಡೆಲ್ ಎಂದು ಕಾಮೆಂಟ್ ಮಾಡಿದ್ದಾರೆ. ಇದರ ಜೊತೆಗೆ ಈ ವಿಡಿಯೋಗೆ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಕೂಡ ಕಾಮೆಂಟ್ ಮಾಡಿದ್ದು, ಮೂವ್ಸ್ ಮತ್ತು ಗೊಲ್ಸ್ ಎಂದು ಬರೆದು ಎಮೋಜಿಗಳನ್ನು ಹಾಕಿದ್ದಾರೆ.

    2000 ರಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಯುವಿ 04 ಏಕದಿನ ಪಂದ್ಯಗಳಲ್ಲಿ 8,701 ರನ್ ಸಿಡಿಸಿದ್ದಾರೆ. 2017 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊನೆ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದರು. 2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದು, 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007 ರಲ್ಲಿ ಮೊದಲ ಟಿ20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದರು. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ.

    ಕ್ರಿಕೆಟ್ ವೃತ್ತಿ ಜೀವನದ ಆರಂಭ 6, 7 ವರ್ಷಗಳ ಕಾಲ ಉತ್ತಮವಾಗಿ ಆಡಿದ್ದೇನೆ. ನಂತರ ಅವಧಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದರಿಂದ ನನಗೆ ಅವಕಾಶಗಳು ಕಡಿಮೆಯಾದವು. ಅದೇ ಸಂದರ್ಭದಲ್ಲಿ ಕ್ಯಾನ್ಸರ್ ನನ್ನನ್ನು ಕಾಡಿತು. ಆದರೆ ಕ್ಯಾನ್ಸರ್ ನಿಂದ ಗುಣಮುಖನಾದೆ. ಬಳಿಕ ತಂಡದಲ್ಲಿ ನನಗೆ ನಿರಂತರವಾಗಿ ಅವಕಾಶ ಸಿಗಲಿಲ್ಲ. ಕೆಲವು ಪಂದ್ಯಗಳಲ್ಲಿ ಮಾತ್ರ ಆಡಲು ಸಾಧ್ಯವಾಯಿತು ಎಂದು ಈ ಹಿಂದೆ ಯುವಿ ತಿಳಿಸಿದ್ದರು.

    2011ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ತಂಡದಲ್ಲಿ ನಿರಂತರವಾಗಿ ಆಡಿದ್ದ ಯುವಿ ಆನಂತರ ಕ್ಯಾನ್ಸರ್ ನಿಂದ ಬಳಲಿದ್ದರು. ಆದರೆ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗೆದ್ದು ಬಂದ ಅವರು ಬಳಿಕ ಫಾರ್ಮ್ ಸಮಸ್ಯೆಯಿಂದ ಬಳಲಿದ್ದರು.

    011 ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಟೂರ್ನಿಯಲ್ಲಿ 90.50 ಸರಾಸರಿಯಲ್ಲಿ 362 ರನ್ ಹಾಗೂ 15 ವಿಕೆಟ್ ಪಡೆದು ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ 2017 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು.

  • ಯುವಿ ನೀನು ನನ್ನ ಸೂಪರ್ ಸ್ಟಾರ್ ಎಂದ ಗಂಗೂಲಿ

    ಯುವಿ ನೀನು ನನ್ನ ಸೂಪರ್ ಸ್ಟಾರ್ ಎಂದ ಗಂಗೂಲಿ

    ಮುಂಬೈ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ನೇಮಕ ಬಹುತೇಕ ಖಚಿತವಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

    ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಕೂಡ ದಾದಾಗೆ ಶುಭ ಕೋರಿ ಟ್ವೀಟ್ ಮಾಡಿದ್ದು, ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿದ ಗಂಗೂಲಿ, ನೀನು ನನ್ನ ಸೂಪರ್ ಸ್ಟಾರ್ ಎಂದು ಯುವಿಗೆ ಹೊಗಳಿಕೆ ನೀಡಿದ್ದಾರೆ.

    ‘ಟೀಂ ಇಂಡಿಯಾ ನಾಯಕತ್ವದಿಂದ ಬಿಸಿಸಿಐ ಅಧ್ಯಕ್ಷವರೆಗೂ ಉತ್ತಮ ವ್ಯಕ್ತಿಯ ಅತ್ಯುತ್ತಮ ಜರ್ನಿ. ಮಾಜಿ ಕ್ರಿಕೆಟ್ ಆಟಗಾರನಾಗಿ ಅವರು ಆಟಗಾರರ ದೃಷ್ಟಿಕೋನವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುತ್ತಾರೆ. ಆಟಗಾರ ಕ್ರಿಕೆಟ್ ಆಡಳಿತಗಾರನಾಗುವುದು ಉತ್ತಮ ಬೆಳವಣಿಗೆ ಎನಿಸುತ್ತಿದೆ. ಆದರೆ ಯೋಯೋ ಟೆಸ್ಟ್ ವೇಳೆ ನೀವು ಬಿಸಿಸಿಐ ಅಧ್ಯಕ್ಷರಾಗಿರಬೇಕಿತ್ತು’ ಎಂದು ಯುವಿ ಟ್ವೀಟ್ ಮಾಡಿದ್ದರು.

    ಯುವರಾಜ್ ಸಿಂಗ್‍ರ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಗಂಗೂಲಿ, ನಿಮ್ಮ ಶುಭಾಶಯಕ್ಕೆ ಧನ್ಯವಾದ. ನೀವು ಭಾರತಕ್ಕಾಗಿ ವಿಶ್ವಕಪ್ ಗೆದ್ದು ತಂದಿದ್ದೀರಿ. ನೀವು ನನ್ನ ಸೂಪರ್ ಸ್ಟಾರ್. ಇದೀಗ ಕ್ರಿಕೆಟ್‍ಗೆ ಒಳ್ಳೆಯ ಕಾಲ ಬರಲಿದೆ ಎಂದು ಹೇಳಿದ್ದಾರೆ.

    ಅಂದಹಾಗೇ ಯುವರಾಜ್ ಸಿಂಗ್ ಕ್ಯಾನ್ಸರ್ ನಿಂದ ಬಳುತ್ತಿದ್ದರು ಕೂಡ ವಿಶ್ವಕಪ್ ಟೂರ್ನಿಯನ್ನು ಆಡಿದ್ದರು. 2007 ಮೊದಲ ಟಿ20 ಟೂರ್ನಿ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಯುವಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲಯಲ್ಲಿ ಗಂಗೂಲಿ ಅವರು ಯುವರಾಜ್ ಸಿಂಗ್ ಅವರಿಗೆ ಹೆಚ್ಚಿನ ಗೌರವ ನೀಡಿದ್ದಾರೆ.

  • ಯೋ ಯೋ ಟೆಸ್ಟ್ ಪಾಸ್ ಆದ್ರೂ ಕಡೆಗಣಿಸಿದ್ರು- ಯುವಿ ನೋವಿನ ನುಡಿ

    ಯೋ ಯೋ ಟೆಸ್ಟ್ ಪಾಸ್ ಆದ್ರೂ ಕಡೆಗಣಿಸಿದ್ರು- ಯುವಿ ನೋವಿನ ನುಡಿ

    ಮುಂಬೈ: ಬಿಸಿಸಿಐ ಆಟಗಾರ ಫಿಟ್ನೆಸ್ ಕುರಿತು ನಡೆಸುವ ಯೋ ಯೋ ಟೆಸ್ಟ್ ಪಾಸಾದ್ರೂ ನನ್ನನ್ನು ವಿಶ್ವಕಪ್ ಟೂರ್ನಿಯ ಆಯ್ಕೆಗೆ ಪರಿಗಣಿಸಿರಲಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ.

    2007ರ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ, 2011 ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದ ಯುವರಾಜ್ ಸಿಂಗ್ ಅವರನ್ನು 2017ರ ವೆಸ್ಟ್ ಇಂಡೀಸ್ ಟೂರ್ನಿಯ ಬಳಿಕ ತಂಡದಿಂದ ಕೈ ಬಿಡಲಾಗಿತ್ತು. ಈ ಕುರಿತು ಮಾತನಾಡಿರುವ ಯುವರಾಜ್ ಸಿಂಗ್ ಅಂದು ತಮಗಾದ ನೋವಿನ ಕುರಿತು ಹೇಳಿಕೊಂಡಿದ್ದಾರೆ.

    2017ರ ಚಾಂಪಿಯನ್ಸ್ ಟ್ರೋಫಿಯ ಬಳಿಕ ಆಡಿದ್ದ 8-9 ಪಂದ್ಯಗಳಲ್ಲಿ 2 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕವೂ ನನ್ನನ್ನು ತಂಡದಿಂದ ಕೈಬಿಡುತ್ತಾರೆ ಎಂದು ಊಹಿಸಿರಲಿಲ್ಲ. ಈ ಸಂದರ್ಭದಲ್ಲಿ ಗಾಯಗೊಂಡಿದ್ದ ಪರಿಣಾಮ ಮುಂದಿನ ಶ್ರೀಲಂಕಾ ವಿರುದ್ಧದ ಸರಣಿಗೆ ಸಿದ್ಧರಾಗಲು ಸೂಚನೆ ಲಭಿಸಿತ್ತು. ಇದರ ನಡುವೆಯೇ ಬಿಸಿಸಿಐ ಯೋ ಯೋ ಟೆಸ್ಟ್ ಕಡ್ಡಾಯ ಮಾಡಿತ್ತು. ಇದು ನನ್ನ ಆಯ್ಕೆಗೆ ಯೂಟರ್ನ್ ಆಗಿ ಪರಿಣಮಿಸಿತ್ತು. ಏಕೆಂದರೆ ಗಾಯದ ಸಮಸ್ಯೆಯಿಂದ ಗುಣವಾದ ಕೂಡಲೇ ಯೋ ಯೋ ಟೆಸ್ಟ್ ಎದುರಿಸಬೇಕಾಗಿ ಬಂತು ಹೇಳಿದ್ದಾರೆ.

    36 ವರ್ಷದ ವಯಸ್ಸಿನಲ್ಲೂ ಅಂದು ನಾನು ಯೋ ಯೋ ಟೆಸ್ಟ್ ಪಾಸ್ ಮಾಡಿದ್ದೆ. ಆದರೆ ಅವರು ನಾನು ಯೋ ಯೋ ಟೆಸ್ಟ್ ಪೂರ್ಣಗೊಳಿಸುತ್ತೇನೆ ಎಂದು ಊಹೆ ಮಾಡಿರಲಿಲ್ಲ. ಪರಿಣಾಮ ನನಗೆ ದೇಶಿಯ ಕ್ರಿಕೆಟ್ ಟೂರ್ನಿ ಆಡಲು ಸೂಚನೆ ನೀಡಿದ್ದರು. ಅಲ್ಲಿಂದ ನನ್ನ ಕಡೆಗಣಿಸಲು ಸುಲಭವಾಯಿತು ಎಂದಿದ್ದಾರೆ.

    ಟೀ ಇಂಡಿಯಾ ಪರ 304 ಏಕದಿನ, 58 ಟಿ20 ಪಂದ್ಯಗಳನ್ನು ಆಡಿರುವ ಯುವರಾಜ್ ಸಿಂಗ್ ಕ್ರಮವಾಗಿ 8,701 ಹಾಗೂ 1,177 ರನ್ ಗಳಿಸಿದ್ದಾರೆ. 2017ರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 127 ಎಸೆತಗಳಲ್ಲಿ 150 ರನ್ ಸಿಡಿಸಿದ್ದರು. ಆ ಬಳಿಕ ನಡೆದ ಚಾಂಪಿಯನ್ಸ್ ಟ್ರೋಪಿಯಲ್ಲಿ 4 ಇನ್ನಿಂಗ್ಸ್ ಗಳಿಂದ 35ರ ಸರಾಸರಿಯಲ್ಲಿ 105 ರನ್ ಗಳಿಸಿದ್ದರು. ಆದರೆ ಆ ಬಳಿಕ ವೆಸ್ಟ್ ಇಂಡೀಸ್ ಟೂರ್ನಿಯಲ್ಲಿ ತೋರಿದ ನಿರಾಸ ಪ್ರದರ್ಶನದಿಂದ ಅವರನ್ನು ತಂಡದಿಂದ ಕೈಬಿಡಲಾಗುತ್ತು.

    ಸತತ 17 ವರ್ಷ ದೇಶದ ಪರ ಆಡಿದ್ದ ಆಟಗಾರನಿಗೆ ತಂಡದಿಂದ ಕೈಬಿಡುತ್ತಿರುವ ಕುರಿತು ಮಾಹಿತಿ ನೀಡಿರುವ, ಕುಳಿತು ಮಾತನಾಡುವ ಕೆಲಸ ಕೂಡ ಆಗಲಿಲ್ಲ. ಇದು ತಮಗೆ ಎದುರಾದ ಕೆಟ್ಟ ಅನುಭವ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಇದು ತಮಗೆ ಮಾತ್ರವಲ್ಲ ಹಲವು ಹಿರಿಯ ಕ್ರಿಕೆಟಿಗರಿಗೆ ಎದುರಾದ ಅನುಭವಾಗಿದೆ ಎಂದು ಯುವಿ ತಮ್ಮ ಅಸಮಾಧಾವನ್ನು ವ್ಯಕ್ತಪಡಿಸಿದ್ದಾರೆ.

    ಏನಿದು ಯೋಯೋ ಫಿಟ್ನೆಸ್ ಟೆಸ್ಟ್?
    ಕ್ರಮಬದ್ಧ ಹಾಗೂ ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮಥ್ರ್ಯ ವನ್ನು ಈ ಪರೀಕ್ಷೆಯಲ್ಲಿ ಆಟಗಾರ ತೋರಿಸಬೇಕಾಗುತ್ತದೆ. ಯೊಯೊ ಫಿಟ್‍ನೆಸ್ 20 ಮೀ ಅಳತೆಯಲ್ಲಿ ಎರಡು ಕೋನ್ ಗಳನ್ನು ನೇರವಾಗಿ ಇರಿಸಲಾಗಿರುತ್ತದೆ. ಆಟಗಾರ ಒಂದು ಲೈನ್ ನಿಂದ ಓಟವನ್ನು ಆರಂಭಿಸಬೇಕು. ಎರಡೂ ಲೈನ್ ನಲ್ಲಿಟ್ಟ ಕೋನ್ ಗಳನ್ನು ಬೀಪ್ ಧ್ವನಿ ಅನುಸರಿಸಿ ಸುತ್ತಬೇಕು. ಒಟ್ಟಾರೆ ಮೂರು ಬೀಪ್ ಧ್ವನಿ ಒಳಗಾಗಿ ಸುತ್ತಬೇಕು. ಈ ಬೀಪ್ ಸ್ಟಾರ್ಟ್, ಟರ್ನ್ ಹಾಗೂ ಫಿನಿಶ್ ಸೂಚನೆಯಾಗಿರುತ್ತದೆ. ಪ್ರತೀ ಬಾರಿ ಸುತ್ತಿದಾಗಲೂ ಬೀಪ್ ಧ್ವನಿಯ ಅಂತರ ಕಡಿಮೆಯಾಗುತ್ತ ಹೋಗುತ್ತದೆ. 2 ಬಾರಿ ಬೀಪ್ ಸಮಯದೊಳಗೆ 40 ಮೀ ಕ್ರಮಿಸಲಾಗದೇ ಹೋದರೆ ಪರೀಕ್ಷೆ ಮುಕ್ತಾಯಗೊಳ್ಳುತ್ತದೆ. ಲ್ಯಾಪ್ಸ್ ಹಾಗೂ ಓಟದ ವೇಗ ಆಧರಿಸಿ ಅಂಕ ನೀಡಿ ಆಯ್ಕೆ ಮಾಲಾಗುತ್ತದೆ.