Tag: ಯುರೋಪಿಯನ್ ಒಕ್ಕೂಟ

  • ಪುಟಿನ್‌-ಝೆಲೆನ್ಸ್ಕಿ ಮೊದಲು ನೇರ ಮಾತುಕತೆ ನಡೆಸಬೇಕು – ಬ್ರೋಕರ್‌ ಕೆಲಸದಿಂದ ಹಿಂದೆ ಸರಿಯಲು ಟ್ರಂಪ್‌ ನಿರ್ಧಾರ

    ಪುಟಿನ್‌-ಝೆಲೆನ್ಸ್ಕಿ ಮೊದಲು ನೇರ ಮಾತುಕತೆ ನಡೆಸಬೇಕು – ಬ್ರೋಕರ್‌ ಕೆಲಸದಿಂದ ಹಿಂದೆ ಸರಿಯಲು ಟ್ರಂಪ್‌ ನಿರ್ಧಾರ

    ವಾಷಿಂಗ್ಟನ್‌: ರಷ್ಯಾ-ಉಕ್ರೇನ್‌ ಯುದ್ಧ (Russia Ukraine War) ಕೊನೆಗೊಳಿಸಲು ಶತಪ್ರಯತ್ನ ನಡೆಸುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಈಗ‌ ಇದ್ದಕ್ಕಿದ್ದಂತೆ ಯೂಟರ್ನ್‌ ಹೊಡೆದಿದ್ದಾರೆ. ಯುದ್ಧ ಕೊನೆಗೊಳಿಸುವ ಪ್ರಯತ್ನದಲ್ಲಿ ನೇರ ಹಸ್ತಕ್ಷೇಪದಿಂದ ಹಿಂದೆ ಸರಿಯಲು ಟ್ರಂಪ್‌ ನಿರ್ಧರಿಸಿದ್ದಾರೆ. ಅಮೆರಿಕದ ಮಧ್ಯಸ್ಥಿಕೆ ಇಲ್ಲದೇ ಪುಟಿನ್‌ – ಝಲೆನ್ಸ್ಕಿ ಮೊದಲು ಮುಖಾಮುಖಿ ಭೇಟಿಯಾಗಬೇಕು, ನೇರ ಮಾತುಕತೆ ನಡೆಸಬೇಕು ಎಂದು ಹೇಳಿದ್ದಾರೆ.

    ಶ್ವೇತಭವನದ (White House) ಆಡಳಿತಾಧಿಕಾರಿಗಳು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ಮುಂದಿನ ಹಂತದ ಶಾಂತಿ ಮಾತುಕತೆಗಳಲ್ಲಿ ಟ್ರಂಪ್‌ ನೇರವಾಗಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಬದಲಾಗಿ ರಷ್ಯಾ ಅಧ್ಯಕ್ಷ ಪುಟಿನ್‌, ಉಕ್ರೇನ್‌ ಅಧ್ಯಕ್ಷ ಝಲೆನ್ಸ್ಕಿ (Volodymyr Zelenskyy) ಮೊದಲು ಪರಸ್ಪರ ಭೇಟಿಯಾಗಬೇಕೆಂದು ಅವರು ಬಯಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಮೇಲೆ ಒತ್ತಡ ಹೇರಲು ಭಾರತದ ಮೇಲೆ ಸುಂಕ – ವೈಟ್‌ ಹೌಸ್‌

    ಟ್ರಂಪ್‌ ದೃಷ್ಟಿಕೋನದಲ್ಲಿ ಯುದ್ಧ ಕೊನೆಗೊಳಿಸುವ ಮುಂದಿನ ಹೆಜ್ಜೆ ಪುಟಿನ್‌, ಝಲೆನ್ಸ್ಕಿ ನಡುವಿನ ದ್ವಿಪಕ್ಷೀಯ ಸಭೆ. ಈ ಸಭೆ ನಿಜವಾಗ್ಲೂ ನಡೆಯುತ್ತದೆಯೋ, ಇಲ್ಲವೋ? ಅನ್ನೋದು ಖಚಿತವಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಮುಂದಾದ ಟ್ರಂಪ್‌ಗೆ ಯುರೋಪಿಯನ್ ಒಕ್ಕೂಟ ಬೆಂಬಲ – ನಾಳೆಯ ಸಭೆ ಮೇಲೆ ನಿಗಾ

    ಟ್ರಂಪ್‌ ಉತ್ತರವೇನು?
    ರೇಡಿಯೋವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖುದ್ದು ಮಾತನಾಡಿದ ಟ್ರಂಪ್‌, ಇಬ್ಬರೂ ಮಾತುಕತೆಗೆ ತಯಾರಿ ನಡೆಸುತ್ತಿದ್ದಾರೆ. ದ್ವಿಪಕ್ಷೀಯ ಸಭೆಯಲ್ಲಿ ಏನಾಗುತ್ತದೆ ಎಂಬುದನ್ನು ನಾನು ಕಾದು ನೋಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಚೀನಾವನ್ನ ಎದುರಿಸಬೇಕಾದ್ರೆ ಭಾರತ-ಅಮೆರಿಕ ಸಂಬಂಧವನ್ನ ಹಳಿಗೆ ತನ್ನಿ – ಟ್ರಂಪ್‌ಗೆ ನಿಕ್ಕಿ ಹ್ಯಾಲಿ ಮತ್ತೆ ಎಚ್ಚರಿಕೆ

    ಶ್ವೇತಭವನದಲ್ಲಿ ಏನಾಗಿತ್ತು?
    ಇತ್ತೀಚೆಗಷ್ಟೇ ಶ್ವೇತಭವನದಲ್ಲಿ ಉಕ್ರೇನ್‌ ಮತ್ತು ಯುರೋಪಿಯನ್‌ ಒಕ್ಕೂಟದ ನಾಯಕರ ಜೊತೆ ಟ್ರಂಪ್‌ ಸಭೆ ನಡೆಸಿದ್ದರು. ಸಭೆ ಮುಗಿದ ಬಳಿಕ ಟ್ರಂಪ್‌ ಈ ಎಲ್ಲಾ ನಾಯಕರನ್ನು ತನ್ನ ಓವಲ್ ಕಚೇರಿಯ ಕ್ಯಾಬಿನ್‌ಗೆ ಕರೆಸಿ ರಷ್ಯಾದ ಅಧ್ಯಕ್ಷ ಪುಟಿನ್‌ಗೆ ನೇರವಾಗಿ ಕರೆ ಮಾಡಿದ್ದರು. ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವೆ ನೇರ ಮಾತುಕತೆಗಳನ್ನು ಮುಂದುವರಿಸಲು ಪುಟಿನ್‌ಗೆ ಕರೆ ನೀಡಿದ್ದರು. ಇಬ್ಬರು ನಾಯಕರ ಮಧ್ಯೆ ಒಟ್ಟು 40 ನಿಮಿಷಗಳ ಮಾತುಕತೆ ನಡೆದಿತ್ತು. ಈ ವೇಳೆ ಇತ್ತೀಚಿನ ಅಲಾಸ್ಕಾ ಭೇಟಿಯ ಸಮಯದಲ್ಲಿ ಟ್ರಂಪ್ ನೀಡಿದ ಆತಿಥ್ಯ ಮತ್ತು ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯಲ್ಲಿ ಸಾಧಿಸಿದ ಪ್ರಗತಿಗೆ ಪುಟಿನ್‌ ಟ್ರಂಪ್‌ಗೆ ಧನ್ಯವಾದ ಹೇಳಿದರು. ಇದನ್ನೂ ಓದಿ: ಝೆಲೆನ್‌ಸ್ಕಿ, EU ನಾಯಕರನ್ನು ಕಚೇರಿಗೆ ಕರೆಸಿ ಪುಟಿನ್‌ಗೆ ಕಾಲ್‌ – ಬ್ರೋಕರ್‌ ಕೆಲ್ಸ ಮಾಡಿ ಯುದ್ಧ ಕೊನೆಯಾಗಲಿದೆ ಎಂದ ಟ್ರಂಪ್‌

  • ಝೆಲೆನ್‌ಸ್ಕಿ, EU ನಾಯಕರನ್ನು ಕಚೇರಿಗೆ ಕರೆಸಿ ಪುಟಿನ್‌ಗೆ ಕಾಲ್‌ – ಬ್ರೋಕರ್‌ ಕೆಲ್ಸ ಮಾಡಿ ಯುದ್ಧ ಕೊನೆಯಾಗಲಿದೆ ಎಂದ ಟ್ರಂಪ್‌

    ಝೆಲೆನ್‌ಸ್ಕಿ, EU ನಾಯಕರನ್ನು ಕಚೇರಿಗೆ ಕರೆಸಿ ಪುಟಿನ್‌ಗೆ ಕಾಲ್‌ – ಬ್ರೋಕರ್‌ ಕೆಲ್ಸ ಮಾಡಿ ಯುದ್ಧ ಕೊನೆಯಾಗಲಿದೆ ಎಂದ ಟ್ರಂಪ್‌

    ವಾಷಿಂಗ್ಟನ್‌: ಉಕ್ರೇನ್‌- ರಷ್ಯಾ ಯುದ್ಧ ಕೊನೆಗೊಳಿಸಲು ಪ್ರಯತ್ನ ನಡೆಸುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ವ್ಲಾದಿಮಿರ್‌ ಪುಟಿನ್‌ ಮತ್ತು ಝೆಲೆನ್‌ಸ್ಕಿ ಮಾತುಕತೆಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ.

    ಅಲಾಸ್ಕಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಅವರನ್ನು ಭೇಟಿಯಾಗಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಈಗ ಶ್ವೇತಭವನದಲ್ಲಿ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ (Zelensky) ಮತ್ತು ಯೋಪಿಯನ್‌ ನಾಯಕರ (European Leaders) ಜೊತೆ ಸಭೆ ನಡೆಸಿದರು.

    ಝೆಲೆನ್‌ಸ್ಕಿ ಭೇಟಿ ವೇಳೆ ಮಾತನಾಡಿದ ಟ್ರಂಪ್, ಯುದ್ಧ ಕೊನೆಗೊಳ್ಳಲಿದೆ. ಅದು ಯಾವಾಗ ಕೊನೆಗೊಳ್ಳುತ್ತದೆ ಎಂದು ನಾನು ನಿಮಗೆ ಹೇಳಲಾರೆ. ಆದರೆ ಈ ಯುದ್ಧ ನಿಲ್ಲಲಿದೆ. ಪುಟಿನ್ ಯುದ್ಧ ನಿಲ್ಲಿಸಲು ಬಯಸುತ್ತಿದ್ದು ಝೆಲೆನ್ಸ್ಕಿ ಕೂಡ ಒಪ್ಪಿಕೊಂಡರೆ ಶೀಘ್ರದಲ್ಲೇ ಯುದ್ಧ ನಿಲ್ಲುತ್ತದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ ಮಾರಾಟ ಮಾಡಿದ್ದ ಅಲಾಸ್ಕಾ ಈಗ ಅಮೆರಿಕಾದ ಚಿನ್ನದ ಮೊಟ್ಟೆ!

    ಇಡೀ ಜಗತ್ತು ಈ ಯುದ್ಧದಿಂದ ಬೇಸತ್ತಿದೆ. ನಾವು ಅದನ್ನು ಕೊನೆಗೊಳಿಸುತ್ತೇವೆ. ನಾನು 6 ಯುದ್ಧಗಳನ್ನು ಕೊನೆಗೊಳಿಸಿದ್ದೇನೆ. ಅದರಲ್ಲಿ ಭಾರತ -ಪಾಕ್ ಯುದ್ಧವೂ ಒಂದು ಎಂದು ಟ್ರಂಪ್ ಹೇಳಿದರು.

    ಟ್ರಂಪ್ ಮತ್ತು ಝೆಲೆನ್ಸ್ಕಿ ಅವರೊಂದಿಗೆ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಉಪಸ್ಥಿತರಿದ್ದರು.

    ಡೊನಾಲ್ಡ್ ಟ್ರಂಪ್ ಮತ್ತು ಯುರೋಪಿಯನ್ ನಾಯಕರ ನಡುವೆ ನಡೆದ ಮಹತ್ವದ ಮಾತುಕತೆಗಳ ನಂತರ ಪುಟಿನ್ ಮತ್ತು ಝೆಲೆನ್ಸ್ಕಿ ಶಾಂತಿ ಮಾತುಕತೆಗೆ ಒಪ್ಪಿದ್ದಾರೆ ಎಂದು ವರದಿಯಾಗಿದೆ.

    ಶ್ವೇತಭವನದಲ್ಲಿ ಏನಾಯ್ತು?
    ಆರಂಭದಲ್ಲಿ ಉಕ್ರೇನ್‌ ಮತ್ತು ಯುರೋಪಿಯನ್‌ ಒಕ್ಕೂಟದ ನಾಯಕರ ಜೊತೆ ಟ್ರಂಪ್‌ ಸಭೆ ನಡೆಸಿದರು. ಬಳಿಕ ಟ್ರಂಪ್‌ ಈ ಎಲ್ಲಾ ನಾಯಕರನ್ನು ತನ್ನ ಓವಲ್ ಕಚೇರಿಯ ಕ್ಯಾಬಿನ್‌ಗೆ ಕರೆಸಿ ರಷ್ಯಾದ ಅಧ್ಯಕ್ಷ ಪುಟಿನ್‌ಗೆ ನೇರವಾಗಿ ಕರೆ ಮಾಡಿದರು.

    ಯುರೋಪಿಯನ್ ನಾಯಕರು ಮತ್ತು ಝೆಲೆನ್ಸ್ಕಿ ಅವರೊಂದಿಗಿನ ಮಾತುಕತೆಗಳ ಬಗ್ಗೆ ಟ್ರಂಪ್ ವಿವರಿಸಿದರು. ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವೆ ನೇರ ಮಾತುಕತೆಗಳನ್ನು ಮುಂದುವರಿಸಲು ಪುಟಿನ್‌ಗೆ ಕರೆ ನೀಡಿದರು. ಇಬ್ಬರು ನಾಯಕರ ಮಧ್ಯೆ ಒಟ್ಟು 40 ನಿಮಿಷಗಳ ಮಾತುಕತೆ ನಡೆಯಿತು. ಈ ವೇಳೆ ಇತ್ತೀಚಿನ ಅಲಾಸ್ಕಾ ಭೇಟಿಯ ಸಮಯದಲ್ಲಿ ಟ್ರಂಪ್ ನೀಡಿದ ಆತಿಥ್ಯ ಮತ್ತು ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯಲ್ಲಿ ಸಾಧಿಸಿದ ಪ್ರಗತಿಗೆ ಪುಟಿನ್‌ ಟ್ರಂಪ್‌ಗೆ ಧನ್ಯವಾದ ಹೇಳಿದರು.

  • ಯುರೋಪಿಯನ್‌ ಒಕ್ಕೂಟದೊಂದಿಗೆ ಟ್ರಂಪ್‌ ಬಿಗ್‌ ಡೀಲ್‌ – ಆಮದುಗಳ ಮೇಲೆ 15% ಸುಂಕ

    ಯುರೋಪಿಯನ್‌ ಒಕ್ಕೂಟದೊಂದಿಗೆ ಟ್ರಂಪ್‌ ಬಿಗ್‌ ಡೀಲ್‌ – ಆಮದುಗಳ ಮೇಲೆ 15% ಸುಂಕ

    – ಅಮೆರಿಕದಿಂದ 750 ಶತಕೋಟಿ ಡಾಲರ್‌ ಮೌಲ್ಯದ ಇಂಧನ ಖರೀದಿ
    – ಯುಎಸ್‌ನಲ್ಲಿ 600 ಶತಕೋಟಿ ಡಾಲರ್‌ ಹೂಡಿಕೆ ಮಾಡಲು ಡೀಲ್‌

    ವಾಷಿಂಗ್ಟನ್‌: ಯುರೋಪಿಯನ್‌ ಒಕ್ಕೂಟದೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಇದುವರೆಗಿನ ಅತಿದೊಡ್ಡ ವ್ಯಾಪಾರ ಒಪ್ಪಂದವನ್ನ (Biggest Trade Deal) ಘೋಷಣೆ ಮಾಡಿದ್ದಾರೆ. ಈ ಒಪ್ಪಂದದ ಅಡಿಯಲ್ಲಿ ಒಕ್ಕೂಟದಿಂದ ಬರುವ ಆಮದುಗಳ ಮೇಲೆ 15% ಸುಂಕ ವಿಧಿಸಲಾಗುತ್ತದೆ.

    ಅಮೆರಿಕದ ಅಧ್ಯಕ್ಷರಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡ ಟ್ರಂಪ್‌ ತನ್ನ ದೇಶದ ವ್ಯಾಪಾರ ಸುಧಾರಿಸುವ ದೃಷ್ಟಿಯಲ್ಲಿ ಹಲವು ದೇಶಗಳ ಮೇಲೆ ಸುಂಕ ಸಮರ (Tariffs war) ಸಾರಿದ್ದಾರೆ. ಕೆಲ ದಿನಗಳ ಹಿಂದೆ ಟ್ರಂಪ್‌ 14 ದೇಶಗಳ ಮೇಲೆ ಸುಂಕ ವಿಧಿಸಿದ್ದರು. ಆಗಸ್ಟ್ 1 ರಿಂದಲೇ ಹೊಸ ಸುಂಕ ಜಾರಿಗೆ ಬರಲಿದೆ ಎಂದು ಘೋಷಿಸಿದ್ದರು. ಆದ್ರೆ ಈ ಪಟ್ಟಿಯಲ್ಲಿ ಭಾರತವನ್ನ ಹೊರಗಿಟ್ಟಿದ್ದರು. ಮುಂಬರುವ ಆಗಸ್ಟ್‌ 1ರಿಂದ ಯುರೋಪಿಯನ್‌ ಒಕ್ಕೂಟದ (European Union) ರಫ್ತಿನ ಮೇಲೆ 30% ಸುಂಕ ವಿಧಿಸುವುದಾಗಿ ಟ್ರಂಪ್‌ ಘೋಷಿದ್ದರು. ಈ ನಡುವೆ ಮಹತ್ವದ ಒಪ್ಪಂದ ಮಾಡಿಕೊಂಡಿದ್ದು, 30% ಸುಂಕದಿಂದ ಬಚಾವ್‌ ಆಗಿದೆ. ಇದನ್ನೂ ಓದಿ: ಆಸ್ಟ್ರೇಲಿಯಾದ ನೈಸರ್ಗಿಕ ವಿಪತ್ತಾದ ‘ಆಲ್ಗಲ್ ಬ್ಲೂಮ್’ – ಈ ಬಿಕ್ಕಟ್ಟಿನ ಹಿಂದಿನ ಕಾರಣವೇನು?

    ಸ್ಕಾಟ್ಲೆಂಡ್‌ನಲ್ಲಿರುವ ತಮ್ಮ ಗಾಲ್ಫ್ ರೆಸಾರ್ಟ್‌ನಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್‌ ನಡುವಿನ ಮಹತ್ವದ ಸಭೆಯಲ್ಲಿ ಇದುವರೆಗಿನ ಅತಿದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರನ್ವಯ ಯುರೋಪಿನ್‌ನಿಂದ ರಫ್ತಾಗುವ ಆಟೋಮೊಬೈಲ್, ಔಷಧಗಳು ಮತ್ತು ಅರೆವಾಹಕ ಸೇರಿದಂತೆ ಇತರೇ ಸರಕುಗಳ ಮೇಲೆ 15% ಸುಂಕವನ್ನಷ್ಟೇ ವಿಧಿಸಲಾಗುತ್ತದೆ.

    ನಾವು ಒಂದೊಳ್ಳೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಯಾವುದೇ ಸಾಮರ್ಥಯದಲ್ಲೂ ಈವರೆಗಿನ ಅತಿದೊಡ್ಡ ಒಪ್ಪಂದ ಇದೆಂದು ಟ್ರಂಪ್‌ ಹೇಳಿದ್ದಾರೆ. ಇದನ್ನೂ ಓದಿ: ಟೇಕಾಫ್‌ ವೇಳೆ ಕೈಕೊಟ್ಟ ಲ್ಯಾಂಡಿಂಗ್‌ ಗೇರ್‌ – ಬೋಯಿಂಗ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ

    ಮುಂದುವರಿದು… ಜೊತೆಗೆ ಒಪ್ಪಂದದ ಭಾಗವಾಗಿ 27 ರಾಷ್ಟ್ರಗಳ ಯುರೋಪಿಯನ್‌ ಒಕ್ಕೂಟ ಅಮೆರಿಕದಿಂದ 750 ಶತಕೋಟಿ ಡಾಲರ್‌ ಮೌಲ್ಯದ ಇಂಧನ ಖರೀದಿಸಲಿದೆ. ಜೊತೆಗೆ ಅಮೆರಿಕದಲ್ಲಿ 600 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಹೂಡಿಕೆ ಮಾಡಲಿವೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ನಂತೆಯೇ ಥಾಯ್ಲೆಂಡ್‌-ಕಾಂಬೋಡಿಯಾ ಯುದ್ಧ ನಿಲ್ಲಿಸಿದ್ದು ನಾನೇ: ಟ್ರಂಪ್‌

  • ಯುರೋಪಿಯನ್ ಒಕ್ಕೂಟದ ಒಂದು ನಿರ್ಧಾರದಿಂದ ತೈಲ ಬೆಲೆ ಭಾರೀ ಏರಿಕೆ

    ಯುರೋಪಿಯನ್ ಒಕ್ಕೂಟದ ಒಂದು ನಿರ್ಧಾರದಿಂದ ತೈಲ ಬೆಲೆ ಭಾರೀ ಏರಿಕೆ

    ಲಂಡನ್: ಯುರೋಪಿಯನ್ ಒಕ್ಕೂಟ(ಇಯು) ಈ ವರ್ಷದ ಅಂತ್ಯದ ವೇಳೆಗೆ ರಷ್ಯಾದಿಂದ ಆಮದಾಗುವ ತೈಲವನ್ನು ಶೇ.90 ರಷ್ಟು ಕಡಿತಗೊಳಿಸಲು ಒಪ್ಪಿಕೊಂಡಿದೆ. ಇಯು ನಿರ್ಧಾರದ ಬೆನ್ನಲ್ಲೇ ಮಂಗಳವಾರ ಕಚ್ಚಾ ತೈಲದ ಬೆಲೆ ಭಾರೀ ಏರಿಕೆಯಾಗಿದೆ.

    ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಈ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ, ರಷ್ಯಾದಿಂದ ಆಮದಾಗುವ ತೈಲದ ನಿರ್ಬಂಧದ ಒಪ್ಪಂದವನ್ನು ನಾನು ಸ್ವಾಗತಿಸುತ್ತೇನೆ. ಇದು ಈ ವರ್ಷದ ಅಂತ್ಯದ ವೇಳೆ ರಷ್ಯಾದಿಂದ ಸುಮಾರು ಶೇ.90 ರಷ್ಟು ಆಮದನ್ನು ಕಡಿತಗೊಳಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸತ್ಯೇಂದ್ರ ಜೈನ್ ಬಂಧನ ರಾಜಕೀಯ ಪ್ರೇರಿತ, ನಮ್ಮದು ಪ್ರಾಮಾಣಿಕ ಸರ್ಕಾರ: ಕೇಜ್ರಿವಾಲ್

    ಈ ನಿರ್ಧಾರದಿಂದ ಕಚ್ಚಾ ತೈಲ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಪರಿಣಾಮ ಬೀರಲಿದೆ. ಆದರೆ ಹಂಗೇರಿ, ಸ್ಲೋವಾಕಿಯಾ ಹಾಗೂ ಜೆಕ್ ರಿಪಬ್ಲಿಕ್‌ಗಳಲ್ಲಿ ರಷ್ಯಾದ ಆಮದನ್ನು ಕಡಿತಗೊಳಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿದೆ. ಇದಕ್ಕಾಗಿ ಸದ್ಯ ಪೈಪ್‌ಲೈನ್ ಮುಖಾಂತರ ರಷ್ಯಾದಿಂದ ಬರುವ ತೈಲಕ್ಕೆ ತಾತ್ಕಾಲಿಕ ವಿನಾಯಿತಿ ಇರಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: 130 ಕೋಟಿ ಜನರಿಗೆ ನಾನು ಸೇವಕನಷ್ಟೇ: ನರೇಂದ್ರ ಮೋದಿ

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ಗೆ 117.93 ಡಾಲರ್(9,162 ರೂ.) ಇದ್ದ ಕಚ್ಚಾ ತೈಲದ ಬೆಲೆ ಈಗ 122 ಡಾಲರ್‌ಗೆ(9,478 ರೂ.) ಏರಿಕೆಯಾಗಿದೆ.

    ಜಾಗತಿಕವಾಗಿ ತೈಲಬೆಲೆ ಹೆಚ್ಚಾಗಿದ್ದರೂ ಭಾರತದಲ್ಲಿ ಕಳೆದ 9 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್‌ನ ಬೆಲೆ ತಟಸ್ಥವಾಗಿದೆ. ಮೇ 22 ರಂದು ಕೆಂದ್ರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ ಪೆಟ್ರೋಲ್‌ಗೆ 8 ರೂ. ಹಾಗೂ ಲೀಟರ್ ಡೀಸೆಲ್‌ಗೆ 6 ರೂ. ಕಡಿತಗೊಳಿಸಿದೆ.

  • ಯುರೋಪಿಯನ್ ಒಕ್ಕೂಟದ ಶಾಶ್ವತ ಸದಸ್ಯತ್ವಕ್ಕೆ ಅರ್ಜಿ ಹಾಕಿದ ಉಕ್ರೇನ್

    ಯುರೋಪಿಯನ್ ಒಕ್ಕೂಟದ ಶಾಶ್ವತ ಸದಸ್ಯತ್ವಕ್ಕೆ ಅರ್ಜಿ ಹಾಕಿದ ಉಕ್ರೇನ್

    ಕೀವ್: ರಷ್ಯಾ-ಉಕ್ರೇನ್ ಯುದ್ಧದ ನಡುವೆಯೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುರೋಪಿಯನ್ ಒಕ್ಕೂಟದ ಶಾಶ್ವತ ಸದಸ್ಯತ್ವಕ್ಕೆ ಸೇರ್ಪಡೆಗೊಳ್ಳಲು ಅರ್ಜಿ ಸಲ್ಲಿಸಿದ್ದಾರೆ.

    ಝೆಲೆನ್ಸ್ಕಿ ಯುರೋಪಿಯನ್ ಒಕ್ಕೂಟದ ಸದಸ್ಯತ್ವ ಸೇರ್ಪಡೆ ಸಹಿ ಹಾಕಿದ್ದಾರೆ ಎಂದು ಉಕ್ರೇನ್‍ನ ಪಾರ್ಲಿಮೆಂಟ್‍ನಲ್ಲಿ ಘೋಷಣೆ ಮಾಡಲಾಯಿತು. ಈ ಮೂಲಕ ರಷ್ಯಾ ತೀವ್ರ ವಿರೋಧದ ನಡುವೆ ಯುರೋಪಿಯನ್ ಒಕ್ಕೂಟಕ್ಕೆ ಸೇರುವ ನಿರ್ಧಾರವನ್ನು ಝೆಲೆನ್ಸ್ಕಿ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ಶೆಲ್, ರಾಕೆಟ್ ದಾಳಿ – ಉಕ್ರೇನ್‍ನಿಂದ 4 ಲಕ್ಷ ಮಂದಿ ಮಹಾವಲಸೆ?

    ಉಕ್ರೇನ್‍ಗೆ ಯುರೋಪಿಯನ್ ಒಕ್ಕೂಟದ ಶಾಶ್ವತ ಸದಸ್ಯತ್ವಕ್ಕೆ ರಷ್ಯಾ ವಿರೋಧ ವ್ಯಕ್ತಪಡಿಸಿ ಯುದ್ಧ ಸಾರಿತ್ತು. ಇದೀಗ ರಷ್ಯಾ, ಉಕ್ರೇನ್ ಯುದ್ಧದ ನಡುವೆಯೇ ಉಕ್ರೇನ್‍ಗೆ ಸದಸ್ಯತ್ವಕ್ಕೆ ಅರ್ಜಿ ಹಾಕಿರುವುದು ರಷ್ಯಾವನ್ನು ಇನ್ನಷ್ಟು ಕೆರಳಿಸಿದೆ. ಉಕ್ರೇನ್ ಯುರೋಪಿಯನ್ ಒಕ್ಕೂಟಕ್ಕೆ ಸೇರಬಾರದರು ಎಂದು ರಷ್ಯಾ ಪಟ್ಟು ಹಿಡಿದಿತ್ತು. ಇದನ್ನೂ ಓದಿ: ದಿಢೀರ್‌ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್‌ ಬ್ಯಾಕ್‌