Tag: ಯುವರಾಜ

  • ‘ಯಕ್ಷ’ ಯುವರಾಜನಾಗಿ ಮಿಂಚಿದ ನಟ, ನಿರ್ದೇಶಕ ರಮೇಶ್ ಅರವಿಂದ್

    ‘ಯಕ್ಷ’ ಯುವರಾಜನಾಗಿ ಮಿಂಚಿದ ನಟ, ನಿರ್ದೇಶಕ ರಮೇಶ್ ಅರವಿಂದ್

    ಟ ರಮೇಶ್ ಅರವಿಂದ್ (Ramesh Aravind) ಯಕ್ಷ ಯುವರಾಜನಾಗಿ ಮಿಂಚಿದ್ದಾರೆ. ಬಹುಭಾಷಾ ಕಲಾವಿದ ರಮೇಶ್ ಅರವಿಂದ್ ಯಕ್ಷಗಾನದ ವೇಷ (Yakshevesha) ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಮೂಲಕ ಹಲವು ದಶಕಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

    ಉಡುಪಿಯ ಪ್ರವಾಸದಲ್ಲಿರುವ ರಮೇಶ್ ಅರವಿಂದ್ ಕೂದ್ರು ನೆಸ್ಟ್ ಗೆಸ್ಟ್ ಹೌಸಿಗೆ ಭೇಟಿ ಕೊಟ್ಟಿದ್ದರು. ಈ ಸಂದರ್ಭ ಬಹುಕಾಲದ ಕನಸಾಗಿದ್ದ ಯಕ್ಷಗಾನದ ವೇಷವನ್ನು ಹಾಕಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ವೇಷ ಮತ್ತು ಬಣ್ಣಗಾರಿಕೆಯನ್ನು ಕಲಾವಿದ ಶೈಲೇಶ್ ವ್ಯವಸ್ಥೆ ಮಾಡಿದ್ದರು. ಅಂತರಾಷ್ಟ್ರೀಯ ಛಾಯಾಗ್ರಾಹಕ ಫೋಕಸ್ ರಾಘು , ರಮೇಶ್ ಅರವಿಂದ್ ಅವರ ಫೋಟೋ ಶೂಟ್ ಮಾಡಿದ್ದಾರೆ. ಇದನ್ನೂ ಓದಿ:ತಮಿಳು ಬಿಗ್ ಬಾಸ್‌ಗೆ ಕಾಲಿಟ್ಟ ಕನ್ನಡತಿ ರಚಿತಾ ಮಹಾಲಕ್ಷ್ಮಿ

    ಯಕ್ಷಗಾನ (Yakshagana) ಕಲೆಯ ಬಗ್ಗೆ ರಮೇಶ್ ಅರವಿಂದ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಛಾಯಾಗ್ರಹಣದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ, ಉಡುಪಿ ಕೊಡಂಗಳದ ರಾಘವೇಂದ್ರ ಫೋಟೋ ಕ್ಲಿಕ್ ಮಾಡಿದ್ದಾರೆ. ಸುವರ್ಣಾ ನದಿ ತೀರದಲ್ಲಿರುವ ಕುದ್ರು ನೆಸ್ಟ್ ಎಂಬ ಹೋಮ್ ಸ್ಟೇಯಲ್ಲಿ ರಮೇಶ್ ಅರವಿಂದ್ ಸಾಂಪ್ರದಾಯಿಕವಾಗಿ ಬಣ್ಣಹಚ್ಚಿದ್ದಾರೆ.

    ಶಿವರಾಮ ಕಾರಂತ (Shivaram Karanta) ಪ್ರಶಸ್ತಿ ಸ್ವೀಕರಿಸಲು ಉಡುಪಿಗೆ ಬಂದಿದ್ದ ರಮೇಶ್ ಅರವಿಂದ್, ನಟ, ಬರಹಗಾರ, ಸ್ಫೂರ್ತಿ ತುಂಬುವ ಭಾಷಣಕಾರ, ನಿರೂಪಕ, ರಮೇಶ್ ಅರವಿಂದ್ ಉಡುಪಿಯ ಮನೋವೈದ್ಯ ಡಾ. ವಿರೂಪಾಕ್ಷ ದೇವರು ಮನೆಯವರೊಂದಿಗೆ ಫೋಕಸ್ ರಾಘು ಅವರ ಕುದ್ರು ನೆಸ್ಟ್ ಭೇಟಿ ನೀಡಿದ್ದರು. ಪರಿಸರ, ನದಿ, ಮನೆ, ಕ್ರಿಯಾಶೀಲ ವಿನ್ಯಾಸವನ್ನು ಕಂಡು ಮೆಚ್ಚುಗೆ ಸೂಚಿಸಿದ್ದರು. ರಾಘು ಅವರ ಛಾಯಾಚಿತ್ರಗಳನ್ನು ಕಂಡು ಬೆರಗು ವ್ಯಕ್ತಪಡಿಸಿ ತನಗೂ ಫೋಟೋ ಶೂಟ್ ಮಾಡ್ತೀರಾ ಎಂದು ಕೇಳಿದ್ದರು. ಅದರಂತೆ ರಮೇಶ್ ಅರವಿಂದ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತದಲ್ಲಿ ನೂರು ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ ಸೌದಿ ಅರೇಬಿಯಾ

    ಭಾರತದಲ್ಲಿ ನೂರು ಶತಕೋಟಿ ಡಾಲರ್ ಹೂಡಿಕೆ ಮಾಡಲಿದೆ ಸೌದಿ ಅರೇಬಿಯಾ

    – ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬೆಂಬಲ
    – ಪುಲ್ವಾಮಾ ದಾಳಿ ಬಗ್ಗೆ ಮಾತಿಲ್ಲ

    ನವದೆಹಲಿ: ಉಗ್ರವಾದದ ವಿರುದ್ಧದ ಭಾರತದ ಹೋರಾಟಕ್ಕೆ ನಾವು ಬೆಂಬಲ ನೀಡುತ್ತೇವೆ ಸೌದಿ ಅರೇಬಿಯಾ ತಿಳಿಸಿದೆ.

    ಪ್ರಧಾನಿ ಮೋದಿ ಮತ್ತು ಸೌದಿ ಯುವರಾಜ ಮೊಹ್ಮದ್ ಬಿನ್ ಸುಲ್ತಾನ್ ಮಾತುಕತೆಯ ಬಳಿಕ ಇಬ್ಬರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸೌದಿ ಯುವರಾಜ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತ ಮತ್ತು ನೆರೆ ದೇಶಗಳಿಗೆ ಬೆಂಬಲ ನೀಡುವುದಾಗಿ ತಿಳಿಸಿದರು. ಅಲ್ಲೇ ಭಾರತದ ಜೊತೆ ಗುಪ್ತಚರ ಮಾಹಿತಿ ಹಂಚಿಕೊಳ್ಳುವುದಾಗಿ ಘೋಷಣೆ ಮಾಡಿದರು. ಆದರೆ ಪಾಕಿಸ್ತಾನದಲ್ಲಿ ಪುಲ್ವಾಮಾ ದಾಳಿ ಕುರಿತಂತೆ ಮಾತನ್ನು ಆಡಲಿಲ್ಲ. ಆದರೆ ಪಾಕಿಸ್ತಾನದಲ್ಲಿ ಮಾತನಾಡುವ ವೇಳೆ ಉಗ್ರರ ದಮನಕ್ಕೆ ಪಾಕ್ ಸಾಕಷ್ಟು ಕ್ರಮ ಕೈಗೊಂಡಿದೆ ಎಂದಿದ್ದರು.

    ಇತ್ತ ಪಾಕಿಸ್ತಾನದಲ್ಲಿ 20 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಸೌದಿ ಭಾರತದಲ್ಲಿ 100 ಬಿಲಿಯನ್ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಪ್ರಮುಖವಾಗಿ ಇಂಧನ, ಸಂಸ್ಕರಣೆ ಮತ್ತು ಮೂಲಭೂತ ಸೌಕರ್ಯದಲ್ಲಿ ಹೂಡಿಕೆ ಮಾಡಲಿದೆ. ಅಲ್ಲದೇ ದ್ವಿಪಕ್ಷೀಯ ಸಹಕಾರ ಕುರಿತ 7 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದೇ ವೇಳೆ 2014 ರಿಂದ ಮೋದಿ ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧ ಮುಂದುವರಿಸಲು ಕೈಗೊಂಡ ಕ್ರಮಗಳ ಬ್ಗಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಎರಡು ದಿನಗಳ ಭಾರತ ಭೇಟಿಗೆ ಆಗಮಿಸಿದ್ದ ಸೌದಿ ಯುವರಾಜರನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವಾಗತಿಸಿದ್ದರು. ಮೋದಿ ಅವರ ಈ ನಡೆಯನ್ನು ಕಾಂಗ್ರೆಸ್ ತೀವ್ರವಾಗಿ ಟೀಕೆ ಮಾಡಿದೆ. ಅಲ್ಲದೇ ಸೌದಿ ಯುವರಾಜ ಪಾಕ್‍ನಲ್ಲಿ ಕೊಟ್ಟಿದ್ದ ಹೇಳಿಕೆಯನ್ನು ಬದಲಿಸುವಂತೆ ಮಾಡಲಿ ಎಂದು ಸವಾಲು ಎಸೆದಿದೆ. ಪಾಕಿಸ್ತಾನಕ್ಕೆ ನೂರಾರು ಕೋಟಿ ನೆರವು ನೀಡಿದ ಕೆಲವೇ ಗಂಟೆಗಳಲ್ಲಿ ಮೋದಿಯವರು ಈ ರೀತಿ ಮಾಡಿದ್ದು ಸರೀನಾ? ಇದು ಹುತಾತ್ಮ ಯೋಧರು ಮತ್ತು ಕೋಟಿ ಕೋಟಿ ಭಾರತೀಯರ ಭಾವನೆಗಳಿಗೆ ಪ್ರಧಾನಿ ಮೋದಿ ಮಾಡುತ್ತಿರುವ ಅವಮಾನ ಎಂದು ಟೀಕಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ದೇವರು ಒಳ್ಳೆದು ಮಾಡಲ್ಲ: ಪುನೀತ್ ರಾಜ್‍ಕುಮಾರ್

    ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತಾಡಿದ್ರೆ ದೇವರು ಒಳ್ಳೆದು ಮಾಡಲ್ಲ: ಪುನೀತ್ ರಾಜ್‍ಕುಮಾರ್

    – ಅಭಿಮಾನಿಗಳ ಪರ `ಯುವರತ್ನ’ ಬ್ಯಾಟಿಂಗ್

    ಬೆಂಗಳೂರು: ಎಂದಿಗೂ ನಾವು ಹಾಗೂ ಅಭಿಮಾನಿಗಳು ಒಂದೆ. ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ದೇವರು ಒಳ್ಳೆದು ಮಾಡಲ್ಲ ಎಂದು ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ.

    ನಗರದ ಕಾವೇರಿ ಸಿನಿಮಾ ಮಂದಿರದಲ್ಲಿ ಪುನೀತ್ ಅಭಿನಯದ 29ನೇ ಸಿನಿಮಾದ ಟೈಟಲ್ `ಯುವರತ್ನ’ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ನಮ್ಮನ್ನ ಪ್ರೀತಿಯಿಂದ ಈ ಮಟ್ಟಕ್ಕೆ ಕರೆದುಕೊಂಡು ಬಂದಿದ್ದೀರಿ. ಅಭಿಮಾನಿಗಳಿಗೆ ಸದಾ ಧನ್ಯವಾದಗಳನ್ನು ಹೇಳುತ್ತೇನೆ. ಅಭಿಮಾನಿಗಳನ್ನ ಎಂದಿಗೂ ಬೇರೆ ವಿಚಾರಕ್ಕೆ ಬಳಸಿಕೊಂಡಿಲ್ಲ, ಬಳಸಿಕೊಳ್ಳುವುದಿಲ್ಲ. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ದೇವರು ಒಳ್ಳೆಯದು ಮಾಡಲ್ಲ. ನಮ್ಮ ಕುಟುಂಬಕ್ಕೆ 50 ವರ್ಷಗಳಿಂದ ಅಭಿಮಾನಿಗಳ ಪ್ರೀತಿ ಸಿಕ್ಕಿದೆ ಎಂದರು.

    ಅಭಿಮಾನಿಗಳ ಪ್ರೀತಿಗೆ ನಾವು ಇದುವರೆಗೂ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಆದ್ರು ನಮಗೆ ನೀವು ನೀಡುವ ಪ್ರೀತಿ ಮುಂದುವರಿಯುತ್ತದೆ. ಒಳ್ಳೆ ಸಿನಿಮಾ ಮಾಡುವ ಮೂಲಕ ನಿಮ್ಮನ್ನು ರಂಜಿಸಿ ನಿಮಗೆ ಸಂತೋಷ ಪಡಿಸುತ್ತೇವೆ. ನಮ್ಮಿಂದ ಸಾಧ್ಯವಾಗುವುದು ಇಷ್ಟೇ. ಒಂದು ವರ್ಷದ ಬಳಿಕ ರಾಜಕುಮಾರ ಸಿನಿಮಾ ಬಳಿಕ ಅದೇ ಜೋಡಿ ನಿಮ್ಮ ಮುಂದೆ ಬರುತ್ತಿದೆ. ಅದೇ ಪ್ರೊಡಕ್ಷನ್ ನಲ್ಲಿ ಮಾಡುತ್ತಿರುವುದು ಮತ್ತೊಂದು ಖುಷಿ ನೀಡಿದೆ. ಸಿನಿಮಾ ಟೈಟಲ್ ಬಗ್ಗೆ ಅವರೇ ಯೋಚನೆ ಮಾಡಿ `ಯುವರತ್ನ’ ಎಂದು ಇಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು ಕೂಡ ನಮಗೇ ಸಾಥ್ ನೀಡಿದ್ದಾರೆ ಎಂದರು. ನಗರದ ಕಾವೇರಿ ಸಿನಿಮಾ ಮಂದಿರದಲ್ಲಿ ಶೀರ್ಷಿಕೆ ಅನಾವರಣ ಮಾಡಲಾಯಿತು. ನಿಮ್ಮ ಬೆಂಬಲ ನಮಗೆ ಹೀಗೆ ಮುಂದುವರಿಯಲಿ ಎಂದು ಮನವಿ ಮಾಡಿದರು.

    ಪುನೀತ್ ಅವರು ಈ ಹೇಳಿಕೆ ಏಕೆ ನೀಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ. ಕೆಲ ದಿನಗಳ ಹಿಂದೆ ನಿರ್ದೇಶಕ ಪ್ರೇಮ್ ಅವರು ವಿಲನ್ ಚಿತ್ರದ ಕುರಿತು ಕೆಟ್ಟದಾಗಿ ಮಾತನಾಡಿದ ಸಿನಿ ಅಭಿಮಾನಿಗಳ ವಿರುದ್ಧ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪುನೀತ್ ಪ್ರೇಮ್ ಅವರ ಈ ಮಾತಿಗೆ ಹೀಗೆ ಹೇಳಿದ್ದಾರಾ ಎನ್ನುವ ಚರ್ಚೆ ಈಗ ಆರಂಭವಾಗಿದೆ.

    ಅಂಧ ಅಭಿಮಾನಿಯಾದ ವಿನುತಾ ಹಾಗೂ ಮಹೇಶ್ ಅವರಿಂದ ಯವರತ್ನ ಟೈಟಲ್ ಲಾಂಚ್ ಮಾಡಿಸಿದ ಸಿನಿಮಾ ತಂಡ ಇದೇ ವೇಳೆ ಖುಷಿ ಹಂಚಿಕೊಂಡಿತು. ರಾಜನ ಮಗ ಯುವರಾಜ, ಹೀಗಾಗಿ ಯುವರತ್ನ ಎಂದು ಟೈಟಲ್ ನೀಡಿದ್ದೇವೆ. ಸಿನಿಮಾದಲ್ಲಿ ಅಪ್ಪು 16 ವರ್ಷದ ಬಳಿಕ ಚಿತ್ರದ ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/PRK_Trends/status/1057928931712610307

  • ಯದುವಂಶದ ಸಂಪ್ರದಾಯದಂತೆ ಅರಮನೆಯಲ್ಲೇ ಯುವರಾಜನ ನಾಮಕರಣ- ಯದುವೀರ್ ಒಡೆಯರ್

    ಯದುವಂಶದ ಸಂಪ್ರದಾಯದಂತೆ ಅರಮನೆಯಲ್ಲೇ ಯುವರಾಜನ ನಾಮಕರಣ- ಯದುವೀರ್ ಒಡೆಯರ್

    ಮೈಸೂರು: ಯದುವಂಶದ ಸಂಪ್ರದಾಯದಂತೆ ಯುವರಾಜನ ನಾಮಕರಣ ಅರಮನೆಯಲ್ಲಿ ನಡೆಯಲಿದೆ ಎಂದು ಮಹಾರಾಜ ಯದುವೀರ್ ಒಡೆಯರ್ ಹೇಳಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿದ ಯದುವೀರ್, ನಮ್ಮ ಸಂಪ್ರದಾಯದಂತೆ ನಾಮಕರಣ ಕಾರ್ಯಕ್ರಮ ನಡೆಯಲಿದೆ. ಅರಮನೆಯ ಮೂಹೂರ್ತ ಸಮಯ ನೋಡಿಕೊಂಡು ನಾಮಕರಣ ಮಾಡುತ್ತೇವೆ. ಹಲವು ಹೆಸರುಗಳನ್ನು ಯೋಚನೆ ಮಾಡಿದ್ದು, ಯಾವ ಹೆಸರನ್ನು ಅಧಿಕೃತ ಮಾಡಿಲ್ಲ. ಮಗನ ಎಲ್ಲಾ ಕಾರ್ಯಕ್ರಮಗಳು ಅರಮನೆಯಲ್ಲೇ ನಡೆದರೆ ನಮಗೆ ಇನ್ನಷ್ಟು ಖುಷಿ ಸಿಗಲಿದೆ ಎಂದು ತಿಳಿಸಿದ್ರು.

    ಸದ್ಯ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದು, ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದ ಯದುವೀರ್, ನಾಮಕರಣದ ಉಹಾಪೋಹಗಳಿಗೆ ತೆರೆ ಎಳೆದರು.

    ಆರು ದಶಕಗಳ ಬಳಿಕ ಮೈಸೂರು ಸಂಸ್ಥಾನದ ಯದುವಂಶಕ್ಕೆ ಪುತ್ರ ಸಂತಾನ ಪ್ರಾಪ್ತಿಯಾಗಿದೆ. 2017ರ ಡಿಸೆಂಬರ್ 06ರಂದು ರಾತ್ರಿ 9.50 ಕ್ಕೆ ರಾಣಿ ತ್ರಿಷಿಕಾ ಕುಮಾರಿ ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.

    ಮಿಥುನ ರಾಶಿ ಪುನರ್ವಸು ನಕ್ಷತ್ರದಲ್ಲಿ ಗಂಡು ಮಗು ಜನನವಾಗಿದ್ದು, ಜ್ಯೋತಿಷ್ಯದ ಪ್ರಕಾರ ಶ್ರೀರಾಮನು ಇದೇ ನಕ್ಷತ್ರದಲ್ಲಿ ಹುಟ್ಟಿದ್ದನು ಎಂದು ಹೇಳಲಾಗಿತ್ತು.

  • ಭೂತಾನ್ ಪುಟ್ಟ ಯುವರಾಜನಿಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ಕೊಟ್ಟ ರಕ್ಷಣಾ ಸಚಿವೆ

    ಭೂತಾನ್ ಪುಟ್ಟ ಯುವರಾಜನಿಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ಕೊಟ್ಟ ರಕ್ಷಣಾ ಸಚಿವೆ

    ನವದೆಹಲಿ: ಮೊದಲ ಬಾರಿಗೆ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಭೂತಾನ್ ದೊರೆ ಜಿಗ್ಮೆ ನಾಮ್‍ಗೆಲ್ ವಾಗ್ಚುಕ್ ಅವರ ಒಂದೂವರೆ ವರ್ಷದ ಪುತ್ರನಿಗೆ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಕರ್ನಾಟಕದ ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಚನ್ನಪಟ್ಟಣದ ಗೊಂಬೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ರಾಜ್ಯದ ಕೀರ್ತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದ್ದಾರೆ.

    ಮಹಾರಾಜ, ರಾಣಿ ಮತ್ತು ಯುವ ರಾಜಕುಮಾರನ ಬಳಿ ಇದ್ದ ಚನ್ನಪಟ್ಟಣದ ಗೊಂಬೆಯನ್ನು ನೋಡಿದ್ದಾರೆ. ಚನ್ನಪಟ್ಟಣದ ಗೊಂಬೆಯಂತೆಯೇ ಇರುವ ಯುವರಾಜನನ್ನು ನೋಡಲು ಸಂತೋಷವಾಗುತ್ತದೆಂದು ಹರ್ಷ ವ್ಯಕ್ತಪಡಿಸಿ ನಿರ್ಮಾಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

    ಬುಧವಾರ ರಾಜ ಪರಿವಾರದ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಏರ್ಪಡಿಸಿದ್ದ ಓತಣಕೂಟದಲ್ಲಿ ಇತ್ತೀಚೆಗಷ್ಟೆ ಮುಕ್ತಾಯವಾದ 17 ವರ್ಷದೊಳಗಿನವರ ಫುಟ್ಬಾಲ್ ಪಂದ್ಯಾವಳಿಯ ಚೆಂಡೊಂದನ್ನು ಉಡುಗೊರೆಯನ್ನು ನೀಡಿದ್ದರು. ಈ ಓತಣ ಕೂಟದಲ್ಲೇ ಸಚಿವೆ ನಿರ್ಮಲಾ ಚನ್ನಪಟ್ಟಣದ ಗೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಮೊದಲ ಬಾರಿಗೆ ಭಾರತಕ್ಕೆ ಬಂದ ಪುಟ್ಟ ಯುವರಾಜಕುಮಾರ ಎಲ್ಲರ ಗಮನ ಕೇಂದ್ರಿಕರಿಸಿದ್ದರು. ವಿಶೇಷವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭೂತಾನ್ ರಾಜನ ಪರಿವಾರವನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗಿ ಯುವರಾಜನ ಕೈಹಿಡಿದು ನಿಂತಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.