ತಮಿಳು ಚಿತ್ರರಂಗದ(Tamil Films) ಸ್ಟಾರ್ ಜೋಡಿ ನಟ ಆರ್ಯ (Arya)ಮತ್ತು ಸಯೇಶಾ (Sayyesha) ಸಿನಿಮಾ ಜೊತೆ ವೈವಾಹಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಪತಿಯ ಹುಟ್ಟುಹಬ್ಬದಂದು ಮುದ್ದು ಮಗಳನ್ನು ನಟಿ ಸಯೇಶಾ ಪರಿಚಯಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಆರ್ಯ ಮತ್ತು ಸಯೇಶಾ ಕಾಲಿವುಡ್‌ನ ಬೆಸ್ಟ್ ಜೋಡಿಯಾಗಿದ್ದಾರೆ. ಬೆಳ್ಳಿಪರದೆಯಲ್ಲೂ ಜೊತೆಯಾಗಿ ಮಿಂಚಿದ್ದಾರೆ. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಪ್ರೀತಿಸಿ, 2019ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನೂ ಮುದ್ದು ಮಗಳ ಆಗಮನವಾಗಿ ಒಂದೂವರೆ ವರ್ಷದ ನಂತರ ಈಗ ಮಗಳ ಫೋಟೋವನ್ನು ಯುವರತ್ನ (Yuvaratna) ನಟಿ ಸಯೇಶಾ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್ ನಿಧನ
ಸಯೇಶಾ ಕಳೆದ ವರ್ಷ 2021ರ ಜುಲೈನಲ್ಲಿ ಹೆಣ್ಣು ಮಗುವಿಗೆ ತಾಯಿಯಾಗಿದ್ದರು. ಆದರೆ ಎಲ್ಲಿಯೂ ಕೂಡ ಮಗಳ ಮುಖ ಪರಿಚಯ ಮಾಡಿಸಿರಲಿಲ್ಲ. ಇದೀಗ ಪತಿ ಆರ್ಯ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮಗಳ ಫೋಟೋ ರಿವೀಲ್ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಸಿನಿಮಾ ಕಳೆದ ವರ್ಷ ಬಾಕ್ಸ್ ಆಫೀಸಿನಲ್ಲಿ ಹೇಳಿಕೊಳ್ಳುವಂತೆ ದುಡ್ಡು ತಂದು ಕೊಡದೇ ಇದ್ದರೂ, ಆ ಸಿನಿಮಾದ ಆಶಯದಿಂದಾಗಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಸರಕಾರಿ ಕಾಲೇಜುಗಳ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನಿಟ್ಟುಕೊಂಡು ಮಾಡಿರುವ ಚಿತ್ರದಲ್ಲಿ ಸಮಾಜದ ಕಾಳಜಿ ಎದ್ದು ಕಾಣುತ್ತಿತ್ತು. ಹೀಗಾಗಿ ಯುವರತ್ನ ಸಿನಿಮಾ ಪುನೀತ್ ಅಭಿಮಾನಿಗಳಿಗೆ ಇಷ್ಟವಾಗಿತ್ತು. ಇದನ್ನೂ ಓದಿ : ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ
ಡಾ.ರಾಜ್ ಕುಮಾರ್ ಈ ಹಿಂದೆ ಕಾಲೇಜು ವಿದ್ಯಾರ್ಥಿಗಳಿಗೆ ಸಪ್ಲೈ ಆಗುತ್ತಿದ್ದ ಡ್ರಗ್ಸ್ ಕುರಿತಾದ ಚಿತ್ರವೊಂದನ್ನು ಮಾಡಿದ್ದರು. ಯುವರತ್ನ ಸಿನಿಮಾದಲ್ಲೂ ಅಂತಹ ದೃಶ್ಯಗಳಿದ್ದವು. ಆ ಎರಡೂ ಸಿನಿಮಾಗಳನ್ನು ಅಭಿಮಾನಿಗಳು ಹೋಲಿಕೆ ಮಾಡಿದ್ದರು. ಆ ಸಿನಿಮಾ ಕೆಲವು ದೃಶ್ಯಗಳನ್ನು ತೆರೆಗೆ ತಂದಿರಲಿಲ್ಲ ನಿರ್ದೇಶಕರು. ಈಗ ಆ ದೃಶ್ಯಗಳನ್ನು ತರುವ ಆಲೋಚನೆ ಮಾಡಿದ್ದಾರೆ. ಇದನ್ನೂ ಓದಿ : ಎಳನೀರಿನಲ್ಲಿ ಮದ್ಯ ಹಾಕಿ ಕೊಟ್ಟಿದ್ದೇ ಈ ನಟಿ ಸಾವಿಗೆ ಕಾರಣವಾಯ್ತಾ?
ಪುನೀತ್ ಅಭಿಮಾನಿಯೊಬ್ಬ ಟ್ವಿಟರ್ ಮೂಲಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ‘ಸಂತು ಅಣ್ಣ ನಿಮ್ಮಿಂದ ನಾವು ಇನ್ನೇನು ಕೇಳೋಕೆ ಆಗಲ್ಲ. ಆದರೆ, ಯುವರತ್ನ ಚಿತ್ರದ ಡಿಲಿಟೆಡ್ ಸೀನ್ಸ್ ಹಾಗೂ ಬಿಜಿಎಂ ಮಾತ್ರ ಕೇಳ್ತೀವಿ. ದಯವಿಟ್ಟು ಬಿಡಿ ಅಣ್ಣ’ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ : ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ
ಚಂದು ಎಂಬ ಅಭಿಮಾನಿಯ ಈ ಕೋರಿಕೆಗೆ ಪ್ರತಿಕ್ರಿಯೆ ನೀಡಿರುವ ಸಂತೋಷ್ ಆನಂದ್ ರಾಮ್ “ಈಗಲೇ ಎಲ್ಲವನ್ನೂ ರಿಲೀಸ್ ಮಾಡುವುದಕ್ಕೆ ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಖಂಡಿತಾ ಎಲ್ಲವನ್ನೂ ಅಭಿಮಾನಿಗಳಿಗೆ ಕೊಡುತ್ತೇವೆ. ನಮ್ ಪವರ್ ಸ್ಟಾರ್ ಯಾವತ್ತಿಗೂ ತೆರೆಯ ಮೇಲೆ ಇರಬೇಕು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಯುವರತ್ನ ಸಿನಿಮಾದ ಅನ್ ಕಟ್ ದೃಶ್ಯಗಳನ್ನು ನೋಡುವಂತಹ ಭಾಗ್ಯವನ್ನು ಅವರು ಅಭಿಮಾನಿಗಳಿಗೆ ಕಲ್ಪಿಸಲಿದ್ದಾರೆ.
ಬೆಂಗಳೂರು: ಪುನೀತ್ ಅವರು ದೇವರ ಸ್ವರೂಪದಲ್ಲಿದ್ದರು. ಆದರೆ ಅದು ನಮಗೆ ಗೊತ್ತಾಗಲಿಲ್ಲ. ಅವರಲ್ಲಿ ಈಶ್ವರನಂತಹ ನಟರಾಜನ ಕಲೆ, ಲಕ್ಷ್ಮೀ, ಸರಸ್ವತಿ, ಅನ್ನ ಪೂರ್ಣೇಶ್ವರಿ, ಗುರು ರಾಯರಂತಹ ತಾಳ್ಮೆ ಎಲ್ಲ ರೀತಿಯ ದೇವರ ಗುಣಗಳಿದ್ದವು ಎಂದು ನಟಿ ಸೋನು ಗೌಡ ಹೇಳಿದ್ದಾರೆ.
ಪುನೀತ್ ಕುರಿತಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಅಪ್ಪು ಸರ್ ಇನ್ನಿಲ್ಲ ಎಂದು ನನ್ನ ತಂಗಿ ಕರೆ ಮಾಡಿ ಹೇಳಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಇಂದಿಗೂ ಅವರ ಸಾವನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಅಪ್ಪು ಅವರ ದೊಡ್ಡ ಅಭಿಮಾನಿ. ನನ್ನನ್ನು ನೀವು ಯಾರ ಜೊತೆ ನಟಿಸಲು ಇಷ್ಟಪಡುತ್ತೀರಾ ಎಂದು ಯಾರಾದರೂ ಕೇಳಿದರೆ ನಾನು ಮೊದಲು ಅಪ್ಪು ಸರ್ ಹೆಸರನ್ನು ಹೇಳುತ್ತಿದೆ. ಇದು ಅವರಿಗೂ ತಿಳಿದಿತ್ತು. ನಾನು ಅವರ ಬಳಿ ಅನೇಕ ಬಾರಿ ನಿಮ್ಮೊಂದಿಗೆ ಚಿತ್ರದಲ್ಲಿ ಕೆಲಸ ಮಾಡಲೇಬೇಕು ನೀವು ನನಗೊಂದು ಅವಕಾಶ ನೀಡಲೇಬೇಕೆಂದು ಹೇಳಿಕೊಂಡಿದ್ದೆ. ಆಗ ಹೊಸ ಸ್ಕ್ರೀಪ್ಟ್ ತೆಗೆದುಕೊಂಡು ಬನ್ನಿ ನಿಮಗೆ ಸೂಟ್ ಆಗುತ್ತದೆ ಎಂದರೆ ಖಂಡಿತ ಅವಕಾಶ ನೀಡುತ್ತೇನೆ ಎಂದಿದ್ದರು ಅಂತ ತಿಳಿಸಿದ್ದಾರೆ.
ನನ್ನ ಮೊದಲ ಮೂವಿ ಇಂತಿ ನಿನ್ನ ಪ್ರೀತಿಯಗೆ ಅಪ್ಪು ಅವರು ಕ್ಲಾಪ್ ಮಾಡಿದ್ದರು. ಪರಮೇಶ ಪಾನವಾಲಾ ಸಿನಿಮಾದ ಶೂಟಿಂಗ್ ವೇಳೆ ಅವರನ್ನು ಸಾಕಷ್ಟು ಬಾರಿ ಭೇಟಿಯಾಗುತ್ತಿದೆ. ಆದಾದ ನಂತರ ಯುವರತ್ನ ಶೂಟಿಂಗ್ ಸಮಯದಲ್ಲಿ ಅವರ ಮನೆಗೆ ಊಟಕ್ಕೆ ಅಂತ ಹೋಗಿದ್ದೆ. ಪುನೀತ್ ಅವರು ತಿಂಡಿ ಪ್ರಿಯರು ಹಾಗಾಗಿ ಯಾವಾಗಲೂ ಏನಾದರೂ ಊಟ ತರಿಸಿಕೊಡುತ್ತಿದ್ದರು. ಯಾವತ್ತು ತಾನೊಬ್ಬ ಸ್ಟಾರ್ ನಟನಂತೆ ನಡೆದುಕೊಂಡಿಲ್ಲ. ಸದಾ ಸ್ನೇಹಿತರಂತೆ ಇರುತ್ತಿದ್ದರು. ಆದರೆ ಇಂದು ಅಪ್ಪು ಅವರು ನನ್ನನ್ನು ಎಲ್ಲಿದಲೋ ನೋಡುತ್ತಿದ್ದಾರೆ. ನಾನು ಮಾಡುತ್ತಿರುವ ಕೆಲಸದಲ್ಲಿದ್ದಾರೆ ಅನಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಅಪ್ಪು ಇಷ್ಟೆಲ್ಲ ಸಮಾಜಕ್ಕೆ ದಾನ ಮಾಡಿದ್ದಾನೆ ಎಂದುಕೊಂಡಿರಲಿಲ್ಲ: ಗೋವಿಂದರಾಜು
ಒಮ್ಮೆ ಯುವರತ್ನ ಸಿನಿಮಾದಲ್ಲಿ ಒಂದು ಲಾಯರ್ ಪಾತ್ರವಿದೆ ಅಭಿನಯಿಸುತ್ತೀರಾ ಎಂದು ಕರೆಬಂದಿತ್ತು. ನಂತರ ಆಡಿಶನ್‍ಗೆ ಹೋಗಿದ್ದೆ, ಆದ್ರೆ ನೇರವಾಗಿ ಫೋಟೋ ಶೂಟ್ ಮಾಡಿ ನೀವು ಸೆಲೆಕ್ಟ್ ಆಗಿದ್ದೀರಾ ಎಂದು ತಿಳಿಸಿದ್ದರು. ದೇವರ ಅನುಗ್ರಹದಿಂದ ಯುವರತ್ನ ಸಿನಿಮಾದಲ್ಲಿ ಅಪ್ಪು ಅವರೊಂದಿಗೆ ಕೊನೆಗೂ ಅಭಿನಯಿಸಲು ಅವಕಾಶ ಸಿಕ್ಕಿತು. ನನಗೆ ಅಪ್ಪು ಅವರ ಡ್ಯಾನ್ಸ್, ಫೈಟ್ ಅವರು ಮಾತನಾಡುವ ರೀತಿ ನನಗೆ ಬಹಳ ಇಷ್ಟ. ಪುನೀತ್ ಅವರ ಇಷ್ಟು ಸಮಾಜ ಸೇವೆ ಮಾಡಿದ್ದಾರೆ ಅಂತ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಮರಕೋತಿ ಆಟವಾಡುತ್ತಿದ್ದನ್ನು ಸದಾ ನೆನಪಿಸಿಕೊಳ್ಳುವ ಬಾಲ್ಯದ ಗೆಳೆಯ
46 ಸಂಖ್ಯೆಗೂ ಪುನೀತ್ ಅವರಿಗೂ ಇರುವ ಸಂಬಂಧವನ್ನೆಲ್ಲಾ ನೋಡುತ್ತಿದ್ದರೆ, ಪುನೀತ್ ಅವರು ದೇವರ ಸ್ವರೂಪದಲ್ಲಿದ್ದರು. ಆದರೆ ಅದು ನಮಗೆ ಗೊತ್ತಾಗಲಿಲ್ಲ ಅನಿಸುತ್ತದೆ. ಅವರಲ್ಲಿ ಈಶ್ವರನಂತಹ ನಟರಾಜನ ಕಲೆ, ಲಕ್ಷ್ಮೀ, ಸರಸ್ವತಿ, ಅನ್ನ ಪೂರ್ಣೇಶ್ವರಿ, ಗುರು ರಾಯರಂತಹ ತಾಳ್ಮೆ ಎಲ್ಲ ರೀತಿಯ ದೇವರ ಗುಣಗಳಿದ್ದವು. ಯಾವತ್ತು ಅವರು ಯಾರಿಗೂ ಬೈದು ಮಾತನಾಡಿಸಲಿಲ್ಲ. ಅಪ್ಪು ಅವರು ಯಾವಾಗಲೂ ನಮ್ಮ ಜೊತೆಯಲ್ಲಿಯೇ ಇದ್ದಾರೆ ಎಂಬ ಭಾವನೆ ನನಗಿದೆ ಎಂದು ನುಡಿದಿದ್ದಾರೆ.
ಬೆಂಗಳೂರು: ಚಿತ್ರರಂಗದಲ್ಲಿ ನಟರ ಮಧ್ಯೆ ಪೈಪೋಟಿ ಸಹಜ. ಹಾಗೆಯೇ ಒಳ್ಳೆಯ ಸಿನಿಮಾಗಳು ಬಂದಾಗ ಒಬ್ಬರಿಗೊಬ್ಬರು ಪ್ರಶಂಶಿಸುವುದು ಕೂಡ ಕಾಮನ್. ಸದ್ಯ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ವೀಕ್ಷಿಸಿದ ನಟ ರಕ್ಷಿತ್ ಶೆಟ್ಟಿ ಪುನೀತ್ ನಟನೆಗೆ ಫಿದಾ ಆಗಿದ್ದಾರೆ.
ಸೋಮವಾರ ರಾತ್ರಿ ಯುವರತ್ನ ಸಿನಿಮಾ ನೋಡುವ ಬಗ್ಗೆ ಟ್ವೀಟ್ ಮಾಡಿದ್ದ ರಕ್ಷಿತ್, ಸಿನಿಮಾ ವೀಕ್ಷಿಸಿದ ನಂತರ ಪುನೀತ್ ಅಭಿನಯಕ್ಕೆ ಮಾರು ಹೋಗಿದ್ದಾರೆ. ಈ ಬಗ್ಗೆ ರಕ್ಷಿತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒನ್ ಮ್ಯಾನ್ ಶೋ.. ಅಪ್ಪು ಸರ್.. ಎಂದು ಕ್ಯಾಪ್ಷನ್ ಹಾಕುವ ಮೂಲಕ ಟ್ವೀಟ್ ಮಾಡಿದ್ದಾರೆ.
One man show… Appu Sir ???????? #AppuDance ????????
ಪುನೀತ್ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಸಿನಿಮಾ ವೀಕ್ಷಿಸಲು ಶೇ.50 ರಷ್ಟು ಜನ ವೀಕ್ಷಿಸಲು ಸರ್ಕಾರ ಅನುಮತಿ ನೀಡಿದಾಗ, ಯುವರತ್ನ ಚಿತ್ರತಂಡಕ್ಕೆ ಬೆಂಬಲವಾಗಿ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದರು. ಕೆಲವು ದಿನಗಳ ಬಳಿಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂತೆಗೆದುಕೊಂಡಾಗ, ಪುನೀತ್ ರಾಜ್‍ಕುಮಾರ್ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು. ಈ ವೇಳೆ ರಕ್ಷಿತ್ ಶೆಟ್ಟಿಗೆ ಕೂಡ ಪುನೀತ್ ಧನ್ಯವಾದ ಹೇಳುವುದನ್ನು ಮರೆಯಲಿಲ್ಲ.
ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಕುಟುಂಬ ಭಾನುವಾರ ಅವನ ಫೋಟೋ ಇಟ್ಟುಕೊಂಡು, ಆತನ ಹೆಸರಲ್ಲಿ ಟಿಕೆಟ್ ಪಡೆದು ಸಿನಿಮಾ ನೋಡುವ ಮೂಲಕ ಗಮನ ಸೆಳೆದಿತ್ತು. ಇದಕ್ಕೆ ನಟ ಪುನೀತ್ ರಾಜ್‍ಕುಮಾರ್ ತುಂಬಾ ಭಾವುಕರಾಗಿದ್ದು, ಮನಸ್ಸು ಭಾರವಾಯಿತು ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪುನೀತ್ ರಾಜ್‍ಕುಮಾರ್, ಮೈಸೂರಿನ ಮುರಳಿಧರ್ ಹಾಗೂ ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಲುಗಳನ್ನು ಬರೆದಿದ್ದಾರೆ.
ಮೈಸೂರಿನ ಮುರಳಿಧರ್ ಹಾಗು ಕುಟುಂಬದವರು ಅವರ ದಿವಂಗತ ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ನೋಡಿ ನನ್ನ ಮನಸ್ಸು ಭಾರವಾಯಿತು. ಬಾಲಕ ಹರಿಕೃಷ್ಣನ್ ಆತ್ಮಕ್ಕೆ ಶಾಂತಿ ಸಿಗಲಿ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಸಹ ಮಾತನಾಡಿದ ಪುನೀತ್ ರಾಜ್‍ಕುಮಾರ್, ಮನಸ್ಸಿಗೆ ತುಂಬಾ ಮುಟ್ಟಿತು, ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ಭಗವಂತ ನೀಡಲಿ, ಬಾಲಕನ ಆತ್ಮಕ್ಕೆ ಶಾಂತಿ ಸಿಗಲಿ. ಆತನ ಫೋಟೋ ಜೊತೆಗೆ ಇಟ್ಟುಕೊಂಡು ಸಿನಿಮಾ ನೋಡಿದ್ದಾರೆ. ಇದಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಮೈಸೂರಿಗೆ ಬಂದಾಗ ಖಂಡಿತ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಪುನೀತ್ ರಾಜ್‍ಕುಮಾರ್ ಮುರಳಿಧರ್ ಅವರಿಗೆ ಭರವಸೆ ನೀಡಿದರು. ಹೀಗೆ ಹೇಳುತ್ತಿದ್ದಂತೆ ಮುರಳಿಧರ್ ಅವರು ಭಾವುಕರಾಗಿದ್ದು, ಸಿನಿಮಾ ನೋಡಿದ ತಕ್ಷಣವೇ ನನಗೆ ಶೇ.80ರಷ್ಟು ದುಃಖ ತೀರಿತು. ನಿಮ್ಮವರೆಗೆ ತಲುಪಬೇಕೆಂಬ ಆಸೆ ಇತ್ತು, ಅದೂ ಸಾಧ್ಯವಾಗಿದೆ. ನನ್ನ ಕೊನೆಯ ಆಸೆ ಅಂದುಕೊಳ್ಳಿ, ನನ್ನ ಮಗನ ಫೋಟೋವನ್ನು ಒಂದು ಬಾರಿ ಸ್ಪರ್ಶಿಸಿ ಎಂದು ಮನವಿ ಮಾಡಿದರು.
ನನ್ನ ಮಗ, ನಾನು ಹಾಗೂ ಕುಟುಂಬಸ್ಥರು ತುಂಬಾ ಅದೃಷ್ಟವಂತರು. ನನ್ನ ಮಗ ಪವರ್ ಆಫ್ ಯೂತ್ ಹಾಡು ಕೇಳುತ್ತಿದ್ದಾಗ ಏನೋ ಎನರ್ಜಿ ಕೊಡುತ್ತಿದೆಯಲ್ಲ ಎಂದು ನಾನು ಹಾಡು ಕೇಳುತ್ತಿದ್ದೆ. ಆ ಹಾಡು ತುಂಬಾ ಚೆನ್ನಾಗಿತ್ತು ಎಂದು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಮೈಸೂರಿನ ಮುರಳಿಧರ್ ಅವರ ಮಗ ಹರಿಕೃಷ್ಣನ್ ನಾಲ್ಕು ತಿಂಗಳ ಹಿಂದೆ ಅಕಾಲಿಕ ನಿಧನರಾದ್ದಾರೆ. ಹರಿಕೃಷ್ಣನ್ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ. ಅಲ್ಲದೆ ಯುವರತ್ನ ಸಿನಿಮಾ ನೋಡಬೇಕೆಂದು ಮಹದಾಸೆಯಿಂದ ಕಾಯುತ್ತಿದ್ದ. ಆದರೆ ಯುವರತ್ನ ಸಿನಿಮಾ ರಿಲೀಸ್‍ಗೂ ಮುನ್ನ ಸಾವನಪ್ಪಿದ್ದಾರೆ. ಈಜಲು ಹೋಗಿ ನೀರಲ್ಲಿ ಮುಳುಗಿ ಮಗ ಹರಿಕೃಷ್ಣನ್ ಸಾವನ್ನಪ್ಪಿದ್ದು, ಮಗನ ಆಸೆ ಈಡೇರಿಸುವ ಉದ್ದೇಶದಿಂದ ಭಾನುವಾರ ಮಗನ ಫೋಟೋ ಇಟ್ಟುಕೊಂಡು ಕುಟುಂಬಸ್ಥರು ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಮೈಸೂರಿನ ಡಿಆರ್ ಸಿ ಮಲ್ಟಿಪ್ಲೆಕ್ಸ್ ನಲ್ಲಿ ತಂದೆ, ತಾಯಿ, ಯುವಕನ ಅಣ್ಣ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸಾವನ್ನಪ್ಪಿದ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ಆ ಸೀಟ್ ನಲ್ಲಿ ಮಗನ ಫೋಟೋ ಇಟ್ಟುಕೊಂಡು ಚಲನಚಿತ್ರ ವೀಕ್ಷಿಸಿದರು.
ಈಜಲು ಹೋಗಿ ನೀರಲ್ಲಿ ಮುಳುಗಿ ನಾಲ್ಕು ತಿಂಗಳ ಹಿಂದಷ್ಟೇ ನನ್ನ ಮಗ ತೀರಿಕೊಂಡ. ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್ ಆಗಿದ್ದ. ಪುನೀತ್ ಎಂದರೆ ಪ್ರಾಣ ಅವನಿಗೆ. ಇಂಧು ಸಿನಿಮಾ ನೋಡಲು ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಬರಲು ಇಷ್ಟವಿರಲಿಲ್ಲ. ಈಗಲೂ ನಮ್ಮ ಜೊತೆ ಇದ್ದಾನೆಂದು ನಮ್ಮ ಜೊತೆ ಕರೆದುಕೊಂಡು ಬಂದಿದ್ದೇವೆ. ಅವನಿಗೂ ಟಿಕೆಟ್ ತೆಗೆದುಕೊಂಡಿದ್ದೇವೆ. ಅವನೂ ನಮ್ಮ ಜೊತೆ ಸಿನಿಮಾ ನೋಡಿ ಸಂತೋಷ ಪಡಲೆಂದು ಜೊತೆಗೆ ಕರೆ ತಂದಿದ್ದೇವೆ ಎಂದು ಹೇಳಿ ಫೋಟೋ ತೋರಿಸಿ ತಂದೆ ಮುರುಳಿಧರ್ ಕಣ್ಣೀರು ಹಾಕಿದ್ದರು. ಈ ಸಂದೇಶ ಪುನೀತ್ ಅವರಿಗೆ ತಲುಪಲಿ ಎಂದು ಅವನನ್ನು ಚಿತ್ರ ಮಂದಿರಕ್ಕೆ ಕರೆ ತಂದಿದ್ದೇವೆ. ಅವನ ಆತ್ಮಕ್ಕೆ ಶಾಂತಿ ಸಿಗಲೆಂದು ಪುನೀತ್ ರಾಜ್‍ಕುಮಾರ್ ಅವರು ಹಾರೈಸಿದರೆ ಸಾಕು ಎಂದು ಮನವಿ ಮಾಡಿದ್ದರು. ಇದನ್ನು ಗಮನಿಸಿದ ಪುನೀತ್ ರಾಜ್‍ಕುಮಾರ್ ಇಂದು ಸ್ಪಂದಿಸಿದ್ದಾರೆ.
– ನಾಲ್ಕು ತಿಂಗಳ ಹಿಂದೆ ಪುತ್ರನ ಸಾವು
– ಮಗನ ಫೋಟೋಗೂ ಟಿಕೆಟ್ ಪಡೆದ ಕುಟುಂಬ
ಮೈಸೂರು: ನಾಲ್ಕು ತಿಂಗಳ ಹಿಂದೆ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಕುಟುಂಬ ಇಂದು ಮಗನ ಫೋಟೋ ಇಟ್ಟುಕೊಂಡೇ ಯುವರತ್ನ ಸಿನಿಮಾ ವೀಕ್ಷಿಸುವ ಮೂಲಕ ಗಮನ ಸೆಳೆದಿದೆ.
ನಗರದ ಮುರಳಿಧರ್ ಅವರ ಮಗ ಹರಿಕೃಷ್ಣನ್ ನಾಲ್ಕು ತಿಂಗಳ ಹಿಂದೆ ಅಕಾಲಿಕ ನಿಧನರಾದ್ದಾರೆ. ಹರಿಕೃಷ್ಣನ್ ಪುನೀತ್ ರಾಜ್‍ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ. ಅಲ್ಲದೆ ಯುವರತ್ನ ಸಿನಿಮಾ ನೋಡಬೇಕೆಂದು ಮಹದಾಸೆಯಿಂದ ಕಾಯುತ್ತಿದ್ದ. ಆದರೆ ಯುವರತ್ನ ಸಿನಿಮಾ ರಿಲೀಸ್‍ಗೂ ಮುನ್ನ ಸಾವನಪ್ಪಿದ್ದಾರೆ.
ಈಜಲು ಹೋಗಿ ನೀರಲ್ಲಿ ಮುಳುಗಿ ಮಗ ಹರಿಕೃಷ್ಣನ್ ಸಾವನ್ನಪ್ಪಿದ್ದು, ಮಗನ ಆಸೆ ಈಡೇರಿಸುವ ಉದ್ದೇಶದಿಂದ ಇಂದು ಮಗನಫೋಟೋ ಇಟ್ಟುಕೊಂಡು ಕುಟುಂಬಸ್ಥರು ಸಿನಿಮಾ ವೀಕ್ಷಣೆ ಮಾಡಿದರು.
ಮೈಸೂರಿನ ಡಿಆರ್ ಸಿ ಮಲ್ಟಿಪ್ಲೆಕ್ಸ್ ನಲ್ಲಿ ತಂದೆ, ತಾಯಿ, ಯುವಕನ ಅಣ್ಣ ಸಿನಿಮಾ ವೀಕ್ಷಣೆ ಮಾಡಿದರು. ಸಾವನ್ನಪ್ಪಿದ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು, ಆ ಸೀಟ್ ನಲ್ಲಿ ಮಗನ ಫೋಟೋ ಇಟ್ಟುಕೊಂಡು ಚಲನಚಿತ್ರ ವೀಕ್ಷಿಸಿದರು.
ಈಜಲು ಹೋಗಿ ನೀರಲ್ಲಿ ಮುಳುಗಿ ನಾಲ್ಕು ತಿಂಗಳ ಹಿಂದಷ್ಟೇ ನನ್ನ ಮಗ ತೀರಿಕೊಂಡ. ಪುನೀತ್ ರಾಜ್‍ಕುಮಾರ್ ಅವರ ದೊಡ್ಡ ಫ್ಯಾನ್ ಆಗಿದ್ದ. ಪುನೀತ್ ಎಂದರೆ ಪ್ರಾಣ ಅವನಿಗೆ. ಇಂಧು ಸಿನಿಮಾ ನೋಡಲು ಅವನೊಬ್ಬನನ್ನೇ ಮನೆಯಲ್ಲಿ ಬಿಟ್ಟು ಬರಲು ಇಷ್ಟವಿರಲಿಲ್ಲ. ಈಗಲೂ ನಮ್ಮ ಜೊತೆ ಇದ್ದಾನೆಂದು ನಮ್ಮ ಜೊತೆ ಕರೆದುಕೊಂಡು ಬಂದಿದ್ದೇವೆ. ಅವನಿಗೂ ಟಿಕೆಟ್ ತೆಗೆದುಕೊಂಡಿದ್ದೇವೆ. ಅವನೂ ನಮ್ಮ ಜೊತೆ ಸಿನಿಮಾ ನೋಡಿ ಸಂತೋಷ ಪಡಲೆಂದು ಜೊತೆಗೆ ಕರೆ ತಂದಿದ್ದೇವೆ ಎಂದು ಹೇಳಿ ಫೋಟೋ ತೋರಿಸಿ ತಂದೆ ಮುರುಳಿಧರ್ ಕಣ್ಣೀರು ಹಾಕಿದ್ದಾರೆ.
ಈ ಸಂದೇಶ ಪುನೀತ್ ಅವರಿಗೆ ತಲುಪಲಿ ಎಂದು ಅವನನ್ನು ಚಿತ್ರ ಮಂದಿರಕ್ಕೆ ಕರೆ ತಂದಿದ್ದೇವೆ. ಅವನ ಆತ್ಮಕ್ಕೆ ಶಾಂತಿ ಸಿಗಲೆಂದು ಪುನೀತ್ ರಾಜ್‍ಕುಮಾರ್ ಅವರು ಹಾರೈಸಿದರೆ ಸಾಕು ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು: ಥಿಯೇಟರ್ ಗಳಲ್ಲಿ ಶೇ.50ರಷ್ಟು ಭತೀಗೆ ಅವಕಾಶ ನೀಡಿರುವ ಸರ್ಕಾರದ ನಿರ್ಧಾರವನ್ನು ನಾವು ಗೌರವಿಸಬೇಕಾಗಿದೆ ಎಂದು ಸ್ಯಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ನಟ, ಥಿಯೇಟರ್ ಗಳಲಿ ಮತ್ತೆ ಶೇ.50ರಷ್ಟು ಆಸನಗಳನ್ನು ಭರ್ತಿ ಮಾಡಬೇಕು ಎಂದರೆ ನಿಜಕ್ಕೂ ಇದೊಂದು ಶಾಕಿಂಗ್ ಬೆಳವಣಿಗೆಯಾಗಿದೆ. ಸರ್ಕಾರದ ನಿರ್ಧಾರದಿಂದ ಈಗ ತಾನೇ ಬಿಡುಗಡೆ ಆದ ಚಿತ್ರಕ್ಕೆ ಆತಂಕ ಎದುರಾಗಿದೆ. ಸರ್ಕಾರದ ನಿಯಮಗಳನ್ನು ಗೌರವಿಸುವುದು ಕೂಡ ನಮ್ಮ ಕರ್ತವ್ಯವಾಗುತ್ತದೆ. ಆದರೂ ಇಂತಹ ಸಂದರ್ಭವನ್ನು ಎದುರಿಸಿ ಗೆದ್ದು ಬರುವ ಶಕ್ತಿ ಯುವರತ್ನ ತಂಡಕ್ಕೆ ಸಿಗಲಿ ಎಂದು ಆಶಿಸುವುದಾಗಿ ಅವರು ತಿಳಿಸಿದರು.
Goin bk to 50% theatrical occupancy is surely a shocker to a film tats jus released. Respecting the govts decision too is our duty, keeping in mind its for a reason. I wsh team #Yuvaratna the best of strength to over come this situation and come out victorious. @hombalefilms
ರಾಜ್ಯದಲ್ಲಿ ಮಾಹಾಮಾರಿ ಕೊರೊನಾ ವೈರಸ್ ಅಬ್ಬರ ಮತ್ತೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಕಲಬುರಗಿ, ಬೀದರ್ ಹಾಗೂ ಧಾರವಾಡ ಜಿಲ್ಲೆಗಳ ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ಭರ್ತಿಗೆ ಸರ್ಕಾರ ಆದೇಶ ಹೊರಡಿಸಿತ್ತು.
ಸರ್ಕಾರದ ಈ ನಿರ್ಧಾರಕ್ಕೆ ನಟ ಪುನೀತ್ ರಾಜ್ ಕುಮಾರ್ ತೀವ್ರ ಆಕ್ಷೇಪ ಹಾಗೂ ಬೇಸರ ಹೊರಹಾಕಿದ್ದರು. ಯಾಕಂದರೆ ಪುನೀತ್ ನಟನೆಯ ಯುವರತ್ನ ಚಿತ್ರ ಬಿಡುಗಡೆಯಾಗಿ ಕೇವಲ 2 ದಿನಕ್ಕೆ ಸರ್ಕಾರ ಈ ನಿರ್ಬಂದ ಹೇರಿದ್ದ ಕಾರಣ ನಟ ಆಕ್ರೋಶ ಹೊರಹಾಕಿದ್ದರು. ಕೇವಲ ಪುನೀತ್ ರಾಜ್ ಕುಮಾರ್ ಮಾತ್ರವಲ್ಲದೆ ಚಂದನವನದ ಇತರರು ಕೂಡ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.
– ಯುವರತ್ನ ಗೆದ್ದು ಬರಲಿ ಅಂದ್ರು ಪೈಲ್ವಾನ್ – ಸುಧಾಕರ್ ರಾಜೀನಾಮೆಗೆ ನಿರ್ಮಾಪಕ ಮಂಜು ಆಗ್ರಹ
ಬೆಂಗಳೂರು: ಕೊರೊನಾ ಎರಡನೇ ಅಲೆ ಹಿನ್ನೆಲೆ ಸರ್ಕಾರ ಕೆಲವೊಂದು ಕಠಿಣ ನಿಯಮಗಳು ಜಾರಿಗೆ ತಂದಿದೆ. ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗೆ ಸರ್ಕಾರ ಅವಕಾಶ ಕಲ್ಪಿಸಿರೋದಕ್ಕೆ ಚಿತ್ರಮಂಡಳಿ ಬೇಸರ ವ್ಯಕ್ತಪಡಿಸಿದೆ. ಆರ್ಥಿಕ ಸಂಕಷ್ಟದಲ್ಲಿರುವಾಗ ಈ ಟಫ್ ರೂಲ್ಸ್ ಗಳು ನಮ್ಮನ್ನ ಮತ್ತಷ್ಟು ಚಿತ್ರರಂಗದ ಮೇಲೆ ದೊಡ್ಡ ಹೊಡೆತ ನೀಡಲಿವೆ. ಹಾಗಾಗಿ ಸರ್ಕಾರ ಆದೇಶವನ್ನು ಮರು ಪರಿಶೀಲಿಸಬೇಕೆಂದು ಚಿತ್ರಮಂಡಳಿ ಒಕ್ಕೊಲಿರಿನಿಂದ ಒತ್ತಾಯಿಸಿದೆ.
ಸರ್ಕಾರದ ಆದೇಶದ ಬೆನ್ನಲ್ಲೇ ಇಂದು ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ತುರ್ತು ಸಭೆ ನಡೆಸಿತು. ಸಭೆಯ ಬಳಿಕ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೆಗೌಡರು, ಏಕಾ ಏಕಿ ಈ ನಿರ್ಧಾರ ಮಾಡಿದ್ದು ನಮಗೆ ದೊಡ್ಡ ಆಘಾತ. ನಾವು ಎಲ್ಲಿ ಹೋಗಬೇಕು? ಏನ್ ಮಾಡಬೇಕು? ನಿರ್ಮಾಪಕನ ಕಥೆ ಏನು? ಇದು ಯಾವ್ ಸೀಮೆ ನ್ಯಾಯ,, ತಲೆ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ನಿರ್ಧಾರಕ್ಕೆ ಲಾಜಿಕ್ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಏಕಾಏಕಿ ಈ ನಿರ್ಧಾರದಿಂದ ನಿರ್ಮಾಪಕರಿಗೆ ತೊಂದರೆಯಾಗಿದೆ. ವಾಣಿಜ್ಯ ಮಂಡಳಿ ಪದಾಧಿಕರಿಗಳ ಸಭೆಯ ನಂತ್ರ ಮುಖ್ಯ ಮಂತ್ರಿಗಳನ್ನ ಭೇಟಿಯಾಗಲು ನಿರ್ಧರಿಸಲಾಗುವುದು. ಮೇ ವರೆಗೂ ನಾಲ್ಕು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಬೇಕು. ಮತ್ತೆ ಮೊದಲಿನ ಹಾಗೆ ಶೇ.100ರಷ್ಟು ಭರ್ತಿಗೆ ಅವಕಾಶ ನೀಡಿ ಎಂದು ಸರ್ಕಾರದ ನಡೆಗೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ವಿರೋಧ ವ್ಯಕ್ತಪಡಿಸಿದರು.
ಸಿನಿಮಾದವರ ಮೇಲೆ ಯಾಕೆ ಸುಧಾಕರ್ ಅವರು ಹೀಗೆ ಮಾಡ್ತಿದ್ದಾರೆ. ಗುರುವಾರ ಸಿನಿಮಾ ರಿಲೀಸ್ ಆಗುತ್ತೆ, ಶುಕ್ರವಾರ 50% ಮಾಡ್ತಾರೆ. ವಾರ್ತಾ ಸಚಿವರಿದ್ದಾರೆ, ಫಿಲಂ ಚೇಂಬರ್ ಇದೇ ಯಾರನ್ನೂ ಕೇಳದೆ ಯಾಕೆ ಹೀಗೆ ಮಾಡ್ತಾರೆ. ಸಚಿವ ಸುಧಾಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ನಿರ್ಮಾಪಕ ಮಂಜು ಆಗ್ರಹಿಸಿದರು.
ಅಭಿಮಾನಿಗಳ ಪ್ರತಿಭಟನೆ: ಫಿಲಂ ಚೇಂಬರ್ ಮುಂದೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಸೇರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಸಚಿವ ಸುಧಾಕರ್ ಅವರಿಗೆ ಫೋನ್ ಮಾಡುವಂತೆ ವಾಟ್ಸಪ್ ಗ್ರೂಪ್ ಗಳಲ್ಲಿ ಚರ್ಚೆ ನಡೆಸಲಾಗುತ್ತಿದ್ದು, ಸಚಿವರ ಮೊಬೈಲ್ ನಂಬರ ಶೇರ್ ಮಾಡಲಾಗುತ್ತಿದೆ.
ಸುದೀಪ್ ಟ್ವೀಟ್: ಸರ್ಕಾರದ ಶೇ.50ರಷ್ಟು ಆಸನ ಭರ್ತಿಗೆ ನಟ ಸುದೀಪ್ ಸಹ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿಯಮಗಳನ್ನು ಪಾಲನೆ ಮಾಡೋದು ನಮ್ಮ ಕರ್ತವ್ಯ. ಈ ಸಮಯದಲ್ಲಿ ಯುವರತ್ನ ಗೆದ್ದು ಬರಲಿ ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಸರ್ಕಾರದ ಈ ನಿರ್ಧಾರದಿಂದ ಒಳ್ಳೆಯ ಸಿನಿಮಾ ಕೊಲೆಯಾದಂತಾಗುತ್ತದೆ. ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ಎಂದು ಮಾ.31ರಂದು ರಾತ್ರಿ ಘೋಷಣೆ ಮಾಡಿದ್ದರೂ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿದ್ದೆವು ಎಂದು ನಟ ಪುನೀತ್ ರಾಜ್‍ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
8 ಜಿಲ್ಲೆಗಳ ಚಿತ್ರ ಮಂದಿರಗಳಲ್ಲಿ ಶೇ.50ರಷ್ಟು ಸ್ಥಾನ ಭರ್ತಿಗೆ ಮಾತ್ರ ಅವಕಾಶ ಎಂಬ ನಿಯಮದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾ ಬಿಡುಗಡೆಗೂ 4-5 ದಿನದ ಮೊದಲೇ ಗೊತ್ತಾಗಿದ್ದರೆ ರಿಲೀಸ್ ಮಾಡುತ್ತಿರಲಿಲ್ಲ, ದಿನಾಂಕ ಮುಂದೆ ಹಾಕುತ್ತಿದ್ದೆವು. ಈಗ ಭಾನುವಾರದವರೆಗೆ ಟಿಕೆಟ್ ಕೊಟ್ಟಿದ್ದೇವೆ. ಇದ್ದಕ್ಕಿದ್ದಂತೆ ಈ ರೀತಿ ಘೋಷಣೆ ಮಾಡಿದರೆ ಹೇಗೆ? ನಾವು ಸುಧಾರಿಸಿಕೊಳ್ಳುವುದು ಕಷ್ಟ. ಮಾರ್ಚ್ 31ರಂದು ರಾತ್ರಿ ಗೊತ್ತಾಗಿದ್ದರೂ ನಾವು ಬಿಡುಗಡೆ ಮಾಡುತ್ತಿರಲಿಲ್ಲ. ಈಗ ಬಿಡುಗಡೆಯಾಗಿ ಸಿನಿಮಾವನ್ನು ಜನ ಇಷ್ಟಪಟ್ಟು ನೋಡುತ್ತಿರುವಾಗ ಈ ರೀತಿ ಘೋಷಣೆ ಮಾಡಿದರೆ ಒಳ್ಳೆ ಸಿನಿಮಾವನ್ನು ಕೊಲೆ ಮಾಡಿದಂತಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದರು.
ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ ಸರ್ಕಾರ ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು. ಶೇ.50ರಷ್ಟು ಸೀಟ್ ಭರ್ತಿಗೆ ಮಾತ್ರ ಅವಕಾಶ ಎಂದು ಹೇಳುವುದು ಸುಲಭ. ಆದರೆ ಎಲ್ಲ ಬ್ಯುಸಿನೆಸ್ ಈ ರೀತಿ ಕೆಲಸ ಮಾಡಲ್ಲ. ಇದರಿಂದಾಗಿ ವಿತರಕರು, ಸಿನಿಮಾ ತಂಡ ಸೇರಿದಂತೆ ಎಲ್ಲರಲ್ಲೂ ಗೊಂದಲ ಉಂಟಾಗುತ್ತದೆ. ಮುಖ್ಯಮಂತ್ರಿಗಳ ಜೊತೆ ಮಾತನಾಡುವ ಕೆಲಸ ಸಹ ಆಗಬೇಕಿದೆ. ಸರ್ಕಾರದ ಜೊತೆ ಮಾತನಾಡಿ ಕಾಲಾವಕಾಶ ಕೊಡಿ ಎಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಕೊರೊನಾವನ್ನು ವರ್ಷದಿಂದ ಎದುರಿಸುತ್ತ ಬಂದಿದ್ದೇವೆ. ಕೊರೊನಾ ಕಡಿಮೆಯಾಗುತ್ತ ಬಂದಂತೆ ಎಲ್ಲ ಕೆಲಸಗಳು ಆರಂಭವಾಯಿತು. ಹಾಗೇ ಸಿನಿಮಾ ಚಟುವಟಿಕೆಗಳು ಸಹ ಶುರುವಾಯಿತು. ಶೂಟಿಂಗ್ ಸೇರಿದಂತೆ ಎಲ್ಲವೂ ಆರಂಭವಾಯಿತು. ಬಳಿಕ ಜನವರಿಯಿಂದ ಸಿನಿಮಾಗಳು ಸಹ ಬಿಡುಗಡೆಯಾದವು. ಈಗ ಇದ್ದಕ್ಕಿಂತೆ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದರು.
ಬೆಂಗಳೂರು: ಚಿತ್ರ ಮಂದಿರಗಳ ಸಾಮರ್ಥ್ಯವನ್ನು ಶೇ.50ಕ್ಕೆ ಇಳಿಸಲು ಸರ್ಕಾರ ನಿರ್ಧರಿಸಿದ್ದು, ದಯವಿಟ್ಟು ಶೇ.100ಕ್ಕೆ ಅವಕಾಶ ಮಾಡಿಕೊಡಿ. ಚುನಾವಣಾ ರ‍್ಯಾಲಿ ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳಿಗೆ ನಿರ್ಬಂಧ ಹೇರಿಲ್ಲ ಆದರೆ ಸಿನಿಮಾ ರಂಗವನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ದಯವಿಟ್ಟು ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಡಿ ಎಂದು ನಟ ಪುನೀತ್ ರಾಜ್‍ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಕೇಳಿಕೊಂಡಿದ್ದಾರೆ.
ಫೇಸ್ಬುಕ್ ಲೈವ್‍ನಲ್ಲಿ ಮಾತನಾಡಿರುವ ಅವರು, ಹೆಚ್ಚು ಜನ ಕುಟುಂಬ ಸಮೇತರಾಗಿ ಚಿತ್ರ ಮಂದಿಗಳಿಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಹೀಗಾಗಿ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು. ಶೇ.100 ಭರ್ತಿಗೆ ಅವಕಾಶ ನೀಡಬೇಕು. ಇದರಿಂದ ನಮಗೆ ತುಂಬಾ ಕಷ್ಟವಾಗುತ್ತದೆ ಎಂದು ಅಪ್ಪು ಮನವಿ ಮಾಡಿದ್ದಾರೆ.
ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಪಾಡಿ, ಅರ್ಹರೆಲ್ಲರೂ ಕೊರೊನಾ ವ್ಯಾಕ್ಸಿನ್ ಪಡೆಯಿರಿ ಈ ಮೂಲಕ ಸುರಕ್ಷಿತವಾಗಿರಿ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ. ಪೈರಸಿಯನ್ನು ದೂರವಿಡಿ, ನೀವೇ ಪವರ್ ಆಫ್ ಯೂತ್ ಎಂದು ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಯುವರತ್ನನಿಗೆ ಅಭಿಮಾನಿಯ ವಿಶೇಷ ಸ್ವಾಗತ
ತುಂಬಾ ಪ್ರೀತಿಯಿಂದ ಯುವರತ್ನ ಚಿತ್ರವನ್ನು ಒಪ್ಪಿಕೊಂಡಿದ್ದೀರಿ, ಯಶಸ್ವಿಗೊಳಿಸಿದ್ದೀರಿ. ಹಬ್ಬದ ರೀತಿಯಲ್ಲಿ ಸಿನಿಮಾವನ್ನು ಸ್ವೀಕರಿಸಿ, ಸಂಭ್ರಮಿಸಿದ ರೀತಿ, ಪ್ರೀತಿ, ವಿಶ್ವಾಸಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ, ನಿಮ್ಮೆಲ್ಲರ ಪ್ರೀತಿಗೆ ಚಿರಋಣಿ ಎಂದು ಅಪ್ಪು ಭಾವುಕರಾಗಿದ್ದಾರೆ.
ಪ್ರತಿ ಜಿಲ್ಲೆಯಲ್ಲೂ ಹೆಚ್ಚು ಜನ ಆಗಮಿಸಿ ಸಿನಿಮಾ ನೋಡುತ್ತಿದ್ದಾರೆ. ಸುರಕ್ಷಿತವಾಗಿ, ಚಿತ್ರ ಮಂದಿರಗಳಲ್ಲಿ ಸಹ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಕ್ಕಾಗಿಯೇ ಎಲ್ಲರೂ ಬಂದು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಕೇವಲ ಒಂದು ದಿನ ಕಳೆದಿದೆ. ಇದೀಗ ಇದ್ದಕ್ಕಿಂತೆ ಈ ನಿರ್ಧಾರ ಕೈಗೊಳ್ಳುವುದರಿಂದ ತುಂಬಾ ನಷ್ಟವಾಗುತ್ತದೆ. ಸಾಮಾಜಿಕ ಕಾಳಜಿ ಇರುವ, ಉತ್ತಮ ಸಂದೇಶ ಹೊಂದಿರುವ ಸಿನಿಮಾ ಇದಾಗಿದೆ ಎಂದು ಯುವರತ್ನ ಸಿನಿಮಾದ ನಿರ್ದೇಶಕ ಸಂತೋಷ್ ಆನಂದರಾಮ್ ಲೈವ್‍ನಲ್ಲಿ ಹೇಳಿದ್ದಾರೆ.
ಯಾವುದೇ ಮುನ್ಸೂಚನೆ ಇಲ್ಲದೆ ಈ ರೀತಿ ನಿರ್ಧಾರ ಕೈಗೊಂಡಿದ್ದಕ್ಕೆ ಆಘಾತವಾಗಿದೆ, ತುಂಬಾ ಕಷ್ಟದ ಪರಿಸ್ಥಿತಿ ಇದು. ಸಾರ್ವಜನಿಕರು ಇಷ್ಟಪಟ್ಟು ಸಿನಿಮಾ ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಈ ರೀತಿ ನಿರ್ಧಾರ ಕೈಗೊಳ್ಳಬಾರದು, ಪ್ರೇಕ್ಷಕರ ಬೆಂಬಲದ ಜೊತೆಗೆ ಸರ್ಕಾರದ ಬೆಂಬಲವೂ ಅಗತ್ಯವಾಗಿದೆ. ದೊಡ್ಡ ಸಂಖ್ಯೆಯಲ್ಲಿ ಜನ ಬಂದು ನೋಡಿದಾಗಲೇ ಸಿನಿಮಾ ಯಶಸ್ವಿಯಾಗಲು ಸಾಧ್ಯ. ದಯವಿಟ್ಟು ಶೇ.100ರಷ್ಟು ಭರ್ತಿಗೆ ಅವಕಾಶ ಮಾಡಿಕೊಡಿ ಎಂದು ಸಂತೋಷ್ ಕೇಳಿಕೊಂಡಿದ್ದಾರೆ.