Tag: ಯುಪಿಎ

  • ಯುಪಿಎ ಅವಧಿಯದ್ದು ಭ್ರಷ್ಟಾಚಾರದ ದಶಕ, ನಮ್ಮದು ಭಾರತದ ದಶಕ: ನರೇಂದ್ರ ಮೋದಿ

    ಯುಪಿಎ ಅವಧಿಯದ್ದು ಭ್ರಷ್ಟಾಚಾರದ ದಶಕ, ನಮ್ಮದು ಭಾರತದ ದಶಕ: ನರೇಂದ್ರ ಮೋದಿ

    – 2004-2014ರ ಅವಧಿ ಬರೀ ಹಗರಣಗಳಿಂದಲೇ ತುಂಬಿತ್ತು
    – ವಿಪಕ್ಷಗಳನ್ನು ಇಡಿ ಒಂದಾಗಿಸುತ್ತಿದೆ

    ನವದೆಹಲಿ: ಯುಪಿಎ ಆಳ್ವಿಕೆಯ 10 ವರ್ಷದಲ್ಲಿ ಹಣದುಬ್ಬರ ಡಬಲ್ ಡಿಜಿಟ್‍ನಲ್ಲಿತ್ತು. ದೇಶದ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿಯೇ 2004-2014ರ ಅವಧಿ ಬರೀ ಹಗರಣಗಳಿಂದಲೇ (Corruption) ತುಂಬಿತ್ತು. ಆ 10 ವರ್ಷಗಳಲ್ಲಿ ದೇಶದ ವಿವಿಧೆಡೆ ಭಯೋತ್ಪಾದಕ ದಾಳಿಗಳು ನಡೆದಿದ್ದವು. ಆದರೆ ನಮ್ಮ ಅವಧಿ ಭಾರತದ (India) ದಶಕವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಈಗ ಬೆಳವಣಿಗೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಮೇಲೆ ರಾಹುಲ್ ಗಾಂಧಿ (Rahul Gandhi) ಭಾಷಣ ಮಾಡುವಾಗ ಮೋದಿ-ಅದಾನಿ (Midi -Adani) ಸಂಬಂಧವನ್ನು ಪ್ರಶ್ನಿಸಿ ಹಲವು ಪ್ರಶ್ನೆ ಕೇಳಿದ್ದರು. ಇದಕ್ಕೆ ನಿರೀಕ್ಷೆಯಂತೆಯೇ ಪ್ರಧಾನಿ ಮೋದಿ ಸಂಸತ್ ಸಾಕ್ಷಿಯಾಗಿ, ವ್ಯಂಗ್ಯಭರಿತವಾಗಿ ತಿರುಗೇಟು ನೀಡಿದ್ದಾರೆ.

    ಕೆಲವರಿಗೆ ನನ್ನ ಟೀಕಿಸುವುದರಿಂದ ಏನೋ ಖುಷಿಯಾಗುತ್ತದೆ. ಅವರಿಗೆ ದೇಶದ ಏಳಿಗೆ ಬೇಕಿಲ್ಲ. ಆದರೆ ನಾವು ಬಡವರಿಗಾಗಿ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಟೀಕೆ ಟಿಪ್ಪಣಿಗಳನ್ನು ಜನ ಕೇಳಿಸಿಕೊಳ್ಳಲ್ಲ ಎಂದು ರಾಹುಲ್ ಗಾಂಧಿಗೆ ಮೋದಿ ತಿರುಗೇಟು ನೀಡಿದರು.

    ಯುಪಿಎ (UPA) ಅವಧಿಯ 2ಜಿ, ಕಲ್ಲಿದ್ದಲು ಕಾಮನ್‌ವೇಲ್ತ್‌ ಗೇಮ್ಸ್‌ ಹಗರಣಗಳನ್ನು ಪ್ರಸ್ತಾಪಿಸಿದ ಮೋದಿ, ಯುಪಿಎ ಆಳ್ವಿಕೆಯ 10 ವರ್ಷ ಭ್ರಷ್ಟಾಚಾರ ಶಕೆಯಾಗಿತ್ತು. ಕಾಂಗ್ರೆಸ್ (Congress) ಪರಿವಾರವಾದಿ ಪಕ್ಷ. ನಾವು ಬಂದ ಮೇಲೆ ಭ್ರಷ್ಟಾಚಾರ ಕಡಿಮೆ ಆಯ್ತು. ಕಾಂಗ್ರೆಸ್ ಪಕ್ಷದ ಕುಸಿತ ಹಾರ್ವರ್ಡ್ ವಿವಿ ಸೇರಿದಂತೆ ಜಗತ್ತಿನ ಪ್ರಸಿದ್ಧ ವಿವಿಗಳಿಗೆ ಪಾಠವಾಗಲಿದೆ ಎಂದು ರಾಹುಲ್ ಗಾಂಧಿಯ ಕಾಲೆಳೆದರು.

    ರಾಹುಲ್‍ಗಾಂಧಿ ಜಮ್ಮುಕಾಶ್ಮೀರದಲ್ಲಿ ನಡೆಸಿದ ಭಾರತ್‌ ಜೋಡೋ ಯಾತ್ರೆಯನ್ನು ಪ್ರಸ್ತಾಪಿಸಿದ ಮೋದಿ, ಕಣಿವೆಯ ಉಗ್ರರಿಗೆ ಒಂಬತ್ತು ವರ್ಷದ ಹಿಂದೆ ಸವಾಲಾಕಿದ್ದನ್ನು ನೆನಪಿಸಿದರು. ಹರ್ ಘರ್ ತಿರಂಗಾ ಯೋಜನೆ ಭಾಗವಾಗಿ ಕಾಶ್ಮೀರದ ಮನೆ ಮನೆಗಳ ಮೇಲೆ ತಿರಂಗಾ ಹಾರುವಂತೆ ಮಾಡಿದೆವು ಎಂದರು. 40 ಕೋಟಿ ಭಾರತೀಯರು ನನ್ನ ರಕ್ಷ ಕವಚ ಎಂದು ಮೋದಿ ಹೇಳುತ್ತಿದ್ದಂತೆ, ಬಿಜೆಪಿ ಸಂಸದರು ಮೇಜು ಕುಟ್ಟಿ ಸ್ವಾಗತಿಸಿದರು.

    ಮೋದಿ ಮಾತುಗಳು:
    ದೇಶದ ಉಜ್ವಲ ಭವಿಷ್ಯಕ್ಕಾಗಿಯೇ ಮೋದಿ ಮೇಲೆ ಜನ ವಿಶ್ವಾಸ ಇಟ್ಟಿದ್ದಾರೆ. ಅವರ ನಂಬಿಕೆಯೇ ನಮ್ಮ ರಕ್ಷಾ ಕವಚ. ವಿಪಕ್ಷಗಳ ಸುಳ್ಳು ಆರೋಪಗಳನ್ನು ಜನ ನಂಬುವುದಿಲ್ಲ. ಸರ್ಕಾರದ ಯೋಜನೆಗಳಿಂದ ಅನುಕೂಲ ಪಡೆಯುತ್ತಿರುವ ಜನಕ್ಕೆ ಸತ್ಯ ಏನೆಂದು ಗೊತ್ತು. 2030ರ ದಶಕ ಭಾರತದ ದಶಕವಾಗಲಿದೆ. ನನ್ನ ಜೀವನ ಈ ದೇಶಕ್ಕೆ ಮುಡಿಪು.

    ಕಳೆದ 9 ವರ್ಷಗಳಿಂದ ವಿಪಕ್ಷಗಳು ಹಿಂದೆ ಮುಂದೆ ನೋಡದೇ ಬರೀ ಆರೋಪಗಳನ್ನೇ ಮಾಡುತ್ತಿವೆ. ಆರ್‌ಬಿಐ, ಚುನಾವಣಾ ಆಯೋಗ, ಭಾರತೀಯ ಸೇನೆ ಮೇಲೆ ಇಷ್ಟ ಬಂದಂತೆ ಆರೋಪ ಮಾಡಲಾಗುತ್ತಿದೆ. ಧನಾತ್ಮಕ ವಿಮರ್ಷೆಗಳನ್ನು ಸ್ವಾಗತಿಸುತ್ತೇವೆ. ಈಗ ವಿಪಕ್ಷ ನಾಯಕರು ಒಗ್ಗೂಡುತ್ತಿರುವುದು ದೇಶಕ್ಕಾಗಿ ಅಲ್ಲ. ಜಾರಿ ನಿರ್ದೇಶನಾಲಯದ ಕಾರಣದಿಂದಲೇ ಒಂದಾಗುತ್ತಿದ್ದಾರೆ. ವಿಪಕ್ಷಗಳನ್ನು ಇಡಿ ಒಗ್ಗೂಡಿಸುತ್ತಿದೆ.

    ಈಗ ಕಾಶ್ಮೀರಕ್ಕೆ ಎಲ್ಲರೂ ಹೋಗಿ ಬರುತ್ತಿದ್ದಾರೆ. ಈ ಹಿಂದೆ ಲಾಲ್‍ಚೌಕ್‍ನಲ್ಲಿ ತಿರಂಗಾ ಹಾರಿಸುವುದು ಕನಸಾಗಿತ್ತು. ಧಮ್ ಇದ್ದರೆ ತಿರಂಗಾ ಹಾರಿಸಿ ಎಂದು ಉಗ್ರರು ಸವಾಲ್ ಹಾಕುತ್ತಿದ್ದರು. ನಮ್ಮ ಸರ್ಕಾರ ಆ ಪರಿಸ್ಥಿತಿಯನ್ನು ಬದಲಾಯಿಸಿದೆ. ಲಾಲ್‍ಚೌಕ್‍ನಲ್ಲಿ ನಿರ್ಭಿಡೆಯಿಂದ ಧ್ವಜ ಹಾರಿಸುತ್ತಿದ್ದೇವೆ. ಈ ಹಿಂದೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಉಗ್ರರು ದಾಳಿ ನಡೆಸುತ್ತಿದ್ದರು.

     

    ಇಡೀ ವಿಶ್ವವೇ ಈಗ ಭಾರತದತ್ತ ಆಶಾ ಭಾವನೆಯಿಂದ ನೋಡುತ್ತಿವೆ. ಕೊರೊನಾ ಸಂದರ್ಭದಲ್ಲಿ ಮೇಡ್ ಇನ್ ಇಂಡಿಯಾ ಲಸಿಕೆ ತಯಾರಿಸಿ ಜನರಿಗೆ ಉಚಿತವಾಗಿ ನೀಡಲಾಯಿತು. 150ಕ್ಕೂ ಅಧಿಕ ದೇಶಗಳಿಗೆ ವ್ಯಾಕ್ಸಿನ್ ಹಾಗೂ ಔಷಧಿ ಕಳುಹಿಸಿದ್ದೇವೆ. ಇದರಿಂದ ಭಾರತದ ಗೌರವ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿದೆ. ಈ ಹಿಂದೆ ಸಣ್ಣ ಸಣ್ಣ ತಂತ್ರಜ್ಞಾನಕ್ಕೆ ದೇಶ ಪರದಾಡುತ್ತಿತ್ತು. ಇಂದು ಭಾರತದಲ್ಲಿ ತಂತ್ರಜ್ಞಾನವಿದ್ದು ಒಂದು ಕಡೆ ವ್ಯಾಕ್ಸಿನ್ ಹಾಕಿಸಿದರೆ ಮತ್ತೊಂದು ಕಡೆ ಮೊಬೈಲ್ ನಲ್ಲಿ ಅದರ ಪ್ರಮಾಣ ಪತ್ರ ಲಭಿಸುತ್ತಿತ್ತು.

    ಭಾರತದಲ್ಲಿ 90,000 ಸ್ಟಾರ್ಟ್ ಅಪ್ ಗಳಿದ್ದು, ಕಡಿಮೆ ಸಮಯದಲ್ಲಿ 108 ಯೂನಿಕಾರ್ನ್‌ಗಳು ಬೆಳೆದಿವೆ. ಹಲವು ಸವಾಲುಗಳ ನಡುವೆ ದೊಡ್ಡ ಪ್ರಮಾಣದಲ್ಲಿ ಬೆಳೆದಿವೆ. ಮೊಬೈಲ್ ಬಳಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಎನರ್ಜಿ ಬಳಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಮರು ಬಳಕೆ ಶಕ್ತಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಭಾರತ ಬೆಳೆದಿದೆ. ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸಂಖ್ಯೆ ನಾಲ್ಕು ಕೋಟಿ ಹೆಚ್ಚಿದ್ದು, ಕ್ರೀಡೆಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಮೊಬೈಲ್‌ ಡೇಟಾ ದರ ಕಡಿಮೆಯಾಗಿದೆ. ಸ್ಥಿರ ಸರ್ಕಾರದಿಂದ ಮಾತ್ರ ರಾಷ್ಟ್ರ ಹಿತಕ್ಕಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೋದಿ ಆಡಳಿತದಲ್ಲಿ 2,132 ಉಗ್ರ ದಾಳಿ – 1,538 ಉಗ್ರರ ಹತ್ಯೆ

    ಮೋದಿ ಆಡಳಿತದಲ್ಲಿ 2,132 ಉಗ್ರ ದಾಳಿ – 1,538 ಉಗ್ರರ ಹತ್ಯೆ

    ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ (Narendra Modi) ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಯೋತ್ಪಾದಕ ದಾಳಿಗಳ (Terrorist Attack) ಸಂಖ್ಯೆ ಇಳಿಕೆಯಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

    ಹಿಂದಿನ ಯುಪಿಎ ಸರ್ಕಾರದ (UPA Government) ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ (Jammu And Kashmir) ಅತಿಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ. ಆದರೆ ಇಂದಿನ ಬಿಜೆಪಿ (BJP)  ಸರ್ಕಾರದ (Central Government Of India)  ಅವಧಿಯಲ್ಲಿ ಅತಿಹೆಚ್ಚು ಉಗ್ರರನ್ನು ಬಂಧಿಸಲಾಗಿದೆ. ಮೋದಿ ಅವಧಿಯಲ್ಲಿ 2,132 ಉಗ್ರ ದಾಳಿಗಳು ನಡೆದಿದ್ದು, 1,538 ಉಗ್ರರನ್ನು ಕೊಲ್ಲಲಾಗಿದೆ. ಇದನ್ನು ಓದಿ: ತೋಟದ ಕೆಲಸ ಮಾಡುವಂತೆ ತಂದೆ ಒತ್ತಡ – ಮಗ ಆತ್ಮಹತ್ಯೆ

    ಕಳೆದ 18.5 ವರ್ಷದ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಿ (Jammu and Kashmir) ಒಟ್ಟು 11,453 ಭಯೋತ್ಪಾದಕ ದಾಳಿ ನಡೆದಿದ್ದು, 5,543 ಉಗ್ರರನ್ನು ಹತ್ಯೆಗೈದು 2,310 ಉಗ್ರರನ್ನು ಬಂಧಿಸಲಾಗಿದೆ.

    ಮಹಾರಾಷ್ಟ್ರದ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಕೇಂದ್ರ ಗೃಹ ಸಚಿವಾಲಯದ (Ministry of Home Affairs) ಜಮ್ಮು-ಕಾಶ್ಮೀರ ವಿಭಾಗವು ನೀಡಿದ ಉತ್ತರದಲ್ಲಿ ಈ ಅಂಕಿ-ಅಂಶಗಳಿವೆ. ಅದರ ಪ್ರಕಾರ, 2004ರಿಂದ 2013ರ ಯುಪಿಎ ಅವಧಿಯ 10 ವರ್ಷದ ಆಳ್ವಿಕೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ 9,321 ಭಯೋತ್ಪಾದಕ ದಾಳಿ ನಡೆದಿವೆ. ಆ ವೇಳೆ 4,005 ಉಗ್ರರನ್ನು ಕೊಂದು, 878 ಉಗ್ರರನ್ನು ಬಂಧಿಸಲಾಗಿದೆ.

    2014 ರಿಂದ ಈವರೆಗೆ ಜಮ್ಮು-ಕಾಶ್ಮೀರದಲ್ಲಿ 2,132 ಭಯೋತ್ಪಾದಕ ದಾಳಿ ನಡೆದಿದ್ದು, 1,538 ಉಗ್ರರನ್ನು ಕೊಂದು 1,432 ಉಗ್ರರನ್ನು ಬಂಧಿಸಲಾಗಿದೆ. ಇದನ್ನು ಓದಿ: ಸಾವನ್ನಪ್ಪುವ ಮೊದಲು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ತೆರಳಿದ್ದ ಮೇಸ್ತಾ – ಸಿಬಿಐ ವರದಿಯಲ್ಲಿ ಬಯಲು

    ಕೇಂದ್ರ ಗೃಹ ಸಚಿವಾಲಯವು ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದಂತೆ ಮಾತ್ರ ಮಾಹಿತಿ ನೀಡಿದೆ. ದೇಶದ ಇತರೆಡೆ ಈ ಅವಧಿಯಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಮಾಹಿತಿ ನೀಡಿಲ್ಲ. ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್‌ (Surgical Strike) ನಡೆಸಿದ ನಂತರ ಭಯೋತ್ಪಾದಕರಲ್ಲಿ ನಡುಕ ಹುಟ್ಟಿದ್ದು, ಆನಂತರ ಹೆಚ್ಚು ಭಯೋತ್ಪಾದಕ ದಾಳಿಗಳು ನಡೆದಿಲ್ಲ ಎಂದು ಆರ್‌ಟಿಐ ಕಾರ್ಯಕರ್ತ ಪ್ರಫುಲ್ ಸರ್ದಾ ತಮಗೆ ದೊರೆತ ಅಂಕಿ-ಅಂಶಗಳನ್ನು ವಿಶ್ಲೇಷಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯುಪಿಎ ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತ – ಇನ್ಫಿ ನಾರಾಯಣ ಮೂರ್ತಿ

    ಯುಪಿಎ ಅವಧಿಯಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತ – ಇನ್ಫಿ ನಾರಾಯಣ ಮೂರ್ತಿ

    ಅಹಮದಾಬಾದ್‌: ಕಾಂಗ್ರೆಸ್(Congress) ನೇತೃತ್ವದ ಯುಪಿಎ(UPA) ಸರ್ಕಾರ ಅಂತಿಮ ವರ್ಷಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡುತ್ತಿತ್ತು. ಇದರಿಂದಾಗಿ ಭಾರತದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು ಎಂದು ಇನ್ಫೋಸಿಸ್‌ನ(Infosys) ಸಂಸ್ಥಾಪಕ ಅಧ್ಯಕ್ಷ ಎನ್‌.ಆರ್‌.ನಾರಾಯಣ ಮೂರ್ತಿ(Narayana Murthy) ಹೇಳಿದ್ದಾರೆ.

    ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಕ್ಯಾಂಪಸ್‌ನಲ್ಲಿ ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಲಂಡನ್‌ನ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ನಡೆದ ಅನುಭವವನ್ನು ಹಂಚಿಕೊಂಡಿದ್ದಾರೆ.

    ಮನಮೋಹನ್ ಸಿಂಗ್(Manmohan Singh) ಒಬ್ಬ ಅಸಾಧಾರಣ ವ್ಯಕ್ತಿ, ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಅವರ ಅವಧಿಯಲ್ಲಿ ನಿರ್ಧಾರಗಳನ್ನು ವೇಗವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಎಲ್ಲವೂ ವಿಳಂಬ ಆಗುತ್ತಿತ್ತು. ಇದರಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅ.1 ರಿಂದ ದೇಶದಲ್ಲಿ 5G ಸೇವೆ ಆರಂಭ – ಮೋದಿ ಚಾಲನೆ

    2008-2012ರ ಅವಧಿಯಲ್ಲಿ ನಾನು ಲಂಡನ್‌ನ ಎಚ್‌ಎಸ್‌ಬಿಸಿ ಬ್ಯಾಂಕ್‌ನ(HSBC Bank) ಮಂಡಳಿ ಸದಸ್ಯನಾಗಿದ್ದೆ. ಈ ವೇಳೆ ಆರಂಭದ ಕೆಲ ವರ್ಷ ಸಭೆಗಳಲ್ಲಿ ಚೀನಾದ(China) ಹೆಸರನ್ನು 2-3 ಬಾರಿ ಪ್ರಸ್ತಾಪಿಸಿದರೆ ಭಾರತದ(India) ಹೆಸರು ಕೇವಲ ಒಂದು ಬಾರಿ ಪ್ರಸ್ತಾಪವಾಗುತ್ತಿತ್ತು. ಆದರೆ ದುರದೃಷ್ಟವಶಾತ್‌ ನಂತರದ ವರ್ಷದಲ್ಲಿ ಭಾರತದ ಹೆಸರು ಪ್ರಸ್ತಾಪವಾಗುತ್ತಿರಲಿಲ್ಲ ಎಂದು ತಿಳಿಸಿದರು.

    2012ರಲ್ಲಿ ನಾನು ಎಚ್‌ಎಸ್‌ಬಿಸಿಯನ್ನು ತೊರೆದಾಗ ಬಹಳ ಅಪರೂಪಕೊಮ್ಮೆ ಭಾರತದ ಹೆಸರು ಪ್ರಸ್ತಾಪವಾಗುತ್ತಿತ್ತು. ಆದರೆ ಚೀನಾದ ಹೆಸರು ಕನಿಷ್ಠ 30 ಬಾರಿ ಪ್ರಸ್ತಾಪವಾಗುತ್ತಿತ್ತು. ಈ ಕಾರಣಕ್ಕೆ ಎಲ್ಲೆಲ್ಲಿ ಬೇರೆ ದೇಶಗಳ ಹೆಸರು ಪ್ರಸ್ತಾಪ ಆಗುತ್ತದೋ, ಅದರಲ್ಲೂ ಮುಖ್ಯವಾಗಿ ಚೀನಾದ ಹೆಸರು ಪ್ರಸ್ತಾಪವಾದಾಗ ಭಾರತದ ಹೆಸರೂ ಪ್ರಸ್ತಾಪವಾಗುವಂತೆ ಮಾಡುವುದು ಈಗಿನ ಭಾರತದ ಯುವ ಸಮೂಹದ ಹೊಣೆಯಾಗಿದೆ. ಆ ಕೆಲಸವನ್ನು ನೀವು ಮಾಡುತ್ತೀರಿ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

    1978 ರಿಂದ 2022 ರ ಅವಧಿಯಲ್ಲಿ, ಅಂದರೆ 44 ವರ್ಷಗಳ ಅವಧಿಯಲ್ಲಿ 6 ಬಾರಿ ಚೀನಾ ಭಾರತವನ್ನು ಹಿಂದಿಕ್ಕಿದೆ. ಆದರೆ ಇಲ್ಲಿ ಕುಳಿತಿರುವ ಅದ್ಭುತ ವ್ಯಕ್ತಿಗಳು ಕೆಲಸವನ್ನು ಮಾಡಲು ಬಯಸಿದರೆ ಚೀನಾಗೆ ಸಿಗುವ ಗೌರವ ಭಾರತಕ್ಕೆ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಈಗ ನಾವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ. ಈಗ ನಮ್ಮ ದೇಶಕ್ಕೆ ಒಂದು ಮಟ್ಟದ ಗೌರವ ಸಿಕ್ಕಿದೆ. 1991ರಲ್ಲಿ ಮನಮೋಹನ್‌ಸಿಂಗ್‌ ಹಣಕಾಸು ಸಚಿವರಾಗಿದ್ದಾಗ ಕೈಗೊಂಡ ಆರ್ಥಿಕ ಸುಧಾರಣಾ ನೀತಿಗಳು ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜಾರಿಗೊಳಿಸಿದ ಮೇಕ್‌ ಇನ್‌ ಇಂಡಿಯಾ ಮತ್ತು ಸ್ಟಾರ್ಟಪ್‌ ಇಂಡಿಯಾ ಯೋಜನೆಗಳಿಂದ ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ ಎಂದು ಮೂರ್ತಿ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ಈಗ ಲೋಕಸಭಾ ಚುನಾವಣೆ ನಡೆದರೆ ಎನ್‍ಡಿಎಗೆ 362 ಸ್ಥಾನ!

    ಈಗ ಲೋಕಸಭಾ ಚುನಾವಣೆ ನಡೆದರೆ ಎನ್‍ಡಿಎಗೆ 362 ಸ್ಥಾನ!

    – ಕರ್ನಾಟಕದಲ್ಲಿ ಬಿಜೆಪಿಗೆ 23 ಸೀಟ್

    ನವದೆಹಲಿ: ದೇಶದಲ್ಲಿ ಕೂಡಲೇ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‍ಡಿಎ 362 ಸ್ಥಾನ ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಏರಲಿದೆ ಎಂಬ ಸಮೀಕ್ಷಾ ವರದಿಯೊಂದು ಹೊರಬಿದ್ದಿದೆ.

    ಈಗ ತಕ್ಷಣ ಚುನಾವಣೆ ನಡೆದರೆ ಬಿಜೆಪಿ 362 ಸ್ಥಾನ ಗೆಲ್ಲಲಿದೆ. ಯುಪಿಎ ಮೈತ್ರಿಕೂಟ 97, ಪ್ರಾದೇಶಿಕ ಪಕ್ಷಗಳು, ಪಕ್ಷೇತರರು 84 ಸ್ಥಾನ ಗೆಲ್ಲಲಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ 23, ಕಾಂಗ್ರೆಸ್ 4 ಹಾಗೂ ಜೆಡಿಎಸ್ 1 ಸ್ಥಾನ ಗೆಲ್ಲಲಿದೆ ಎಂದು ಇಂಡಿಯಾ ಟಿವಿ ನಡೆಸಿರುವ ವರದಿ ಮೂಲಕ ಬಹಿರಂಗವಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ವರುಣನ ಆರ್ಭಟ – 4 ತಾಲೂಕಿನ ಶಾಲೆಗಳಿಗೆ ರಜೆ

    ಯಾರಿಗೆ ಎಷ್ಟು ಸ್ಥಾನ:
    ಎನ್‍ಡಿಎ ಮೈತ್ರಿಕೂಟ ಎನ್‍ಡಿಎ 362 ಸ್ಥಾನ ಶೇ.41, ಯುಪಿಎ 97 – ಶೇ.28, ಇತರರು 84 – ಶೇ.31. ಇಂಡಿಯಾ ಟಿವಿ ನಡೆಸಿದ ‘ವಾಯ್, ಆಫ್ ದ ನೇಷನ್’ ಸಮೀಕ್ಷೆಯಲ್ಲಿ ಈ ಅಂಕಿ ಅಂಶಗಳಿದ್ದು, ಜು.11 ರಿಂದ 24ರ ಅವಧಿಯಲ್ಲಿ ದೇಶದ 543 ಲೋಕಾಸಭಾ ಸ್ಥಾನಗಳ ಪೈಕಿ 113 ರಲ್ಲಿ 34,000 ಜನರನ್ನು ಸಂದರ್ಶಿಸಿ ಸಮೀಕ್ಷೆ ವರದಿ ತಯಾರಿಸಲಾಗಿದೆ.

    ಕರ್ನಾಟಕದಲ್ಲಿ ಬಿಜೆಪಿಗೆ ಜೈ – 23 ಸೀಟ್:
    ಕರ್ನಾಟಕದಲ್ಲಿ ಈಗ ಲೋಕಸಭಾ ಚುನಾವಣೆ ನಡೆದರೆ 28 ಸ್ಥಾನಗಳ ಪೈಕಿ ಬಿಜೆಪಿ 23, ಕಾಂಗ್ರೆಸ್ 4 ಮತ್ತು ಜೆಡಿಎಸ್ 1 ಸ್ಥಾನ ಗೆಲ್ಲಲಿದೆ. ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1, ಪಕ್ಷೇತರರು(ಸುಮಲತಾ ಅಂಬರೀಶ್) 1 ಸ್ಥಾನ ಗೆದ್ದುಕೊಂಡಿದ್ದರು. ಇದನ್ನೂ ಓದಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ನೋಟಿಸ್

    ಇತರ ರಾಜ್ಯಗಳಲ್ಲಿ ಎಷ್ಟು?:
    ಉತ್ತರ ಪ್ರದೇಶ ಒಟ್ಟು 80 ಸ್ಥಾನ
    ಎನ್‍ಡಿಎ 76, ಯುಪಿಎ 2, ಇತರರು 2

    ಮಹಾರಾಷ್ಟ್ರದ ಒಟ್ಟು ಸ್ಥಾನ 48
    ಎನ್‍ಡಿಎ 37, ವಿಪಕ್ಷಗಳು 11

    ತಮಿಳುನಾಡು ಒಟ್ಟು ಸ್ಥಾನ 39
    ಡಿಎಂಕೆ ಮೈತ್ರಿಕೂಟ 38, ಎನ್‍ಡಿಎ 1

    ಪಶ್ಚಿಮ ಬಂಗಾಳ ಒಟ್ಟು ಸ್ಥಾನ 42,
    ಟಿಎಂಸಿ 26, ಎನ್‍ಡಿಎ 14, ಯುಪಿಎ 2

    ಬಿಹಾರ ಒಟ್ಟು ಸ್ಥಾನ 40
    ಎನ್‍ಡಿಎ 35, ಯುಪಿಎ 5,

    ಗುಜರಾತ್ ಒಟ್ಟು ಸ್ಥಾನ 26
    ಎನ್‍ಡಿಎ 26, ಯುಪಿಎ 0.

    Live Tv
    [brid partner=56869869 player=32851 video=960834 autoplay=true]

  • ಸದನ ಕದನವಾಗಿಸಿದ ತೈಲ ಬಾಂಡ್- ಯುಪಿಎ ಸರ್ಕಾರದ ಆಯಿಲ್ ಬಾಂಡ್ ಸಾಲವೆಷ್ಟು?

    ಸದನ ಕದನವಾಗಿಸಿದ ತೈಲ ಬಾಂಡ್- ಯುಪಿಎ ಸರ್ಕಾರದ ಆಯಿಲ್ ಬಾಂಡ್ ಸಾಲವೆಷ್ಟು?

    ಬೆಂಗಳೂರು: ಬಿಜೆಪಿಯವರು ಆಯಿಲ್ ಬಾಂಡ್‍ಗೂ ನಮಗೂ ಏನ್ರೀ ಸಂಬಂಧ ಅಂತಾರೆ. ಆದರೆ ಯುಪಿಎ ಅವಧಿಯ ಆಯಿಲ್ ಬಾಂಡ್ ಕಡೆ ಕೈತೋರಿಸಿ ತೈಲ ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ ಎನ್ನುವ ಮೂಲಕ ಇಂದಿನ ವಿಧಾನಸಭಾ ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳೆರಡು ಪರಸ್ಪರ ಕಾದಾಡಿಕೊಂಡವು.

    ಅಸಲಿಗೆ ತೈಲ ಬಾಂಡ್ ಎಂದರೇನು? ಯುಪಿಎ ಆಯಿಲ್ ಬಾಂಡ್ ಮೇಲೆ ಎಷ್ಟು ಸಾಲ ಮಾಡಿತ್ತು. ಆಯಿಲ್ ಬಾಂಡ್ ಹೆಸರಲ್ಲಿ ಕಳೆದ ಏಳು ವರ್ಷಗಳಲ್ಲಿ ಎನ್‍ಡಿಎ, ಹೆಚ್ಚೆಚ್ಚು ಸುಂಕ ವಿಧಿಸಿ ಗಳಿಸಿದ್ದೆಷ್ಟು ಎಂಬುದರ ಸಮಗ್ರ ಚಿತ್ರಣ ಇಲ್ಲಿದೆ. ಇದನ್ನೂ ಓದಿ: ವಾಜಪೇಯಿ ಬಳಸಿದ್ದ ಕ್ರಿಮಿನಲ್ ಲೂಟ್ ಸರ್ಕಾರ್ ಪದ ಬಳಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ಏನಿದು ಆಯಿಲ್ ಬಾಂಡ್?
    ಆಯಿಲ್ ಬಾಮಡ್ ಎಂದರೆ ತೈಲ ಕಂಪನಿಗಳು, ರಸಗೊಬ್ಬರ ಸಂಸ್ಥೆಗಳು, ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಸ್ಥೆಗಳಿಗೆ ಬಾಂಡ್ ಜಾರಿ ಮಾಡುವ ಹಕ್ಕು ಕೇಂದ್ರಕ್ಕಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದ್ದರೂ, ಅದರ ಭಾರ ದೇಶದ ಜನರಿಗೆ ಬೀಳಬಾರದೆಂದು ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತಿತ್ತು. ಅಂದರೇ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಎಷ್ಟೇ ಇದ್ದರೂ, ದೇಶದಲ್ಲಿ ತೈಲ ಬೆಲೆ ನಿಯಂತ್ರಣ ಕೇಂದ್ರದ ಕೈಯಲ್ಲಿ ಇರುತ್ತಿತ್ತು. ನಗದು ಸಬ್ಸಿಡಿ ಬದಲಿಗೆ ಕೇಂದ್ರ ಸರ್ಕಾರ ಮೂರು ತೈಲ ಕಂಪನಿಗಳಿಗೆ ಬಾಂಡ್‍ಗಳನ್ನು ವಿತರಿಸುತ್ತಿತ್ತು. ಈ ಬಾಂಡ್‍ಗಳು ಸುಧೀರ್ಘ ಅವಧಿಗೆ ಇರುತ್ತವೆ. ಬಾಂಡ್‍ಗಳ ಮೇಲೆ ತೈಲ ಕಂಪನಿಗಳಿಗೆ ಕೇಂದ್ರ ಕಾಲಕಾಲಕ್ಕೆ ಬಡ್ಡಿ ನೀಡುತ್ತದೆ. ವಾಜಪೇಯಿ ಸರ್ಕಾರ, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ತೈಲ ಬಾಂಡ್‍ಗಳನ್ನು ವಿತರಿಸಿತ್ತು. ಯುಪಿಎ ಸರ್ಕಾರ ತನ್ನ ಬೊಕ್ಕಸದ ಮೇಲೆ ಭಾರ ಬೀಳದಿರಲು 2005ರಿಂದ 2010ರ ಅವಧಿಯಲ್ಲಿ ಬಾಂಡ್ ವಿತರಿಸಿತ್ತು. ಆರ್ಥಿಕ ಬಿಕ್ಕಟ್ಟಿನ ಬಳಿಕ 2010ರಲ್ಲಿ ಪೆಟ್ರೋಲ್ ದರ ನಿಯಂತ್ರಣದಿಂದ ಯುಪಿಎ ಹಿಂದೆ ಸರಿಯಿತು. ಅಲ್ಲಿಗೆ ತೈಲ ಬಾಂಡ್ ವಿತರಣೆ ನಿಂತಿತ್ತು. 2014ರ ಅಕ್ಟೋಬರ್‍ನಲ್ಲಿ ಡೀಸೆಲ್ ಮೇಲಿನ ಕೇಂದ್ರದ ನಿಯಂತ್ರಣವನ್ನು ಮೋದಿ ಸರ್ಕಾರ ತಪ್ಪಿಸಿತ್ತು. ಈ ಮೂಲಕ ಆಯಿಲ್ ಬಾಂಡ್ ಕೇಂದ್ರ ಸರ್ಕಾರಕ್ಕೆ ಹೊರೆ ಆಗುವಂತಾಯಿತು.

    ಕೇಂದ್ರದ ಮೇಲೆ ಆಯಿಲ್ ಬಾಂಡ್ ಹೊರೆ ಎಷ್ಟು?
    ಯುಪಿಎ ಅವಧಿಯಲ್ಲಿ ಜಾರಿಯಾದ ತೈಲ ಬಾಂಡ್ ಮೊತ್ತ ಬರೋಬ್ಬರಿ 1.31 ಲಕ್ಷ ಕೋಟಿ ರೂ. ಆಗಿದ್ದು, 1.31 ಲಕ್ಷ ಕೋಟಿಗೆ ಬಡ್ಡಿ ಸೇರಿ 2.62 ಲಕ್ಷ ಕೋಟಿಯನ್ನು 2026ರ ಮಾರ್ಚ್ ಹೊತ್ತಿಗೆ ಕೇಂದ್ರ ಪಾವತಿಸಬೇಕು. ಸಿಸಿಐಎಲ್ ಪ್ರಕಾರ, 2014ರಿಂದ ಇಲ್ಲಿಯವರೆಗೆ 70 ಸಾವಿರ ಕೋಟಿ ಪಾವತಿಸಲಾಗಿದ್ದು, ಪ್ರಸಕ್ತ ವರ್ಷ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂಪಾಯಿ ಪಾವತಿಸಬೇಕಿದೆ. 2023ಕ್ಕೆ 26,15 ಕೋಟಿ ರೂ., 2024ಕ್ಕೆ 5 ಸಾವಿರ ಕೋಟಿ ಪಾವತಿ ಮಾಡಬೇಕು. ತೈಲ ಬೆಲೆ ಏರಿಕೆ ಮೂಲಕ 20-21 ಆರ್ಥಿಕ ವರ್ಷದ ಮೊದಲ 10 ತಿಂಗಳಲ್ಲಿ ಗಳಿಸಿದ್ದು 2.94 ಲಕ್ಷ ಕೋಟಿ ಆಗಿದೆ. ಈ ಹೊರೆಯನ್ನು ಸರಿದೂಗಿಸಲು ಸರ್ಕಾರ ತೈಲ ದರ ಏರಿಕೆಯ ಮೂಲಕ ಪ್ರಯತ್ನಿಸುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ದೆಹಲಿಗೆ ಹೋಗಬೇಕು – ಸದನದಲ್ಲಿ ಸ್ವಾರಸ್ಯಕರ ಚರ್ಚೆ

  • 60 ಸಾವಿರ ಕೋಟಿ ರಫೇಲ್ ಡೀಲ್‍ನಲ್ಲಿ ಕೋಟಿ ಕೋಟಿ ಗಿಫ್ಟ್ ಸಿಕ್ಕಿದ್ಯಾರಿಗೆ – ಕಾಂಗ್ರೆಸ್ ಪ್ರಶ್ನೆ

    60 ಸಾವಿರ ಕೋಟಿ ರಫೇಲ್ ಡೀಲ್‍ನಲ್ಲಿ ಕೋಟಿ ಕೋಟಿ ಗಿಫ್ಟ್ ಸಿಕ್ಕಿದ್ಯಾರಿಗೆ – ಕಾಂಗ್ರೆಸ್ ಪ್ರಶ್ನೆ

    – ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ಪಂಚ ಸವಾಲು
    – 1.1 ಮಿಲಿಯನ್ ಯುರೋ ಗಿಫ್ಟ್

    ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್ ಒಪ್ಪಂದ ಹೊಸ ತಿರುವು ಪಡೆದುಕೊಂಡಿದೆ. ಫ್ರಾನ್ಸ್ ದೇಶದ ಪಬ್ಲಿಕೇಷನ್ ಮೀಡಿಯಾಪಾರ್ಟ್ ವರದಿ ಪ್ರಕಾರ, 2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಯುದ್ಧ ವಿಮಾನ ಖರೀದಿ ವ್ಯವಹಾರ ನಡೆದಿತ್ತು. ಆ ವೇಳೆ ಫ್ರಾನ್ಸಿನ ಡಸಾಲ್ಟ್ ಏವಿಯೇಷನ್ ಭಾರತದ ಓರ್ವ ಮಧ್ಯವರ್ತಿಗೆ 1.1 ಮಿಲಿಯನ್ ಯುರೋ ಗಿಫ್ಟ್ ರೂಪದಲ್ಲಿ ನೀಡಿದೆ. 2017ರ ಡಸಾಲ್ಟ್ ಸಮೂಹದ ಲೆಕ್ಕ ಪತ್ರಗಳನ್ನ ಪರಿಶೀಲಿಸಿದಾಗ ಮಧ್ಯವರ್ತಿ ಗ್ರಾಹಕರಿಗೆ ಗಿಫ್ಟ್ ರೂಪದಲ್ಲಿ 1.1 ಮಿಲಿಯನ್ ವರ್ಗಾವಣೆ ಆಗಿರೋದು ಬೆಳಕಿಗೆ ಬಂದಿದೆ.

    ಮೀಡಿಯಾಪಾರ್ಟ್ ವರದಿಯನ್ನ ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್ ಮತ್ತೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನ ಮಾಡಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸುರ್ಜೆವಾಲಾ ಬಿಜೆಪಿಗೆ ಐದು ಪ್ರಶ್ನೆಗಳನ್ನ ಕೇಳಿದ್ದಾರೆ.

    ಗಿಫ್ಟ್ ಟು ಕ್ಲೈಂಟ್: ಈ ಸಂಪೂರ್ಣ ವ್ಯವಹಾರಕ್ಕೆ ಗ್ರಾಹಕರಿಗೆ ಕಾಣಿಕೆ ಶೀರ್ಷಿಕೆಯನ್ನ ನೀಡಲಾಗಿದೆ. ಇದೊಂದು ಪಾರದರ್ಶಕ ವ್ಯವಹಾರವಾಗಿದ್ರೆ ಗಿಫ್ಟ್ ಹೆಸರು ಹೇಳಿದ್ಯಾಕೆ? ಬಹುಶಃ ಇದು ಮುಚ್ಚಿಟ್ಟ ವ್ಯವಹಾರನಾ ಎಂದು ಸುರ್ಜೆವಾಲಾ ಶಂಕೆ ವ್ಯಕ್ತಪಡಿಸಿದ್ದಾರೆ. 60 ಸಾವಿರ ಕೋಟಿ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದ ಸತ್ಯ ಹೊರ ಬಂದಿದೆ. ಈ ಮಾತನ್ನ ನಾವು ಹೇಳುತ್ತಿಲ್ಲ. ಇದು ಫ್ರಾನ್ಸ್ ಏಜೆನ್ಸಿ ವರದಿಯಲ್ಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಫೇಲ್ ಡೀಲ್‍ನಲ್ಲಿ ನಿಮಗೆ ಎಷ್ಟು ಕಮೀಷನ್ ಸಿಕ್ಕಿದೆ: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

    ಕಾಂಗ್ರೆಸ್ ‘ಪಂಚ’ ಸವಾಲು
    1. 1.1 ಮಿಲಿಯನ್ ಯುರೋ ಗ್ರಾಹಕರಿಗೆ ಗಿಫ್ಟ್ ಎಂದು ಡಸಾಲ್ಟ್ ಅಡಿಟ್ ನಲ್ಲಿ ದಾಖಲಿಸಲಾಗಿದೆ. ಮಧ್ಯಂತರ ವ್ಯಕ್ತಿಗೆ ಕಮೀಷನ್ ನೀಡುವ ಮೂಲಕ ರಫೇಲ್ ಒಪ್ಪಂದ ಆಗಿತ್ತಾ?
    2. ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದಂತೆ ಎರಡು ದೇಶಗಳ ನಡುವೆ ಒಪ್ಪಂದವಾದಾಗ ಮಧ್ಯಂತರ ಅಥವಾ ಏಜೆಂಟ್ ಹೇಗೆ ಭಾಗಿ ಆಗ್ತಾರೆ?
    3. ಈ ವರದಿ ರಫೇಲ್ ಒಪ್ಪಂದದ ಪಾರದರ್ಶಕತೆಯನ್ನ ಪ್ರಶ್ನೆ ಮಾಡಲ್ವಾ?
    4. ಈ ಡೀಲ್ ಯಾರಿಗೆ, ಎಷ್ಟು ಹಣ ಸಿಕ್ಕಿದೆ ಎಂಬುವುದು ತಿಳಿದುಕೊಳ್ಳಲು ತನಿಖೆಗೆ ಅವಶ್ಯಕತೆ ಇದೆ ಅಲ್ವಾ?
    5. ಪ್ರಧಾನ ಮಂತ್ರಿಗಳು ಈ ಬಗ್ಗೆ ಉತ್ತರ ನೀಡ್ತಾರಾ?

    ಏನಿದು ರಫೇಲ್ ಡೀಲ್?:
    ಯುಪಿಎ ಸರ್ಕಾರದ ಅವಧಿಯಲ್ಲಿ 2012ರಲ್ಲಿ ಫ್ರಾನ್ಸ್’ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯೊಂದಿಗೆ 126 ಮಧ್ಯಮ ಶ್ರೇಣಿಯ ಬಹುಮುಖಿ ಯುದ್ಧ ವಿಮಾನಗಳ(ಎಂಎಂಆರ್’ಸಿಎ-ಮೀಡಿಯಂ ಮಲ್ಟಿ ರೋಲ್ ಕಾಂಬಾಟ್ ಏರ್’ಕ್ರಾಫ್ಟ್) ಖರೀದಿಗೆ ಒಪ್ಪಂದ ಮಾಡಿಕೊಟ್ಟಿತ್ತು. ಮಾತುಕತೆಯ ನಿಯಮಗಳ ಪ್ರಕಾರ ಡಸಾಲ್ಟ್ ಏವಿಯೇಶನ್ ಸಂಸ್ಥೆಯು 18 ರಫೇಲ್ ಜೆಟ್‍ಗಳನ್ನು ಹಾರಾಡಲು ಸನ್ನದ್ಧವಾಗಿರುವ ಸ್ಥಿತಿಯಲ್ಲಿ ಭಾರತಕ್ಕೆ ಪೂರೈಸಬೇಕು ಹಾಗೂ ಭಾರತದ ಎಚ್‍ಎಎಲ್‍ನೊಂದಿಗೆ ಉಳಿದ 108 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಬೇಕೆನ್ನುವ ಷರತ್ತನ್ನು ಹಾಕಿತ್ತು. ಇದನ್ನೂ ಓದಿ:ಎಚ್‍ಎಎಲ್ ಜೊತೆ ರಫೇಲ್ ಯೋಜನೆ ಕೈಬಿಟ್ಟಿದ್ದೇಕೆ: ಸ್ಪಷ್ಟನೆ ನೀಡಿದ ರಕ್ಷಣಾ ಸಚಿವೆ

    ಮೋದಿ ವಿರುದ್ಧ ರಫೇಲ್ ಆರೋಪಗಳೇನು?
    ಏಪ್ರಿಲ್ 10, 2015ರಲ್ಲಿ ಪ್ರಧಾನಿ ಮೋದಿ ರಫೆಲ್ ಒಪ್ಪಂದವನ್ನ ಘೋಷಿಸಿದ್ದರು. ಬಳಿಕ ಹೆಚ್‍ಎಎಲ್ ಪಾಲಾಗಬೇಕಿದ್ದ ರಫೇಲ್ ಯುದ್ಧ ವಿಮಾನ ಉತ್ಪಾದನೆ ವ್ಯವಹಾರ ಅನಿಲ್ ಅಂಬಾನಿಗೆ ವಹಿಸಿದ್ದರು. ಇದು ಸಾಕಷ್ಟು ವ್ಯವಹಾರಗಳಲ್ಲಿ ಕೈ ಸುಟ್ಟುಕೊಂಡು ಸಾಲದ ಹೊರೆಯಲ್ಲಿರುವ ಅಂಬಾನಿಗೆ ಮೋದಿಗೆ ವರದಾನ ನೀಡಿದೆ. ರಫೇಲ್ ವ್ಯವಹಾರ ಘೋಷಿಸುವ ವೇಳೆ ಯಾವುದೇ ರಕ್ಷಣಾ ಖರೀದಿ ಪ್ರಕ್ರಿಯೆಗಳನ್ನು ಅನುಸರಿಸಿಲ್ಲ ಅನ್ನೋ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ:ಒಂದೇ ಯುದ್ಧ ವಿಮಾನ ನಿರ್ಮಿಸದ ರಿಲಯನ್ಸ್ ಕಂಪನಿ ಜೊತೆ ಒಪ್ಪಂದ ಮಾಡಿದ್ದು ಯಾಕೆ: ಪ್ರಶ್ನೆಗೆ ಡಸಾಲ್ಟ್ ಸಿಇಒ ಉತ್ತರ ನೀಡಿದ್ದು ಹೀಗೆ

    ಪ್ರಧಾನಿ ಏಕಪಕ್ಷೀಯವಾಗಿಯೇ ವ್ಯವಹಾರ ಘೋಷಿಸಿದ್ದಾರೆ. ರಕ್ಷಣಾ ಸಚಿವರೂ, ಸಮಿತಿಗೂ ಮಾಹಿತಿ ಇಲ್ಲ. 36 ವಿಮಾನಗಳ ಖರೀದಿಗೆ ಈ ಹಿಂದೆ ಯುಪಿಎ ಒಪ್ಪಿಕೊಂಡಿದ್ದ ಬೆಲೆಗಿಂತಲೂ ಹೆಚ್ಚು ಹಣ ಸಂದಾಯ ಮಾಡಲಾಗಿದೆ. ರಫೇಲ್ ವ್ಯವಹಾರ ಘೋಷಣೆಯಾದ ಸಂದರ್ಭದಲ್ಲಿ ಅನಿಲ್ ಅಂಬಾನಿ ಕಂಪನಿಯೇ ಅಸ್ತಿತ್ವದಲ್ಲಿ ಇರಲಿಲ್ಲ. ರಫೇಲ್ ಡೀಲ್ ಸಿಕ್ಕ ಕೆಲ ದಿನಗಳ ಬಳಿಕವಷ್ಟೇ ಅನಿಲ್ ಅಂಬಾನಿ ವಿಮಾನ ಉತ್ಪಾದನೆಗಾಗಿ ಪ್ರತ್ಯೇಕ ಕಂಪನಿ ಸ್ಥಾಪಿಸಿದ್ದರು. 126 ವಿಮಾನಗಳಲ್ಲಿ ಹಾರಾಟಕ್ಕೆ ಸಿದ್ಧವಾಗಿರುವ 36 ವಿಮಾನಗಳ ಖರೀದಿ ಮಾಡಲಾಗಿದೆ. 108 ವಿಮಾನಗಳನ್ನು `ಭಾರತದಲ್ಲೇ ಉತ್ಪಾದಿಸಿ’ ಸಹಭಾಗಿತ್ವದಲ್ಲಿ ಭಾರತದಲ್ಲೇ ಉತ್ಪಾದನೆಗೆ ಒಪ್ಪಿಗೆ ನೀಡಲಾಗಿದೆ ಅಂತ ಕಾಂಗ್ರೆಸ್ ಆರೋಪಿಸಿತ್ತು. ಇದನ್ನೂ ಓದಿ: ರಫೇಲ್ ಡೀಲ್‍ನಲ್ಲಿ ಮೋದಿ ಅನಿಲ್ ಅಂಬಾನಿಯ ದಲ್ಲಾಳಿ: ರಾಹುಲ್ ಗಾಂಧಿ ಆರೋಪ

  • ಸಮೀಕ್ಷೆಗಳು ಉಲ್ಟಾ ಆಗುತ್ತಾ? – ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಮುನ್ನಡೆ

    ಸಮೀಕ್ಷೆಗಳು ಉಲ್ಟಾ ಆಗುತ್ತಾ? – ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಮುನ್ನಡೆ

    ಪಾಟ್ನಾ: ಬಿಹಾರದಲ್ಲಿ ಈ ಬಾರಿ ಮಹಾ ಮೈತ್ರಿ ಅಧಿಕಾರಕ್ಕೆ ಏರಲಿದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು. ಆದರೆ ಸದ್ಯದ ಟ್ರೆಂಡ್‌ ಗಮನಿಸುವಾಗ ಮತ್ತೆ ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಏರುವ ಸಾಧ್ಯತೆಯಿದೆ.

    ಸದ್ಯದ ಟ್ರೆಂಡ್‌ ಪ್ರಕಾರ ಎನ್‌ಡಿಎ 131, ಮಹಾಮೈತ್ರಿ 95 ಇತರರು 17 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದಾರೆ.

    15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸಿಎಂ ನಿತೀಶ್ ಕುಮಾರ್ ನೇತೃತ್ವದ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ ಅಧಿಕಾರ ಕಳೆದುಕೊಳ್ಳುವ ನಿರೀಕ್ಷೆ ಇದೆ. ಆರ್‌ಜೆಡಿ, ಜೆಡಿಯು ಮತ್ತು ಎಡಪಕ್ಷಗಳ ಮಹಾಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ಲಾಲೂಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಸಿಎಂ ಆಗಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿತ್ತು. ಅದರಲ್ಲೂ ಇಂಡಿಯಾ ಟುಡೇ-ಆಕ್ಸಿಸ್ ಸರ್ವೆ ಮತ್ತು ಟುಡೇಸ್ ಚಾಣಕ್ಯ ಸರ್ವೆ ಮಹಾಮೈತ್ರಿಕೂಟಕ್ಕೆ ಪ್ರಚಂಡ ಬಹುಮತವನ್ನು ಅಂದಾಜಿಸಿತ್ತು.

    ಆರಂಭದ ಮತ ಎಣಿಕೆಯಲ್ಲಿ ಮಹಾಮೈತ್ರಿ ಮುನ್ನಡೆಯಲ್ಲಿತ್ತು. ಆದರೆ ಬೆಳಗ್ಗೆ 10 ಗಂಟೆಯ ನಂತರ ಟ್ರೆಂಡ್‌ ಬದಲಾಗತೊಡಗಿತು.‌ 2015ರ ಚುನಾವಣೆಯಲ್ಲಿ ಆರ್‌ಜೆಡಿ 80, ಬಿಜೆಪಿ 53, ಜೆಡಿಯು 71, ಕಾಂಗ್ರೆಸ್ 27 ಎಲ್‍ಜೆಪಿ 2, ಇತರರು 10 ಸ್ಥಾನ ಗೆದ್ದಿದ್ದರು. ಒಟ್ಟು 243 ವಿಧಾನಸಭಾ ಕ್ಷೇತ್ರಗಳಿದ್ದು 123 ಮ್ಯಾಜಿಕ್ ಸಂಖ್ಯೆಯಾಗಿದೆ.

     

  • ಬಿಹಾರದಲ್ಲಿ ಎನ್‍ಡಿಎ ಮೈತ್ರಿಕೂಟಕ್ಕೆ ಗೆಲುವು – ಎಬಿಸಿ- ಸಿ ವೋಟರ್ ಸಮೀಕ್ಷೆ ಭವಿಷ್ಯ

    ಬಿಹಾರದಲ್ಲಿ ಎನ್‍ಡಿಎ ಮೈತ್ರಿಕೂಟಕ್ಕೆ ಗೆಲುವು – ಎಬಿಸಿ- ಸಿ ವೋಟರ್ ಸಮೀಕ್ಷೆ ಭವಿಷ್ಯ

    ಪಾಟ್ನಾ: ಅಕ್ಟೋಬರ್ 28 ರಂದು ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಈ ಮಧ್ಯೆ ಚುನಾವಣಾ ಪೂರ್ವ ನಡೆಸಿದ ಸಮೀಕ್ಷೆ ಹೊರಬಿದ್ದಿದ್ದು ಎನ್‍ಡಿಎ ಮೈತ್ರಿಕೂಟಕ್ಕೆ ಭರ್ಜರಿ ಸಾಧಿಸಿಲಿದೆ ಎಂದು ಸಿ-ವೋಟರ್ ಸಮೀಕ್ಷೆ ಹೇಳಿದೆ

    ಕೊರೊನಾ ಬಿಕ್ಕಟ್ಟಿನಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆಯಾಗಿದ್ದು, ಬಿಹಾರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರಲು ನಿತೀಶ್ ಕುಮಾರ್ ಹರಸಾಹಸ ಪಡುತ್ತಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷಕ್ಕೆ ಬಿಜೆಪಿ ಸಾಥ್ ನೀಡಿದೆ. ಬಿಜೆಪಿ – ಜೆಡಿಯು ಪಕ್ಷಗಳು ಸಮನಾಗಿ ಸೀಟು ಹಂಚಿಕೊಂಡು ಅಖಾಡಕ್ಕಿಳಿದಿವೆ. ಆರ್ ಜೆಡಿ, ಕಾಂಗ್ರೆಸ್, ಎಡಪಕ್ಷಗಳ ಮೈತ್ರಿ ಒಟ್ಟಾಗಿ ಹೋರಾಟಕ್ಕಿಳಿದೆ. ಇದನ್ನೂ ಓದಿ: ಬಿಹಾರ ಚುನಾವಣೆ- ಮತದಾನದಲ್ಲಿ ಹೆಣ್ಮಕ್ಳೇ ಸ್ಟ್ರಾಂಗು

     

    ಮೊದಲ ಹಂತದ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ಚುನಾವಣಾ ಪೂರ್ವ ನಡೆಸಿದ ಸಮೀಕ್ಷೆ ಹೊರಬಿದ್ದಿದೆ. ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಯು ಮೈತ್ರಿಕೂಟ ಸರಳ ಬಹುಮತ ಪಡೆಯಲಿದೆ ಎಂದು ಎಬಿಪಿ-ಸಿವೋಟರ್ ನಡೆಸಿದ ಸಮೀಕ್ಷೆ ತಿಳಿಸಿದೆ. 243 ವಿಧಾನಸಭಾ ಸ್ಥಾನಗಳ ಪೈಕಿ, ಆರ್‍ಜೆಡಿ, ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಮಹಾಮೈತ್ರಿ 77-98 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದಿಂದ ದೂರ ಉಳಿಯಲಿದೆ ಎಂದು ಭವಿಷ್ಯ ನುಡಿದಿದೆ. ಎನ್ ಡಿಎ 135-159 ಸೀಟುಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ಹೇಳಿದೆ. ಇದನ್ನೂ ಓದಿ: ರಾಮ ಮಂದಿರಕ್ಕಿಂತ ದೊಡ್ಡದಾದ ಸೀತಾ ಮಂದಿರ ನಿರ್ಮಿಸುತ್ತೇವೆ – ಎಲ್‌ಜೆಪಿ ಘೋಷಣೆ

    ಎನ್‍ಡಿಎಗೆ ಶೇ.43, ಮಹಾಮೈತ್ರಿಕೂಟಕ್ಕೆ ಶೇ.35, ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ ಶೇ.4 ರಷ್ಟು, ಇತರರು ಶೇ.18ರಷ್ಟು ಮತಗಳನ್ನು ಗಳಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಬಿಜೆಪಿ 73 ರಿಂದ 81 ಸ್ಥಾನಗಳನ್ನು ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಜೆಡಿಯು 59 ರಿಂದ 67 ಸ್ಥಾನಗಳು ಮತ್ತು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ ಮೂರರಿಂದ ಏಳು ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆರ್ ಜೆಡಿ 56 ರಿಂದ 64 ಸ್ಥಾನಗಳು, ಕಾಂಗ್ರೆಸ್ 12 ರಿಂದ 20 ಸ್ಥಾನಗಳನ್ನು ಪಡೆಯಲಿದೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ತಿಳಿಸಿದೆ. ಇದನ್ನೂ ಓದಿ: ಗುಂಡಿಟ್ಟು ಬಿಹಾರದ ಪಕ್ಷೇತರ ಅಭ್ಯರ್ಥಿಯನ್ನು ಹತ್ಯೆಗೈದ ದುಷ್ಕರ್ಮಿಗಳು

  • ಯುಪಿಎ ಅವಧಿಯಲ್ಲಿ 1,45,226 ಕೋಟಿ ರೂ. ‘ಸಾಲ ಮನ್ನಾ’ – ರಾಹುಲ್‍ಗೆ ಸೀತಾರಾಮನ್ ತಿರುಗೇಟು

    ಯುಪಿಎ ಅವಧಿಯಲ್ಲಿ 1,45,226 ಕೋಟಿ ರೂ. ‘ಸಾಲ ಮನ್ನಾ’ – ರಾಹುಲ್‍ಗೆ ಸೀತಾರಾಮನ್ ತಿರುಗೇಟು

    – ಮನಮೋಹನ್ ಸಿಂಗ್ ಬಳಿ ರಾಹುಲ್ ರೈಟಾಫ್ ಬಗ್ಗೆ ತಿಳಿದುಕೊಳ್ಳಲಿ
    – ಸರಣಿ ಟ್ವೀಟ್ ಮಾಡಿ ಆರೋಪಕ್ಕೆ ಸಚಿವೆಯಿಂದ ತಿರುಗೇಟು

    ನವದೆಹಲಿ: ಜನರನ್ನು ದಿಕ್ಕುತ್ತಪ್ಪಿಸಲು ಲಜ್ಜೆಗೆಟ್ಟ ರೀತಿ ಪ್ರಯತ್ನಿಸುವುದೇ ಕಾಂಗ್ರೆಸ್ಸಿನ ವೈಶಿಷ್ಟ್ಯತೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.

    ಆರ್‌ಬಿಐ ರೈಟಾಫ್ ಮಾಡಿದ ವ್ಯಕ್ತಿಗಳ ವಿವರವನ್ನು ಬಹಿರಂಗ ಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು “ಆಡಳಿತ ಪಕ್ಷದ ಸ್ನೇಹಿತ”ರಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಮಾಹಿತಿಯನ್ನು ಸಂಸತ್ತಿನಲ್ಲಿ ಬಹಿರಂಗ ಪಡಿಸಲಿಲ್ಲ ಎಂದು ಆರೋಪಿಸಿದ್ದರು.

    “ನಾನು ಸಂಸತ್ತಿನಲ್ಲಿ ಸರಳ ಪ್ರಶ್ನೆ ಕೇಳಿದ್ದೆ. ಬ್ಯಾಂಕುಗಳಿಗೆ ಹಗರಣ ಮಾಡಿದ್ದ 50 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿ ಎಂದು ಕೇಳಿದ್ದೆ. ಆದರೆ ಹಣಕಾಸು ಸಚಿವರು ಈ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು. ಈಗ ಆರ್‌ಬಿಐ ನೀರವ್ ಮೋದಿ, ಮೆಹುಲ್ ಚೋಕ್ಸಿ, ಮತ್ತು ಬಿಜೆಪಿ ಸ್ನೇಹಿತರು ಈ ಪಟ್ಟಿಯಲ್ಲಿದ್ದಾರೆ. ಈ ಕಾರಣಕ್ಕೆ ಅವರು ಸಂಸತ್ತಿನಲ್ಲಿ ಸತ್ಯವನ್ನು ಮರೆಮಾಚಿದ್ದರು” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಕುಟುಕಿದ್ದರು.

    50 ಮಂದಿ ಉದ್ಯಮಿಗಳ ಸಾಲವನ್ನು ರೈಟಾಫ್ ಮಾಡಿದ ವಿಚಾರಕ್ಕೆ ಕಾಂಗ್ರೆಸ್ ನಾಯಕರಿಂದ ಟೀಕೆ ವ್ಯಕ್ತವಾಗುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಸರಣಿ ಟ್ವೀಟ್ ಮಾಡಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಜನರನ್ನು ದಿಕ್ಕುತ್ತಪ್ಪಿಸಲು ಲಜ್ಜೆಗೆಟ್ಟ ರೀತಿ ಪ್ರಯತ್ನಿಸುವುದೇ ಕಾಂಗ್ರೆಸ್ಸಿನ ವೈಶಿಷ್ಟ್ಯತೆ. ತಮಗೆ ತೋಚಿದ ವಿಚಾರವನ್ನು ಬೇಕಾದಂತೆ ಹೇಳುತ್ತಾರೆ. ಆರ್ಥಿಕ ವ್ಯವಸ್ಥೆಯನ್ನು ಸರಿ ಮಾಡಲು ಕಾಂಗ್ರೆಸ್ ವಿಫಲವಾಗಿದ್ದು ಯಾಕೆ ಎನ್ನುವುದನ್ನು ರಾಹುಲ್ ಗಾಂಧಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಡಳಿತದಲ್ಲಿದ್ದಾಗಲೂ ಅಥವಾ ವಿರೋಧ ಪಕ್ಷದಲ್ಲಿದ್ದರೂ ಕಾಂಗ್ರೆಸ್ ಭ್ರಷ್ಟಾಚಾರ ನಿಲ್ಲಿಸಲು ಯಾವುದೇ ಬದ್ಧತೆ ತೋರಿಸಲಿಲ್ಲ.

    ನರೇಂದ್ರ ಮೋದಿ ಸರ್ಕಾರ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಂಡಿದೆ. ಈಗಾಗಲೇ 3,515 ಎಫ್‍ಐಆರ್ ದಾಖಲಾಗಿದೆ. ನೀರವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯ ಪ್ರಕರಣಗಳ ಪೈಕಿ ಒಟ್ಟು 18,332 ಕೋಟಿ ಮೌಲ್ಯ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚೋಕ್ಸಿ, ಮಲ್ಯ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ‘ಸಾಲ ಮನ್ನಾ’. ಯಾರ ಸಾಲ ಎಷ್ಟು ರೈಟಾಫ್ ಆಗಿದೆ?

    2009-2010 ಮತ್ತು 2013-2014ರ ನಡುವೆ ವಾಣಿಜ್ಯ ಬ್ಯಾಂಕುಗಳು 1,45,226 ಕೋಟಿ ರೂ. ರೈಟಾಫ್ ಮಾಡಿವೆ. ಎನ್‍ಡಿಎ ಸರ್ಕಾರವನ್ನು ಟೀಕೆ ಮಾಡುವ ಮೊದಲು ರಾಹುಲ್ ಗಾಂಧಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಳಿ ರೈಟಾಫ್ ಎಂದರೇನು ಎಂದು ಕೇಳಿ ತಿಳಿದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

    “2006ರಿಂದ 2008ರ ಮಧ್ಯೆ ದೊಡ್ಡ ಪ್ರಮಾಣದ ಅನುತ್ಪಾದಕ ಸಾಲಗಳು ಸೃಷ್ಟಿಯಾಗಿತ್ತು. ಸಾಲ ಹಿಂತಿರುಗಿಸದೆ ವಂಚಿಸದೆ ಹಿನ್ನಲೆಯಿರುವ ಪ್ರಮುಖ ಉದ್ಯಮಿಗಳೇ ಈ ಸಾಲಗಳನ್ನು ಹೊಂದಿದ್ದರು” ಎಂಬ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರ ಹೇಳಿಕೆಯನ್ನು ತಮ್ಮ ವಾದಕ್ಕೆ ಉಲ್ಲೇಖಿಸಿ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

    ವಿಜಯ್ ಮಲ್ಯ ಪ್ರಕರಣದಲ್ಲಿ 1,693 ಕೋಟಿ ರೂ. ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಈಗಾಗಲೇ ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಲಾಗಿದ್ದು ಸರ್ಕಾರ ಇಂಗ್ಲೆಂಡ್ ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ಕೇಳಿಕೊಂಡಿದೆ. ಹೈಕೋರ್ಟ್ ಸಹ ಹಸ್ತಾಂತರ ಪರವಾಗಿಯೇ ತೀರ್ಪು ನೀಡಿದೆ ಎಂದು ಹೇಳಿದ್ದಾರೆ.

    ನೀರವ್ ಮೋದಿ ಪ್ರಕರಣದಲ್ಲಿ 2,387 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ 53.45 ಕೋಟಿ ರೂ. ಮೌಲ್ಯದ ಲಕ್ಷುರಿ ವಸ್ತುಗಳನ್ನು ಹರಾಜು ಹಾಕಲಾಗಿದೆ. ಈಗಾಗಲೇ ಈ ವ್ಯಕ್ತಿ ಇಂಗ್ಲೆಂಡ್ ಜೈಲಿನಲ್ಲಿದ್ದಾರೆ. ಮೆಹುಲ್ ಚೋಕ್ಸಿ ಪ್ರಕರಣಲ್ಲಿ 1,936.95 ಕೋಟಿ ರೂ. ಮೌಲ್ಯ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಈಗಾಗಲೇ ರೆಡ್ ನೋಟಿಸ್ ಹೊರಡಿಸಲಾಗಿದ್ದು. ಆಂಟಿಗುವಾ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಕೇಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಸಾಲ ಮರಳಿಸುವ ಶಕ್ತಿ ಇದ್ದರೂ ಹಿಂತಿರುಗಿಸದಿದ್ದವರನ್ನು ಉದ್ದೇಶಪೂರ್ವಕವಾಗಿ ಸಾಲ ಮರುಪಾವತಿ ಮಾಡದವರು ಎಂದು ಹೆಸರಿಸಲಾಯಿತು. ಇಂತವರು ಹಿಂದಿನ ಯುಪಿಎ ಸರ್ಕಾರದ  ‘ಫೋನ್ ಬ್ಯಾಂಕಿಂಗ್’ ಸೌಲಭ್ಯವನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದರು ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

     

  • ಭಾರತ ನೀಲಿಯಿಂದ ಕೇಸರಿ ಮಯವಾಗಿದ್ದು ಹೇಗೆ?

    ಭಾರತ ನೀಲಿಯಿಂದ ಕೇಸರಿ ಮಯವಾಗಿದ್ದು ಹೇಗೆ?

    – 1984ರಲ್ಲಿ ಬಿಜೆಪಿ ಗೆದ್ದಿದ್ದು ಕೇವಲ 2 ಸ್ಥಾನ

    ಬೆಂಗಳೂರು: ಬಿಜೆಪಿಯು 2019ರ ಲೋಕಸಭಾ ಚುನಾವಣೆಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿದ್ದು, ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‍ನ್ನು ಮೂಲೆ ಗುಂಪು ಮಾಡಿದೆ. 1984ರಲ್ಲಿ 2 ಸ್ಥಾನಗಳಲ್ಲಿ ಜಯ ಗಳಿಸಿದ್ದ ಬಿಜೆಪಿ ಸದ್ಯ ಭಾರತವನ್ನು ಕೇಸರಿ ಮಯವಾಗಿಸಿದೆ.

    ಬಿಜೆಪಿಯು 1980 ಏಪ್ರಿಲ್ 6ರಂದು ಸ್ಥಾಪನೆಯಾಗಿದೆ. 1984ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯ ಎದುರಿಸಿ ಆಂಧ್ರಪ್ರದೇಶ ಹಾಗೂ ಗುಜರಾತ್‍ನಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಮೊದಲ ಯತ್ನದಲ್ಲಿಯೇ ಎರಡು ರಾಜ್ಯದಲ್ಲಿ ತನ್ನ ಖಾತೆಯನ್ನು ತೆರೆದಿತ್ತು. ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸಿದ ಬಿಜೆಪಿಯು 1989ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನದಲ್ಲಿ ತನ್ನ ಪ್ರಾಬಲ್ಯ ಮೇರೆದೆ, 85 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

    ಕರ್ನಾಟಕದಲ್ಲಿ ಅರಳಿದ ಕಮಲ:
    ಬಿಜೆಪಿಯು 1991ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕವನ್ನು ಪ್ರವೇಶಿಸಿತು. ಆ ವರ್ಷ ಬಿಜೆಪಿಯು ಕರ್ನಾಟಕದ ನಾಲ್ಕು ಕ್ಷೇತ್ರ ಸೇರಿದಂತೆ ದೇಶದಾದ್ಯಂತ 120 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

    ಕಾಂಗ್ರೆಸ್‍ಗೆ ಬಿಜೆಪಿಯು 1996ರಲ್ಲಿ ಭರ್ಜರಿ ಶಾಕ್ ಕೊಟ್ಟಿತ್ತು. ಬಿಜೆಪಿ 161 ಹಾಗೂ ಕಾಂಗ್ರೆಸ್ 140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಆದರೆ ಕಾಂಗ್ರೆಸ್ ಮೈತ್ರಿ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿತ್ತು. ಬಳಿಕ ನಡೆದ 1998ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 182 ಕ್ಷೇತ್ರಗಳಲ್ಲಿ ಜಯ ಗಳಿಸಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿತ್ತು. ಆದರೆ ಬಹುಮತ ಸಾಬೀತು ಮಾಡಲು ಸಾಧ್ಯವಾಗದೇ ಸರ್ಕಾರ ಬಿದ್ದಿತ್ತು. ಈ ವೇಳೆ ಅಟಲ್ ಜೀ ಅವರು ಮಾಡಿದ ಭಾಷಣ ವಿವಿಧ ಪಕ್ಷಗಳ ನಾಯಕರ ಮೇಲೆ ಪರಿಣಾಮ ಬೀರಿತ್ತು. ಅಷ್ಟೇ ಅಲ್ಲದೆ ಇದೇ ವೇಳೆ ಬಿಜೆಪಿ ತನ್ನ ನೇತೃತ್ವದಲ್ಲಿ ಎನ್‍ಡಿಎ ಒಕ್ಕೂಟ ಆರಂಭಿಸಿತು. ಹೀಗಾಗಿ 1999ರ ಚುನಾವಣೆಯಲ್ಲಿಯೂ 182 ಸ್ಥಾನಗಳಿಸಿದ ಬಿಜೆಪಿಗೆ ವಿವಿಧ ಪಕ್ಷಗಳು ಬೆಂಬಲ ನೀಡಿ, ಅಟಲ್ ಜೀ ಅವರ ನೇತೃತ್ವದಲ್ಲಿ 5 ವರ್ಷಗಳ ಕಾಲ ಸರ್ಕಾರ ನಡೆಸಿದ್ದವು.

    ಬಿಜೆಪಿಯು 2004ರಲ್ಲಿ 138 ಸ್ಥಾನ ಹಾಗೂ 2009ರಲ್ಲಿ 116 ಸ್ಥಾನ ಗಳಿಸಿ ಮುಗ್ಗರಿಸಿತ್ತು. ಆದರೆ ಮೋದಿ ಅಲೆಯು 2004ರಲ್ಲಿ ಬಿಜೆಪಿ ಭರ್ಜರಿ ಗೆಲುವು ತಂದು ಕೊಟ್ಟಿತ್ತು. ಆ ವರ್ಷ 282 ಕ್ಷೇತ್ರಗಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. 2019ರ ಚುನಾವಣೆಯಲ್ಲಿ ದೇಶವು ಕೇಸರಿಮಯವಾಯಿದೆ. ಈ ಬಾರಿ ಬಿಜೆಪಿಯು 303 ಸ್ಥಾನಗಳನ್ನು ಪಡೆದಿದೆ.