Tag: ಯುವಜನತೆ

  • PublicTV Explainer: ಹೃದಯ ಭಾರ.. ಇರಲಿ ಎಚ್ಚರ! – ಹೃದಯಾಘಾತಕ್ಕೆ ಯುವಕರೇ ಹೆಚ್ಚು ಬಲಿ ಯಾಕೆ?

    PublicTV Explainer: ಹೃದಯ ಭಾರ.. ಇರಲಿ ಎಚ್ಚರ! – ಹೃದಯಾಘಾತಕ್ಕೆ ಯುವಕರೇ ಹೆಚ್ಚು ಬಲಿ ಯಾಕೆ?

    ತ್ತೀಚಿಗೆ ಭಾರತದಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹೃದಯಾಘಾತ (Heart Attack), ಹೃದಯ ಸ್ತಂಭನಕ್ಕೆ ಬಲಿಯಾಗುವವರ ಸಂಖ್ಯೆಯೂ ದಿನೇ ದಿನೇ ಏರುತ್ತಿದೆ. ಆಧುನಿಕ ಜೀವನಶೈಲಿ, ಒತ್ತಡದ ಬದುಕು, ಹಿಡಿತಕ್ಕೆ ಸಿಗದ ಬಾಯಿಚಪಲ, ಶಿಸ್ತುಕ್ರಮವಿಲ್ಲದ ಜೀವನಶೈಲಿ, ದೇಹದಂಡನೆಗೆ ಸೋಂಬೇರಿತನ, ವ್ಯಾಯಾಮವಿಲ್ಲದ ದಿನಚರಿ ಈ ಹೃದ್ರೋಗಕ್ಕೆ ಪ್ರಮುಖ ಕಾರಣವಾಗಿದೆ. ಕೆಲಸಕ್ಕೆ ಯಂತ್ರಗಳ ಅತಿಯಾದ ಅವಲಂಬನೆಯಿಂದ ದೇಹಕ್ಕೆ ಕಸರತ್ತಿಲ್ಲದಂತಾಗಿದೆ. ಎಣ್ಣೆಯಲ್ಲಿ ಕರಿದ ತಿನಿಸು ಮತ್ತು ಜಂಕ್‌ಫುಡ್‌ಗಳ ಕಡೆಗಿನ ಆಕರ್ಷಣೆ ಜಾಸ್ತಿಯಾಗಿದೆ. ವ್ಯಾಯಾಮವನ್ನೇ ಮಾಡದೇ ಜಿಡ್ಡುಭರಿತ ಆಹಾರ ಸೇವಿಸುತ್ತಾ ಜೀವನ ಸಾಗಿಸುತ್ತಿರುವುದರಿಂದ ಕೊಬ್ಬು ದೇಹದಲ್ಲೇ ಉಳಿದು, ರಕ್ತದ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟ ಮಿತಿಮೀರಿ ಹೆಚ್ಚಾಗುತ್ತದೆ. ಇದರಿಂದ ರಕ್ತನಾಳಗಳಲ್ಲಿ ಕೊಬ್ಬುತುಂಬಿ, ರಕ್ತಸಂಚಾರಕ್ಕೆ ಅಡಚಣೆಯಾಗಿ ಎದೆನೋವು ಹಾಗೂ ಹೃದಯಾಘಾತ ಸಂಭವಿಸಲು ಕಾರಣವಾಗುತ್ತಿದೆ. ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಜೊತೆಜೊತೆಗೆ ಆಸ್ಪತ್ರೆಗಳು, ವೈದ್ಯರೂ ಹೆಚ್ಚುತ್ತಿದ್ದಾರೆ.

    ಜನಪ್ರಿಯ ನಟ ಪುನೀತ್ ರಾಜ್‌ಕುಮಾರ್ ಅವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತು. ಅಲ್ಲಿಂದೀಚೆಗೆ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜಾಗೃತಿ ಹೆಚ್ಚಾಯಿತು. ಈಗ ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ 30 ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಎಲ್ಲರೂ ಯುವಕರು ಎಂಬುದು ಆತಂಕಕಾರಿ ವಿಚಾರ. ನಿಂತಲ್ಲಿ, ಕುಂತಲ್ಲಿ, ನೃತ್ಯ ಮಾಡುತ್ತಲೇ ಕುಸಿದು ಬೀಳುವುದು. ಊಟ ಮಾಡುವಾಗ, ನಡೆಯುವಾಗ, ವಾಹನಗಳಲ್ಲಿ ಪ್ರಯಾಣಿಸುವಾಗ, ಕೆಲಸ ಮಾಡುತ್ತಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಈ ಹೊತ್ತಿನಲ್ಲೇ ಬಾಲಿವುಡ್ ಖ್ಯಾತ ನಟಿಯೊಬ್ಬರ ಹಠಾತ್ ಸಾವು ಕೂಡ ಇನ್ನಷ್ಟು ಆತಂಕ ಮೂಡಿಸಿದೆ. ಯುವಸಮುದಾಯದ ಈಗಿನ ಜೀವನಶೈಲಿ ಬಗ್ಗೆ ವೈದ್ಯರೇ ಕಳವಳ ವ್ಯಕ್ತಪಡಿಸಿದ್ದಾರೆ. ಬಡತನದಲ್ಲಿ ಬದಕೋದು ಕಷ್ಟ ಎಂಬ ಕಾಲವೊಂದಿತ್ತು. ಆದರೆ, ಈಗ ಆರೋಗ್ಯವಂತರಾಗಿ ಜೀವಿಸುವುದೇ ದುಸ್ತರ ಎನ್ನುವಂತಾಗಿದೆ. ಇದನ್ನೂ ಓದಿ: ಹಾಸನ | ಕಳೆದ 24 ಗಂಟೆಯಲ್ಲಿ ಹೃದಯಾಘಾತದಿಂದ ನಾಲ್ವರು ಸಾವು – ಸಾವಿನ ಸಂಖ್ಯೆ 31ಕ್ಕೆ ಏರಿಕೆ

    ಹಿಂದೆಲ್ಲ ವಯಸ್ಕರಲ್ಲಿ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಭಾದಿಸುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳು, ಯುವಕರೆನ್ನದೇ ಎಲ್ಲಾ ವಯೋಮಾನದವರನ್ನೂ ಹೃದ್ರೋಗ ಸಮಸ್ಯೆಗಳು ಕಾಡುತ್ತಿರುವುದು ಆತಂಕ ಮೂಡಿಸಿದೆ. ಅಷ್ಟಕ್ಕೂ ಏನಿದು ಹೃದಯ ಸಂಬಂಧಿ ಕಾಯಿಲೆ? ಹೃದ್ರೋಗ ತೀವ್ರವಾಗಿ ಕಾಡುತ್ತಿರೋದ್ಯಾಕೆ? ಅದನ್ನು ನಿಯಂತ್ರಿಸುವುದು ಹೇಗೆ? ಆಹಾರ ಕ್ರಮ ಏನು? ಜೀವನಶೈಲಿ ಹೇಗಿರಬೇಕು? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಮಾಹಿತಿ.

    ಹೃದಯದ ಬಗ್ಗೆ ನಿಮಗೆಷ್ಟು ಗೊತ್ತು?
    ಮನುಷ್ಯ ಜೀವಿಸುವುದಕ್ಕೆ ಹೃದಯ ತುಂಬಾ ಅವಶ್ಯಕ. ಹೃದಯವು ಎಡ ಮತ್ತು ಬಲ ಹೃತ್ಕರ್ಷ (Right Atrium) ಮತ್ತು ಹೃತ್ಕುಕ್ಷಿಗಳೆಂಬ (Right Ventricle) ನಾಲ್ಕು ಕೋಣೆಗಳನ್ನು ಹೊಂದಿದೆ. ಬಲ ಹೃತ್ಕರ್ಣವು ದೇಹದ ಎಲ್ಲಾ ಭಾಗಗಳಿಂದಲೂ ಮಲಿನ ರಕ್ತ ಪಡೆದು ಕ್ಷಣಕಾಲ ಶೇಖರಿಸಿ ಆನಂತರ ಅದನ್ನು ಬಲ ಹೃತ್ಕುಕ್ಷಿಗೆ ರವಾನಿಸುತ್ತದೆ. ಅಲ್ಲಿಂದ ರಕ್ತವು ಶ್ವಾಸಕೋಶಗಳಿಗೆ ಸಾಗುತ್ತದೆ. ರಕ್ತದಲ್ಲಿನ ಅಂಗಾರಾಮ್ಲ ಶ್ವಾಸಕೋಶದಲ್ಲಿನ ಗಾಳಿಯೊಳಗೆ ಸೇರಿ, ಗಾಳಿಯಲ್ಲಿನ ಆಮ್ಲಜನಕ ರಕ್ತದೊತ್ತಡಕ್ಕೆ ಹೀರಲ್ಪಡುತ್ತದೆ. ಹೀಗೆ ಶುದ್ಧಗೊಂಡ ರಕ್ತ ಎಡ ಹೃತ್ಕರ್ಣಕ್ಕೆ ಆನಂತರ ಎಡ ಹೃತ್ಕುಕ್ಷಿಗೆ ಹೋಗುತ್ತದೆ. ಬಳಿಕ ಎಡ ಹೃತ್ಕುಕ್ಷಿಯು (Left Ventricle) ಬಲವಾಗಿ ಸಂಕುಚಿಸಿ ರಕ್ತವನ್ನು ಅಯೋರ್ಟಾದ ಮೂಲಕ ದೇಹದ ಮೂಲೆಮೂಲೆಗೂ ತಳ್ಳುತ್ತದೆ. ಎರಡೂ ಹೃತ್ಕರ್ಣಗಳು ಏಕಕಾಲದಲ್ಲಿ ಸಂಕುಚಿಸುತ್ತವೆ. ಆಗ ಹೃತ್ಕುಕ್ಷಿಗಳೊಂದಿಗೆ ಸಂಬಂಧ ಕಲ್ಪಿಸುವ ದ್ವಿದಳ ಮತ್ತು ತ್ರಿದಳ ಕವಾಟಗಳು ತೆರೆದುಕೊಂಡು ಅಯಾ ಹೃತ್ಕುಕ್ಷಿಗಳಲ್ಲಿ ರಕ್ತವು ತುಂಬಿಕೊಳ್ಳುತ್ತದೆ. ಅಲ್ಲಿಯ ಒತ್ತಡವು ಏರುತ್ತಿದ್ದಂತೆ ದ್ವಿದಳ ಮತ್ತು ತ್ರಿದಳ ಕವಾಟಗಳು ಒಟ್ಟಿಗೇ ಬಲವಾಗಿ ಮುಚ್ಚಿಕೊಂಡು ಹೃದಯದ ಮೊದಲನೆಯ ‘ಲಬ್’ ಶಬ್ದವನ್ನು ಉಂಟು ಮಾಡುತ್ತದೆ. ಆ ಒಂದು ಶಬ್ದಕ್ಕೆ ದೇಹದಲ್ಲಿ ಇಷ್ಟೆಲ್ಲಾ ಕಾರ್ಯಗಳು ನಡೆಯುತ್ತವೆ.

    ಮತ್ತೆ ಅಯೋರ್ಟಾ (ಉಸಿರು-ನೆತ್ತರಗೊಳವೆ or ಮಹಾಪಧಮನಿ) ಮತ್ತು ಶ್ವಾಸಕೋಶದ ಅಪಧಮನಿ ಆರ್ಟರಿಗಳ ಮೂಲಕ ದೇಹದ ವಿವಿಧ ಭಾಗಗಳಿಗೆ ಶುದ್ಧ ರಕ್ತವೂ ಶ್ವಾಸಕೋಶಗಳಿಗೆ ಮಲಿನ ರಕ್ತವೂ ಸಾಗುತ್ತದೆ. ಅಯೋರ್ಟಾ ಮತ್ತು ಶ್ವಾಸಕೋಶದ ರಕ್ತನಾಳಗಳಲ್ಲಿ ತುಂಬಿದ ರಕ್ತವು ಹಿಂತಿರುಗದಂತೆ ಅವುಗಳ ಕವಾಟಗಳು ಏಕಕಾಲದಲ್ಲಿ ಮುಚ್ಚಿದಾಗ ಹೃದಯದ 2ನೇ ಶಬ್ದ ‘ಡಬ್’ ಉಂಟಾಗುತ್ತದೆ. ಇದಿಷ್ಟೂ ಕ್ಷಣಮಾತ್ರದಲ್ಲಿ ಆಗುವಂತಹ ಕೆಲಸಗಳು. ಇದನ್ನೂ ಓದಿ: ಹೃದಯಾಘಾತಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ – ನಾಲ್ವರು ಮೊಮ್ಮಕ್ಕಳಿಗೆ ಬೈಪಾಸ್‌ ಸರ್ಜರಿ!

    ‘ಲಬ್ ಡಬ್’ ನಿಮಿಷಕ್ಕೆ ಎಷ್ಟು ಬಾರಿ?
    ಆರೋಗ್ಯವಂತರಲ್ಲಿ ‘ಲಬ್ ಡಬ್’ ಪುನರಾವರ್ತನೆಯು ನಿಮಿಷಕ್ಕೆ ಸರಾಸರಿ 72 ಬಾರಿ ಉಂಟಾಗುತ್ತದೆ.

    ಹೃದಯ ನಿಮಿಷಕ್ಕೆ ಎಷ್ಟು ರಕ್ತ ತಳ್ಳುತ್ತೆ?
    ಹೃದಯವು ಪ್ರತಿ ನಿಮಿಷಕ್ಕೆ ಸುಮಾರು 5 ಲೀಟರ್‌ನಷ್ಟು ರಕ್ತವನ್ನು ತಳ್ಳತ್ತದೆ. 70 ವರ್ಷದ ಜೀವಿತಾವಧಿಯಲ್ಲಿ 70 ಕೋಟಿ ಲೀಟರ್‌ನಷ್ಟು ರಕ್ತವನ್ನು ಎಡಬಿಡದೇ ತಳ್ಳುವಷ್ಟು ಸಾಮರ್ಥ್ಯ ಹೊಂದಿದೆ.

    ಹೃದಯಕ್ಕೆ ಬರುವ ರೋಗಗಳು ಯಾವುವು?
    * ಹೃದಯದ ಗೋಡೆಗಳಲ್ಲಿ ರಂಧ್ರ, ನಿಶ್ಯಕ್ತ ಕವಾಟಗಳು ಇತ್ಯಾದಿ (ಜನ್ಮದತ್ತ ರೋಗಗಳು).
    * ರುಮ್ಯಾಟಿಕ್ ಕಾರ್ಡೈಟಿಸ್ (ಬಾಲ್ಯದಲ್ಲಿನ ಇತರೆ ಕಾಯಿಲೆಗಳಿಂದ ಹೃದಯದ ಮೇಲಾಗುವ ಆಘಾತ).
    * ಸಿಫಿಲಿಸ್‌ನಿಂದ ಬರುವ ಅಯೋರ್ಟಾದ ಕವಾಟ ರೋಗ (ಯೌವನದ ಲೈಂಗಿಕ ರೋಗಗಳಿಂದ ಬರುವ ನ್ಯೂನತೆ).
    * ವೃದ್ಧರನ್ನು ಕಾಡುವ ಕೊರೊನರಿ ರಕ್ತನಾಳಗಳ ಕಾಯಿಲೆಗಳು.
    * ಹೃದಯಸ್ತಂಭನ, ಹೃದಯದಲ್ಲಿ ನೀರುತುಂಬಿಕೊಳ್ಳುವುದು.

    ಹೃದಯಾಘಾತ ಎಂದರೇನು?
    ರಕ್ತನಾಳದ ಒಳಪದರದ ಅಡಿಯಲ್ಲಿ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು ಶೇಖರಣೆಗೊಳ್ಳುತ್ತಾ ಸಾಗುತ್ತವೆ. ಇವು ಶೇ.70-90ಕ್ಕೆ ಏರಬಹುದು. ಒಳಪದರ ಹಿಗ್ಗುತ್ತಾ ಬಲೂನಿನಂತಾಗಿ ಒಡೆದುಹೋಗುತ್ತದೆ. ಕೊಬ್ಬು ಹೊರಚೆಲ್ಲಿ ರಕ್ತದೊಡನೆ ಸೇರಿಕೊಳ್ಳುತ್ತದೆ. ರಕ್ತವು ಹೆಪ್ಪುಗಟ್ಟಿ ಪರಿಚಲನೆಗೆ ಶೇ.100ಕ್ಕೆ ಅಡಚಣೆ ಉಂಟು ಮಾಡುತ್ತದೆ. ಆಗ ಸ್ನಾಯುವಿನ ಪೋಷಣೆ ಸಂಪೂರ್ಣ ನಿಂತುಹೋಗುತ್ತದೆ. ಪರಿಣಾಮವಾಗಿ ವಿಪರೀತ ನೋವು, ಬೆವರು, ಗಾಬರಿ, ಮಂಕು, ಆತಂಕ ಏಕಕಾಲಕ್ಕೆ ಉದ್ಭವಿಸುತ್ತದೆ. ಈ ಸ್ಥಿತಿಗೆ ಹೃದಯಾಘಾತ ಎನ್ನುವುದು. ಆಗ ತಕ್ಷಣ ಚಿಕಿತ್ಸೆ ಸಿಗದಿದ್ದಲ್ಲಿ ಸಾವು ಸಂಭವಿಸಬಹುದು.

    ತೀವ್ರ ಹೃದಯಾಘಾತವಾದ್ರೆ ಏನಾಗುತ್ತೆ?
    ಆಘಾತಕ್ಕೆ ಒಳಗಾದ ಹೃದಯದ ಸ್ನಾಯುವಿನ ಪ್ರಮಾಣ ಶೇ.40-50 ಪ್ರಮಾಣದಷ್ಟು ಸಣ್ಣದಾಗಿದ್ದರೆ ತಕ್ಷಣದ ಚಿಕಿತ್ಸೆ ಸಿಕ್ಕರೆ ಬದುಕುಳಿಯಬಹುದು. ಆದರೆ, ಆ ಪ್ರಮಾಣ ಇನ್ನೂ ಹೆಚ್ಚಿದ್ದರೆ ಸಾವು ಸಂಭವಿಸಬಹುದು. ಹೃದಯಾಘಾತದ ಪ್ರಮಾಣ ಕಡಿಮೆಯಿದ್ದು, ಅದು ಎಡ ಹೃತ್ಕುಕ್ಷಿಯ ಸ್ನಾಯುವನ್ನು ಒಳಗೊಂಡಿದ್ದರೆ ಅಥವಾ ನಾಳವೇ ಕಿರಿದಾದರೆ, ಸಾವಿನ ಪ್ರಮಾಣ ಹೆಚ್ಚಿರುತ್ತದೆ. ಈ ಹಂತದಲ್ಲಿ ಮಿದುಳಿಗೆ ರಕ್ತ ಸರಿಯಾಗಿ ತಲುಪದೇ ವ್ಯಕ್ತಿ ಕೋಮಾ ಸ್ಥಿತಿಗೆ ತಲುಪಿ ಕೊನೆಗೆ ಬ್ರೈನ್ ಡೆಡ್ ಆಗಬಹುದು.

    ಹೃದಯಾಘಾತದಿಂದ ಯುವಜನರು ಏಕೆ ಸಾಯುತ್ತಿದ್ದಾರೆ?
    ಒಂದು ಕಾಲದಲ್ಲಿ 50 ಮತ್ತು 60 ರ ಹರೆಯದವರಲ್ಲಿ ಹೃದಯಾಘಾತ ಹೆಚ್ಚಾಗಿ ಕಂಡುಬರುತ್ತಿತ್ತು. ಈಗ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತಿದೆ. ಪ್ರಪಂಚದಾದ್ಯಂತ ಈ ಪ್ರಮಾಣ ಸರಿಸುಮಾರು 6-10% ರಷ್ಟಿದೆ. ಭಾರತದಲ್ಲಿ ಮಾತ್ರ ಈ ಸಂಖ್ಯೆಗಳು ಇನ್ನೂ ಹೆಚ್ಚು ಕಳವಳಕಾರಿಯಾಗಿದೆ. ಯುವಜನರು ಪಾಶ್ಚಿಮಾತ್ಯೀಕರಣಕ್ಕೆ ಹೆಚ್ಚು ಆಕರ್ಷಿತರಾಗಿದ್ದು, ಜೀವನ ಕ್ರಮವೇ ಬದಲಾಗಿದೆ. ಹೊಗೆಸೊಪ್ಪು ಸೇವನೆ, ಸಿಗರೇಟ್ ಚಟ, ಮಧುಮೇಹ ನಿಯಂತ್ರಣದಲ್ಲಿ ಇಡದೇ ಇರುವುದು, ಸ್ಥೂಲ ಶರೀರ, ರಕ್ತದ ಏರೊತ್ತಡ, ಮಾನಸಿಕ ಒತ್ತಡ, ಮೊಬೈಲ್ ಗೀಳಿನಿಂದ ದೈಹಿಕ ಚಟುವಟಿಕೆ ಇಲ್ಲದಿರುವುದು, ನಿತ್ಯ 3 ಗಂಟೆಗಿಂತ ಕಡಿಮೆ ನಿದ್ರೆ ಮಾಡುವುದು (ಇದರಿಂದ ಶೇ.20 ರಷ್ಟು ಹೃದಯಾಘಾತದ ಅಪಾಯವಿರುತ್ತದೆ), ವಾಯುಮಾಲಿನ್ಯ ಇತ್ಯಾದಿಗಳು ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ. ಇದನ್ನೂ ಓದಿ: ವಯಸ್ಕರಲ್ಲಿ ದಿಢೀರ್ ಹೃದಯಾಘಾತಕ್ಕೆ ಕೋವಿಡ್ ವ್ಯಾಕ್ಸಿನ್ ಕಾರಣವಲ್ಲ; ಐಸಿಎಂಆರ್-ಏಮ್ಸ್ ವರದಿಯಲ್ಲಿ ಸ್ಪಷ್ಟನೆ

    ಜೀವನಶೈಲಿ
    ಈ ಆತಂಕಕಾರಿ ಬದಲಾವಣೆಯ ಹಿಂದಿನ ಪ್ರಮುಖ ಚಾಲಕ ಆಧುನಿಕ ಜೀವನಶೈಲಿ. ಇಂದು ಅನೇಕ ಯುವಕರು ಗಂಟೆಗಳ ಕಾಲ ಮೇಜಿನ ಬಳಿ, ಪರದೆಗಳ ಮುಂದೆ ಅಥವಾ ಪ್ರಯಾಣದಲ್ಲಿ ಕುಳಿತುಕೊಳ್ಳುತ್ತಾರೆ. ಜಡ ಜೀವನ, ಸಂಸ್ಕರಿಸಿದ, ಹೆಚ್ಚಿನ ಸಕ್ಕರೆ ಮತ್ತು ಹೆಚ್ಚಿನ ಕೊಬ್ಬಿನ ಆಹಾರಗಳಿಂದ ತುಂಬಿದ ಆಹಾರದೊಂದಿಗೆ, ಬೊಜ್ಜಿನ ಅಪಾಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಪ್ರತಿಯಾಗಿ, ಬೊಜ್ಜು ಅಧಿಕ ರಕ್ತದೊತ್ತಡ, ಟೈಪ್ 2 ಮಧುಮೇಹ ಮತ್ತು ಅಧಿಕ ಕೊಲೆಸ್ಟ್ರಾಲ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇವೆಲ್ಲವೂ ಹೃದಯಕ್ಕೆ ಅಪಾಯಕಾರಿ. ಇಂದಿನ ವೇಗದ ಜಗತ್ತಿನಲ್ಲಿ, ಅನೇಕ ಯುವಕರು ಹೆಚ್ಚು ಹೆಚ್ಚು ಜಡ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೃದ್ರೋಗ ತಜ್ಞರು ವಿವರಿಸುತ್ತಾರೆ.

    ಮಾನಸಿಕ ಆರೋಗ್ಯ ಮತ್ತು ಒತ್ತಡ
    ಮಾನಸಿಕ ಆರೋಗ್ಯವು ಸಹ ಪ್ರಬಲ ಪಾತ್ರವನ್ನು ವಹಿಸುತ್ತದೆ. ದೀರ್ಘಕಾಲದ ಒತ್ತಡ, ಆತಂಕ ಮತ್ತು ಖಿನ್ನತೆಯು ಕಾರ್ಟಿಸೋಲ್‌ನಲ್ಲಿನ ಉಲ್ಬಣಗಳಂತಹ ಹಾರ್ಮೋನುಗಳ ಬದಲಾವಣೆಗಳಿಗೆ ಕಾರಣವಾಗಬಹುದು, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹೃದಯವನ್ನು ಒತ್ತಡಗೊಳಿಸುತ್ತದೆ. ಒತ್ತಡವು ಹೆಚ್ಚಾಗಿ ಜನರನ್ನು ಧೂಮಪಾನ, ವೇಪಿಂಗ್ ಅಥವಾ ಅತಿಯಾದ ಮದ್ಯಪಾನದ ಕಡೆಗೆ ದೂಡುತ್ತದೆ. ಇದು ಹೃದಯದ ಅಪಾಯಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ.

    ಹೃದ್ರೋಗ ಪತ್ತೆಗೆ ಇರುವ ಪರೀಕ್ಷೆಗಳೇನು?
    ಇಸಿಜಿ: ಹೃದ್ರೋಗ ತಜ್ಞರು ಬಳಸುವ ಪ್ರಾಥಮಿಕ ಪರೀಕ್ಷೆ ಇದಾಗಿದೆ. ಈ ಪರೀಕ್ಷೆಯಿಂದ ಹೃದಯದ ಮೇಲೆ ಯಾವುದೇ ಅಡ್ಡಪರಿಣಾಮ ಬೀರಲ್ಲ. ಹೃದಯದ ಕಾರ್ಯವೈಖರಿಯನ್ನು ಈ ಪರೀಕ್ಷೆಯಿಂದ ಪತ್ತೆಹಚ್ಚಲು ಸಾಧ್ಯ. ಹೃದ್ರೋಗಿಗಳಿಗೆ ಅನುಗುಣವಾಗಿ ಇದರ ರೇಖಾಚಿತ್ರದಲ್ಲಿ ಬದಲಾವಣೆಯಾಗುತ್ತದೆ.

    ಟ್ರೆಡ್ ಮಿಲ್ ಟೆಸ್ಟ್ (ಟಿಎಂಟಿ): ಕೊರೊನರಿ ರಕ್ತನಾಳಗಳ ಬಗ್ಗೆ ಸೂಕ್ತ ವಿವರಣೆ ನೀಡಲು ಇಸಿಜಿಯಿಂದ ಸಾಧ್ಯವಾಗದಿದ್ದಾಗ ಟಿಎಂಟಿ ಪರೀಕ್ಷೆ ಮಾಡಲಾಗುತ್ತದೆ. ರೋಗಿಯು ವ್ಯಾಯಾಮನಿರತನಾಗಿದ್ದಾಗಲೇ ಹೃದಯದ ವೈಪರಿತ್ಯವನ್ನು ಈ ಪರೀಕ್ಷೆಯಿಂದ ತಿಳಿದುಕೊಳ್ಳಲು ಸಾಧ್ಯ. ಇದನ್ನೂ ಓದಿ: ಹೆಚ್ಚುತ್ತಿರುವ ಹೃದಯಾಘಾತ – ಮೈಸೂರಿನ ಜಯದೇವ ಆಸ್ಪತ್ರೆಗೆ ತಪಾಸಣೆಗೆ ಬರುವವರ ಸಂಖ್ಯೆ ದಿಢೀರ್ ಏರಿಕೆ

    ಎಕೊ-ಕಾರ್ಡಿಯೋಗ್ರಫಿ: ಹೃದಯದ ಕೋಣೆಗಳ ಸಂಕುಚನ ಶಕ್ತಿ ಮತ್ತು ಅವುಗಳ ಗೋಡೆಯ ಸ್ಥಿತಿಯನ್ನು ತಿಳಿದುಕೊಳ್ಳಲು ಈ ಪರೀಕ್ಷೆಯಿಂದ ಸಾಧ್ಯ.

    ಆ್ಯಂಜಿಯೋಗ್ರಾಮ್: ಕೊರೊನರಿ ರಕ್ತನಾಳದೊಳಕ್ಕೆ ಕ್ಷ-ಕಿರಣ ನಿರೋಧಕ ವಸ್ತುವನ್ನು ತುಂಬಿ ರಕ್ತನಾಳದಲ್ಲಿ ಎಲ್ಲೆಲ್ಲಿ ಅಡಚಣೆ ಇದೆ, ಅವುಗಳ ಪ್ರಮಾಣವೆಷ್ಟು ಎಂಬುದನ್ನು ಈ ಪರೀಕ್ಷೆಯಿಂದ ತಿಳಿದುಕೊಳ್ಳಬಹುದು. ಈ ಪರೀಕ್ಷೆ ಹೆಚ್ಚು ಖರ್ಚಿನದ್ದು, ಸ್ವಲ್ಪ ಅಡ್ಡಪರಿಣಾಮವನ್ನೂ ಹೊಂದಿದೆ. ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗೆ ಮಾತ್ರ ಇದರ ಅವಶ್ಯಕತೆಯಿದೆ.

    ಹೃದ್ರೋಗ ತಡೆಗೆ ಏನು ಮಾಡಬೇಕು?
    * ನಿಯಮಿತವಾದ ದೈಹಿಕ ವ್ಯಾಯಾಮ.
    * ದೇಹದ ತೂಕ ನಿಯಂತ್ರಣದಲ್ಲಿಡುವುದು.
    * ಧೂಮಪಾನ ತ್ಯಜಿಸುವುದು.
    * ಆತಂಕವಿಲ್ಲದ ಜೀವನ ನಡೆಸುವುದು.
    * ಎಣ್ಣೆ, ತುಪ್ಪ, ಕರಿದ ತಿಂಡಿಯನ್ನು ಮುಟ್ಟದಿರುವುದು.
    * ತರಕಾರಿಯನ್ನು ಹೆಚ್ಚಾಗಿ ಬಳಸುವುದು.
    * ಹಾಲು, ಹಾಲಿನ ಉತ್ಪನ್ನ ಸೇವನೆ ಕಡಿಮೆ ಮಾಡುವುದು.
    * ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸುವುದು.
    * ಮಿತ ಪ್ರಮಾಣದಲ್ಲಿ ಸಸ್ಯಾಹಾರ ಸೇವಿಸುವುದು.
    * ಸದಾ ಚಟುವಟಿಕೆಯಿಂದ ಇರಬೇಕು.
    * ಕಣ್ತುಂಬ ನಿದ್ರೆ ಮಾಡಬೇಕು.
    * ಯೋಗ, ಧ್ಯಾನ ನಿತ್ಯ ಇರಬೇಕು.

    ಏನು ಮಾಡಬಾರದು?
    * ತಂಬಾಕು ಸೇವನೆ, ಮದ್ಯಪಾನ.
    * ಆಲಸ್ಯ ಮನೋಭಾವದವರಾಗಿ ಇರಬಾರದು.
    * ನಿದ್ರೆಗೆಡಬಾರದು.
    * ಚಿಂತೆ ಮಾಡಬಾರದು.
    * ಸಂತೋಷದ ಜೀವನ ನಡೆಸಬೇಕು.

    ಹೃದ್ರೋಗಿಗಳ ಆಹಾರ ಏನಿರಬೇಕು?
    * ತೈಲಯುಕ್ತ ಆಹಾರಗಳಿಂದ ದೂರ ಇರಬೇಕು.
    * ಕೊಲೆಸ್ಟ್ರಾಲ್‌ಯುಕ್ತ ಆಹಾರವನ್ನು ತ್ಯಜಿಸುವುದು.
    * ಹಾಲು, ಹಾಲಿನ ಉತ್ಪನ್ನ, ಬೆಣ್ಣೆ, ಮೊಸರು ಎಲ್ಲವನ್ನೂ ಬಿಡುವುದು.
    * ಮಾಂಸ, ಮೊಟ್ಟೆಯ ಹಳದಿ ಭಾಗ ಸೇವನೆಯಿಂದ ದೂರ ಇರುವುದು.
    * ಸೊಪ್ಪು, ತರಕಾರಿ, ಹಣ್ಣು, ನಾರಿನ ಪದಾರ್ಥಗಳನ್ನು ಹೆಚ್ಚು ಸೇವಿಸುವುದು. ಅತಿ ಸಿಹಿ ಹಣ್ಣುಗಳ ಸೇವನೆ ಕಡಿಮೆ ಮಾಡುವುದು.

  • ಚೀನಾದಲ್ಲಿ ಕೊರೊನಾ ಆರ್ಭಟ – ಉದ್ಯೋಗ ಕಳ್ಕೊಂಡು ಬೀದಿಗೆ ಬಿದ್ದ 2 ಕೋಟಿ ಯುವಜನರು

    ಚೀನಾದಲ್ಲಿ ಕೊರೊನಾ ಆರ್ಭಟ – ಉದ್ಯೋಗ ಕಳ್ಕೊಂಡು ಬೀದಿಗೆ ಬಿದ್ದ 2 ಕೋಟಿ ಯುವಜನರು

    ಬೀಜಿಂಗ್: ಚೀನಾದಲ್ಲಿ (China) ಕೊರೊನಾ ವೈರಸ್‌ (Corona Virus) ಯುವಜನರ ಉದ್ಯೋಗಕ್ಕೂ ಪೆಟ್ಟು ಕೊಟ್ಟಿದೆ. ಸದ್ಯ ಚೀನಾದಲ್ಲಿ 2 ಕೋಟಿ ಯುವಜನರು ಕೆಲಸ ಕಳೆದುಕೊಂಡಿದ್ದಾರೆ.

    ಚೀನಾದ ನಗರ ಪ್ರದೇಶದಲ್ಲಿ ಯುವಜನರ ಸಂಖ್ಯೆ 107 ಮಿಲಿಯನ್ ಇದೆ. ದೇಶದಲ್ಲಿ 16ರಿಂದ 24 ವರ್ಷದೊಳಗಿನ ಯುವಸಮುದಾಯ ಉದ್ಯೋಗ ಕಳೆದುಕೊಂಡಿದೆ. ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕರಲ್ಲಿ ಒಂದಾದ Xiaomi ಸಹ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದನ್ನೂ ಓದಿ: ತೈವಾನ್ ಮೇಲೆ ಮತ್ತೆ ಚೀನಾ ಕ್ಯಾತೆ – 71 ಯುದ್ಧ ವಿಮಾನಗಳಿಂದ ತಾಲೀಮು

    ಚೀನಾದಲ್ಲಿ ನಿರುದ್ಯೋಗ ಪ್ರಮಾಣವು ಈ ವರ್ಷ ಗರಿಷ್ಠ ಮಟ್ಟವನ್ನು ತಲುಪಿದೆ. ಮಾರ್ಚ್‌ನಲ್ಲಿ ಶೇ.15.3 ರಿಂದ ಏಪ್ರಿಲ್‌ನಲ್ಲಿ ದಾಖಲೆಯ ಶೇ.18.2 ಏರಿದೆ. ಇದು ಮುಂದಿನ ಕೆಲವು ತಿಂಗಳುಗಳವರೆಗೆ ಮುಂದುವರಿಯಿತು. ಜುಲೈನಲ್ಲಿ ಶೇ.19.9ಕ್ಕೆ ತಲುಪಿತು. ಆಗಸ್ಟ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ.18.7 ಸ್ವಲ್ಪಮಟ್ಟಿಗೆ ಕುಸಿದಿದೆ ಎಂದು ಹಾಂಗ್‌ಕಾಂಗ್‌ ಪೋಸ್ಟ್‌ ತಿಳಿಸಿದೆ.

    ಕೋವಿಡ್‌ನಿಂದಾಗಿ ನಿರುದ್ಯೋಗ ಸಮಸ್ಯೆ ನಿರ್ಮಾಣವಾಗಿದೆ. ಐವರಲ್ಲಿ ಒಬ್ಬರು ಉದ್ಯೋಗದಿಂದ ಹೊರಗುಳಿದಿದ್ದಾರೆ. ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುವುದರಿಂದ ದೇಶವು ಆರ್ಥಿಕ ಕುಸಿತವನ್ನು ಎದುರಿಸುತ್ತಿದೆ. ಇದನ್ನೂ ಓದಿ: ಯುದ್ಧ ನಿಲ್ಲಿಸಲು ಉಕ್ರೇನ್‌ನೊಂದಿಗೆ ಮಾತುಕತೆಗೆ ನಾವು ಸಿದ್ಧ: ಪುಟಿನ್

    ಹಣಕಾಸಿನ ದಾಖಲೆಗಳ ಪ್ರಕಾರ, Xiaomi 2022 ರ ಮೊದಲ ಒಂಭತ್ತು ತಿಂಗಳುಗಳಲ್ಲಿ 1,900 ಉದ್ಯೋಗಿಗಳನ್ನು ವಜಾ ಮಾಡಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಕಂಪನಿಯು ಸುಮಾರು 35,000 ಉದ್ಯೋಗಿಗಳನ್ನು ಹೊಂದಿತ್ತು. ಅವರಲ್ಲಿ ಹೆಚ್ಚಿನವರು ಚೀನಾದಲ್ಲಿ ನೆಲೆಸಿದ್ದಾರೆ.

    ಕೋವಿಡ್‌ ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ʼಶೂನ್ಯ ಕೋವಿಡ್‌ʼ ಕಠಿಣ ನಿಯಮಗಳಿಂದಾಗಿ ಕಂಪನಿಯ ಒಟ್ಟು ಶೇ.10 ಕುಸಿತ ಕಂಡಿತು.

    Live Tv
    [brid partner=56869869 player=32851 video=960834 autoplay=true]

  • ವಿವೇಕಾನಂದರ ಆದರ್ಶಗಳನ್ನು ನಾವೆಲ್ಲ ಅನುಸರಿಸೋಣ: ಗೋವಿಂದ ಕಾರಜೋಳ

    ವಿವೇಕಾನಂದರ ಆದರ್ಶಗಳನ್ನು ನಾವೆಲ್ಲ ಅನುಸರಿಸೋಣ: ಗೋವಿಂದ ಕಾರಜೋಳ

    ಬಾಗಲಕೋಟೆ: ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಅಂಗವಾಗಿ ಬಾಗಲಕೋಟೆ ಜಿಲ್ಲಾಡಳಿತ ಆಯೋಜಿಸಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಿಸಿಎಂ ಕಾರಜೋಳ, ವಿವೇಕಾನಂದ ಅವರು ಯುವಜನತೆಯ ಆಶಾಕಿರಣ ಎಂದು ಹೇಳಿದ್ದಾರೆ.

    ಯುವ ಶಕ್ತಿಯ ಪ್ರಾಮುಖ್ಯತೆ ಬಹಳಷ್ಟಿದೆ. ಸದಾ ಪರಿಶ್ರಮ, ಶ್ರದ್ಧೆ, ನಿರಂತರ ಪ್ರಯತ್ನದಿಂದ ಸಾಧನೆ ಮಾಡಬಹುದು, ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರೀ ಎನ್ನುವ ಸಂದೇಶದೊಂದಿಗೆ ಯುವ ಸಮೂಹಕ್ಕೆ ಪ್ರೇರೆಪಿಸಿದ್ದಾರೆ. ಇಡೀ ಪ್ರಪಂಚವನ್ನೆಲ್ಲಾ ಪರ್ಯಟನೆ ಮಾಡಿ, ವಿದೇಶಗಳು ಶಿಕ್ಷಣದಿಂದ ಅಭಿವೃದ್ಧಿಯಾಗುತ್ತಿವೆ. ಅದೇ ಮಾದರಿಯಲ್ಲಿ ನಮ್ಮ ದೇಶವು ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು ಎನ್ನುವುದು ವಿವೇಕಾನಂದ ಅವರ ಆಶಯವಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

    ಶೇ.35 ರಷ್ಟು ಯುವ ಶಕ್ತಿಯನ್ನು ಹೊಂದಿರುವ ಭಾರತವು ಸಬಲೀಕರಣವಾಗಲು ಎಲ್ಲರೂ ಉನ್ನತ ಶಿಕ್ಷಣ ಪಡೆಯಬೇಕು. ಯಾವುದೇ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೆ ಭಾರತೀಯ ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಭಾರತವು ವಿಶ್ವಗುರುವಾಗುವಷ್ಟು ಯುವ ಶಕ್ತಿಯನ್ನು ಹೊಂದಿದೆ. ವಿವೇಕಾನಂದ ಅವರ ಆಯಶದಂತೆ ಯುವಕರು ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಯುವಜನೆತೆಗೆ ಕರೆಕೊಟ್ಟರು.

    ರಾಜ್ಯದಲ್ಲಿ 2.5 ಲಕ್ಷ ರೂ. ಗಿಂತ ಕಡಿಮೆ ಆದಾಯವಿರುವ 430 ಸರ್ಕಾರಿ ಪದವಿ ಕಾಲೇಜುಗಳ 2.48 ಲಕ್ಷ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಗುವುದು ಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿದರು. ಸಮಾರಂಭದಲ್ಲಿ ಸಂಸದರಾದ ಶ್ರೀ ಪಿ.ಸಿ. ಗದ್ದಿಗೌಡರ್, ಶಾಸಕರಾದ ಶ್ರೀ ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಎಸ್.ಪಿ ಲೋಕೇಶ್, ಸಿಇಓ ಗಂಗೂಬಾಯಿ ಮಾನಕರ್ ಮತ್ತಿತರರು ಉಪಸ್ಥಿತರಿದ್ದರು.

  • ತುಂಗಭದ್ರ ನದಿ ಪಾತ್ರವನ್ನು ಸ್ವಚ್ಛಗೊಳಿಸಲು ಪಣ ತೊಟ್ಟ ಹರಿಹರ ಯುವಜನತೆ

    ತುಂಗಭದ್ರ ನದಿ ಪಾತ್ರವನ್ನು ಸ್ವಚ್ಛಗೊಳಿಸಲು ಪಣ ತೊಟ್ಟ ಹರಿಹರ ಯುವಜನತೆ

    ದಾವಣಗೆರೆ: ವಾಟ್ಸಪ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಅನಾವಶ್ಯಕ ಚರ್ಚೆಗಳನ್ನು ಮಾಡಿಕೊಂಡು ಕಾಲ ಕಳೆಯುತ್ತಾರೆ. ಆದರೆ ದಾವಣಗೆರೆಯ ಹರಿಹರ ತಾಲೂಕಿನ ಯುವ ಸಮೂಹ ಈ ವಾಟ್ಸಪ್ ಗ್ರೂಪ್ ನಿಂದ ತುಂಗಭದ್ರ ನದಿಯನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಪಣ ತೊಟ್ಟಿದ್ದಾರೆ.

    ತುಂಗಭದ್ರ ನದಿ ದಾವಣಗೆರೆಯ ಹಲವು ತಾಲೂಕುಗಳ ಜೀವನಾಡಿಯಾಗಿದ್ದು, ಹರಿಹರ ತಾಲೂಕಿನ ಪಕ್ಕದಲ್ಲೇ ತುಂಗಭದ್ರ ನದಿ ಹರಿಯುತ್ತಿದ್ದು, ನದಿಯ ಪಾತ್ರದಲ್ಲಿ ಸಾಕಷ್ಟು ಪ್ರವಾಸಿಗರು ಬಂದು ಎಂಜಾಯ್ ಮಾಡಿ ಹೋಗ್ತಾರೆ. ಆದರೆ ಅದರ ಸ್ವಚ್ಛತೆ ಬಗ್ಗೆ ಯಾರೂ ಕೂಡ ಕಾಳಜಿ ವಹಿಸುವುದಿಲ್ಲ.

    ಹರಿಹರದ ಪಟ್ಟಣದ ಯುವ ಸಮೂಹ ವಾಟ್ಸಪ್ ನಲ್ಲಿ ‘ನನ್ನ ಊರು ನನ್ನ ಹೊಣೆ’ ಎಂಬ ಗ್ರೂಪ್ ಕ್ರಿಯೇಟ್ ಮಾಡಿದ್ದಾರೆ. ಅದರ ಉದ್ದೇಶ ಕೇವಲ ಪರಿಸರ ಜಾಗೃತಿ ಹಾಗೂ ಪರಿಸರ ಸ್ವಚ್ಛತೆ ಎಂಬ ಧ್ಯೇಯ. ತಮ್ಮ ಸ್ನೇಹಿತರನ್ನು ಆ ಗ್ರೂಪ್‍ನಲ್ಲಿ ಸೇರ್ಪಡೆ ಮಾಡಿ ವಾರಕ್ಕೆ ಒಮ್ಮೆ ನದಿಯ ಪಾತ್ರದಲ್ಲಿ ಇರುವ ಕಸವನ್ನು ಸ್ವಚ್ಛ ಮಾಡುವುದಕ್ಕೆ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ.

    ಈಗ ಸಂಕ್ರಾಂತಿ ಹಬ್ಬ ಕೂಡ ಹತ್ತಿರ ಬಂದಿದೆ. ಹರಿಹರ ತುಂಗಭದ್ರಾ ನದಿ ಪಾತ್ರದಲ್ಲಿ ಪುಣ್ಯಸ್ನಾನ, ಪೂಜೆ ಮಾಡುವುದು ಇಲ್ಲಿನ ವಾಡಿಕೆ. ಪ್ರತಿ ವರ್ಷ ಮಕರ ಸಂಕ್ರಾಂತಿಗೆ ಪುಣ್ಯಸ್ನಾನ ಹಾಗೂ ಪೂಜೆಗೆಂದು ಸಾವಿರಾರು ಭಕ್ತರು ಹರಿಹರದ ತುಂಗಭದ್ರಾ ದಂಡೆಯಲ್ಲಿ ಸೇರುತ್ತಾರೆ. ಆ ಸಂದರ್ಭದಲ್ಲಿ ನದಿ ಪಾತ್ರ ಸ್ವಚ್ಛವಾಗಿರಬೇಕಂಬ ಸಂಕಲ್ಪದಿಂದ ನದಿ ಪಾತ್ರ ಸ್ವಚ್ಛತೆ ಆಂದೋಲನ ಆರಂಭಿಸಿದ್ದಾರೆ. ವಾರಕ್ಕೆ ಒಮ್ಮೆ ಬೆಳಗ್ಗೆ ನದಿಪಾತ್ರ ಸ್ವಚ್ಛತೆ ಗ್ರೂಪ್‍ನಲ್ಲಿಂದ ಸದಸ್ಯರು ಮಾತ್ರವಲ್ಲದೇ, ನಗರದ ಜನಪ್ರತಿನಿಧಿಗಳು, ನಾಗರಿಕರು, ಮಹಿಳೆಯರು, ಮಕ್ಕಳು ಕೈಜೋಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

  • ಆಂಧ್ರದಲ್ಲಿ ಖಾಸಗಿ ಕಂಪನಿ, ಕೈಗಾರಿಕೆಗಳಲ್ಲಿ ರಾಜ್ಯದ ಯುವಜನತೆಗೆ ಶೇ.75 ಮೀಸಲು

    ಆಂಧ್ರದಲ್ಲಿ ಖಾಸಗಿ ಕಂಪನಿ, ಕೈಗಾರಿಕೆಗಳಲ್ಲಿ ರಾಜ್ಯದ ಯುವಜನತೆಗೆ ಶೇ.75 ಮೀಸಲು

    ಅಮರಾವತಿ: ಖಾಸಗಿ ಸಂಸ್ಥೆಗಳು ಹಾಗೂ ಕೈಗಾರಿಕೆಗಳಲ್ಲಿ ಶೇ.75ರಷ್ಟು ಉದ್ಯೋಗಗಳನ್ನು ಸ್ಥಳೀಯ ಯುವಜನತೆಗೆ ನೀಡಲು ಆಂಧ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಸ್ಥಳೀಯ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮೀಸಲಿರಿಸಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಸೋಮವಾರ ನಡೆದ ಅಧಿವೇಶನದಲ್ಲಿ ಆಂಧ್ರ ಪ್ರದೇಶದ ಕೈಗಾರಿಕೆಗಳು, ಕಾರ್ಖಾನೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯ್ದೆ-2019 ಸಂಬಂಧಿಸಿದ ಮಸೂದೆ ಪಾಸ್ ಆಗಿದೆ.

    ಈ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಕೈಗಾರಿಕೆಗಳು, ಫ್ಯಾಕ್ಟರಿಗಳು, ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ಜಂಟಿ ಉದ್ಯಮಗಳು ಹಾಗೂ ಯೋಜನೆಗಳಲ್ಲಿ ಸ್ಥಳೀಯ ಯುವಕರಿಗೆ ಶೇ.75 ರಷ್ಟು ಉದ್ಯೋಗ ಮೀಸಲಿಡಬೇಕು ಎನ್ನವ ಅಂಶ ಒಳಗೊಂಡಿದೆ. ಅಷ್ಟೇ ಅಲ್ಲದೇ ಖಾಸಗಿ ಸಂಸ್ಥೆಗಳು ಸ್ಥಳೀಯ ಯುವಜನತೆಯಲ್ಲಿ ಕೌಶಲ್ಯವಿಲ್ಲ ಎಂದು ದೂರುವಂತಿಲ್ಲ. ಸರ್ಕಾರದ ಸಹಭಾಗಿತ್ವದಲ್ಲಿ ಅವರಿಗೆ ತರಬೇತಿ ನೀಡಬೇಕಾಗುತ್ತದೆ.

    ಈ ಹಿಂದೆ ಜಗನ್ ಮೋಹನ್ ರೆಡ್ಡಿ ಅವರು ಪಾದಯಾತ್ರೆ ವೇಳೆ ಈ ಭರವಸೆಯನ್ನು ನೀಡಿದ್ದರು. ಚುನಾವಣೆಯ ವೇಳೆ ಜಗನ್ ಅವರ ಪ್ರಣಾಳಿಕೆಯ ಅಂಶ ಕೂಡ ಆಗಿತ್ತು.

    ಕಾಯ್ದೆ ಜಾರಿಯಾದ ಬಳಿಕ ಆಂಧ್ರ ಪ್ರದೇಶದ 1.33 ಲಕ್ಷ ಗ್ರಾಮಗಳಲ್ಲಿ ಯುವಜನತೆ ಉದ್ಯೋಗಿಗಳಾಗುತ್ತಾರೆ. ಖಾಸಗಿ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಯುವಜನತೆಗೆ ಉದ್ಯೋಗ ನೀಡುವ ಕೋಟಾವನ್ನು ಶೀಘ್ರ ಜಾರಿಗೆ ತರಬೇಕು ಎಂದು ತಿಳಿಸಿದರು.

    ಹಲವು ರಾಜ್ಯಗಳು ಖಾಸಗಿ ಕೈಗಾರಿಕೆಗಳು ಹಾಗೂ ಸಂಸ್ಥೆಗಳಲ್ಲಿ ಸ್ಥಳೀಯ ಯುವಜನತೆಗೆ ಉದ್ಯೋಗ ಕಾಯ್ದಿರಿಸುವ ಕಲ್ಪನೆಯನ್ನು ಮುಂದಿಟ್ಟಿವೆ. ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‍ನಾಥ್ ಅವರು ಸ್ಥಳೀಯರಿಗೆ ಶೇ.70ರಷ್ಟು ಉದ್ಯೋಗ ಮೀಸಲಿರಿಸುವ ಕಾನೂನು ರೂಪಿಸುವ ಭರವಸೆಯನ್ನು ನೀಡಿದ್ದಾರೆ.

  • ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ : ಕನ್ಯತ್ವದ ಬಗ್ಗೆ ಪ್ರೊಫೆಸರ್ ಪೋಸ್ಟ್

    ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ : ಕನ್ಯತ್ವದ ಬಗ್ಗೆ ಪ್ರೊಫೆಸರ್ ಪೋಸ್ಟ್

    ಕೋಲ್ಕತ್ತಾ: ಯುವತಿಯರ ಕನ್ಯತ್ವದ ಬಗ್ಗೆ ಅಶ್ಲೀಲವಾಗಿ ಪಶ್ಚಿಮ ಬಂಗಾಳದ ಪ್ರೊಫೆಸರ್ ಒಬ್ಬರು ಬರೆದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

    ಕೋಲ್ಕತ್ತಾದ ಪ್ರತಿಷ್ಠಿತ ಜಾಧವ್‍ಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಕನಕ್ ಸರ್ಕಾರ್ ಕನ್ಯತ್ವವನ್ನು ತಂಪು ಪಾನೀಯಕ್ಕೆ ಹೋಲಿಸಿ, ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿ ಮಾಡುತ್ತೀರಾ ಎಂದು ಪ್ರಶ್ನಿಸಿ ಫೇಸ್‍ಬುಕ್ ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.

    ನೀವು ಸೀಲ್ ಒಡೆದಿರುವ ತಂಪು ಪಾನೀಯವನ್ನು ಖರೀದಿ ಮಾಡುತ್ತೀರಾ ಅಥವಾ ಪ್ಯಾಕ್ ಆಗಿರುವ ಬಿಸ್ಕೇಟ್ ಅನ್ನು ಖರೀದಿ ಮಾಡುತ್ತೀರಾ ಎಂದು ಯುವಕರಿಗೆ ಕನಕ್ ಸರ್ಕಾರ್ ಪ್ರಶ್ನೆ ಮಾಡಿದ್ದಾರೆ.

    20 ವರ್ಷ ಬೋಧನ ಅನುಭವ ಮತ್ತು ಪಿಎಚ್‍ಡಿ ಮಾರ್ಗದರ್ಶಕರಾಗಿರುವ ಕನಕ್ ಸರ್ಕಾರ್, ಕನ್ಯತ್ವ ಹೊಂದಿರುವ ಯುವತಿಯರ ಬಗ್ಗೆ ಈಗಿನ ಹುಡುಗರಿಗೆ ಅರಿವು ಇಲ್ಲ. ಹುಡುಗಿ ಸೀಲ್ ಆಗಿದ್ದರೆ ಆಕೆ `ದೇವತೆ’ ಎಂದು ಬರೆದುಕೊಂಡಿದ್ದಾರೆ.

    ಹುಟ್ಟಿನಿಂದ ಸೀಲ್ ಓಪನ್ ಆಗುವರೆಗೂ ಆಕೆ ಹುಡುಗಿಯಾಗಿರುತ್ತಾಳೆ. ಮದುವೆಯ ಸಮಯದಲ್ಲೂ ಕನ್ಯತ್ವವನ್ನು ಉಳಿಸಿಕೊಂಡಿದ್ದಾಳೆ ಎಂದರೆ ಆಕೆ ಉತ್ತಮ ಗುಣ ನಡತೆಯ ಜೊತೆ ಸುಸಂಸ್ಕೃತೆ ಎಂದರ್ಥ. ಇಂದಿನ ಕಾಲದಲ್ಲಿ ಹುಡುಗರು, ಹುಡುಗಿಯರು ಬ್ರಹ್ಮಚರ್ಯೆ ಮತ್ತು ಕನ್ಯತ್ವದ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾರಣಕ್ಕೆ ಹುಡುಗಿಯರು ಹುಡುಗರ ಕುತಂತ್ರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಕನ್ಯತ್ವದ ಬಗ್ಗೆ ಜಪಾನ್ ದೇಶದ ಉದಾಹರಣೆ ನೀಡಿದ ಅವರು, ಜಪಾನಿನ ಶೇ.99ರಷ್ಟು ಹುಡುಗಿಯರು ಮದುವೆಯಾಗುವವರೆಗೂ ಕನ್ಯತ್ವ ಉಳಿಸಿಕೊಂಡಿರುತ್ತಾರೆ ಎನ್ನುವುದು ಹೆಮ್ಮೆಯ ವಿಚಾರ. ಜಪಾನಿನ ಸಮಾಜ ಅಭಿವೃದ್ಧಿ ಹೊಂದಿದೆ ಎನ್ನುವುದನ್ನು ಇದರಿಂದಲೇ ಗುರುತಿಸಬಹುದು ಎಂದು ಹೇಳಿದ್ದಾರೆ.

    ಪಾಶ್ಚಿಮಾತ್ಯ ಜೀವನ ಶೈಲಿ ಅಳವಡಿಸಿಕೊಂಡ ಕಾರಣ ಇಂದಿನ ಯುವಕ, ಯುವತಿ ಹಾಳಾಗುತ್ತಿದ್ದಾರೆ. ಹೀಗಾಗಿ ಇವರಿಗೆ ಕನ್ಯತ್ವದ ಮಹತ್ವವೇ ತಿಳಿದಿಲ್ಲ ಎಂದು ದೂರಿದ್ದಾರೆ.

    ಫೇಸ್‍ಬುಕ್ ನಲ್ಲಿ ಕೆಲ ದಿನಗಳಿಂದ ಕನ್ಯತ್ವದ ಬಗ್ಗೆ ಪೋಸ್ಟ್ ಪ್ರಕಟಿಸುತ್ತಿದ್ದ ಕನಕ್ ಸರ್ಕಾರ್ ತನ್ನ ಅಭಿಪ್ರಾಯಗಳು ವಿವಾದಕ್ಕೆ ಕಾರಣವಾಗುತ್ತಿದೆ ಎನ್ನುವುದನ್ನು ತಿಳಿದು ಎಲ್ಲ ಪೋಸ್ಟ್ ಗಳನ್ನು ಈಗ ಡಿಲೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2018 ರೌಂಡಪ್ – ಸದ್ದು ಮಾಡಿದ ಚಾಲೆಂಜ್ ಗಳು

    2018 ರೌಂಡಪ್ – ಸದ್ದು ಮಾಡಿದ ಚಾಲೆಂಜ್ ಗಳು

    ಕೆಲವು ದಿನಗಳಲ್ಲಿ 2018 ಮುಗಿಯುತ್ತದೆ. ಈ ವರ್ಷದಲ್ಲಿ ಆದ ಕೆಲವು ಘಟನೆಗಳನ್ನು ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. 2018ರಂದು ಭಾರತಕ್ಕೆ ಸಾಕಷ್ಟು ಡೆಡ್ಲಿ ಗೇಮ್ ಚಾಲೆಂಜ್ ಕಾಲಿಟ್ಟಿತ್ತು. ಕೆಲವು ಚಾಲೆಂಜ್‍ನಿಂದಾಗಿ ಸಾಕಷ್ಟು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡರೆ, ಕೆಲವರು ತಮ್ಮ ಪ್ರಾಣವನ್ನೇ ರಿಸ್ಕ್ ತೆಗೆದುಕೊಂಡು ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಡೆಡ್ಲಿ ಚಾಲೆಂಜ್‍ಗಳ ಜೊತೆ ಫಿಟ್‍ನೆಸ್ ಚಾಲೆಂಜ್ ಮತ್ತು ಬಿಂದಿ ಚಾಲೆಂಜ್ ಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.

    ಬ್ಲೂ ವೇಲ್ ಚಾಲೆಂಜ್: ರಷ್ಯಾ ಮೂಲದ ಭಯಾನಕ ಆನ್‍ಲೈನ್ ಆಟದಲ್ಲಿ ಸಂಗೀತಾ ಕೇಳುವುದು, ಬೆಳಗ್ಗೆ ಬೇಗ ಏಳುವುದು ಸೇರಿದಂತೆ 50 ಟಾಸ್ಕ್ ಗಳಿರುತ್ತಿತ್ತು. ಇದರಲ್ಲಿ ಕೊನೆಯ ಆಟ ಎತ್ತರದ ಕಟ್ಟಡದಿಂದ ಕೆಳಗೆ ಜಿಗಿಯಬೇಕಿತ್ತು. ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವ ಮುನ್ನ ವ್ಯಕ್ತಿ ಸಾಕ್ಷಿಗೆ ಫೋಟೋಗಳನ್ನು ಕಳುಹಿಸಬೇಕಾಗಿತ್ತು. ನಂತರ ಕಟ್ಟಡದಿಂದ ಹಾರಬೇಕಿತ್ತು. ಇಂತಹ ಟಾಸ್ಕ್ ಗಳು ಹೆಚ್ಚಾಗಿ ಹಾರರ್ ಸಿನಿಮಾಗಳಲ್ಲಿ ಇರುತ್ತವೆ. ಸದ್ಯ ಈ ಆಟಕ್ಕೆ ವಿದೇಶಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದರು.

    ಫಿಟ್ನೆಸ್ ಚಾಲೆಂಜ್: ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ 22ರಂದು, “ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿ ಟ್ವೀಟ್ ಮಾಡಿ ಈ ಚಾಲೆಂಜ್ ಶುರು ಮಾಡಿದ್ದರು.

    ವಿರಾಟ್ ಕೊಹ್ಲಿ ಸವಾಲು ಸ್ವೀಕರಿಸಿದ ನಂತರ ಅದನ್ನು ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿದ್ದರು. ನಂತರ ಕೊಹ್ಲಿಯವರ ಸವಾಲನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಫಿಟ್ನೆಸ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಹೀಗೆ ದೇಶ್ಯಾದ್ಯಂತ ಹಲವು ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿದ್ದರು.

    ಮೋಮೋ ಚಾಲೆಂಜ್: ಸಾಮಾಜಿಕ ಜಾಲತಾಣಗಳಲ್ಲಿ ಮೋಮೋ ಚಾಲೆಂಜ್ ವೈರಲ್ ಆಗಿತ್ತು. ಈ ಮೋಮೋ ಚಾಲೆಂಜ್ ಆಟವನ್ನು ಫೇಸ್‍ಬುಕ್ ಮತ್ತು ವಾಟ್ಸಪ್ ಮೂಲಕ ಆಡಲಾಗುತ್ತದೆ. ಇದು ಜನರನ್ನು ದೈಹಿಕವಾಗಿ ಹಾನಿ ಮಾಡುವುದು ಮತ್ತು ತಮ್ಮನ್ನು ತಾವೇ ಕೊಲೆ ಮಾಡಿಕೊಳ್ಳುವಂತೆ ಪ್ರಚೋದನೆಯನ್ನು ನೀಡುತ್ತಿತ್ತು. ಮೋಮೋ ಚಾಲೆಂಜ್ ನಲ್ಲಿ ಸಿಲುಕಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

    ಕಿಕಿ ಚಾಲೆಂಜ್: ಟ್ರಾಫಿಕ್ ಮಧ್ಯೆ ಚಲಿಸುವ ಕಾರಿನಿಂದ ಜಿಗಿದು ನೃತ್ಯ ಮಾಡುವ ಚಾಲೆಂಜ್ ಸಾಕಷ್ಟು ವೈರಲ್ ಆಗಿತ್ತು. ವಿಶ್ವದ ಹಲವು ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಕನ್ನಡದಲ್ಲಿ ಬಿಗ್ ಬಾಸ್ ನಿವೇದಿತಾ ಗೌಡ ಮೊದಲ ಬಾರಿಗೆ ಕಿಕಿ ಚಾಲೆಂಜ್ ಸ್ವೀಕರಿಸಿದ್ದರು. ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಪೈಲೆಟ್ ಕಿಕಿ ಚಾಲೆಂಜ್‍ಗೆ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಫಾಲಿಂಗ್ ಸ್ಟಾರ್ ಚಾಲೆಂಜ್: ಫಾಲಿಂಗ್ ಸ್ಟಾರ್ ಎಂಬ ಚಾಲೆಂಜ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗಿತ್ತು. ಈ ಚಾಲೆಂಜ್ ಸ್ವೀಕರಿಸಿದವರು ನಡೆಯುತ್ತಲೇ ಕೆಳಗೆ ಬಿದ್ದು, ತಮ್ಮ ಅಕ್ಕಪಕ್ಕದಲ್ಲಿ ಬೆಲೆಬಾಳುವ ವಸ್ತುಗಳೊಂದಿಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಇನ್ ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಬೇಕಿತ್ತು.

    ಬಿಗ್ ಬಿಂದಿ ಚಾಲೆಂಜ್: ದಸರಾ ನವದುರ್ಗೆಯರ ಆರಾಧನೆ ಜೊತೆಗೆ ನಮ್ಮ ಸಂಪ್ರದಾಯದ ಬಗ್ಗೆ ತಿಳಿ ಹೇಳಲು ಬಿಗ್ ಬಿಂದಿ ಚಾಲೆಂಜ್ ಶುರುವಾಗಿತ್ತು. ಇದು ಸಿಂಪಲ್ ಚಾಲೆಂಜ್ ಆಗಿದ್ದು, ಹಣೆಗೆ ದೊಡ್ಡ ಬಿಂದಿ ಅಥವಾ ಕುಂಕುಮವನ್ನು ಇಟ್ಟು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಬೇಕಿತ್ತು. ಈ ಚಾಲೆಂಜ್ ಶುರು ಆದ ಎರಡೇ ದಿನದಲ್ಲಿ ಸಾವಿರಾರು ಜನ ಚಾಲೆಂಜ್ ಸ್ವೀಕರಿಸಿ ತಮ್ಮ ಫೇಸ್‍ಬುಕ್ ಅಕೌಂಟ್ ನಲ್ಲಿ ಸೆಲ್ಫಿ ಹಾಕಿಕೊಂಡಿದ್ದರು. ಬಿಗ್ ಬಿಂದಿ ಚಾಲೆಂಜ್ ಸ್ವೀಕರಿಸಿ ಸಾಕಷ್ಟು ಹೆಣ್ಮಕ್ಕಳು ಈಗಲೂ ನಾವು ನಮ್ಮ ಸಂಪ್ರದಾಯವನ್ನು ಬಿಟ್ಟಿಲ್ಲ ಅಂತ ತೋರಿಸಿದ್ದರು.

    PUBG ಗೇಮ್: ಪಬ್ ಜಿ ಎನ್ನುವುದು ಒಂದು ಬ್ಯಾಟಲ್ ಫೀಲ್ಡ್ ಗೇಮ್ (ಯುದ್ಧ ಭೂಮಿ ಆಟ). ಈ ಆಟದ ಸಂಪೂರ್ಣ ಭೂಪಟವನ್ನು ಆಟಗಾರಿಗೆ ಮೊದಲು ತೋರಿಸಲಾಗುತ್ತದೆ. ಬಳಿಕ ಆಟಗಾರರು ತಮಗೆ ಬೇಕಾದ ಪ್ರದೇಶವನ್ನು ಆಯ್ದುಕೊಂದು ಆ ಪ್ರದೇಶಕ್ಕೆ ವಿಮಾನದಿಂದ ಕೆಳಗೆ ಹಾರಿ ಮನೆಗಳತ್ತ ಓಡ್ತಾರೆ. ಆಟಗಾರರಿದ್ದ ಪ್ರದೇಶದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು, ಮೆಡಿಕಲ್ ಕಿಟ್‍ಗಳನ್ನು, ಯುದ್ಧಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದೆ ಸಾಗುತ್ತಾರೆ. ಆಟಗಾರರು ಇಳಿದ ಪ್ರದೇಶದ ಸುತ್ತ ವೃತ್ತವೊಂದು ಸಣ್ಣದಾಗುತ್ತೆ. ಆಗ ಅಲ್ಲಿದ್ದ ನೂರಾರು ಜನರ ಜೊತೆ ಹೋರಾಡಿ ಉಳಿದರೇ ಗೆದ್ದಂತೆ, ಮೃತಪಟ್ಟರೆ ಸೋತಂತೆ. ಈ ಆಟದ ವಿಶೇಷ ಏನೆಂದರೆ ಸ್ನೇಹಿತರ ಜೊತೆ ಸೇರಿ ಆಡಬಹುದು. ದೆಹಲಿಯಲ್ಲಿ 19 ವರ್ಷದ ಯುವಕನೊಬ್ಬ ಈ ಗೇಮ್ ಚಟಕ್ಕೆ ಬಿದ್ದು ತನ್ನ ಪೋಷಕರು ಮತ್ತು ಸೋದರಿಯನ್ನು ಕೊಲೆ ಮಾಡಿದ್ದನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೈನ್ಯಕ್ಕೆ ಸೇರಲು ಯುವಜನತೆಯನ್ನು ಪ್ರೇರೇಪಿಸಲು ಸೈಕಲ್ ಪ್ರಯಾಣ ಆರಂಭಿಸಿದ ಸೈನಿಕ ಶಾಲೆಯ ಪ್ರಾಚಾರ್ಯ

    ಸೈನ್ಯಕ್ಕೆ ಸೇರಲು ಯುವಜನತೆಯನ್ನು ಪ್ರೇರೇಪಿಸಲು ಸೈಕಲ್ ಪ್ರಯಾಣ ಆರಂಭಿಸಿದ ಸೈನಿಕ ಶಾಲೆಯ ಪ್ರಾಚಾರ್ಯ

    ವಿಜಯಪುರ: ಸೈನ್ಯ ಸೇರ್ಪಡೆಗೆ ಯುವಜನತೆಯನ್ನು ಪ್ರೇರೇಪಿಸಲು ಹಾಗೂ ದೇಶಸೇವೆಯಂತಹ ಪವಿತ್ರ ಕಾರ್ಯಕ್ಕೆ ಅಣಿಗೊಳಿಸುವ ಉದ್ದೇಶದಿಂದ ಸೈನಿಕ ಶಾಲೆಯ ಪ್ರಾಚಾರ್ಯರೊಬ್ಬರು ಸುದೀರ್ಘ 700 ಕಿಮೀ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದ್ದಾರೆ.

    ಉತ್ತರ ಕರ್ನಾಟಕದ ಮುಕುಟ ಪ್ರಾಯವಾಗಿರುವ ವಿಜಯಪುರದಲ್ಲಿರುವ ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ತಮೋಜಿತ್ ಬಿಸ್ವಾಸ್ ಅವರು ಇಂಥದ್ದೊಂದು ಪ್ರೇರಣಾತ್ಮಕ ಸಾಧನೆಗೆ ಮುನ್ನುಡಿ ಬರೆಯಲು ಹೊರಟಿದ್ದಾರೆ. ಇವರು ಸೈನ್ಯದ ಬಗ್ಗೆ ಜಾಗೃತಿ ಮೂಡಿಸುವ ಮಹತ್ಕಾರ್ಯವನ್ನು ಕೈಗೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ವಿದ್ಯಾರ್ಥಿಗಳು ಶಾಲೆಯ ಆವರಣದಿಂದ ಗೇಟಿನವರೆಗೆ ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.

    ವಿಜಯಪುರದಿಂದ ಆರಂಭವಾಗಿ ಕೊಡಗಿನವರೆಗೆ ತಮೋಜಿತ್ ಬಿಸ್ವಾಸ್ ಪ್ರಯಾಣಿಸಲಿದ್ದು, ನಿಗದಿತ ಅವಧಿಯೊಳಗೆ ಸುಮಾರು ಆರು ಜಿಲ್ಲೆಗಳ ಮೂಲಕ 700 ಕಿಮೀ ದೂರವನ್ನು ಕ್ರಮಿಸಲಿದ್ದಾರೆ. ಇವರು ದಿನಕ್ಕೆ 200 ಕಿಮೀ ಪೆಡಲ್ ತುಳಿಯುವ ದೃಢ ನಿರ್ಧಾರ ಮಾಡಿ, ಆಲಮಟ್ಟಿ, ಹೊಸಪೇಟೆ, ಚಿತ್ರದುರ್ಗ, ಚಿಕ್ಕನಾಯಕನಹಳ್ಳಿ, ಹೊಳೆನರಸೀಪುರ ಮಾರ್ಗವಾಗಿ ಪ್ರಯಾಣಿಸಿ ಅಕ್ಟೋಬರ್ 31 ರಂದು ಕೊಡಗಿನ ಸೈನಿಕ ಶಾಲೆಗೆ ತಲುಪಲಿದ್ದಾರೆ. ಇನ್ನು ಮಾರ್ಗಮಧ್ಯೆ ಸಿಗುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಕೆಲಕಾಲ ಸಮಯ ಕಳೆದು ಅಲ್ಲಿನ ವಿದ್ಯಾರ್ಥಿಗಳನ್ನುದ್ದೇಶಿಸಿ ದೇಶಸೇವೆಯ ಪವಿತ್ರ ಕಾರ್ಯ ನಿರ್ವಹಿಸಲು ಪ್ರೇರೇಪಿಸಲಿದ್ದಾರೆ.

    ದೇಶಸೇವೆ ಅತ್ಯಂತ ಪುಣ್ಯದ ಕಾರ್ಯ. ಇತ್ತೀಚಿನ ಶಿಕ್ಷಣ ಪದ್ಧತಿ ಎಂದರೆ ವಿದ್ಯಾರ್ಥಿಗಳು ಅಧಿಕ ಅಂಕಗಳನ್ನು ಗಳಿಸುವುದು ದೊಡ್ಡ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಆದರೆ ನಿಜವಾದ ಶಿಕ್ಷಣ ಎಂದರೆ ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಾಸನವಾಗಬೇಕು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರತೆಗೆದು ರಾಷ್ಟ್ರ ಪ್ರೇಮದ ಬಗ್ಗೆ ಆ ಶಕ್ತಿಯನ್ನು ಮೂಡಿಸಬೇಕು. ದೇಶದ ರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗಲು ಪ್ರತಿಯೊಬ್ಬರು ಇಂದಿನಿಂದಲೇ ಕನಸು ಕಾಣಿ, ದೇಶದ ಹೆಮ್ಮೆಯ ಪ್ರತೀಕವಾಗಿರುವ ಸೈನಿಕ ಶಾಲೆಗಳಿಗೆ ಸೇರ್ಪಡೆಯಾಗಬೇಕೆಂದು ತಮೋಜಿತ್ ಬಿಸ್ವಾಸ್ ಹೇಳಿದ್ದಾರೆ.


  • ಬಜೆಟ್‍ನಲ್ಲಿ ಯುವಜನತೆಗೆ ಮತ್ತು ಕ್ರೀಡಾ ಇಲಾಖೆಗೆ ಸಿಕ್ಕಿದ್ದು ಏನು?

    ಬಜೆಟ್‍ನಲ್ಲಿ ಯುವಜನತೆಗೆ ಮತ್ತು ಕ್ರೀಡಾ ಇಲಾಖೆಗೆ ಸಿಕ್ಕಿದ್ದು ಏನು?

    ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡೆಗೆ ಸಿಎಂ ಸಿದ್ದರಾಮಯ್ಯ 288 ಕೋಟಿ ರೂ. ಅನುದಾನ ನೀಡಿದ್ದಾರೆ. ಬಜೆಟ್‍ನಲ್ಲಿ ಘೋಷಣೆಯಾದ ಪ್ರಮುಖ ಅಂಶಗಳು ಇಲ್ಲಿದೆ

    – ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಲು 1 ಸಾವಿರ ಪ್ರತಿಭಾನವಿತ ಕ್ರೀಡಾಪಟುಗಳಿಗೆ ತಲಾ 1 ಲಕ್ಷ ನೆರವು, 10 ಕೋಟಿ ಮೀಸಲು
    – 1 ಕೋಟಿ ವೆಚ್ಚದಲ್ಲಿ 4 ಕ್ರಿಡಾ ಅಕಾಡೆಮಿ ಸ್ಥಾಪನೆ, ಬೆಂಗಳೂರಿನ ವಿದ್ಯಾನಗರದಲ್ಲಿ ಬ್ಯಾಸ್ಕೇಟ್ ಬಾಲ್, ಉಡುಪಿಯಲ್ಲಿ ಈಜು, ಮೈಸೂಇನಲ್ಲಿ ಟೆನಿಸ್, ಚಿತ್ರದುರ್ಗದಲ್ಲಿ ಆರೋಹಣ ಅಕಾಡೆಮಿ ಸ್ಥಾಪನೆ
    – ಖಾಸಗಿ ಸಹಭಾಗ್ವಿತ್ವದಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿಗಳ ಪ್ರಾರಂಭ

    – 2 ಕೋಟಿ ವೆಚ್ಚದಲ್ಲಿ ಕ್ರೀಡಾ ವಿಜ್ಞಾನಕೇಂದ್ರಗಳ ಸ್ಥಾಪನೆ
    – ಖಾಸಗಿ ಸಹಭಾಗಿತ್ವದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನ ವರುಣ ಕೆರೆಯಲ್ಲಿ ಜಲಕ್ರೀಡಾ ಕೇಂದ್ರ ಅಭಿವೃದ್ಧಿ
    – 8 ಕೋಟಿ ವೆಚ್ಚದಲ್ಲಿ ನಾಲ್ಕು ಕ್ರೀಡಾ ವಿದ್ಯಾರ್ಥಿನಿಲಯಗಳಲ್ಲಿ ಅತ್ಯಾಧುನಿಕ ವ್ಯಾಯಾಮ ಶಾಲೆ ಆರಂಭ
    – ಮಹಿಳಾ ಆಥ್ಲೀಟ್‍ಗಳಿಗಾಗಿ ತಲಾ 1 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಸುಸಜ್ಜಿತ ಕ್ರೀಡಾ ವಿದ್ಯಾರ್ಥಿ ನಿಲಯ

    – ಬೆಳಗಾವಿ, ಮೈಸೂರಿನಲ್ಲಿ ಆಧುನಿಕ ಜಿಮ್ನಾಸ್ಟಿಕ್ ಸೌಲಭ್ಯ- 4 ಕೋಟಿ ಅನುದಾನ
    – ವಿಕಲಚೇತನ ಕ್ರೀಡಾ ವಿಭಾಗ- 4 ಕೋಟಿ ಅನುದಾನ
    – ಒಲಂಪಿಕ್ಸ್‍ನಲ್ಲಿ ಪದಕ ವಿಜೇತರರಿಗೆ ಬಂಪರ್- ಸ್ವರ್ಣ ಗದ್ದೆರೆ 5 ಕೋಟಿ, ರಜತ-3 ಕೋಟಿ, ಕಂಚು-2 ಕೋಟಿ
    – ಒಲಂಪಿಕ್ಸ್ ವಿಜೇತರಿಗೆ ಸರ್ಕಾರ ಇಲಾಖೆಗಳಲ್ಲಿ ಗ್ರೂಪ್ `ಎ, ದರ್ಜೆ ಹುದ್ದೆಗಳು
    – ಏಷ್ಯಾನ್, ಕಾಮನ್‍ವೆಲ್ತ್ ಕ್ರೀಡೆಗಳ ವಿಜೇತರಿಗೆ ಗ್ರೂಪ್ ಬಿ ದರ್ಜೆಯ ಹುದ್ದೆಗಳು
    – ಪ್ರತಿವರ್ಷ 10 ಜನ ಕ್ರೀಡಾ ಪ್ರವರ್ತಕರಿಗೆ – `ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ’

    – 20 ಕೋಟಿ ವೆಚ್ಚದಲ್ಲಿ ತಾಲೂಕು ಕ್ರೀಡಾಂಗಣ ಕಾಮಗಾರಿಗಳನ್ನ ಪೂರ್ಣ
    – ಗ್ರಾಮೀಣ ಯುವಕರಿಗಾಗಿ- ಯುವಚೈತನ್ಯ ಎಂಬ ಹೊಸ ಯೋಜನೆ ಪ್ರಾರಂಭ
    – ಪ್ರತಿ ಗ್ರಾ.ಪಂ. 1 ಲಕ್ಷ ರೂ ವೆಚ್ಚದಲ್ಲಿ ಕ್ರೀಡಾ ಸಾಮಾಗ್ರಿಗಳು, ಫಿಟ್‍ನೆಸ್ ಸಲಕರಣೆ ಒದಗಿಸುವುದು- 20 ಕೋಟಿ ಅನುದಾನ

    – 5 ಕೋಟಿ ಅನುದಾನದಲ್ಲಿ ಯೂತ್ ಕ್ಲಬ್‍ಗಳೀಗೆ ಆವರ್ಥ ನಿಧಿ
    – 1 ಕೋಟಿ ವೆಚ್ಚದಲ್ಲಿ ಕ್ರೀಡಾ ಐಟಿ ಕೋಶ ಸ್ಥಾಪನೆ
    – ರಾಜ್ಯ ರಾಷ್ಟ್ರೀಯ ಅಂತಾರಷ್ಟ್ರೀಯ ಮಾಜಿ ಕುಸ್ತಿ ಪೈಲ್ವಾನ್‍ಗಳಿಗೆ ಮಾಸಾಶನ ಹೆಚ್ಚಳ