Tag: ಯುವಕನ

  • ಕಲ್ಲಿನಿಂದ ಹೊಡೆದು ಯುವಕನ ಬರ್ಬರ ಕೊಲೆ

    ಕಲ್ಲಿನಿಂದ ಹೊಡೆದು ಯುವಕನ ಬರ್ಬರ ಕೊಲೆ

    ಬೀದರ್: ಕಲ್ಲಿನಿಂದ ಹೊಡೆದು ಯುವಕನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ಹೊರ ವಲಯದ ಚಿಕ್ಕ ಪೇಟೆ ಬಳಿ ಇಂದು ನಡೆದಿದೆ.

    ನಗರದ ಖಾಸಗಿ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಯುವಕ ಶರಣು ಕೊಲೆಯಾದ ದುರ್ದೈವಿ. ಇವನು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಮದವನಾಗಿದ್ದು, ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

    ಹೀಗಾಗಿ ಪೊಲೀಸರು ತೀವ್ರವಾಗಿ ತನಿಖೆ ಮಾಡುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೆಂಗ್ಳೂರಲ್ಲಿ ಯುವಕನ ಮೇಲೆ ಲಾಂಗ್ ಮಚ್ಚಿನಿಂದ ಹಲ್ಲೆ- ಗೆಳೆಯನ ಮಾತು ಕೇಳಿ ಅಟ್ಯಾಕ್!

    ಬೆಂಗ್ಳೂರಲ್ಲಿ ಯುವಕನ ಮೇಲೆ ಲಾಂಗ್ ಮಚ್ಚಿನಿಂದ ಹಲ್ಲೆ- ಗೆಳೆಯನ ಮಾತು ಕೇಳಿ ಅಟ್ಯಾಕ್!

    ಬೆಂಗಳೂರು: ಹಾಡಹಗಲೇ ಯವಕನ ಮೇಲೆ ಗ್ಯಾಂಗ್ ಒಂದು ಲಾಂಗ್- ಮಚ್ಚುಗಳಿಂದ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ.

    ಆಡುಗೋಡಿ ನಿವಾಸಿ ಮನೋಜ್ ಹಲ್ಲೆಗೊಳಗಾದ ಯುವಕನಾಗಿದ್ದು, ಈತನ ಮೇಲೆ ಕಾರ್ತಿಕ್ ಮತ್ತು ಪ್ರದೀಪ್ ಗ್ಯಾಂಗ್ ಹಲ್ಲೆ ನಡೆಸಿದೆ. ಪ್ರಕರಣ ಸಂಬಂಧ ಆಡುಗೋಡಿ ಪೊಲೀಸರು 5 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

    ಕಾರ್ತಿಕ್ ಗೆಳೆಯ ಸೂರ್ಯ ಎಂಬಾತನ ತಂದೆ ಕಣ್ಣನ್ ಕೆಲದಿನಗಳ ಹಿಂದೆ ಸಾವನ್ನಪ್ಪಿದ್ರು. ತಂದೆ ಹೃದಯಾಘಾತಕ್ಕೆ ಮನೋಜ್ ಕಾರಣ ಎಂದು ಕಾರ್ತಿಕ್ ಬಳಿ ಸೂರ್ಯ ಹೇಳಿಕೊಂಡಿದ್ದನಂತೆ. ಹೀಗಾಗಿ ಸೂರ್ಯನ ಮಾತು ಕೇಳಿ ಗ್ಯಾಂಗ್, ಮನೋಜ್ ಮೇಲೆ ಹಲ್ಲೆ ಮಾಡಿದೆ.

    ಸದ್ಯ ಗಾಯಗೊಂಡಿರುವ ಮನೋಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.