Tag: ಯುವರಾಜ್ ಸಿಂಗ್

  • ಅಕ್ರಮ ಬೆಟ್ಟಿಂಗ್ ಆ್ಯಪ್ ಕೇಸ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

    ಅಕ್ರಮ ಬೆಟ್ಟಿಂಗ್ ಆ್ಯಪ್ ಕೇಸ್ – ಇಡಿ ವಿಚಾರಣೆಗೆ ಹಾಜರಾದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್

    ನವದೆಹಲಿ: ಅಕ್ರಮ ಬೆಟ್ಟಿಂಗ್ ಆ್ಯಪ್ (Illegal betting app) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಇಂದು (ಸೆ.23) ಇಡಿ ವಿಚಾರಣೆಗೆ ಹಾಜರಾಗಿದ್ದಾರೆ.

    ಇದು 1xBet ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದ್ದು, ಸೆ.16ರಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ಇಡಿ ಸಮನ್ಸ್ ಜಾರಿಮಾಡಿತ್ತು. ಅದರಂತೆ ಯುವರಾಜ್ ಸಿಂಗ್ ಅವರು ತಮ್ಮ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಇಡೀ ವಿಚಾರಣೆಗೆ ಹಾಜರಾದರು. ಈ ವೇಳೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆಪ್ ಕೇಸ್; ಇಡಿ ವಿಚಾರಣೆಗೆ ಹಾಜರಾದ ರಾಬಿನ್ ಉತ್ತಪ್ಪ

    ಇದೇ ವೇಳೆ ಯುವರಾಜ್ ಸಿಂಗ್ ಜೊತೆಗೆ ಉದ್ಯಮಿ ಅನ್ವೇಶ್ ಜೈನ್ ಕೂಡ ಇದೇ ಪ್ರಕರಣ ಸಂಬಂಧ ಇಡಿ ವಿಚಾರಣೆಗೆ ಹಾಜರಾಗಿದ್ದರು. ಸೋಮವಾರ (ಸೆ.22) ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಕೂಡ ಇಡಿ ವಿಚಾರಣೆಗೆ ಹಾಜರಾಗಿದ್ದರು.

    ಇನ್ನೂ ಇದಕ್ಕೂ ಮೊದಲು ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಶಿಖರ್ ಧವನ್, ನಟಿ ಅಂಜಲಿ ಅರೋರಾ, ನಟಿ ಮಿಮಿ ಚಕ್ರವರ್ತಿ ಹಾಗೂ ನಟ ಅಂಕುಶ್ ಹಜಾರ, ಪ್ರಕಾಶ್ ರಾಜ್, ವಿಜಯ ದೇವರಕೊಂಡ, ರಾಣಾ ದಗ್ಗುಬಾಟಿ, ಹರ್ಭಜನ್ ಸಿಂಗ್, ಊರ್ವಶಿ ರೌಟೇಲಾ ವಿಚಾರಣೆ ಎದುರಿಸಿದ್ದರು.

    ಏನಿದು ಕೇಸ್?
    ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಜೊತೆಗೆ ಭಾರೀ ಪ್ರಮಾಣದ ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಬೆಟ್ಟಿಂಗ್ ಆ್ಯಪ್‌ಗಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳ ತನಿಖೆ ನಡೆಸುತ್ತಿದೆ. ಈಗಾಗಲೇ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದಲ್ಲಿದ್ದ ಹಲವಾರು ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಲನಚಿತ್ರ ತಾರೆಯರು, ಕ್ರಿಕೆಟಿಗರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ.ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಮೂವರಿಗೆ ಇಡಿ ಸಮನ್ಸ್

  • ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಮೂವರಿಗೆ ಇಡಿ ಸಮನ್ಸ್

    ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಮೂವರಿಗೆ ಇಡಿ ಸಮನ್ಸ್

    ನವದೆಹಲಿ: ಅಕ್ರಮ ಬೆಟ್ಟಿಂಗ್ ಆ್ಯಪ್ (Betting App) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗರಾದ ಯುವರಾಜ್‌ ಸಿಂಗ್‌, ರಾಬಿನ್ ಉತ್ತಪ್ಪ ಹಾಗೂ ನಟ ಸೋನು ಸೂದ್‌ಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿಗೊಳಿಸಿದೆ.

    ಅಧಿಕಾರಿಗಳ ಮಾಹಿತಿ ಪ್ರಕಾರ, ಇದು 1xBet ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಈ ಹಿನ್ನೆಲೆ ಮೂವರಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಅದರಂತೆ ಸೆ.22ಕ್ಕೆ ರಾಬಿನ್ ಉತ್ತಪ್ಪ (Robin Uthappa), ಸೆ.23ಕ್ಕೆ ಯುವರಾಜ್ ಸಿಂಗ್ (Yuvraj Singh) ಹಾಗೂ ಸೆ.24ಕ್ಕೆ ನಟ ಸೋನು ಸೂದ್‌ (Sonu Sood) ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ವೇಳೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಮೂವರ ಹೇಳಿಕೆ ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್‌ ಆ್ಯಪ್ ಪ್ರಕರಣ – ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್‌ ಧವನ್‌ಗೆ ಇಡಿ ಸಮನ್ಸ್‌

    ಇತ್ತೀಚಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್ (Shikar Dhawan) ಇಡಿ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಸತತ 8 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು ಎಂದು ತಿಳಿದುಬಂದಿದೆ.

    ಏನಿದು ಕೇಸ್?
    ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ವಂಚನೆ ಜೊತೆಗೆ ಭಾರೀ ಪ್ರಮಾಣದ ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಬೆಟ್ಟಿಂಗ್ ಆ್ಯಪ್‌ಗಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳ ತನಿಖೆ ನಡೆಸುತ್ತಿದೆ. ಈಗಾಗಲೇ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದಲ್ಲಿದ್ದ ಹಲವಾರು ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಲನಚಿತ್ರ ತಾರೆಯರು, ಕ್ರಿಕೆಟಿಗರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ.

    ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಹರ್ಭಜನ್ ಸಿಂಗ್, ಊರ್ವಶಿ ರೌಟೇಲಾ ಮತ್ತು ಸುರೇಶ್ ರೈನಾ ಕೂಡಾ ಈ ಪಟ್ಟಿಯಲ್ಲಿದ್ದಾರೆ. ಕಳೆದ ತಿಂಗಳು ಸುರೇಶ್ ರೈನಾ ವಿಚಾರಣೆ ಎದುರಿಸಿದ್ದರು.

  • ಧೋನಿಯನ್ನು ಯಾವತ್ತೂ ಕ್ಷಮಿಸಲ್ಲ – ಯುವರಾಜ್ ಸಿಂಗ್ ತಂದೆ ಕಿಡಿ

    ಧೋನಿಯನ್ನು ಯಾವತ್ತೂ ಕ್ಷಮಿಸಲ್ಲ – ಯುವರಾಜ್ ಸಿಂಗ್ ತಂದೆ ಕಿಡಿ

    – ಧೋನಿ ತಮ್ಮ ಮುಖವನ್ನು ಕನ್ನಡಿಯಲ್ಲಿ ಒಮ್ಮೆ ನೋಡಿಕೊಳ್ಳಲಿ ಅಂತ ಲೇವಡಿ

    ಮುಂಬೈ: ನನ್ನ ಮಗನ ಭವಿಷ್ಯಕ್ಕೆ ಅಡ್ಡಗಾಲು ಹಾಕಿದ ಮಹೇಂದ್ರ ಸಿಂಗ್ ಧೋನಿಯನ್ನು (MS Dhoni) ನಾನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಯುವರಾಜ್ ಸಿಂಗ್ (Yuvaraj Singh) ತಂದೆ, ಮಾಜಿ ಕ್ರಿಕೆಟಿಗ ಯೋಗರಾಜ್ ಸಿಂಗ್ (Yograj Singh) ಧೋನಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಭಾರತ ತಂಡದ ಪರ ಏಳು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಯೋಗರಾಜ್ ಸಿಂಗ್ ಅವರ ತಂದೆ ಸಾರ್ವಜನಿಕವಾಗಿ ಧೋನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮಗನ ಭವಿಷ್ಯವನ್ನು ಧೋನಿ ಹಾಳು ಮಾಡಿದ್ದಾರೆ. ಹೀಗಾಗಿ ನಾನು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ. ಎಷ್ಟೇ ದೊಡ್ಡ ಕ್ರಿಕೆಟಿಗನಾದರೂ ಧೋನಿ ನನ್ನ ಕ್ಷಮೆಗೆ ಅರ್ಹರಲ್ಲ ಎಂದು ಯೂಟ್ಯೂಬ್ ಚಾನೆಲ್‌ವೊಂದರ ಸಂದರ್ಶನದಲ್ಲಿ ಯೋಗರಾಜ್ ಹೇಳಿದ್ದಾರೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನೂ ಓದಿ: ದರ್ಶನ್‌ ಗ್ಯಾಂಗ್‌ನ ಮತ್ತಿಬ್ಬರು ಆರೋಪಿಗಳ ಜಾಮೀನು ಅರ್ಜಿ ವಜಾ

    ಧೋನಿ ತಮ್ಮ ಮುಖವನ್ನು ಕನ್ನಡಿಯಲ್ಲಿ ಒಮ್ಮೆ ನೋಡಿಕೊಳ್ಳಲಿ. ಅವರು ದೊಡ್ಡ ಕ್ರಿಕೆಟಿಗನೇ ಇರಬಹುದು. ಆದರೆ ಅವರು ನನ್ನ ಮಗನ ವಿರುದ್ಧ ಏನೆಲ್ಲಾ ಮಾಡಿದ್ದಾನೆ ಎಂಬುದು ಈಗ ಹೊರಗೆ ಬರುತ್ತಿದೆ. ಅದನ್ನು ನನ್ನ ಜೀವನದಲ್ಲಿ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ನಾನು ನನ್ನ ಜೀವನದಲ್ಲಿ 2 ತಪ್ಪುಗಳನ್ನು ಮಾಡಿಲ್ಲ. ಮೊದಲನೆಯದಾಗಿ ಯಾರೇ ತಪ್ಪು ಮಾಡಿದರೂ ನಾನು ಅವರನ್ನು ಕ್ಷಮಿಸಿಲ್ಲ. ಎರಡನೆಯದಾಗಿ ತಪ್ಪು ಮಾಡಿದವರನ್ನು ನಾನು ಯಾವತ್ತಿಗೂ ತಬ್ಬಿಕೊಂಡಿಲ್ಲ. ಅದು ನನ್ನ ಕುಟುಂಬವೇ ಆಗಿರಲಿ, ಮಕ್ಕಳೆ ಆಗಿರಲಿ. ನಾನು ಅದನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: Kolkata Horror | ಟ್ರೈನಿ ವೈದ್ಯೆ ʻಹತ್ಯಾʼಚಾರ ನಡೆದಿದ್ದ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅರೆಸ್ಟ್‌

    ಎಂ.ಎಸ್ ಧೋನಿ ವಿರುದ್ಧ ಯೋಗರಾಜ್ ಸಿಂಗ್ ಈ ರೀತಿಯಾಗಿ ಆರೋಪಿಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಧೋನಿಯನ್ನು ಬಹಿರಂಗವಾಗಿ ದೂರಿದ್ದರು. 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಿಎಸ್‌ಕೆ (CSK) ಸೋಲಲು ಧೋನಿಯೇ ಪ್ರಮುಖ ಕಾರಣ. ಅವರಿಗೆ ಅಸೂಯೆ ಜಾಸ್ತಿ ಇದೆ ಎಂದು ಯೋಗರಾಜ್ ಸಿಂಗ್ ಆರೋಪಿಸಿದ್ದರು. ಇದನ್ನೂ ಓದಿ: Breaking: ಮುಡಾ ಹಗರಣದ ಮೊದಲ ವಿಕೆಟ್ ಪತನ – ಹಿಂದಿನ ಆಯುಕ್ತ ದಿನೇಶ್ ಕುಮಾರ್ ಸಸ್ಪೆಂಡ್‌!

  • ಒಂದೇ ಓವರ್‌ನಲ್ಲಿ 39 ರನ್ – ಯುವರಾಜ್ ಸಿಂಗ್ ದಾಖಲೆ ಮುರಿದ ಡೇರಿಯಸ್

    ಒಂದೇ ಓವರ್‌ನಲ್ಲಿ 39 ರನ್ – ಯುವರಾಜ್ ಸಿಂಗ್ ದಾಖಲೆ ಮುರಿದ ಡೇರಿಯಸ್

    ಅಪಿಯಾ: ಟಿ20 ಪಂದ್ಯವೊಂದರಲ್ಲಿ (T20) ಸೋಮೊವಾದ ಡೇರಿಯಸ್ ವಿಸ್ಸೆರ್ (Samoa Darius Visser) ಅವರು ಒಂದೇ ಓವರ್‌ನಲ್ಲಿ 39 ರನ್ ಬಾರಿಸುವ ಮೂಲಕ ಯುವರಾಜ್ ಸಿಂಗ್ (Yuvraj Singh) ಅವರ ದಾಖಲೆ ಮುರಿದಿದ್ದಾರೆ.

    ಸೋಮೊವಾ ತಂಡದ ಪರವಾಗಿ ಡೇರಿಯಸ್ ವಿಸ್ಸೆರ್ ಆಡುತ್ತಿದ್ದರು. ಅಪಿಯಾದಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ವನವಾಟು (Vanuatu) ತಂಡದ ವಿರುದ್ಧ ಆಟವಾಡಿದ ಅವರು 15ನೇ ಓವರ್‌ವೊಂದರಲ್ಲೇ 39 ರನ್ ಚಚ್ಚಿದ್ದರು. ಈ ಮೂಲಕ ಅವರು ಯುವರಾಜ್ ಸಿಂಗ್ ಮತ್ತು ಕ್ರಿಸ್ ಗೇಲ್ (chris gayle) ಅವರ ದಾಖಲೆ ಮುರಿದಿದ್ದಾರೆ.ಇದನ್ನೂ ಓದಿ: ಮುಟ್ಟಾಗಿದ್ದರೂ ನಿಗದಿತ ತೂಕ ಹೊಂದಿರಬೇಕು, ತೂಕದ ಮಾಪಕದಲ್ಲಿ ದೋಷವಿಲ್ಲ: ಫೋಗಟ್‌ ಅನರ್ಹತೆಗೆ ಕಾರಣ ನೀಡಿದ CAS

    39 ರನ್ ಹೇಗೆ?
    ನಳಿನ್ ನಿಪೀಕೊ (Nalin Nipiko) ಎಸೆದ 15ನೇ ಓವರ್‌ನಲ್ಲಿ 39 ರನ್ ಬಂದಿದೆ. ನೀಪಿಕೊ ಎಸೆದ ಮೊದಲ ಮೂರು ಬಾಲ್‌ಗಳನ್ನು ವಿಸ್ಸೆರ್ ಹ್ಯಾಟ್ರಿಕ್ ಸಿಕ್ಸ್ ಬಾರಿಸಿದರು. ಇದರಿಂದ ಕೊಂಚ ಮಾನಸಿಕವಾಗಿ ಕುಗ್ಗಿದ ನೀಪಿಕೊ ನಾಲ್ಕನೇ ಎಸೆತ ನೋ ಬಾಲ್ (NoBall) ಹಾಕಿದರು. ನಂತರದ ಬಾಲ್ ಫ್ರೀ ಹಿಟ್ (Free Hit) ಸಿಕ್ಕ ಕಾರಣ ವಿಸ್ಸೆರ್ ಮತ್ತೆ ಸಿಕ್ಸ್ ಸಿಡಿಸಿದರು.

     

    ಐದನೇ ಬಾಲ್ ಡಾಟ್ ಆಗಿದ್ದರಿಂದ ವನವಾಟು ತಂಡದ ಆಟಗಾರರು ಸ್ವಲ್ಪ ನಿಟ್ಟುಸಿರು ಬಿಟ್ಟರು. ಆದರೆ ಅವರ ಸಂತಸ ಹೆಚ್ಚು ಸಮಯವಿರಲಿಲ್ಲ. ಆರನೇ ಎಸೆತ ನೋಬಾಲ್ ಆಗಿದ್ದರಿಂದ ಇತರೇ ರೂಪದಲ್ಲಿ 1 ರನ್ ಬಂತು. ನಂತರದ ಫ್ರಿ ಹಿಟ್ ಎಸೆತ ನೋಬಾಲ್ ಆಗಿದ್ದರಿಂದ 7 ರನ್ ಬಂತು. ಕೊನೆಯ ಎಸೆತವನ್ನು ವಿಸ್ಸೆರ್ ಸಿಕ್ಸರ್‌ಗೆ ಅಟ್ಟಿದ ಪರಿಣಾಮ ಒಂದೇ ಓವರ್‌ನಲ್ಲಿ 39 ರನ್ ಬಂದಿದೆ.ಇದನ್ನೂ ಓದಿ: ಐಪಿಎಲ್‌ನಲ್ಲಿ ತನ್ನ ನೆಚ್ಚಿನ ಪ್ರತಿಸ್ಪರ್ಧಿ ತಂಡವನ್ನು ರಿವೀಲ್ ಮಾಡಿದ ಕೊಹ್ಲಿ

    2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ (England) ಬೌಲರ್ ಸ್ಟುವರ್ಟ್ ಬ್ರಾಡ್ (Stuart Broad) ಅವರ 6 ಎಸೆತವನ್ನು ಸಿಕ್ಸರ್‌ಗೆ ಅಟ್ಟಿ ವಿಶ್ವ ದಾಖಲೆ ನಿರ್ಮಿಸಿದ್ದರು.

  • ನಿರ್ಮಾಣವಾಗಲಿದೆ ಕ್ರಿಕೆಟಿಗ ಯುವರಾಜ್ ಸಿಂಗ್ ಬಯೋಪಿಕ್

    ನಿರ್ಮಾಣವಾಗಲಿದೆ ಕ್ರಿಕೆಟಿಗ ಯುವರಾಜ್ ಸಿಂಗ್ ಬಯೋಪಿಕ್

    ಬಾಲಿವುಡ್‌ನಲ್ಲಿ (Bollywood) ಈಗಾಗಲೇ ಅನೇಕ ಸಾಧಕರ ಕುರಿತು ಸಿನಿಮಾ ಬಂದಿದೆ. ಕ್ರಿಕೆಟಿಗ ಎಂ.ಎಸ್ ಧೋನಿ, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರ ಜೀವನಗಾಥೆ ಸಿನಿಮಾ ರೂಪದಲ್ಲಿ ರಿಲೀಸ್ ಆಗಿದೆ. ಈಗ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಬಯೋಪಿಕ್ ಬರೋದಾಗಿ ಅಧಿಕೃತ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ:ನಾಗಚೈತನ್ಯ ಮದುವೆ ಡೇಟ್ ಫಿಕ್ಸ್- ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಭರ್ಜರಿ ಪ್ಲ್ಯಾನ್

    ಭೂಷಣ್ ಕುಮಾರ್ ನಿರ್ಮಾಣದಲ್ಲಿ ಯುವರಾಜ್ ಸಿಂಗ್ (Yuvraj Singh) ಬಯೋಪಿಕ್ ಮೂಡಿ ಬರುತ್ತಿದ್ದು, ಚಿತ್ರಕ್ಕೆ ಟೈಟಲ್ ಇನ್ನೂ ಇಡಬೇಕಿದೆ. 13ನೇ ವಯಸ್ಸಿಗೆ ಕ್ರಿಕೆಟ್ ಜಗತ್ತಿಗೆ ಕಾಲಿರಿಸಿದ ಯುವರಾಜ್ ಸಿಂಗ್ ಅವರ ಪಯಣ ಅತ್ಯದ್ಭುತ ಸಾಧನೆಗಳು, ಕ್ರಿಕೆಟ್ ಕ್ಷೇತ್ರದಲ್ಲಿ ಏಳು ಬೀಳಿನ ಕಥೆಗಳು ಈ ಸಿನಿಮಾದಲ್ಲಿ ಇರಲಿದೆ ಎಂದು ಚಿತ್ರತಂಡ ತಿಳಿಸಿದೆ.

     

    View this post on Instagram

     

    A post shared by tseriesfilms (@tseriesfilms)

    ಬಯೋಪಿಕ್ ಬಗ್ಗೆ ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್, ನನ್ನ ಜೀವನದ ಕಥೆ ಲಕ್ಷಾಂತರ ಅಭಿಮಾನಿಗಳ ಮುಂದೆ ಬರುತ್ತಿರೋದಕ್ಕೆ ಖುಷಿಯಿದೆ. ಕ್ರಿಕೆಟ್‌ನಲ್ಲಿ ಏಳು ಬೀಳಿನ ಜೊತೆಗೆ ಅಗಾಧವಾದ ಪ್ರೀತಿ ಜನರಿಂದ ಸಿಕ್ಕಿದೆ. ಈ ಕಥೆ ಇತರರಿಗೂ ಸ್ಫೂರ್ತಿಯಾಗಲಿದೆ ಎಂದಿದ್ದಾರೆ.

    ಇನ್ನೂ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಕೊಡುಗೆಯನ್ನು ಮರೆಯೋಕೆ ಸಾಧ್ಯವಿಲ್ಲ. ತಮ್ಮ ಅದ್ಭುತ ಆಟದಿಂದ ಕ್ರಿಕೆಟ್ ಪ್ರೇಮಿಗಳನ್ನು ಯುವರಾಜ್ ರಂಜಿಸಿದ್ದರು. ಕೆಲ ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿದ್ದ ಯುವರಾಜ್ ಸಿಂಗ್, ಅದನ್ನು ಮೆಟ್ಟಿ ನಿಂತು ಮತ್ತೆ ಕ್ರಿಕೆಟ್‌ಗೆ ಕಂಬ್ಯಾಕ್ ಮಾಡಿ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಇದೀಗ ಈ ಕ್ರಿಕೆಟಿಗನ ಜೀವನಾಧರಿತ ಕಥೆ ತೆರೆ ಮೇಲೆ ತರಲು ಈಗಾಗಲೇ ಕೆಲಸ ಶುರುವಾಗಿದೆ. ಇನ್ನೂ ಅವರ ಕುರಿತು ಸಿನಿಮಾ ಬರಲಿದೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಗುರುದಾಸ್‌ಪುರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಯುವರಾಜ್‌ ಸಿಂಗ್ ಸ್ಪಷ್ಟನೆ

    ಗುರುದಾಸ್‌ಪುರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಯುವರಾಜ್‌ ಸಿಂಗ್ ಸ್ಪಷ್ಟನೆ

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ತಾರೆ ಸನ್ನಿ ಡಿಯೋಲ್ ಪ್ರತಿನಿಧಿಸುವ ಪಂಜಾಬ್‌ನ ಹೈ ಪ್ರೊಫೈಲ್ ಕ್ಷೇತ್ರ ಗುರುದಾಸ್‌ಪುರದಿಂದ ಸ್ಪರ್ಧಿಸುವ ವಿಚಾರವನ್ನು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಅವರು ತಳ್ಳಿಹಾಕಿದ್ದಾರೆ.

    ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಿಂಗ್‌, ನಾನು ಗುರುದಾಸ್‌ಪುರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ.  ನನ್ನ ಮುಖ್ಯ ಉದ್ದೇಶ ಜನರಿಗೆ ಸಹಾಯ ಮಾಡುವುದಾಗಿದೆ. ನನ್ನ ಫೌಂಡೇಶನ್ ಮೂಲಕ ನಾನು ಅದನ್ನು ಮುಂದುವರಿಸುತ್ತೇನೆ. ಹೀಗಾಗಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಒಟ್ಟಿಗೆ ಕೆಲಸ ಮುಂದುವರಿಸೋಣ ಎಂದಿದ್ದಾರೆ.

    ಬಿಜೆಪಿಯು ಲೋಕಸಭೆ ಚುನಾವಣೆಗೆ (Lokabha Election) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಗುರುದಾಸ್‌ಪುರದಿಂದ ಬಿಜೆಪಿ ಟಿಕೆಟ್‌ನಲ್ಲಿ ಯುವರಾಜ್‌ ಸಿಂಗ್ ಸ್ಪರ್ಧಿಸಬಹುದು ಎಂಬುದು ವರದಿಯಾಗಿತ್ತು. ಈ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಹಾಲಿ 100 ಬಿಜೆಪಿ ಸಂಸದರಿಗೆ ಸಿಗಲ್ಲ ಟಿಕೆಟ್‌

    ಗುರುದಾಸ್‌ಪುರವು ಪ್ರಸಿದ್ಧ ಸಂಸದರ ಇತಿಹಾಸವನ್ನು ಹೊಂದಿದೆ. ಸನ್ನಿ ಡಿಯೋಲ್ (Sunny Deol) ಅವರಿಗಿಂತ ಮೊದಲು , ಈ ಕ್ಷೇತ್ರವನ್ನು ದಿವಂಗತ ನಟ ವಿನೋದ್ ಖನ್ನಾ ಅವರು 1998, 1999, 2004 ಮತ್ತು 2014 ಹೀಗೆ ನಾಲ್ಕು ಬಾರಿ ಗೆದ್ದಿದ್ದಾರೆ. ಡಿಯೋಲ್ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಖರ್ ಅವರನ್ನು ಸೋಲಿಸಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದರು. ಜಾಖರ್ ನಂತರ ಮೇ 2022 ರಲ್ಲಿ ಬಿಜೆಪಿ ಸೇರಿದರು.

  • ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮನೆಯಲ್ಲಿ ಕಳ್ಳತನ

    ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮನೆಯಲ್ಲಿ ಕಳ್ಳತನ

    ಗುರುಗಾಂವ್: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್(Yuvraj Singh) ಮನೆಯಲ್ಲಿ 70,000 ರೂ. ನಗದು ಮತ್ತು ಚಿನ್ನಾಭರಣ ಕಾಣೆಯಾಗಿದೆ ಎಂದು ಅವರ ತಾಯಿ ಆರೋಪಿಸಿದ್ದಾರೆ.

    ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಾಯಿ ಶುಕ್ರವಾರ ಪಂಚಕುಲದ ಮಾನಸಾ ದೇವಿ ಕಾಂಪ್ಲೆಕ್ಸ್‌ನಲ್ಲಿರುವ ಅವರ ಮನೆಯಲ್ಲಿದ್ದ ನಗದು ಮತ್ತು ಆಭರಣಗಳನ್ನು ಅವರ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯೇ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ರೈತರ ಪ್ರತಿಭಟನೆಗೆ ಮಣಿಯಿತಾ ಸರ್ಕಾರ – ರೈತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚನೆ ಪ್ರಸ್ತಾಪಿಸುವ ಸಾಧ್ಯತೆ?

    ತಾಯಿ ಶಬ್ನಮ್ ಸಿಂಗ್ ಅವರು ತಮ್ಮ ಮನೆಯಲ್ಲಿದ್ದ 70,000 ಸಾವಿರ ನಗದು ಮತ್ತು ಚಿನ್ನಾಭರಣ ಕಾಣೆಯಾಗಿದೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಯೇ ಕಳ್ಳತನ ಮಾಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 2029ರಲ್ಲಿ ಆಪ್‌ನಿಂದ ಬಿಜೆಪಿ ಮುಕ್ತ – 3ನೇ ಬಾರಿ ವಿಶ್ವಾಸಮತ ಗೆದ್ದ ಕೇಜ್ರಿವಾಲ್‌

    ಸಿಬ್ಬಂದಿ ಸಾಕೇತ್ರಿಯ ಲಲಿತಾ ದೇವಿ, ಮನೆಕೆಲಸಕ್ಕಾಗಿ ಮತ್ತು ಅಡುಗೆ ಕೆಲಸಕ್ಕಾಗಿ ನೇಮಕಗೊಂಡ ಬಿಹಾರ ಮೂಲದ ವ್ಯಕ್ತಿ ಸಲೀಂದರ್ ದಾಸ್ ಕಳ್ಳತನ ಮಾಡಿರಬಹುದು ಎಂದು ಶಂಕಿಸಿದ್ದಾರೆ. ಇದನ್ನೂ ಓದಿ: ವಿಚಾರಣೆಗೆ ಖುದ್ದು ಹಾಜರಾಗುವಂತೆ ಕೇಜ್ರಿವಾಲ್‍ಗೆ ಕೋರ್ಟ್ ಆದೇಶ

    2023ರಲ್ಲಿ ಗುರುಗಾಂವ್‌ನಲ್ಲಿದ್ದಾಗ ಒಂದು ತಿಂಗಳು ತಾನು ಮನೆಯಲ್ಲಿ ಇರಲಿಲ್ಲ. ಹಾಗಾಗಿ ನಮ್ಮ ಮನೆಯ ಜವಾಬ್ದಾರಿಯನ್ನು ಆರೋಪಿಗಳಾಗಿರುವ ಮನೆಗೆಲಸದವರು ನೋಡಿಕೊಳ್ಳುತ್ತಿದ್ದರು. ನಂತರ ಇಬ್ಬರು ಆರೋಪಿಗಳು ಕೆಲಸವನ್ನು ಬಿಟ್ಟ ಆರು ತಿಂಗಳ ಬಳಿಕ ಮನೆಯಲ್ಲಿದ್ದ ಅಷ್ಟೂ ಚಿನ್ನ ಮತ್ತು ನಗದು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಏಕಾಏಕಿ ಮಲ್ಲಿಕಾರ್ಜುನ ಖರ್ಗೆಗೆ Z+ ಸೆಕ್ಯೂರಿಟಿ

    ಈ ಕುರಿತು ಗುರುವಾರ (ಫೆ.15) ರಂದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಕ್ಕಳನ್ನು ಪಾಕ್‌ಗೆ ಕರೆದೊಯ್ಯಲು ಸೀಮಾ ಮೊದಲ ಪತಿ ನಿರ್ಧಾರ – ಕಾನೂನು ಹೋರಾಟಕ್ಕೆ ಭಾರತೀಯ ವಕೀಲರ ನೇಮಕ

  • ಕ್ರಿಕೆಟಿಗ ಯುವರಾಜ್‌ ಸಿಂಗ್‌ ಗುರುದಾಸ್‌ಪುರದ ಬಿಜೆಪಿ ಅಭ್ಯರ್ಥಿ?

    ಕ್ರಿಕೆಟಿಗ ಯುವರಾಜ್‌ ಸಿಂಗ್‌ ಗುರುದಾಸ್‌ಪುರದ ಬಿಜೆಪಿ ಅಭ್ಯರ್ಥಿ?

    ನವದೆಹಲಿ: ಭಾರತ ಕ್ರಿಕೆಟ್ (Team India) ತಂಡದ ಮಾಜಿ ಆಲ್‌ರೌಂಡರ್‌ ಆಟಗಾರ ಯುವರಾಜ್ ಸಿಂಗ್ (Yuvraj Singh) ಅವರು ಶೀಘ್ರವೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಲು ಆರಂಭವಾಗಿದೆ.

    ಯುವರಾಜ್ ಇತ್ತೀಚೆಗೆ ಕೇಂದ್ರ ಸಾರಿಗೆ ಖಾತೆಯ ಸಚಿವ ನಿತಿನ್ ಗಡ್ಕರಿ (Nitin Gadkari) ಅವರನ್ನು ಭೇಟಿಯಾಗಿದ್ದರು. ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: 1,078 ತಂಡಗಳು, 16,100 ಆಟಗಾರರು – ಮೋದಿ ತವರಲ್ಲಿ ʻಲೋಕಸಭಾ ಪ್ರೀಮಿಯರ್‌ ಲೀಗ್‌ʼಗೆ ಚಾಲನೆ

     

    ಪಂಜಾಬ್‌ನ (Punjab) ಗುರುದಾಸ್‌ಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ (BJP) ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಇಲ್ಲಿಯವರೆಗೆ ಯುವರಾಜ್‌ ಸಿಂಗ್‌ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ನಟ ಸನ್ನಿ ಡಿಯೋಲ್ ಹಾಲಿ ಗುರುದಾಸ್‌ಪುರ ಕ್ಷೇತ್ರದ ಸಂಸದರಾಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ಹೊರಟಿದ್ದ ವಿಶೇಷ ರೈಲಿಗೆ ಕಲ್ಲು ತೂರಾಟ

    ಪಂಜಾಬ್‌ನಲ್ಲಿ ಒಟ್ಟು 13 ಲೋಕಸಭಾ ಕ್ಷೇತ್ರಗಳಿದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ 8 , ಬಿಜೆಪಿ 2, ಶಿರೋಮಣಿ ಅಕಾಲಿ ದಳ 2, ಆಪ್‌ 1 ಸ್ಥಾನವನ್ನು ಗೆದ್ದುಕೊಂಡಿತ್ತು. ಪಂಜಾಬ್‌ನಲ್ಲಿ ಬಿಜೆಪಿ ದೊಡ್ಡ ಮಟ್ಟದ ಸಾಧನೆ ಮಾಡಿಲ್ಲ. ಈ ಕಾರಣಕ್ಕೆ ಬಿಜೆಪಿ ಯುವರಾಜ್‌ ಸಿಂಗ್‌ ಅವರನ್ನು ಕಣಕ್ಕೆ ಇಳಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

  • ಅಣ್ಣನ ಬೌಲಿಂಗ್‌ಗೆ ಸಿಕ್ಸರ್‌ ಸಿಡಿಸಿ ಗೆಲುವು ತಂದುಕೊಟ್ಟ ಪಠಾಣ್‌ – ಸಚಿನ್‌ ಬಳಗಕ್ಕೆ 4 ವಿಕೆಟ್‌ಗಳ ಜಯ

    ಅಣ್ಣನ ಬೌಲಿಂಗ್‌ಗೆ ಸಿಕ್ಸರ್‌ ಸಿಡಿಸಿ ಗೆಲುವು ತಂದುಕೊಟ್ಟ ಪಠಾಣ್‌ – ಸಚಿನ್‌ ಬಳಗಕ್ಕೆ 4 ವಿಕೆಟ್‌ಗಳ ಜಯ

    – ಕೊನೇ ಓವರ್‌ನಲ್ಲಿ ಸಿಕ್ಸರ್‌ ಸಿಡಿಸಿದ ಇರ್ಫಾನ್‌ ಪಠಾಣ್‌
    – ಯುವರಾಜ್‌ ಸಿಂಗ್‌ ಬಳಗಕ್ಕೆ ವಿರೋಚಿತ ಸೋಲು

    ಚಿಕ್ಕಬಳ್ಳಾಪುರ: ತಾಲೂಕಿನ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ನಡೆದ ಒನ್ ವರ್ಲ್ಡ್-ಒನ್ ಫ್ಯಾಮಿಲಿ ಕಪ್ (One World- One Family Cup) ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಚಿನ್‌ ತೆಂಡೂಲ್ಕರ್‌ (Sachin Tendulkar) ನೇತೃತ್ವದ ಒನ್‌ ವರ್ಲ್ಡ್ ತಂಡವು 4 ವಿಕೆಟ್‌ಗಳ ಜಯ ಸಾಧಿಸಿದೆ. ಕೊನೆಯ ಓವರ್‌ನಲ್ಲಿ ಅಣ್ಣ ಯುಸೂಫ್‌ ಪಠಾಣ್‌ (Yusuf Pathan) ಬೌಲಿಂಗ್‌ಗೆ ಭರ್ಜರಿ ಸಿಕ್ಸರ್‌ ಬಾರಿಸುವ ಮೂಲಕ ತಮ್ಮ ಇರ್ಫಾನ್‌ ಪಠಾಣ್‌ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

    ಸತ್ಯಸಾಯಿ ಗ್ರಾಮದಲ್ಲಿ ನೂತನ ಸಾಯಿಕೃಷ್ಣನ್ ಸ್ಟೇಡಿಯಂ (Sai Krishnan Cricket Stadium) ಲೋಕಾರ್ಪಣೆ ಅಂಗವಾಗಿ ನಡೆದ  ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್‌ ಆಯ್ದುಕೊಂಡ ಒನ್‌ ವರ್ಲ್ಡ್‌ ತಂಡವು ಬ್ಯಾಟಿಂಗ್‌ ಮಾಡುವ ಅವಕಾಶವನ್ನು ಒನ್‌ ಫ್ಯಾಮಿಲಿ ತಂಡಕ್ಕೆ ಬಿಟ್ಟುಕೊಟ್ಟಿತು. ಈ ಮೂಲಕ ಮೊದಲು ಬ್ಯಾಟಿಂಗ್‌ ಮಾಡಿದ ನಾಯಕ ಯುವರಾಜ್‌ ಸಿಂಗ್‌ (Yuvraj Singh) ನೇತೃತ್ವದ ಒನ್‌ ಫ್ಯಾಮಿಲಿ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿತ್ತು. 181 ರನ್‌ಗಳ ಗುರಿ ಬೆನ್ನತ್ತಿದ್ದ ಸಚಿನ್‌ ತೆಂಡೂಲ್ಕರ್‌ ನೇತೃತ್ವದ ಒನ್‌ ವರ್ಲ್ಡ್‌ ತಂಡ 19.5 ಓವರ್‌ಗಳಲ್ಲೇ 184 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

    ಚೇಸಿಂಗ್‌ ಆರಂಭಿಸಿದ ಒನ್‌ ವರ್ಲ್ಡ್‌ ತಂಡದ ಪರ ನಮನ್‌ ಓಜಾ ಹಾಗೂ ಸಚಿನ್‌ ತೆಂಡೂಲ್ಕರ್‌ ಜೋಡಿ ಮೊದಲ ವಿಕೆಟ್‌ಗೆ 31 ರನ್‌ಗಳ ಜೊತೆಯಾಟ ನೀಡಿದ್ರೆ, 2ನೇ ವಿಕೆಟ್‌ಗೆ ಸಚಿನ್‌ ಹಾಗೂ ಅಲ್ವಿರೋ ಪೀಟರ್ಸನ್ ಜೋಡಿ 22 ಎಸೆತಗಳಲ್ಲಿ 41 ರನ್‌ ಕಲೆಹಾಕಿತು. ನಂತರ 3ನೇ ವಿಕೆಟ್‌ಗೆ ಪೀಟರ್ಸನ್‌ ಹಾಗೂ ಉಪುಲ್ ತರಂಗ ಜೋಡಿ 44 ಎಸೆತಗಳಲ್ಲಿ 59 ರನ್‌ ಪೇರಿಸಿತು. ಇದರಿಂದ ತಂಡದ ಗೆಲುವಿನ ಹಾದಿ ಸುಗಮವಾಯಿತು.

    148 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಅಲ್ವಿರೋ ಪೀಟರ್ಸನ್ 50 ಎಸೆತಗಳಲ್ಲಿ 74 ರನ್‌ (5 ಬೌಂಡರಿ, 3 ಸಿಕ್ಸರ್‌) ಬಾರಿಸಿದರು. ಇನ್ನುಳಿದಂತೆ ನಮನ್ ಓಜಾ 25 ರನ್‌, ಸಚಿನ್‌ 27 ರನ್‌, ಉಪುಲ್ ತರಂಗ 29 ರನ್‌, ಸುಬ್ರಮಣ್ಯಂ ಬದರಿನಾಥ್ 4 ರನ್‌, ಹರ್ಭಜನ್ ಸಿಂಗ್ 4 ರನ್‌ ಗಳಿಸಿದ್ರೆ ಇರ್ಫಾನ್ ಪಠಾಣ್ (Irfan Pathan) 12 ರನ್‌ ಗಳಿಸಿ ಅಜೇಯರಾಗುಳಿದರು.

    ಚಮಿಂದಾ ವಾಸ್ ಮಾರಕ ದಾಳಿ:
    ಒನ್‌ ವರ್ಲ್ಡ್‌ ತಂಡದ ವಿರುದ್ಧ ಮಾರಕ ಬೌಲಿಂಗ್‌ ದಾಳಿ ನಡೆಸಿದ ಶ್ರೀಲಂಕಾ ತಂಡದ ಮಾಜಿ ಎಡಗೈ ವೇಗಿ ಚಮಿಂದಾ ವಾಸ್ 3 ವಿಕೆಟ್‌ ಪಡೆದರು. 4 ಓವರ್‌ಗಳಲ್ಲಿ 44 ರನ್‌ ಚಚ್ಚಿಸಿಕೊಂಡ ಹೊರತಾಗಿಯೂ 3 ವಿಕೆಟ್‌ ಪಡೆದುಕೊಂಡರು. ವಿಶೇಷವೆಂದರೆ ದಶಕಗಳ ಬಳಿಕ ಬೌಲಿಂಗ್‌ನಲ್ಲಿ ಎದುರಾದ ಮಿಂದಾ ವಾಸ್ದು ಬೌಲಿಂಗ್‌ಗೆ ಸಚಿನ್‌ ತೆಂಡೂಲ್ಕರ್‌ ಸತತ ಎರಡು ಮನಮೋಹಕ ಬೌಂಡರಿ ಸಿಡಿಸಿದರು. ಇನ್ನುಳಿದಂತೆ ಮುತ್ತಯ್ಯ ಮುರಳೀಧರನ್‌, ಯುವರಾಜ್‌ ಸಿಂಗ್‌, ಜೇಸನ್ ಕ್ರೆಜ್ಜಾ ತಲಾ ಒಂದೊಂದು ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    181 ಟಾರ್ಗೆಟ್‌ ನೀಡಿದ್ದ ಒನ್‌ ಫ್ಯಾಮಿಲಿ:
    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಯುವರಾಜ್‌ ಸಿಂಗ್‌ ನೇತೃತ್ವದ ಒನ್‌ ಫ್ಯಾಮಿಲಿ ತಂಡ ಎದುರಾಳಿ ತಂಡಕ್ಕೆ 181 ರನ್‌ಗಳ ಗುರಿ ನೀಡಿತ್ತು. ಡ್ಯಾರೆನ್ ಮ್ಯಾಡಿ 51 ರನ್‌ (41 ಎಸೆತ, 8 ಬೌಂಡರಿ), ರೋಮೇಶ್ ಕಲುವಿತಾರಣ 22 ರನ್‌ (15 ಎಸೆತ, 4 ಬೌಂಡರಿ), ಮೊಹಮ್ಮದ್ ಕೈಫ್ 9 ರನ್‌, ಪಾರ್ಥಿವ್ ಪಟೇಲ್ 19 ರನ್‌ (13 ಎಸೆತ, 3 ಬೌಂಡರಿ), ಯೂಸುಫ್ ಪಠಾಣ್ 38 ರನ್‌ (23, 4 ಸಿಕ್ಸರ್‌, 1 ಬೌಂಡರಿ), ಯುವರಾಜ್ ಸಿಂಗ್ 23 ರನ್‌ (10 ಎಸೆತ, 2 ಸಿಕ್ಸರ್‌, 2 ಬೌಂಡರಿ), ಜೇಸನ್ ಕ್ರೆಜ್ಜಾ 2 ರನ್‌ ಹಾಗೂ ಅಲೋಕ್ ಕಪಾಲಿ 1 ರನ್‌ ಗಳಿಸಿದ್ರೆ, ಹೆಚ್ಚುವರಿ 15 ರನ್‌ ತಂಡಕ್ಕೆ ಸೇರ್ಪಡೆಯಾಗಿತ್ತು.

  • ನೂತನ ಸಾಯಿಕೃಷ್ಣನ್ ಸ್ಟೇಡಿಯಂ ಲೋಕಾರ್ಪಣೆ; ಸತ್ಯಸಾಯಿ ಗ್ರಾಮದಲ್ಲಿ ಸಚಿನ್-ಯುವಿ ತಂಡಗಳ ನಡುವೆ ಕ್ರಿಕೆಟ್ ಕಾಳಗ

    ನೂತನ ಸಾಯಿಕೃಷ್ಣನ್ ಸ್ಟೇಡಿಯಂ ಲೋಕಾರ್ಪಣೆ; ಸತ್ಯಸಾಯಿ ಗ್ರಾಮದಲ್ಲಿ ಸಚಿನ್-ಯುವಿ ತಂಡಗಳ ನಡುವೆ ಕ್ರಿಕೆಟ್ ಕಾಳಗ

    ಚಿಕ್ಕಬಳ್ಳಾಪುರ: ʻಒಂದು ಜಗತ್ತು-ಒಂದು ಕುಟುಂಬʼ (One World- One Family) ಘೋಷ ವಾಕ್ಯದಡಿ ಶ್ರೀ ಸದ್ಗುರು ಮಧುಸೂದನಸಾಯಿ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಬಳಿ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಕ್ರಿಕೆಟ್ ದಿಗ್ಗಜರ ಕಾಳಗ ನಡೆಯುತ್ತಿದೆ.

    ಸತ್ಯಸಾಯಿ ಗ್ರಾಮದಲ್ಲಿ ನೂತನ ಸಾಯಿಕೃಷ್ಣನ್ ಸ್ಟೇಡಿಯಂ (Sai Krishnan Cricket Stadium) ಲೋಕಾರ್ಪಣೆ ಅಂಗವಾಗಿ ಒಂದು ಜಗತ್ತು ಹಾಗೂ ಒಂದು ಕುಟುಂಬ ಎಂಬ (ಒನ್ ವರ್ಲ್ಡ್-ಒನ್ ಫ್ಯಾಮಿಲಿ ಕಪ್) ಟಿ20 ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಸಾಯಿಕೃಷ್ಣನ್ ಕ್ರೀಡಾಂಗಣವನ್ನು ಸದ್ಗುರು ಮಧುಸೂದನಸಾಯಿ ಜೊತೆ ಸಚಿನ್ ತೆಂಡೂಲ್ಕರ್ (Sachin Tendulkar) ಹಾಗೂ ಯುವರಾಜ್ ಸಿಂಗ್ (Yuvraj Singh) ಲೋಕಾರ್ಪಣೆ ಮಾಡಿದ್ದಾರೆ. ಈ ಟೂರ್ನಿಯಲ್ಲಿ ಕ್ರಿಕೆಟ್‌ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಹಾಗೂ ಯುವರಾಜ್ ಸಿಂಗ್ ನಾಯಕತ್ವದಡಿ 8 ದೇಶಗಳ 24 ಮಂದಿ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಇದನ್ನೂ ಓದಿ: ನಾಯಕನಾಗಿ ಸಿಕ್ಸರ್‌ಗಳಿಂದಲೇ ಹೊಸ ದಾಖಲೆ – ನಂ.1 ಪಟ್ಟಕ್ಕೇರಿದ ರೋಹಿತ್‌ ಶರ್ಮಾ

    ಟಾಸ್ ಗೆದ್ದ ಒನ್ ವರ್ಲ್ಡ್ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಯುವರಾಜ್ ಸಿಂಗ್ ನಾಯಕತ್ವದ ಒನ್‌ ಫ್ಯಾಮಿಲಿ ತಂಡ ಬ್ಯಾಟಿಂಗ್ ನಡೆಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಯುವಿ ನಾಯಕತ್ವದ ಒನ್ ಫ್ಯಾಮಿಲಿ ತಂಡ 20 ಒವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180 ರನ್ ಗಳನ್ನ ಗಳಿಸಿದೆ. ಸಚಿನ್ ತೆಂಡೂಲ್ಕರ್ ನೇತೃತ್ವದ ಒನ್‌ ವರ್ಲ್ಡ್ ತಂಡಕ್ಕೆ 181 ರನ್ ಗಳ ಗುರಿ ನೀಡಲಾಗಿದೆ. ಅಂದಹಾಗೆ ವಸುಧೈವ ಕುಟುಂಬಕಂ ಅನ್ನೋ ಮಾತಿಗೆ ಸಾಕ್ಷಿಭೂತವೆಂಬಂತೆ ಭಾರತದ ಸನಾತನ ಸಂಸ್ಕೃತಿಯನ್ನ ಸಾರುವ ವಿಶ್ವಕ್ಕೆ ಮಾನವೀಯತೆಯ ಸಂದೇಶ ಸಾರುವ ಸಲುವಾಗಿ ಈ ಒಂದು ಟೂರ್ನಿಯನ್ನ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ 2 ಸೂಪರ್ ಓವರ್ ಥ್ರಿಲ್ಲರ್ – ಟೀಂ ಇಂಡಿಯಾಗೆ ರೋಚಕ ಗೆಲುವು

    ಒನ್ ಫ್ಯಾಮಿಲಿ ತಂಡದ ಸ್ಕೋರ್‌ ಕಾರ್ಡ್‌: ಡ್ಯಾರೆನ್ ಮ್ಯಾಡಿ 51 ರನ್‌ (41 ಎಸೆತ, 8 ಬೌಂಡರಿ), ರೋಮೇಶ್ ಕಲುವಿತಾರಣ 22 ರನ್‌ (15 ಎಸೆತ, 4 ಬೌಂಡರಿ), ಮೊಹಮ್ಮದ್ ಕೈಫ್ 9 ರನ್‌, ಪಾರ್ಥಿವ್ ಪಟೇಲ್ 19 ರನ್‌ (13 ಎಸೆತ, 3 ಬೌಂಡರಿ), ಯೂಸುಫ್ ಪಠಾಣ್ 38 ರನ್‌ (23, 4 ಸಿಕ್ಸರ್‌, 1 ಬೌಂಡರಿ), ಯುವರಾಜ್ ಸಿಂಗ್ 23 ರನ್‌ (10 ಎಸೆತ, 2 ಸಿಕ್ಸರ್‌, 2 ಬೌಂಡರಿ), ಜೇಸನ್ ಕ್ರೆಜ್ಜಾ 2 ರನ್‌ ಹಾಗೂ ಅಲೋಕ್ ಕಪಾಲಿ 1 ರನ್‌ ಗಳಿಸಿದ್ರೆ, ಹೆಚ್ಚುವರಿ 15 ರನ್‌ ತಂಡಕ್ಕೆ ಸೇರ್ಪಡೆಯಾಯಿತು. ಇದನ್ನೂ ಓದಿ: ರೋಹಿತ್ ಶತಕ, ರಿಂಕು ಹಾಫ್ ಸೆಂಚುರಿ, ವಿರಾಟ್ ಕೊಹ್ಲಿ 0- ಆಫ್ಘನ್‍ಗೆ 213 ರನ್ ಟಾರ್ಗೆಟ್