Tag: ಯುರೋಪಿಯನ್ ಒಕ್ಕೂಟ ಸಂಸ್ಥೆ

  • ಸಿಗರೇಟ್, ಮದ್ಯ ಸೇವಿಸಲು ಬಿಡಲಿಲ್ಲವೆಂದು ಮನೆ ತೊರೆದು ವಿಮಾನ ನಿಲ್ದಾಣ ಸೇರಿದ ವ್ಯಕ್ತಿ!

    ಸಿಗರೇಟ್, ಮದ್ಯ ಸೇವಿಸಲು ಬಿಡಲಿಲ್ಲವೆಂದು ಮನೆ ತೊರೆದು ವಿಮಾನ ನಿಲ್ದಾಣ ಸೇರಿದ ವ್ಯಕ್ತಿ!

    ಬೀಜಿಂಗ್: ಬದುಕಿನ ಜಂಜಾಟ ಎಷ್ಟೋ ಜೀವಗಳ ನಡುವೆ ಭಿನ್ನಾಭಿಪ್ರಾಯ ಉಂಟುಮಾಡುತ್ತದೆ. ಸಹಿಸಲಾಗದ ಕೆಲವರು ತಮ್ಮ ಸ್ನೇಹಿತರಿಂದ ದೂರವಿರಲು ಪ್ರಯತ್ನಿಸಿದರೆ ಇನ್ನೂ ಕೆಲವರು ಕುಟುಂಬದಿಂದಲೇ ದೂರಾಗಬೇಕು ಎನ್ನುತ್ತಾರೆ. ಕೆಲವರು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾರೆ. ಜಗತ್ತಿನ ಗೇಟ್‌ವೇ ಸ್ಥಳಗಳು ಹಾಗೂ ಅಡಗು ತಾಣಗಳು ಇಂತಹ ಎಷ್ಟೋ ಜನರು ಪಾರಾಗಲು ಸಹಾಯ ಮಾಡುತ್ತವೆ.

    ಆದರೆ ವಿಮಾನ ನಿಲ್ದಾಣಗಳು ಖಂಡಿತವಾಗಿಯೂ ತಪ್ಪಿಸಿಕೊಳ್ಳುವ ಸ್ಥಳ ಅಥವಾ ಅಡಗುತಾಣವಾಗಿಲ್ಲ. ಬದಲಾಗಿ ಅವು ಶಾಶ್ವತವಾಗಿ ಪಾರು ಮಾಡಲು ಅಥವಾ ಗೇಟ್ ವೇ ವಿಹಾರಕ್ಕೆ ಅವಕಾಶ ಮಾಡಿಕೊಡುವ ನಿಲ್ದಾಣಗಳಾಗಿವೆ. ಈ ಸತ್ಯವನ್ನು ಅರಿತುಕೊಂಡ ವ್ಯಕ್ತಿಯೊಬ್ಬರು ಶಾಶ್ವತವಾಗಿ ಪಲಾಯನ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರೇರಿತ ಟೀ ಶರ್ಟ್ ತೊಟ್ಟ ಅಭಿಮಾನಿಗಳು ಹೊರಕ್ಕೆ

    Airport

    ಇದೀಗ 60 ವರ್ಷದ ವೀ ಜಿಯಾಂಗುವೋ ಎಂಬ ಚೀನಿ ವ್ಯಕ್ತಿಯೊಬ್ಬರು ತಮ್ಮ ಕುಟುಂಬದಿಂದ ತಪ್ಪಿಸಿಕೊಳ್ಳಲು 14 ವರ್ಷಗಳ ಹಿಂದೆಯೇ ಬೀಜಿಂಗ್ ಕ್ಯಾಪಿಟಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಕುಟುಂಬದಲ್ಲಿದ್ದರೆ ಮದ್ಯ ಹಾಗೂ ಧೂಮಪಾನ ಮಾಡಲಾಗುವುದಿಲ್ಲ ಎಂಬ ಕಾರಣಕ್ಕೇ ಕುಟುಂಬದಿಂದಲೇ ದೂರವಾಗುವ ಪ್ರಯತ್ನಕ್ಕೆ ಮುಂದಾಗಿದ್ದರು. ಇದನ್ನೂ ಓದಿ: ವುಹಾನ್‌ ನಂತರ ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್: 2.6 ಕೋಟಿ ಜನ ಮನೆಯಲ್ಲೇ ಲಾಕ್

    2008 ರಿಂದಲೂ ವಿಮಾನ ನಿಲ್ದಾಣದ 2 ಟರ್ಮಿನಲ್‌ನಲ್ಲೇ ವಾಸಿಸುತ್ತಿದ್ದ ಅವರು, `ನನಗೆ ಕುಟುಂಬದಲ್ಲಿ ಸ್ವಾತಂತ್ರ‍್ಯವಿಲ್ಲ. ಹಾಗಾಗಿ ನಾನು ಮನೆಗೆ ಹಿಂದಿರುಗಲು ಸಾಧ್ಯವಿಲ್ಲ. ನಾನು ಉಳಿಯಲು ಬಯಸಿದರೆ, ಧೂಮಪಾನ ಮತ್ತು ಮದ್ಯ ಸೇವನೆ ಬಿಡಬೇಕು. ಇಲ್ಲವೇ ಮನೆಯವರಿಗೆ ಒಂದು ತಿಂಗಳ ವೇತನ 1,000 ಯೂರೋವನ್ನು (200 ಡಾಲರ್ ಅಥವಾ 11,923.51 ರೂ.) ನೀಡಬೇಕಾಗಿತ್ತು. ಈ ಹಣವನ್ನು ಅವರಿಗೇ ನೀಡಿದ್ದರೆ ನಾನು ಮದ್ಯ ಮತ್ತು ಸಿಗರೇಟ್ ಅನ್ನು ಹೇಗೆ ಖರೀದಿಸಲಿ. ಅದಕ್ಕಾಗಿ ನಾನು ಮನೆ ತೊರೆಯುವ ಪ್ರಯತ್ನ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

    BEEJING

    40ನೇ ವರ್ಷದಲ್ಲಿದ್ದಾಗಲೇ ಜಿಯಾಂಗುವೋ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ವಯಸ್ಸಾಗಿದೆ ಅಂದುಕೊಂಡಿದ್ದ ಅವರು, ಕೆಲಸ ಹುಡುಕುವುದನ್ನು ಬಿಟ್ಟಿದ್ದರು. ಇದೀಗ ಪೊಲೀಸರು ಅವರಿಗೆ ಭದ್ರತೆ ನೀಡಿದ್ದಾರೆ. ಜೊತೆಗೆ ವಾಂಗ್‌ಜಿಂಗ್‌ನಲ್ಲಿರುವ ತಮ್ಮ ಮನೆಗೆ ಆಗಾಗ್ಗೆ ಕರೆದೊಯ್ಯುತ್ತಿದ್ದಾರೆ.

    ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ದೀರ್ಘಕಾಲ ಉಳಿಯಲು ನಿರ್ವಹಿಸಿದ ವಿಶ್ವದ ಏಕೈಕ ವ್ಯಕ್ತಿ ಇವರೊಬ್ಬರೇ ಅಲ್ಲ. ಅವರಿಗಿಂತ ದೀರ್ಘಾವಧಿಯ ವಿಮಾನ ನಿಲ್ದಾಣದ ಟರ್ಮಿನಲ್ ಅಧಿಕಾರಾವಧಿ ಹೊಂದಿರುವವರೂ ಇದ್ದಾರೆ. ಬೈರಾಮ್ ಟೆಪೆಲಿ ಎಂಬವರೂ 1991 ರಲ್ಲಿ ಅಟಾತುರ್ಕ್ ವಿಮಾನ ನಿಲ್ದಾಣಕ್ಕೆ ತೆರಳಿ 27 ವರ್ಷಗಳ ಕಾಲ ಅಲ್ಲಿಯೇ ವಾಸಿಸುತ್ತಿದ್ದರು ಎನ್ನಲಾಗಿದೆ.

     

  • ಆಂಡ್ರಾಯ್ಡ್ ಅಪ್ಲಿಕೇಷನ್‍ಗಳಲ್ಲಿ ಭದ್ರತೆ ನಿಯಮ ಉಲ್ಲಂಘಿಸಿದ್ದಕ್ಕೆ ದಾಖಲೆಯ ದಂಡ ತೆತ್ತ ಗೂಗಲ್!

    ಆಂಡ್ರಾಯ್ಡ್ ಅಪ್ಲಿಕೇಷನ್‍ಗಳಲ್ಲಿ ಭದ್ರತೆ ನಿಯಮ ಉಲ್ಲಂಘಿಸಿದ್ದಕ್ಕೆ ದಾಖಲೆಯ ದಂಡ ತೆತ್ತ ಗೂಗಲ್!

    ಲಂಡನ್: ಭದ್ರತಾ ನಿಯಮ ಉಲ್ಲಂಘಿಸಿದ ಗೂಗಲ್ ಕಂಪೆನಿಯ ವಿರುದ್ಧ ಯುರೋಪಿಯನ್ ಒಕ್ಕೂಟ ಸಂಸ್ಥೆಗಳು ದಾಖಲೆಯ ಪ್ರಮಾಣದಲ್ಲಿ ದಂಡ ವಿಧಿಸಿವೆ.

    ಈ ಕುರಿತಂತೆ ಇಂದು ಬೆಳಗ್ಗೆ 6 ಗಂಟೆಗೆ ಯುರೋಪಿಯನ್ ಯೂನಿಯನ್ ಕಮಿಷನರ್ ಗೂಗಲ್ ಕಂಪೆನಿಗೆ 4.3 ಬಿಲಿಯನ್ ಯುರೊ (3 ಲಕ್ಷ 42 ಸಾವಿರ ಕೋಟಿ) ದಂಡ ವಿಧಿಸಿದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಮೊತ್ತದ ದಂಡ ಇದಾಗಿದೆ. ಇಂದು ಯುರೋಪಿಯನ್ ಒಕ್ಕೂಟ ಸಂಸ್ಥೆ ತನ್ನ ಟ್ವಿಟ್ಟರ್ ನಲ್ಲಿ ಗೂಗಲ್ ದಂಡ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

    ಗೂಗಲ್ ತನ್ನ ಅಂಡ್ರಾಯ್ಡ್ ಹಾಗೂ ಸರ್ಚ್ ಇಂಜಿನ್ ಗಳಲ್ಲಿ ಭದ್ರತಾ ಲೋಪ ಎಸಗಿರುವುದಲ್ಲದೇ, ತನ್ನ ಅಂಡ್ರಾಯ್ಡ್ ಅಪ್ಲಿಕೇಶನ್‍ಗಳ ಮೂಲಕ ಬಳಕೆದಾರರ ಮಾಹಿತಿಯನ್ನು ಕಾಪಾಡುವಲ್ಲಿ ವಿಫಲವಾಗಿತ್ತು. ಅಲ್ಲದೇ ಮೂರನೇ ವ್ಯಕ್ತಿಗೆ ಗ್ರಾಹಕರ ಮಾಹಿತಿಗಳನ್ನು ರವಾನಿಸಿದ್ದರ ಕುರಿತು ತನಿಖೆಯಲ್ಲಿ ದೃಢಪಟ್ಟಿದೆ.

    ಯುರೋಪ್‍ನಲ್ಲಿ ನೋಕಿಯಾ, ಮೈಕ್ರೋಸಾಪ್ಟ್ ಹಾಗೂ ಒರ್ಯಾಕಲ್ ಕಂಪೆನಿಯ ಹಿಂದಿಕ್ಕುವ ಬರದಲ್ಲಿ ಗೂಗಲ್ ತನ್ನ ಆಂಡ್ರಾಯ್ಡ್ ಓಎಸ್ ಗಳಲ್ಲಿ ಭದ್ರತಾ ಲೋಪ ಎಸಗಿರುವುದು ಕಂಡು ಬಂದಿದೆ. ಅಲ್ಲದೇ ಯುರೋಪಿಯನ್ ದೇಶಗಳಲ್ಲಿ ಏಕಸ್ವಾಮ್ಯತೆ ಪಡೆಯುವ ದೃಷ್ಟಿಯಿಂದ ಈ ರೀತಿ ಮಾಡಿದೆ ಎಂದು ವರದಿಯಾಗಿದೆ. ಇದರಿಂದಾಗಿ ಭಾರೀ ದಂಡಕ್ಕೆ ಗೂಗಲ್ ಗುರಿಯಾಗಿದೆ.

    ಗೂಗಲ್ ಪ್ರತಿಯೊಬ್ಬರಿಗೂ ಆಂಡ್ರಾಯ್ಡ್ ನ ನೂತನ ಫೀಚರ್ ಗಳುಳ್ಳ ಸೌಲಭ್ಯಗಳನ್ನು ಕಡಿಮೆ ದರದಲ್ಲಿ ಪರಿಚಯಿಸಿದೆ. ಯುರೋಪಿಯನ್ ಒಕ್ಕೂಟ ನೀಡಿದ ತೀರ್ಪನ್ನು ಮತ್ತೊಮ್ಮೆ ಮೇಲ್ಮನವಿ ಸಲ್ಲಿಸುವುದಾಗಿ ಗೂಗಲ್ ವಕ್ತಾರರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

    ಈ ಮೊದಲೂ ಸಹ ಯೂರೋಪಿಯನ್ ಒಕ್ಕೂಟ ಸಂಸ್ಥೆಗಳು ಭದ್ರತಾ ವೈಫಲ್ಯದಿಂದ ವಿಶ್ವದ ಹಲವು ಪ್ರಮುಖ ಸಂಸ್ಥೆಗಳಿಂದ ದಂಡ ವಸೂಲಿ ಮಾಡಿತ್ತು. ಈ ಮೊದಲು ಗೂಗಲ್ ಸಂಸ್ಥೆಯೇ ಮೊದಲನೇ ಸ್ಥಾನದಲ್ಲಿತ್ತು. ಈಗ ಮತ್ತೊಮ್ಮೆ ಭಾರಿ ದಂಡಕ್ಕೆ ಗುರಿಯಾಗಿದೆ.

     

    ಯುರೋಪಿಯನ್ ಒಕ್ಕೂಟ ಸಂಸ್ಥೆಗಳು ದಂಡ ವಸೂಲಾತಿ ವರದಿಯ ಪ್ರಕಾರ 2018 ರಲ್ಲಿ ಗೂಗಲ್ 4.3 ಬಿಲಿಯನ್ ಯುರೊ, 2017 ರಲ್ಲಿ ಗೂಗಲ್ 2.4 ಬಿಲಿಯನ್ ಯುರೋ, 2009 ರಲ್ಲಿ ಇಂಟೆಲ್ 1.06 ಬಿಲಿಯನ್ ಯುರೊ, 2008 ರಲ್ಲಿ ಮೈಕ್ರೋಸಾಫ್ಟ್ 899 ಮಿಲಿಯನ್ ಯುರೊ, 2013 ರಲ್ಲಿ ಮೈಕ್ರೋಸಾಪ್ಟ್ 561 ಮಿಲಿಯನ್ ಯುರೋ, 2017 ರಲ್ಲಿ ಫೇಸ್‍ಬುಕ್ 110 ಮಿಲಿಯನ್ ಯುರೊ ದಂಡ ಪಾವತಿಸಿದ ಪ್ರಮುಖ ಸಂಸ್ಥೆಗಳಾಗಿವೆ.