Tag: ಯುರೊ

  • 2.16 ಕೋಟಿಗೆ ಹಳ್ಳಿಯೇ ಮಾರಾಟ – ಸ್ಪೇನ್‌ನ ಈ ಗ್ರಾಮದಲ್ಲಿ ಏನೆಲ್ಲಾ ಇದೆ ಗೊತ್ತಾ?

    2.16 ಕೋಟಿಗೆ ಹಳ್ಳಿಯೇ ಮಾರಾಟ – ಸ್ಪೇನ್‌ನ ಈ ಗ್ರಾಮದಲ್ಲಿ ಏನೆಲ್ಲಾ ಇದೆ ಗೊತ್ತಾ?

    ಮ್ಯಾಡ್ರಿಡ್: ಬಹಳಷ್ಟು ಮಂದಿ ಮನೆ, ಸೈಟು ಹಾಗೂ ವಿಲ್ಲಾಗಳನ್ನು ಖರೀದಿಸುವ ಕನಸು ಕಾಣ್ತಾರೆ. ಒಂದು ಹಳ್ಳಿಯನ್ನೇ ಖರೀದಿಸಿದ್ದನ್ನು ಎಂದಾದರೂ ಕಂಡಿದ್ದೀರಾ? ಹೌದು. ಸ್ಪೇನ್‌ನಲ್ಲಿ ಕಳೆದ 30 ವರ್ಷಗಳಿಂದ ಜನವಸತಿ ಇಲ್ಲದ ಗ್ರಾಮವೊಂದು (Spanish Village) 227,000 ಯುರೋಗಳಿಗೆ (2.16 ಕೋಟಿ ರೂ) ಮಾರಾಟವಾಗಿದೆ.

    ಮಾರಾಟವಾಗಿರುವ ಸಾಲ್ಟೊ ಡಿ ಕ್ಯಾಸ್ಟ್ರೊ ಎಂಬ ಹಳ್ಳಿಯು ಪೋರ್ಚುಗಲ್‌ನ ಗಡಿಯ ಝಮೊರಾ ಪ್ರಾಂತ್ಯದಲ್ಲಿದೆ. ಸ್ಪೇನ್‌ನ ಮ್ಯಾಡ್ರಿಡ್‌ನಿಂದ 3 ಗಂಟೆಯಲ್ಲಿ ಇಲ್ಲಿಗೆ ಪ್ರಯಾಣಿಸಬಹುದಾಗಿದೆ. ಈ ಗ್ರಾಮವು 44 ಮನೆಗಳು, ಹೋಟೆಲ್ (Hotel), ಚರ್ಚ್, ಶಾಲೆ ಹಾಗೂ ಸುಸಜ್ಜಿತ ಈಜುಕೊಳ (Swimming Pool), ಸಿವಿಲ್ ಗಾರ್ಡ್ ಹಾಗೂ ಬ್ಯಾರಕ್ ಕಟ್ಟಡಗಳನ್ನು ಒಳಗೊಂಡಿದೆ. ಇದನ್ನೂ ಓದಿ: ಜೈಲಿನಲ್ಲಿದ್ದಾಗ ಪ್ರಿಯಾಂಕಾ ಗಾಂಧಿ ಭೇಟಿಯಾಗಿ ರಾಜೀವ್ ಗಾಂಧಿ ಹತ್ಯೆ ಬಗ್ಗೆ ಪ್ರಶ್ನಿಸಿದ್ದರು: ನಳಿನಿ ಶ್ರೀಹರನ್

    2000 ಇಸವಿಯ ಆರಂಭದಲ್ಲಿ ಉದ್ಯಮಿಯೊಬ್ಬರು ಈ ಹಳ್ಳಿಯನ್ನು ಜನಪ್ರಿಯ ತಾಣವಾಗಿ ಪರಿವರ್ತಿಸುವ ಉದ್ದೇಶದಿಂದ ಖರೀದಿಸಿದ್ದರು. ಆದರೆ ಯುರೋ ಬಿಕ್ಕಟ್ಟಿನಿಂದಾಗಿ ಅಭಿವೃದ್ಧಿಪಡಿಸುವ ಯೋಜನೆ ಕೈಬಿಡಲಾಯಿತು.

    ಇದಕ್ಕೆ ಪ್ರತಿಕ್ರಿಯಿಸಿರುವ ಆಸ್ತಿ ವಾರಸುದಾರ ರೋನಿ ರೋಡ್ರಿಗಸ್, ನಾನು ನಗರವಾಸಿಯಾದ್ದರಿಂದ ಹಾಗೂ ಇದು ನನ್ನ ಪಿತ್ರಾರ್ಜಿತ ಆಸ್ತಿಯಾಗಿರುವುದರಿಂದ ಇದನ್ನು ದೇಣಿಗೆಯಾಗಿ ಕೊಡಲು ಸಾಧ್ಯವಿಲ್ಲ. ಆದ್ದರಿಂದ ಮಾರಾಟ ಮಾಡುತ್ತಿದ್ದೇನೆ ಎಂದಿದ್ದಾರೆ. ಈ ಗ್ರಾಮ ಶೇ.100 ರಷ್ಟು ಅಭಿವೃದ್ಧಿ ಪಡಿಸಲು 2 ದಶಲಕ್ಷ ಯುರೋ ಮೀರುವುದಿಲ್ಲ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ಮಸೀದಿ ನಿರ್ಮಾಣ ಕಾರ್ಯ 2023ಕ್ಕೆ ಪೂರ್ಣ ಸಾಧ್ಯತೆ – ಟ್ರಸ್ಟ್‌

    Live Tv
    [brid partner=56869869 player=32851 video=960834 autoplay=true]