Tag: ಯುವನಟಿ

  • ಸಿನಿಮಾದಲ್ಲಿ ಚಾನ್ಸ್ ಕೊಡ್ತೀನಿ ಕಮಿಟ್ ಆಗ್ತೀಯಾ? ಸ್ಯಾಂಡಲ್‍ವುಡ್ ನಿರ್ದೇಶಕನ ಮೇಲೆ ಯುವನಟಿ ಗಂಭೀರ ಆರೋಪ

    ಸಿನಿಮಾದಲ್ಲಿ ಚಾನ್ಸ್ ಕೊಡ್ತೀನಿ ಕಮಿಟ್ ಆಗ್ತೀಯಾ? ಸ್ಯಾಂಡಲ್‍ವುಡ್ ನಿರ್ದೇಶಕನ ಮೇಲೆ ಯುವನಟಿ ಗಂಭೀರ ಆರೋಪ

    ಬೆಂಗಳೂರು: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ತಿಳಿಸಿದ್ದ ನಿರ್ದೇಶಕರೊಬ್ಬರು, ಬಳಿಕ ಚಾನ್ಸ್ ಬೇಕಾದರೆ ಕಮಿಟ್ ಮೆಂಟ್ ಕೇಳಿದ್ದರು ಎಂದು ಸ್ಯಾಂಡಲ್‍ವುಡ್ ಯುವ ನಟಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

    `ಗೋರಿ ಮೇಲೆ ಲಗೋರಿ’ ಎಂಬ ಸಿನಿಮಾ ನಿರ್ದೇಶಕ ಎಸ್‍ಪಿ ಪ್ರಕಾಶ್ ವಿರುದ್ಧ ಯುವ ನಟಿ ಆರೋಪ ಮಾಡಿದ್ದಾರೆ. ಸಿನಿಮಾ ರಂಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಿರುವ ವೇಳೆಯೇ ಯುವ ನಟಿ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

    ಕನ್ನಡ ಸಿನಿಮಾ ಕ್ಷೇತ್ರದಲ್ಲೂ ನಟಿಯನ್ನು ಗುರಿ ಮಾಡಿ ಮಂಚಕ್ಕೆ ಕರೆಯವು ನಿರ್ದೇಶಕರಿದ್ದಾರೆ ಎಂದು ಹೇಳಿರುವ ಯುವ ನಟಿ, ಮೊದಲು ನನಗೆ ಸಿನಿಮಾದಲ್ಲಿ ಚಾನ್ಸ್ ನೀಡುವ ಕುರಿತು ಹೇಳಿದ್ದರು. ಬಳಿಕ ಕಮಿಟ್ ಆಗುತ್ತಿಯಾ, ಹಣ ಕೊಡುತ್ತೇನೆ ಎಂದು ಎಸ್ ಪಿ ಪ್ರಕಾಶ್ ಕೇಳಿದ್ದರು ಎಂದು ನಟಿ ಹೇಳಿದ್ದಾರೆ. ಅಲ್ಲದೇ ಈ ಕುರಿತು ಫೀಲಂ ಚೇಂಬರ್‍ಗೆ ದೂರು ನೀಡುವುದಾಗಿ ಹೇಳಿದ ವೇಳೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

    ನನಗೆ ಪೋಲೀಸ್, ರಾಜಕೀಯ ನಾಯಕರು ಹಾಗೂ ರೌಡಿಗಳು ಗೊತ್ತು. ನೀನು ದೂರು ನೀಡಿದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ನಿರ್ದೇಶಕರು ಬೆದರಿಕೆ ಹಾಕಿದ್ದರು ಎಂದು ನಟಿ ಹೇಳಿದ್ದು, ಈ ಕುರಿತ ವಾಟ್ಸಾಪ್ ಮೇಸೆಜ್‍ಗಳ ಸ್ಕ್ರಿನ್ ಶಾಟ್ ಫೋಟೋ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೀಟೂ ಅಭಿಯಾನ ಆರಂಭವಾದ ಬಳಿಕ ತನಗಾದ ಕಿರುಕುಳದ ಕುರಿತು ಬಹಿರಂಗ ಪಡಿಸಿರುವ ನಟಿ ತನ್ನ ಹೆಸರನ್ನು ಹೇಳಲು ಇಚ್ಛಿಸಿಲ್ಲ. ಆದರೆ ಸಿನಿಮಾದಲ್ಲಿ ಚಾನ್ಸ್‍ಗಾಗಿ ಆಗಮಿಸುವ ಬೇರೆಯಾವ ಯುವತಿಯರು ತನಗಾದ ಅನುಭವ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಈ ಕುರಿತು ಮಾಹಿತಿ ಬಹಿರಂಗ ಮಾಡಿದ್ದಾರೆ. ಆದರೆ ಇದುವರೆಗೂ ನಿರ್ದೇಶಕರ ಮೇಲೆ ಮಾಡಿರುವ ಆರೋಪದ ಕುರಿತು ನಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=WhWv-Ae2_BM