Tag: ಯುವರಾಜ್ ಸಿಂಗ್

  • ಗಂಡು ಮಗುವಿಗೆ ಜನ್ಮ ನೀಡಿದ ಹಜೆಲ್ ಕೀಚ್ – ತಂದೆಯಾದ ಖುಷಿಯಲ್ಲಿ ಯುವರಾಜ್ ಸಿಂಗ್

    ಗಂಡು ಮಗುವಿಗೆ ಜನ್ಮ ನೀಡಿದ ಹಜೆಲ್ ಕೀಚ್ – ತಂದೆಯಾದ ಖುಷಿಯಲ್ಲಿ ಯುವರಾಜ್ ಸಿಂಗ್

    ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಹಜೆಲ್ ಕೀಚ್ ದಂಪತಿಗೆ ಗಂಡು ಮಗು ಜನಿಸಿದೆ. ಇನ್ನು ತಂದೆಯಾಗಿರುವ ಖುಷಿಯಲ್ಲಿರುವ ಯುವರಾಜ್ ಸಿಂಗ್ ಈ ವಿಚಾರವನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಯುವರಾಜ್ ಸಿಂಗ್ ಅವರು ತಮ್ಮ ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ನಮ್ಮ ಎಲ್ಲಾ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರಿಗೆ, ದೇವರು ನಮಗೆ ಗಂಡು ಮಗುವನ್ನು ಆಶೀರ್ವಾದಿಸಿದ್ದಾನೆ ಎಂದು ಹಂಚಿಕೊಳ್ಳುಲು ಸಂತೋಷಪಡುತ್ತೇನೆ. ಈ ಆಶೀರ್ವಾದಕ್ಕೆ ದೇವರಿಗೆ ನಾವು ಧನ್ಯವಾದ ಹೇಳುತ್ತೇವೆ. ನಮ್ಮ ಕುಟುಂಬದ ಚಿಕ್ಕವನನ್ನು ಜಗತ್ತಿಗೆ ಸ್ವಾಗತಿಸುವಾಗ ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ಬಯಸುತ್ತೇವೆ ಎಂದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸಾಲ ವಸೂಲಿಯಲ್ಲೂ ಗುರು ರಾಘವೇಂದ್ರ ಬ್ಯಾಂಕ್ ವಂಚನೆ: ಎಎಪಿ ಆರೋಪ

    2016 ನವೆಂಬರ್ 30ರಂದು ಯುವರಾಜ್ ಮತ್ತು ಹಜೇಲ್ ಕೀಚ್ ಫತೇಘರ್ ಸಾಹಿಬ್ ಗುರುದ್ವಾರದಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದರು. 2016ರ ಡಿಸೆಂಬರ್ 2ರಂದು ಗೋವಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮತ್ತೆ ವೈವಾಹಿಕ ವಿವಾಹವಾದರು. ಇದನ್ನೂ ಓದಿ: ಬಿಪಿನ್‌ ರಾವತ್‌ಗೆ ಪದ್ಮವಿಭೂಷಣ – ರಾಜ್ಯದ ಐವರಿಗೆ ಪದ್ಮಶ್ರೀ

     

    View this post on Instagram

     

    A post shared by Yuvraj Singh (@yuvisofficial)

    ಯುವರಾಜ್ ಸಿಂಗ್ ಅವರು ಅಕ್ಟೋಬರ್ 2000 ಇಸವಿಯಲ್ಲಿ ಕೀನ್ಯಾ ವಿರುದ್ಧ ಏಕದಿನ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಭಾರತದ ಪರವಾಗಿ 304 ಏಕದಿನ, 40 ಟೆಸ್ಟ್ ಹಾಗೂ 58 ಟಿ20 ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ 2007ರಲ್ಲಿ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಪಂದ್ಯದ ಗೆಲುವಿನಲ್ಲಿ ಪಾತ್ರರಾಗಿದ್ದಾರೆ.

  • T20 ವಿಶ್ವಕಪ್‍ನಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿದ ಕನ್ನಡಿಗ ರಾಹುಲ್

    T20 ವಿಶ್ವಕಪ್‍ನಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿದ ಕನ್ನಡಿಗ ರಾಹುಲ್

    ದುಬೈ: ಟಿ20 ವಿಶ್ವಕಪ್‍ನಲ್ಲಿ ಭಾರತದ ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಕೇವಲ 18 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ನೂತನ ಮೈಲಿಗಲ್ಲು  ಸಾಧಿಸಿದ್ದಾರೆ.

    ಭಾರತ ಹಾಗೂ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ ಕೆ.ಎಲ್ ರಾಹುಲ್ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಟಿ20 ವಿಶ್ವಕಪ್‍ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು. ಇದನ್ನೂ ಓದಿ: ಸ್ಕಾಟ್ಲೆಂಡ್ ಮೇಲೆ ಸವಾರಿ ಮಾಡಿದ ಭಾರತ – 8 ವಿಕೆಟ್‍ಗಳ ಜಯದೊಂದಿಗೆ ಸೆಮೀಸ್ ಆಸೆ ಜೀವಂತ

    2007ರ ಟಿ20 ವಿಶ್ವಕಪ್‍ನಲ್ಲಿ ಭಾರತದ ಆಲ್‍ರೌಂಡರ್ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರು. ಆ ಬಳಿಕ ಇದೀಗ 18 ಎಸೆತಗಳಲ್ಲಿ ರಾಹುಲ್ ಅರ್ಧಶತಕ ಸಿಡಿಸಿ ಅತೀ ವೇಗವಾಗಿ ಅರ್ಧಶತಕ ಸಿಡಿಸಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇವರ ಬಳಿಕ ಮೂರನೇ ಸ್ಥಾನದಲ್ಲಿ ಮಾಜಿ ಆಟಗಾರ ಗೌತಮ್ ಗಂಭೀರ್ ಇದ್ದಾರೆ. ಇವರು 2009ರ ಟಿ20 ವಿಶ್ವಕಪ್‍ನಲ್ಲಿ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇದನ್ನೂ ಓದಿ: ಟೀಂ ಇಂಡಿಯಾ ಸೆಮಿಫೈನಲ್ ಕನಸು ನನಸಾಗಲು ಇದೊಂದೇ ಮಾರ್ಗ

  • ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅರೆಸ್ಟ್‌, ಬಿಡುಗಡೆ

    ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅರೆಸ್ಟ್‌, ಬಿಡುಗಡೆ

    ಚಂಡೀಗಢ: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‍ರನ್ನು ಬಂಧಿಸಿ ಬಳಿಕ ಕೋರ್ಟ್ ನೀಡಿದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

    ಇನ್‌ಸ್ಟಾಗ್ರಾಮ್‌ ಲೈವ್ ಚಾಟ್‍ನಲ್ಲಿ ಯುವರಾಜ್ ಸಿಂಗ್, ಯಜುವೇಂದ್ರ ಚಹಾಲ್ ಜಾತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಯುವರಾಜ್ ಕ್ಷಮೆ ಕೇಳಿದ್ದರು. ಆದರೆ ಹರ್ಯಾಣದ ಹಿಸ್ಸಾರ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಾಗಿತ್ತು.

    ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಯುವರಾಜ್ ಸಿಂಗ್‍ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಒಂದೇ ಕೈಯಲ್ಲಿ ರಾಧಾ ಯಾದವ್ ಸ್ಟನ್ನಿಂಗ್ ಕ್ಯಾಚ್

    ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ದೂರುದಾರ ರಜತ್‌ ಕಾಲ್ಸನ್‌, ಎಸ್‌ಸಿ/ಎಸ್‌ಟಿ ಕಾಯ್ದೆಯ ಅಡಿ ದಾಖಲಾದ ಪ್ರಕರಣಕ್ಕೆ ಜಾಮೀನು ನೀಡಿದ್ದರಿಂದ ಇದನ್ನು ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ. ಸಮುದಾಯಕ್ಕೆ ಅವಮಾನ ಮಾಡಿದ್ದರಿಂದ ಅವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ತಿಳಿಸಿದರು.

    ಏನಿದು ಪ್ರಕರಣ?
    2020ರ ಜೂನ್‌ ತಿಂಗಳಿನಲ್ಲಿ ರೋಹಿತ್ ಶರ್ಮಾ ಜೊತೆ ಇನ್ ಸ್ಟಾಗ್ರಾಮ್ ಲೈವ್ ಸಂವಾದಲ್ಲಿ ಪಾಲ್ಗೊಂಡಿದ್ದ ಯುವರಾಜ್, ಯಜುವೇಂದ್ರ ಚಹಲ್ ಅವರನ್ನು ʼಭಂಗಿʼ ಎಂದು ಕರೆದಿದ್ದರು. ಈ ವಿಚಾರಕ್ಕೆ ವಕೀಲ ರಜತ್‌ ಕಾಲ್ಸನ್‌ ದೂರು ನೀಡಿದ್ದರು. ಆದರೆ 8 ತಿಂಗಳ ಬಳಿಕ ಹಿಸ್ಸಾರ್‌ ಜಿಲ್ಲೆಯ ಹಂಸಿ ಠಾಣೆಯಲ್ಲಿ ಈ ವರ್ಷದ ಫೆಬ್ರವರಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಟಿ20 ವಿಶ್ವಕಪ್ #BoycottPakistan ಬಿಸಿಬಿಸಿ ಚರ್ಚೆ

    ರೋಹಿತ್‌ ಶರ್ಮಾ ಜೊತೆಗಿನ ಸಂವಾದಲ್ಲಿ ಕುಲದೀಪ್‌ ಮತ್ತು ಯಜುವೇಂದ್ರ ಚಾಹಲ್‌ ಇದ್ದರು. ಮಾತುಕತೆಯ ವೇಳೆ ಯುವರಾಜ್‌ ಚಹಲ್‌ ಅವರನ್ನು ಭಂಗಿ ಎಂದು ಕರೆದಿದ್ದರು. ಯುವಿ ಬಳಸಿದ ಈ ಪದಕ್ಕೆ ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿತ್ತು.

    https://twitter.com/YUVSTRONG12/status/1268810700429897728?

    ವಿವಾದ ಜಾಸ್ತಿ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದ ಯುವರಾಜ್‌ ಸಿಂಗ್‌, ನನಗೆ ಜಾತಿ, ಬಣ್ಣ, ಧರ್ಮ ಅಥವಾ ಲಿಂಗ ಇಂಥ ಯಾವುದೇ ರೀತಿಯ ಅಸಮಾನತೆಯ ಬಗ್ಗೆ ನಂಬಿಕೆಯಿಲ್ಲ. ಜನರ ಕಲ್ಯಾಣವನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ ಇದನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದರು.

    ಸ್ನೇಹಿತರ ಜೊತೆಗಿನ ಸಂವಾದದ ವೇಳೆ ಅನಗತ್ಯವಾಗಿ ಅಪಾರ್ಥವಾಗಿದೆ. ನಾನು ಉದ್ದೇಶಪೂರ್ವಕವಾಗಿ ಈ ಪದವನ್ನು ಬಳಸಿಲ್ಲ. ನನ್ನ ಮಾತುಗಳಿಂದ ಭಾವನೆಗಳಿಗೆ ನೋವುಂಟು ಮಾಡಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದರು.

    ʼಭಂಗಿʼ ಪದವನ್ನು ಉತ್ತರ ಭಾರತದ ಕಡೆ ಜಾತಿ ಸೂಚಕ ಪದವನ್ನಾಗಿ ಬಳಸಲಾಗುತ್ತದೆ. ಹೀಗಾಗಿ ಯುವಿ ಉದ್ದೇಶಪೂರ್ವಕವಾಗಿ ಜಾತಿ ನಿಂದಿಸಿದ್ದಾರೆ ಎಂದು, ರಜತ್ ಕಾಲ್ಸನ್ ದೂರು ನೀಡಿದ್ದರು. ಐಪಿಸಿ ಸೆಕ್ಷನ್‌ 153, 153ಎ, 295, 505 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಅಡಿ ಕೇಸ್‌ ದಾಖಲಾಗಿತ್ತು.

  • ಟಿ20 ವಿಶ್ವಕಪ್ ಗೆದ್ದ ಇತಿಹಾಸಕ್ಕೆ ಇಂದಿಗೆ 14 ವರ್ಷ

    ಟಿ20 ವಿಶ್ವಕಪ್ ಗೆದ್ದ ಇತಿಹಾಸಕ್ಕೆ ಇಂದಿಗೆ 14 ವರ್ಷ

    – ಧೋನಿ ಯುಗ ಆರಂಭದ ದಿನಗಳು
    – ವಿಶ್ವ ದಾಖಲೆ ಬರೆದ ಟೀಂ ಇಂಡಿಯಾ
    – ಐತಿಹಾಸಿಕ ದಿನ ಸ್ಮರಿಸಿ ಬಿಸಿಸಿಐ ಟ್ವೀಟ್

    ಮುಂಬೈ: ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇಂದಿಗೆ ಬರೋಬ್ಬರಿ 14 ವರ್ಷಗಳು ಕಳೆದಿದ್ದು, ಈ ಐತಿಹಾಸಿಕ ದಿನವನ್ನು ಭಾರತೀಯ ಕ್ರಿಕೆಟ್ ಮಂಡಳಿ ಸ್ಮರಿಸಿ ಟ್ವೀಟ್ ಮಾಡಿದೆ.

    2007ರ ಏಕದಿನ ವಿಶ್ವಕಪ್‍ನಲ್ಲಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ತಂಡ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದಾದ ಕೆಲ ದಿನಗಳ ಬಳಿಕ ಬಿಸಿಸಿಐ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯನ್ನು ಟಿ20 ತಂಡದ ನಾಯಕನಾಗಿ ಮಾಡಿ ದಕ್ಷಿಣ ಆಫ್ರಿಕಾಕ್ಕೆ ಕಳುಹಿತ್ತು. ಏಕದಿನ ವಿಶ್ವಕಪ್ ಸೋಲಿನ ಹತಾಶೆಯಲ್ಲಿದ್ದ ಭಾರತೀಯರು ಟಿ20 ವಿಶ್ವಕಪ್‍ನಲ್ಲಿ ಭಾರತ ಗೆಲ್ಲುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ.

    ಸಚಿನ್, ಗಂಗೂಲಿ, ದ್ರಾವಿಡ್‍ರಂತಹ ದಿಗ್ಗಜ ಆಟಗಾರರಿಲ್ಲದೆ ಟಿ20 ಆಡಲು ಭಾರತ ಮುಂದಾಗಿತ್ತು. ವೀರೇಂದ್ರ ಸೆಹ್ವಾಗ್, ಧೋನಿ, ಯುವರಾಜ್ ಸಿಂಗ್ ಬಿಟ್ಟರೆ ಉಳಿದ ಯಾವೊಬ್ಬ ಆಟಗಾರರು ಕೂಡ ಟಿ20 ಯಲ್ಲಿ ಒಂದು ಪಂದ್ಯವನ್ನು ಆಡಿರಲಿಲ್ಲ. ಹೊಸ ಹುರುಪಿನೊಂದಿಗೆ ಹೊಸ ತಂಡವೊಂದನ್ನು ಬಿಸಿಸಿಐ ಕಟ್ಟಿ ಕಳುಹಿಸಿತ್ತು. ಅನನುಭವಿ ಆಟಗಾರರನ್ನು ಕಟ್ಟಿಕೊಂಡು ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾವನ್ನು ವಿಶ್ವ ಚಾಂಪಿಯನ್ ಮಾಡಿದ್ದು ಈಗ ಇತಿಹಾಸ. ಇದನ್ನೂ ಓದಿ: ಶಾರ್ಜಾದಲ್ಲಿ ಶೈನ್ ಆಗುತ್ತಾ ರಾಯಲ್ ಚಾಲೆಂಜರ್ಸ್: ಇಂದು ಚೆನ್ನೈ-ಬೆಂಗಳೂರು ಕದನ

    ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತ ತಂಡ, ಫೈನಲ್‍ನಲ್ಲಿ ಪಾಕಿಸ್ತಾನವನ್ನು ಎದುರಿಸಬೇಕಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಗೌತಮ್ ಗಂಭೀರ್ (75), ರೋಹಿತ್ ಶರ್ಮಾ (30), ಯುವರಾಜ್ ಸಿಂಗ್ (14) ರನ್‍ಗಳೊಂದಿಗೆ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 19.3 ಓವರ್‍ಗಳಲ್ಲಿ 152 ರನ್‍ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ ಸೋತು ಶರಣಾಯಿತು. ಇದನ್ನೂ ಓದಿ: ದಾಖಲೆಯ ಹೊಸ್ತಿಲಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ

    ಚೊಚ್ಚಲ ಟಿ20 ವಿಶ್ವಕಪ್‍ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ತಂಡ, ಈ ಬಾರಿ ಮತ್ತೆ ಟಿ20 ವಿಶ್ವಕಪ್ ಗೆಲ್ಲುವ ಕನಸನ್ನು ಹೊತ್ತಿದೆ. ಇದೇ ಅ.17ರಿಂದ ನವೆಂಬರ್ 15ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ ಈ ಬಾರಿಯ ಟಿ20 ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ.

  • ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಅಮೆರಿಕದ ಆಟಗಾರ

    ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಅಮೆರಿಕದ ಆಟಗಾರ

    ಮಸ್ಕತ್: ಯುಎಸ್‍ಎ ಕ್ರಿಕೆಟ್ ಆಟಗಾರ ಜಸ್ಕರನ್ ಮಲ್ಹೋತ್ರ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ್ದಾರೆ.

    ವಿಕೆಟ್ ಕೀಪರ್ ಹಾಗೂ ಬಲಗೈ ದಾಂಡಿಗ ಜಸ್ಕರನ್, ಪಪುವಾ ನ್ಯೂಗಿನಿ ವಿರುದ್ಧ ಒಮನ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸುವ ಮೂಲಕ ಕ್ರಿಕೆಟಿನಲ್ಲಿ ಯುವರಾಜ್ ಸಿಂಗ್, ಹರ್ಷಲ್ ಗಿಬ್ಸ್, ಹಾಗೂ ಪೊರ್ಲಾಡ್ ರ ವಿಶ್ವದಾಖಲೆ ಸಾಲಿಗೆ ಸೇರಿದ್ದಾರೆ.  ಇದನ್ನೂ ಓದಿ: ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ

    16 ಸಿಕ್ಸರ್ ಹಾಗೂ 4 ಫೋರ್‍ಗಳನ್ನು ಸಿಡಿಸಿದ ಜಸ್ಕರನ್ 124 ಬಾಲ್‍ಗಳಲ್ಲಿ ಒಟ್ಟು 173 ರನ್ ಗಳಿಸಿ ನಾಟೌಟ್ ಆಗಿ ಉಳಿದರು ಭಾರತದ ಚಂಡೀಗಡದ ಮೂಲದವರಾದ ಜಸ್ಕರನ್ ಮಲ್ಹೋತ್ರ ಯುಎಸ್‍ಎ ಕ್ರಿಕೆಟ್ ತಂಡದ ಪರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಇದನ್ನೂ ಓದಿ: ಇದೇ ಧೋನಿಯ ಕೊನೆಯ ಐಪಿಎಲ್?

    ಈ ಹಿಂದೆ 2007ರ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಸೌತ್ ಆಫ್ರಿಕಾದ ಹರ್ಷಲ್ ಗಿಬ್ಸ್ ಒಂದೇ ಓವರ್‍ನಲ್ಲಿ ಆರು ಸಿಕ್ಸರ್ ಚಚ್ಚಿ ವಿಶ್ವ ದಾಖಲೆ ಮಾಡಿದ್ದರು. ಇದೀಗ ಜಸ್ಕರನ್ ಏಕದಿನ ಕ್ರಿಕೆಟ್‍ನಲ್ಲಿ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ.  ಇದನ್ನೂ ಓದಿ: ಟೀಂ ಇಂಡಿಯಾ ಮೆಂಟರ್ ಸ್ಥಾನ ಸಿಗುತ್ತಿದ್ದಂತೆ ಧೋನಿಗೆ ಸ್ವಹಿತಾಸಕ್ತಿ ಸಂಕಷ್ಟ

    https://twitter.com/usacricket/status/1436060985610100738

    ಯುವರಾಜ್ ಸಿಂಗ್ 2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಕ್ರಿಕೆಟ್‍ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ 6 ಎಸೆತವನ್ನು ಸಿಕ್ಸರ್‍ಗೆ ಅಟ್ಟಿದ್ದರು.

  • ಯುವಿ ಮಾಜಿ ಪ್ರೇಯಸಿ ಜೊತೆ ಲಿಯಾಂಡರ್ ಪೇಸ್ ಡೇಟಿಂಗ್

    ಯುವಿ ಮಾಜಿ ಪ್ರೇಯಸಿ ಜೊತೆ ಲಿಯಾಂಡರ್ ಪೇಸ್ ಡೇಟಿಂಗ್

    ಪಣಜಿ: ಬಾಲಿವುಡ್ ನಟಿ ಕಿಮ್ ಶರ್ಮಾ ಜೊತೆ ಭಾರತ ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಡೇಟಿಂಗ್ ನಡೆಸುತ್ತಿದ್ದಾರೆ.

    ಇಬ್ಬರು ಗೋವಾಕ್ಕೆ ತೆರಳಿದ್ದು, ಜೊತೆಯಾಗಿ ರೆಸ್ಟೋರೆಂಟ್‍ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೆಸ್ಟೋರೆಂಟ್ ಹಂಚಿಕೊಂಡ ಚಿತ್ರದಲ್ಲಿ ಲಿಯಾಂಡರ್ ಕಿಮ್ ಶರ್ಮಾ ಅವರನ್ನು ತಬ್ಬಿಕೊಂಡಿದ್ದಾರೆ.

    ಈ ಹಿಂದೆಯೇ ಮುಂಬೈನಲ್ಲಿ ಇವರಿಬ್ಬರು ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದರು. ಆಗಲೇ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಈಗ ಈ ಫೋಟೋಗಳು ಬಹಿರಂಗವಾದ ಬಳಿಕ ಡೇಟಿಂಗ್ ವದಂತಿಗೆ ಪುಷ್ಟಿ ನೀಡುವಂತಿದೆ. ಇದನ್ನೂ ಓದಿ: ಯುವಿ ಪಾರ್ಟಿಗೆ ಆಗಮಿಸಿ ಟ್ವಿಸ್ಟ್ ಕೊಟ್ಟ ಮಾಜಿ ಗೆಳತಿ

    2000ನೇ ಇಸ್ವಿಯಲ್ಲಿ ಲಿಯಾಂಡರ್ ಪೇಸ್ ಮಾಡೆಲ್ ರಿಯಾ ಪಿಳ್ಳೈ ಅವರ ಜೊತೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದರು. 2005ರಲ್ಲಿ ಇವರಿಬ್ಬರಿಗೆ ಹೆಣ್ಣು ಮಗು ಜನನವಾಗಿತ್ತು. ಕಿಮ್ ಈ ಹಿಂದೆ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಜೊತೆ ಡೇಟಿಂಗ್ ನಡೆಸಿದ್ದರು. ಇದಾದ ಬಳಿಕ ನಟ ಹರ್ಷವರ್ಧನ್ ರಾಣೆ ಜೊತೆಗೂ ಕಿಮ್ ಶರ್ಮಾ ಕಾಣಿಸಿಕೊಂಡಿದ್ದರು.

    ಕಿಮ್ ಮೊಹಬ್ಬಾತೆಯನ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಜೊತೆಗೆ ನೆಹಲ್ಲೆ ಪೆ ಡೆಹಲ್ಲಾ, ಟಾಮ್, ಡಿಕ್ ಮತ್ತು ಹ್ಯಾರಿ, ಕೆಹ್ತಾ ಹೈ ದಿಲ್ ಬಾರ್ ಬಾರ್ ಮತ್ತು ಪದ್ಮಶ್ರೀ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವಾರು ಸಿನಿಮಾದಲ್ಲಿ ಕಿಮ್ ನಟಿಸಿದ್ದಾರೆ. 2000 ರಲ್ಲಿ ಬಿಡುಗಡೆಯಾದ ಸುಷ್ಮಿತಾ ಸೇನ್ ಅವರ ಜಿಂದಗಿ ರಾಕ್ಸ್ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು. ಎಸ್.ಎಸ್.ರಾಜಮೌಳಿ ಅವರ ಮಗಧೀರ ಚಿತ್ರದಲ್ಲಿ ಕಿಮ್ ಶರ್ಮಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  • ‘ಯುವಿಕ್ಯಾನ್ ಮಿಶನ್ 1000 ಬೆಡ್ಸ್’ ಮೂಲಕ ಕೊರೊನಾ ಸೋಂಕಿತರಿಗೆ ಯುವಿ ನೆರವು

    ‘ಯುವಿಕ್ಯಾನ್ ಮಿಶನ್ 1000 ಬೆಡ್ಸ್’ ಮೂಲಕ ಕೊರೊನಾ ಸೋಂಕಿತರಿಗೆ ಯುವಿ ನೆರವು

    ನವದೆಹಲಿ: ಕೊರೊನಾ ಸೋಂಕಿತರಿಗೆ ಈಗಾಗಲೇ ಸಾಕಷ್ಟು ಕ್ರೀಡಾಪಟುಗಳು ನೆರವನ್ನು ನೀಡಿದ್ದಾರೆ. ಕೊರೊನಾ ಅರಂಭದಿಂದಲೂ ನೆರವಿನ ಹಸ್ತ ಚಾಚುತ್ತಾ ಬಂದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಅಟಗಾರ ಯುವರಾಜ್ ಸಿಂಗ್ ‘ಯುವಿಕ್ಯಾನ್ ಮಿಶನ್ 1000 ಬೆಡ್ಸ್’ ಎಂಬ ಕಾರ್ಯಕ್ರಮದ ಮೂಲಕ ಇದೀಗ ಮತ್ತೆ ದೇಶಾದ್ಯಂತ ಇರುವ ಕೊರೊನಾ ಸೋಂಕಿತರ ನೆರವಿಗೆ ಮುಂದಾಗಿದ್ದಾರೆ.

    ಭಾರತ ತಂಡ ಏಕದಿನ ಮತ್ತು ಟಿ-20 ವಿಶ್ವಕಪ್‍ನಲ್ಲಿ ಜಯಭೇರಿ ಬಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವಿ, ಕಷ್ಟದಲ್ಲಿರುವ ಜನರಿಗೆ ಸದಾ ಸಹಾಯ ಮಾಡುತ್ತಿದ್ದರು. ಆದರೆ ಇದೀಗ ಕೊರೊನಾದಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ಇತರ ಪ್ರಮುಖ ಸೇವೆಗಳು ಇಲ್ಲದೆ ಇದ್ದರೆ ಅಂತಹ ಆಸ್ಪತ್ರೆಗಳಿಗೆ ಬೇಕಾದ ಸೌಲಭ್ಯವನ್ನು ಒದಗಿಸುವ ಸಲುವಾಗಿ ಯುವಿಕ್ಯಾನ್ ಎಂಬ ಹೆಸರಿನ ಚಾರಿಟಿ ಮೂಲಕ ಮಿಶನ್ 1000 ಬೆಡ್ಸ್ ಎಂಬ ಹೊಸ ಕಾರ್ಯಕ್ರಮ ಆರಂಭಿಸಿದ್ದಾರೆ. ಇದನ್ನೂ ಓದಿ: 2007ರ ಟಿ20ಗೆ ನಾನು ನಾಯಕನಾಗುವ ನಿರೀಕ್ಷೆ ಹೊಂದಿದ್ದೆ, ಆದರೆ ಧೋನಿ ಆಯ್ಕೆಯಾದ್ರು – ಯುವಿ

    ಈ ಚಾರಿಟಿ ಮೂಲಕ ದೇಶದಾದ್ಯಂತ ಇರುವ ಆಸ್ಪತ್ರೆಗಳಿಗೆ ಅಗತ್ಯ ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳನ್ನು ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಈ ಕುರಿತು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡ ಯುವರಾಜ್ ಸಿಂಗ್, ಕ್ರಿಟಿಕಲ್ ಕೇರ್ ಬೆಡ್ಸ್ ಮತ್ತು ವೈದ್ಯಕೀಯ ಉಪಕರಣದೊಂದಿಗೆ ಟ್ರಕ್ ಒಂದು ಡೆಲ್ಲಿಯಿಂದ ಹಿಮಾಚಲ ಪ್ರದೇಶಕ್ಕೆ ಹೊರಟಿದೆ. ದೇಶಾದ್ಯಂತ ಆರೋಗ್ಯ ಸೌಲಭ್ಯವನ್ನು ಹೆಚ್ಚಿಸುವ ನಮ್ಮ ಕಾರ್ಯಕ್ಕೆ ಕೈ ಜೋಡಿಸಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬ್ರಾಡಿ, ಓ ನನ್ನ ಗೆಳೆಯ ನೀನೊಂದು ದಂತಕಥೆ: ಯುವರಾಜ್ ಸಿಂಗ್

    ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಯುವರಾಜ್ ಸಿಂಗ್ ಅವರು ಹಲವು ಸಮಾಜಮುಖಿ ಕಾರ್ಯದಲ್ಲಿ ತೋಡಗಿಕೊಂಡಿದ್ದು, ಇದೀಗ ಕೊರೊನಾ ಕಷ್ಟಕಾಲದಲ್ಲಿ ಸಂಕಷ್ಟದಲ್ಲಿರುವ ಸಾವಿರಾರು ಮಂದಿಗೆ ನೆರವಿನ ಹಸ್ತ ಚಾಚಿದ್ದಾರೆ.

  • 2007ರ ಟಿ20ಗೆ ನಾನು ನಾಯಕನಾಗುವ ನಿರೀಕ್ಷೆ ಹೊಂದಿದ್ದೆ, ಆದರೆ ಧೋನಿ ಆಯ್ಕೆಯಾದ್ರು – ಯುವಿ

    2007ರ ಟಿ20ಗೆ ನಾನು ನಾಯಕನಾಗುವ ನಿರೀಕ್ಷೆ ಹೊಂದಿದ್ದೆ, ಆದರೆ ಧೋನಿ ಆಯ್ಕೆಯಾದ್ರು – ಯುವಿ

    ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಇತಿಹಾಸ. ಆದರೆ ಈ ಟೂರ್ನಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶನ ನೀಡಿದ್ದ ಯುವರಾಜ್ ಸಿಂಗ್ ಟೀಂ ಇಂಡಿಯಾ ನಾಯಕನಾಗುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ವಿಚಾರ ಈಗ ಬಯಲಾಗಿದೆ.

    ಏಕದಿನ ಕ್ರಿಕೆಟ್‍ನಲ್ಲಿ ಮಿಂಚುತ್ತಿದ್ದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಜಹೀರ್ ಖಾನ್ ಸೇರಿದಂತೆ ಭಾರತದ ಹಿರಿಯ ಕ್ರಿಕೆಟಿಗರ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಟಿ20ಗೆ ಮುನ್ನಡೆಸುವವರು ಯಾರು ಎಂಬ ಚರ್ಚೆ ನಡೆದಿತ್ತು. ಈ ವೇಳೆ ನನಗೆ ನಾಯಕನ ಪಟ್ಟ ಸಿಗಬಹುದು ಎಂಬ ನಿರೀಕ್ಷೆಯನ್ನು ನಾನು ಇಟ್ಟುಕೊಂಡಿದ್ದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ‘ಯುವಿ ಬೆನ್ನಿಗೆ ಧೋನಿ, ಕೊಹ್ಲಿ ಚೂರಿ ಹಾಕಿದ್ದರು’- ಯುವರಾಜ್ ಸಿಂಗ್ ತಂದೆ ಆರೋಪ

    ಈ ಬಗ್ಗೆ ಮಾತನಾಡಿದ ಯುವಿ, ಭಾರತವು 50 ಓವರ್ ಗಳ ವಿಶ್ವಕಪ್ ಅನ್ನು ಕಳೆದುಕೊಂಡಿತ್ತು. ಅಲ್ಲದೇ ಎರಡು ತಿಂಗಳ ಇಂಗ್ಲೆಂಡ್ ಪ್ರವಾಸವಿತ್ತು. ಬಳಿಕ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ನಡುವೆ ಒಂದು ತಿಂಗಳ ಪ್ರವಾಸವೂ ಇತ್ತು. ತದನಂತರ ಒಂದು ತಿಂಗಳು ಟಿ 20 ವಿಶ್ವಕಪ್ ನಿಗದಿಯಾಗಿತ್ತು. 4 ತಿಂಗಳ ಕಾಲ ಮನೆಯಿಂದ ದೂರ ಇದ್ದ ಹಿನ್ನೆಲೆಯಲ್ಲಿ ಹಿರಿಯ ಆಟಗಾರರು ವಿರಾಮ ಪಡೆಯಲು ಬಯಸಿದ್ದರು ಮತ್ತು ಯಾರೂ ಟಿ 20ಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಈ ಸಂದರ್ಭದಲ್ಲಿ ಟಿ20 ವಿಶ್ವಕಪ್‍ಗೆ ನನ್ನನ್ನು ಭಾರತದ ತಂಡದ ನಾಯಕನನ್ನಾಗಿ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಎಂಎಸ್ ಧೋನಿ ಅವರನ್ನು ನಾಯಕನಾಗಿ ಘೋಷಿಸಲಾಯಿತು ಎಂದು ತಿಳಿಸಿದರು.

    ನಾಯಕನಾಗಿ ಆಯ್ಕೆಯಾದ ನಂತರ ನನ್ನ ಮತ್ತು ಧೋನಿ ನಡುವಿನ ಸಂಬಂಧದ ಬಗ್ಗೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಅವರು, ನಾನು ಯಾವಾಗಲೂ ನಾಯಕನ ಹಿಂದೆ ಇರುತ್ತೇನೆ ಎಂದು ಹೇಳಿದರು.

    2007ರ ವಿಶ್ವಕಪ್ ಬಳಿಕ ಭಾರತ ಯುವ ತಂಡವಾಗಿದೆ. ಆ ವೇಳೆ ಲಾಲ್‍ಚಂದ್ ರಜಪೂತ್ ನಮ್ಮ ಕೋಚ್ ಆಗಿದ್ದರು ಮತ್ತು ವೆಂಕಟೇಶ್ ಪ್ರಸಾದ್ ನಮ್ಮ ಬೌಲಿಂಗ್ ಕೋಚ್ ಆಗಿದ್ದರು. ಯುವ ನಾಯಕ ಮುನ್ನಡೆಸುತ್ತಿದ್ದ ಯುವ ತಂಡವಾಗಿತ್ತು. ಈ ಟೂರ್ನಿ ವೇಳೆ ನಮ್ಮ ಬಳಿ ಹೆಚ್ಚಿನ ತಂತ್ರಗಾರಿಕೆ ಇತ್ತು ಎಂದು ನಾನು ಭಾವಿಸುವುದಿಲ್ಲ. ಟಿ20 ತಂತ್ರಗಳ ಬಗ್ಗೆ ಯಾರಿಗೂ ಸುಳಿವು ಇರಲಿಲ್ಲ. ಯಾಕೆಂದರೆ ಇದು ಮೊದಲ ಪಂದ್ಯಾವಳಿ ಆಗಿತ್ತು. ಹೀಗಾಗಿ ನಾವು ನಮಗೆ ತಿಳಿದ ರೀತಿಯಲ್ಲಿ ಹೋಗಿ ಆಡಲು ಮುಂದಾದೆವು ಎಂದು ಅಂದಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ಈ ವಿಶ್ವಕಪ್‍ನಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ ಅವರ ಓವರಿನ 6 ಎಸೆತಗಳನ್ನು ಯುವರಾಜ್ ಸಿಕ್ಸರ್ ಗೆ ಅಟ್ಟಿ ವಿಶ್ವದಾಖಲೆ ನಿರ್ಮಿಸಿದ್ದರು. ಈ ಪಂದ್ಯದಲ್ಲಿ ಯುವರಾಜ್ 16 ಎಸೆತಗಳಲ್ಲಿ 58 ರನ್ ಚಚ್ಚಿದ್ದರು. ಆಸ್ಟ್ರೇಲಿಯಾ ವಿರುದ್ಧ ಸೆಮಿ ಫೈನಲ್ ಪಂದ್ಯದಲ್ಲಿ ಯುವಿ 30 ಎಸೆತಗಳಲ್ಲಿ 70 ರನ್ ಹೊಡೆದಿದ್ದರು. 5 ಬೌಂಡರಿ, 5 ಸಿಕ್ಸರ್ ಸಿಡಿಸಿ ಟೀಂ ಇಂಡಿಯಾ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದರು. ಈ ಆಟಕ್ಕೆ ಪಂದ್ಯಶ್ರೇಷ್ಠ ಗೌರವವನ್ನು ಯುವಿ ಪಡೆದಿದ್ದರು. ಇದನ್ನೂ ಓದಿ: ಬ್ರಾಡಿ, ಓ ನನ್ನ ಗೆಳೆಯ ನೀನೊಂದು ದಂತಕಥೆ: ಯುವರಾಜ್ ಸಿಂಗ್

  • ಯುವರಾಜ್‌ ವಿರುದ್ಧ ಜಾತಿ ನಿಂದನೆ ಕೇಸ್‌ ದಾಖಲು

    ಯುವರಾಜ್‌ ವಿರುದ್ಧ ಜಾತಿ ನಿಂದನೆ ಕೇಸ್‌ ದಾಖಲು

    ಹಿಸ್ಸಾರ್‌: ಮಾಜಿ ಆಲ್‌ರೌಂಡರ್‌, ಎಡಗೈ ಬ್ಯಾಟ್ಸ್‌ಮನ್‌ ಯುವರಾಜ್‌ ಸಿಂಗ್‌ ವಿರುದ್ಧ ಹರ್ಯಾಣದಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

    ಕಳೆದ ವರ್ಷದ ಜೂನ್‌ ತಿಂಗಳಿನಲ್ಲಿ ರೋಹಿತ್ ಶರ್ಮಾ ಜೊತೆ ಇನ್ ಸ್ಟಾಗ್ರಾಮ್ ಲೈವ್ ಸಂವಾದಲ್ಲಿ ಪಾಲ್ಗೊಂಡಿದ್ದ ಯುವರಾಜ್, ಯಜುವೇಂದ್ರ ಚಹಲ್ ಅವರನ್ನು ʼಭಂಗಿʼ ಎಂದು ಕರೆದಿದ್ದರು. ಈ ವಿಚಾರಕ್ಕೆ ವಕೀಲ ರಜತ್‌ ಕಾಲ್ಸನ್‌ ದೂರು ನೀಡಿದ್ದರು. ಆದರೆ 8 ತಿಂಗಳ ಬಳಿಕ ಹಿಸ್ಸಾರ್‌ ಜಿಲ್ಲೆಯ ಹಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಐಪಿಸಿ ಸೆಕ್ಷನ್‌ 153, 153ಎ, 295, 505 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಅಡಿ ಕೇಸ್‌ ದಾಖಲಾಗಿದೆ.

    ಏನಿದು ಪ್ರಕರಣ?
    ರೋಹಿತ್‌ ಶರ್ಮಾ ಜೊತೆಗಿನ ಸಂವಾದಲ್ಲಿ ಕುಲದೀಪ್‌ ಮತ್ತು ಯಜುವೇಂದ್ರ ಚಾಹಲ್‌ ಇದ್ದರು. ಮಾತುಕತೆಯ ವೇಳೆ ಯುವರಾಜ್‌ ಚಹಲ್‌ ಅವರನ್ನು ಭಂಗಿ ಎಂದು ಕರೆದಿದ್ದರು. ಯುವಿ ಬಳಸಿದ ಈ ಪದಕ್ಕೆ ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿತ್ತು.

    https://twitter.com/YUVSTRONG12/status/1268810700429897728

    ವಿವಾದ ಜಾಸ್ತಿ ಆಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದ ಯುವರಾಜ್‌ ಸಿಂಗ್‌, ನನಗೆ ಜಾತಿ, ಬಣ್ಣ, ಧರ್ಮ ಅಥವಾ ಲಿಂಗ ಇಂಥ ಯಾವುದೇ ರೀತಿಯ ಅಸಮಾನತೆಯ ಬಗ್ಗೆ ನಂಬಿಕೆಯಿಲ್ಲ. ಜನರ ಕಲ್ಯಾಣವನ್ನು ನಾನು ಪಾಲಿಸಿಕೊಂಡು ಬಂದಿದ್ದೇನೆ ಇನ್ನೂ ಮುಂದುವರೆಸುತ್ತೇನೆ ಎಂದು ಹೇಳಿದ್ದರು.

    ಸ್ನೇಹಿತರ ಜೊತೆಗಿನ ಸಂವಾದದ ವೇಳೆ ಅನಗತ್ಯವಾಗಿ ಅಪಾರ್ಥವಾಗಿದೆ. ನಾನು ಉದ್ದೇಶಪೂರ್ವಕವಾಗಿ ಈ ಪದವನ್ನು ಬಳಸಿಲ್ಲ. ನನ್ನ ಮಾತುಗಳಿಂದ ಭಾವನೆಗಳಿಗೆ ನೋವುಂಟು ಮಾಡಿದ್ದರೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದರು.

    ಭಂಗಿ ಪದ ಉತ್ತರ ಭಾರತದ ಕಡೆ ಜಾತಿ ಸೂಚಕ ಪದವನ್ನಾಗಿ ಬಳಸಲಾಗುತ್ತದೆ. ಹೀಗಾಗಿ ಯುವಿ ಉದ್ದೇಶಪೂರ್ವಕವಾಗಿ ಜಾತಿ ನಿಂದಿಸಿದ್ದಾರೆ ಎಂದು, ರಜತ್ ಕಾಲ್ಸನ್ ದೂರು ನೀಡಿದ್ದರು.

  • ಮಾಜಿ ಪ್ರೇಯಸಿ ಬಿಕಿನಿ ಫೋಟೋಗೆ ಕಮೆಂಟ್ ಹಾಕಿ ಕಾಲೆಳೆದ ಯುವಿ

    ಮಾಜಿ ಪ್ರೇಯಸಿ ಬಿಕಿನಿ ಫೋಟೋಗೆ ಕಮೆಂಟ್ ಹಾಕಿ ಕಾಲೆಳೆದ ಯುವಿ

    ಮುಂಬೈ: ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ತನ್ನ ಹಳೇ ಪ್ರೇಯಸಿ ಬಾಲಿವುಡ್ ನಟಿ ಕಿಮ್ ಶರ್ಮಾ ಅವರ ಫೋಟೋಗೆ ಕಮೆಂಟ್ ಹಾಕಿ ಸುದ್ದಿಯಾಗಿದ್ದಾರೆ.

    ಯುವರಾಜ್ ಸಿಂಗ್ ಅವರ ಒಂದು ಕಾಲದ ಗಾಸಿಪ್ ಪ್ರೇಯಸಿ ಎಂದು ಫೇಮಸ್ ಆಗಿದ್ದ ಕಿಮ್ ಶರ್ಮಾ ಅವರು ಇತ್ತೀಚೆಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬಿಕಿನಿ ಧರಿಸಿರುವ ಫೋಟೋ ಹಾಕಿದ್ದರು. ಈ ಫೋಟೋಗೆ ಕಮೆಂಟ್ ಹಾಕಿರುವ ಯುವರಾಜ್ ಹಳೇ ಪ್ರೇಯಸಿಯ ಕಾಲೆಳೆಯಲು ಪ್ರಯತ್ನ ಪಟ್ಟಿದ್ದಾರೆ.

    ಕಿಮ್ ಶರ್ಮಾ ಅವರು ಇತ್ತೀಚೆಗೆ ಗೋವಾಗೆ ಹೋಗಿದ್ದು, ಅಲ್ಲಿನ ಬೀಚಿನಲ್ಲಿ ಕಲರ್ ಕಲರ್ ಬಿಕಿನಿ ತೊಟ್ಟು ಸೀಬೋರ್ಡ್ ಹಿಡಿದುಕೊಂಡಿರುವ ಹಾಟ್ ಫೋಟೋವನ್ನು ಹಾಕಿದ್ದಾರೆ. ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಆದರೆ ಯುವರಾಜ್ ಸಿಂಗ್ ಅವರ ಕಮೆಂಟ್‍ಗೆ ಕಿಮ್ ಶರ್ಮಾ, ದಯವಿಟ್ಟು ಇಂಗ್ಲಿಷ್ ನಲ್ಲಿ ಹೇಳಿ ಅಂತ ರಿಪ್ಲೈ ನೀಡಿದ್ದಾರೆ.

    ಕೊರೊನಾ ನಂತರ ಗೋವಾಗೆ ಪ್ರವಾಸ ಹೋಗಿರುವ ಕಿಮ್ ಶರ್ಮಾ ಅವರು ಇತ್ತೀಚೆಗೆ ಅವರ ಹಾಟ್ ಫೋಟೋಗಳು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದೆ ಕೂಡ ಅರೆಂಜ್ ಬಣ್ಣದ ಸ್ವಿಮ್ ಸೂಟ್ ತೊಟ್ಟು ಪೂಲಿನಲ್ಲಿ ನಿಂತಿರುವ ಫೋಟೋ ಹಾಕಿ ಅಭಿಮಾನಿಗಳನ್ನು ಸೆಳೆದಿದ್ದರು. ಈಗ ಇಂದು ಕೂಡ ಬಣ್ಣ ಬಣ್ಣದ ಬಿಕಿನಿ ಫೋಟೋ ಹಾಕಿದ್ದಾರೆ. ಇದಕ್ಕೆ ಯುವರಾಜ್ ಕಮೆಂಟ್ ಮಾಡಿದ್ದಾರೆ.

    ಕಿಮ್ ಅವರನ್ನು ಒಂದು ಕಾಲದ ಯುವರಾಜ್ ಸಿಂಗ್ ಪ್ರೇಯಸಿ ಎಂದು ಕರೆಯಲಾಗುತ್ತದೆ. ಕಿಮ್ ಮೊಹಬ್ಬಾತೆಯನ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಜೊತೆಗೆ ನೆಹಲ್ಲೆ ಪೆ ಡೆಹಲ್ಲಾ, ಟಾಮ್, ಡಿಕ್ ಮತ್ತು ಹ್ಯಾರಿ, ಕೆಹ್ತಾ ಹೈ ದಿಲ್ ಬಾರ್ ಬಾರ್ ಮತ್ತು ಪದ್ಮಶ್ರೀ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವಾರು ಸಿನಿಮಾದಲ್ಲಿ ಕಿಮ್ ನಟಿಸಿದ್ದಾರೆ. 2000 ರಲ್ಲಿ ಬಿಡುಗಡೆಯಾದ ಸುಷ್ಮಿತಾ ಸೇನ್ ಅವರ ಜಿಂದಗಿ ರಾಕ್ಸ್ ಎಂಬ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಇದಾದ ನಂತರ ಎಸ್.ಎಸ್.ರಾಜಮೌಳಿ ಅವರ ಮಗಧೀರ ಚಿತ್ರದಲ್ಲಿ ಕಿಮ್ ಶರ್ಮಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರು.