Tag: ಯುವರಾಜಕುಮಾರ್

  • ಹೊಸಪೇಟೆಯಲ್ಲಿ ‘ಯುವ’ ಚಿತ್ರದ 2ನೇ ಸಾಂಗ್ ರಿಲೀಸ್

    ಹೊಸಪೇಟೆಯಲ್ಲಿ ‘ಯುವ’ ಚಿತ್ರದ 2ನೇ ಸಾಂಗ್ ರಿಲೀಸ್

    ಯುವರಾಜಕುಮಾರ್ ನಟನೆಯ ಯುವ ಚಿತ್ರದ ಎರಡನೇ ಹಾಡನ್ನು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಚಿತ್ರತಂಡ. 2ನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡಲು ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅದ್ಧೂರಿ ಇವೆಂಟ್ ಮಾಡಿ, ಅಲ್ಲಿ 2ನೇ ಹಾಡನ್ನು ಬಿಡುಗಡೆ ಮಾಡುವ ಚರ್ಚೆ ನಡೆದಿದೆ ಎನ್ನುತ್ತಿವೆ ಬಲ್ಲ ಮೂಲಗಳು. ಯುವ (Yuva) ಅಶ್ವಮೇಧಯಾಗಕ್ಕೆ ಸಜ್ಜಾಗಿದ್ದಾರೆ. ಕುದುರೆ ಏರಿ ಯುದ್ಧಕ್ಕೆ ಹೊರಡಲಿದ್ದಾರೆ. ಅದಕ್ಕೂ ಮುನ್ನ ಕರುನಾಡಿನ ಮುಂದೆ ಮಂಡಿ ಊರಿದ್ದಾರೆ. ನನ್ನನ್ನು ಹರಸಿ ಬೆಳೆಸಿ ಎಂದು ಕೇಳಿಕೊಂಡಿದ್ದಾರೆ. ಅ ಕಾರಣಕ್ಕಾಗಿಯೇ ಯುವ ಸಿನಿಮಾದ ಮೊದಲ ಹಾಡನ್ನು ಜನರ ಮುಂದೆ ಈಗಾಗಲೇ ಇಟ್ಟಿದ್ದಾರೆ.

    ಯುವ ಕಣ್ಣಲ್ಲಿ ಜನರು ಏನು ನೋಡಲು ಕಾಯುತ್ತಿದ್ದರೊ ಅದನ್ನೇ ಯುವ ತೋರಿಸಿದ್ದಾರೆ. ಅಪ್ಪು ಬಿಟ್ಟು ಹೋದ ಸಿಂಹಾಸನದಲ್ಲಿ ನೀನೇ ಕೂಡಬೇಕು ಎಂದು ಹೇಳಿದ್ದಾರೆ. ಅದಕ್ಕೆ ತಕ್ಕಂತಿದೆ ಯುವ ಹಾಡು. ಒಬ್ಬನೇ ಶಿವ ಒಬ್ಬನೇ ಯುವ. ಇದನ್ನು ಕೇಳುತ್ತಾ ಕೇಳುತ್ತಾ ನೀವು ಮೈಮರೆಯುತ್ತೀರಿ. ಎಲ್ಲವನ್ನೂ ಅಲ್ಲಲ್ಲೇ ಬಿಟ್ಟು ಎದ್ದು ನಿಲ್ಲುತ್ತೀರಿ. ಕಾರಣ ಹಾಡು ಹಾಗಿದೆ. ಕರುನಾಡನ್ನು ಹುಚ್ಚೆಬ್ಬಿಸಿದೆ.

    ಅದೇನು ಕುಣಿತ. ಯುವರಾಜ್‌ಕುಮಾರ್ (Yuvarajkumar) ಸುಮ್ಮನೆ ಆಗಿಲ್ಲ. ಸುಮ್ಮನೆ ಬಂದಿಲ್ಲ. ಏನಾದರೂ ಮಾಡಿ ಹೋಗಬೇಕು. ಏನಾದರೂ ಸಾಧಿಸಬೇಕು. ಅದೆಲ್ಲಕ್ಕಿಂತ ಹೆಚ್ಚಾಗಿ ಅಪ್ಪು ಚಿಕ್ಕಪ್ಪ ನನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಉಳಿಸಿಸಕೊಳ್ಳಬೇಕು. ಅದೊಂದೇ ಉದ್ದೇಶ. ಅದೇ ಕಾಯಕ. ಹೀಗಂದುಕೊಂಡು ಯುವ ಬಣ್ಣದಲೋಕಕ್ಕೆ ಕಾಲಿಟ್ಟಿದ್ದಾರೆ. ಯುವ ಹಾಡು ನೋಡಿದ ಜನರು ಕೇಕೆ ಹಾಕುತ್ತಿದ್ದಾರೆ.

    ಚಾಮರಾಜನಗರ ಅದು ಅಣ್ಣಾವ್ರು ಹುಟ್ಟಿದ ಮಣ್ಣು. ಅದೇ ಮಣ್ಣಿನಲ್ಲಿ ನಿಂತು ಯುವ ಕರುನಾಡಿಗೆ ತಲೆ ಬಾಗಿದ್ದಾರೆ. ನನ್ನನ್ನು ಹರಸಿ, ಬೆಳೆಸಿ ಎಂದು ಕೇಳಿಕೊಂಡಿದ್ದಾರೆ. ರಾಜ್‌ಕುಮಾರ್ ಮೊಮ್ಮಗ ಎನ್ನುವ ಕಾರಣಕ್ಕೆ ಅಷ್ಟೇ ಅಲ್ಲ. ಅಪ್ಪು ಮಗ ಎನ್ನುವ ಕಾರಣಕ್ಕೂ ಅಲ್ಲ. ಅದೆಲ್ಲ ಮೀರಿದ್ದು ಕಲೆ. ಅದನ್ನು ಯುವ ರಕ್ತದಲ್ಲೇ ಬಸಿದುಕೊಂಡು ಬಂದಿದ್ದಾರೆ.

     

    ಒಬ್ಬನೇ ಶಿವ ಒಬ್ಬನೇ ಯುವ ಈ ಹಾಡನ್ನು ಸಂತೋಷ್ ಆನಂದ್ ರಾಮ್ (Santhosh Anandram) ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ‘ರಾಜಕುಮಾರ’ ಸಿನಿಮಾದಲ್ಲಿ ಬೊಂಬೆ ಹೇಳುತ್ತೈತೆ ಹಾಡನ್ನು ಬರೆದಿದ್ದು ಇವರೇ. ಅದೇ ಸಂತೋಷ್ ಈಗ ಈ ಗೀತೆಗೆ ಸಾಲು ಹೆಣೆದಿದ್ದಾರೆ. ಒಬ್ಬ ನಯಾ ಹುಡುಗನನ್ನು ಹೇಗೆ ತೆರೆ ಮೇಲೆ ತೋರಿಸಬೇಕೆಂದು ಅವರಿಗೆ ಗೊತ್ತು. ಅದನ್ನು ನಿಯತ್ತಾಗಿ ಪಾಲಿಸಿದ್ದಾರೆ. ಸದ್ಯ ರಿಲೀಸ್ ಆಗಿರೋ ಯುವ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಹಾಡಿಗೆ ಯುವನ ಖದರ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನೇನು ಇದೇ ಮಾ.29ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

  • ನಾಳೆ ಚಾಮರಾಜನಗರದಲ್ಲಿ ‘ಯುವ’ ಹವಾ

    ನಾಳೆ ಚಾಮರಾಜನಗರದಲ್ಲಿ ‘ಯುವ’ ಹವಾ

    ರಾಜಕುಮಾರ, ಕೆ.ಜಿ.ಎಫ್, ಕಾಂತಾರದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್ ಸಂಸ್ಥೆ ಮೂಲಕ ನಿರ್ಮಾಣವಾಗಿರುವ ಹಾಗೂ ಯುವ ರಾಜಕುಮಾರ್ (Yuvarajkumar) ನಾಯಕರಾಗಿ ನಟಿಸಿರುವ ಮೊದಲ ಚಿತ್ರ ‘ಯುವ’ (Yuva).  ವಿಜಯ್ ಕಿರಗಂದೂರ್ ಈ ಚಿತ್ರದ  ನಿರ್ಮಾಪಕರು.

    ಸಂತೋಷ್ ಆನಂದರಾಮ್ (Santhosh Anand Ram) ನಿರ್ದೇಶಿಸಿ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ‘ಯುವ’ ಚಿತ್ರದ ಮೊದಲ ಹಾಡು ಮಾರ್ಚ್ 2 ರಂದು ಬಿಡುಗಡೆಯಾಗಲಿದೆ.  ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಎದುರಿನ ಮೈದಾನದಲ್ಲಿ ಆಯೋಜಿಸಲಾಗಿರುವ ಅದ್ದೂರಿ‌ ಸಮಾರಂಭದಲ್ಲಿ ಚಿತ್ರದ ಚೊಚ್ಚಲ ಗೀತೆ ‘ಒಬ್ಬನೇ ಶಿವ ಒಬ್ಬನೇ ಯುವ’ ಹಾಡು ಅನಾವರಣವಾಗಲಿದೆ.

    ದೊಡ್ಮನೆ ಮೊಮ್ಮಗ ಯುವ ರಾಜಕುಮಾರ್ ಮೊದಲ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.  ಮಾರ್ಚ್ 29 ರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗಲಿದೆ.

    ಯುವ ರಾಜಕುಮಾರ್ ಹಾಗೂ ಸಪ್ತಮಿಗೌಡ ನಾಯಕ – ನಾಯಕಿಯಾಗಿ ನಟಿಸಿರುವ ಯುವ ಚಿತ್ರದ ತಾರಾಬಳಗಲ್ಲಿ  ಅಚ್ಯುತಕುಮಾರ್, ಸುಧಾರಾಣಿ, ಕಿಶೋರ್ ಮುಂತಾದವರಿದ್ದಾರೆ.

  • ‘ಯುವ’ ಸಿನಿಮಾದ ಫಸ್ಟ್ ಸಾಂಗ್: ‘ಯುವ ರಾಜ್‌ಕುಮಾರ್ ಗುಣಗಾನ

    ‘ಯುವ’ ಸಿನಿಮಾದ ಫಸ್ಟ್ ಸಾಂಗ್: ‘ಯುವ ರಾಜ್‌ಕುಮಾರ್ ಗುಣಗಾನ

    ಯುವರಾಜ್‌ಕುಮಾರ್ (Yuvarajkumar) ಹಬ್ಬಕ್ಕೆ ಕ್ಷಣ ಗಣನೆ ಶುರುವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಯುವ ಸಿನಿಮಾದ ಮೊದಲ ಹಾಡು (Song) ಹೊರಬರಲಿದೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಅಣ್ಣಾವ್ರ ಮೂರನೇ ತಲೆಮಾರಿನ ಹೊಸ ಕುಡಿಯ ಮೊದಲ ಹಾಡು ಹೇಗಿರಲಿದೆ? ಅದ್ಯಾವ ರೀತಿ ಕರುನಾಡಿನಲ್ಲಿ ಮೆರವಣಿಗೆ ಹೊರಡಲಿದೆ? ಅದನ್ನು ಬರೆದಿದ್ದು ಯಾರು? ಯಾವ ದಿನ, ಯಾವ ಕ್ಷಣ ಈ ಮಣ್ಣಿನಲ್ಲಿ ದಿಬ್ಬಣ ಹೊರಡಲಿದೆ? ಅದರ ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ.

    ಯುವರಾಜ್‌ಕುಮಾರ್ ದೊಡ್ಡಮನೆಯ ಹೊಸ ಕುಡಿ. ಅಣ್ಣಾವ್ರ ಮೊಮ್ಮಗ. ರಾಘಣ್ಣನ ಎರಡನೇ ಮಗ. ಅಪ್ಪು ಚಿಕ್ಕಪ್ಪನ ಅಕ್ಕರೆಯ ಕೂಸು ಈ ಯುವರಾಜ್‌ಕುಮಾರ್. ಅಪ್ಪು ನಮ್ಮನ್ನು ಬಿಟ್ಟು ಹೋದ ಮೇಲೆ ಯಾರು ಆ ಸ್ಥಾನ ತುಂಬುತ್ತಾರೆ ? ಹೇಗೆ ನಮ್ಮನ್ನು ರಂಜಿಸುತ್ತಾರೆ ? ಇದನ್ನೇ ಎಲ್ಲರೂ ಕೇಳುತ್ತಿದ್ದರು. ಅದಕ್ಕೆ ಉತ್ತರ ಸಿಗುವ ಸಮಯ ಬಂದಿದೆ. ಮಾರ್ಚ್ 29ಕ್ಕೆ ಯುವ (Yuva) ಸಿನಿಮಾ ಕರುನಾಡಿನಲ್ಲಿ ರಣಕೇಕೆ ಹಾಕಲಿದೆ. ಪ್ರತಿ ಮನೆ ಮನ ಇದಕ್ಕಾಗಿ ಜಪ ಮಾಡುತ್ತಿವೆ.

    ಈ ಹೊತ್ತಲ್ಲಿ ಇದರ ಮೊದಲ ಹಾಡು ಹಾಜರಾಗಲಿದೆ. ಅದೇ `ಒಬ್ಬನೇ ಶಿವ…ಒಬ್ಬನೇ ಯುವ…’ ಈ ಸಾಲನ್ನು ಕೇಳಿದಾಗಲೇ ಜನರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಹಾಡು ಬಂದ ಮೇಲೆ ಇನ್ನೇನು ದೀಪಾವಳಿಯೋ? ಒಬ್ಬನೇ ಶಿವ…ಒಬ್ಬನೇ ಯುವ…ಇದು ಮೊದಲ ಸಾಲು. ಇದರ ಪ್ರೊಮೊ ಕೂಡ ಬಿಟ್ಟಿಲ್ಲ. ಸಣ್ಣ ಝಲಕ್ ಕೂಡ ತೋರಿಸಿಲ್ಲ. ಇದನ್ನು ಯಾರು ಬರೆದಿದ್ದಾರೆ ? ಬಹುಶಃ ಸಂತೋಷ್ ಆನಂದ್‌ರಾಮ್ (Santhosh Anand Ram) ಇರಬೇಕು. ಗೊತ್ತಿಲ್ಲ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಮಾರ್ಚ್ ಎರಡನೇ ತಾರೀಖು ಬೆಳಿಗ್ಗೆ ಈ ಹಾಡು ಲೋಕಾರ್ಪಣೆಯಾಗಲಿದೆ.

    ಒಬ್ಬನೇ ಶಿವ…ಒಬ್ಬನೇ ಯುವ. ಇದರ ನಂತರ ಇನ್ನೇನು ಬರೆದಿದ್ದಾರೆ ಗೀತ ರಚನೆಕಾರ? ಅದ್ಯಾವ ರೀತಿ ಹೊಸ ಹೀರೋಗೆ ಸಾಲನ್ನು ಹೊಸೆದಿದ್ದಾರೆ? ಅಪ್ಪುವನ್ನು ನೆನೆಸಿಕೊಂಡು ಜನರು ಕೇಕೆ ಹಾಕುವಂತೆ ಮಾಡಲಿದ್ದಾರೆ? ಎಲ್ಲವೂ ಕುತೂಹಲಕಾರಿ. ಅದಕ್ಕಾಗಿ ನಾವು ಕಾಯಬೇಕಷ್ಟೇ…

     

    ಯುವರಾಜ್‌ಕುಮಾರ್ ದೇವರ ಮುಂದೆ ತುಪ್ಪದ ದೀಪ ಹಚ್ಚಿ ಕೈ ಮುಗಿದು ನಿಂತಿದ್ದಾರೆ. ಅಪ್ಪು ಇಲ್ಲ…ಅವರು ಬಿಟ್ಟು ಹೋದ ಸಿಂಹಾಸನದಲ್ಲಿ ನೀವೇ ಕೂಡಬೇಕು…ಹೀಗಂತ ಕರುನಾಡಿನ ಮನಸುಗಳು ಬಯಸುತ್ತಿವೆ. ಕೂಗುತ್ತಿವೆ. ಗರ್ಜಿಸುತ್ತಿವೆ. ಅದನ್ನು ನಿಜ ಮಾಡಬೇಕು. ಅದನ್ನು ಸಾಬೀತು ಪಡಿಸಬೇಕು. ಅದಕ್ಕಾಗಿಯೇ ಯುವ ಎದೆ ಉಬ್ಬಿಸಿ ನಿಂತಿದ್ದಾರೆ. ಸೇಮ್ ಟೈಮ್ ವಿನೀತರಾಗಿ ಬೆಳ್ಳಿ ತೆರೆ ಮೇಲೆ ಬರಲು ಮೈ ಕೊಡವಿದ್ದಾರೆ. ಅಪ್ಪು ಅಲ್ಲಿಂದಲೇ ಎರಡೂ ಕೈಗಳಿಂದ ಆಶೀರ್ವಾದ ಮಾಡಿದ್ದಾರೆ. ಸಂತೋಷ್ ಆನಂದ್‌ರಾಮ್ ಮತ್ತು ಹೊಂಬಾಳೆ ಸಂಸ್ಥೆ ಹೆಗಲು ಕೊಟ್ಟಿದೆ. ಇನ್ನೇನು ಬೇಕು ? ಮೆಗಾ ಪವರ್‌ಸ್ಟಾರ್ ದರ್ಬಾರ್ ಹಬ್ಬ ಮಾಡಲಿದೆ.

  • ಮಾರ್ಚ್ 2ಕ್ಕೆ ಚಾಮರಾಜನಗರದಲ್ಲಿ ‘ಯುವ’ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ಮಾರ್ಚ್ 2ಕ್ಕೆ ಚಾಮರಾಜನಗರದಲ್ಲಿ ‘ಯುವ’ ಚಿತ್ರದ ಫಸ್ಟ್ ಸಾಂಗ್ ರಿಲೀಸ್

    ಪುನೀತ್ ರಾಜ್ ಕುಮಾರ್ ಅವರ  ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜಕುಮಾರ್ ನಟನೆಯ ಯುವ ಸಿನಿಮಾ ಟೀಮ್‍ ನಿಂದ ಬಿಗ್ ಅಪ್ ಡೇಟ್ ಸಿಕ್ಕಿದೆ. ಚಿತ್ರದ ಮೊದಲ ಹಾಡನ್ನು (Song) ಡಾ.ರಾಜ್ ಕುಮಾರ್ ಹುಟ್ಟೂರು ಜಿಲ್ಲೆ ಚಾಮರಾಜನಗರದಲ್ಲಿ (Chamarajanagar) ನಡೆಯಲಿದೆ. ಮಾರ್ಚ್ 2 ರಂದು ಚಾಮರಾಜನಗರ ಟೆಂಪಲ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವುದಾಗಿ ಚಿತ್ರತಂಡ ತಿಳಿಸಿದೆ.

    ಮಾರ್ಚ್ 17ರ ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಮುನ್ನ ದಿನ ಮಾರ್ಚ್ 16ರಂದು ಹೊಸಪೇಟೆಯಲ್ಲಿ ಮೆಗಾ ಇವೆಂಟ್ ಆಯೋಜನೆ ಮಾಡಲಾಗಿದ್ದು, ಜೀವನದ ಮಹಾ ಜಾತ್ರೆಗೆ ಯುವರಾಜ್ ಕುಮಾರ್ ಸಜ್ಜಾಗ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಚಿಕ್ಕಪ್ಪ ಪುನೀತ್ (Puneeth Rajkumar) ಆಶೀರ್ವಾದ ಪಡೆದು ಹೊಸ ಬದುಕು ಶುರು ಮಾಡಲಿದ್ದಾರೆ. ಮಾರ್ಚ್ ‘ಯುವ’ (Yuva) ಜರ್ನಿಯ ಟರ್ನಿಂಗ್ ಪಾಯಿಂಟ್ ಅಂತಿದೆ ಸಿನಿಮಾ ಲೋಕ.

    ಯುವರಾಜ್ ಕುಮಾರ್ (Yuva Rajkumar) ಮೊದಲ ಸಿನಿಮಾದ ಕೆಲಸವನ್ನ ಶ್ರದ್ಧೆಯಿಂದ ಮಾಡಿ ಮುಗಿಸಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ ಹಾಗೇ ಯುವ ನಡೆದುಕೊಂಡಿದ್ದಾರೆ. ಉತ್ತರ ಈಗ ‘ಯುವ’ ಸಿನಿಮಾ ಅಚ್ಚುಕಟ್ಟಾಗಿ ಸಿದ್ಧವಾಗಿದೆ. ಅಂದುಕೊಂಡಂತೆ ಆಗಿದ್ರೆ ಯುವ ಇಷ್ಟೊತ್ತಿಗಾಗಲೇ ನಿಮ್ಮ ಮಡಿಲಿಗೆ ಬಂದಿರಬೇಕಿತ್ತು. ‘ಸಲಾರ್’ (Salaar) ರಿಲೀಸ್‌ನಲ್ಲಿ ಆದ ಬದಲಾವಣೆಯಿಂದ ‘ಯುವ’ ಬರುವಿಕೆ ಕೂಡ ಮುಂದೂಡಲಾಯ್ತು. ಈಗ ಎಲ್ಲದಕ್ಕೂ ವೇದಿಕ್ಕೆ ಸಜ್ಜಾಗಿದೆ. ‘ಯುವ’ ಬದುಕಿನ ವಸಂತ ಕಾಲ ಸನಿಹ ಆಗ್ತಿದೆ.

    ಮಾರ್ಚ್ ತಿಂಗಳಲ್ಲಿ ಯುವ ಸಿನಿಮಾದ ಬ್ಯಾಕ್ ಟು ಬ್ಯಾಕ್ ಇವೆಂಟ್‌ಗಳು ನಡೆಯಲಿವೆ. ಆ ತಿಂಗಳು ಪೂರ್ತಿ ಯುವ ಜಪ ನಡೆಯಲಿದೆ. ದೊಡ್ಮನೆ ಅಭಿಮಾನಿಗಳು ಯುವರಾಜ ಕುಮಾರನ ಸ್ವಾಗತಕ್ಕೆ ಅದ್ಧೂರಿ ತಯಾರಿ ನಡೆಸುತ್ತಿದ್ದಾರೆ. ಮಾರ್ಚ್ 17 ಅಪ್ಪು ಹುಟ್ಟುಹಬ್ಬದ ದಿನ ಚಿಕ್ಕಪ್ಪನಿಗೆ ಕೈ ಮುಗಿದು ಆಶೀರ್ವಾದ ಪಡೆದು ಮುಂದಿನ ಕೆಲಸಕ್ಕೆ ಯುವರಾಜ್ ಕುಮಾರ್ ಚಾಲನೆ ಕೊಡಲಿದ್ದಾರೆ. ಅಪ್ಪುಗೆ ತುಂಬು ಹೃದಯದ ಪ್ರೀತಿ ಕೊಡುವ ಹೊಸಪೇಟೆಯ ಜನರ ಮಧ್ಯೆ ಯುವ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ.

     

    ಮಾರ್ಚ್ 16ರಂದು ಸಂಜೆ ಹೊಸಪೇಟೆಯಲ್ಲಿ ಹಬ್ಬದ ಸಡಗರ ಯುವ ಜಾತ್ರೆ ಜೋರಾಗಿ ಸಾಗಲಿದೆ. ನಂತರ ಮೂರು ಕಡೆ ಇವೆಂಟ್ ಆಯೋಜನೆ ಮಾಡಲಾಗಿದೆ. ಮಾರ್ಚ್ 28ರಂದು ಗುರುವಾರ ರಾಯರ ಕೃಪೆ ಕೇಳಿ ಯುವ, ಸಪ್ತಮಿ ಗೌಡ ನಟನೆಯ ‘ಯುವ’ ಸಿನಿಮಾ ರಿಲೀಸ್ ಮಾಡಲಿದೆ ಹೊಂಬಾಳೆ ಸಂಸ್ಥೆ (Hombale Films). ಮಾರ್ಚ್‌ನಿಂದ ಕನ್ನಡ ಚಿತ್ರರಂಗದಲ್ಲಿ ಯುವ ಅಧ್ಯಾಯ ಶುರುವಾಗಲಿದೆ. ಅಪ್ಪುನ ಪ್ರೀತಿಸಿದ ಜನ ಯುವ ಕೈ ಹಿಡಿದು ನಡೆಸ್ತಾರೆ ಅಪ್ಪು ಅಲ್ಲಿಂದಲೇ ಮಗನಿಗೆ ಹಾರೈಸ್ತಾರೆ.

  • ಅಧಿಕ ಮೊತ್ತಕ್ಕೆ ‘ಯುವ’ ಚಿತ್ರದ ಆಡಿಯೋ ರೈಟ್ಸ್

    ಅಧಿಕ ಮೊತ್ತಕ್ಕೆ ‘ಯುವ’ ಚಿತ್ರದ ಆಡಿಯೋ ರೈಟ್ಸ್

    ಕೆ.ಜಿ.ಎಫ್, ಕಾಂತಾರದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿ, ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ಹೊಂಬಾಳೆ ಫಿಲಂಸ್ ಮೂಲಕ ನಿರ್ಮಾಣವಾಗಿರುವ ಮತ್ತೊಂದು ಅದ್ದೂರಿ ಕನ್ನಡ ಚಿತ್ರ ಯುವ ( (Yuva)). ದೊಡ್ಮನೆ ಮೊಮ್ಮಗ ಯುವ ರಾಜಕುಮಾರ್ (Yuvarajkumar) ಈ ಚಿತ್ರದ ಮೂಲಕ ನಾಯಕ‌ರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

    ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ (Hombale Films) ಮೂಲಕ ವಿಜಯ ಕಿರಗಂದೂರ್ ಹಾಗೂ ಚೆಲುವೇಗೌಡ ಅವರು ನಿರ್ಮಾಣ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ ಸಂಸ್ಥೆಯಿಂದಲೇ ನಿರ್ಮಾಣವಾಗಿದ್ದ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರವನ್ನು ನಿರ್ದೇಶಿಸಿದ್ದ  ಸಂತೋಷ್ ಆನಂದರಾಮ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

    ಇತ್ತೀಚೆಗಷ್ಟೇ ಬಹು ನಿರೀಕ್ಷಿತ ಯುವ ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಮಾರ್ಚ್ 29 ರಂದು ತೆರೆ ಕಾಣಲಿದೆ.  ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಸುಮಧುರ ಹಾಡುಗಳು ಯುವ ಚಿತ್ರದಲ್ಲಿದ್ದು,  ಕನ್ನಡದ ಹೆಸರಾಂತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಬಾರಿ ಮೊತ್ತಕ್ಕೆ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ. ಫಸ್ಟ್ ಲುಕ್ ಪೋಸ್ಟರ್ ನಿಂದ ಜನರ ಗಮನ ಸೆಳೆದಿರುವ ಯುವ ಚಿತ್ರದ ಹಾಡುಗಳು ಮಾರ್ಚ್ ಮೊದಲವಾರದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಟೀಸರ್ ಹಾಗೂ ಟ್ರೇಲರ್ ಸಹ ಸದ್ಯದಲ್ಲೇ ರಿಲೀಸ್ ಆಗಲಿದೆ.

    ಯುವ ರಾಜಕುಮಾರ್ ಅವರ ಯುವ ಚಿತ್ರದ ಗೆಟಪ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಯುವ ರಾಜಕುಮಾರ್ ಅವರಿಗೆ ನಾಯಕಿಯಾಗಿ ಕಾಂತಾರ ಬೆಡಗಿ ಸಪ್ತಮಿ ಗೌಡ ನಟಿಸಿದ್ದಾರೆ. ಅಚ್ಯುತಕುಮಾರ್, ಸುಧಾರಾಣಿ, ಕಿಶೋರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಶ್ರೀಶ ಕುದುವಳ್ಳಿ ಈ ಚಿತ್ರದ ಛಾಯಾಗ್ರಾಹಕರು.

  • ಮಾರ್ಚ್ 28ಕ್ಕೆ ‘ಯುವ’ ಚಿತ್ರ ರಿಲೀಸ್: ಮೆಗಾ ಇವೆಂಟ್ಸ್ ಗೆ ಪ್ಲ್ಯಾನ್

    ಮಾರ್ಚ್ 28ಕ್ಕೆ ‘ಯುವ’ ಚಿತ್ರ ರಿಲೀಸ್: ಮೆಗಾ ಇವೆಂಟ್ಸ್ ಗೆ ಪ್ಲ್ಯಾನ್

    ಡಾ.ರಾಜ್ ಕುಟುಂಬದ ಮತ್ತೊಂದು ಕುಡಿ ಸಿನಿಮಾ ರಂಗಕ್ಕೆ ಲಾಂಚ್ ಆಗ್ತಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಹಾಗೂ ಅಪ್ಪು ಅವರ ನೆಚ್ಚಿನ ಹುಡುಗ ಯುವರಾಜ್ ಕುಮಾರ್ ನಟನೆಯ ಯುವ ಬಿಡುಗಡೆಗೆ (Release) ಸಿದ್ಧವಾಗಿದೆ. ಅದಕ್ಕಾಗಿ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಜೀವನದ ಮಹಾ ಜಾತ್ರೆಗೆ ಯುವರಾಜ್ ಕುಮಾರ್ ಸಜ್ಜಾಗ್ತಿದ್ದಾರೆ. ಮಾರ್ಚ್ ತಿಂಗಳಲ್ಲಿ ಚಿಕ್ಕಪ್ಪ ಪುನೀತ್ (Puneeth Rajkumar) ಆಶೀರ್ವಾದ ಪಡೆದು ಹೊಸ ಬದುಕು ಶುರು ಮಾಡಲಿದ್ದಾರೆ. ಮಾರ್ಚ್ ‘ಯುವ’ (Yuva) ಜರ್ನಿಯ ಟರ್ನಿಂಗ್ ಪಾಯಿಂಟ್ ಅಂತಿದೆ ಸಿನಿಮಾ ಲೋಕ. ಮಾರ್ಚ್‌ನಲ್ಲಿ ಏನೇನು ನಡೆಯಲಿದೆ? ಯಾವ ರೀತಿ ಯುವ ರೆಡಿಯಾಗ್ತಿದ್ದಾರೆ? ಚಿತ್ರತಂಡದ ಪ್ಲ್ಯಾನ್‌ ಏನು? ಇಲ್ಲಿದೆ ಮಾಹಿತಿ.

    ಯುವರಾಜ್ ಕುಮಾರ್ (Yuva Rajkumar) ಮೊದಲ ಸಿನಿಮಾದ ಕೆಲಸವನ್ನ ಶ್ರದ್ಧೆಯಿಂದ ಮಾಡಿ ಮುಗಿಸಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೇಳಿದ ಹಾಗೇ ಯುವ ನಡೆದುಕೊಂಡಿದ್ದಾರೆ. ಉತ್ತರ ಈಗ ‘ಯುವ’ ಸಿನಿಮಾ ಅಚ್ಚುಕಟ್ಟಾಗಿ ಸಿದ್ಧವಾಗಿದೆ. ಅಂದುಕೊಂಡಂತೆ ಆಗಿದ್ರೆ ಯುವ ಇಷ್ಟೊತ್ತಿಗಾಗಲೇ ನಿಮ್ಮ ಮಡಿಲಿಗೆ ಬಂದಿರಬೇಕಿತ್ತು. ‘ಸಲಾರ್’ (Salaar) ರಿಲೀಸ್‌ನಲ್ಲಿ ಆದ ಬದಲಾವಣೆಯಿಂದ ‘ಯುವ’ ಬರುವಿಕೆ ಕೂಡ ಮುಂದೂಡಲಾಯ್ತು. ಈಗ ಎಲ್ಲದಕ್ಕೂ ವೇದಿಕ್ಕೆ ಸಜ್ಜಾಗಿದೆ. ‘ಯುವ’ ಬದುಕಿನ ವಸಂತ ಕಾಲ ಸನಿಹ ಆಗ್ತಿದೆ.

    ಮಾರ್ಚ್ ತಿಂಗಳಲ್ಲಿ ಯುವ ಸಿನಿಮಾದ ಬ್ಯಾಕ್ ಟು ಬ್ಯಾಕ್ ಇವೆಂಟ್‌ಗಳು ನಡೆಯಲಿವೆ. ಆ ತಿಂಗಳು ಪೂರ್ತಿ ಯುವ ಜಪ ನಡೆಯಲಿದೆ. ದೊಡ್ಮನೆ ಅಭಿಮಾನಿಗಳು ಯುವರಾಜ ಕುಮಾರನ ಸ್ವಾಗತಕ್ಕೆ ಅದ್ಧೂರಿ ತಯಾರಿ ನಡೆಸುತ್ತಿದ್ದಾರೆ. ಮಾರ್ಚ್ 17 ಅಪ್ಪು ಹುಟ್ಟುಹಬ್ಬದ ದಿನ ಚಿಕ್ಕಪ್ಪನಿಗೆ ಕೈ ಮುಗಿದು ಆಶೀರ್ವಾದ ಪಡೆದು ಮುಂದಿನ ಕೆಲಸಕ್ಕೆ ಯುವರಾಜ್ ಕುಮಾರ್ ಚಾಲನೆ ಕೊಡಲಿದ್ದಾರೆ. ಅಪ್ಪುಗೆ ತುಂಬು ಹೃದಯದ ಪ್ರೀತಿ ಕೊಡುವ ಹೊಸಪೇಟೆಯ ಜನರ ಮಧ್ಯೆ ಯುವ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ.

     

    ಮಾರ್ಚ್ 24 ಶನಿವಾರ ಸಂಜೆ ಹೊಸಪೇಟೆಯಲ್ಲಿ ಹಬ್ಬದ ಸಡಗರ ಯುವ ಜಾತ್ರೆ ಜೋರಾಗಿ ಸಾಗಲಿದೆ. ಮಾರ್ಚ್ 28ರಂದು ಗುರುವಾರ ರಾಯರ ಕೃಪೆ ಕೇಳಿ ಯುವ, ಸಪ್ತಮಿ ಗೌಡ ನಟನೆಯ ‘ಯುವ’ ಸಿನಿಮಾ ರಿಲೀಸ್ ಮಾಡಲಿದೆ ಹೊಂಬಾಳೆ ಸಂಸ್ಥೆ. ಮಾರ್ಚ್‌ನಿಂದ ಕನ್ನಡ ಚಿತ್ರರಂಗದಲ್ಲಿ ಯುವ ಅಧ್ಯಾಯ ಶುರುವಾಗಲಿದೆ. ಅಪ್ಪುನ ಪ್ರೀತಿಸಿದ ಜನ ಯುವ ಕೈ ಹಿಡಿದು ನಡೆಸ್ತಾರೆ ಅಪ್ಪು ಅಲ್ಲಿಂದಲೇ ಮಗನಿಗೆ ಹಾರೈಸ್ತಾರೆ.

  • ‘ಯುವ’ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ : ಯುವ ರಾಜಕುಮಾರ್ ಚೊಚ್ಚಲ ಚಿತ್ರ

    ‘ಯುವ’ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ : ಯುವ ರಾಜಕುಮಾರ್ ಚೊಚ್ಚಲ ಚಿತ್ರ

    ಡೀ ಪ್ರಪಂಚವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ‘ಕೆ ಜಿ ಎಫ್’, ‘ಕಾಂತಾರ’ ದಂತಹ ಯಶಸ್ವಿ ಚಿತ್ರಗಳನ್ನು ನಿರ್ಮಿಸಿರುವ ಪ್ರತಿಷ್ಠಿತ ಹೊಂಬಾಳೆ ಫಿಲಂಸ್ (Hombale Films) ಲಾಂಛನದಲ್ಲಿ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ, ಜನಪ್ರಿಯ ಚಿತ್ರಗಳ ನಿರ್ದೇಶಕ ಸಂತೋಷ್ ಆನಂದರಾಮ್ (Santhosh Anand Ram) ನಿರ್ದೇಶನದ ಹಾಗೂ ಯುವ ರಾಜಕುಮಾರ್ ನಾಯಕರಾಗಿ ನಟಿಸಿರುವ ಚೊಚ್ಚಲ ಚಿತ್ರ ‘ಯುವ’ ಯಾವಾಗ ಬಿಡುಗಡೆಯಾಗಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.

    ಬಹು ನಿರೀಕ್ಷಿತ ಈ ಚಿತ್ರ 2024 ರ ಮಾರ್ಚ್ 28 ರಂದು ಬಿಡುಗಡೆಯಾಗುತ್ತಿದೆ. ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹೊಂಬಾಳೆ ಫಿಲಂಸ್ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಈ ಸಿನಿಮಾದಲ್ಲಿ ಯುವರಾಜಕುಮಾರ್ (Yuvraj Kumar) ನಾಯಕನಾಗಿ ನಟಿಸುತ್ತಿದ್ದಾರೆ. ಸಪ್ತಮಿ ಗೌಡ  ಅವರು ಸಿರಿ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಅದೊಂದು ಡಿಗ್ಲಾಮರ್ ಪಾತ್ರ ಎಂದು ಹೇಳಲಾಗುತ್ತಿದೆ. ಕಾಲೇಜು ಹುಡುಗಿಯಾಗಿ ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ ಸಪ್ತಮಿ.

     

    ಈ ಸಿನಿಮಾ ಮೂಲಕ ಪುನೀತ್ ರಾಜಕುಮಾರ್ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿರುವ ಯುವರಾಜಕುಮಾರ್ ಅಧಿಕೃತವಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಜೊತೆ ಒಳ್ಳೆಯ ಬಾಂಧವ್ಯ ಹಾಗೂ ಅವರ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರೆ, ನುರಿತ ತಂತ್ರಜ್ಞರ ತಂಡವೇ ಸಿನಿಮಾದಲ್ಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಟುಂಬ ಸಮೇತ ಮಹದೇಶ್ವರ ಬೆಟ್ಟಕ್ಕೆ ಬಂದ ರಾಘವೇಂದ್ರ ರಾಜ ಕುಮಾರ್

    ಕುಟುಂಬ ಸಮೇತ ಮಹದೇಶ್ವರ ಬೆಟ್ಟಕ್ಕೆ ಬಂದ ರಾಘವೇಂದ್ರ ರಾಜ ಕುಮಾರ್

    ಡಾ.ರಾಜಕುಮಾರ್ ಅವರ ಪುತ್ರ ನಟ ರಾಘವೇಂದ್ರ ರಾಜಕುಮಾರ್ (Raghavendra Rajkumar) ಇಂದು ಕುಟುಂಬ ಸಮೇತ ಮಲೆ ಮಹದೇಶ್ವರ ಬೆಟ್ಟಕ್ಕೆ (Male Mahadeshwar) ಆಗಮಿಸಿದ್ದರು. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಈ ಸುಪ್ರಸಿದ್ಧ ದೇವಸ್ಥಾನಕ್ಕೆ ರಾಜ್ ಕುಟುಂಬ ಆಗಾಗ್ಗೆ ಬರುತ್ತೆ. ಈ ಬಾರಿ ಕುಟುಂಬ ಸಮೇತ ರಾಘವೇಂದ್ರ ರಾಜಕುಮಾರ್ ಆಗಮಿಸಿದ್ದರು.

    ಮಾದಪ್ಪನ ಸನ್ನಿಧಿಯಲ್ಲಿ ರಾಘವೇಂದ್ರ ರಾಜಕುಮಾರ್‍ ಅವರ ಕಿರಿಯ ಪುತ್ರ ಯುವ ರಾಜಕುಮಾರ್ (Yuvarajkumar), ಪತ್ನಿ ಮಂಗಳಾ ಕೂಡ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮಾದಪ್ಪನ ದರ್ಶನ ಪಡೆದರು. ಎಲ್ಲರೂ ಪೂಜೆ ಸಲ್ಲಿಸಿ ದಾಸೋಹ ಭವನದಲ್ಲಿ ಪ್ರಸಾದ ಸೇವಿಸಿದರು.

     

    ಈ ವೇಳೆ ಮಾತನಾಡಿದ ನಟ ರಾಘವೇಂದ್ರ ರಾಜಕುಮಾರ್ ‘ನಮ್ಮ ತಂದೆ ರಾಜಕುಮಾರ್ ಅವರು ಒಂದು ಸಲ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ಆ ಮೇಲೆ ಇಲ್ಲಿಗೆ ನಾನು ಬಂದಿರಲಿಲ್ಲ. ಪುತ್ರ ಯುವ ರಾಜಕುಮಾರ್ ನಟನೆಯ ಸಿನಿಮಾ ಶೂಟಿಂಗ್ ಮೈಸೂರಿನಲ್ಲಿ ನಡೀತಿದೆ. ಅದಕ್ಕಾಗಿ ಮಾದಪ್ಪನ ದರ್ಶನ ಪಡೆಯಲು ಬಂದಿದ್ದೇವೆ. ಈ ಜಾಗ ತುಂಬಾ ಚೆನ್ನಾಗಿದೆ. ಮಲೆ ಮಹದೇಶ್ವರ ತಾಣ ಸ್ವರ್ಗದಂತೆ ಭಾಸವಾಗುತ್ತಿದೆ. ವರ್ಷಕ್ಕೆ ಒಂದು ಸಲವಾದರೂ ಇಲ್ಲಿಗೆ ಬರಬೇಕು ಅಂತ ಅನ್ನಿಸಿದೆ. ಇನ್ಮೇಲೆ ಮಾದಪ್ಪನ ದರ್ಶನ ಪಡೆಯಲು ಬರ್ತಿನಿ’ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]