Tag: ಯುವತಿ. ಅತ್ಯಾಚಾರ

  • ಬಸ್ ಇಳಿದು ಹೋಗುತ್ತಿದ್ದ ಯುವತಿಯನ್ನು ಬಿಗಿದಪ್ಪಿ ರೇಪ್ ಮಾಡಲು ಯತ್ನಿಸಿದವ ಜೈಲು ಸೇರಿದ!

    ಬಸ್ ಇಳಿದು ಹೋಗುತ್ತಿದ್ದ ಯುವತಿಯನ್ನು ಬಿಗಿದಪ್ಪಿ ರೇಪ್ ಮಾಡಲು ಯತ್ನಿಸಿದವ ಜೈಲು ಸೇರಿದ!

    ಮಂಗಳೂರು: ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ 40 ವರ್ಷದ ವ್ಯಕ್ತಿಯೊಬ್ಬನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ದೆಹಲಿ ಮೂಲದ ಮೊಹಮ್ಮದ್ ಇಫ್ತಿಕಾರ್(40) ಬಂಧಿತ ಆರೋಪಿ.

    ಮಂಗಳೂರು ನಗರದ ಮಾಲ್ ನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವತಿ ಎಂದಿನಂತೆ ಕೆಲಸ ಮುಗಿಸಿ ರಾತ್ರಿ 9.30ರ ವೇಳೆಗೆ ಬಸ್ ಹತ್ತಿ ಮನೆಗೆ ಹೊರಟಿದ್ದಳು. ಇದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಈ ದುಷ್ಕೃತ್ಯ ಎಸಗಿದ್ದಾನೆ. ಯುವತಿ ಬಿಕರ್ನಕಟ್ಟೆ ಕೈಕಂಬದಲ್ಲಿ ಇಳಿದು ಮನೆ ಕಡೆ ಹೋಗುತ್ತಿದ್ದಾಗ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಅಲ್ಲದೆ ಹಿಂಭಾಗದಿಂದ ಏಕಾಏಕಿ ಮುನ್ನುಗ್ಗಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ.

    ತಕ್ಷಣ ಯುವತಿ ಕಿರುಚಾಡಿದ್ದಾಳೆ. ಇದರಿಂದ ಎಚ್ಚೆತ್ತ ಸಾರ್ವಜನಿಕರು ತಕ್ಷಣ ಯುವತಿಯ ಸಹಾಯಕ್ಕೆ ಧಾವಿಸಿದ್ದಾರೆ. ಆರೋಪಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. ಆರೋಪಿ ಇಫ್ತಿಕಾರ್ ವಿರುದ್ಧ ಕದ್ರಿ ಠಾಣೆಯಲ್ಲಿ ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ತಮ್ಮನ ಎದುರೇ 13ರ ಬಾಲಕಿಯನ್ನು ರೇಪ್ ಮಾಡಿ ಕೊಲೆಗೈದ!

  • ರಾತ್ರಿ ಮನೆಗೆ ನುಗ್ಗಿ ಪಕ್ಕದಮನೆಯವನಿಂದ ಅತ್ಯಾಚಾರ- ಮನನೊಂದು ಯುವತಿ ಆತ್ಮಹತ್ಯೆ

    ರಾತ್ರಿ ಮನೆಗೆ ನುಗ್ಗಿ ಪಕ್ಕದಮನೆಯವನಿಂದ ಅತ್ಯಾಚಾರ- ಮನನೊಂದು ಯುವತಿ ಆತ್ಮಹತ್ಯೆ

    ಕಲಬುರಗಿ: ಮನೆಗೆ ನುಗ್ಗಿ ಯುವತಿ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದಲ್ಲಿ ನಡೆದಿದೆ. ಪೂಜಾ(20) ಆತ್ಮಹತ್ಯೆಗೆ ಶರಣಾದ ದುರ್ದೈವಿ.

    ಕಳೆದ ರಾತ್ರಿ ಪಕ್ಕದ ಮನೆಯ ಮಲ್ಲಪ್ಪ ಬಂಡಿಮೋರ ಎಂಬಾತ ಮನೆಯಲ್ಲಿ ಪೂಜಾ ಮತ್ತು ಸಹೋದರಿ ಇದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದಾನೆ. ಬಳಿಕ ಇಬ್ಬರನ್ನು ಬೆದರಿಸಿ ಪೂಜಾ ಮೇಲೆ ಅತ್ಯಾಚಾರವೆಸಗಿ ಮನೆಯಲ್ಲಿನ ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದಾನೆ. ಘಟನೆಯಿಂದ ಮನನೊಂದ ಪೂಜಾ ಗ್ರಾಮದ ಹೊರವಲಯದ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸದ್ಯ ಪೂಜಾ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಕಾಮುಕ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ.