Tag: ಯುವರಾಜ್

  • ಯುವ ಡಿವೋರ್ಸ್‌ ಕೇಸ್‌ – ಆ.23ಕ್ಕೆ ಮುಂದೂಡಿಕೆ- ಕೋರ್ಟ್‌ನಲ್ಲಿ ಇಂದೇನಾಯ್ತು?

    ಯುವ ಡಿವೋರ್ಸ್‌ ಕೇಸ್‌ – ಆ.23ಕ್ಕೆ ಮುಂದೂಡಿಕೆ- ಕೋರ್ಟ್‌ನಲ್ಲಿ ಇಂದೇನಾಯ್ತು?

    ಬೆಂಗಳೂರು: ಸ್ಯಾಂಡಲ್‌ವುಡ್‌ ನಟ (Sandalwood Actor) ಯುವ ರಾಜ್‌ಕುಮಾರ್‌ (Yuva Rajkumar) ಸಲ್ಲಿಸಿದ್ದ ವಿಚ್ಚೇದನ (Divorce) ಅರ್ಜಿ ವಿಚಾರಣೆ ಆಗಸ್ಟ್‌ 23ಕ್ಕೆ ಮುಂದೂಡಿಕೆಯಾಗಿದೆ.

    ಇಂದು 1 ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕಲ್ಪನಾ ಅವರಿದ್ಧ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ವಿಚ್ಚೇದನ ಅರ್ಜಿಗೆ ಯುವ ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಅವರ ಪರ ವಕೀಲರು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು.

    ಈ ಮನವಿಗೆ ನ್ಯಾಯಾಧೀಶರು, ಇದು ಕೌಟುಂಬಿಕ ಕಲಹವಾಗಿರುವ ಕಾರಣ ಮಿಡಿಯೇಷನ್ ಕೌನ್ಸಿಲಿಂಗ್ ಮುಕ್ತಾಯವಾಗಲಿ. ಮೊದಲು ಕೌನ್ಸಿಲಿಂಗ್‌ ಮುಕ್ತಾಯವಾಗಬೇಕು.ಕೌನ್ಸಿಲಿಂಗ್‌ ಮುಕ್ತಾಯದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು. ಬಳಿಕ ವಿಚ್ಚೇದನದ ಆಕ್ಷೇಪಣೆ ಕೇಳುವುದಾಗಿ ನ್ಯಾಯಾಧೀಶರು ಹೇಳಿದರು. ಇದನ್ನೂ ಓದಿ: ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೂ ನನ್ನ ದಾರಿಗೆ ಏನೇ ಎದುರಾದರೂ ಹೆದರಲ್ಲ: ಯುವ ಪತ್ನಿ ಶ್ರೀದೇವಿ

    ಅಂತಿಮವಾಗಿ ಕೋರ್ಟ್‌ ಆಗಸ್ಟ್ 23ಕ್ಕೆ ಮಿಡಿಯೇಷನ್ ದಿನಾಂಕ ನಿಗದಿ ಮಾಡಿ ವಿಚಾರಣೆ ಮುಂದೂಡಿತು.

     

  • ಅಜ್ಜಿ ಇಲ್ಲ ಅನ್ನೋದು ತುಂಬಾ ದುಃಖ ಆಗ್ತಿದೆ- ಯುವರಾಜ್

    ಅಜ್ಜಿ ಇಲ್ಲ ಅನ್ನೋದು ತುಂಬಾ ದುಃಖ ಆಗ್ತಿದೆ- ಯುವರಾಜ್

    ನ್ನಡ ಚಿತ್ರರಂಗದ ಮೇರು ನಟಿ ಲೀಲಾವತಿ (Leelavathi) ಅವರು ನಿಧನರಾಗಿ ಎರಡು ದಿನಗಳು ಕಳೆದಿದೆ. ಈ ಬೆನ್ನಲ್ಲೇ, ಅಜ್ಜಿ ಲೀಲಾವತಿ ಜೊತೆಗಿನ ಒಡನಾಟದ ಬಗ್ಗೆ ವಿನೋದ್ (Vinod Raj) ಪುತ್ರ ಯುವರಾಜ್ (Yuvaraj) ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಮಗನ ವಿದ್ಯಾಭ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟಿದ್ವಿ- ವಿನೋದ್ ರಾಜ್

    ಅಜ್ಜಿ ಇಲ್ಲ ಅನ್ನೋದು ತುಂಬಾ ದುಃಖ ಆಗ್ತಿದೆ. ಅಪ್ಪನನ್ನು ನೋಡಿದ್ರೆ ತುಂಬಾ ಬೇಸರ ಆಗುತ್ತದೆ. ಈ ವಯಸ್ಸಿನಲ್ಲೂ ಅಜ್ಜಿ ಜೊತೆ ಈಗಲೂ ಅಪ್ಪನಿಗೆ ತುಂಬಾ ಪ್ರೀತಿ ಇದೆ. ಅಪ್ಪನ ಸ್ಥಿತಿ ನೋಡಿದ್ರೆ, ತುಂಬಾ ಕಷ್ಟ ಆಗ್ತಿದೆ. ನನ್ನ ವಿದ್ಯಾಭ್ಯಾಸದ ಬಗ್ಗೆ ನಿರ್ಧಾರವನ್ನ ಅಜ್ಜಿನೇ ತೀರ್ಮಾನ ಮಾಡ್ತಿದ್ದರು. ಈಗ ಅವರಿಲ್ಲ, ಒಂಟಿ ಅಂತ ಅನಿಸುತ್ತಿದೆ.

    ಒಳ್ಳೆಯ ಮಗನಾಗಿ ಎಲ್ಲರಿಗೂ ಸಹಾಯ ಮಾಡಬೇಕು. ಅಪ್ಪ ಯಾವಾಗಲೂ ಒಂದು ಮಾತು ಹೇಳ್ತಾರೆ, ಅಮ್ಮನ ಚೆನ್ನಾಗಿ ನೋಡಿಕೋ ಅಂತ. ಆ ಮಾತು ನನಗೆ ತುಂಬಾ ಇಷ್ಟ ಆಗುತ್ತೆ. ಅಜ್ಜಿಯಿಂದಲೇ ಕನ್ನಡ ಕಲಿತ್ತಿದ್ದು, ಅವರು ಇದಿದ್ರೆ ಇನ್ನೂ ಜಾಸ್ತಿ ಕನ್ನಡ ಕಲಿಯುತ್ತಿದ್ದೆ ಎಂದಿದ್ದಾರೆ ಯುವರಾಜ್.

    ಅಜ್ಜಿ ತುಂಬಾ ಜನಸೇವೆ ಮಾಡಿದ್ದಾರೆ. ಅವರ ಕನಸನ್ನ ಅಪ್ಪ ಈಡೇರಿಸಿದ್ದಾರೆ. ಅಜ್ಜಿ, ಅಪ್ಪನ ದಾರಿಯಲ್ಲಿ ನಡೆಯುತ್ತೇನೆ. ಸಹಾಯ ಮಾಡಬೇಕು ಆದರೆ ನನ್ನ ಹೆಸರು ಎಲ್ಲೂ ಕೇಳಿಬರಬಾರದು ಎಂದು ಕಲಿತ್ತೇನೆ ಮುಂದೆ ಅದನ್ನೇ ಮಾಡುತ್ತೇನೆ ಎಂದು ಯುವರಾಜ್ ಮಾತನಾಡಿದ್ದಾರೆ. ಇದನ್ನೂ ಓದಿ:ಕಳಪೆ ಎಂದು ಜೈಲಿಗಟ್ಟಿದ ವಿನಯ್‌ ಮುಂದೆಯೇ ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡ ಕಾರ್ತಿಕ್‌

    ನಟಿ ಲೀಲಾವತಿ (Leelavathi) ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡ್ಮೂರು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.

  • ಅಜ್ಜಿ ಬಗ್ಗೆ ಮೊಮ್ಮಗ ಯುವರಾಜ್ ಪ್ರತಿಕ್ರಿಯೆ

    ಅಜ್ಜಿ ಬಗ್ಗೆ ಮೊಮ್ಮಗ ಯುವರಾಜ್ ಪ್ರತಿಕ್ರಿಯೆ

    ನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Leelavathi) ಸೋಲದೇವನಹಳ್ಳಿ ತೋಟದಲ್ಲಿ ಇಂದು (ಡಿ.9) ಲೀಲಾವತಿ ಅಂತ್ಯಸಂಸ್ಕಾರ ನೆರವೇರಿದೆ. ಈ ಬೆನ್ನಲ್ಲೇ, ಅಜ್ಜಿ ಲೀಲಾವತಿ ಜೊತೆಗಿನ ಬಾಂಧವ್ಯದ ಬಗ್ಗೆ ಮೊಮ್ಮಗ ಯುವರಾಜ್ (Yuvaraj) ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಅಜ್ಜಿಯ ಜೊತೆ ಒಡನಾಟ ಚೆನ್ನಾಗಿತ್ತು. ನಮ್ಮ ಅಜ್ಜಿ ಆತ್ಮಕ್ಕೆ ಶಾಂತಿ ಸಿಗಲಿ. ಕೊನೆಯದಾಗಿ ಕೆಲ ದಿನಗಳ ಹಿಂದೆ ಮನೆಗೆ ಬಂದಾಗ ಅಜ್ಜಿಯನ್ನ ನೋಡಿದ್ದೆ. ನಾನು ದೂರ ಹೋಗುವವರೆಗೆ ನನ್ನನ್ನ ನೋಡಿದ್ದರು ಎಂದು ಕಡೆಯ ಭೇಟಿಯ ಬಗ್ಗೆ ಮೊಮ್ಮಗ ಯುವರಾಜ್ ಸ್ಮರಿಸಿದ್ದಾರೆ.

    ಅಂತ್ಯಕ್ರಿಯೆ ಮುಕ್ತಾಯದ ಬಳಿಕ ವಿನೋದ್ ರಾಜ್ (Vinod Raj) ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮುಗಿದಿದೆ. ನಾಳೆ ಹಾಲು ತುಪ್ಪ ಇರಲಿದೆ. 11 ದಿನದ ಕಾರ್ಯ ಬಗ್ಗೆ ತೀರ್ಮಾನ ಮಾಡಿ ಹೇಳುತ್ತೇವೆ. ಇಡೀ ರಾಜ್ಯದ ಜನತೆಗೆ ಸರ್ಕಾರಕ್ಕೆ ನಮನ ಸಲ್ಲಿಸುತ್ತೇವೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಸೋಲದೇವನಹಳ್ಳಿ ತೋಟದಲ್ಲಿ ಲೀಲಾವತಿ ಅಂತಿಮ ಸಂಸ್ಕಾರ

    ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.

  • ಲೀಲಾವತಿ ಅಂತಿಮ ದರ್ಶನಕ್ಕೆ ಬಂದ ಮೊಮ್ಮಗ ಮತ್ತು ಸೊಸೆ

    ಲೀಲಾವತಿ ಅಂತಿಮ ದರ್ಶನಕ್ಕೆ ಬಂದ ಮೊಮ್ಮಗ ಮತ್ತು ಸೊಸೆ

    ಗಲಿದ ಹಿರಿಯ ಚೇತನ ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ ಲೀಲಾವತಿ ಅವರ ಸೊಸೆ, ಅಂದರೆ ವಿನೋದ್ ರಾಜ್ ಅವರ ಪತ್ನಿ ಅನು (Anu) ಮತ್ತು ಲೀಲಾವತಿ (Leelavati) ಮೊಮ್ಮಗ  ಯುವರಾಜ್ (Yuvraj) ಆಗಮಿಸಿದ್ದಾರೆ. ನಿನ್ನೆ ರಾತ್ರಿಯೇ ಅವರು ಚೆನ್ನೈನಿಂದ ಹೊರಟು ನೆಲಮಂಗಲ ತಲುಪಿ, ಇಂದು ಅಂತಿಮ ದರ್ಶನ ಪಡೆದಿದ್ದಾರೆ.

    ವಿನೋದ್ ರಾಜ್ (Vinod Raj) ಮದುವೆ ವಿಚಾರವಾಗಿ ಹಲವಾರು ಗೊಂದಲಗಳು ಇದ್ದವು. ತಾಯಿಗಾಗಿ ವಿನೋದ್ ಮದುವೆ ಆಗದೇ, ತಾಯಿಯ ಸೇವೆಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ವಿನೋದ್ ರಾಜ್ ಮದುವೆ ಆಗಿರುವ ಸುದ್ದಿಯನ್ನು ನಿರ್ದೇಶಕರೊಬ್ಬರು ಫೋಟೋ ಸಮೇತ ವಿವರಿಸಿದ್ದರು. ವಿನೋದ್ ರಾಜ್ ಮದುವೆ ವಿಚಾರವನ್ನು ಸ್ವತಃ ಲೀಲಾವತಿ ಮತ್ತು ವಿನೋದ್ ರಾಜ್ ಕೂಡ ಒಪ್ಪಿಕೊಂಡಿದ್ದರು.

    ಗಣ್ಯರ ದರ್ಶನ ನಂತರ ಅಂತ್ಯಕ್ರಿಯೆ

    ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅಂತಿಮ ಸಂಸ್ಕಾರವನ್ನು (Cremation) ಅವರ ನೆಚ್ಚಿನ ತೋಟದಲ್ಲಿ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ನೆಲಮಂಗಲದ ಸೋಲದೇವನಹಳ್ಳಿ (Soladevanahalli) ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ.

    ಈಗಾಗಲೇ ಜೆಸಿಬಿ ಮೂಲಕ ಫಾರ್ಮ್‌ಹೌಸ್‌ನಲ್ಲಿ ಸಮಾಧಿ ತೆಗೆಯುವ ಕಾರ್ಯ ಆರಂಭಗೊಂಡಿದ್ದು, ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆಗೆ ತರಯಾರಿ ಶುರುವಾಗಿದೆ. ಮತ್ತೊಂದೆಡೆ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್‌ ಅಧಿಕಾರಿಗಳು ಬರುವ ಗಣ್ಯರಿಗೆ ಅಂತಿಮ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.

     

    ಬೆಳಗ್ಗೆ 9:30ರ ವರೆಗೆ ಸಾರ್ವಜನಿಕರಿಗೆ ಪಾರ್ಥಿವ ಶರೀರ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೈದಾನ ಸುತ್ತ ಪೊಲೀಸ್ ಭದ್ರತೆ ಹೆಚ್ಚಳ ಮಾಡಲಾಗಿದೆ. ಬೆಳಗ್ಗೆಯಿಂದಲೇ ಸಾರ್ವಜನಿಕರು ದರ್ಶನ ಪಡೆಯುತ್ತಿದ್ದು, ಎಲ್ಲರೂ ಲೀಲಾವತಿ ಅವರ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ. ಬೆಳಗ್ಗೆ 11 ಗಂಟೆ ವೇಳೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಲಿದ್ದಾರೆ. ಇತರ ಗಣ್ಯರೂ ಅಂತಿಮ ದರ್ಶನ ಪಡೆದ ಬಳಿಕ ಅಂತ್ಯಕ್ರಿಯೆ ಕಾರ್ಯ ನೆರವೇರಲಿದೆ

  • ಒಂದೇ ತಂಡದ ಪರ ಕ್ರಿಕೆಟ್ ಆಡಲಿದ್ದಾರೆ ಯುವರಾಜ್, ಗೇಲ್, ಎಬಿಡಿ

    ಒಂದೇ ತಂಡದ ಪರ ಕ್ರಿಕೆಟ್ ಆಡಲಿದ್ದಾರೆ ಯುವರಾಜ್, ಗೇಲ್, ಎಬಿಡಿ

    ಸಿಡ್ನಿ: ಭಾರತದ ತಂಡದ ಮಾಜಿ ಅಟಗಾರ ಯುವರಾಜ್ ಸಿಂಗ್, ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಆಸ್ಟ್ರೇಲಿಯಾದ ಕ್ರಿಕೆಟ್ ಕ್ಲಬ್ ಪರ ಒಂದೇ ತಂಡದಲ್ಲಿ ಆಡುವ ಕುರಿತು ವರದಿಯಾಗಿದೆ.

    ಸ್ಟಾರ್ ಕ್ರಿಕೆಟರ್‍ ಗಳಾಗಿ ಮಿಂಚಿರುವ ಈ ಮೂರು ಆಟಗಾರರಲ್ಲಿ ಯುವರಾಜ್ ಸಿಂಗ್ ಮತ್ತು ಎಬಿಡಿ ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ನೀಡಿದ್ದಾರೆ. ಗೇಲ್ ಮಾತ್ರ ಸದ್ಯ ವೆಸ್ಟ್ ಇಂಡೀಸ್ ತಂಡದ ಪರ ಆಡುತ್ತಿದ್ದಾರೆ. ಇದೀಗ ಈ ಮೂರು ಆಟಗಾರರು ಕೂಡ ಆಸ್ಟ್ರೇಲಿಯಾದ ಮೆಲ್ಬರ್ನ್‍ನ ಕ್ರಿಕೆಟ್ ಕ್ಲಬ್ ಪರ ಜೊತೆಯಾಗಿ ಆಡುವ ಸಾಧ್ಯತೆಗಳಿವೆ ಎಂದು ಮುಲ್ಗ್ರೇವ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಮಿಲನ್ ಪುಲ್ಲನಾಯೆಗಮ್ ಹೇಳಿಕೆ ನೀಡಿದ್ದಾರೆ. ದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ

    ಸನತ್ ಜಯಸೂರ್ಯ ಕ್ಲಬ್ ತಂಡದಲ್ಲಿ ಕಾರ್ಯನಿರ್ವಹಿಸುವುದು ಈಗಾಗಲೇ ಖಚಿತವಾಗಿದ್ದು, ಶ್ರೀಲಂಕಾದ ತಿಲಕರತ್ನೆ ದಿಲ್ಶನ್, ಉಪುಲ್ ತರಂಗಾ ಸೇರಿದಂತೆ ನಾವು ಇತರ ಕೆಲವು ಪ್ರಮುಖ ಆಟಗಾರರೊಂದಿಗೆ ಒಪ್ಪಂದಗಳನ್ನು ಅಂತಿಮಗೊಳಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಕ್ಲಬ್ ಪರ ಆಡಲು ಕೆಲ ಆಟಗಾರರನ್ನು ಕರೆತರಲು ಹಲವು ಪ್ರಯತ್ನಗಳು ನಡೆಯುತ್ತಿವೆ ಎಂದು ಪುಲ್ಲೆನಾಯಗಮ್ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಐಪಿಎಲ್ ಬಳಿಕ ಯುಎಇನಲ್ಲಿ ಟಿ20 ವಿಶ್ವಕಪ್ ಫಿಕ್ಸ್?

    ಮುಲ್ಗ್ರೇವ್ ಕ್ರಿಕೆಟ್ ಕ್ಲಬ್ ಈಗಾಗಲೇ ಶ್ರೀಲಂಕಾದ ದಿಲ್ಶನ್ ಮತ್ತು ತರಂಗಾ ಅವರನ್ನು ಕ್ಲಬ್ ಪರ ಆಡಲು ಸಂಪರ್ಕಿಸಿದೆ. ಮುಂದಿನ ಬೇಸಿಗೆಯಲ್ಲಿ ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಕ್ಲಬ್ ತಂಡ ರೂಪುಗೊಳ್ಳಲಿದೆ. ಜಯಸೂರ್ಯ ಈ ಕ್ಲಬ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇವರೊಂದಿಗೆ ಬ್ರಿಯಾನ್ ಲಾರಾ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಲು ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮವೊಂದು ಸುದ್ದಿ ಬಿತ್ತರಿಸಿದೆ.

  • ಶಾಕುಂತಲೆ ‘ಕೋಟಿ’ ರಹಸ್ಯ – ‘ಡೀಲ್ ಸ್ಟಾರ್’ ಯುವರಾಜನ ಜಾಲದಲ್ಲಿ ರಾಧಿಕಾ?

    ಶಾಕುಂತಲೆ ‘ಕೋಟಿ’ ರಹಸ್ಯ – ‘ಡೀಲ್ ಸ್ಟಾರ್’ ಯುವರಾಜನ ಜಾಲದಲ್ಲಿ ರಾಧಿಕಾ?

    – ಲೆಕ್ಕ ತಪ್ಪಿದ ಸ್ಯಾಂಡಲ್‍ವುಡ್ ಸ್ವೀಟಿಗೆ ತಪ್ಪಿದ್ದಲ್ಲ ಸಂಕಷ್ಟ?
    – ರಾಧಿಕಾ ಕುಮಾರಸ್ವಾಮಿ ಕೋಟಿ ರಹಸ್ಯ

    ಬೆಂಗಳೂರು: ವಂಚಕ ಯುವರಾಜನ ಬಳಿಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹಣ ಪಡೆದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಯುವರಾಜನ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ನಟಿ ರಾಧಿಕಾ ಕುಮಾರಸ್ವಾಮಿ, ಐತಿಹಾಸಿಕ ಕಥೆಯುಳ್ಳ ನಾಟ್ಯರಾಣಿ ಶಕುಂತಲೆ ಸಿನಿಮಾಗಾಗಿ 75 ಲಕ್ಷ ರೂ. ಪಡೆದಿರೋದಾಗಿ ಹೇಳಿದ್ದರು. ಯುವರಾಜ್ 15 ಲಕ್ಷ ನೀಡಿದ್ರೆ, ಮತ್ತೊಬ್ಬರ ಖಾತೆಯಿಂದ 60 ಲಕ್ಷ ಜಮೆ ಆಗಿತ್ತು ಅಂತ ಹೇಳಿದ್ದರು.

    ರಾಧಿಕಾ ಹೇಳಿಕೆ ಬೆನ್ನಲ್ಲೇ ಸಿಸಿಬಿ ವಿಚಾರಣೆ ನಡೆಸಿ ಕೆಲ ಮಾಹಿತಿಯನ್ನ ಪಡೆದುಕೊಂಡಿತ್ತು. ಈ ವೇಳೆ ಯುವರಾಜ್ ಮತ್ತು ರಾಧಿಕಾ ಇಬ್ಬರನ್ನ ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ನಡೆಸಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಇದೀಗ ರಾಧಿಕಾ ಕುಮಾರಸ್ವಾಮಿ ಶಕುಂತಲೆ ಸಿನಿಮಾಗಾಗಿ ಬರೋಬ್ಬರಿ 1 ಕೋಟಿ 25 ಲಕ್ಷ ರೂಪಾಯಿ ಪಡೆದಿರುವ ಎಕ್ಸ್ ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಯುವರಾಜ್ ನಿಂದ ರಾಧಿಕಾ ಕುಮಾರಸ್ವಾಮಿ ಪಡೆದ ಹಣವನ್ನೆಲ್ಲಾ ಜಪ್ತಿ ಮಾಡಿರುವ ಸಿಸಿಬಿ ಪೊಲೀಸರು ನ್ಯಾಯಾಲಯದ ಸುಪರ್ದಿಗೆ ನೀಡಲು ಸಿದ್ಧತೆ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ 75 ಲಕ್ಷ ರೂ. ಹಣ ಪಡೆಯಲಾಗಿದೆ ಎಂದು ರಾಧಿಕಾ ಹೇಳಿದ್ದರು. ಈಗ ರಾಧಿಕಾ ಸುಳ್ಳು ಹೇಳಿದ್ರಾ ಅನ್ನೋ ಪ್ರಶ್ನೆಯೊಂದು ಉತ್ತರವನ್ನು ಹುಡುಕುತ್ತಿದೆ. ಯುವರಾಜ್ ವಿರುದ್ಧ ದೂರು ಸಲ್ಲಿಸಿರುವ ಮೈಸೂರಿನ ವಿಜಯ್ ಎಂಬವರು ರಾಧಿಕಾರ ಖಾತೆಗೆ 60 ಲಕ್ಷ ಹಣ ಜಮೆ ಮಾಡಿದ್ರು ಎನ್ನಲಾಗಿದೆ.

    ದೂರುದಾರನ ಖಾತೆಯಿಂದಲೇ ಹಣ ಬಂದಿದ್ದರಿಂದ ರಾಧಿಕಾ ಕುಮಾರಸ್ವಾಮಿ ಸಂಕಷ್ಟದಲ್ಲಿ ಸಿಲುಕಿಕೊಳ್ತಾರಾ ಅನ್ನೋ ಚರ್ಚೆಗಳು ಆರಂಭಗೊಂಡಿವೆ. ಇದೀಗ ಪತ್ತೆಯಾಗಿರುವ ಹೆಚ್ಚುವರಿ 50 ಲಕ್ಷ ರೂ.ಗಾಗಿ ಸಿಸಿಬಿ ಮತ್ತೊಮ್ಮೆ ರಾಧಿಕಾ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

  • ನಟಿ ರಾಧಿಕಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಯುವರಾಜ್ ಜೊತೆಗೆ ಸ್ವೀಟಿಗೂ ಕಂಟಕ ಫಿಕ್ಸಾ?

    ನಟಿ ರಾಧಿಕಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಯುವರಾಜ್ ಜೊತೆಗೆ ಸ್ವೀಟಿಗೂ ಕಂಟಕ ಫಿಕ್ಸಾ?

    ಬೆಂಗಳೂರು: ವಂಚಕ ಯುವರಾಜ್ ಪುರಾಣದ ಮತ್ತೊಂದು ಅಧ್ಯಾಯ ಬಯಲಾಗಿದ್ದು, ರಾಧಿಕಾ ಕುಮಾರಸ್ವಾಮಿ 15+60 ಲಕ್ಷ ಕೇಸ್‍ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ನಾನು ನಾಟ್ಯರಾಣಿ ಶಾಂತಲೆ ಸಿನಿಮಾ ಒಪ್ಪಿಕೊಂಡಿದ್ದೆ. ಯುವರಾಜ್ ಕಡೆಯಿಂದ 75 ಲಕ್ಷ ಕೂಡ ಬಂದಿತ್ತು. 15 ಲಕ್ಷ ಯುವರಾಜ್ ಕೊಟ್ಟಿದ್ದ, 60 ಲಕ್ಷ ಬೇರೆಯವರು ಹಾಕಿದ್ದು. ಕೇಳಿದ್ರೆ ನಮ್ಮ ಭಾವ ಹಾಕಿದ್ದು ಅಂತ ಯುವರಾಜ್ ಹೇಳಿರುವುದಾಗಿ ರಾಧಿಕಾ ತಿಳಿಸಿದ್ದರು.

    ರಾಧಿಕಾ ಅವರ ಈ ಹೇಳಿಕೆ ಬೆನ್ನತ್ತಿದ ಸಿಸಿಬಿಗೆ ಬೇರೆಯದ್ದೇ ಸತ್ಯ ಕಂಡಿದೆ. ರಾಧಿಕಾ ಖಾತೆಗೆ 60 ಲಕ್ಷ ಹಾಕಿದ್ದು ಯಾರು ಎಂಬ ಸೀಕ್ರೇಟ್ ಬಯಲಾಗಿದೆ. ರಾಧಿಕಾ ಖಾತೆಗೆ 60 ಲಕ್ಷ ಹಾಕಿದ್ದು ಯುವರಾಜ್ ಭಾವ ಅಲ್ಲ. ಸ್ವೀಟಿ ರಾಧಿಕಾಗೆ ಹಣ ಕೊಟ್ಟಿದ್ದು ಬೇರೆ ಯಾರು ಅಲ್ಲ ಯುವರಾಜ್‍ನಿಂದ ಮೋಸ ಹೋದ ಮೈಸೂರಿನ ರವಿ.

    ಸ್ಲಂ ಬೋರ್ಡ್ ಗೆ ಅಧ್ಯಕ್ಷ ಮಾಡ್ತೀನಿ ಅಂತ ರವಿಗೆ 6 ಕೋಟಿ ದೋಖಾ ಮಾಡಿದ್ದಾನೆ. 6 ಕೋಟಿಯಲ್ಲಿ 60 ಲಕ್ಷ ಹಣ ನಟಿ ರಾಧಿಕಾ ಖಾತೆಗೆ ವರ್ಗಾವಣೆಯಾಗಿದೆ. 6 ಕೋಟಿ ಕಳೆದುಕೊಂಡಿದ್ದ ಮೈಸೂರು ರವಿಯಿಂದ ಸಿಸಿಬಿಗೆ ದೂರು ನೀಡಲಾಗಿದೆ. ಸದ್ಯ ಈ ವಂಚನೆಯಲ್ಲಿ ರಾಧಿಕಾ ಭಾಗಿ ಬಗ್ಗೆ ಸಿಸಿಬಿ ಶಂಕೆ ವ್ಯಕ್ತಪಡಿಸಿದ್ದು, ನಟಿ ರಾಧಿಕಾಗೆ ಸಂಕಷ್ಟ ಎದುರಾಗಲಿದ್ಯಾ ಎಂಬ ಪ್ರಶ್ನೆ ಮೂಡಿದೆ.

  • ರಾಜಕಾರಣಿ ಜೊತೆಗಿನ ರಾಧಿಕಾ ಕುಮಾರಸ್ವಾಮಿ ಫೋಟೋ ವೈರಲ್

    ರಾಜಕಾರಣಿ ಜೊತೆಗಿನ ರಾಧಿಕಾ ಕುಮಾರಸ್ವಾಮಿ ಫೋಟೋ ವೈರಲ್

    ಬೆಂಗಳೂರು: ಮಾಜಿ ಸಚಿವ ಮುರುಗೇಶ್ ನಿರಾಣಿ ಜೊತೆಗೆ ರಾಧಿಕಾ ಕುಮಾರಸ್ವಾಮಿ ಇರುವ ಫೋಟೋ ವೈರಲ್ ಆಗಿದೆ. ಯುವರಾಜ್ ಅಲಿಯಾಸ್ ಸ್ವಾಮಿ ವಂಚನೆ ಕೇಸ್‍ಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ವಂಚನೆ ಕೇಸ್‍ನಲ್ಲಿ ಯುವರಾಜ್‍ನನ್ನು ಈಗಾಗಲೇ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆಯಷ್ಟೇ ರಾಧಿಕಾ ಕುಮಾರಸ್ವಾಮಿ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಗಾಗಿದ್ದರು. ಯುವರಾಜ್ ಮೊಬೈಲ್‍ನಲ್ಲಿ ರಾಧಿಕಾ ಕುಮಾರಸ್ವಾಮಿ-ನಿರಾಣಿ ಜೊತೆಗಿರುವ ಫೋಟೋ ಪತ್ತೆಯಾಗಿದೆ ಎನ್ನಲಾಗಿದೆ. ರಾಧಿಕಾ ವಿಚಾರಣೆಗೆ ಹಾಜರಾದ ಮರುದಿನವೇ ನಿರಾಣಿ ಜೊತೆಗಿನ ಫೋಟೋ ಹರಿದಾಡುತ್ತಿದೆ.

    ಯುವರಾಜ್ ಅಲಿಯಾಸ್ ಸ್ವಾಮಿ ರಾಜಕಾರಣಿಗಳ ಜೊತೆಗೆ ಫೋಟೋದಲ್ಲಿದ್ದಾನೆ. ಉಪ ಮುಖ್ಯಮಂತ್ರಿ, ಸಚಿವರು, ಎಂಎಲ್‍ಸಿ ಜೊತೆಗೆ ಯುವರಾಜ್ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ. ಈ ಹಿಂದೆ ಯುವರಾಜ್ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಸನ್ಮಾನ ಮಾಡಿದ್ದನು. ಸಚಿವ ವಿ.ಸೋಮಣ್ಣ, ಎಂಎಲ್‍ಸಿ ಯೋಗೇಶ್ವರ್ ಜೊತೆಗೆ ಯುವರಾಜ್ ಫೋಟೋವನ್ನು ತೆಗೆಸಿಕೊಂಡಿದ್ದಾನೆ. ಕಾಂಗ್ರೆಸ್ ಉಸ್ತುವಾರಿ ಆಗಿದ್ದ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದಾನೆ. ಬೆಂಗಳೂರು ಪೊಲೀಸ್ ಅಯುಕ್ತರಾಗಿದ್ದ ಭಾಸ್ಕರ್ ರಾವ್ ಅವರಿಗೂ ಯುವರಾಜ ಸನ್ಮಾನ ಮಾಡಿದ್ದಾನೆ.

    ಯುವರಾಜ್ ವಂಚನೆ ಕೇಸ್‍ನಲ್ಲಿರುವ ರಾಧಿಕಾ ಕುಮಾರಸ್ವಾಮಿ ಪ್ರೆಸ್‍ಮೀಟ್ ನಡೆಸಿದ್ದರು. ಅಷ್ಟೊಂದು ಮೊತ್ತದ ಹಣ ನನ್ನ ಖಾತೆಗೆ ಬಂದಿಲ್ಲ. ಅವರು ನನಗೆ 17 ವರ್ಷಗಳಿಂದ ಗೊತ್ತು. ಸಿನಿಮಾ ವಿಚಾರವಾಗಿ ಭೇಟಿಯಾಗಿದ್ದೇವೆ ಬೇರೆ ಯಾವುದೇ ವ್ಯವಹಾರ ಇಲ್ಲ ಎಂದು ಹೇಳಿದ್ದರು. ನಂತರ ಸಿಸಿಬಿ ವಿಚಾರಗೆ ಬರುವಂತೆ ರಾಧಿಕಾ ಕುಮಾರ್ ಸ್ವಾಮಿಗೆ ನೋಟಿಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾಧಿಕಾ ಮತ್ತು ಯುವರಾಜ್‍ನಿಗೆ ವಿಚಾರಣೆ ನಡೆದಿತ್ತು. ಮತ್ತೊಮ್ಮೆ ವಿಚಾರಣೆಗೆ ಕರೆದರೆ ಬರುತ್ತೇನೆ ಎಂದು ನಗು ಮುಖದಿಂದ ರಾಧಿಕಾ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಹೇಳಿದ್ದರು. ಆದರೆ ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

  • 1.5 ಕೋಟಿ ಬಂದಿಲ್ಲ, ಸ್ವಾಮಿ ಖಾತೆಯಿಂದ ಬಂದಿರೋದು 15 ಲಕ್ಷ – ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ

    1.5 ಕೋಟಿ ಬಂದಿಲ್ಲ, ಸ್ವಾಮಿ ಖಾತೆಯಿಂದ ಬಂದಿರೋದು 15 ಲಕ್ಷ – ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ

    – ನಾಟ್ಯ ರಾಣಿ ಶಾಂತಲಾ ಸಿನಿಮಾಕ್ಕೆ ಮುಂಗಡ ಹಣ
    – ಸ್ವಾಮಿ ಬಾವನ ಖಾತೆಯಿಂದ 60 ಲಕ್ಷ ರೂ. ಜಮೆ
    – 17 ವರ್ಷಗಳಿಂದ ಸ್ವಾಮಿಗೂ ನಮ್ಮ ಕುಟುಂಬಕ್ಕೂ ಪರಿಚಯ
    – ನನ್ನ ಬಗ್ಗೆ ಸ್ವಾಮಿ ಹೇಳಿದ್ದ ಭವಿಷ್ಯ ನಿಜವಾಗಿತ್ತು

    ಬೆಂಗಳೂರು: ನನಗೆ ಯುವರಾಜ್‌ ಅವರ ಖಾತೆಯಿಂದ 15 ಲಕ್ಷ ರೂ.ಹಣ ಬಂದಿದೆ ಹೊರತು 1.5 ಕೋಟಿ ರೂ. ಹಣ ಬಂದಿಲ್ಲ ಎಂದು ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

    ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರ ಹೆಸರಲ್ಲಿ ವಂಚನೆ ಮಾಡಿ ಸದ್ಯ ಸಿಸಿಬಿಯಿಂದ ಬಂಧನಕ್ಕೆ ಒಳಗಾದ ಯುವರಾಜ್‌ ಅಲಿಯಾಸ್‌ ಸ್ವಾಮಿಯಿಂದ 1.5 ಕೋಟಿ ರೂ. ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ.

    ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು?
    1. ಸ್ವಾಮಿ ಮತ್ತು ನಮ್ಮ ಕುಟುಂಬಕ್ಕೆ ಸುಮಾರು 17 ವರ್ಷಗಳ ಪರಿಚಯ. ಈ ಹಿಂದೆ ನನ್ನ ತಂದೆಯವರಲ್ಲಿ ಒಂದು ಪೂಜೆ ಮಾಡಬೇಕು ಎಂದು ಹೇಳಿದ್ದರು. ಆ ಪೂಜೆಯನ್ನು ತಂದೆ ಮಾಡಿರಲಿಲ್ಲ. ಇದಾದ ಬಳಿಕ ತಂದೆಯವರು ಮೃತಪಟ್ಟರು. ಮೇ ತಿಂಗಳಿನಲ್ಲಿ ಪೂಜೆ ಮಾಡದ್ದಕ್ಕೆ ತಂದೆ ಮೃತಪಟ್ಟಿರಬಹುದು ಎಂಬ ಕೊರಗು ತಾಯಿಗೆ ಇತ್ತು. ಇದಾದ ನಂತರ ಅವರ ಜೊತೆ ಈ ವಿಚಾರಕ್ಕೆ ಮಾತನಾಡುತ್ತಿದ್ದೆ.

    2. ಐತಿಹಾಸಿಕಾ ಸಿನಿಮಾ ಮಾಡುವ ಕನಸು ನನ್ನಲ್ಲಿತ್ತು.  ನಾಟ್ಯ ರಾಣಿ ಶಾಂತಲಾ ಸಿನಿಮಾ ಮಾಡಲು ಸ್ವಾಮಿ ನನ್ನ ಜೊತೆ ಮಾತನಾಡಿದ್ದರು. ಈ ವೇಳೆ ನನ್ನ ಮಗಳ ಹೆಸರಿನಲ್ಲಿ ಬ್ಯಾನರ್‌ ತೆರೆದಿದ್ದೇನೆ. ನಿಮ್ಮ ಬ್ಯಾನರ್‌ ಮತ್ತು ನಮ್ಮ ಬ್ಯಾನರ್‌ ಅಡಿ ಸಿನಿಮಾ ಮಾಡುವ ಎಂದು ಹೇಳಿದ್ದರು. ಇದಕ್ಕೆ ನಾನು ಸಿನಿಮಾ ಮಾಡಿದರೆ ಒಂದೇ ಬ್ಯಾನರ್‌ನಲ್ಲಿ ಮಾಡಬೇಕು. ಎರಡು ಬ್ಯಾನರ್‌ ಜೊತೆಯಾಗಿ ಮಾಡುವುದು ಬೇಡ ಎಂದು ತಿಳಿಸಿದ್ದೆ. ಕೊನೆಗೆ ಅವರ ಮಗಳ ಬ್ಯಾನರ್‌ ಅಡಿ ಅಡಿಯಲ್ಲೇ ಸಿನಿಮಾ ಮಾಡುವ ಎಂದು ಹೇಳಿದ್ದರು. ಈ ಪ್ರಸ್ತಾಪಕ್ಕೆ ನಾನು ಒಪ್ಪಿಕೊಂಡೆ. ಈ ಸಂಬಂಧ ಮಾರ್ಚ್‌,  ಫೆಬ್ರವರಿ  ಮಧ್ಯೆ ನನ್ನ ಖಾತೆಗೆ ಮುಂಗಡವಾಗಿ 15 ಲಕ್ಷ ರೂ. ಹಾಕಿದರು. ಇದಾದ ಬಳಿಕ ಅವರ ಬಾವನ ಖಾತೆಯಿಂದ 60 ಲಕ್ಷ ರೂ. ಹಣ ನನ್ನ ಖಾತೆಗೆ ಬಂದಿದೆ. 1.50 ಕೋಟಿ ರೂ. ಹಣ ನನಗೆ ಬಂದಿಲ್ಲ.

    3. ನಾನು ಕಪ್ಪು ಹಣ ತೆಗೆದುಕೊಂಡಿಲ್ಲ. ಬ್ಯಾಂಕ್‌ ಖಾತೆಯ ಮೂಲಕ ಹಣ ವರ್ಗಾವಣೆಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳೋಣ ಎಂದು ಹೇಳುತ್ತಿದ್ದೆ. ಈ ವೇಳೆ ಅವರು ಈಗ ನಾನು ಬ್ಯುಸಿ ಇದ್ದೇನೆ ಎಂದು ಹೇಳಿದ್ದರು. ನಾನು ಕೊರೊನಾ ಕಾರಣದಿಂದ ಬೆಂಗಳೂರಿನಲ್ಲಿ ಇರಲಿಲ್ಲ. ಮಂಗಳೂರಿನಲ್ಲಿ ಇದ್ದೆ. ಹೀಗಾಗಿ ಭೇಟಿ ಮಾಡಿ ಒಪ್ಪಂದ ಮಾಡಲು ಸಾಧ್ಯವಾಗಿರಲಿಲ್ಲ.

    4. ನಮ್ಮ ಕುಟುಂಬದ ಜೊತೆ ಉತ್ತಮ ಸಂಬಂಧ ಇದ್ದ ಕಾರಣ ನಾನು ಅವರ ಬ್ಯಾನರ್‌ನಲ್ಲಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೆ. ಸಿನಿಮಾ ಬಿಟ್ಟರೆ ನನಗೂ ಅವರಿಗೂ ಬೇರೆ ಯಾವುದೇ ಸಂಬಂಧ ಇಲ್ಲ. ಯಾವುದೇ ವ್ಯವಹಾರ ನಡೆಸಿಲ್ಲ.

    5. ಸಿನಿಮಾದವರ ಜೊತೆ ರಾಜಕಾರಣಿಗಳ ಪರಿಚಯ ಇರುವುದು ಸಾಮಾನ್ಯ. ಸಿನಿಮಾ ರಿಲೀಸ್‌ ಅಥವಾ ಬೇರೆ ಯಾವುದೇ ಕಾರ್ಯಕ್ರಮ ಅವರನ್ನು ಕರೆಸುವ ಸಂಬಂಧ ಮಾತುಕತೆ ಮಾಡಿದ್ದೇನೆಯೇ ಹೊರತು ಬೇರೆ ಯಾವುದೇ ಮಾತುಕತೆ ನಡೆಸಿಲ್ಲ. ಬೇರೆ ಮಾತುಕತೆ ನಡೆಸಿದ್ದರೆ ದಾಖಲೆ ತೋರಿಸಿ.

    6. ಇಲ್ಲಿಯವರೆಗೆ ನಮಗೆ ಮೋಸ ಆಗಿದೆಯೋ ಹೊರತು ನಾವು ಯಾರಿಗೂ ಮೋಸ ಮಾಡಿಲ್ಲ. ಯಾರಿಗೂ ನಾನು ಅವರ ಜೊತೆ ಮಾತನಾಡಿ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿಲ್ಲ. ನೀವು ಅವರ ವಾಟ್ಸಪ್‌ ಡಿಪಿ ನೋಡಿದರೆ ಎಷ್ಟು ದೊಡ್ಡ ಜನರ ಜೊತೆ ಅವರ ಸಂಪರ್ಕವಿದೆ ಎಂಬುದನ್ನು ತಿಳಿಯಬಹುದು. ಅಷ್ಟು ದೊಡ್ಡ ದೊಡ್ಡ ವ್ಯಕ್ತಿಗಳೇ ಮೋಸ ಹೋಗಿರುವಾಗ ನಾವು ಮೋಸ ಹೋಗಿರುವುದು ಬಹಳ ಸಣ್ಣ ವಿಚಾರ.

    7. 60 ಲಕ್ಷ ಹಣವನ್ನು ಯಾರು ಹಾಕಿದ್ದಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಬ್ಯಾಂಕ್‌ ದಾಖಲೆಗಳಲ್ಲಿಇದೆ ಮತ್ತು ಇದು ವೈಟ್‌ ಮನಿ. ಅಷ್ಟೇ ಅಲ್ಲದೇ ಅವರು ಕುಟುಂಬ ಪರಿಚಯದ ವ್ಯಕ್ತಿ ಆಗಿದ್ದರು. ಒಂದು ಎರಡು ಬಾರಿ ಅವರ ಕುಟುಂಬ ಸದಸ್ಯರನ್ನು ಪರಿಚಯ ಮಾಡಿಸಿದ್ದರು. ಸ್ವಾಮಿಯವರು ನನ್ನ ಬಾವ ದುಡ್ಡನ್ನು ಜಮೆ ಮಾಡಿದ್ದಾರೆ ಎಂದು ನನಗೆ ತಿಳಿಸಿದ್ದರು. ಈ ಕಾರಣದಿಂದ ನಾನು ಹಣ ಹಾಕಿದ್ದು ಯಾರು? ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿರಲಿಲ್ಲ

    8. ನಾನು ಯಾವುದೇ ಸಿನಿಮಾಕ್ಕೆ ಒಪ್ಪಂದ ಮಾಡಿಕೊಂಡು ಹಣ ಪಡೆಯುವುದಿಲ್ಲ. ಬಾಯಿ ಮಾತಿನಲ್ಲೇ ಒಪ್ಪಿ ಡೇಟ್ಸ್‌ ಕೊಡುತ್ತೇನೆ. ಈ ಕಾರಣಕ್ಕೆ ಸಿನಿಮಾ ಮಾಡುವ ಮೊದಲೇ ಒಪ್ಪಂದ ಮಾಡಿಕೊಂಡಿರಲಿಲ್ಲ.

    9. 16 ವರ್ಷದ ಹಿಂದೆಯೇ ನನಗೆ ಹೆಣ್ಣು ಮಗು ಆಗುತ್ತದೆ ಎಂದು ಭವಿಷ್ಯ ಹೇಳಿದ್ದರು. ಅವರು ಹೇಳಿದ್ದ ಭವಿಷ್ಯ ನಿಜವಾಗಿತ್ತು. ಇದಾದ ಬಳಿಕ ಮನೆಯಲ್ಲಿ ಅವರು ಹೇಳಿದ ಪೂಜೆಗಳನ್ನು ಮಾಡುತ್ತಿದ್ದರು. ನನ್ನ ತಂದೆಯವರು ಸ್ವಾಮಿ ಅವರಿಗೆ ಈ ಹಿಂದೆ ಸಹಾಯ ಮಾಡಿದ್ದರು. ಹೀಗಾಗಿ ನಾನು ಅವರ ಜೊತೆ ನಂಬಿಕೆಯನ್ನು ಇಟ್ಟುಕೊಂಡಿದ್ದೆ. ಈಗ ಮಾಧ್ಯಮಗಳಲ್ಲಿ ಸುದ್ದಿ ನೋಡಿ ನನಗೆ ಒಮ್ಮೆ ಶಾಕ್‌ ಆಗಿದೆ. ಸ್ವಾಮಿ ಜೊತೆ ಸಿನಿಮ ಬಿಟ್ಟರೆ ಬೇರೆ ಯಾವುದೇ ವ್ಯವಹಾರಿಕಾ ಸಂಬಂಧ ಇಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಡೀಲಿಂಗ್‌ ಮಾಡಿಲ್ಲ. ನನ್ನ ಮೇಲೆ ಬಂದಿರುವ ಆರೋಪಕ್ಕೆ ಉತ್ತರ ನೀಡಲೆಂದೇ ಈ ಸುದ್ದಿಗೋಷ್ಠಿಗೆ ನಿಮ್ಮನ್ನು ಕರೆದಿದ್ದೇನೆ. ಮುಂದೆಯೂ ಯಾವುದೇ ಆರೋಪ ಬಂದರೆ ನನ್ನನ್ನು ಸಂಪರ್ಕಿಸಿ. ಎಲ್ಲದ್ದಕ್ಕೂ ನಾನು ಉತ್ತರ ನೀಡುತ್ತೇನೆ.

  • ಹೊಸ ಯೂಟ್ಯೂಬ್ ಚಾನೆಲ್ ತೆರೆದ ವಾರ್ನರ್ ಕಾಲೆಳೆದ ಯುವರಾಜ್

    ಹೊಸ ಯೂಟ್ಯೂಬ್ ಚಾನೆಲ್ ತೆರೆದ ವಾರ್ನರ್ ಕಾಲೆಳೆದ ಯುವರಾಜ್

    ನವದೆಹಲಿ: ಹೊಸ ಯೂಟ್ಯೂಬ್ ಚಾನೆಲ್ ತೆರೆದ ಆಸೀಸ್ ಆಟಗಾರ ಡೇವಿಡ್ ವಾರ್ನರ್ ಅವರನ್ನು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಕಾಲೆಳೆದಿದ್ದಾರೆ.

    ಡೇವಿಡ್ ವಾರ್ನರ್ ಅವರು ಸದ್ಯ ಯುಇಎಯಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗಿದ್ದಾರೆ. ತನ್ನ ನಾಯಕತ್ವದ ಸನ್‍ರೈಸಸ್ ಹೈದರಾಬಾದ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ನಿನ್ನೆ ನಡೆದ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಹೈದರಾಬಾದ್ ತಂಡ 69 ರನ್‍ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು.

    ಈ ನಡುವೆ ಇಂದು ಟ್ವೀಟ್ ಮಾಡಿರುವ ಡೇವಿಡ್ ವಾರ್ನರ್ ಅವರು, ಎಲ್ಲರಿಗೂ ನಮಸ್ಕಾರ, ನಾನು ಈಗ ತಾನೇ ನನ್ನ ಹೊಸ ಯೂಟ್ಯೂಬ್ ಚಾನೆಲ್ ಅನ್ನು ಓಪನ್ ಮಾಡಿದ್ದೇನೆ. ಜೊತೆಗೆ ಹೊಸ ವಿಡಿಯೋವನ್ನು ಅದರಲ್ಲಿ ಹಾಕಿದ್ದೇನೆ. ನನ್ನ ಟ್ವಿಟ್ಟರಿನಲ್ಲಿ ಆ ಯೂಟ್ಯೂಬ್ ಚಾನೆಲಿನ ಲಿಂಕ್ ಇದ್ದು, ಎಲ್ಲರೂ ಹೋಗಿ ವಿಡಿಯೋ ನೋಡಿ. ಜೊತೆಗೆ ಫಾಲೋ ಮಾಡುವುದನ್ನು ಮರೆಯಬೇಡಿ ಎಂದು ಬರೆದುಕೊಂಡಿದ್ದರು.

    ಡೇವಿಡ್ ವಾರ್ನರ್ ಅವರ ಈ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಯುವರಾಜ್ ಸಿಂಗ್ ಅವರು, ಹೌದಾ. ಆದರೆ ಈ ಯೂಟ್ಯೂಬ್ ಚಾನೆಲ್ ಅಲ್ಲಿ ನಿಮ್ಮ ಡ್ಯಾನ್ಸ್ ವಿಡಿಯೋ ಇಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಮೂಲಕ ಕಾಲೆಳೆದಿದ್ದಾರೆ. ಡೇವಿಡ್ ವಾರ್ನರ್ ಅವರು ತಮ್ಮ ಮಕ್ಕಳು ಮತ್ತು ಪತ್ನಿಯ ಜೊತೆ ಹಲವಾರು ಡ್ಯಾನ್ಸ್ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    ಕೊರೊನಾ ಲಾಕ್‍ಡೌನ್ ವೇಳೆ ಟಿಕ್‍ಟಾಕ್‍ನಲ್ಲಿ ಬಹಳ ಜನಪ್ರಿಯವಾಗಿದ್ದ ಡೇವಿಡ್ ವಾರ್ನರ್ ಕೆಲ ಹಿಂದಿ, ತಮಿಳು ಮತ್ತು ತೆಲುಗು ಚಿತ್ರದ ಟಿಕ್‍ಟಾಕ್ ವಿಡಿಯೋ ಮಾಡಿ ಭಾರತದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. ತಮ್ಮ ಮಕ್ಕಳು ಮತ್ತು ಪತ್ನಿಯ ಜೊತೆ ಹಿಂದಿ ಹಾಡುಗಳಿಗೆ ಫನ್ನಿ ಡ್ಯಾನ್ಸ್ ಮಾಡಿ ತಮ್ಮ ಟಿಕ್‍ಟಾಕಿನಲ್ಲಿ ಹಾಕಿಕೊಂಡಿದ್ದರು. ತಮ್ಮ ಮಗಳ ಮನವಿಯ ಮೇರೆಗೆ ಟಿಕ್‍ಟಾಕ್‍ಗೆ ಬಂದಿದ್ದ ವಾರ್ನರ್ ಕೆಲ ದಿನಗಳ ನಂತರ ಟಿಕ್‍ಟಾಕ್‍ನಲ್ಲಿ ಸ್ಟಾರ್ ಆಗಿದ್ದರು.