Tag: ಯುವಜನ

  • ರೀಲ್ಸ್‌ ಕ್ರೇಜ್‌ – ಬಾಜಿ ಕಟ್ಟಿ, ಹಠಾತ್ತನೆ ಚಲಿಸುತ್ತಿದ್ದ ಬಸ್‌ ಕೆಳಗೆ ಮಲಗಿದ ಯುವಕ!

    ರೀಲ್ಸ್‌ ಕ್ರೇಜ್‌ – ಬಾಜಿ ಕಟ್ಟಿ, ಹಠಾತ್ತನೆ ಚಲಿಸುತ್ತಿದ್ದ ಬಸ್‌ ಕೆಳಗೆ ಮಲಗಿದ ಯುವಕ!

    – ಪಾಪ ಆ ಡ್ರೈವರ್‌ಗೆ ಹಾರ್ಟ್‌ ಅಟ್ಯಾಕ್‌ ಆಗಿರುತ್ತೆ ಎಂದ ನೆಟ್ಟಿಗರು

    ಹೈದರಾಬಾದ್‌: ಸೋಷಿಯಲ್‌ ಮೀಡಿಯಾದಲ್ಲಿ ಈಗ ರೀಲ್ಸ್‌ ಹವಾ ಜಾಸ್ತಿಯಾಗಿದೆ. ಯುವಕ-ಯುವತಿಯರಂತು (Youngster) ತಮ್ಮ ಫಾಲೋವರ್‌ಗಳನ್ನ ಹೆಚ್ಚಿಸಿಕೊಳ್ಳಲು, ಹೆಚ್ಚು ವೀವ್ಸ್ ಮತ್ತು ಲೈಕ್ಸ್ ಪಡೆಯಲು ಜೀವಕ್ಕೆ ಅಪಾಯವಾಗುವಂತಹ ಸ್ಟಂಟ್ ಗಳನ್ನು ಮಾಡುತ್ತಿದ್ದಾರೆ. ಇದರಿಂದ ಕೆಲವರು ಸಾವನ್ನಪ್ಪಿರುವ ಘಟನೆಯನ್ನೂ ನಾವು ಆಗಾಗ್ಗೆ ನೋಡಿದ್ದೇವೆ. ಇಷ್ಟಾದರೂ ಯುವಜನತೆಗೆ ರೀಲ್ಸ್ (Reels) ಹುಚ್ಚು ಬಿಟ್ಟಿಲ್ಲ.

    ಇತ್ತೀಚೆಗಷ್ಟೇ ಪುಣೆಯಲ್ಲಿ (Pune) ಯುವತಿಯೊಬ್ಬಳು, ಹುಡುಗನೊಬ್ಬನ ಕೈ ಹಿಡಿದುಕೊಂಡು ಪಾಳುಬಿದ್ದ ಕಟ್ಟಡದ ಮೇಲಿಂದ ನೇತಾಡುತ್ತಿರುವ ರೀತಿ ರೀಲ್ಸ್‌ ಮಾಡಿದ್ದ ವಿಡಿಯೋ ವೈರಲ್‌ ಆಗಿತ್ತು. ಇದೀಗ ಹೈದರಾಬಾದ್‌ನಲ್ಲಿ (Hyderabad) ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಚಲಿಸುತ್ತಿದ್ದ ಬಸ್‌ ಕೆಳಗೆ ಹಠಾತ್ತನೆ ಮಲಗುವ ಸಾಹಸ ರೀಲ್ಸ್‌ ಮಾಡಿದ್ದಾನೆ. ಈ ಕುರಿತ ವೀಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪೊದೆಯೊಂದರಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ – ಅತ್ಯಾಚಾರ ಶಂಕೆ

    ಬಹುತೇಕ ವಾಹನಗಳು ಸಂಚರಿಸುವ ಸಮಯದಲ್ಲಿ ಯುವಕನೊಬ್ಬ ದಿಢೀರನೆ ರಸ್ತೆ ಮಧ್ಯಕ್ಕೆ ಬಂದು ನಿಂತಿದ್ದಾನೆ. ನಂತರ ಒಂದೆರಡು ಹೆಜ್ಜೆ ಮುಂದಕ್ಕೆ ಸಾಗಿ ಚಲಿಸುತ್ತಿದ್ದ ಬಸ್‌ ಕೆಳಗೆ ಮಲಗಿದ್ದಾನೆ. ಬಸ್‌ ಸಹ ತಕ್ಷಣಕ್ಕೆ ನಿಲ್ಲಿಸಲಾಗದೇ ಮುಂದೆ ಸಾಗಿದೆ. ಏನೋ ಅನಾಹುತ ಸಂಭವಿಸಿತೇನೋ ಎನ್ನುವಷ್ಟರಲ್ಲಿ ಯುವಕ ಎದ್ದು ರಸ್ತೆ ಪಕ್ಕಕ್ಕೆ ತೆರಳಿದ್ದಾರೆ. ಬಿಡ್‌ ಕಟ್ಟಿ ರೀಲ್ಸ್‌ಗಾಗಿ ಯುವಕನೊಬ್ಬ ಇಂತಹ ಕೆಲಸ ಮಾಡಿದ್ದಾನೆ. ಇದನ್ನೂ ಓದಿ: ʻದಾಸʼನಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿ – ಪೊಲೀಸರಿಂದ 2 ಹಲ್ಲೆ ವೀಡಿಯೋ ಸಂಗ್ರಹ!

    ಆನೇರಿ ಶಾ ಯಕ್ಕತಿ ಎಂಬ ಎಕ್ಸ್‌ ಖಾತೆಯಲ್ಲಿ ಜೂನ್‌ 21 ರಂದು ವೀಡಿಯೋ ಹಂಚಿಕೊಳ್ಳಲಾಗಿದ್ದು, 78 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಯುವಜನ ಹುಚ್ಚಾಟಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

    ಕೆಲವರು ಇದು ಎಡಿಟ್‌ ಮಾಡಿದ ವೀಡಿಯೋ, ನಕಲಿ ವೀಡಿಯೋ ಎಂದು ಹೇಳಿದರೆ, ಇನ್ನೂ ಕೆಲವರು ಪಾಪ ಆ ಬಸ್‌ ಡ್ರೈವರ್‌ಗೆ ಹಾರ್ಟ್‌ ಅಟ್ಯಾಕ್‌ ಆಗಿರುತ್ತೆ, ಇಂಥವನನ್ನ ಅರೆಸ್ಟ್‌ ಮಾಡಿ ಜೈಲಿಗೆ ಕಳುಹಿಸಿ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ -‌ ಇಂದು ನಟ ದರ್ಶನ್‌ ಸೇರಿ ನಾಲ್ವರು ಆರೋಪಿಗಳಿಗೆ ಜೈಲು ಫಿಕ್ಸ್‌?

  • ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಚಾಲನೆ – ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗುವಂತೆ ಕರೆ

    ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಿಎಂ ಚಾಲನೆ – ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗುವಂತೆ ಕರೆ

    ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ `ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.

    ಬಳಿಕ ಅಭಿಯಾನವನ್ನುದ್ದೇಶಿಸಿ ಮಾತನಾಡಿದ ಸಿಎಂ, ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗಬೇಕು. ದೇಶ ಮೊದಲು, ದೇಶದ ನಂತರ ನಾವೆಲ್ಲರೂ ಎಂಬುದನ್ನು ಪ್ರತಿಪಾದಿಸಬೇಕು. ಸಂಕುಚಿತ, ಸ್ವಾರ್ಥ ಮನೋಭಾವ ತೊರೆದು, ದೇಶಕ್ಕಾಗಿ ನಿಲ್ಲುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಕರೆ ನೀಡಿದರು. ಇದನ್ನೂ ಓದಿ: ತ್ರಿಕೋನ ಪ್ರೇಮ ಪ್ರಕರಣ – ರೆಡ್ ಹ್ಯಾಂಡಾಗಿ ಗೆಳೆಯನೊಂದಿಗೆ ಸಿಕ್ಕಿಬಿದ್ದ ಪ್ರೇಯಸಿಗೆ ನಡು ರಸ್ತೆಯಲ್ಲೇ ಚಾಕು ಇರಿದ ಪ್ರಿಯಕರ

    ಸ್ವಾತಂತ್ರ‍್ಯ ಪೂರ್ವದಲ್ಲಿ ಜನರು ದೇಶಕ್ಕಾಗಿ ಪ್ರಾಣ ಕೊಡುತ್ತಿದ್ದರು. ಈಗ ದೇಶಕ್ಕಾಗಿ ಬದುಕಿ, ದುಡಿಯಬೇಕು. ಇನ್ನು ಮುಂದಿನ 25 ವರ್ಷಗಳ ಕಾಲ ದೇಶಕ್ಕಾಗಿ ನಾನೇನು ಮಾಡಿದ್ದೇನೆ ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕು. ದೇಶಕ್ಕೆ ಯುವಜನರೆಂದರೆ ಶಕ್ತಿ, ಯುವಜನರೆಂದರೆ ಭವಿಷ್ಯ. ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡಬೇಕಿದೆ. ಪ್ರಧಾನಮಂತ್ರಿಗಳು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸಂಕಲ್ಪ ಮಾಡಿದ್ದು, ಅದಕ್ಕೆ ಕರ್ನಾಟಕದಿಂದ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕೊಡುಗೆಯನ್ನು ನೀಡುವ ಗುರಿ ಇದೆ ಎಂದು ಹೇಳಿದರು.

    ಭಾರತದ ಶಕ್ತಿ ಇಡೀ ವಿಶ್ವವೇ ಗಮನಿಸುತ್ತಿದೆ: ಯುವಕರು ಭಾರತದ ಮುಂದಿನ ಭವಿಷ್ಯವನ್ನು ನಿರ್ಮಿಸುವ ಭಾಗ್ಯಶಾಲಿಗಳು. 75 ವರ್ಷ ವ್ಯಕ್ತಿಗಾದರೆ ದೊಡ್ಡ ವಯಸ್ಸು. ಯುವಕರಿಗೆ ಸೇರಿರುವ ಯುವ ದೇಶ, ಭವ್ಯ ಭವಿಷ್ಯವಿರುವ ದೇಶ ನಮ್ಮದು. ಶೇ.46 ಯುವಶಕ್ತಿ ಇರುವ ದೇಶ ಭಾರತ. ಸರ್ಕಾರದ ವತಿಯಿಂದ 1.8 ಕೋಟಿ ಧ್ವಜಗಳನ್ನು ನೀಡಿದ್ದೇವೆ. ಜನ ಸ್ವಪ್ರೇರಣೆಯಿಂದ ಧ್ವಜ ಕೊಂಡಿದ್ದಾರೆ. 25 ಲಕ್ಷ ಮನೆಗಳ ಮೇಲೆ ಧ್ವಜ ಹಾರಾಡುತ್ತಿವೆ. ಪ್ರತಿ ಗ್ರಾಮ, ಮನೆಯಲ್ಲಿ ಧ್ವಜ ಹಾರಾಡುತ್ತಿದೆ. ತ್ರಿವರ್ಣದ ಶಕ್ತಿ ಎಲ್ಲರನ್ನು ಒಗ್ಗೂಡಿಸುವ ಶಕ್ತಿಯಾಗಿದ್ದು, ಭಾರತದ ಶಕ್ತಿಯನ್ನು ಇಡೀ ವಿಶ್ವವೇ ಗಮನಿಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಭೂಮಿಯ ತೇವಾಂಶ ಹೆಚ್ಚಾಯ್ತು – ಮಲೆನಾಡಲ್ಲಿ ಮಳೆ ಕಡಿಮೆಯಾದ್ರೂ ಅನಾಹುತ ಕಡಿಮೆಯಾಗ್ತಿಲ್ಲ

    ಸ್ವಾತಂತ್ರ‍್ಯ ಹೋರಾಟಕ್ಕೆ ದಿವ್ಯ ಇತಿಹಾಸವಿದೆ: ಸ್ವಾತಂತ್ರ‍್ಯ ಸುಲಭವಾಗಿ ಬಂದಿಲ್ಲ. ಹಲವರ ಹೋರಾಟ, ತ್ಯಾಗ, ಬಲಿದಾನದಿಂದ ಬಂದಿದೆ. ಸಾವಿರಾರು ಜನ ಅನಾಮಧೇಯ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ‍್ಯ ಎಲ್ಲರ ಹಕ್ಕು. ಹೋರಾಟವೂ ಸಾವಿರಾರು ಅನಾಮಧೇಯರಿಗೆ ಸೇರಿದೆ. ಯಾರದ್ದೇ ಸ್ವತ್ತಲ್ಲ. ಹೋರಾಟದಲ್ಲಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವಿದ್ಯಾವಂತರು ಎಲ್ಲರೂ ಸೇರಿದ್ದರು. ಸ್ವಾತಂತ್ರ‍್ಯ ಹೋರಾಟಕ್ಕೆ ದಿವ್ಯ ಇತಿಹಾಸವಿದೆ. ಮೊಟ್ಟ ಮೊದಲು ಸ್ವಾತಂತ್ರ‍್ಯ ಹೋರಾಟದ ಕಹಳೆಯನ್ನು ಮೊಳಗಿಸಿದ್ದು ಕನ್ನಡ ನಾಡಿನ ಹೆಮ್ಮೆಯ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ. ಸ್ವಾತಂತ್ರ‍್ಯಕ್ಕಾಗಿ ಪ್ರಾಣ ಕೊಟ್ಟವರು ರಾಜ್ಯದಲ್ಲಿ ಇದ್ದಾರೆ. ಮೈಲಾರ ಮಹಾದೇವಪ್ಪ ಬ್ರಿಟಿಷರ ಗುಂಡಿಗೆ ಬಲಿಯಾದರು. ಸಾಹುಕಾರ ಚೆನ್ನಯ್ಯ, ಇವರನ್ನು ನೆನಪಿಡಬೇಕು. ಇತಿಹಾಸದಲ್ಲಿದ್ದವರು ಭಾರತದ ಭವಿಷ್ಯ ಬರೆದಿದ್ದಾರೆ ಎಂದರು. ಇದನ್ನೂ ಓದಿ: ಒಡಿಶಾ ಸರ್ಕಾರದಿಂದ ನವ ವಿವಾಹಿತರಿಗೆ ಕಾಂಡೋಮ್, ಪ್ರೆಗ್ನೆನ್ಸಿ ಟೂಲ್ ಹೊಂದಿದ `ವೆಡ್ಡಿಂಗ್ ಕಿಟ್’ ಗಿಫ್ಟ್

    ಭಾರತವನ್ನು ಶ್ರೇಷ್ಠವಾಗಿಸುವ ಜವಾಬ್ದಾರಿ ಯುವಕರ ಮೇಲಿದೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನು ದಕ್ಷತೆಯಿಂದ ನಡೆಸುತ್ತಿದ್ದಾರೆ. ಧೀಮಂತ ನಾಯಕರಾದ ಅವರು ಸಶಕ್ತ, ಸಂಪದ್ಭರಿತ ಭಾರತ ಕಟ್ಟಲು ಶ್ರಮಿಸುತ್ತಿದ್ದಾರೆ. ಆತ್ಮನಿರ್ಭರ ಭಾರತ ಎಂದು ಕರೆ ಕೊಟ್ಟಿದ್ದಾರೆ. ರೈತರು, ವಿದ್ಯಾರ್ಥಿಗಳು, ಬಡವರು, ಮಹಿಳೆಯರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು `ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್’ ಎಂಬುದು ಪ್ರಧಾನ ಮಂತ್ರಿಯವರ ಮೂಲಮಂತ್ರ. ಸ್ವಾತಂತ್ರ‍್ಯೋತ್ಸವ 75 ವರ್ಷಗಳ ಮುಂದಿನ 25 ವರ್ಷದ ಅಮೃತಕಾಲದಲ್ಲಿ ವಿಶ್ವದಲ್ಲಿ ಭಾರತವನ್ನು ಶ್ರೇಷ್ಠವಾಗಿಸುವ ಜವಾಬ್ದಾರಿ ನಮ್ಮೆಲ್ಲ ಯುವಕರ ಮೇಲಿದೆ. ಇದು ನಮ್ಮ ಬದ್ಧತೆ ಮತ್ತು ಸಂಕಲ್ಪ. ಸಮಬಾಳಿನ, ಸಮಪಾಲಿನ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕೆಂದು ಯುವಕರಿಗೆ ಕರೆ ನೀಡಿದರು.

    Live Tv
    [brid partner=56869869 player=32851 video=960834 autoplay=true]